ವಿತ್ತ ಮಾತು
ರಮಾನಂದ ಶರ್ಮ
ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಕೊನೆಯ ಸುತ್ತಿನ ವಿಲೀನಕ್ಕೆ ಸರಕಾರ ಮುನ್ನುಡಿ ಬರೆದಿದೆ. ಇದು ಕಾರ್ಯ ರೂಪಕ್ಕೆ ಬಂದರೆ, ಬ್ಯಾಂಕಿಂಗ್ ವಲಯದಲ್ಲಿ ಬ್ಯಾಂಕುಗಳ ವಿಲೀನದ ದೃಷ್ಟಿಯಲ್ಲಿ ಇದು ನಾಲ್ಕನೇ ಮತ್ತು ಬಹುಶಃ ಕೊನೆಯ ಸುತ್ತು ಅಗಿರುತ್ತದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆದ ‘ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ’ದಷ್ಟೇ ದೊಡ್ಡ ದಾದ 4-5 ಬ್ಯಾಂಕ್‌ಗಳನ್ನು ಹೊಂದುವ ಗುರಿಯನ್ನು ಸರಕಾರ ಹೊಂದಿದೆ ಎನ್ನಲಾ ಗುತ್ತದೆ. 2017ರಲ್ಲಿ ದೇಶದಲ್ಲಿ 27 ಸರಕಾರಿ ಸ್ವಾಮ್ಯದ ಬ್ಯಾಂಕುಗಳಿದ್ದು, ಮೂರನೇ ಸುತ್ತಿನ ವಿಲೀನದ ನಂತರ ಈ ಸಂಖ್ಯೆ 12ಕ್ಕೆ ಇಳಿದಿದೆ. ಇದೀಗ ಈ ಸಂಖ್ಯೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ 4-5 ಬ್ಯಾಂಕುಗಳಿಗೆ ಇಳಿಯುವ ಸಾಧ್ಯತೆ ಕಾಣುತ್ತದೆ.
1993ರಲ್ಲಿ ಡಾ.ರಂಗರಾಜನ್ ಸಮಿತಿ ವರದಿ ಆಧರಿಸಿ ಬ್ಯಾಂಕುಗಳ ವಿಲೀನ ಮೇಲ್ಮೆಗೆ ಬಂದಿದೆ. ಅಂತಾರಾಷ್ಟ್ರೀಯ ಬ್ಯಾಂಕು ಗಳಿಗೆ ಹೋಲಿಸಿದರೆ, ಭಾರತೀಯ ಬ್ಯಾಂಕುಗಳ ಕ್ಯಾಪಿಟಲ್ ಬೇಸ್ ತುಂಬಾ ಕಡಿಮೆ ಇದ್ದು, ವಿದೇಶಿ ಬ್ಯಾಂಕ್ ಗಳು ಭಾರತೀಯ ಬ್ಯಾಂಕ್‌ಗಳ ಸಂಗಡ ಅರ್ಥಿಕ ವ್ಯವಹಾರ ನಡೆಸಲು ಹಿಂದೇಟು ಹಾಕುತ್ತವೆ. ಸಹವರ್ತಿ ಬ್ಯಾಂಕಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಗುವವರೆಗೆ ಭಾರತದ ಯಾವ ಬ್ಯಾಂಕೂ ವಿಶ್ವದ ಅತಿದೊಡ್ಡ 50 ಬ್ಯಾಂಕ್ ಗಳ ಪಟ್ಟಿಯಲ್ಲಿ ಇರಲಿಲ್ಲ. ಇದೀಗವಷ್ಟೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಪಟ್ಟಿಯಲ್ಲಿ ೪೭ನೇ ಸ್ಥಾನ ಪಡೆದಿದೆ.
ಯಾವ ಬ್ಯಾಂಕೂ ಬೇರೆ ಬ್ಯಾಂಕ್‌ಗಳ ಸಹಕಾರವಿಲ್ಲದೇ ಗ್ರಾಹಕರ ಸಾವಿರಾರು ಕೋಟಿ ಸಾಲದ ಬೇಡಿಕೆಯನ್ನು ಮಾನ್ಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಅದಕ್ಕೂ ಮಿಗಿಲಾಗಿ ಶಾಖೆಗಳ ದಟ್ಟಣೆಯಿಂದಾಗಿ ಬ್ಯಾಂಕ್‌ಗಳು ಪರಸ್ಪರರ ಬಿಜಿನೆಸ್ ಅನ್ನು ಎಳೆಯುತ್ತಿದ್ದು, ಇದು ಬ್ಯಾಂಕುಗಳ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿವೆ. ವಿಲೀನದ ಮೂಲಕ ಶಾಖೆಗಳ ಸಂಖ್ಯೆಯನ್ನು ಮಿತ ವಾಗಿಸಿ, ತನ್ಮೂಲಕ ಸಿಬ್ಬಂದಿ ಪ್ರಮಾಣ, ನಿರ್ವಹಣಾ ವೆಚ್ಚವನ್ನು ಇಳಿಸುವ ಅಜೆಂಡಾ ಕೂಡ ಇದರಲ್ಲಿ ಇದೆ. ನಗರ
ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಶಾಖೆಗಳು ಇವೆ ಎನ್ನುವ ಮಾತುಗಳು ಇವೆ.
ಗಣಕೀಕರಣ, ಎಟಿಎಂ, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಡಿಜಿಟಲೀಕರಣ ಗಳಿಂದಾಗಿ ಸುಮಾರು ಶೇ.60 ರಷ್ಟು ಬ್ಯಾಂಕಿಂಗ್ ವ್ಯವಹಾರ ಶಾಖೆಗಳ ಮೆಟ್ಟಿಲು ತುಳಿಯದೇ ಮನೆಗಳಿಂದ ಮತ್ತು ಗ್ರಾಹಕರು ತಾವು ನಿಂತ ಸ್ಥಳದಿಂದ ನಡೆಯುತ್ತಿದೆ. ಇಷ್ಟೊಂದು ಶಾಖೆಗಳ ಅವಶ್ಯಕತೆ ಇದೆಯೇ ಎನ್ನುವ ಚಿಂತನೆ ಕೂಡ ಇದೆ. 1993ರಲ್ಲಿ ಡಾ.ರಂಗರಾಜನ್ ಸಮಿತಿ ವರದಿ ಸಲ್ಲಿಸಿದ್ದು, ಅ ನಂತರ ಹಲವಾರು ಸಮಿತಿಗಳು ಮತ್ತು ಉಪಸಮಿತಿಗಳು, ಈ ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸತ ಮಾಹಿತಿ ನೀಡಿವೆ. 1993ರಲ್ಲಿ ನ್ಯೂ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ್ ನ್ಯಾಷನಲ್
ಬ್ಯಾಂಕ್ ನಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಲಾಯಿತು.
ಆನಂತರ 2017ರ ವರೆಗೆ ಯಾವುದೇ ಬೆಳವಣಿಗೆಗಳಾಗಲಿಲ್ಲ. ಪ್ರತಿಯೊಂದೂ ಬ್ಯಾಂಕಿನ ಹಿಂದೆ ಪ್ರಾದೇಶಿಕ ಭಾಷೆ, ಜಾತಿ,
ಧರ್ಮಗಳ ನೆರಳು ಇದ್ದು, ಅವುಗಳ ಅಸ್ತಿತ್ವವನ್ನು ಇಲ್ಲವಾಗಿಸಿ ತಮ್ಮ ಮತಬ್ಯಾಂಕನ್ನು ಕಳೆದುಕೊಳ್ಳುವ ದುಸ್ಸಾಹಸವನ್ನು
ಯಾವ ರಾಜಕೀಯ ಪಕ್ಷ ಅಥವಾ ರಾಜಕಾರಣಿಗಳೂ ಮಾಡುವುದಿಲ್ಲ. ಮಾತ್ರವಲ್ಲ ಬ್ಯಾಂಕಿಂಗ್ ವಲಯದ ಕೆಲವು ಉನ್ನತ ಹುzಗಳ ಸಂಖ್ಯೆಯೂ ಕಡಿತಗೊಳ್ಳುತ್ತವೆ. ಈ ಕಾರಣಕ್ಕಡೆ ಕೆಲವು ಹಿತಾಸಕ್ತಿಗಳ ತಡೆಯಿಂದಲೋ ರಾಜಕೀಯ ಇಚ್ಛಾಶಕ್ತಿಯ ಕೊರತೆಯೋ, ಎಡಪಕ್ಷಗಳ ಒತ್ತಡವೋ ಅಥವಾ ಮೈತ್ರಿ ಸರಕಾರದಲ್ಲಿನ ಅಂಗ ಪಕ್ಷಗಳ ಅಡೆತಡೆಯೋ ಅಂತೂ ಮೋದಿ ನೇತೃತ್ವದ ಸರಕಾರ ಬರುವವರೆಗೆ ವಿಲೀನ ಪ್ರಕ್ರಿಯೆ ಮೇಲ್ಮೆಗೆ ಬರಲಿಲ್ಲ.
ಮೋದಿ ಅಧಿಕಾರಕ್ಕೆ ಬಂದ ಮೇಲೆ ಟೆಸ್ಟ್ ಡೋಸ್ ಆಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹವರ್ತಿ ಬ್ಯಾಂಕ್‌ಗಳನ್ನು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಯಿತು. ಮೊದಲ ಮಹಾ ವಿಲೀನ ಸುಸೂತ್ರವಾಗಿದ್ದನ್ನು ನೋಡಿ 2019ರಲ್ಲಿ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕಗಳನ್ನು ಗುಜರಾತ್ ಮೂಲದ ಬ್ಯಾಂಕ್ ಆಪ್ ಬರೋಡಾದಲ್ಲಿ ವಿಲೀನಗೊಳಿಸಲಾಯಿತು. ನಂತರ 2020ರಲ್ಲಿ ಯನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ, ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನಲ್ಲಿ, ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್‌ನಲ್ಲಿ ಮತ್ತು ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಗಳನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ ಯನ್ನು 12ಕ್ಕೆ ಇಳಿಸಲಾಯಿತು.
ಪ್ರಸ್ತಾವಿತ ನಾಲ್ಕನೇ ಸುತ್ತಿನ ವಿಲೀನ ಕಾರ್ಯಗತವಾದರೆ, ಡಾ. ರಂಗರಾಜನ್ ಸಮಿತಿ ವರದಿಯಲ್ಲಿ ಹೇಳಿದಂತೆ ಬ್ಯಾಂಕಗಳ ಸಂಖ್ಯೆ 5-6 ಕ್ಕೆ ಇಳಿಯಲಿದೆ. ಡಾ.ರಂಗರಾಜನ್ ತಮ್ಮ ವರದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹಾಗೆಯೇ ಉಳಿಸಿ ಕೊಂಡು ಉಳಿದ ಎಲ್ಲ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಮಧ್ಯ ವಲಯದ ಹೆಸರಿನಲ್ಲಿ ಬ್ಯಾಂಕ್‌ಗಳನ್ನು ರಚಿಸಬೇಕು ಎಂಬ ಸಲಹೆ ನೀಡಿದ್ದರು. ಆದರೆ, ಅವರ ಸಲಹೆ ಸ್ವಲ್ಪ ಮಾರ್ಪಾಡಿ ನೊಂದಿಗೆ ಅಂಗೀಕರಿಸಲ್ಪಟ್ಟಿದೆ.
ಇದರೊಂದಿಗೆ ಅಂತರಾಷ್ಟ್ರೀಯ ಬ್ಯಾಂಕಗಳೊಂದಿಗೆ ಪೈಪೋಟಿ ಬ್ಯಾಂಕಿಂಗ್ ವಲಯ ಸಜ್ಜಾಗಿದೆ. ಕ್ಯಾಪಿಟಲ್ ನಿಟ್ಟಿನಲ್ಲಿ ವಿದೇಶಿ ಬ್ಯಾಂಕುಗಳಿಗೆ ನಾವೂ ಸಮನಾಗುವುದಲ್ಲದೇ ಅನುತ್ಪಾದಕ ಸಾಲಗಳನ್ನು ನಿಯಂತ್ರಿಸಲು ಸಹಾಯವಾಗಲಿದೆ. ಹೌದು, ಬ್ಯಾಂಕು ಗಳ ವಿಲೀನದಿಂದ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುತ್ತದೆ. ಐಟಿ ಮತ್ತು ರೈಲು ಇಲಾಖೆಯ ನಂತರ ಅತಿ ಹೆಚ್ಚು ಉದ್ಯೋಗ ನೀಡುವ ಬ್ಯಾಂಕಿಂಗ್‌ನಲ್ಲಿ ಉದ್ಯೋಗಗಳ ಅವಕಾಶ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ವಿಲೀನವನ್ನು ಬ್ಯಾಂಕ್ ಕಾರ್ಮಿಕ ಸಂಘಗಳು ವಿರೋಧಿಸುತ್ತಿವೆ.
ಜತೆಗೆ ಲಾಭಗಳಿಸದ ಗ್ರಾಮೀಣ, ಸಹಕಾರಿ ಬ್ಯಾಂಕ್ ಶಾಖೆಗಳು ಬಲಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಮಾಸ್ ಬ್ಯಾಂಕಿಂಗ್ ಮರೆಯಾಗಿ ಕ್ಲಾಸ್ ಬ್ಯಾಂಕಿಂಗ್ ಅವತರಿಸಬಹುದು ಎಂದು ಎಚ್ಚರಿಸುತ್ತಿದ್ದಾರೆ. ಪ್ರತಿ 6000-8000 ಜನಸಂಖ್ಯೆಗೆ ಒಂದು ಬ್ಯಾಂಕ್ ಶಾಖೆ ಇರಬೇಕು ಎನ್ನುವ ಉದ್ದೇಶಕ್ಕೆ ಹಿನ್ನಡೆಯಾಗಿ ಬಹುಜನರು ಬ್ಯಾಂಕಿಂಗ್ ಸೇವೆಯಿಂದ ವಂಚಿತರಾಗ ಬಹುದು ಎನ್ನುವ ಸಂದೇಹ ವ್ಯಕ್ತ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಈ ವಿಲೀನದ ವಿರುದ್ಧ ಬ್ಯಾಂಕ್ ಸಿಬ್ಬಂದಿ ಬೀದಿಗಿಳಿಯುವುದನ್ನು ಅಲ್ಲಗೆಳೆಯಲಾಗದು. ಆದರೆ ಇಂಥ ವಿಲೀನದಿಂದ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಇಲ್ಲ. ಅಕಸ್ಮಾತ್ ಗ್ರಾಹಕನ ಖಾತೆ ಇರುವ ಶಾಖೆ ಮುಚ್ಚುವ ಅನಿವಾರ್ಯ ಇದ್ದರೆ, ಆಸು ಪಾಸಿನ ಅಥವಾ ಸ್ವಲ್ಪ ಅಂತರದಲ್ಲಿರುವ ವಿಲೀನಗೊಂಡ ಇನ್ನೊಂದು ಶಾಖೆಗೆ ಹೋಗಬೇಕಾಗುತ್ತದೆ. ವಿಲೀನ ಪ್ರಕ್ರಿಯೆಯಲ್ಲಿ ಬ್ಯಾಂಕ್‌ಗಳು ಸಾಮಾನ್ಯವಾಗಿ ಗ್ರಾಹಕರ ಅನುಕೂಲವನ್ನು ಗಮನದಲ್ಲಿ ಇಟ್ಟಿರುತ್ತವೆ. ಹೆಚ್ಚು ಗ್ರಾಹಕರಿಗೆ ಅನುಕೂಲವಾಗುವಂಥ, ಹೆಚ್ಚು ಬಿಜಿನೆಸ್ ಇರುವ, ಸ್ವಂತ ಬಿಲ್ಡಿಂಗ್ ಇರುವ ಶಾಖೆಯನ್ನು ಉಳಿಸಿಕೊಳ್ಳುತ್ತಾರೆ.
ಮಾನವ ಸಂಪನ್ಮೂಲವನ್ನು ಹಂತ ಹಂತವಾಗಿ ಮರುಹೊಂದಾಣಿಕೆ ಮಾಡುವುದರಿಂದ ಬ್ಯಾಂಕ್ ಸಿಬ್ಬಂದಿ ಜತೆ ವ್ಯವಹರಿಸಲು ಅಡಚಣೆಯಾಗುವುದಿಲ್ಲ. ವಿಲೀನದಿಂದಾಗಿ ಗ್ರಾಹಕರು ಯಾವುದೇ ಹೊಸ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ಪಾಸ್ ಬುಕ್, ಚೆಕ್ ಬುಕ್, ಠೇವಣಿ ರಸೀತಿಗಳು ಅದೇ ಹೆಸರಿನಲ್ಲಿ ಮುಂದುವರಿಯುತ್ತಿದ್ದು, ವಿಲೀನದ ನಂತರ ರೂಪುಗೊಳ್ಳುವ ಏಕೀಕೃತ
ಬ್ಯಾಂಕಿನ ಹೆಸರಿನ ರಬ್ಬರ ಸ್ಟ್ಯಾಂಪ್ ಒತ್ತಲಾಗುವುದು.
ವಿಲೀನಗೊಂಡ ಬ್ಯಾಂಕುಗಳ ಲೇಖನ ಸಮಾಗ್ರಿಗಳನ್ನು ಅದು ಖರ್ಚಾಗುವವರೆಗೆ ಅಥವಾ ಒಂದು ನಿರ್ದಿಷ್ಟ ಅವಧಿಯವರೆಗೆ ಮುಂದುವರಿಸಲಾಗುವುದು. ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿದರ ಅವುಗಳ ಅವಧಿ ಮುಗಿಯುವವರೆಗೆ ಮುಂದು ವರಿಯುತ್ತಿದ್ದು, ನಂತರ ಏಕೀಕೃತ ಬ್ಯಾಂಕಿನ ಬಡ್ಡಿ ದರ ಅನ್ವಯವಾಗುತ್ತದೆ. ಸಾಲ ಮರುಪಾವತಿಗೆ, ನಾನಾ ರೀತಿಯ ಬಿಲ್ ಪೇಮೆಂಟ್ ಗೆ ನೀಡಿದ standing instruction ಏಕೀಕೃತ್ ಬ್ಯಾಂಕ್‌ನ ನಿರ್ದೇಶನದಂತೆ ಹೊಸದಾಗಿ ನೀಡಬೇಕಾಗುತ್ತದೆ.
ಬ್ಯಾಂಕುಗಳ ವಿಲೀನವಾದಾಗ ಬೇರೆ ಬೇರೆ ಭಾಷಾ ಮತ್ತು ಭೌಗೋಳಿಕ ಹಿನ್ನೆಲೆಯಿಂದ ಬಂದ ಮಾನವ ಸಂಪನ್ಮೂಲದ
integration ಚಾಲೆಂಜಿಂಗ್ ಆಗಿರುತ್ತದೆ. ವಿಲೀನಗೊಂಡ ಬ್ಯಾಂಕುಗಳ ಸಿಬ್ಬಂದಿ ತಮ್ಮನ್ನು ಮಲಮಕ್ಕಳಂತೆ ನಡೆಸಿ ಕೊಳ್ಳುತ್ತಾರೆ ಎನ್ನುವುದು ಮತ್ತು ಯಾವ ಬ್ಯಾಂಕ್‌ನಲ್ಲಿ ವಿಲೀನವಾಗಿದೆಯೋ ಆ ಬ್ಯಾಂಕುಗಳ ಸಿಬ್ಬಂದಿಯನ್ನು ಹಿರಿ ಮಗನಂತೆ ನೋಡು ತ್ತಾರೆ ಎನ್ನುವುದು ತೀರಾ ಸಾಮಾನ್ಯ ಆರೋಪ.
ಜ್ಯೇಷ್ಠತೆ, ಪದೋನ್ನತಿ ಮತ್ತು ವರ್ಗಾವರ್ಗಿ ವಿಚಾರದಲ್ಲಿ ತಾರತಮ್ಯ ಇದೆ ಎನ್ನುತ್ತಾರೆ. ಬ್ಯಾಂಕುಗಳ ವಿಲೀನವಾದಾಗ ಯಾವ ಬ್ಯಾಂಕ್‌ನಲ್ಲಿ ಸಿಬ್ಬಂದಿ ಸೌಲಭ್ಯಗಳು ಉತ್ತಮ ಮತ್ತು ಹೆಚ್ಚಾಗಿದೆಯೋ ಅದನ್ನೇ ಎಲ್ಲರಿಗೂ ನೀಡಬೇಕು ಎನ್ನುವ ನಿಬಂಧನೆ ಇದ್ದರೂ ಅದು ಕಾರ್ಯಗತವಾಗುತ್ತಿಲ್ಲ ಎನ್ನುವ ದೂರೂ ಕೇಳುತ್ತದೆ. ಅವುಗಳ ಸತ್ಯಾಸತ್ಯತೆ ಬೇರೆ ಮಾತು.
ಬದಲಾವಣೆ ಬದುಕಿನ ಸಹಜ ನಿಯಮ. ಬದಲಾದ ಪರಿಸರ, ವಾತಾವರಣ ಮತ್ತು ಬದುಕಿನ ವೈಖರಿಗೆ ಸ್ಪಂದಿಸಿ ಬದಲಾವಣೆ ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲವು ವಲಯಗಳಲ್ಲಿ ಈ ಬದಲಾವಣೆ ನಿಧಾನವಾಗಿ ಕಾಣುತ್ತದೆ.