Sunday, 15th December 2024

ಸುಳ್ಳನ್ನು ಬಿತ್ತರಿಸಿ ಕ್ಷಮೆ ಕೇಳುವ ಬಿಬಿಸಿ

ವೀಕೆಂಡ್ ವಿತ್ ಮೋಹನ್ 

camohanbn@gmail.com

ಬ್ರಿಟಿಷರೆಂದರೆ ಕಾಂಗ್ರೆಸಿಗರಿಗೆ ಎಲ್ಲಿಲ್ಲದ ಪ್ರೀತಿ. ವಿದೇಶಿ ವಸ್ತುಗಳನ್ನು ನಿಷೇಧಿಸಿ ಸ್ವದೇಶೀ ಚಳವಳಿಗೆ ಸಾವಿರಾರು ಹೋರಾಟಗಾರರು ಧುಮು ಕಿದ್ದರೆ, ನೆಹರು ಮಾತ್ರ ವಿದೇಶಿ ವಸ್ತುಗಳ ವ್ಯಾಮೋಹ ಬಿಟ್ಟಿರಲಿಲ್ಲ. ಸ್ವಾತಂತ್ರ್ಯಾ ನಂತರವೂ ವಿದೇಶಿ ವಸ್ತುಗಳ ಮೋಹಕ್ಕೆ ಸಿಕ್ಕ ಕಾಂಗ್ರೆಸಿಗರು ಸ್ವದೇಶಿಗರಿಂತ ವಿದೇಶಿಗರನ್ನೇ ಹೆಚ್ಚು ನಂಬಿದ್ದಾರೆ. ಸ್ವಾವಲಂಬಿ ಭಾರತ ಕಟ್ಟುವ ನಿಟ್ಟಿನಲ್ಲಿ ಆಡಳಿತ ನಡೆಸದ ಕಾಂಗ್ರೆಸಿಗರು ಭಾರತವನ್ನು ವಿದೇಶಿ ವಸ್ತುಗಳ ಮಾರುಕಟ್ಟೆಯನ್ನಾಗಿಸಿಬಿಟ್ಟರು.

ಭಾರತೀಯರ ಮನಃಸ್ಥಿತಿಯನ್ನರಿತ ಬ್ರಿಟಿಷರು, ಭಾರತ ಬಿಟ್ಟು ತೊಲಗಿದ ನಂತರವೂ ಭಾರತದ ಆಂತರಿಕ ವಿಚಾರಗಳಿಗೆ ತಲೆಹಾಕಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕೆಲಸ ಮಾಡುತ್ತಿರುತ್ತಾರೆ. ಕಳೆದ ಒಂಬತ್ತು ವರ್ಷಗಳಿಂದ ನರೇಂದ್ರ ಮೋದಿಯವರ ಆಡಳಿತದಲ್ಲಿ ಕಾಣುತ್ತಿರುವ ಭಾರತದ ಬೆಳವಣಿಗೆ ಯನ್ನು ಸಹಿಸದ ವಿದೇಶಿ ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಸುದ್ದಿಗಳನ್ನು ಪಸರಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿವೆ.

ಈಗಾಗಲೇ ಆರ್ಥಿಕವಾಗಿ ಬ್ರಿಟಿಷರನ್ನು ಹಿಂದಿಕ್ಕಿ ಜಗತ್ತಿನ ಐದನೇ ದೊಡ್ಡ ರಾಷ್ಟ್ರವಾಗಿ ಹೊರ ಹೊಮ್ಮಿರುವ ಭಾರತದ ಸಾಧನೆಯನ್ನು ಸಹಿಸದ ಲಂಡನ್ನಿನ ‘ಬಿಬಿಸಿ’ ಮಾಧ್ಯಮ ಸಂಸ್ಥೆ, ೨೦೨೪ರ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೋದಿಯವರ ವಿರುದ್ಧ ೨೦೦೨ ರ ಗೋಧ್ರಾ ಗಲಭೆಯ
ಕುರಿತ ಸಾಕ್ಷಚಿತ್ರವೊಂದನ್ನು ಬಿಡುಗಡೆ ಮಾಡಿ ಜನರಿಗೆ ಸುಳ್ಳು ಹರಡಿಸುವ ಪ್ರಯತ್ನಕ್ಕೆ ಕೈಹಾಕಿದೆ. ಇಂದು ಬಿಬಿಸಿಯ ಪರ ನಿಲ್ಲುವ ಇದೇ ಕಾಂಗ್ರೆಸಿಗರು, ೧೯೭೦ರಲ್ಲಿ ಇಂದಿರಾ ಗಾಂಧಿಯ ಅಧಿಕಾರಾವಧಿಯಲ್ಲಿ ಬಿಬಿಸಿಯನ್ನು ನಿಷೇಧಿಸಿದ್ದನ್ನು ಮರೆತಿದ್ದಾರೆ.

ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸಿಗರಿಗೆ ಅಂದು ಬಿಬಿಸಿಯನ್ನು ಬ್ಯಾನ್ ಮಾಡುವಾಗ ಸಂವಿಧಾನ ನೆನಪಾಗಲಿಲ್ಲ. ನಂತರ ೧೯೭೬ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದರು. ಆಗಲೂ ಇವರಿಗೆ ಸಂವಿಧಾನದ ನೆನಪಾಗಲಿಲ್ಲ. ‘ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೂ ಬಿಬಿಸಿ ಸಾಕ್ಷ್ಯಚಿತ್ರಕ್ಕೂ ವ್ಯತ್ಯಾಸವಿದೆ. ಕಾಶ್ಮೀರಿ ಪಂಡಿತರಿ ಗಾದಂತಹ ಅನ್ಯಾಯದ ವಿರುದ್ಧ ಯಾರೂ ಧ್ವನಿ ಎತ್ತಿರಲಿಲ್ಲ. ಪಂಡಿತರ ಕಗ್ಗೊಲೆಯ ತನಿಖೆ ನಡೆಯಲಿಲ್ಲ. ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿರಲಿಲ್ಲ. ಅವರಿಗಾದಂತಹ ಅನ್ಯಾಯಕ್ಕೆ ನ್ಯಾಯ ಸಿಕ್ಕಿರಲಿಲ್ಲ.

ಆದರೆ ಗೋಧ್ರಾ ಗಲಭೆಯ ವಿಷಯದಲ್ಲಿ ಆಳವಾದ ತನಿಖೆ ನಡೆದು, ತನಿಖಾ ವರದಿಯನ್ನು ಸಂಪೂರ್ಣ ಪರಿಶೀಲಿಸಿ ನ್ಯಾಯಾಲಯ ತೀರ್ಪನ್ನು
ಪ್ರಕಟಿಸಿದೆ. ಮೋದಿ ಹಾಗೂ ಅಮಿತ್ ಷಾರ ವಿರುದ್ಧ ಎಡಚರ ನಾಯಕಿ ತೀಸ್ತಾ ಸೆಟಲ್‌ವಾಡ್ ಎಷ್ಟೇ ಸುಳ್ಳುಗಳ ಸರಮಾಲೆಗಳನ್ನು ಹೆಣೆದರೂ ನ್ಯಾಯಾಲಯದಲ್ಲಿ ಆಕೆಯ ಸುಳ್ಳುಗಳಿಗೆ ಮನ್ನಣೆ ಸಿಗಲಿಲ್ಲ. ಮೋದಿಯವರನ್ನು ಮಣಿಸಲು ಎಡಚರ ಬೆಂಬಲಿತ ಅಂತಾರಾಷ್ಟ್ರೀಯ ಮಟ್ಟದ ಅನೇಕ ಸಂಸ್ಥೆಗಳು ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಇಂತಹ ಸಂಸ್ಥೆಗಳಿಗೆ ಅಕ್ರಮವಾಗಿ ಬಿಲಿಯನ್ ಗಟ್ಟಲೆ ಹಣ ಹರಿದುಬರುತ್ತದೆ. ರೈತ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಎಡಚರ ಪಟಾಲಂ, ನೀಲಿಚಿತ್ರ ತಾರೆಯೊಬ್ಬಳಿಗೆ ಕೋಟಿಗಟ್ಟಲೆ ಹಣ ನೀಡಿ ಟ್ವೀಟ್ ಮಾಡಿಸಿತ್ತು. ಬಿಬಿಸಿಯ ಹಣದ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದಂತಹ ಭಾರತೀಯ ತನಿಖಾ ಸಂಸ್ಥೆ, ಅದರ ಮೇಲೆ ದಾಳಿ ನಡೆಸಿದೆ. ಈ ದಾಳಿಯನ್ನು ಖಂಡಿಸುತ್ತಿರುವುದು ಮತ್ತದೇ ಕಾಂಗ್ರೆಸಿಗರು ಮತ್ತು
ಎಡಚರ ಬೆಂಬಲಿತ ಪ್ರಾದೇಶಿಕ ಪಕ್ಷಗಳು. ಆದಾಯ ತೆರಿಗೆ ಅಧಿಕಾರಿಗಳು ಈಗಾಗಲೇ ಬಿಬಿಸಿಯ ವ್ಯವಹಾರಗಳ ದಾಖಲೆಗಳನ್ನು ಪರಿಶೀಲಿಸಲು ಶುರು ಮಾಡಿದ್ದಾರೆ.

ಬ್ರಿಟಿಷ್ ಸಂಸ್ಥೆಯ ಪರವಾಗಿ ನಿಂತಿರುವ ಪ್ರತಿಪಕ್ಷಗಳು ಸಂಸತ್ತಿನ ಎದುರು ಪ್ರತಿಭಟನೆ ಮಾಡುತ್ತಿವೆ. ಆದಾಯ ತೆರಿಗೆ ಅಧಿಕಾರಿಗಳು ರಾತ್ರೋ ರಾತ್ರಿ ನೋಟಿಸ್ ನೀಡದೆ ದಾಳಿ ನಡೆಸಿಲ್ಲ. ನೋಟೀಸ್ ನೀಡಿ ಉತ್ತರ ಬಾರದ ಕಾರಣ ಸರ್ವೇ ಕಾರ್ಯ ನಡೆಸುತ್ತಿದೆ. ಸಮೀಕ್ಷೆ ಎಂದರೆ ‘ರೈಡ್’
ಅಲ್ಲ. ಕೇವಲ ಲೆಕ್ಕ ಪುಸ್ತಕಗಳ ಪರಿಶೀಲನೆಯಷ್ಟೆ. ಬಿಬಿಸಿ, ತನ್ನ ಅಂಗ ಸಂಸ್ಥೆಯ ಜತೆ ನಡೆಸಿರುವ ವ್ಯವಹಾರದ ಬಗ್ಗೆ ತನಿಖೆ ನಡೆಸಲು ಆದಾಯ ತೆರಿಗೆ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ.

ರಾಹುಲ್ ಗಾಂಧಿ ಬಿಬಿಸಿ ಸಂಸ್ಥೆಯವರನ್ನು ಭೇಟಿಯಾದ ಕೆಲ ತಿಂಗಳುಗಳ ನಂತರ ಸಾಕ್ಷ್ಯಚಿತ್ರ ಬಿಡುಗಡೆಯಾಗುತ್ತದೆ. ಬಿಬಿಸಿ ಮೇಲಿನ ದಾಳಿಯ ಬಗ್ಗೆ ಮಾತನಾಡುವ ಕಾಂಗ್ರೆಸಿಗರಿಗೆ ತಿಳಿದಿರಲಿ ೧೯೫೧ರಲ್ಲಿ ಮೊಟ್ಟಮೊದಲ ಬಾರಿಗೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಾಕ್ ಸ್ವಾತಂತ್ರ್ಯದ ವಿರುದ್ಧ ನಿರ್ಬಂಧ ಹೇರಿದ್ದು ನೆಹರು ನೇತೃತ್ವದ ಸರಕಾರ. ತಮ್ಮ ಆಡಳಿತಾವಧಿಯಲ್ಲಿ ತಮ್ಮೆದುರಿಗೆ ನಿಂತವರನ್ನು ಸದೆ ಬಡಿಯುವ ಕೆಲಸವನ್ನು
ಸದಾ ಮಾಡುತ್ತ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಬಿಸಿ ಮೇಲಿನ ದಾಳಿಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ.

ಬಿಬಿಸಿ ಸಂಸ್ಥೆಯನ್ನು ಭಾರತದಲ್ಲಿ ನಿಷೇಧಿಸಿಲ್ಲ, ಅವರ ವ್ಯವಹಾರಗಳ ಮೇಲೆ ಅನುಮಾನ ಬಂದಿದ್ದರ ಪರಿಣಾಮವಾಗಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐದು ಜನ ಕೆಲಸಗಾರರಿರುವ ಅಮೆರಿಕದ ‘ಹಿಂಡನ್ ಬರ್ಗ್’ ಸಂಸ್ಥೆಯು ಅದಾನಿ ಸಮೂಹ ಸಂಸ್ಥೆಗಳ ಬಗ್ಗೆ
ವರದಿಯನ್ನು ನೀಡಿದಾಗ ಕಾಂಗ್ರೆಸ್ ಕುಣಿದು ಕುಪ್ಪಳಿಸಿತ್ತು. ಇತ್ತ ಭಾರತದ ಸಂಸ್ಥೆಯಾದ ’ಔಐಇ’ ಅದಾನಿ ಸಮೂಹ ಸಂಸ್ಥೆಯಲ್ಲಿ ತನ್ನ ಹೂಡಿಕೆಯ ಬಗ್ಗೆ ಸ್ಪಷ್ಟೀಕರಣ ಕೊಟ್ಟಾಗ ಅನುಮಾನ ಕಾಡಿತ್ತು. ಭಾರತೀಯ ರಿಸರ್ವ್ ಬ್ಯಾಂಕ್, ತಾನು ಅದಾನಿ ಸಂಸ್ಥೆಗಳಿಗೆ ನೀಡಿರುವ ಸಾಲದ ಬಗ್ಗೆ ಸ್ಪಷ್ಟೀಕರಣ ನೀಡಿದಾಗಲೂ ಪ್ರತಿಪಕ್ಷಗಳಿಗೆ ಅನುಮಾನ ಕಾಡಿತ್ತು. ವಿಪರ್ಯಾಸವೆಂದರೆ ವಿದೇಶಿ ಸಂಸ್ಥೆಗಳು ನೀಡುವ ವರದಿಗಳನ್ನು ನಂಬುವ
ಪ್ರತಿಪಕ್ಷಗಳು ಸ್ವದೇಶೀ ಸಂಸ್ಥೆಗಳು ನೀಡುವ ಸ್ಪಷ್ಟೀಕರಣವನ್ನು ನಂಬುವುದಿಲ್ಲ.

ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್, ಅದಾನಿ ಸಂಸ್ಥೆಯ ಜತೆ ೬೮ ಸಾವಿರ ಕೋಟಿ ರುಪಾಯಿಯ ಒಪ್ಪಂದವನ್ನು ಮಾಡಿಕೊಂಡಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದಾನಿ ಸಮೂಹ ಸಂಸ್ಥೆಯ ಜತೆಗೆ ಬಂಗಾಳದಲ್ಲಿ ಬಂದರು ನಿರ್ಮಾಣ ಮಾಡುವ ಒಪ್ಪಂದಗಳ ಬಗ್ಗೆ ಮಾತನಾಡಿದ್ದಾರೆ. ಕೇರಳದ ಏರ್ ಪೋರ್ಟ್ ಅದಾನಿ ಸಂಸ್ಥೆಯ ಅಡಿಯಲ್ಲಿದೆ. ದೇಶದ ೨೨ ರಾಜ್ಯಗಳಲ್ಲಿ ಅದಾನಿ ಸಮೂಹ ಸಂಸ್ಥೆಗಳು ತಮ್ಮ
ವ್ಯವಹಾರ ನಡೆಸುತ್ತಿವೆ. ತಾವೇ ಬೆಳೆಸಿದ ಅದಾನಿಯನ್ನು ರಾಜಕೀಯ ಕಾರಣಕ್ಕಾಗಿ ಮೋದಿಯವರ ತಲೆಗೆ ಕಟ್ಟುವ ವ್ಯರ್ಥ ಪ್ರಯತ್ನವನ್ನು ವಿರೋಧಿಗಳು ಮಾಡುತ್ತಿದ್ದಾರೆ.

ಅದ್ಯಾಕೋ ಗೊತ್ತಿಲ್ಲ ಅದಾನಿ ಎನ್‌ಡಿಟಿವಿಯನ್ನು ಖರೀದಿ ಮಾಡಲು ಮುಂದಾದ ನಂತರ ಹಿಂಡನ್‌ಬರ್ಗ್, ತನ್ನ ಸಂಶೋಧನೆ ಶುರು ಮಾಡುತ್ತದೆ. ಎನ್‌ಡಿಟಿವಿಯ ಮೂಲ ಮಾಲೀಕರು ಹೊರಬರುವ ಸಮಯದಲ್ಲಿ ಹಿಂಡನ್‌ಬರ್ಗ್ ತನ್ನ ವರದಿಯನ್ನು ನೀಡುತ್ತದೆ. ಒಂದಕ್ಕೊಂದು ಸಂಬಂಧವಿರುವ ಕಂಪನಿಗಳ ನಡುವೆ ನಡೆಯುವ ವ್ಯವಹಾರದಲ್ಲಿ ಪಾರದರ್ಶಕತೆಯಿರ ಬೇಕೆಂಬುದನ್ನು ಆದಾಯ ತೆರಿಗೆ ಕಾಯ್ದೆ ಹೇಳುತ್ತದೆ. ಬಿಬಿಸಿ ಸಂಸ್ಥೆಯ ವಿಷಯದಲ್ಲಿ ಪಾರದರ್ಶಕತೆಯಿಲ್ಲ ದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಭಾರತದಲ್ಲಿ ತೆರಿಗೆ ಉಳಿಸಿ ಬ್ರಿಟನ್ನಿಗೆ ಭಾರತದಲ್ಲಿ ದುಡಿದಂತಹ
ಲಾಭವನ್ನು ವರ್ಗಾಯಿಸುತ್ತಿರುವ ಅಂಶಗಳು ಅನುಮಾನಕ್ಕೆ ಕಾರಣವಾಗಿರುವುದರಿಂದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಿಬಿಸಿ ರಾಜಾರೋಷವಾಗಿ ಹಲವು ವ್ಯವಹಾರಗಳಲ್ಲಿ ತೆರಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆಯೆಂದು ತಿಳಿದು ಬಂದಿದೆ. ಸಾಕ್ಷ್ಯಚಿತ್ರ ಬಿಡುಗಡೆಯಾಗುವ ಮೊದಲೇ ಆದಾಯ ತೆರಿಗೆ ಅಽಕಾರಿಗಳು ಹಲವು ನೋಟಿಸ್ ಕಳುಹಿಸಿರುವ ಬಗ್ಗೆ ವರದಿಯಾಗಿದ್ದು, ಅಧಿಕಾರಿಗಳು ಕೆಲವು ತಿಂಗಳುಗಳ ಹಿಂದಿನಿಂದಲೇ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಕಾಂಗ್ರೆಸಿಗರು ಸದಾ ಭಾರತದ ವಿರುದ್ಧ ನಿಲ್ಲುವ ಶಕ್ತಿಯ ಪರವಾಗಿ ನಿಲ್ಲುವುದು ಯಾಕೆ? ೨೦೧೫ರಲ್ಲಿ ದೆಹಲಿ ಉಚ್ಚ ನ್ಯಾಯಾಲಯ ಬಿಬಿಸಿಯ ಮತ್ತೊಂದು ಕಿರುಚಿತ್ರವನ್ನು ಬ್ಯಾನ್ ಮಾಡುವ ಆದೇಶವನ್ನು ಎತ್ತಿ ಹಿಡಿದಿತ್ತು. ಆ
ಕಿರುಚಿತ್ರದಲ್ಲಿ ಬಿಬಿಸಿ, ನಿರ್ಭಯ ಅತ್ಯಾಚಾರ ಪ್ರಕರಣದ ಆರೋಪಿ ಮುಕೇಶ್ ಸಿಂಗ್‌ನನ್ನು ಅಮಾಯಕನನ್ನಾಗಿ ತೋರಿಸಲಾಗಿತ್ತು.

ಆತನಿಗೆ ನ್ಯಾಯಾಲಯ ಆಗಲೇ ಗಲ್ಲು ಶಿಕ್ಷೆಯನ್ನು ವಿಽಸಿತ್ತು. ನ್ಯಾಯಾಲಯದ ವಿರುದ್ಧದ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದ ಸಂಸ್ಥೆಯ ಪರವಾಗಿ ಕಾಂಗ್ರೆಸ್ ನಿಂತಿದೆ. ೧೯೯೫ರಲ್ಲಿ ಬ್ರಿಟನ್ನಿನ ರಾಣಿ ಡಯಾನಾ ಅವರ ಸಂದರ್ಶವನ್ನು ಬಿಬಿಸಿ ನಡೆಸಿತ್ತು. ಇದು ಅಂದಿನ ಕಾಲದಲ್ಲಿ ಜಗತ್ತಿನಾದ್ಯಂತ ಅತೀ ಹೆಚ್ಚು ವೀಕ್ಷಿಸಿದ ಸಂದರ್ಶನವಾಗಿತ್ತು. ಆದರೆ ಕೆಲವು ವರ್ಷಗಳ ನಂತರ ತಿಳಿದು ಬಂದ ವಿಷಯವೇನೆಂದರೆ ಇಡೀ ಸಂದರ್ಶನ ಒಂದು ನಖಲಿ ದಾಖಲೆಯನ್ನಾಧರಿಸಿ ನಡೆಸಲಾಗಿತ್ತು. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿಸುವ ಇತಿಹಾಸವಿರುವ ಬಿಬಿಸಿ ಸಂಸ್ಥೆಯ ಪರವಾಗಿ ನಿಲ್ಲುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ದೇಶವಿರೋಽಗಳ ಪರವಾಗಿ ನಿಂತಿದೆ.

ಸಂವಿಧಾನದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ೧೯೮೨ರಲ್ಲಿ ‘ಹಿಂದೂಸ್ತಾನ್ ಟೈಮ್ಸ್’ನ ಸಂಪಾದಕ, ಸಂಜಯ್ ಗಾಂಧಿಯವರ ವಿರುದ್ಧ ಲೇಖನವೊಂದನ್ನು ಬರೆದಾಗ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು. ಬಂಗಾಳದಲ್ಲಿ ೩ಸಾವಿರದಷ್ಟು ಮುದ್ರಿತಗೊಂಡ ನಂತಹ ಬರಹಗಳನ್ನು ಕಾಂಗ್ರೆಸಿನ ಚೇಲಾಗಳು ಸುಟ್ಟುಹಾಕಿದ್ದರು. ಅಷ್ಟೇ ಯಾಕೆ ೨೦೧೮ರಲ್ಲಿ ‘ಹೊಸದಿಗಂತ’ ಪತ್ರಿಕೆಯ ಅಂಕಣಕಾರ ಟಿಪ್ಪು ಸುಲ್ತಾನ ವಿರುದ್ಧ ಮಾತನಾಡಿದ್ದಕ್ಕೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರಕಾರ ಆತನನ್ನು ಬಂಧಿಸಿತ್ತು.

ಡೊನಾಲ್ಡ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇರಾನಿಗೆ ನಿರ್ಬಂಧ ಹೆರುವ ವಿಷಯದಲ್ಲಿ “More will Follow’ ಎಂದು ಹೇಳಿದ್ದರು. ಆದರೆ ಬಿಬಿಸಿ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ರಂಪ್ ’War will Follow’ ಎಂದು ಹೇಳಿದ್ದಾರೆಂದು ಟ್ವೀಟ್ ಮಾಡಿತ್ತು. ಅಮೆರಿಕದ ಜನರಿಂದ ಬಾಯಿಗೆ ಬಂದಂತೆ ಬೈಸಿಕೊಂಡನಂತಹ ಬಿಬಿಸಿ ಸಂಸ್ಥೆ ತನ್ನಿಂದಾದಂತಹ ಪ್ರಮಾದವನ್ನು ಒಪ್ಪಿಕೊಂಡಿತ್ತು. ಹೀಗೆ ಜಗತ್ತಿನಾದ್ಯಂತ
ಹಲವು ಸುಳ್ಳು ಸುದ್ದಿಗಳನ್ನು ಹರಡಿಸುವ ಬಿಬಿಸಿ, ಕೇವಲ ಮೋದಿಯವರ ವರ್ಚಸ್ಸನ್ನು ಕುಂದಿಸಲು ಸುಳ್ಳು ಸಾಕ್ಷ್ಯ ಚಿತ್ರವನ್ನು ನಿರ್ಮಿಸಿ ಜನರ ಮುಂದಿಟ್ಟಿದೆ. ಮೋದಿಯನ್ನು ಸೋಲಿಸಲಾಗದೆ ಕೈಕಟ್ಟಿ ಕುಳಿತಿರುವ ಪ್ರತಿಪಕ್ಷಗಳು ಬಿಬಿಸಿಯ ಸುಳ್ಳುಗಳನ್ನು ಪೋಷಿಸುವ ಸಲುವಾಗಿ ನೀರು
ಹಾಕಲು ತುದಿಗಾಲಿನಲ್ಲಿ ನಿಂತಿವೆ.