Saturday, 14th December 2024

ಗಡಿ ಉದ್ವಿಗ್ನವಾಗಿರುವಾಗ ನಮ್ಮೊಳಗೇ ಚಕಮಕಿ ಏಕೆ ?

ಸಂಗತ

ವಿಜಯ ದರಡಾ

ತಾಯಿ ಭಾರತಿಯ ಸುರಕ್ಷೆ ನಮ್ಮೆಲ್ಲರ ಹೊಣೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ನಾವು ಮರೆತುಬಿಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ‘ಇಂತಹ ವಿಚಾರಗಳು ಬಂದಾಗ, ಎಲ್ಲ ಸಂಗತಿಗಳ ಮೇಲೆ ಅಭಿಪ್ರಾಯ ವ್ಯಕ್ತಪಡಿಸುವುದು ಬೇಕಿಲ್ಲ’ ಎಂದಿದ್ದನ್ನು ನೆನಪಿಸಿಕೊಳ್ಳಿ. ಅಭಿಪ್ರಾಯಭೇದಗಳಿಗೆ ಕಾರಣವಾಗುವ ಸಂಗತಿಗಳಿಗೆ ಕಾಮೆಂಟು ಮಾಡುವುದು ಬೇಕಿಲ್ಲ.

ಕಳೆದ ಕೆಲ ದಿನಗಳಿಂದ ದೇಶದೆಡೆ ಇದರದೇ ಚರ್ಚೆ. ‘ದ ಮೋದಿ ಕ್ವೆಶ್ಚನ್’ ಎಂಬ ಹೆಸರಿ ನಲ್ಲಿ ಬಿಬಿಸಿ ತಯಾರಿಸಿರುವ ಡಾಕ್ಯುಮೆಂಟರಿ ಹಲವಾರು ವಾಕ್ಸಮರಗಳಿಗೆ, ಆಕ್ಷೇಪಗಳಿಗೆ ಕಾರಣವಾಗಿದೆ. ೨೦೦೨ರ ಗುಜರಾತ್ ಗಲಭೆಯನ್ನಾಧರಿಸಿ ಈ ಡಾಕ್ಯುಮೆಂಟರಿ ಸಿದ್ಧವಾಗಿದೆ. ಇದನ್ನು ಯೂಟ್ಯೂಬ್ ಮತ್ತು ಟ್ವಿಟ್ಟರ್ ಬ್ಲಾಕ್ ಮಾಡಿದೆ ಎಂಬುದು ಬೇರೆ ಮಾತು. ಈಗಾಗಲೇ ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಂಡವರು ತಮ್ಮ ಸ್ನೇಹಿತರಿಗೆ ಕಳುಹಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ನಾವು ಈಗಾಗಲೇ ಹಲವು ಸಮಸ್ಯೆಗಳ ಸುಳಿಯಲ್ಲಿದ್ದೇವೆ. ಚೀನಾ, ಪಾಕಿಸ್ತಾನ, ನೇಪಾಲ, ಶ್ರೀಲಂಕಾ, ಬಂಗ್ಲಾದೇಶ, ಮತ್ತು ಮಾಲ್ಡಿವ್ಸ್ ಗಡಿಭಾಗಗಳಲ್ಲಿ ಉದ್ರಿಕ್ತತೆಗೆ ಉತ್ತೇಜನ ಕೊಡುವ ಪ್ರಯತ್ನಗಳನ್ನು ವಿಚ್ಛಿದ್ರಕಾರಿ ಶಕ್ತಿಗಳು ಮಾಡುತ್ತಲೇ ಇವೆ. ನಮ್ಮ ಗಡಿ ಭಾಗದ ಸಾಕಷ್ಟು ಉದ್ವಿಗ್ನ ಪರಿಸ್ಥಿತಿ ಇರುವಾಗ ನಮ್ಮೊಳಗೇ ಚಕಮಕಿ ಎಷ್ಟು ಸರಿ? ಇದು ಗುಜರಾತಿನ ವಿಚಾರ ಮಾತ್ರವಲ್ಲ. ವಿಶ್ವದ ಯಾವ ಮೂಲೆಯ ಆದರೂ ದಂಗೆ, ಗಲಭೆಗಳು ನಡೆದರೆ ಅದು ಮಾನವಸಮಾಜ ಅವಮಾನ ಪಡಬೇಕಾದ ಸಂಗತಿ.

ಆದರೆ ವಿಚಾರ ಅದಲ್ಲ. ಘಟನೆ ನಡೆದು ಎರಡು ದಶಕಗಳು ಕಳೆದ ನಂತರದಲ್ಲಿ ಈಗ ಬಿಬಿಸಿ ಯಾಕೆ ಇಂತಹದ್ದೊದು ಡಾಕ್ಯು ಮೆಂಟರಿ ಮಾಡಿತು ಎಂಬುದೇ ದೊಡ್ಡ ಪ್ರಶ್ನೆ. ಬ್ರಿಟನ್ನಿನ ಹಣಕಾಸು ಸಚಿವಾಲಯದ ಕೆಲ ವರದಿಗಳ ಮೇಲೆ ಈ ಡಾಕ್ಯುಮೆಂಟರಿ ಆಧರಿತವಾಗಿದೆ ಎಂದು ಹೇಳಲಾಗುತ್ತಿದೆ. ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಕ್ಕೆ ಬ್ರಿಟನ್ನಿಗೆ ಅಧಿಕಾರ ಕೊಟ್ಟವರಾರು? ಇದೊಂದು ಬಗೆಯಲ್ಲಿ ಆತಂಕವನ್ನುಂಟು ಮಾಡುವ ವಿಚಾರವಲ್ಲವೇ? ಗುಜರಾತ ಗಲಭೆಯ ವಿಚಾರದಲ್ಲಿ ಭಾರತದ ನ್ಯಾಯಾಲಯಗಳು ಅದಾಗಲೇ ತೀರ್ಪು ಕೊಟ್ಟಾಗಿದೆ.

ಹಾಗಿರುವಾಗ ಬಿಬಿಸಿ ಆ ಬಗ್ಗೆ ಡಾಕ್ಯುಮೆಂಟರಿ ಮಾಡುವುದಾದರೂ ಏತಕ್ಕೆ? ಇದರನೋ ಪೂರ್ವನಿಯೋಜಿತ ಒಳಸಂಚು ಇದೆ. ಭಾರತಕ್ಕೆ ಇಕ್ಕಟ್ಟಿನ ಸ್ಥಿತಿ ತಂದೊಡ್ಡುವ ಕೆಲಸವನ್ನು ಕೆಲ ವಿದೇಶಿ ಶಕ್ತಿಗಳು ಮಾಡುತ್ತಲೇ ಇವೆ. ದೇಶದಲ್ಲಿ ಅಶಾಂತಿಯ
ವಾತಾವರಣ ನಿರ್ಮಾಣವಾದರೆ ಆ ವಿದೇಶಿ ಶಕ್ತಿಗಳಿಗೆ ಅದೇನೋ ವಿಲಕ್ಷಣ ಖುಷಿ. ಇಂತಹ ಪ್ರಸಂಗಗಳು ಖಂಡಿತವಾಗಿ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುತ್ತವೆ. ಅದು ಈ ತರಹದ ಡಾಕ್ಯುಮೆಂಟರಿಯಾಗಿರಬಹುದು, ಕಾಶ್ಮೀರ್ ಫೈಲ್ಸ್  ಆಗಿರಬಹುದು ಅಥವಾ ಇಂದಿರಾಜಿಯವರ ಹತ್ಯೆಯ ನಂತರ ನಡೆದ ಗಲಭೆಗಳಿರಬಹುದು, ಅಥವಾ ಇನ್ನಾವುದೋ ಡಾಕ್ಯು ಮೆಂಟರಿ ಇರಬಹುದು.

ಎರಡೂವರೆ ದಶಕಗಳ ನಂತರ ಕಾಶ್ಮೀರ್ ಫೈಲ್ಸ್  ಚಿತ್ರ ಮಾಡುವ ಅವಶ್ಯಕತೆಯಾದರೂ ಏನಿತ್ತು? ಆಗಿಹೋದ ಕಹಿಘಟನೆ ಗಳನ್ನು ನಾವು ನೆನಪಿನಲ್ಲಿಟ್ಟುಕೊಂಡು ಅದು ಮರುಕಳಿಸದಂತೆ ಎಚ್ಚರವಹಿಸುವುದಕ್ಕೆ ಅದನ್ನು ಪಾಠವಾಗಿ ಬಳಸಬೇಕೇ ವಿನಃ ಹಳೆಯ ಗಾಯವನ್ನು ಕೆರೆದು ಮತ್ತೆ ರಕ್ತ ಒತ್ತರಿಸುವಂತೆ ಮಾಡುವುದಲ್ಲ. ಇಂತಹ ವಿಚಾರಗಳು ನವಪೀಳಿಗೆಯ ಶಕ್ತಿಯುತ ಮನಸ್ಸುಗಳ ದಾರಿ ತಪ್ಪಿಸುತ್ತವೆ ಮತ್ತು ಅವರ ಮನಸ್ಸಿನಲ್ಲಿ ದ್ವೇಷದ ಬೀಜಬಿತ್ತುವ ಕೆಲಸ ಮಾಡುತ್ತವೆ. ದೇಶದ ಯುವ ಸಮೂಹ ಇಂತಹ ವಿಷವರ್ತುಲದಲ್ಲಿ ಸಿಕ್ಕುಹಾಕಿಕೊಂಡರೆ ದೇಶದ ಪ್ರಗತಿ ಅಷ್ಟರಮಟ್ಟಿಗೆ ಕುಂಠಿತವಾಗುತ್ತದೆ. ನಮ್ಮ
ಶತ್ರುಗಳು ಬಯಸುವುದು ಕೂಡ ಅದನ್ನೇ.

ಭಾರತ ಈಗ ಪ್ರಗತಿಯ ಹಾದಿಯಲ್ಲಿ ದಾಪುಗಾಲು ಹಾಕುತ್ತಿದೆ. ಬ್ರಿಟನ್ ದೇಶವನ್ನು ಹಿಂದಿಕ್ಕಿ ನಾವು ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ಕೆಲವೇ ವರ್ಷಗಳಲ್ಲಿ ಭಾರತ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕಶಕ್ತಿಯಾಗಿ ರೂಪುಗೊಳ್ಳಲಿದೆ. ನಮ್ಮ ಯುವಸಮೂಹ ವಿಶ್ವದ ಐ.ಟಿ.ಉದ್ಯಮದ ಮುಂಚೂಣಿಬಗ೭ಯಲ್ಲಿದ್ದಾರೆ. ಬಡತನ ನಿರ್ಮೂಲನೆಗೆ ನಾವು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇವೆ. ಹೆಣ್ಮಕ್ಕಳ ಸಬಲೀಕರಣಕ್ಕೆ, ಉದ್ಯೋಗಸೃಷ್ಟಿ ಆಗುತ್ತಲೇ ಇದೆ.

ಅಸಮಾನತೆಯನ್ನು ಎಡೆ ತೊಡೆದುಹಾಕಿ ಸಮಾನತೆಯನ್ನು ಸಾರುವ ಪ್ರಯತ್ನ ಫಲಕಾರಿಯಾಗುತ್ತಿದೆ. ಪ್ರಗತಿಯ ಹಾದಿಯಲ್ಲಿ ಮುನ್ನಡೆದು ಯಶ ಕಾಣುವುದಕ್ಕೆ ಬಲಿಷ್ಠ ಶಕ್ತಿ ಬೇಕು. ಇದು ಬರಬೇಕೆಂದರೆ ಬಹಳ ಮುಖ್ಯವಾಗಿ ಬೇಕಿರುವುದು, ಶಿಕ್ಷಣ, ಆರ್ಥಿಕ ಶಕ್ತಿ ಮತ್ತು ಬುದ್ಧಿಮತ್ತೆ. ಇವುಗಳನ್ನು ನಮ್ಮದಾಗಿಸಿಕೊಳ್ಳುವುದಕ್ಕೆ ಮತ್ತು ಯಶಸ್ಸನ್ನು ಪಡೆಯುವುದಕ್ಕೆ ನಾವು ಎಲ್ಲ ಪ್ರಯತ್ನ ಗಳಲ್ಲೂ ಮುಂದಿದ್ದೇವೆ. ಅಮೆರಿಕದಲ್ಲಿ ಇಂದು ೪೦ ಲಕ್ಷ ಭಾರತೀಯರು ನೆಲೆ ನಿಂತಿದ್ದಾರೆ ಮತ್ತು ಅವರು ತಲಾದಾಯದ ಲೆಕ್ಕಾಚಾರದಲ್ಲಿ ನಂಬರ ವನ್ ಸ್ಥಾನದಲ್ಲಿದ್ದಾರೆ.

ಅಮೆರಿಕದಲ್ಲಿರುವ ಒಬ್ಬ ಭಾರತೀಯನ ಸರಾಸರಿ ವಾರ್ಷಿಕ ಆದಾಯ ೧,೦೦,೫೦೦ ಯು.ಎಸ್. ಡಾಲರ್ ಆಗಿದ್ದರೆ ಅಲ್ಲಿನ ನಾಗರಿಕರ ವಾರ್ಷಿಕ ತಲಾ ದಾಯ ಸರಾಸರಿ ೫೦ ರಿಂದ ೬೦ ಸಾವಿರ ಡಾಲರ್‌ಗಳಷ್ಟಿದೆ. ಯಶಸ್ಸನ್ನು ಗಳಿಸುವ ಹಾದಿಯಲ್ಲಿ ಭಾರತೀಯರು ಎಷ್ಟು ಮುಂದಿದ್ದಾರೆ ಎಂಬುದಕ್ಕೆ ಇದೊಂದು ದ್ಯೋತಕ. ಇದನ್ನು ನಾವು ಭಾರತದಲ್ಲೂ ಸಾಧಿಸುವತ್ತ ಗಮನ
ಹರಿಸಬೇಕು.

ದುರದೃಷ್ಟವೆಂದರೆ ಕೆಲವು ದುಷ್ಟಶಕ್ತಿಗಳು ನಮ್ಮೊಳಗೇ ವಿಷಬೀಜ ಬಿತ್ತುವ ಮತ್ತು ರಕ್ತಪಾತಗಳಿಗೆ ಎಡೆಮಾಡಿ ಕೊಡುವ ಸಂಗತಿ ಗಳನ್ನು ಹರಡುವ ಕೆಲಸ ಮಾಡುತ್ತಿವೆ. ಅವರು ಉಗ್ರವಾದವನ್ನು ಭಾರತಕ್ಕೆ ರಫ್ತು ಮಾಡುತ್ತಿದ್ದಾರೆ ಮತ್ತು ಕೆಸರೆರಚುವ ಪ್ರಯತ್ನ ಮಾಡಿ ಭಾರತದ ಮೂಲಶಕ್ತಿ ಕಳೆಗುಂದುವಂತೆ ಮಾಡುವ ಕೆಲಸಕ್ಕೆ ಕೈಹಾಕುತ್ತಿದ್ದಾರೆ.

ಭಾರತದ ಪ್ರಗತಿಯ ಹಾದಿಯಲ್ಲಿ ಮುಳ್ಳುಗಳನ್ನು ತಂದುಹಾಕುವ ದುಷ್ಟ ಕೆಲಸವನ್ನವರು ಮಾಡುತ್ತಿದ್ದಾರೆ. ನಮ್ಮೊಳಗೂ ಅಂತಹದೇ ಮನಃಸ್ಥಿತಿಯ ಬಹಳ ಮಂದಿ ಇzರೆಂಬುದು ಇನ್ನೂ ದುರದೃಷ್ಟಕರ ಸಂಗತಿ. ಪಠ್ಯಪುಸ್ತಕದಿಂದ ಕೆಲವು ಜಾತಿ-ಧರ್ಮಗಳ ಚಾಪ್ಟರ್ ಗಳನ್ನು ತೆಗೆದುಹಾಕುವುದು ಕೂಡ ಅಶಾಂತಿಗೆ ಕಾರಣ ವಾಗುವ ಸಂಗತಿ. ಇಂತಹ ಅನೇಕ ಸಂಗತಿಗಳು ದೇಶದ ಪ್ರಗತಿಗೆ ಮಾರಕವಾಗಿವೆ. ನಾವು ದೇಗುಲವನ್ನು ಕಟ್ಟೋಣ, ಆದರೆ ಅನ್ಯರ ಭಾವನೆಗಳಿಗೆ ಧಕ್ಕೆ ತರದಿ ರೋಣ. ಜೈನರ ಯಾತ್ರಾಕೇಂದ್ರ ಪಾಲಿಟಾಣಾ ಆಗಿರಬಹುದು, ಅಥವಾ ಶ್ರೀ ಸಮ್ಮದ್ ಶಿಖರಜೀ ವಿಚಾರವಿರಬಹುದು, ಇವೆಲ್ಲವೂ ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ಕೇಂದ್ರಗಳು.

ಹಾಗಿರುವ ಅಂತಹ ಶಾಂತಿಯುತ ಮನಃ ಸ್ಥಿತಿಯ ಜೈನಸಮುದಾಯಕ್ಕೆ ಯಾಕೆ ನೋವುಂಟು ಮಾಡಬೇಕು? ಈಚೆಗೆ ಪಠಾಣ್ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಕೆಲವರು ಆ ಸಿನಿಮಾಗೆ ಬಹಿಷ್ಕಾರ ಹಾಕುವ ಮಾತುಗಳನ್ನಾಡಿದರು. ಸಿನಿಮಾವನ್ನು ಮನರಂಜನೆಯ ಮಾಧ್ಯವನ್ನಾಗಿ ನೋಡಿ, ಅಲ್ಲೂ ನೀವು ದ್ವೇಷ ತುಂಬುವ ಕೆಲಸ ಮಾಡುತ್ತೀರಿ ಎಂದಾದರೆ ಅದು ಇಡೀ
ದೇಶವನ್ನೇ ಹಾಳುಗೆಡಹುತ್ತದೆ, ಅಲ್ಲವೇ? ಈ ದೇಶ ಯಾರದ್ದು? ತ್ರಿವರ್ಣ ಧ್ವಜದಡಿ ಒಂದಾಗಿರುವ ಎಲ್ಲ ಭಾರತೀಯರಿಗೂ ಸೇರಿದ್ದು, ಇಲ್ಲಿ ಜಾತಿಮತಗಳ ಅಡ್ಡಗೋಡೆ ಬೇಕಿಲ್ಲ. ತಾಯಿ ಭಾರತಾಂಬೆ ನಮ್ಮೆಲ್ಲರ ತಾಯಿ.

ತಾಯಿಗೆ ತನ್ನ ಎಲ್ಲ ಮಕ್ಕಳ ಮೇಲೂ ಸಮಾನವಾದ ಪ್ರೀತಿ ಇರುತ್ತದೆ. ತನ್ನ ಎಲ್ಲ ಮಕ್ಕಳೂ ಸುಸಂಸ್ಕೃತರಾಗಬೇಕೆಂದು ಆಕೆ ಬಯಸುತ್ತಾಳೆ. ಧಾರ್ಮಿಕ ಕೇಂದ್ರಗಳಿಗೆ ಹೋಗುತ್ತೀರಿ ಎಂದಾಕ್ಷಣ ವ್ಯಕ್ತಿಯೊಬ್ಬ ಸುಸಂಸ್ಕೃತ ಎಂದು ಹೇಳಲಾಗದು. ಮಾನ ವೀಯತೆಗಿಂತ ದೊಡ್ಡ ಸಂಸ್ಕೃತಿ ಇನ್ನೊಂದಿಲ್ಲ. ತಾಯಿ ಭಾರತಿಯ ಸುರಕ್ಷೆ ನಮ್ಮೆಲ್ಲರ ಹೊಣೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಗಳನ್ನು ನಾವು ಮರೆತುಬಿಡ ಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ‘ಇಂತಹ ವಿಚಾರಗಳು ಬಂದಾಗ, ಎಲ್ಲ ಸಂಗತಿಗಳ ಮೇಲೆ ಅಭಿಪ್ರಾಯ ವ್ಯಕ್ತಪಡಿಸುವುದು ಬೇಕಿಲ್ಲ’ ಎಂದಿದ್ದನ್ನು ನೆನಪಿಸಿಕೊಳ್ಳಿ.

ಅಭಿಪ್ರಾಯಭೇದಗಳಿಗೆ ಕಾರಣ ವಾಗುವ ಸಂಗತಿಗಳಿಗೆ ಕಾಮೆಂಟು ಮಾಡುವುದು ಬೇಕಿಲ್ಲ ಎಂದವರು ಸ್ಪಷ್ಟವಾಗಿ ಹೇಳಿದ್ದರು. ಮೋದೀಜಿಯವರು ಮಲ್ಲಿಕಾರ್ಜುನ ಖರ್ಗೆಯವರ ಕೈಹಿಡಿದು ಮುಗುಳುನಗೆ ಬೀರಿದಾಗ ಅಂದು ಸೌಹಾರ್ದ ವಾತಾವರಣ
ಸೃಷ್ಟಿಯಾಗಿತ್ತು. ಇದು ದೇಶದೆಡೆ ಒಂದು ವಿಶಿಷ್ಟ ಸಂದೇಶ ರವಾನಿಸುವ ಕೆಲಸವನ್ನು ಮಾಡುತ್ತದೆ. ಹಳೆಯ ಗಾಯಗಳನ್ನು ಮರೆತು ಸಕಾರಾತ್ಮಕತೆಯ ಕಂಪನ ಎಡೆ ಪಸರಿಸುವಂತೆ ಮಾಡಬೇಕಿದೆ.

ಬ್ರಿಟಿಷರ ದಾಸ್ಯದಿಂದ ಭಾರತವನ್ನು ಬಿಡುಗಡೆ ಮಾಡಿದ ಮಹಾತ್ಮ ಗಾಂಧೀಜಿಯವರು ಇಹ ತ್ಯಜಿಸಿದ ತಾರೀಕಿನ ಆಸುಪಾಸಿ ನಲ್ಲಿ ನಾವಿದ್ದೇವೆ. ದ್ವೇಷ ಅವರ ಹತ್ಯೆಗೆ ಕಾರಣವಾಯಿತು. ಅವರು ಅಹಿಂಸೆ, ಸತ್ಯ, ಪ್ರೀತಿ, ಅನುಕಂಪ ಮತ್ತು ವಿಶ್ವ ಭ್ರಾತೃತ್ವದ ಸಂದೇಶ ಸಾರಿದ ಹರಿಕಾರ. ಅವರ ತತ್ವಗಳು ಭಾರತಕ್ಕೆ ಮಾತ್ರ ಸೀಮಿತವಾಗಲಿಲ್ಲ, ವಿಶ್ವವ್ಯಾಪಿಯಾದವು. ನೀವು
ಗಾಂಧೀಜಿಯವರ ದೇಶದಲ್ಲಿ ಬದುಕುತ್ತಿದ್ದೀರಿ ಎಂಬು ದನ್ನು ಮರೆಯದಿರಿ. ಇದು ಸೌಹಾರ್ದದ ಭೂಮಿ.

ಹೆಮ್ಮೆಯಿಂದ ಹೇಳೋಣ ಬನ್ನಿ – ಸಾರೇ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ!