ಪರಿಶ್ರಮ
parishramamd@gmail.com
ಬೆಂಗಳೂರಿನ ಸಾಮಾನ್ಯ ವರ್ಗದ ಕುಟುಂಬಕ್ಕೆ ಸೇರಿದ ಹುಡುಗ ನಮ್ಮಲ್ಲಿ ಬಂದಿದ್ದು, ವ್ಯಾಸಂಗ ಮಾಡಿ ಏಮ್ಸ್-ದೆಹಲಿ ಅತ್ತ ಯಶಸ್ಸಿನ ದಾಪುಗಾಲಿಟ್ಟಿದ್ದಾನೆ. ಮೈಸೂರಿನ ಬಡ ಕುಟುಂಬದ ಹುಡುಗಿ, ಇವತ್ತು ಜಿಪ್ಮರ್‌ನತ್ತ ಮುಖ ಮಾಡಿದ್ದಾರೆ. ಕೋಲಾರದ ಚಿನ್ನದ ನಾಡಿನಿಂದ ಬಂದ ಚಿನ್ನದಂತಹ ಹುಡುಗ ಇಂದು ಜಿಪ್ಮರ್‌ನ ಕದ ತಟ್ಟುತ್ತಿದ್ದಾನೆ.
ಪರಿಶ್ರಮ ನೀಟ್ ಅಕಾಡೆಮಿ ಇಂದು ದಕ್ಷಿಣ ಭಾರತದ ಸುಪ್ರಸಿದ್ಧ ಹಾಗೂ ಕರ್ನಾಟಕದ ನಂ.೧ ನೀಟ್ ತರಬೇತಿ ಕೇಂದ್ರವಾಗಿ ಹೆಸರನ್ನು ಗಳಿಸಿದೆ. ಇದರ ಮುಖ್ಯಸ್ಥ ನಾನು. ನಮ್ಮ ಮೂರು ವರ್ಷಗಳ ಈ ಪಯಣ ಅಷ್ಟು ಸುಲಭವಾಗಿರಲಿಲ್ಲ. ಅಲ್ಲಿ ನೋವಿತ್ತು ದುಃಖವಾಗಿತ್ತು, ಕಾಡಿದ ಒಂಟಿತನವಿತ್ತು, ಪ್ರತಿ ಹೆಜ್ಜೆ ಇಡಲು ಆತಂಕ ಪಡುತ್ತಿದ್ದಂತಹ ದಿನಗಳೇ ಅದು. ಪ್ರತಿ ದಿನವೂ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವೇ? ನನ್ನ ಕೈಗೆಟು ಕುವ ಕೆಲಸವೇ? ಎಂಬ ಹೆದರಿಕೆ ಕಾಡುತ್ತಲೇ ಇತ್ತು.
ಪ್ರಾರಂಭಿಸಲು ಕೋಟ್ಯಾಂತರ ರುಪಾಯಿ ಬಂಡವಾಳ ಬೇಕೆಂಬ ಯೋಚನೆಗಳ ನಡುವೆ ಖಾಲಿ ಜೇಬಿನಲ್ಲಿ ಬೆಂಗಳೂರಿಗೆ ಬಂದ ಈ ಹುಡುಗ ಪರಿಶ್ರಮ ಕಟ್ಟಲೇಬೇಕೆಂಬ ಬಲವಾದ ತುಡಿತವಿತ್ತು. ೨೦೧೯ರ ಸೆಪ್ಟೆಂಬರ್ ತಿಂಗಳಲ್ಲಿ ಪರಿಶ್ರಮ ನೀಟ್ ಅಕಾಡೆಮಿ ಪ್ರಾರಂಭಿಸಿದಾಗ, ಒಂದು ಕೋಚಿಂಗ್ ಸೆಂಟರ್ ಆಗಿ ನಾವು ಯಶಸ್ವಿಯಾಗುತ್ತೇವೆ ಎಂಬ ಅಚಲವಾದ ಭರವಸೆ ನನ್ನಲಿತ್ತು, ಭವಿಷ್ಯದ ವೈದ್ಯರನ್ನು ಸೃಷ್ಠಿಸುವ – ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುವ-ಸುಶಿಕ್ಷಿತ ವೈದ್ಯರನ್ನಾಗಿಸಲು
ಮಾರ್ಗದರ್ಶಿಸಬೇಕೆಂಬುದು ನನ್ನ ಆಕಾಂಕ್ಷೆ, ಅದರಂತೆ ಪ್ರಾರಂಭಿಸಿದೆ. ಇದರ ಮಧ್ಯೆ ಕೋವಿಡ್-19 ರಕ್ಕಸ ನಮ್ಮನ್ನು ನಲುಗಿಸಿಬಿಟ್ಟಿತ್ತು.
ಮುಂದೇನು! ಎಂಬ ಪ್ರಶ್ನೆಗೆ ಉತ್ತರವೇ ಇರಲಿಲ್ಲ. ಇಡೋ ಪ್ರತಿ ಹೆಜ್ಜೆಯೂ ಕಷ್ಟವಾಗಿತ್ತು. ಗೆಲುವಿನ ಬಾಗಿಲು ಮುಚ್ಚೇ ಹೋಯಿ ತೇನೋ ಎಂಬ ಆತಂಕವೂ ಕಾಡುತ್ತಿತ್ತು. ಇದೆಲ್ಲಾ ಆದ ನಂತರ ನಮ್ಮನ್ನು ನಂಬಿ 700 ಕ್ಕೂ ಹೆಚ್ಚು ಮಕ್ಕಳ ಪೋಷಕರು ನಮ್ಮ ಸಂಸ್ಥೆಯನ್ನು ನಂಬಿ ಬಂದರು. ನಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಿ, ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂಬ ಜವಾಬ್ದಾರಿ ಯನ್ನು ನನ್ನ ಹೆಗಲಿಗೇರಿಸಿದರು.
ಒಬ್ಬ ವಿದ್ಯಾರ್ಥಿಯನ್ನು ಒಂದು ವರ್ಷದ ಕಾಲ ಬೆಂಗಳೂರಿನಲ್ಲಿ ಸಾಕಿ, ಸಲಹಿ, ಮಾರ್ಗದರ್ಶಿಸಿ, ಓದಿಸಿ, ವೈದ್ಯರನ್ನಾಗಿ ಮಾಡು ವುದು ಅಷ್ಟು ಸುಲಭದ ಮಾತಲ್ಲ, ಪ್ರತಿದಿನ ೧೫ ರಿಂದ ೧೬ ತಾಸಿನ ಪರಿಶ್ರಮ ಬೇಕಾಗುತ್ತದೆ. ನಿರಂತರ ಅಧ್ಯಯನ,
ಚದುರದ ಏಕಾಗ್ರತೆ ಬೇಕಾಗುತ್ತದೆ. ಅದೆಲ್ಲವನ್ನು ಮೀರಿದ ಗೆದ್ದೇ ಗೆಲ್ಲುತ್ತೇನೆ ಎಂಬ ದೃಢ ಸಂಕಲ್ಪ ಆಲುಗಾಡದಂತೆ ನೋಡಿ ಕೊಳ್ಳಬೇಕಾಗುತ್ತದೆ.
ಎಲ್ಲವನ್ನು ಯಶಸ್ವಿಯಾಗಿ ಪೂರೈಸಿದೆವು ೭೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಈ ಬಾರಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯರ ಸೀಟು ಲಭಿಸುವ ನಿರೀಕ್ಷೆ ಇದೆ, ಎಲ್ಲಾ ಕ್ಯಾಟಗರಿಯಲ್ಲೂ ಸೇರಿಸಿ ನಮ್ಮ ಅಂದಾಜಿನ ಪ್ರಕಾರ 550 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಈ ವರ್ಷ ಪಡೆಯಲ್ಲಿದ್ದಾರೆ.
ಇದು ದಕ್ಷಿಣ ಭಾರತದ ಕೋಚಿಂಗ್ ಇಂಡಸ್ಟ್ರಿ ಮಟ್ಟಿಗೆ ಒಂದು ದಾಖಲೆಯೇ ಸರಿ. ನಾವು ದಾಖಲೆಗಾಗಿ ಪ್ರಯತ್ನ ಪಡಲಿಲ್ಲ, ದಾಖಲೆಗಳ ಧೂಳೀಪಟ ಮಾಡಲು ಯೋಚಿಸಲಿಲ್ಲ, ನಮ್ಮ ವಿದ್ಯಾರ್ಥಿಗಳ ಯಶಸ್ಸು ಚರಿತ್ರೆಯ ಪುಟದಲ್ಲಿ ಮೆರೆಬೇಕೆಂಬ ಹೆಬ್ಬಯಕೆಯೊಂದಿಗೆ ಹಗಲಿರುಳು ಶ್ರಮಿಸಿದೆವು. ದಿನನಿತ್ಯ ೧೫ ರಿಂದ ೧೬ ತಾಸಿನ ಏಕಾಗ್ರಚಿತ್ತ ಅಧ್ಯಯನ, ಪ್ರಾಯಶಃ ಪದಗಳಲ್ಲಿ ವರ್ಣಿಸಲಾಗದು, ವಿವರಿಸಿದರೂ ಬಹುಶಃ ಅದು ತುಂಬಾ ಚಿಕ್ಕಾದಾಗುತ್ತೆ, ಡಿಕ್ಷನರಿ ಸೋತು ಬಿಡುತ್ತೆ, ವ್ಯಾಕರಣದ
ವಿಶ್ಲೇಷಣೆಗೂ ಸಿಗದಂತಾಗುತ್ತದೆ.
ಬೆಂಗಳೂರಿನ ಸಾಮಾನ್ಯ ವರ್ಗದ ಕುಟುಂಬಕ್ಕೆ ಸೇರಿದ ಹುಡುಗ ನಮ್ಮಲ್ಲಿ ಬಂದಿದ್ದು, ವ್ಯಾಸಂಗ ಮಾಡಿ ಏಮ್ -ದೆಹಲಿ ಅತ್ತ ಯಶಸ್ಸಿನ ದಾಪುಗಾಲಿಟ್ಟಿದ್ದಾನೆ. ಮೈಸೂರಿನ ಬಡ ಕುಟುಂಬದ ಹುಡುಗಿ, ಇವತ್ತು ಜಿಪ್ಮರ್ ನತ್ತ ಮುಖ ಮಾಡಿದ್ದಾರೆ. ಕೋಲಾರದ ಚಿನ್ನದ ನಾಡಿನಿಂದ ಬಂದ ಚಿನ್ನದಂತಹ ಹುಡುಗ ಇಂದು ಜಿಪ್ಮರ್ ನ ಕದ ತಟ್ಟುತ್ತಿದ್ದಾನೆ. ಮಂಡ್ಯದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು ಬೆಂಗಳೂರು ವೈದ್ಯಕೀಯ ಕಾಲೇಜಿನತ್ತ ಮುಖ ಮಾಡಿದ್ದಾಳೆ.
ಕಲ್ಯಾಣ ಕರ್ನಾಟಕ ಪ್ರಾಂತ್ಯದಿಂದ ಬಂದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ದಿನ ಅವರ ಮನೆಗಳಲ್ಲಿ ಗೆಲುವಿನ ದೀಪ ಬೆಳಗಿಸಿದ್ದಾರೆ-ಕಾರಣ ಅವರು ವೈದ್ಯರಾಗಲು ಅರ್ಹತೆ ಸಂಪಾದಿಸಿದ್ದಾರೆ. ಅವರ ಪೋಷಕರ ಮುಖದಲ್ಲಿ ಸಂಭ್ರಮ ಕಂಡು
ಜಗತ್ತನೇ ಗೆದ್ದಂತಹ ಭಾಸವಾಗುತ್ತಿದೆ, ಪ್ರಾಯಶಃ ಕೋಟ್ಯಾಂತರ ರುಪಾಯಿ ಹಣ ಕೊಟ್ಟರೂ ಸಿಗದಂತಹ ಸಂತೋಷ, ಒಂದು ಮಗು ವೈದ್ಯಕೀಯ ಸೀಟು ಪಡೆದಾಗ ಅವರ ಪೋಷಕರ ಮುಖದಲ್ಲಿ ಕಾಣಸಿಗುತ್ತದೆ.
ರಾಯಚೂರಿನ ಬಡ ಕುಟುಂಬದ ಹುಡುಗಿ ಇಂದು ಮೈಸೂರು ಮೆಡಿಕಲ್ ಕಾಲೇಜಿನತ್ತ ಮುಖ ಮಾಡಿದ್ದಾಳೆ. ಚಿಕ್ಕಬಳ್ಳಾಪುರದ ಸಾಮಾನ್ಯ ವರ್ಗದ ಕುಟುಂಬಕ್ಕೆ ಸೇರಿದ ಹುಡುಗ ಈ ಬೆಂಗಳೂರು ಮೆಡಿಕಲ್ ಕಾಲೇಜಿನತ್ತ ಹೆಜ್ಜೆಯಿಟ್ಟಿದ್ದಾನೆ. ಹೀಗೇ ಒಬ್ಬರು ಅಥವಾ ಇಬ್ಬರ ಕಥೆಯನ್ನು ಹೇಳಲು ಹೊರಟರೆ ಅದಷ್ಟು ಸುಲಭವಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಪಡೆಯುತ್ತಿದ್ದಾರೆ ಎಂಬುದು ನಮ್ಮ ಹೆಗಳಿಕೆಗೆ ಹಾಗೂ ಸಂತೋಷಕ್ಕೆ ಕಾರಣವಾಗಿದೆ.
ನನ್ನ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಯಶಸ್ವಿಯಾಗಲಿ, ಅವರು ಅಂದುಕೊಂಡದ್ದಾಗಲಿ, ಅವರು ಕಂಡ ಕನಸನ್ನು
ಸಾಧಿಸ ಬೇಕು.
ಅವರ ಭವಿಷ್ಯ ಉಜ್ವಲವಾಗಬೇಕು, ಅವರ ಪೋಷಕರು ನಮ್ಮ ಮೇಲೆ ಇಟ್ಟಿದ್ದ ನಂಬಿಕೆ ಗೆದ್ದಿದೆ. ಅವರೆಲ್ಲರು ಸೃಜನಶೀಲ ವೈದ್ಯರಾಗುತ್ತಾರೆ ಎಂಬ ಭರವಸೆ ನನ್ನದು. ಗೆದ್ದೇ ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ-ಕಾರಣ ನನ್ನ ಪರಿಶ್ರಮದ ಗರಡಿಯಲ್ಲಿ ಬೆಳೆದಿದ್ದಾರೆ. ಪರಿಶ್ರಮ ಕೇವಲ ತರಬೇತಿ ಕೊಟ್ಟಿಲ್ಲ, ಜೀವನದಲ್ಲಿ ಬದುಕಲು ಬೇಕಾಗುವ ಧೈರ್ಯವನ್ನು, ಪ್ರತಿ ಹೆಜ್ಜೆ ಇಡಬೇಕಾದಾಗ ಇರಲೇಬೇಕಾದ ಧೃಡ ಸಂಕಲ್ಪವನ್ನು, ಎಷ್ಟೇ ಸಮಸ್ಯೆ ಬಂದರೂ ಆ ಸಮಸ್ಯೆಯನ್ನು ಪರಿಹರಿಸಿ, ದಿಟ್ಟತನ ದಿಂದ ದಾಟಿ, ಬೆಳೆದು ತೋರಿಸುವ ತಾಕತ್ತನ್ನು ಕಲಿಸಿಕೊಟ್ಟಿದೆ.
ಪ್ರಾಯಶಃ ಪಾಠದ ಜೊತೆ ಬದುಕಿನ ನೀತಿ ಪಾಠವನ್ನೂ ಹೇಳಿಕೊಡುವ ಒಂದಷ್ಟು ವಿದ್ಯಾಸಂಸ್ಥೆಗಳ ಸಾಲಿನಲ್ಲಿ ನನ್ನದೂ ಒಂದೆಂದು ಭಾವಿಸುತ್ತೇನೆ. ಇಂತಹ ಪರಿಶ್ರಮ ಎಂಬ ಹಡಗು ಯಶಸ್ವಿಯಾಗಿ ದಡ ಸೇರಿದೆ. ಬೀಸಿದ ಬಿರುಗಾಳಿಯೆಂಥದ್ದು, ಏನೆಂಬುದು ನನಗೆ ಮಾತ್ರ ಗೊತ್ತು, ಆದರೂ ಈ ದಿನ ನಂಬಿ ಬಂದ ಹಡಗು ದಡ ಸೇರುತ್ತಿದೆ. ಒಂದಲ್ಲ ಎರಡಲ್ಲ, ಈ ದಿನ ೫೦೦ ಕ್ಕೂ ಹೆಚ್ಚು ಯಶಸ್ಸಿನ ಕಥೆಗಳಿವೆ. ಅವರ ಪಯಾಣ ರೋಚಕತೆಯಿಂದ ಕೂಡಿದೆ. ಅವರ ತ್ಯಾಗ ಅದ್ಭುತವಾದದ್ದು.
ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ. ನಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಶ್ರಮ-ನಿಮಗೆ ಛಲ! ನಮ್ಮ ಪರಿಶ್ರಮ-ನಿಮಗೆ ಬೆಂಬಲ! ನಿಮ್ಮ ಪಯಾಣ ಅದ್ಭುತವಾಗಿರಲಿ.