Sunday, 15th December 2024

ಇಸ್ರೇಲ್‌ ಮಾದರಿ ನಮಗೆಷ್ಟು ಸಹಕಾರಿ ?

ಅಭಿವ್ಯಕ್ತಿ

ಚಂದ್ರಶೇಖರ ಬೇರಿಕೆ

ಕೆಲವು ದಿನಗಳ ಹಿಂದೆ ಇಸ್ರೇಲ್ ಬಹಳ ಚರ್ಚೆಯಲ್ಲಿದ್ದ ದೇಶ. ತನ್ನದೇ ಆದ ವಿಶಿಷ್ಟ ರೀತಿಯಿಂದ ಗುರುತಿಸಿಕೊಂಡಿರುವ ಆ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಮಿತ್ರರೂ ಇzರೆ, ಶತ್ರುಗಳೂ ಇದ್ದಾರೆ.

ಇಸ್ರೇಲ್ ಮತ್ತು ಅದರ ಸುತ್ತಲಿನ ದೇಶಗಳ ನಡುವೆ ವೈರತ್ವ, ಸೇಡು ಹೇಗಿದೆಯೆಂದರೆ ಇಸ್ರೇಲ್ ಸರ್ವನಾಶಕ್ಕೆ ಸುತ್ತಲಿನ ರಾಷ್ಟ್ರಗಳು ಹಾತೊರೆಯುತ್ತಿದ್ದರೆ ಸುತ್ತಲಿನ ರಾಷ್ಟ್ರಗಳನ್ನು ಲಗಾಡಿ ತೆಗೆದು ಸಮತಟ್ಟು ಮಾಡಲು ಸಿಕ್ಕ ಯಾವುದೇ ಪ್ರತಿಕಾರದ ಅವಕಾಶಗಳನ್ನು ಇಸ್ರೇಲ್ ತಪ್ಪಿಸಿ ಕೊಳ್ಳುವುದಿಲ್ಲ. ಇತ್ತೀಚೆಗೆ ಪ್ಯಾಲಸ್ತೀನ್ ಪ್ರತಿಭಟನಾಕಾರರು, ಹಮಾಸ್ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಮಾಡಿದ ದಾಳಿಯಲ್ಲಿ ಆ ಎರಡೂ ರಾಷ್ಟ್ರಗಳ ನಡೆ ಮತ್ತು ಧೋರಣೆಯನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶವಲ್ಲ.

ಅದನ್ನು ವಿಮರ್ಶೆ ಮಾಡಲು ಅಂತಾರಾಷ್ಟ್ರೀಯ ಸಮುದಾಯವಿದೆ, ಚರ್ಚಿಸಲು ಜಾಗತಿಕ ವೇದಿಕೆಯಿದೆ ಮತ್ತು ಸೂಕ್ತ ತೀರ್ಮಾನ ತೆಗೆದುಕೊಳ್ಳಲು ವಿಶ್ವಸಂಸ್ಥೆಯಿದೆ. IStand With Israel ಅಥವಾ I Stand With Palestine ಎಂಬ ಹೆಸರಿನಲ್ಲಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ಹೊಡೆದಾಟಗಳನ್ನು ತುಲನೆ ಮಾಡುವ ಬಗೆಗಿನ ಲೇಖನವೂ ಅಲ್ಲ. ಇದು ಇಸ್ರೇಲ್ ಎಂಬ ಪುಟ್ಟ ದೇಶದಿಂದ ನಾವು ಕಲಿಯಬಹುದಾದ ಪಾಠವೇನು ಎಂಬುದರ ಚೌಕಟ್ಟಿಗಷ್ಟೇ ಸೀಮಿತ.

ಇಸ್ರೇಲ್ ದೇಶದ ಸಂಶೋಧನೆಗಳು ಮತ್ತು ತಂತ್ರಜ್ಞಾನಗಳ ಕುರಿತಾಗಿ ಅವಿ ಯೂರೀಶ್ ಬರೆದ THOU SHALT INNOVATE ಎಂಬ ಕೃತಿಯು ವಿಶ್ವೇಶ್ವರ ಭಟ್ ಅವರಿಂದ ಕನ್ನಡಕ್ಕೆ ಅನುವಾದಗೊಂಡು ಓದುಗರ ಕೈಸೇರಿದ ‘ಆವಿಷ್ಕಾರದ ಹರಿಕಾರ’ ಎಂಬ ಪುಸ್ತಕದಲ್ಲಿ ಇಸ್ರೇಲ್ ದೇಶದ ಕಥೆ, ವ್ಯಥೆ, ತಂತ್ರಜ್ಞಾನದಲ್ಲಿ ಸಾಧಿಸಿದ ಪ್ರಗತಿ, ಸಾಧನೆಗಳನ್ನು ತಿಳಿದುಕೊಳ್ಳ ಬಹುದು. ಇಸ್ರೇಲ್‌ನ ಒಟ್ಟು ವಿಸ್ತೀರ್ಣದ ಅರವತ್ತೈದರಷ್ಟು ಭಾಗವನ್ನು ಮರುಭೂಮಿ ಆವರಿಸಿದೆ. ಇಡೀ ದೇಶದಲ್ಲಿ ನದಿಮೂ ಲಗಳಿಲ್ಲ. ಹಳ್ಳಗಳು ತುಂಬಲು ಮಳೆಯೇ ಬರುವುದಿಲ್ಲ. ಹಾಗಿದ್ದರೂ ನೀರಿನ ನಿರ್ವಹಣೆಯಲ್ಲಿ ಇಸ್ರೇಲ್ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ. ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿಯ ಬಗ್ಗೆ ಜಗತ್ತಿಗೆ ಪಾಠ ಮಾಡಿದ ದೇಶವದು.

‘ಒಂದು ಸಲಕ್ಕೆ ಒಂದು ಹನಿ’ ತತ್ತ್ವದಡಿ ಹನಿ ನೀರನ್ನು ವಿವೇಕತನದಿಂದ ಸದ್ಭಳಕೆ ಮಾಡುವ ದೇಶವಾದ್ದರಿಂದ ಅಲ್ಲಿ ನೀರು ವ್ಯರ್ಥವಾಗುವ ಸಾಧ್ಯತೆಯಿಲ್ಲ. ನೀರಾವರಿ ತಂತ್ರಜ್ಞಾನದಲ್ಲಿ ಆಧುನಿಕತೆಗೆ ತನ್ನನ್ನು ಸದಾ ತೆರೆದಿಟ್ಟುಕೊಂಡ ದೇಶವದು. ತ್ಯಾಜ್ಯ ನೀರಿನ ಶೇ.80ರಷ್ಟನ್ನು ಕೃಷಿ ಬಳಕೆಗಾಗಿ ಮರುಬಳಕೆ ಮಾಡುತ್ತದೆ. ನೀರು ಪೂರೈಕೆ ಪ್ರಕ್ರಿಯೆಯಲ್ಲಿ ಪೈಪ್‌ಗಳ ಡ್ಯಾಮೇಜ್, ನೀರು ಸೋರಿಕೆ ಮಾಹಿತಿಯನ್ನು ಸಂಗ್ರಹಿಸಿ ಮಾಹಿತಿ ನೀಡುವ ಟಕಾಡು ಎಂಬ ಹೆಸರಿನ ಸಾಫ್ಟ್ವೇರ್‌ಗಳನ್ನು
ಅಭಿವೃದ್ಧಿಪಡಿಸಿಕೊಂಡಿದ್ದು, ಇದರಿಂದ ನೀರು ಪೋಲಾಗುವುದನ್ನು ತಡೆಯಬಹುದು.

ಇಸ್ರೇಲ್‌ನಲ್ಲಿ ಕೃಷಿ ಹೆಚ್ಚು ಅಭಿವೃದ್ಧಿ ಹೊಂದಿದ ಉದ್ಯಮವಾಗಿದೆ. ದೇಶದ ಭೌಗೋಳಿಕತೆಯು ಸ್ವಾಭಾವಿಕವಾಗಿ ಕೃಷಿಗೆ ಅನುಕೂಲಕರವಾಗಿಲ್ಲದಿದ್ದರೂ ಇಸ್ರೇಲ್ ಕೃಷಿ ಉತ್ಪನ್ನಗಳ ಪ್ರಮುಖ ರಫ್ತುದಾರ ಮತ್ತು ಕೃಷಿ ತಂತ್ರಜ್ಞಾನಗಳಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿದೆ. ಜಗತ್ತಿನಲ್ಲಿ ಲಭ್ಯವಿರುವ ಜಲ ಸಂಪನ್ಮೂಲಗಳಲ್ಲಿ ಶೇ.4ರಷ್ಟನ್ನು ಭಾರತ ಹೊಂದಿದೆ. ನಮ್ಮ ದೇಶದಲ್ಲಿ ಶೇ.80ರಷ್ಟು ನೀರು ಕೃಷಿಗೆ ಬಳಕೆಯಾಗುತ್ತದೆ. ಕೃಷಿಯಲ್ಲಿ ತೆರೆದ ನೀರಾವರಿ ವ್ಯವಸ್ಥೆಯಿಂದಾಗಿ ನಮ್ಮಲ್ಲಿ ಯಥೇಚ್ಛವಾಗಿ ನೀರು ಪೋಲಾಗುತ್ತಿದೆ. ಗೃಹಬಳಕೆ, ಕೃಷಿ ಮತ್ತು ಕೈಗಾರಿಕಾ ಉದ್ದೇಶಕ್ಕಾಗಿನ ನೀರು ಸರಬರಾಜು ಪ್ರಕ್ರಿಯೆಯಲ್ಲಿ
ಗಣನೀಯ ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಪೈಪ್‌ಗಳ ಅಳವಡಿಕೆಯಲ್ಲಿನ ದೋಷ ಮತ್ತು ನಿರ್ವಹಣಾ
ಲೋಪ ಗಳಿಂದಾಗಿ ಭಾರೀ ಪ್ರಮಾಣದ ನೀರು ಚರಂಡಿ ಸೇರುತ್ತಿದೆ.

ಅವೈಜ್ಞಾನಿಕ ನೀರಿನ ಬಳಕೆ ಮತ್ತು ಆ ಬಗ್ಗೆ ಇನ್ನೂ ನಾವು ಜಾಗೃತವಾಗದೇ ಇರುವುದರಿಂದ ಮುಂದಿನ ದಿನಗಳಲ್ಲಿ ನಾವು ಬೆಲೆ ತೆರಬೇಕಾಗಬಹುದು. ನಮ್ಮಲ್ಲಿ Save Water, Save Life  ಎಂಬುದು ಘೋಷಣೆಗಷ್ಟೇ ಸೀಮಿತವಾಗಿದೆ. ಅಂತರ್ಜಲ ನೀರಿನ ಮಟ್ಟವನ್ನು ಮರುಪೂರಣ ಮಾಡುವಲ್ಲಿ ಇಸ್ರೇಲ್ ಯಶಸ್ಸಿನ ಹಾದಿಯನ್ನು ಭಾರತ ಅನುಸರಿಸಬಹುದಾಗಿದೆ. ‘ಆವಿಷ್ಕಾರದ ಹರಿಕಾರ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಶ್ವೇಶ್ವರ ಭಟ್ ಅವರಿಂದ ಓದುಗರೊಂದಿಗೆ ಚರ್ಚಾ ಕಾರ್ಯಕ್ರಮವಿತ್ತು. ವಿಶ್ವೇಶ್ವರ ಭಟ್ ಅವರು ಇಸ್ರೇಲ್‌ಗೆ ಹಲವು ಬಾರಿ ಭೇಟಿ ನೀಡಿ ಆ ದೇಶದ ಬಗ್ಗೆ ಪ್ರತ್ಯಕ್ಷವಾಗಿ ಸಾಕಷ್ಟು ತಿಳಿದುಕೊಂಡವರು.

ನಮ್ಮ ದೇಶದ ರಾಜಕೀಯ ವ್ಯವಸ್ಥೆಯ ಬಗ್ಗೆ ರೋಸಿಹೋಗಿರುವುದರಿಂದ ಸಹಜವಾಗಿ ಇಸ್ರೇಲ್ ರಾಜಕೀಯದ ಬಗ್ಗೆ ಅವರಲ್ಲಿ ಕೇಳಿ ತಿಳಿದುಕೊಳ್ಳುವ ಕುತೂಹಲವಿತ್ತು. ಆ ಚರ್ಚಾ ಕಾರ್ಯಕ್ರಮದಲ್ಲಿ ಒಂದು ದೇಶದ ಅಭಿವೃದ್ಧಿಯ ಗತಿಯನ್ನು ನಿರ್ಧರಿ ಸಲು ಆ ದೇಶದ ರಾಜಕೀಯ ಪರಿಸ್ಥಿತಿಗಳು ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಭಾರತ ಮತ್ತು ಇಸ್ರೇಲ್ ದೇಶಗಳ ರಾಜಕೀಯ ಪರಿಸ್ಥಿತಿಗಳ ಬಗ್ಗೆ ತಮ್ಮ ಅಭಿಪ್ರಾಯವೇನು’ ಎಂದು ಕೇಳಿದಾಗ ಭಾರತದಲ್ಲಿರುವಂತೆ ಅಲ್ಲೂ ರಾಜಕೀಯವಿದೆ.

ಆದರೆ ಅಲ್ಲಿಯ ರಾಜಕಾರಣ ಭಾರತಕ್ಕಿಂತ ಭಿನ್ನವಾಗಿದೆ. ದೇಶದ ವಿಚಾರ ಬಂದಾಗ ರಾಜಕೀಯಕ್ಕೆ ಆದ್ಯತೆಯಿರುವುದಿಲ್ಲ. ಅಲ್ಲಿ ಅಭಿವೃದ್ಧಿ ಕೇಂದ್ರಿತ ರಾಜಕೀಯ ಲಕ್ಷಣಗಳನ್ನು ಕಾಣಬಹುದು. ಸಂಶೋಧನೆಗಳು, ತಂತ್ರಜ್ಞಾನಗಳಿಗೆ ಅತಿ ಹೆಚ್ಚಿನ ಪ್ರೋತ್ಸಾಹ ವನ್ನು ನಾವು ಅಲ್ಲಿ ಕಾಣುತ್ತೇವೆ’ ಎಂದರು. ಈ ಹಿನ್ನೆಲೆಯಲ್ಲಿ ನಾವು ವಿಶ್ಲೇಷಿದಾಗ ಇಸ್ರೇಲ್‌ನಲ್ಲಿ ಮುತ್ಸದ್ದಿತನದ ರಾಜಕೀಯ ಲಕ್ಷಣಗಳನ್ನು ಕಾಣಬಹುದು. ಇದಕ್ಕೆ ಪೂರಕವೆಂಬಂತೆ ಕೆಲವು ದಿನಗಳ ಹಿಂದೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಘರ್ಷಣೆ ಸಂದರ್ಭದಲ್ಲಿ ಆ ದೇಶದ ರಾಜಕೀಯ ಪಕ್ಷಗಳು ರಾಜಕೀಯವನ್ನು ಬದಿಗಿಟ್ಟು ದೇಶಕ್ಕಾಗಿ ಹೇಗೆ ಒಂದಾದವು ಎಂಬುದನ್ನು ಗಮನಿಸಬಹುದು.

ಬೆಂಜಮಿನ್ ನೇತನ್ಯಾಹು ನೇತೃತ್ವದ ಅಲ್ಲಿನ ಸರಕಾರವು ಅಲ್ಪಮತದಲ್ಲಿದ್ದರೂ, ರಾಜಕೀಯ ಅಸ್ಥಿರತೆಯಿಂದ ಆ ದೇಶದ ಪ್ರಧಾನಿ ಹುದ್ದೆಯನ್ನು ತ್ಯಜಿಸಬೇಕಾದ ಸನ್ನಿವೇಶದಲ್ಲೂ ಹಮಾಸ್ ಮೇಲೆ ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಆ ದೇಶದ ವಿರೋಧ ಪಕ್ಷದ ನಾಯಕ ಮತ್ತು ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ ನಫ್ತಾಲಿ ಬೆನ್ನೆಟ್
ಹೇಳಿದ ಮಾತು ನಮಗೆ ಒಂದು ಪಾಠವಾಗಬೇಕು. ಸರಕಾರ ಅಲ್ಪಮತದಲ್ಲಿದರೂ ನಾವು ಈಗ ಒಗ್ಗಟ್ಟಾಗಿದ್ದೇವೆ. ಒಬ್ಬೊಬ್ಬ
ಹಮಾಸ್ ಉಗ್ರನನ್ನೂ ಹೊಡೆದುರುಳಿಸುತ್ತೇವೆ.

ಪ್ರಧಾನಿಯವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಶತ್ರು ಎದುರಿಗಿರುವಾಗ ನಾವು ರಾಜಕೀಯ ಮಾಡುವ ಸಮಯವಿದಲ್ಲ. ಇಸ್ರೇಲ್ ಸರಕಾರ ಬೀಳಿಸುವ ಬದಲು ಸರಕಾರದ ಜತೆಗೆ ನಿಲ್ಲುತ್ತೇವೆ’. ಹೌದು, ಇಸ್ರೇಲ್ ದೇಶದ ರಾಜಕೀಯ ವ್ಯವಸ್ಥೆ ಭಾರತ ಕ್ಕಿಂತ ಭಿನ್ನವಾಗಿದೆ, ಅಭಿವೃದ್ಧಿ ಕೇಂದ್ರಿತವಾಗಿದೆ. ನಮ್ಮಲ್ಲಿರುವಂತೆ ಓಲೈಕೆ ರಾಜಕಾರಣ ಅಲ್ಲಿದ್ದಿದ್ದರೆ ಇಸ್ರೇಲ್ ಇಷ್ಟೊಂದು ಪ್ರಗತಿ ಸಾಽಸುತ್ತಿರಲಿಲ್ಲ, ಆ ದೇಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತೇ ನಿಬ್ಬೆರಗಾಗುವಂತೆ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸುತ್ತಲಿನ ಅಷ್ಟೂ ರಾಷ್ಟ್ರಗಳು ಏಕಕಾಲದಲ್ಲಿ ಮುಗಿ ಬಿದ್ದರೂ ಎದೆಯುಬ್ಬಿಸಿ ಹೋರಾಟ ಮಾಡಿ ವೈರಿಗಳನ್ನು ಬಗ್ಗು ಬಡಿ ಯಲು ಸಾಧ್ಯವಾಗುತ್ತಿರಲಿಲ್ಲ.

ಅದಕ್ಕಿಂತಲೂ ಮುಖ್ಯವಾಗಿ ಬಹುಶಃ ಆ ದೇಶ ಅಸ್ತಿತ್ವದ ಇರುತ್ತಿರಲಿಲ್ಲವೇನೋ. ಆ ದೇಶದ ಪ್ರತಿಯೊಬ್ಬ ನಾಗರಿಕನೂ ದೇಶ ರಕ್ಷಣೆಯ ಬಗ್ಗೆ ಜಾಗೃತನಾಗಿರುತ್ತಾನೆ. ಯಾವುದೇ ಸಂದರ್ಭದಲ್ಲಿ ದೇಶಕ್ಕೆ ಆಪತ್ತು ಎದುರಾದಾಗ ಕ್ಷಣ ಮಾತ್ರದಲ್ಲಿ ಅಲ್ಲಿಯ ಸಾಮಾನ್ಯ ಪ್ರಜೆ ಸೈನಿಕನಾಗಿ ಬದಲಾಗುತ್ತಾನೆ, ದೇಶಕ್ಕೆ ನಿಷ್ಠೆ ತೋರಿಸುತ್ತಾನೆ. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದ
ನೋಡಿ ಅದಕ್ಕಾಗಿ ದೇಶದ ಹಿತವನ್ನು ಬಲಿ ಕೊಡಲಾರರು. ವೈರಿ ರಾಷ್ಟ್ರಗಳೊಂದಿಗಿನ ಸಮರದ ಸಂಗತಿಗಳು ಚುನಾವಣಾ
ಸಂದರ್ಭದಲ್ಲಿ ಆದ್ಯತಾ ವಿಷಯವಾಗುವುದಿಲ್ಲ. ಸೈನ್ಯವನ್ನು ಅವಮಾನಿಸುವ ಪ್ರಸಂಗಗಳೂ ಕಂಡು ಬರಲಾರದು. ತನ್ನ
ರಾಷ್ಟ್ರವನ್ನು ಕಾಪಾಡಿಕೊಳ್ಳಲು ಅಷ್ಟೂ ನಾಗರಿಕರು ಒಂದುಗೂಡುತ್ತಾರೆ.

ರಾಜಕೀಯ ಪಕ್ಷಗಳನ್ನು ಮರೆತು ಬಿಡುತ್ತಾರೆ. ಅವರಿಗೆ ದೇಶ ಮೊದಲಾಗುತ್ತದೆ. ಇಸ್ರೇಲ್ ಜನಸಂಖ್ಯೆ 88 ಲಕ್ಷ. ಅಂದರೆ ವಿಶ್ವದ
ಜನಸಂಖ್ಯೆಯ ಶೇ 0.11ರಷ್ಟು. ಅಲ್ಲಿ ಮಾನವ ಸಂಪನ್ಮೂಲ ಕಡಿಮೆಯಿದ್ದರೂ ಆ ದೇಶದ ಒಟ್ಟಾರೆ ಜನಸಂಖ್ಯೆಯ ಅಷ್ಟೂ
ಜನರು ಆ ದೇಶದ ಉತ್ಪಾದಕ ಮಾನವ ಸಂಪನ್ಮೂಲವಾಗಿದ್ದಾರೆ. ಇಸ್ರೇಲಿಗರು ಹಠ ಸಾಧಕರಾಗಿದ್ದು, ತಮ್ಮನ್ನು ಒಂದಿಂದು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಬಹುತೇಕರು ಸಂಶೋಧನೆ, ತಂತ್ರಜ್ಞಾನಗಳ ಅಭಿವೃದ್ಧಿಯ ಆಸಕ್ತಿ ವಹಿಸಿ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಆ ದೇಶದ ಒಬ್ಬೊಬ್ಬ ನಾಗರಿಕನೂ ಶ್ರಮವಹಿಸಿ ದುಡಿಯುತ್ತಾನೆ. ನಮ್ಮಲ್ಲಿರುವಂತೆ ಪುಕ್ಸಟೆ ಯೋಜನೆಗಳು, ಬಿಟ್ಟಿ ಭಾಗ್ಯಗಳನ್ನು
ಪಡೆದು ಸೋಂಬೇರಿಗಳಂತೆ ಬಿದ್ದುಕೊಳ್ಳುವ, ಮೈಗಳ್ಳತನದ ಜಾಯಮಾನದವರು ಅಲ್ಲಿರಲು ಸಾಧ್ಯವಿಲ್ಲ. ಪ್ರತಿಕ್ಷಣವೂ ಅವರಿಗೆ ದೇಶ ಮತ್ತು ಅದರ ಭವಿಷ್ಯ ಕಣ್ಣೆದುರಿಗೆ ಬರುತ್ತದೆ. ಕುಂಟು ನೆಪ ಹೇಳಿಕೊಂಡು ಸಮಯ ವ್ಯರ್ಥ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದಿಲ್ಲ. ಇಸ್ರೇಲ್ ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನೆಗಳು, ತಂತ್ರಜ್ಞಾನದ ಅಭಿವೃದ್ಧಿ ಕುರಿತಾಗಿನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಒಬ್ಬ ವ್ಯಕ್ತಿಯು ಆ ದೇಶದ ಅಭಿವೃದ್ಧಿಗಾಗಿ, ಒಳಿತಾಗಿ ಬಳಕೆಯಾಗುವ ರೀತಿಯಲ್ಲಿ ಆತನಿಗೆ ಶಿಕ್ಷಣ ನೀಡಲಾಗುತ್ತದೆ. ಆದರೆ ಭಾರತ ವಿಶ್ವದ ಜನಸಂಖ್ಯೆಯ ಶೇ.೧೭.೭ರಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ ಮಾನವ ಸಂಪನ್ಮೂಲ ಸರಿಯಾಗಿ ಬಳಕೆ ಯಾಗುತ್ತಿಲ್ಲ. ಇದಕ್ಕೆ ಗುಣಮಟ್ಟದ ಶಿಕ್ಷಣದ ಕೊರತೆ, ಉದ್ಯೋಗದ ಅಲಭ್ಯತೆಯೂ ಕಾರಣವಾದರೆ ಸೋಮಾರಿತನ, ಅವಲಂಬಿತ ಜೀವನ ಕ್ರಮವೂ ಅನುಪಯುಕ್ತ ಮಾನವ ಸಂಪನ್ಮೂಲದ ಹೆಚ್ಚಳಕ್ಕೆ ಕಾರಣವಿರಬಹುದು.

ವೈದ್ಯಕೀಯ ಕ್ಷೇತ್ರದಲ್ಲೂ ಮುಂದುವರಿದಿರುವ ಇಸ್ರೇಲ್ ನಲ್ಲಿ ಆರೋಗ್ಯ ರಕ್ಷಣೆ ಸಾರ್ವತ್ರಿಕವಾಗಿದೆ ಮತ್ತು ವೈದ್ಯಕೀಯ ವಿಮಾ ಯೋಜನೆಯಲ್ಲಿ ಒಳಪಡುವುದು ಕಡ್ಡಾಯವಾಗಿದೆ. ಎಲ್ಲಾ ಇಸ್ರೇಲಿ ನಿವಾಸಿಗಳು ಮೂಲಭೂತ ಹಕ್ಕಾಗಿ ಆರೋಗ್ಯ ರಕ್ಷಣೆಗೆ ಅರ್ಹರಾಗಿzರೆ. ಇಸ್ರೇಲ್ ತನ್ನ ರಾಷ್ಟ್ರೀಯ ಆರೋಗ್ಯ ವಿಮಾ ಕಾನೂನಿನ ಭಾಗವಾಗಿ ನಾಗರಿಕರಿಗೆ ಮತ್ತು ಶಾಶ್ವತ ನಿವಾಸಿಗಳಿಗೆ ಸಾರ್ವತ್ರಿಕ ವ್ಯಾಪ್ತಿಯನ್ನು ಒದಗಿಸುತ್ತದೆ. ಇಸ್ರೇಲ್ ವಿಶ್ವದ ಅತ್ಯಂತ ತಾಂತ್ರಿಕವಾಗಿ ಸುಧಾರಿತ, ಉತ್ತಮ ಗುಣಮಟ್ಟದ ಮತ್ತು
ಪರಿಣಾಮಕಾರಿ ಆರೋಗ್ಯ ವ್ಯವಸ್ಥೆಯನ್ನು ಹೊಂದಿದೆ.

2013ರಲ್ಲಿ 48 ದೇಶಗಳ ಸಮೀಕ್ಷೆಯಲ್ಲಿ ದಕ್ಷತೆಯ ಆಧಾರದಲ್ಲಿ ಇಸ್ರೇಲ್‌ನ ಆರೋಗ್ಯ ವ್ಯವಸ್ಥೆಯು ವಿಶ್ವದ 4ನೇ ಸ್ಥಾನ ದಲ್ಲಿತ್ತು. 2020ರ ವಿಶ್ವದ ಅತ್ಯಂತ ಪರಿಣಾಮಕಾರಿ ಆರೋಗ್ಯ ವ್ಯವಸ್ಥೆಯ ಪಟ್ಟಿಯಲ್ಲಿ ಇಸ್ರೇಲ್ 3ನೇ ಸ್ಥಾನದಲ್ಲಿದೆ. ಬ್ಲೂಮ್ಬರ್ಗ್ ಸಂಸ್ಥೆ 2020ರಲ್ಲಿ ಬಿಡುಗಡೆ ಮಾಡಿದ ಶ್ರೇಯಾಂಕಗಳ ಪ್ರಕಾರ ಇಸ್ರೇಲ್ ವಿಶ್ವದ 10ನೇ ಆರೋಗ್ಯಕರ ದೇಶವಾಗಿದೆ.

ಇಸ್ರೇಲ್ ಸರಕಾರವು ಸಾಮಾನ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಆದರೆ ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ವರದಿಗಳನ್ನು ಪ್ರಕಟಿಸುವುದನ್ನು ನಿಷೇಧಿಸಿದೆ. ಅಲ್ಲಿಯ ಮಾಧ್ಯಮಗಳಾಗಲೀ, ನಾಗರಿಕರಾಗಲೀ ದೇಶದ ವಿರುದ್ಧ ಧ್ವನಿ ಎತ್ತುವ, ದೇಶ ವಿರೋಧಿ ಷಡ್ಯಂತ್ರಿಗಳ ಜತೆ ವಿದೇಶಿ ಶಕ್ತಿಗಳ ಜತೆ ಕೈಜೋಡಿಸುವ ಅಥವಾ ತಾಯಿ ನೆಲವನ್ನು ಅವಮಾನಿಸುವ ಕೆಲಸಕ್ಕೆ ಸಾಮಾನ್ಯವಾಗಿ ಕೈಹಾಕುವುದಿಲ್ಲ. ಯಾಕೆಂದರೆ ಇಸ್ರೇಲಿಗರಿಗೆ ದೇಶಾಭಿಮಾನ ಎಂಬುದು ರಕ್ತಗತವಾಗಿದೆ. ಪರಂಪರಾಗತವಾಗಿ ಬಂದಿದೆ.

ಅಲ್ಲಿ ಸ್ವದೇಶವನ್ನು ಹಿಯಾಳಿಸುವವರು, ಅವಮಾನ ಮಾಡುವವರು ಮತ್ತು ವೈರಿ ರಾಷ್ಟ್ರವನ್ನು ಪ್ರೀತಿಸುವವರು, ಮೆಚ್ಚಿ ಹೊಗಳುವವರು ಸಿಗಲಾರರು. ಒಬ್ಬ ಪ್ರಜೆ ದೇಶ ವಿರೋಧಿ ದುಷ್ಕೃತ್ಯದಲ್ಲಿ ತೊಡಗಿಸಿಕೊಂಡರೆ ಅವರ ಮೇಲೆ ತಕ್ಕ ಕ್ರಮ ನಿಶ್ಚಿತ. ಇಸ್ರೇಲ್ ತಾನೇ ಅಭಿವೃದ್ಧಿಪಡಿಸಿದ ತಂತ್ರಜ್ಞಾನದೊಂದಿಗೆ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ನಿರಂತರ ಸಂಶೋಧನೆಗಳು, ತಂತ್ರಜ್ಞಾನಗಳ ಅಭಿವೃದ್ಧಿ ಪ್ರಯತ್ನಗಳು ಈ ನಿಟ್ಟಿನಲ್ಲಿ ನಡೆಯುತ್ತಲೇ ಇರುತ್ತದೆ.

18ವರ್ಷಕ್ಕಿಂತ ಮೇಲ್ಪಟ್ಟ ಇಸ್ರೇಲಿನ ಎಲ್ಲಾ ಪುರುಷ ಮತ್ತು ಮಹಿಳಾ ನಾಗರಿಕರು (ಕೆಲವೊಂದು ಪ್ರಕರಣಗಳನ್ನು, ವಿನಾಯಿತಿ ಗಳನ್ನು ಹೊರತುಪಡಿಸಿ) ರಾಷ್ಟ್ರೀಯ ಮಿಲಿಟರಿ ಅಥವಾ ಇಸ್ರೇಲ್ ರಕ್ಷಣಾ ಪಡೆಯಲ್ಲಿ ನಿಗದಿತ ಸೇವಾವಧಿಯ ಸೇವೆ ಸಲ್ಲಿಸುವುದು ಕಡ್ಡಾಯ. ಅಂತೆಯೇ ಇಸ್ರೇಲ್ ಜಗತ್ತಿನಲ್ಲಿ ಬಲಿಷ್ಠ ಮಹಿಳಾ ಪಡೆಯನ್ನು ಹೊಂದಿರುವ ದೇಶ ಎಂಬ ಹಿರಿಮೆಗೂ ಪಾತ್ರವಾಗಿದೆ. ಈ ಕಡ್ಡಾಯ ಸೇವೆಯನ್ನು ನಾಗರಿಕರ ಇಚ್ಛೆಗೆ ವಿರುದ್ಧವಾದ ಕರ್ತವ್ಯದ ಹೇರಿಕೆ ಎಂದು ಅವರು ಭಾವಿಸದೇ
ಅದನ್ನು ಗೌರವಯುತವಾಗಿಯೇ ನಿರ್ವಹಿಸುತ್ತಾರೆ.

ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು, ದೇಶ ಉಳಿದರಷ್ಟೇ ನಾವು ಉಳಿಯುವೆವು ಎಂಬ ಸತ್ಯವನ್ನು ಅವರು ಅರಿತಿದ್ದಾರೆ.
ಅಮೆರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಹೇಳಿದ ಮಾತು ‘ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದೆಂದು
ಕೇಳಬೇಡಿ, ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ಕೇಳಿ’ ಎಂಬಂತೆ ನಾವು ದೇಶಕ್ಕಾಗಿ ಏನು ನೀಡಬವು
ಎಂಬುದರ ಬಗ್ಗೆ ಇಸ್ರೇಲಿಗರು ಹೆಚ್ಚು ಚಿಂತಿಸುತ್ತಾರೆ ಎಂಬುದನ್ನು ಆ ದೇಶದ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ವಿಮರ್ಶಿಸಬಹುದು.

ಇಸ್ರೇಲ್ ಇಷ್ಟೊಂದು ಮುಂದುವರಿಯಲು ಆ ದೇಶದ ಪ್ರತಿಯೊಬ್ಬನಾಗರಿಕನ ಕೊಡುಗೆಯಿದೆ, ತ್ಯಾಗವಿದೆ. ದೇಶವನ್ನು
ಪ್ರೀತಿಸುತ್ತಾರೆ, ದೇಶದ ಕಾನೂನುಗಳನ್ನು ಗೌರವಿಸುತ್ತಾರೆ. ನ್ಯಾಯಾಲಯದ ಪ್ರಕ್ರಿಯೆಗಳ ಮೂಲಕ ನಿರ್ಧರಿತವಾಗಬೇಕಾದ ತೀರ್ಮಾನಗಳನ್ನು ನ್ಯಾಯಾಲಯದ ತೀರ್ಮಾನಕ್ಕಿಂತ ಮೊದಲೇ ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಡಿಬೆಟ್ ಮಾಡಿ ತಮ್ಮದೇ ತೀರ್ಮಾನಕ್ಕೆ ಬರುವ ಪ್ರಸಂಗಗಳೂ ಅಲ್ಲಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಸರಕಾರದ ನೀತಿ ನಿರ್ಧಾರ ಗಳೆಲ್ಲವನ್ನೂ ವಿರೋಧಿಸುವ ಆಂದೋಲನಾ ಜೀವಿಗಳು, ಪ್ರತಿಭಟನಾ ಜೀವಿಗಳು, ಬಂದ್ ಜೀವಿಗಳು, ಸಾಮಾಜಿಕ ಮಾಧ್ಯಮದ ಹೋರಾಟಗಾರರ ಉಪಟಳವೂ ಅಲ್ಲಿ ಇಲ್ಲವೆನ್ನಬಹುದು.

ಸತ್ಯಾಸತ್ಯತೆಯನ್ನು ತಿಳಿಯದೇ, ವಿಚಾರಗಳನ್ನು ವಿಮರ್ಶೆಗೆ ಒಳಪಡಿಸದೇ ಮೂಗಿನ ನೇರಕ್ಕೆ ಷರಾ ಬರೆದು ದೇಶವನ್ನು
ಇಕ್ಕಟ್ಟಿನಲ್ಲಿ ಸಿಲುಕಿಸುವ, ದೇಶದ ಭವಿಷ್ಯಕ್ಕೆ ಮಾರಕವಾಗುವ ಸನ್ನಿವೇಶವನ್ನು ಸೃಷ್ಟಿಸುವ ಪ್ರಯತ್ನಕ್ಕೆ ಅವರು ಮುಂದಾ ಗುವುದಿಲ್ಲ. ಇಸ್ರೇಲ್ ಚಿಂತನೆಯನ್ನು, ಅಭಿವೃದ್ಧಿ ಮಾದರಿಯನ್ನು, ಆ ನಿಟ್ಟಿನಲ್ಲಿನ ಸುಧಾರಣೆಗಳನ್ನು, ಸಾಧನೆಗಳನ್ನು ನಾವೂ ಅಳವಡಿಸಿಕೊಳ್ಳಬಹುದು.

ಭಾರತವನ್ನು ಪ್ರೀತಿಸೋಣ, ಉಜ್ವಲ ಮತ್ತು ಬಲಿಷ್ಠ ಭಾರತಕ್ಕಾಗಿ ಐ ಖಠಿZb Uಜಿಠಿe ಐbಜಿZ ಎಂಬುದನ್ನು ಪ್ರತಿಪಾದಿಸೋಣ.