ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ಭಾರತವನ್ನು ಜೋಡಿಸಬೇಕಾದ ಪರಿಸ್ಥಿತಿಯೇನಿಲ್ಲ. ಆದರೂ ಜೋಡಿಸಬೇಕೆಂದರೆ ಸಂವಿಧಾನಕ್ಕಿಂತ ಧರ್ಮವೇ ಮಿಗಿಲೆನ್ನು ವವರು, ದೇಶದ್ರೋಹಿಗಳು, ಮತಾಂಧರು, ಜಿಹಾದಿ ಮತ್ತು ಭಯೋತ್ಪಾದಕ ಮನಸ್ಸಿನವರು ಮತ್ತು ಬುದ್ಧಿಜೀವಿಗಳೆಂಬ ಅಸಹಿಷ್ಣು ಪೀಡೆಗಳು ಇಂಥವರನ್ನು ದೇಶದ ಅನ್ನ-ನೀರು-ಗಾಳಿಯ ಋಣಕ್ಕೆ ಜೋಡಿಸಬೇಕಿದೆ.
‘ಭಾರತಮಾತೆಯ ಹೊಲಸು ತಾಕಬಾರದೆಂದೇ ಕಾಲುಗಳಿಗೆ ಶೂ ಧರಿಸು ತ್ತಿದ್ದೇನೆ. ಇಂಥ ಭೂಮಾತೆಯಿಂದ ಕಾಯಿಲೆ ಬರದಿರಲಿ ಎಂದು ಉಚಿತ ಶೂ ಮತ್ತು ಚಪ್ಪಲಿ ನೀಡುವ ಕಾರ್ಯಕ್ರಮವನ್ನು ತಮಿಳುನಾಡು ಡಿಎಂಕೆ ಸರಕಾರ ನಡೆಸಿದ್ದಕ್ಕೆ ನನ್ನ ಧನ್ಯವಾದಗಳು; ಡಿಎಂಕೆ ಸರಕಾರ ಅಧಿಕಾರಕ್ಕೆ ಬರಲು ನಮ್ಮ ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರ ಮತಗಳು ಕಾರಣ.
ಕನ್ಯಾಕುಮಾರಿಯಲ್ಲಿ ನಮ್ಮ ಕ್ರೈಸ್ತರು ಶೇ. 41ರಷ್ಟಿದ್ದೆವು, ಈಗ ಶೇ. 62ನ್ನು ದಾಟಿದ್ದೇವೆ, ಇನ್ನು ಕೆಲವೇ ವರ್ಷಗಳಲ್ಲಿ ಶೇ. 70ನ್ನು ದಾಟುತ್ತೇವೆ. ನಾವು ಕ್ರೈಸ್ತರು ಇನ್ನೂ ಹೆಚ್ಚುತ್ತಲೇ ಇರುತ್ತೇವೆ, ನಮ್ಮನ್ನು ತಡೆಯುವ ಶಕ್ತಿ ಜಗತ್ತಿನ ಇಲ್ಲ. ಪ್ರಧಾನಿ ಮೋದಿಯ ಕೊನೆಯ ದಿನಗಳು ಘೋರವಾಗಿರುತ್ತವೆ, ನಮ್ಮ ಯೇಸು ಸತ್ಯವೇ ಆಗಿದ್ದರೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಹೆಣಗಳನ್ನು ಹುಳು-ನಾಯಿಗಳು ಕಿತ್ತುತಿನ್ನುವ ದಿನ ಬಂದೇ ಬರುತ್ತದೆ’- ಹೀಗೆಂದು ಸಾರ್ವಜನಿಕ ಭಾಷಣ ಮಾಡಿ ದವನು ಜಾರ್ಜ್ ಪೊನ್ನಯ್ಯ ಎಂಬ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಪಾದ್ರಿ.
ಈತನ ಹಿಂದೂಧರ್ಮ-ವಿರೋಧಿ ಹೇಳಿಕೆಗಳ ವಿರುದ್ಧ ದೂರುಗಳು ದಾಖಲಾಗಿ ಈಗಾಗಲೇ ಜೈಲು ಸೇರಿ ಬಂದಿದ್ದಾನೆ. ಇಂಥ ಪರಮ ಹಿಂದೂ ಧರ್ಮ-ದ್ವೇಷಿ, ಭಾರತ ಮತ್ತು ಭಾರತಮಾತೆಯ ವಿರೋಧಿಯನ್ನು ಮೊನ್ನೆ ಭೇಟಿಮಾಡಿದ್ದು ವಿಶ್ವದ
ಮಹಾ ಪುರುಷ ರಾಹುಲ್ ಗಾಂಧಿ. ಈ ಭೇಟಿಯಲ್ಲಿ ಆ ಪಾದ್ರಿ ಈ ಮಹಾ ಪುರುಷನಿಗೆ ಬೋಧಿಸಿದ್ದು- ‘ಜೀಸಸ್ ಒಬ್ಬನೇ
ನಿಜವಾದ ದೇವರು, ಆತ ಮನುಷ್ಯರೂಪದಲ್ಲಿನ ದೇವರು, ಮಿಕ್ಕ ದೇವರುಗಳಂತೆ ಅಥವಾ ಶಕ್ತಿದೇವತೆಗಳಂತೆ ಅಲ್ಲ, ಯೇಸುಕ್ರಿಸ್ತನೊಬ್ಬನೇ ದೇವರು.
ಅನ್ಯಧರ್ಮಗಳಲ್ಲಿ ಇಂಥ ನೈಜ ದೇವರನ್ನು ಕಾಣಲು ಸಾಧ್ಯವಿಲ್ಲ’ ಅಂತ. ಆಗ ಅಲ್ಲಿದ್ದ ಮತ್ತೊಬ್ಬ, ‘ಯೇಸುಕ್ರಿಸ್ತ ದೇವರ
ಮಗನೂ ಹೌದು, ಖುದ್ದು ದೇವರೂ ಹೌದು’ ಎನ್ನುತ್ತಾನೆ. ಇವರ ಮಾತಿಗೆಲ್ಲ ತಲೆಯಾಡಿಸುವ ರಾಹುಲ್ ಗಾಂಧಿ ಆತನೊಂದಿಗೆ ಸಲುಗೆಯಿಂದ ನಡೆದುಕೊಳ್ಳುತ್ತಾರೆ. ಮತಾಂತರದ ಮಹಾಏಜೆಂಟುಗಳು ಮಾಡುವ ಟಿಪಿಕಲ್ ಭಾಷಣವೇ ಇದು; ಮುಗ್ಧರನ್ನು ಚರ್ಚಿನೊಳಗೆ ಕರೆಸಿಕೊಂಡೋ, ಮನೆಗಳಿಗೇ ನೇರವಾಗಿ ತೆರಳಿಯೋ ಪ್ರಯೋಗಿಸುವ ಮತಾಂತರ ಅಸ್ತ್ರವೇ ಇದು.
ಇಂಥವರು ಹಿಂದೂಧರ್ಮದಿಂದ ಮತಾಂತರಗೊಂಡು ಹಿಂದೂಧರ್ಮದ ಸರ್ವನಾಶದ ಧ್ಯೇಯ ಹೊಂದಿರುತ್ತಾರೆ.
ಇನ್ನೊಂದು ಕಡೆ ಹಿಂದೂಧರ್ಮದ ಕಾವಿಯನ್ನು ತೊಟ್ಟ ಹುಚ್ಚರು ಗಣೇಶನನ್ನು, ಆತನ ಹುಟ್ಟನ್ನು, ಪಾರ್ವತಿಯನ್ನು,
ಶಂಕರನನ್ನು, ಹಿಂದೂಗಳ ಆಚಾರ-ವಿಚಾರವನ್ನು ಅವಹೇಳನ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಅದರಲ್ಲೂ,
ಮುಸಲ್ಮಾನರು ನೆರೆದಿದ್ದ ವೇದಿಕೆಯಲ್ಲಿ ಹೊಲಸು ಬಾಯಿಂದ ಭಾಷಣ ಮಾಡುವ ಇಂಥರು ಹಿಂದೂಧರ್ಮಕ್ಕೆ ಶಾಪವಾ ಗಿದ್ದಾರೆ.
ಹಿಂದೂಗಳದ್ದು ಎಂಥ ದುರ್ಗತಿಯೋ ನೋಡಿ- ಒಂದೆಡೆ ಹಿಂದೂಗಳನ್ನು ಕೊಲ್ಲುವ ಜಿಹಾದಿ ಭಯೋತ್ಪಾದಕರು, ಮತ್ತೊಂದೆಡೆ ಹಿಂದೂಧರ್ಮವನ್ನೇ ಕೊಲ್ಲುತ್ತಿರುವ ಮತಾಂತರಿತ ಕ್ರಿಶ್ಚಿಯನ್ನರು, ಹಿಂದೂ ಕಾವಿಧಾರಿಗಳು ಮತ್ತು ಅವರಿಗಿಂತಲೂ
ಅಪಾಯಕಾರಿಯಾದ ಹಿಂದೂ ರಾಜಕಾರಣಿಗಳು. ಒಟ್ಟಿನಲ್ಲಿ ಹಿಂದೂಗಳಿಗೆ ಯಾವ ದಿಕ್ಕಿನಿಂದಲೂ ಉಳಿಗಾಲವಿಲ್ಲ.
ಇಷ್ಟಕ್ಕೂ ಈ ಜಾರ್ಜ್ ಪೊನ್ನಯ್ಯ ಎಂಬ ಪಾದ್ರಿ ನೇರ ಬೆತ್ಲೆಹೆಂನಿಂದ ಹಾರಿ ತಮಿಳುನಾಡಿನಲ್ಲಿ ಪ್ರತ್ಯಕ್ಷವಾದ ಕ್ರಿಶ್ಚಿಯನ್ ಏನಲ್ಲ.
ಸರಿಯಾಗಿ ಆತನ ಮೂರನೇ ತಲೆಮಾರನ್ನು ಕೆದಕಿದರೆ ಆತನ ಪೂರ್ವಜರು ತಮಿಳು ಬ್ರಾಹ್ಮಣರೋ, ದಲಿತರೋ, ಗೌಂಡರ್ಗಳೋ, ಮೊದಲಿಯಾರರೋ ಆಗಿರುತ್ತಾರೆ. ಅಂಥವನಿಗೇ ಇಷ್ಟೊಂದು ಧೀಮಾಕು ಇದೆಯೆಂದರೆ, ಅಲ್ಲಿ ಆ
ಸರಕಾರ ಆತನಿಗೆ ಕುಮ್ಮಕ್ಕು ನೀಡಿರಬೇಕು. ಇದನ್ನೇ ಸ್ವಾಮಿ ವಿವೇಕಾನಂದರು ಹೇಳಿರುವುದು ‘ಒಬ್ಬ ಹಿಂದೂ ಮತಾಂತರಗೊಂಡರೆ ಒಬ್ಬ ಹಿಂದೂ ಮಾತ್ರ ಕಡಿಮೆಯಾಗುವುದಿಲ್ಲ, ಒಬ್ಬ ಶತ್ರು ಹೆಚ್ಚಾಗುತ್ತಾನೆ’ ಎಂದು.
ಆದರೆ ‘ಶುಭ ನುಡಿಯೋ ಸೋಮ ಅಂದರೆ, ಗೂಬೆ ಕಾಣ್ತ ಮಾಮಾ’ ಎಂಬಂತೆ ಈಗಾಗಲೇ ಅವನತಿಯ ದಿಕ್ಕಿನಲ್ಲಿರುವ
ಕಾಂಗ್ರೆಸ್ ಪಕ್ಷವನ್ನು ಮೇಲೆತ್ತಲು ಪಾದಯಾತ್ರೆ ಹೊರಟ ರಾಹುಲ್, ಹೋಗಿಹೋಗಿ ಆರಂಭದ ಇಂಥ ಜಾರ್ಜ್ ಪೊನ್ನಯ್ಯ ನನ್ನು ಭೇಟಿ ಮಾಡಿ ಇನ್ನಷ್ಟು ಹಿಂದೂಮತಗಳನ್ನು ಕಳೆದುಕೊಳ್ಳುವ ಪ್ರಯತ್ನಕ್ಕಿಳಿದಿರುವುದು ನಿಜಕ್ಕೂ ಅಭಿನಂದ
ನಾರ್ಹ.
೨೦೧೮ರಲ್ಲಿ ಗುಜರಾತಿನ ದೇವಾಲಯವೊಂದರಲ್ಲಿ ನಿಂತು ‘ನಾನು ಕಾಶ್ಮೀರಿ ಪಂಡಿತ, ಜನಿವಾರಧಾರಿ, ಕೌಲ್ ಬ್ರಾಹ್ಮಣ, ನನ್ನದು ದತ್ತಾತ್ರೇಯ ಗೋತ್ರ’ ಎಂದು ಹೇಳಿಕೊಂಡ ರಾಹುಲ್ ಗಾಂಧಿಯ ಮುಂದೆ ಪಾದ್ರಿಯೊಬ್ಬ ‘ಯೇಸು ಒಬ್ಬನೇ ನಿಜವಾದ ದೇವರು, ಬೇರೆ ಶಕ್ತಿದೇವತೆಗಳಂತಲ್ಲ’ ಎಂದು ಹೇಳುತ್ತಿದ್ದರೆ ರಾಹುಲ್ ರಕ್ತ ಕುದಿಯಲಿಲ್ಲವೇಕೆ? ಆತ ಹಾಗೆ
ಹೇಳುತ್ತಿರುವಂತೆ ‘ಮುಚ್ಚಯ್ಯ ಬಾಯಿ ಸಾಕು.
ನಾನೊಬ್ಬ ಹಿಂದೂ, ನನ್ನ ಮುಂದೆಯೇ ನನ್ನ ಧರ್ಮವನ್ನು ದೇವರನ್ನು ಹೀಯಾಳಿಸುತ್ತಿದ್ದೀಯ. ಇನ್ನುಮುಗ್ಧ ಹಿಂದೂಗಳ ಮನಸ್ಸಿನಲ್ಲಿ ಇನ್ನೆಷ್ಟು ವಿಷಬೀಜ ಬಿತ್ತುತ್ತೀಯ, ಎಷ್ಟು ಸೊಕ್ಕು ನಿನಗೆ’ ಎಂದು ರಾಹುಲ್ ಮೇಲೆದ್ದಿದ್ದರೆ ಇಡೀ ದೇಶ ಅವರಿಗೆ ಚಪ್ಪಾಳೆ ಹೊಡೆಯುತಿತ್ತು. ಇಲ್ಲಿ ಸೂಕ್ಷ್ಮ ವಿಚಾರವೆಂದರೆ ಈ ಪಾದ್ರಿ ಒಬ್ಬ ಹಿಂದೂ ಗಣ್ಯನ ಮುಂದೆ ಆಡುವ ಮಾತೇ ಇದಲ್ಲ.
ಆತ ರಾಹುಲ್ ಮುಂದೆ ‘ಯೇಸು ಒಬ್ಬನೇ ದೇವರು, ಆತ ಅನ್ಯದೇವರುಗಳಂತೆ ಶಕ್ತಿದೇವತೆಗಳಂತಲ್ಲ’ ಎನ್ನುವ ಧೈರ್ಯ ತೋರುತ್ತಾನೆಂದರೆ ಆತನ ದೃಷ್ಟಿಯಲ್ಲಿ ರಾಹುಲ್ ಗಾಂಧಿ ಅಪ್ಪಟ ಇಟಾಲಿಯನ್ ಕ್ರಿಶ್ಚಿಯನ್ ‘ಎಂಗಪಯ್ಯ’. ಹಾಗೆ ಭಾವಿಸಿಯೇ ಸಹಜವಾಗಿ ತಮ್ಮತಮ್ಮ ದೇವರುಗಳ ಬಗ್ಗೆ ಸ್ಪಷ್ಟೀಕರಣದ ವಿಚಾರ ನಡೆದಿರಬಹುದಷ್ಟೆ. ಒಬ್ಬ ರಾಜಕಾರಣಿ ಎಲ್ಲ ಧರ್ಮೀಯರ ವಿಚಾರಗಳನ್ನು ಜ್ಞಾನಿಯಂತೆ ಆಲಿಸಿ ಎದ್ದುಹೋಗಬಹುದು.
ಆದರೆ ಹಿಂದೂಧರ್ಮದ ವಿರುದ್ಧದ ಮನಸ್ಥಿತಿಯವನಾಗಿ ಜೈಲಿಗೆ ಹೋಗಿಬಂದವನೊಬ್ಬ ತನ್ನ ಮುಂದೆ ‘ಯೇಸು ಬಿಟ್ಟು ಬೇರೆ ದೇವರಿಲ್ಲ’ ಎಂದಾಗ ಸುಮ್ಮನೆ ಎದ್ದು ಬರುವುದಿದೆಯಲ್ಲ, ಅದು ನಿಜಕ್ಕೂ ನಾಚಿಕೆಗೇಡು. ಇನ್ನು ಇಂಥ ಪಾದ ಯಾತ್ರೆಯಲ್ಲಿ ಪಾದ್ರಿಯನ್ನು ಭೇಟಿಮಾಡುವ ಮನೆಹಾಳ ಐಡಿಯಾವನ್ನು ಅದ್ಯಾವ ಮಹಾಪುರುಷ ನೀಡಿದನೋ ಆ ಯೇಸುವೇ ಬಲ್ಲ!
ಇನ್ನು, ಕೇರಳಕ್ಕೆ ಬಂದಾಗ ಆರ್ಎಸ್ಎಸ್ ಚಡ್ಡಿಯನ್ನು ಸುಡುವ ಚಿತ್ರವನ್ನು ಪಸರಿಸಿದ್ದು ನೋಡಿದಾಗ, ಇದು ‘ಭಾರತ್ ಜೋಡೋ’ ನಡಿಗೆಯಲ್ಲ, ಕಾಂಗ್ರೆಸ್ ಪಕ್ಷವನ್ನು ಛಿದ್ರಗೊಳಿಸಿ ಸರ್ವನಾಶ ಮಾಡಲೆಂದೇ ರೂಪುಗೊಂಡ ಕ್ಲೈಮ್ಯಾಕ್ಸ್ ಎಂದು ಭಾಸವಾಗುತ್ತದೆ.
ಇರಲಿ, ದೇಶದ ಪ್ರಜೆಗಳು ಇನ್ನೂ ಏನೇನು ನೋಡಬೇಕೆಂದಿದೆಯೋ ಅವೆಲ್ಲವನ್ನೂ ನೋಡಲೇಬೇಕು. ಮುಂದೆ ನಡಿಗೆ ಕರ್ನಾಟಕ ಪ್ರವೇಶಿಸುತ್ತಿದ್ದಂತೆ ರಾಹುಲ್ ಗಾಂಧಿ ಮಾಡಬೇಕಿರುವ ಮೊದಲ ಕೆಲಸವೆಂದರೆ ನೇರವಾಗಿ ಮುರುಘಾ ಮಠದ
ಸ್ವಾಮೀಜಿಯನ್ನು ಭೇಟಿಯಾಗಬೇಕು. ಇತ್ತೀಚೆಗಷ್ಟೇ ಸ್ವಾಮೀಜಿಯಿಂದ ಲಿಂಗಧಾರಣೆ ಮಾಡಿಸಿಕೊಂಡು ‘ಭಾರತ್ ಜೋಡೋ’ ಯಾತ್ರೆಗೆ ದಿವ್ಯಾಶೀರ್ವಾದ ಪಡೆದಿದ್ದ ರಾಹುಲ್, ಮತ್ತೊಮ್ಮೆ ಅವರನ್ನು ಭೇಟಿಮಾಡಿ ಸಾಂತ್ವನ ಹೇಳಿ
ಆಶೀರ್ವಾದ ಪಡೆಯುವುದೊಳಿತು. ಆ ಕೆಲಸವನ್ನು ಅವರು ಮಾಡದಿದ್ದರೆ ಕಾಂಗ್ರೆಸ್ನ ನಾಯಕರು ರಾಹುಲರನ್ನು ಎಳೆದೊಯ್ದಾದರೂ ಸ್ವಾಮೀಜಿಯ ಭೇಟಿ ಮಾಡಿಸಬೇಕು.
ಏಕೆಂದರೆ, ತಮಿಳುನಾಡಿನ ಪಾದ್ರಿಯನ್ನು ಭೇಟಿಮಾಡಿ ಕರ್ನಾಟಕದ ಖ್ಯಾತ ಸ್ವಾಮೀಜಿಯನ್ನು ಭೇಟಿ ಮಾಡದಿದ್ದರೆ ಅದು ಜಾತ್ಯತೀತತೆ ಎನಿಸಿಕೊಳ್ಳುವುದಿಲ್ಲ. ಅದರಿಂದ ಕಾಂಗ್ರೆಸ್ಸಿಗೇ ನಷ್ಟ. ಏಕೆಂದರೆ ಮುರುಘಾ ಮಠದ ಸ್ವಾಮೀಜಿ ಕೂಡ ಹಿಂದೂ ಧರ್ಮದ ಗ್ರಹಣ, ಅಮಾವಾಸ್ಯೆ ನಂಬಿಕೆಗಳನ್ನು ಧಿಕ್ಕರಿಸಿದ ಪ್ರಗತಿಪರರು. ಮುರುಘಾವನದಲ್ಲಿ ಹಿಂದೂವಿರೋಧಿ ಪೆರಿಯಾರ್, ಟಿಪ್ಪು ಸುಲ್ತಾನ, ಯೇಸುವಿನ ಮೂರ್ತಿಗಳಿಗೆ ಅವಕಾಶ ಕಲ್ಪಿಸಿಕೊಟ್ಟವರು.
ಇಂಥ ಸರ್ವಧರ್ಮ ಪರಿಪಾಲಕ ಸ್ವಾಮೀಜಿಯನ್ನು ರಾಹುಲ್ ಭೇಟಿಯಾಗಿ ಹೋದರೆ ಯಾತ್ರೆಗೆ ಮತ್ತಷ್ಟು ಕಳೆಕಟ್ಟುತ್ತದೆ.
ಪಾಪ, ರಾಹುಲರ ಮುಗ್ಧತನ ನೋಡುತ್ತಿದ್ದರೆ ಮರುಕ ಹುಟ್ಟುತ್ತದೆ. 28 ವರ್ಷಗಳ ಹಿಂದೆ ಗುಲ್ಜಾರ್ ಖಾನ್ ಎಂಬುವವರಿದ್ದರು. ಅವರು ‘ತನಿಖೆ’ ಎಂಬ ಸಿನಿಮಾ ಮಾಡಿ ಕನ್ನಡದಲ್ಲಿ ಶುದ್ಧವಾದ ಸಂಭಾಷಣೆ-ಸಾಹಿತ್ಯ ಬರೆಸಿ 25 ವಾರಗಳ ಕಾಲ ‘ಓಡಿಸಿ ದರು’. ಆದರೆ ರಾಹುಲರಿಗೆ ಒಬ್ಬ ಸಾಹಿತ್ಯಿಕ ತಜ್ಞ ಸಿಗದಿರುವುದು ದುರದೃಷ್ಟಕರ.
ಅಸಲಿಗೆ ‘ಭಾರತ್ ಜೋಡೋ’ ಎಂಬ ಪದವೇ ಇಂದು ಅಪ್ರಸ್ತುತ. ಈಗ ಭಾರತವನ್ನು ಜೋಡಿಸಬೇಕಾದ ಪರಿಸ್ಥಿತಿಯೇನಿಲ್ಲ.
ಆದರೂ ದೇಶವನ್ನು ಜೋಡಿಸಬೇಕೆಂದರೆ ಸಂವಿಧಾನಕ್ಕಿಂತ ಧರ್ಮವೇ ಮಿಗಿಲೆನ್ನುವವರು, ಸಾಂವಿಧಾನಿಕ ನ್ಯಾಯಾಲಯ ವನ್ನು ಧಿಕ್ಕರಿಸುವವರು, ದೇಶದ್ರೋಹಿಗಳು, ಮತಾಂಧರು, ಜಿಹಾದಿ ಮತ್ತು ಭಯೋತ್ಪಾದಕ ಮನಸ್ಸಿನವರು, ಬಾಲಿವುಡ್ ನಟರು ಮತ್ತು ಬುದ್ಧಿಜೀವಿಗಳೆಂಬ ಅಸಹಿಷ್ಣು ಪೀಡೆಗಳು, ಪಾಕಿಸ್ತಾನ್ ಪ್ರೇಮಿಗಳು, ಭಾರತವನ್ನು ತುಂಡರಿಸುತ್ತೇವೆ ಎನ್ನುವ ‘ಟುಕಡೇ ಗ್ಯಾಂಗ್’ನ ಒಡನಾಡಿಗಳು ಇಂಥವರನ್ನು ದೇಶದ ಅನ್ನ-ನೀರು-ಗಾಳಿಯ ಋಣಕ್ಕೆ ಜೋಡಿಸುವ ಐತಿಹಾಸಿಕ ಪಾದಯಾತ್ರೆ ಮಾಡಿದ್ದರೆ ಕಾಂಗ್ರೆಸ್ಗೆ ಮತು ದೇಶಕ್ಕೆ ಅನುಕೂಲವಾಗುತಿತ್ತು.
ದೇಶವನ್ನು ಭೌಗೋಳಿಕವಾಗಿ ಧಾರ್ಮಿಕವಾಗಿ ಒಡೆದದ್ದು, ಕಾಶ್ಮೀರವನ್ನು ಭಯೋತ್ಪಾದಕರಿಗೆ ಧಾರೆಯೆರೆದು ಲಕ್ಷಾಂತರ ಪಂಡಿತರ ಮಾರಣಹೋಮ ಮಾಡಿದ್ದೇ ಆಯಿತು. ಈಗ ದೇಶವು ತನ್ನದೇ ಆದ ಘನತೆ ಗೌರವದೊಂದಿಗೆ ಬಲಿಷ್ಠ ಭಾರತ ವಾಗಿ, ವಿಶ್ವಗುರುವಾಗಿ ಜಗತ್ತಿನ ದೃಷ್ಟಿಯಲ್ಲಿ ಆನೆಯಂತೆ ಸಾಗುತ್ತಿದೆ. ಹೀಗಿರುವಾಗ ಪ್ರಸ್ತುತ ದೇಶವನ್ನು ಜೋಡಿಸುವು ದೆಂದರೆ ದೇಶದ ಪ್ರಜೆಗಳ ಮನಸ್ಸನ್ನು ಜೋಡಿಸುವುದು.
ಅದನ್ನು ಪ್ರಧಾನಿ ಮೋದಿಯವರು ಕರೋನಾದಂಥ ಸಾವು-ಬದುಕಿನ ಹೋರಾಟದ ವೇಳೆ ಕುಂತ ದೇಶದ ಪ್ರಜೆಗಳ ಕೈಲಿ ಚಪ್ಪಾಳೆ ತಟ್ಟಿಸಿ, ತಟ್ಟೆ, ಘಂಟೆ, ಜಾಗಟೆ, ಶಂಖವನ್ನೆಲ್ಲ ಬಾರಿಸುವಂತೆ ಮಾಡಿ, ಇಡೀ ದೇಶಕ್ಕೆ ಆತ್ಮವಿಶ್ವಾಸ ತುಂಬಿದ್ದರು. ಬಡವ ಶ್ರೀಮಂತ ಭೇದವಿಲ್ಲದೆ ಪ್ರತಿಯೊಬ್ಬರೂ ದೀಪ ಬೆಳಗಿಸುವಂತೆ ಮಾಡಿ ಏಕತೆಯನ್ನು ಸ್ಥಾಪಿಸಿದ ಸಂದರ್ಭವದು. ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ರತಿಯೊಬ್ಬ ನಾಗರಿಕರೂ ಹೆಮ್ಮೆಯಿಂದ ರಾಷ್ಟ್ರಧ್ವಜ ಹಾರಿಸುವಂತೆ ಮಾಡಿ ದೇಶಾಭಿ ಮಾನವನ್ನು ಜಾಗೃತಗೊಳಿಸಲಾಯಿತು.
ಮುಂದಿನ ಜನವರಿ 26ರ ಗಣರಾಜ್ಯೋತ್ಸವದಂದು ಇಡೀ ದೇಶ ‘ಬೋಲೋ ಭಾರತಮಾತಾ ಕೀ ಜೈ, ವಂದೇಮಾತರಂ’ ಎಂಬ ಘೋಷಣೆ ಹೊಮ್ಮಿಸಲು ಪ್ರೇರೇಪಿಸುವುದು ಆಗಬೇಕಿರುವ ಮತ್ತೊಂದು ಕೆಲಸ. ಆಗ ದೇಶದ್ರೋಹಿಗಳು ಬೆತ್ತಲಾಗು ತ್ತಾರೆ, ದೇಶ ಸದೃಢಗೊಳ್ಳುತ್ತದೆ. ಅದನ್ನು ಬಿಟ್ಟು, ಸ್ವಾರ್ಥಕ್ಕಾಗಿ ಗುಲಾಮಗಿರಿಗಾಗಿ ಕೆಲಸಕ್ಕೆ ಬಾರದ ನಡಿಗೆ ಕೈಗೊಂಡರೆ ಹೊಟ್ಟೆಯೊಳಗಿನ ಗ್ಯಾಸು ಹೊರಬಂದು ದೇಹಭಾರ ಕಡಿಮೆಯಾಗಬಹುದಷ್ಟೇ!