ಕರಾಳ ನೆನಪು
ಪವನ್ ವಸಿಷ್ಠ
ಆ ರಾತ್ರಿ ಸ್ನೇಹಿತರಿಬ್ಬರೂ ಆರ್ಮಿ ಹೆಡ್ ಕ್ವಾರ್ಟರ್ಸ್ ಹೋಗಬೇಕಿತ್ತು. ಆದರೆ, ತಡವಾದ ಕಾರಣ ಸಮೀಪದ ಲಾಡ್ಜ್ ನ ಉಳಿದು ಬಿಟ್ಟರು. ಬಹುಶಃ ಆ ರಾತ್ರಿ ಅವರಿಬ್ಬರೂ ಆರ್ಮಿ ಹೆಡ್ ಕ್ವಾರ್ಟರ್ಸ್ ಹೋಗಿದ್ದರೆ ಸೇನೆಯ ಅತ್ಯುನ್ನತ ಸ್ಥಾನ ಅಲಂಕರಿಸಿ ಇಷ್ಟೊತ್ತಿಗೆ ನಿವೃತ್ತಿಗೊಳ್ಳುತ್ತಿದ್ದರು. ಆದರೆ ವಿಧಿ ಬೇರೆಯೇ ಬಯಸಿತ್ತು. ಆ ರಾತ್ರಿ ಕರಾಳತೆಯ ಲವಲೇಶ ದಷ್ಟೂ ಕಲ್ಪನೆಗೂ ಬರದಂತಹ ಘೋರ ಘಟನೆಗೆ ನಮ್ಮ ದೇಶ ೩೯ ವರ್ಷದ ಹಿಂದೆ ಸಾಕ್ಷಿ ಆಗಿತ್ತು. ಅದುವೇ ಭೋಪಾಲ್ ಅನಿಲ ದುರಂತ.
ಚಿಟ್ಟಿಯಪ್ಪ ಕೂಡ ಮೂಲತಃ ಕೊಡಗಿನವರು. ಮನೆಯವರ ವಿರೋಧದ ನಡುವೆಯೂ ಚಿಟ್ಟಿಯಪ್ಪ ತಮ್ಮ ಆಸೆಯಂತೆ ಆರ್ಮಿ ಪ್ರವೇಶ ಪಡೆದುಕೊಂಡು ಭೋಪಾಲ್ ನಲ್ಲಿ ತರಬೇತಿಗೆ ಸೇರಿಕೊಂಡಿದ್ದರು. ತರಬೇತಿ ಆರಂಭವಾಗಿ ಒಂದು ವಾರ ಕಳೆದಿತ್ತಷ್ಟೆ. ೧೯೮೪ ಡಿಸೆಂಬರ್ ೨ ರಂದು. ರಜೆ ಇದ್ದ ಕಾರಣ ಸ್ನೇಹಿತರೊಡನೆ ಸುತ್ತಾಡಲು ಆರ್ಮಿ ಕ್ವಾರ್ಟರ್ಸ್‌ನಿಂದ ಚಿಟ್ಟಿಯಪ್ಪ ಹೊರ ಬಂದರು. ರಾತ್ರಿ ಭೋಪಾಲ್ ಸಿಟಿ ಲಾಡ್ಜ್ ನಲ್ಲಿ ಉಳಿದುಕೊಂಡರು. ಪಕ್ಕದ ಲಾಡ್ಜ್ ನಲ್ಲಿ ಯೂನಿಯನ್ ಕಾರ್ಬೈಡ್‌ನಲ್ಲಿ ಕೆಲಸ ಕಳೆದುಕೊಂಡಿದ್ದ ಸುಮೇಶ್ ತಿವಾರಿ ಪರಿಚಯವಾದರು.
ರಾತ್ರಿ ಒಟ್ಟಿಗೆ ಕಾಲ ಕಳೆದು ಎಲ್ಲರೂ ನಂತರ ನಿದ್ರೆಗೆ ಜಾರಿದರು. ಸುಮಾರು ೧೨ ಗಂಟೆ ಹೊತ್ತಿಗೆ ಮಲಗಿದ್ದ ಚಿಟ್ಟಿಯಪ್ಪ ಅವರಿಗೆ ಕಣ್ಣು ಉರಿಯಲು ಆರಂಭಿಸಿತು. ಜಾಗ ಬದಲಾದ ಕಾರಣ ನಿದ್ದೆ ಬರುತ್ತಿಲ್ಲವೇನೋ ಎಂದು ಮತ್ತೆ ಹಾಸಿಗೆ ಕಡೆ ಹೊರಳಿದರು. ಪಕ್ಕದ ಲಾಡ್ಜ್ ನಲ್ಲಿದ್ದ ಸುಮೇಶ್ ತಿವಾರಿ ಓಡೋಡಿಬಂದು ಗ್ಯಾಸ್ ಲೀಕ್ ಹೋರ ಹಾ ಹೈ, ಲೋಗ್ ಮರ್ ಸಕ್ತೇ ಹೈ ಎಂದು ಚೀರಾಡಿ ಹೊರಟು ಹೋದ. ಅದರ ಅರಿವೇ ಇಲ್ಲದ ಚಿಟ್ಟಿಯಪ್ಪ ಅವರಿಗೆ ‘ಗ್ಯಾಸ್ ಲೀಕ್ ಅಂತೆ ಅದೇನೋ ಕುಡಿದ ಅಮಲಿನಲ್ಲಿ ಏನೋ ಮಾತಾಡುತ್ತಿರಬಹುದು’ ಎಂದು ಭಾವಿಸಿ ಫ್ಯಾನ್ ಹಾಕಿಕೊಂಡು ಮಲಗಿದರು.
೧೦ ನಿಮಿಷದೊಳಗೆ ಚಿಟ್ಟಿಯಪ್ಪ ಅವರ ಕಣ್ಣು ಉರಿ ಮತ್ತಷ್ಟು ಉಲ್ಬಣಗೊಂಡಿತು. ಎದ್ದು ಹೊರ ನೋಡಿದರೆ ಲಾಡ್ಜ್ ನಲ್ಲಿ ಒಬ್ಬರೂ ಇಲ್ಲ! ಲಾಡ್ಜ್ ಮಾಲೀಕ ಗೇಟ್ ಬೀಗ ಜಡಿದು ಹೊರ ಹೋಗಿಬಿಟ್ಟಿzನೆ. ಚಿಟ್ಟಿಯಪ್ಪ ಗೇಟ್ ಹಾರಿಕೊಂಡು ಸ್ವಲ್ಪ ದೂರ ನಡೆದರು. ಲಾq ಹಾಗೂ ರೈಲ್ವೇ ನಿಲ್ದಾಣ ಸಮೀಪದ ಇತ್ತು. ರೈಲ್ವೇ ನಿಲ್ದಾಣದ ೬೦-೭೦ ಮೀಟರ್ ಅಂತರದಲ್ಲಿದ್ದ ಮೇಲ್ಸೇತುವ ತನಕ ನಡೆದು ಹೋಗುವಷ್ಟರಲ್ಲಿ ಕಣ್ಣು ಬಿಡಲಾಗದ ಪರಿಸ್ಥಿತಿ ಎದುರಾಯಿತು. ದೇಹದಲ್ಲಿ ನಿತ್ರಾಣ ಕಳೆದುಕೊಂಡು ಅಲ್ಲಿಯೇ ಕುಸಿದು ಬಿದ್ದರು. ವಿಷಗಾಳಿ ಸೇವಿಸಿದ ಪರಿಣಾಮ ವಾಂತಿ, ತಲೆ ಸುತ್ತು ಲಕ್ಷಣ ಗಳು ಚಿಟ್ಟಿಯಪ್ಪ ಅವರಿಗೆ ಗೋಚರಿಸಿತು. ಪಕ್ಕದ
ಕೂತಿದ್ದ ಮತ್ತೋರ್ವ ವ್ಯಕ್ತಿ ಸಬ್ ಲೋಗ್ ಮರ್ ಜಾಯೆಂಗೇ ಎಂದು ಉಸಿರುತಿದ್ದ. ನಂತರ ಆ ರಾತ್ರಿ ಏನಾಯಿತೆಂದು ಅವರಿಗೆ ಅರಿವೇ ಇರಲಿಲ್ಲ. ಅವರ ಸ್ನೇಹಿತ ಯಾವ ದಿಕ್ಕಿನಲ್ಲಿ ಸಾಗಿದ ಎಂಬುದು ಸಹ ಅವರಿಗೆ ತಿಳಿಯಲಿಲ್ಲ.
ಬೆಳಿಗ್ಗೆ ಕಣ್ಣು ಬಿಡಲು ಪ್ರಯತ್ನ ಪಟ್ಟರೆ ಕಣ್ಣು ತೆರೆಯಲು ಸಹ ಆಗುತ್ತಿಲ್ಲ. ಜನರ ಚೀರಾಟ, ಸುತ್ತ ಮುತ್ತಲಿನ ಜನ ಅಲ್ಲಿಯೇ ಮಲ, ಮೂತ್ರ, ವಾಂತಿ ಮಾಡಿದ್ದ ದುರ್ನಾಥ ಇವೆಲ್ಲವೂ ಅವರನ್ನ ವಿಚಲಿತರನ್ನಾಗಿ ಮಾಡಿತ್ತು. ಅನಿಲ ದುರಂತದಿಂದ ಬದುಕುಳಿದಿದ್ದವರನ್ನ ಸ್ಥಳೀಯರು ಸರಕಾರಿ ಆಸ್ಪತ್ರೆಗಳಿಗೆ ಸಾಗಿಸಿ ಚಿಕಿತ್ಸೆ ನೀಡಲಾಗುತಿತ್ತು. ಚಿಟ್ಟಿಯಪ್ಪ ಅವರನ್ನು ಸಹ ಅದೇ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಣ್ಣು ಬಿಡಲಾಗದ ಪರಿಸ್ಥಿತಿ ಇದ್ದಿದ್ದರಿಂದ ಆಸ್ಪತ್ರೆಯಲ್ಲಿ ಕಣ್ಣಿಗೆ ಔಷಧಿ ಹಾಕಿ ಕೂರಿಸಲಾಗಿತ್ತು. ನಂತರ ಆರ್ಮಿಯ ವರು ಬಂದು ಅವರ ಶರ್ಟ್ ಮೇಲಿದ್ದ ಬ್ಯಾಡ್ಜ್ ಗಮನಿಸಿ ಆರ್ಮಿ ಆಸ್ಪತ್ರೆಗೆ ಸಾಗಿಸಿದ್ದರು.
ಆರ್ಮಿ ಆಸ್ಪತ್ರೆ ಹೋದ ನಂತರ ಅಲ್ಲಿನ ಡಾಕ್ಟರ್‌ಗಳು ನೀಡಿದ ಚಿಕಿತ್ಸೆಯಿಂದಾಗಿ ಚಿಟ್ಟಿಯಪ್ಪ ಮರು ಜನ್ಮ ಪಡೆದರು. ಸತತ ಮೂರು ದಿನಗಳವರೆಗೂ ಅವರಿಗೆ ಕಣ್ಣು ಬಿಡಲಾಗದ ಪರಿಸ್ಥಿತಿ ಎದುರಿಸಿ ದ್ದರು. ಅವರ ಪ್ರಪಂಚ ನೋಡಿದ್ದೇ ನಾಲ್ಕನೇ ದಿನ. ರಸ್ತೆ ಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ಹೆಣದ ರಾಶಿ ಬಿದ್ದಿದ್ದವು. ಸರಕಾರ ನೀಡಿದ ಲೆಕ್ಕಕ್ಕೂ ಅಲ್ಲಿ ಇದ್ದ ಹೆಣಗಳ ರಾಶಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಸರಕಾರ ಹೇಳಿದ್ದು ೩೫೦೦ ಸಾವಿರ ಜನ ಎಂದು! ಚಿಕಿತ್ಸೆ ಸಿಕ್ಕ ನಂತರ ಮತ್ತೆ ಆರ್ಮಿಗೆ ತೆರಳಿದ ಚಿಟ್ಟಿಯಪ್ಪ ಅವರಿಗೊಂದು ಆಘಾತ ಕಾದಿತ್ತು. ಅದು ಭೋಪಾಲ್ ಅನಿಲ ದುರಂತದಿಂದ ಬದುಕುಳಿದವರಿಗೆ ಆರ್ಮಿಯಲ್ಲಿ ಸೇರಿಸಿಕೊಳ್ಳಲು ಆಗುವುದಿಲ್ಲ. ಎಲ್ಲರೂ ತಮ್ಮ ಮನೆಗಳಿಗೆ ಹಿಂತಿರುಗಿ ಎಂದು ಅಽಕಾರಿಗಳು ಹೇಳಿಬಿಟ್ಟರು!
ಚಿಟ್ಟಿಯಪ್ಪ ಅವರಂತೆ ಅವರಿಗೇ ತಿಳಿದಿದ್ದ ೪ ಜನ ಆರ್ಮಿ ಯಿಂದ ಹೊರ ನಡೆಯಬೇಕಾಯಿತು. ಆರ್ಮಿ ಅವರು ಹೇಳಿದ ಮೇಲೆ ಮುಗಿಯಿತು. ಯಾರು ಸಹ ಮರು ಪ್ರಶ್ನೆ ಮಾಡುವಂತಿರಲಿಲ್ಲ. ಬಹುಶಃ ಅಂದಿನ ರಾತ್ರಿ ಅವರು ಸಿಟಿ ಮಧ್ಯೆ ಇದ್ದ ಲಾಡ್ಜ್ ನಲ್ಲಿ ಉಳಿದುಕೊಳ್ಳದಿದ್ದಿದ್ದರೆ ಇಂದು ಸೇನೆಯ ಉನ್ನತ ಅಧಿಕಾರಿ ಆಗಿ
ನಿವೃತ್ತಿಗೊಳ್ಳುತ್ತಿದ್ದರೇನೋ. ಹಳೇ ಭೋಪಾಲದಲ್ಲಿ ಅನಿಲ ದುರಂತದಿಂದಾಗಿ ಸಾವು ನೋವುಗಳು ಹೆಚ್ಚಾಗಿ ಸಂಭವಿಸಿತ್ತು. ಆರ್ಮಿ ಕ್ವಾರ್ಟರ್ಸ್ ಇದ್ದದ್ದು ನ್ಯೂ ಭೋಪಾಲ್ ಪ್ರದೇಶದಲ್ಲಿ. ಅನಾಹುತದ ಪ್ರಮಾಣ ಅಲ್ಲಿ ಕಡಿಮೆ ಇತ್ತು.
ಆರ್ಮಿ ಅಧಿಕಾರಿಗಳು ವಾಪಸ್ ಮನೆಗೆ ಹೋಗುವಂತೆ ಹೇಳಿದ ಮಾತು ಕೇಳಿ ಚಿಟ್ಟಿಯಪ್ಪ ಅವರಿಗೆ ಆತ್ಮಹತ್ಯೆ ಶರಣಾಗುವಂತ ಯೋಚನೆ ಹೊಕ್ಕಿದ್ದೂ ಉಂಟು!
ಪಿಯುಸಿ ಓದುವ ಸಮಯದ ಚಿಟ್ಟಿಯಪ್ಪ ಆರ್ಮಿ ಸೇರುವ ಇರಾದೆ ಹೊಂದಿದ್ದರು. ಚಿಟ್ಟಿಯಪ್ಪ ಆರ್ಮಿಗೆ ಸೇರುವುದು ತಾಯಿಗೆ ಇಷ್ಟ ಇರಲಿಲ್ಲ. ಒಲ್ಲದ ಮನಸ್ಸಿನಿಂದ ಡಿಗ್ರಿ ಅರ್ಜಿ ಹಾಕಿದ ಚಿಟ್ಟಿಯಪ್ಪ ಮೊದಲಿಗೆ ದಂತ ವೈದ್ಯಕ್ಕೆ ಪ್ರವೇಶ ದೊರಕಿತು. ಯಾರದ್ದೋ ಮಾತು ಅವರ ಯೋಚನೆ ಯನ್ನು ಬದಲಯಿಸಿತು. ನಂತರ ಫಿಶರಿಗೆ ಪ್ರವೇಶ ಪಡೆದರು, ಅಲ್ಲಿಯೂ ಸರಿ ಹೋಗದೆ, ಪಶು ವೈದ್ಯಕೀಯಕ್ಕೆ ಪ್ರವೇಶ ಪಡೆದರು. ಆ ಕೋರ್ಸ್ ಮುಗಿಸಿದ್ದ ಅವರು ಡಿಗ್ರಿ ಆಧಾರದಲ್ಲಿ ಮನೆ ಅವರಿಗೆ ಇಷ್ಟ ಇಲ್ಲದಿದ್ದರೂ ಆರ್ಮಿ ಪರೀಕ್ಷೆ ಬರೆದು ಪ್ರವೇಶ ಗಿಟ್ಟಿಸಿಕೊಂಡಿದ್ದರು.
ಭೋಪಾಲ್ ಅನಿಲ ದುರಂತದ ನಂತರ ಪಶು ವೈದ್ಯಕೀಯ ಓದಿಕೊಂಡಿದ್ದ ಅವರು ಬೆಂಗಳೂರಿಗೆ ಆಗಮಿಸಿ ಪಶು ವೈದ್ಯ ಇಲಾಖೆಗೆ ಸೇರಿಕೊಳ್ಳುವ ಮೂಲಕ
ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಸುಮಾರು ೩೦ ವರ್ಷಗಳ ಕಾಲ ಸುದೀರ್ಘ ಪಶು ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ಚಿಟ್ಟಿಯಪ್ಪ ರಾಜ್ಯದಲ್ಲಿ ಆನೆ ಡಾಕ್ಟರ್ ಎಂದು ಖ್ಯಾತಿ ಪಡೆದರು. ನಿವೃತ್ತಿ ನಂತರ ಕೂಡ ಸರಕಾರ ಅವರನ್ನ ದುಬಾರೆ ಆನೆ ಶಿಬಿರದಲ್ಲಿರುವ ಆನೆಗಳ ನಿಗಾ ವಹಿಸುವಂತೆ ಅವರ ಹೆಗಲಿಗೆ ಜವಬ್ದಾರಿ ಹೊರಿಸಿದೆ. ೭೦ ವರ್ಷದ ಆನೆ ಡಾಕ್ಟರ್ ಡಾ. ಚಿಟ್ಟಿಯಪ್ಪ ಈಗಲೂ ಸಹ ಆನೆಗಳಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆ ಮುಂದುವರಿಸಿದ್ದಾರೆ.
ಇಂದಿಗೆ ಭೋಪಾಲ್ ಅನಿಲ ದುರಂತ ನಡೆದು ೩೯ ವರ್ಷ ಕಳೆದಿದೆ. ಅಂದು ಚಿಟ್ಟಿಯಪ್ಪ ಅವರಂತಹ ಸಾಕಷ್ಟು ಜನರ ಪ್ರಾಣ ಉಳಿಸಿದ ಸ್ಥಳೀಯರು, ಸರಕಾರಿ ಅಧಿಕಾರಿಗಳು, ವಿಶೇಷವಾಗಿ ರೇಲ್ವೇ ಇಲಾಖೆಯ ಹೀರೋಗಳನ್ನ ನಾವೆಲ್ಲರೂ ಸ್ಮರಿಸಿಕೋಳ್ಳಲೇಬೇಕು.