Sunday, 15th December 2024

ಬಿನ್-ಲಾಡೆನ್‌ ಅದೇ ಕಾಂಪೌಂಡಿನಲ್ಲೀ ಇದ್ದಾನೆಯೇ ಇಲ್ಲವೇ ?

ಡಾ.ಶ್ರೀಕಾಂತ್ ಭಟ್ (ಜರ್ಮನಿ)

ಲಾಡೆನ್‌ ಹತ್ಯೆ ಕಾರ್ಯಾಚರಣೆ (ಭಾಗ – 3)

ಮರುದಿನ (ಏಪ್ರಿಲ್ 28) ಮತ್ತೆ ‘ಸಿಚುಯೇಶನ್ ರೂಮ್’ ನಲ್ಲಿ ನಿಗದಿತ ವೈಟ್ ಹೌಸ್ ಅಧಿಕಾರಿಗಳು ಮತ್ತು ಮಿಲಿಟರಿ ಅಧಿಕಾರಿ ಗಳು ಮತ್ತೆ ಸಭೆ ಸೇರಿದ್ದವು.

ಅಬ್ಬೋಟ್ಡಾಬಾದ್ ಕಾರ್ಯಾಚರಣೆಯ ಬಗೆಗೆ ಕೊನೆಯ ಪುನರಾವಲೋಕನ ಮಾಡಲಾಯಿತು. ಒಂದು ವಾರ ಮುಂಚೆಯಷ್ಮೇ ಮೆಕ್-ರಾವೆನ್ ಅವರಿಗೆ ಸೀಲ್ ತಂಡವನ್ನು ಮತ್ತು ವಿಶೇಷ ಆಕ್ರಮಣಕಾರಿ ಹೆಲಿಕಾಪ್ಪರ್‌ಗಳನ್ನು ಅಫ್ಘಾನಿಸ್ತಾನದ ನಮ್ಮ
ಸೇನಾ ನೆಲೆಗೆ ಸ್ಥಳಾಂತರಿಸಲು ಅನುಮತಿ ನೀಡಿದ್ದೆ.

ಸೀಲ್ ತಂಡ ನಮ್ಮ ಮುಂದಿನ ನಿರ್ಧಾರಗಳಿಗೆ ಕಾಯುತ್ತಾ ಇತ್ತು. ಗುಪ್ತಚರವಿಭಾಗ ಮತ್ತು ಭಯೋತ್ಪಾದನೆ ನಿಗ್ರಹದಳ ಬೇರೆ ಬೇರೆ ಕಾರ್ಯಾಚರಣೆಯಲ್ಲಿ ಆ ಕಂಪೌಂಡ್ ಒಳಗಡೆಯ ‘ಪೇಸರ್’ನ ಗುರುತು ಹಿಡಿಯಲು ಪ್ರಯತ್ನ ಮಾಡಿದ್ದರು. ಆದರೆ ಖಚಿತವಾಗಿ ಪೇಸರ್‌ನೇ ಒಸಾಮಾ ಬಿನ್-ಲಾಡೆನ್ ಎಂದು ನಿರ್ಣಯಿಸಲು ಸಾಧ್ಯವಾಗಿರಲಿಲ್ಲ.

ಭಯೋತ್ಪಾದನೆ ನಿಗ್ರಹದಳದವರು ಶೇಕಡಾ 40-60 ರಷ್ಟು ನಿಖರತೆಯನ್ನು ವ್ಯಕ್ತಪಡಿಸಿದರೆ, ಮುಂಚಿನ ಅಧ್ಯಯನದಲ್ಲಿ ಗುಪ್ತಚರ ಇಲಾಖೆಯವರು ಶೇಕಡಾ 60-80ರಷ್ಟು ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಈ ತಹರದ ವ್ಯತ್ಯಾಸಕ್ಕೆ ಕಾರಣವನ್ನು
ಹುಡುಕುವ ಚರ್ಚೆ ಆರಂಭವಾಗಿತ್ತು. ಕೆಲವು ನಿಮಿಷಗಳಲ್ಲಿ, ಮಧ್ಯ ಪ್ರವೇಶಿಸಿ ತಡೆದು, ‘‘ನಮ್ಮ ಪೂರ್ವ ವಿಶ್ಲೇಷಣೆಗಳು ಏನೇ ಆದರೆ ಕೊನೆಯಲ್ಲಿ, ಇದು 50-50 ನಿರ್ಧಾರವೇ !

ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸೋಣ ಎಂದು ಹೇಳಿದೆ. ಮೆಕ್-ರಾವೆನ್ ಹೆಲಿಕಾಪ್ಟರ್ ದಾಳಿಯ ಎಲ್ಲ ಪೂರ್ವ ತಯಾರಿ ತಾಲೀಮು ಗಳು ಮುಗಿದಿವೆ. ನಮ್ಮ ತಂಡ ಸಿದ್ಧವಿದೆ ಎಂದರು. ಅದೇ ರೀತಿ ಕಾರ್ಟ್- ರೈಟ್ ತಮ್ಮ ಡ್ರೋನ್ ಯೋಜನೆಯ
ಪರೀಕ್ಷೆಯೂ ಮುಗಿದಿದೆ. ಯಾವುದೇ ಕ್ಷಣದಲ್ಲಿ ದಾಳಿಗೆ ಸಿದ್ಧವಿದೆ ಎಂದರು. ಎರಡೂ ಆಯ್ಕೆಗೆ ಅವಕಾಶವಿರುವಂತೆ, ಮೀಟಿಂಗ್‌ ನಲ್ಲಿ ಭಾಗಿಯಾಗಿದ್ದ ಉಳಿದ ಪ್ರಮುಖರ ಅಭಿಪ್ರಾಯವನ್ನು ಕೇಳಿದೆ. ಹಿಲರಿ ಕ್ಲಿಂಟನ್ (ಆಗಿನ ವಿದೇಶಾಂಗ ಮಂತ್ರಿ), ತನಗೆ ಇದು 51-49 ರ ನಿರ್ಧಾರ.

ಪಾಕಿಸ್ತಾನದ ಜತೆಗಿನ ಸಂಬಂಧ ಮತ್ತು ಮಿಲಿಟರಿ ಸಂಘರ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೂ, ಇದು ಕಳೆದ ಹತ್ತು ವರ್ಷ ಗಳಲ್ಲಿ ಬಿನ್-ಲಾಡೆನ್‌ಗೆ ಬಗ್ಗೆ ಸಿಕ್ಕ ಉತ್ತಮ ಮಾಹಿತಿ, ಸೀಲ್ ತಂಡದ ಹೆಲಿಕಾಪ್ಟರ್ ಕಾರ್ಯಾಚರಣೆಯ ತನ್ನ ಆಯ್ಕೆ ಎಂದರು.

ಜೋ ಬೈಡೆನ್ (ಆಗಿನ ಉಪಾಧ್ಯಕ್ಷ), ಯಾವುದೇ ತರಹದ ದಾಳಿಗೆ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದರು. ತಾಲೀಮು ಮತ್ತು ಉತ್ತಮ ಸಿದ್ಧತೆಯ ನಡುವೆಯೂ ಕಾರ್ಯಾಚರಣೆ ವಿಫಲವಾಗುವ ಸಂದರ್ಭ ಗಳು ವಿಪುಲವಾಗಿವೆ. ನಮಗೆ ಬಿನ್ ಲಾಡೆನ್ ಅಲ್ಲಿದ್ದಾನೆಯೋ ಇಲ್ಲವೋ ಎಂದು ಖಚಿತವಾಗಿ ತಿಳಿಯುವವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ ಎಂಬುದು ಜೋ ಬೈಡೆನ್ ಅವರ ನಿರ್ಧಾರವಾಗಿತ್ತು.

ಬಾಬ್ ಗೇಟ್ಸ್ (ಡಿಫೆನ್ಸ್ ಸೆಕ್ರೆೆಟರಿ) ಅವರೂ ಕೂಡ ದಾಳಿಗೆ ಯಾವುದೇ ಕಾತರತೆ ತೋರಲಿಲ್ಲ. ಅವಶ್ಯವಿದ್ದಲ್ಲಿ ಡ್ರೋನ್ ದಾಳಿ ಯನ್ನು ನಡೆಸಬಹುದು ಎಂಬುದು ಅವರ ಅಭಿಮತವಾಗಿತ್ತು. ತಮ್ಮ ನಿರ್ಧಾರವನ್ನು ಏಪ್ರಿಲ್ 1980ರಲ್ಲಿ ಇರಾನಿನಲ್ಲಿ ನಡೆದ ’ ಡೆಸರ್ಟ್ ಒನ್’ ಕಾರ್ಯಾಚರಣೆಯ ಉದಾಹರಣೆಯ ಜತೆಗೆ ಸಮರ್ಥಿಸಿಕೊಂಡರು. ಮಿಲಿಟರಿ ಒತ್ತೆಯಾಳುಗಳು
ವಿಮೋಚನಾ ಕಾರ್ಯಾಚರಣೆಯ ವೇಳೆ ಅಮೆರಿಕಾದ ಮಿಲಿಟರಿ ಹಲಿಕಾಪ್ಟರ್ ಬೆಂಕಿಗೆ ಆಹುತಿಯಾಗಿದ್ದು, ಅದರಿಂದಾದ ತೊಂದರೆಗಳನ್ನೂ ಮತ್ತೊಮ್ಮೆ ನೆನಪುಮಾಡಿ ಕೊಟ್ಟರು.

ಈ ಕಾರ್ಯಾಚರಣೆ ವಿಫಲ ಗೊಂಡಲ್ಲಿ, ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಯುದ್ಧದ ಲ್ಲಿಯೂ ನಮಗೆ ಹಿನ್ನಡೆಯಾಗುತ್ತದೆ ಎಂದರು. ಬೈಡನ್ ಮತ್ತು ಗೇಟ್ಸ್ ಈ ನಿರ್ಧಾರಗಳನ್ನು ನಾನು ಪೂರ್ತಿಯಾಗಿ ಅರ್ಥಮಡಿಕೊಳ್ಳ ಬಲ್ಲವನಾಗಿದ್ದೆ. ಅವರಿಬ್ಬರೂ
‘ಡೆಸರ್ಟ್ ಒನ್’ ಕಾರ್ಯಾಚರನೆಯ ಆಘಾತವನ್ನು ತೀರಾ ಹತ್ತಿರದಿಂದ ನೋಡಿದ್ದರು. ಸೈನಿಕರ ಸಾವು, ನಂತರದ ಕುಟುಂಬದ ನೋವು, ಅಮೆರಿಕದ ಪ್ರತಿಷ್ಠೆಗೆ ಕಳಂಕ, ಆಗಿನ ರಾಷ್ಟ್ರಾಧ್ಯಕ್ಷ ಜಿಮ್ಮಿ ಕಾರ್ಟರ್‌ಗೆ ಆದ ಅವಮಾನ ಎಲ್ಲವನ್ನೂ ಚೆನ್ನಾಗಿ
ಅರಿತು ಮೇಲಿನ ನಿರ್ಧಾರವನ್ನು ಹೇಳಿದ್ದರು.

ಜಿಮ್ಮಿಕಾರ್ಟರ್ ಆ ಕಾರ್ಯಾಚರಣೆಯ ಹಿನ್ನಡೆಯಿಂದ ಚೇತರಿಸಿಕೊಳ್ಳಲಿಲ್ಲ ಎಂಬುದು ನನಗೂ ತಿಳಿದಿತ್ತು. ನನಗೂ ಅಂತಹ ಪರಿಸ್ಥಿತಿ ಎದುರಾಗಬಹುದು ಎಂಬುದು, ಪರೋಕ್ಷ ಸೂಕ್ಷ್ಮ ಸಲಹೆಯಾಗಿತ್ತು. ನನ್ನ ನಿರ್ಧಾರ ದಾಳಿಯ ಪರವಾಗಿದ್ದರೆ, ನಾಳೆಯ ಹೊತ್ತಿಗೆ ನಿಮ್ಮನ್ನು ತಲುಪುತ್ತದೆ ಎಂದು ಆ ಮೀಟಿಂಗ್‌ನಲ್ಲಿ ಇದ್ದವರಿಗೆ ಹೇಳಿದೆ. ಅಲ್ಲಿಗೆ ಆ ದಿನದ ಸಿಚುಯೇಶನ್ ರೂಮ್’ ಮೀಟಿಂಗ್ ಮುಗಿಯಿತು. ಸಂಜೆಯ ಊಟಕ್ಕೆಂದು ಮಿಶೆಲ್ (ಪತ್ನಿ) ಮತ್ತು ಮಕ್ಕಳು ನನಗಾಗಿ ಕಾಯುತ್ತಿದ್ದರು.

ಆ ದಿವಸ ಊಟಕ್ಕೆ ಕುಳಿತಾಗ ಎಲ್ಲರೂ ಅಪರೂಪದ ಉತ್ಸಾಹದಲ್ಲಿದ್ದಂತೆ ಕಂಡಿತು. ನನ್ನನ್ನು ಹಾಗೂ ನನ್ನ ಹಾವ-ಭಾವ ಗಳನ್ನು ಅಣುಕಿಸಿ ಆಡಿಕೊಳ್ಳುತ್ತಿದ್ದರು. ನಾನು ಹೇಗೆ ಒಟ್ಟಿಗೆ ನಟ್ಸ್ ‌‌ಗಳನ್ನು ಬಾಯಿಗೆ ಹಾಕಿಕೊಳ್ಳುತ್ತೇನೆ, ಅದಕ್ಕೂ ಮೊದಲು ನನ್ನ ಅಂಗೈಯಲ್ಲಿ ಹಿಡಿದು ಅಲ್ಲಾಡಿಸುತ್ತೇನೆ; ಅದೇ ಹಳೆಯ ಚಪ್ಪಲ್‌ನ್ನು ಮನೆಯಲ್ಲಿ ಹಾಕಿಕೊಂಡು ಓಡಾಡುತ್ತೇನೆ; ಸಿಹಿ ಪದಾರ್ಥಗಳನ್ನು ಇಷ್ಟಪಡುವುದಿಲ್ಲ ಎಂದೆಲ್ಲಾ ನನ್ನನ್ನು ಅತಿಯಾದ ಆನಂದವನ್ನು, ಇಷ್ಟ ಪಡುವುದಿಲ್ಲ ಎಂದು ಕಾಲೆಳೆ ದಳು. ಮಿಶೆಲ್‌ಗೆ ದಾಳಿಯ ನಿರ್ಧಾರವಾಗದೆ ಅವಳಿಗೆ ಈ ರಹಸ್ಯದ ಭಾರವನ್ನು ಹೊರಿಸುವ ಮನಸ್ಸು ಇರಲಿಲ್ಲ.

ಅಲ್ಪಸ್ವಲ್ಪ ಬಿಗುವಾದ ಅಥವಾ ಗೊಂದಲದ ಸಂದರ್ಭ ಬಂದರೂ, ನನ್ನನು ಗಮನಿಸಿ ಕೇಳುತ್ತಿದ್ದ ಮಿಶೆಲ್, ಈ ದಿನಗಳಲ್ಲಿ ನನ್ನ
ನಡುವಳಿಕೆಯಲ್ಲಿ ಯಾವುದೇ ಬದಲಾವಣೆಯನ್ನು ಗುರುತಿಸಿರಲಿಲ್ಲ. ಊಟ ಮುಗಿಸಿ, ಬಾಸ್ಕೆಟ್ ಬಾಲ್ ಆಟವನ್ನು ಟಿವಿಯಲ್ಲಿ ನೋಡುತ್ತಿದೆ. ಕಣ್ಣುಗಳು ಪುಟಿದೆದ್ದು, ಅತ್ತಿತ್ತ ಸುತ್ತವ ಬಾಲ್‌ನ್ನೇ ಗುರಾಯಿಸುತ್ತಿದ್ದರೂ, ಹಿಂದಿನ ಮನಸ್ಸು ಕಾರ್ಯಾಚರಣೆಯ
ವಿವಿಧ ಹಂತಗಳನ್ನು ಮತ್ತೊಮ್ಮೆ ಮೆಲುಕು ಹಾಕುತ್ತಿತ್ತು.

ವಾಸ್ತವಿಕವಾಗಿ, ನಾನು ಎರಡು ವಾರದ ಹಿಂದೆಯೇ ಒಂದು ಹಂತದ ನಿರ್ಧಾರಕ್ಕೆ ಬಂದಿದ್ದೆ. ಅದಾದ ಬಳಿಕದ ಮೀಟಿಂಗ್‌ನಲ್ಲಿ ಆದ ವಿಸ್ಕೃತವಾದ ಚರ್ಚೆಗಳುನನ್ನ ಆಲೋಚನೆಯನ್ನು ಬಲಗೊಳಿಸಿತ್ತು. ನಾನು ಕ್ಷಿಪಣಿ ದಾಳಿಯ ಪರವಾಗಿ ಇರಲಿಲ್ಲ. ಅಲ್ಲಿ ಬಿನ್ ಲಾಡೆನ್ ಇದ್ದಾನೆಯೋ ಎಲ್ಲವೊ ಎಂಬುದೇ ಖಚಿತವಾಗದೆ, ದಾಳಿಯಲ್ಲಿ ಸತ್ತದ್ದು ಯಾರು ಎಂದು ಹೇಳುವುದು? ಕಾರ್ಟ್- ರೈಟ್ ಪ್ರಸ್ತಾವಿಸಿದ ಸರ್ಜಿಕಲ್ ಏರ್‌ಸ್ಟ್ರೈಕ್ ಮಾದರಿಯಲ್ಲಿಯೂ ಇದೇ ತೊಡಕು ಇತ್ತು. ಹಾಗಂತ ಗುಪ್ತಚರ ವಿಭಾಗಕ್ಕೆ
ಇನ್ನೂ ಹೆಚ್ಚಿನ ಸಮಯ ನೀಡಿದರೂ ಯಾವುದೇ ಉಪಯೋಗವಾಗುವ ನಿರೀಕ್ಷೆ ಇರಲಿಲ್ಲ.

ಕೊನೆಯ ಮೂರು ನಾಲ್ಕು ತಿಂಗಳಲ್ಲಿ ನಮಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಇನ್ನೂ ತಿಂಗಳು ಕಾಲ ನಮ್ಮ ರಹಸ್ಯವನ್ನು ಮುಚ್ಚಿಡುವುದು ಕಷ್ಟಸಾಧ್ಯ ಎಂದು ಎನಿಸತೊಡಗಿತ್ತು. ನನಗೆ ಉಳಿದ್ದದಿ ಪ್ರಶ್ನೆ ಒಂದೇ. ದಾಳಿಗೆ ಆಜ್ಞೆ
ಮಾಡುವುದೋ ಬೇಡವೋ ಎಂಬುದು. ಏನೇನು ಪನಕ್ಕೆ ಇವೆ ಎಂಬುದರ ಬಗ್ಗೆ ನನಗೆ ಸರಿಯಾದ ಸ್ಪಷ್ಟತೆ ಇತ್ತು. ಯಾವುದೇ ಸಂದರ್ಭದಲ್ಲಿ ಅಪಾಯವನ್ನು ಎದುರಿಸದೆ ಈ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಹೆಚ್ಚೆಂದರೆ ಅಪಾಯದ ಮಟ್ಟ ಸ್ವಲ್ಪ
ಕಡಿಮೆ ಇರಬಹುದಿತ್ತು ಅನನಿಸುತ್ತದೆ. ನನಗೆ ಮೆಕ್ -ರಾವೆಲ್ ಮತ್ತು ಸೀಲ್ ಕಮಾಂಡೋಗಳ ಮೇಲೆ, ಪರಮೋಚ್ಛ ಭರವಸೆ ಇತ್ತು. ನಮ್ಮ ಮಿಲಿಟರಿಯ ಸಾಮರ್ಥ್ಯದಲ್ಲಿ ನನಗೆ ಗೊತ್ತಿರುವಂತೆಯೇ ಭಾರೀ ಬದಲಾವನೆ ಕಂಡು ಬಂದಿತ್ತು. ದಶಕಗಳ ಹಿಂದಿನ ಡೆಸರ್ಟ್-ಒನ್’ ಮತ್ತು ಸೋಮಾಲಿಯದಲ್ಲಿ ಕಾರ್ಯಾಚರಣೆಯ ವೇಳೆ ಹಲವು ಕ್ಲಿಷ್ಟಕರ ಸನ್ನಿವೇಶಗಳನ್ನು ನಿಭಾ ಯಿಸಿದ ಫಲವಾಗಿ, ನಮ್ಮ ಮಿಲಿಟರಿ ಯಾವುದೇ ಸಂದರ್ಭವನ್ನು ಸುರಳಿತವಾಗಿ ಎದುರಿಸಬಲ್ಲರು ಎಂಬ ನಿಶ್ಚಿತತೆ ಇತ್ತು. ನನಗೆ ನಮ್ಮ ಲೆಕ್ಕಾಚಾರ ತಪ್ಪಿ, ಯಾವುದೇ ತುರ್ತು ಪರಿಸ್ಥಿತಿ ಒದಗಿಬಂದರೂ ಸೀಲ್ ಕಮಾಂಡೋಗಳು ಕ್ಷೇಮವಾಗಿ ಹಿಂದಿರುಗುತ್ತಾರೆ ಎಂಬ ಭರವಸೆ ಇತ್ತು. ನನ್ನ ನಿರ್ಧಾರದಿಂದ ಮುಂದೆ ಏನಾಗುತ್ತದೆ ಎಂಬ ನಿಖರತೆ ಇಲ್ಲದಿದ್ದರೂ ನನ್ನ ನಿರ್ಧಾರ ಅದರ
ಸಿದ್ಧತೆ ಬಗ್ಗೆ ವಿಶ್ವಾಸವಿತ್ತು.

ಮರುದಿನ-ಏಪ್ರಿಲ್ 29 ಶುಕ್ರವಾರ- ಬಹುತೇಕ ದಿನಪೂರ್ತಿ ಪ್ರಯಾಣ ಪೂರ್ವ ನಿಗದಿತವಾಗಿತ್ತು. ಅಲ್ಬಾಮಾದ ಟಸ್ಕಲೂಸಾ ನಗರಕ್ಕೆ ಚಂಡಮಾರುತದಿಂದ ಉಂಟಾದ ಹಾನಿಯ ಸಮೀಕ್ಷೆಗೆ ತೆರಳುವ ಕಾರ್ಯಕ್ರಮವಿತ್ತು. ನಂತರ ಘಟಿಕೋತ್ಸವ ಭಾಷಣಕ್ಕೆ ಮಿಯಾಮಿಗೆ ತೆರಳುವ ಏರ್ಪಾಡು ಮಾಡಲಾಗಿತ್ತು. ಮಧ್ಯೆ ಮಿಶೆಲ್ ಮತ್ತು ಮಕ್ಕಳಿಬ್ಬರನ್ನು ‘ಎಂಡೇವರ್’ ಬಾನಬಂಡಿಯ ಉಡ್ಡಯನವನ್ನು ನೋಡಲು ಕೇಪ್ ಕೆನವೆರಾಲ್ ಪಟ್ಟಣಕ್ಕೆ ಕರೆದೊಯ್ಯುವುದಾಗಿ ಭರವಸೆ ಕೊಟ್ಟಿದ್ದೆ.
ಅದು ‘ಎಂಡೇವರ್’ ಬಾನಬಂಡಿಯ ಕೊನೆಯ ಪಯಣ ಎಂದು ಭಾವಿಸಲಾಗಿತ್ತು. ನನ್ನ ಮಕ್ಕಳಿಬ್ಬರ ಅಕ್ಕ-ತಂಗಿ ಕಿತ್ತಾಟ ಗದ್ದಲವೂ ಸ್ವಲ್ಪ ಜೋರಾಗೆ ಇತ್ತು. ಈ ಹಿನ್ನೆಲೆಯಲ್ಲಿ ವಿದ್ಯಕ್ತವಾಗಿ ’ಒಬ್ಬೊಟ್ಟೋಬಾದ್ ಮಿಷನ್’ಗೆ ಒಪ್ಪಿಗೆ ಸೂಚಿಸಿದೆ.

ಮತ್ತೂ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯ ಜೊತೆಗೆ ದಾಳಿಯ ಸೂಕ್ತ ಸಮಯ ನಿರ್ಧರಿಸುವ ಅಧಿಕಾರವನ್ನೂ ‘ಮೆಕ್-ರಾವೆನ್’ಗೇ ವಹಿಸಿದ್ದೆ. ಅದಾಗಲೇ ಕಾರ್ಯಾಚರಣೆ ನನ್ನ ಕೈಯಿಂದ ದೂರ ಹೋಗಿತ್ತು. ನಾನೂ ಬಹಳ ದಿನದ ನಂತರ
ಒಂದು ದಿನಕ್ಕಾದರೂ ವಾಷಿಂಗ್ಟನ್(ವೈಟ್ ಹೌಸ್) ಹೊರಗಡೆ ಹೋಗುವ ಸಂದರ್ಭ ಬಂದಿದ್ದು ಸಂತಸವಾಗಿತ್ತು. ನನ್ನ ಗಮನ ವನ್ನು ಬೇರೆ ಕೆಲಸದೆಡೆಗೆ ಹರಿಸಲು ಮತ್ತು ಬೇರೆಯವರು ಮಾಡುವ ಕೆಲಸವನ್ನು ಶ್ಲಾಘಿಸಲು ಉತ್ತಮ ಸಮಯ ಒದಗಿ ಬಂದಿತ್ತು ಎಂದೇ ಹೇಳಬೇಕು.

ಅನಾಹುತ ಸಂತ್ರಸ್ತರ ಭೇಟಿ, ಸಾಂತ್ವನ, ಘಟಿಕೋತ್ಸವದಲ್ಲಿ ಮಾಡಿದ ಭಾಷಣ ಎಲ್ಲವೂ ಖುಷಿ ಕೊಟ್ಟಿತ್ತು. ಆ ದಿನ ಕೇಪ್ ಕೆನವೆರಾಲ್ ಪಟ್ಟಣದಲ್ಲಿ ‘ಎಂಡೇವರ್’ ಬಾನ ಬಂಡಿಯ ಉಡ್ಡಯನ ಕೊನೆಯ ಗಳಿಗೆಯಲ್ಲಿ ತಾಂತ್ರಿಕ ಕಾರಣಗಳಿಂದ
ಮುಂದೂಡಲ್ಟಟ್ಟಿದ್ದರೂ, ನಮಗೆ ಗಗನಯಾತ್ರಿಗಳ ಭೇಟಿಯ ಅವಕಾಶ ಸಿಕ್ಕಿತ್ತು. ಅಲ್ಲಿಯ ಉಡ್ಡಯನದ ಹಿಂದೆ ನಡೆಯುವ ಶ್ರಮದಾಯಕ ಕೆಲಸಗಳನ್ನು ನೋಡಿ ತಿಳಿಯುವ ಅವಕಾಶ ನನ್ನ ಮಕ್ಕಳಿಬ್ಬರಿಗೂ ಆಸಕ್ತಿದಾಯಕವಾಗಿದ್ದುದು ಕಂಡು ಬಂತು
ಶುಕ್ರವಾರ ಎಲ್ಲ ತಿರುಗಾಟಗಳು ಒಂದು ರೀತಿಯ ಹೊಸ ಹುರುಪು ಮತ್ತು ಒಳ್ಳೆಯ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದವು.

ಮರುದಿನ (ಏಪ್ರಿಲ್ 30) ಶನಿವಾರ, ವೈಟ್ ಹೌಸ್‌ನ ಬಾತ್ಮೀದಾರರಿಗೆ ಭೋಜನ ಕೂಟದ ಏರ್ಪಾಟಾಗಿತ್ತು. ನನಗೆ ಇದರ
ಬಗ್ಗೆ ವಿಶೇಷ ಆಸಕ್ತಿ ಇಲ್ಲದಿದ್ದರೂ, ತಪ್ಪಿಸಿಕೊಳ್ಳುವ ಯೋಚನೆ ಇರಲಿಲ್ಲ. ವರ್ಷದಿಂದ ವರ್ಷ ಇದು ಪತ್ರಕರ್ತರ ಜೊತೆಗೆ, ರಾಜಕಾರಣಿಗಳು, ಹಾಲಿವುಡ್‌ನ ತಾರೆಗಳನ್ನೂ ಸೆಳೆಯುತ್ತಾ, ಮೋಜಿನ ಕೂಟದ ರೂಪ ಪಡೆಯುತ್ತಿದುದು ನನಗೆ ಹಿಡಿಸದ
ಸಂಗತಿಯಾಗಿತ್ತು. ಆದರೂ ಭೋಜನಕೂಟದಲ್ಲಿ ಅಧ್ಯಕ್ಷ ಹುದ್ದೆಯಲ್ಲಿದ್ದವರು, ಭಾಷಣ ಮಾಡಿ ವಿರೋಧಪಕ್ಷದವರ ಕಾಲೆಳೆಯುವುದು, ಆ ದಿನದ ರಾಜಕೀಯದ ಬಗ್ಗೆೆ ಹಾಸ್ಯ ಮಾಡುವುದು ಎಲ್ಲವೂ ವಾಡಿಕೆಯಾಗಿತ್ತು. ಕಳೆದ ಎರಡು ವರ್ಷ ಈ
ಭೋಜನ ಕೂಟದಲ್ಲಿ ಭಾಗಿಯಾಗಿದ್ದರಿಂದ , ಈ ಸಲ ಕೊನೆಯ ಕ್ಷಣದಲ್ಲಿ ತಪ್ಪಿಸಿಕೊಂಡರೆ, ಅನಗತ್ಯ ಸಂಶಯಕ್ಕೆ ದಾರಿ ಮಾಡಿಕೊಡುವಂತಿತ್ತು.

ಇನ್ನು ಕೆಲವೇ ಘಂಟೆಗಳಲ್ಲಿ ಮೆಕ್-ರಾವೆನ್ ಜಲಾಲಬಾದ್ ನ ಮಿಲಿಟರಿ ನೆಲೆಗೆ ತಲುಪುವ ಸುಳಿವು ಇತ್ತು. ಅದಾದ ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆ ನಡೆಯುವ ಸಾಧ್ಯತೆಯೂ ಇತ್ತು. ಇವೆಲ್ಲವನ್ನೂ ತಿಳಿದಿದ್ದರೂ, ಸುದ್ದಿಗಾರರ ಸಮೂಹದ ಮುಂದೆ
ಎಲ್ಲವೂ ಮಾಮೂಲಿಯಾಗಿರುವಂತೆ ನಟಿಸಬೇಕಾದ ಸಂದರ್ಭ ನನ್ನದಾಗಿತ್ತು.

ಅಸಂಬಂದ್ಧವೆನಿಸಿದರೂ ಆ ದಿನ ರಾತ್ರಿ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಡೊನಾಲ್ಡ್‌ ಟ್ರಂಪ್ ಅವರನ್ನು ಸಂದರ್ಶನಕ್ಕೆ ಕರೆದು ಕೂರಿಸಿಕೊಂಡಿದ್ದು ನಮಗೆ ಅದೃಷ್ಟವೇ ಆಗಿತ್ತು. ಟ್ರಂಪ್ ಅಲ್ಲಿರುವಷ್ಟು ಹೊತ್ತು, ಮಾಧ್ಯಮಗಳೆಲ್ಲವೂ ಬೇರೆ ಏನೇ ಹರಟಿ ದರೂ, ಪಾಕಿಸ್ತಾನದ ಬಗ್ಗೆ ಆಲೋಚಿಸುವುದಿಲ್ಲ ಎಂಬುದು ಖಾತ್ರಿಯಾಗಿತ್ತು.

ವೈಟ್ ಹೌಸ್‌ನಲ್ಲಿಯೇ ಇರುವ ಬಹಳ ಅಧಿಕಾರಿಗಳು ಮತ್ತು ಪತ್ರಿಕಾ ಸಲಹೆಗಾರರಿಗೂ ನಮ್ಮ ದಾಳಿಯ ಬಗ್ಗೆೆ ಮಾಹಿತಿ ಇರಲಿಲ್ಲ.
ಅಂದಹಾಗೆ, ನನ್ನ ಆ ದಿನದ ಪತ್ರಿಕಾಗೋಷ್ಠಿಯ ಮತ್ತು ಮೂಲ ಜನನ ಪ್ರಮಾಣ ಪತ್ರಿಕೆ ಪ್ರತಿಯನ್ನು ಬಹಿರಂಗ ಪಡಿಸಿದ ನಂತರ ಒಂದು ಹಂತಕ್ಕೆ, ಆ ಬಗೆಗಿನ ಊಹಾ ಪೋಹಕ್ಕೆ ತೆರೆ ಬಿದ್ದಿತ್ತು. ಡೊನಾಲ್ಡ್ ಟ್ರಂಪ್ ಒಲ್ಲದ ಮನಸ್ಸಿಂದ ನಾನು ಅಮೆರಿಕಾ ದಲ್ಲೇ ಹುಟ್ಟಿದ್ದು ಎಂದು ಒಪ್ಪಿಕೊಂಡದ್ದು ನನ್ನ ಗಮನಕ್ಕೆ ಬಂದಿತ್ತು. ಅದೇ ದಿನ ಸಂಜೆಯ ಹೊತ್ತಿಗೆ, ನಾನು ಮೆಕ್-ರಾವೆನ್‌ಗೆ ಫೋನ್ ಮಾಡಿದೆ. ಅವರ ತಮ್ಮ ತಂಡ ಸಿದ್ಧವಾಗಿದೆ. ಬೇರೆ ಎಲ್ಲ ಸಿದ್ದತೆಯೂ ಪೂರ್ಣಗೊಂಡಿದೆ.

ಇಂದು ಮಸುಕಾದ ವಾತಾವರಣವಿರು ವದರಿಂದ ನಾಳೆ ಭಾನುವಾರ (ಮೇ 1) ರಾತ್ರಿಯವರೆಗೆ ಕಾಯುವುದಾಗಿ ಹೇಳಿದರು. ನಾನು
ದಾಳಿಯ ಬಗ್ಗೆ ವಿಚಾರಿಸಲು ಕರೆ ಮಾಡಿಲ್ಲ. ‘ನಿಮ್ಮ ತಂಡದ ಎಲ್ಲ ಕಮಾಂಡೋಗಳೆಲ್ಲರನ್ನು ಎಷ್ಟು ಅಪ್ರಿಷಿಯೇಟ್ ಮಾಡು ತ್ತೇನೆ ಎಂಬುದನ್ನು ಅವರಿಗೆ ತಿಳಿಸಿ’ ಎಂದೆ

‘yes, sir‘ ಅಂದರು.

Bill (ಮೆಕ್-ರಾವೆನ್)…ಎಂದು ಕರೆದು ಕ್ಷಣ ಏನನ್ನೂ ಹೇಳಲು ಆಗದೆ ನಿಂತೆ. ‘”I mean it.
Tell them thi” ಅಂದೆ.

“I will, Mr. President,‘ ಎಂದು ಫೋನ್ ಇಟ್ಟರು.

(ಮುಂದುವರಿಯುವುದು…)