Monday, 16th September 2024

Dr Jeetendra Singh Column: ಪರಿಸರ ಉದ್ಯೋಗಕ್ಕಾಗಿ ಜೈವಿಕ ತಂತ್ರಜ್ಞಾನ

ಪ್ರಗತಿಪಥ

ಡಾ.ಜಿತೇಂದ್ರ ಸಿಂಗ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೂರಗಾಮಿ ಭವಿಷ್ಯದ ಪರಿಣಾಮಗಳನ್ನು ಹೊಂದಿರುವ ಮಹತ್ತರ ಉಪಕ್ರಮವೊಂದರಲ್ಲಿ ಸ್ವಚ್ಛ, ಹಸಿರು, ಸಮೃದ್ಧ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಉನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯನ್ನು ಉತ್ತೇಜಿಸಲು ಜೈವಿಕ ತಂತ್ರಜ್ಞಾನ ಇಲಾಖೆಯ (ಡಿಬಿಟಿ) ‘ಬಯೋ
ಇ-೩’ (ಆರ್ಥಿಕತೆ, ಉದ್ಯೋಗ ಮತ್ತು ಪರಿಸರಕ್ಕಾಗಿ ಜೈವಿಕ ತಂತ್ರಜ್ಞಾನ) ನೀತಿಗೆ ತನ್ನ ಅನುಮೋದನೆ ನೀಡಿದೆ. ಇದು ವಿಶ್ವದ ಭವಿಷ್ಯದ ಆರ್ಥಿಕ ಬೆಳವಣಿಗೆಯ ಆರಂಭಿಕ ಮಾರ್ಗದರ್ಶಿ ದಾರಿದೀಪಗಳಲ್ಲಿ ಒಂದಾಗಿ ಜಾಗತಿಕ ರಂಗದಲ್ಲಿ ಭಾರತಕ್ಕೆ ಹಿರಿತನದ ಪ್ರವರ್ತಕ ಪಾತ್ರವನ್ನು ಖಾತ್ರಿಪಡಿಸುತ್ತದೆ.

ವಸ್ತುಗಳನ್ನು/ಸಂಪನ್ಮೂಲಗಳನ್ನು ಬಳಕೆ ಮಾಡುವಾಗ ವಿವೇಚನಾರಹಿತವಾಗಿ ಸಮರ್ಥನೀಯವಲ್ಲದ ಮಾದರಿಯಲ್ಲಿ ಬಳಕೆ ಮಾಡುವುದು, ಅತಿಯಾದ ಸಂಪನ್ಮೂಲ ಬಳಕೆ ಮತ್ತು ಅದರಿಂದಾಗಿ ಆಗುವ ತ್ಯಾಜ್ಯ ಉತ್ಪಾದನೆಯು ಕಾಡ್ಗಿಚ್ಚು, ಕರಗುವ ಹಿಮನದಿಗಳು ಮತ್ತು ಜೀವವೈವಿಧ್ಯತೆ ಯಲ್ಲಿನ ಕುಸಿತದಂಥ ಜಾಗತಿಕ ವಿಪತ್ತುಗಳಿಗೆ ಕಾರಣವಾಗು ತ್ತಿದೆ. ಭಾರತವನ್ನು ವೇಗವಽತ ‘ಹಸಿರು ಬೆಳವಣಿಗೆ’ಯ ಹಾದಿಯಲ್ಲಿ ಮುನ್ನಡೆಸುವ ರಾಷ್ಟ್ರೀಯ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಮಗ್ರ ಜೈವಿಕ ಇ-೩ ನೀತಿಯು ಹವಾಮಾನ ಬದಲಾವಣೆ, ನವೀಕರಿಸ ಲಾಗದ ಸಂಪನ್ಮೂಲಗಳ ಕ್ಷೀಣಿಸುವಿಕೆ ಮತ್ತು ಸುಸ್ಥಿರ ತ್ಯಾಜ್ಯ ಉತ್ಪಾದನೆಯ ಸವಾಲಿನ ಹಿನ್ನೆಲೆಯಲ್ಲಿ ಸುಸ್ಥಿರ ಬೆಳವಣಿಗೆಯತ್ತ ಸಕಾರಾತ್ಮಕ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ.

ರಾಸಾಯನಿಕ ಆಧರಿತ ಕೈಗಾರಿಕೆಗಳನ್ನು ಹೆಚ್ಚು ಸುಸ್ಥಿರ ಜೈವಿಕ-ಆಧರಿತ ಕೈಗಾರಿಕಾ ಮಾದರಿಗಳಿಗೆ ಪರಿವರ್ತಿಸುವುದನ್ನು ಉತ್ತೇಜಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಇದು ವೃತ್ತಾಕಾರದ ಜೈವಿಕ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಜೈವಿಕ ಆಧರಿತ ಉತ್ಪನ್ನಗಳನ್ನು ಉತ್ಪಾದಿಸಲು ಬಯೋಮಾಸ್ (ಸೂಕ್ಷ್ಮಜೀವಿಯ ಕೋಶ ಕಾರ್ಖಾನೆಗಳು- ಜೀವ
ರಾಶಿ), ಭೂಕುಸಿತಗಳು/ಭೂಮಿಯ ಹೊಂಡಗಳನ್ನು ತುಂಬಿಸಲು ಬಳಸುವ ತ್ಯಾಜ್ಯ, ಹಸಿರು ಮನೆ ಅನಿಲಗಳು ಇತ್ಯಾದಿಗಳಿಂದ ಲಭಿಸುವ ತ್ಯಾಜ್ಯವನ್ನು ಬಳಸುವುದನ್ನು ಉತ್ತೇಜಿಸುವ ಮೂಲಕ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸಲು ಪ್ರಚೋದನೆ ನೀಡುತ್ತದೆ.

ಇದಲ್ಲದೆ, ಬಯೋ ಇ-೩ ನೀತಿಯು ಭಾರತದ ಜೈವಿಕ ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸಲು ಹೊಸ ಪರಿಹಾರಗಳನ್ನು ಸೃಷ್ಟಿಸುತ್ತದೆ. ಜೈವಿಕ ಆಧರಿತ ಉತ್ಪನ್ನಗಳ ಪ್ರಮಾಣ ಹೆಚ್ಚಳ ಮತ್ತು ವಾಣಿಜ್ಯೀಕರಣಕ್ಕೆ ಅನುಕೂಲ ಮಾಡಿಕೊಡುತ್ತದೆ; ತ್ಯಾಜ್ಯ ವಸ್ತುಗಳನ್ನು ಕಡಿಮೆ ಮಾಡುವುದು, ಮರುಬಳಕೆ ಮಾಡುವುದು ಮತ್ತು ರೀಸೈಕ್ಲಿಂಗ್ (ತ್ಯಾಜ್ಯವನ್ನು ಬಳಸಿ
ವಸ್ತುಗಳ ಮರು ಉತ್ಪಾದನೆ) ಮಾಡುವುದು, ಹೆಚ್ಚು ನುರಿತ ಉದ್ಯೋಗಿಗಳ ಸಮೂಹವನ್ನು ವಿಸ್ತರಿಸುವುದು, ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳ ಮತ್ತು ಉದ್ಯಮಶೀಲತೆಯ ವೇಗವನ್ನು ಹೆಚ್ಚಿಸುವುದಕ್ಕೆ ಇದು ಅನುಕೂಲಗಳನ್ನು ಮಾಡಿಕೊಡುತ್ತದೆ.

ನೀತಿಯ ಪ್ರಮುಖ ಲಕ್ಷಣಗಳು ಹೀಗಿವೆ ೧) ಹೆಚ್ಚಿನ ಮೌಲ್ಯದ ಜೈವಿಕ ಆಧರಿತ ರಾಸಾಯನಿಕಗಳು, ಜೈವಿಕ ಪಾಲಿಮರ್‌ಗಳು ಮತ್ತು ಕಿಣ್ವಗಳಂಥ ವಿಷಯಾಧಾರಿತ ಕ್ಷೇತ್ರಗಳಲ್ಲಿ ಸ್ಥಳೀಯ ಸಂಶೋಧನೆ ಮತ್ತು ಅಭಿವೃದ್ಧಿ-ಕೇಂದ್ರಿತ ಉದ್ಯಮಶೀಲತೆಗೆ ಪ್ರೋತ್ಸಾಹ ಮತ್ತು ಬೆಂಬಲ. ಸ್ಮಾರ್ಟ್ ಪ್ರೋಟೀನ್‌ಗಳು ಮತ್ತು ಕ್ರಿಯಾತ್ಮಕ ಆಹಾರಗಳು, ನಿಖರ ಜೈವಿಕ ಚಿಕಿತ್ಸೆ, ಹವಾಮಾನ ಸ್ಥಿತಿಸ್ಥಾಪಕ ಕೃಷಿ, ಇಂಗಾಲದ ಸೆರೆಹಿಡಿಯುವಿಕೆ ಮತ್ತು ಅದರ ಬಳಕೆ ಹಾಗೂ ಸಾಗರ ಮತ್ತು ಬಾಹ್ಯಾಕಾಶ ಸಂಶೋಧನೆ. ೨) ಜೈವಿಕ ಉತ್ಪಾದನಾ ಸೌಲಭ್ಯಗಳು, ಬಯೋ ಫ್ರೆಂಡ್ರಿ
ಗುಚ್ಛಗಳು (ಕ್ಲಸ್ಟರ್‌ಗಳು) ಮತ್ತು ಜೈವಿಕ-ಕೃತಕ ಬುದ್ಧಿಮತ್ತೆ (ಬಯೋ-ಎಐ) ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತಂತ್ರಜ್ಞಾನ ಅಭಿವೃದ್ಧಿ ಮತ್ತು ವಾಣಿಜ್ಯೀಕರಣವನ್ನು ವೇಗಗೊಳಿಸುವುದು. ೩) ನೈತಿಕ ಮತ್ತು ಜೈವಿಕ ಸುರಕ್ಷತಾ ಪರಿಗಣನೆಗೆ ಒತ್ತು ನೀಡುವ ಮೂಲಕ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಪುನರುತ್ಪಾದಕ ಮಾದರಿಗಳಿಗೆ ಆದ್ಯತೆ ನೀಡುವುದು;
೪) ನಿಯಂತ್ರಕ ಸುಧಾರಣೆಗಳನ್ನು ಜಾಗತಿಕ ಮಾನದಂಡಗಳೊಂದಿಗೆ ಸಮನ್ವಯಗೊಳಿಸುವುದು. ಭಾರತವು ಕಳೆದ ದಶಕದಲ್ಲಿ ಬಲವಾದ ಆರ್ಥಿಕ ಬೆಳವಣಿಗೆಯನ್ನು ಪ್ರದರ್ಶಿಸಿದೆ ಮತ್ತು ೪ನೇ ಕೈಗಾರಿಕಾ ಕ್ರಾಂತಿಯ ಜಾಗತಿಕ ನಾಯಕರಲ್ಲಿ ಒಂದೆನಿಸಿಕೊಳ್ಳಲು ಅಪಾರ ಸಾಮರ್ಥ್ಯವನ್ನು ಹೊಂದಿದೆ.

ನಮ್ಮ ಜೈವಿಕ ಆರ್ಥಿಕತೆಯು ೨೦೧೪ರಲ್ಲಿ ೧೦ ಬಿಲಿಯನ್ ಡಾಲರ್‌ನಿಂದ ೨೦೨೪ರಲ್ಲಿ ೧೩೦ ಬಿಲಿಯನ್ ಡಾಲರ್‌ಗೆ ೧೩ ಪಟ್ಟು ಹೆಚ್ಚಾಗಿದೆ. ಇದು ೨೦೩೦ರ ವೇಳೆಗೆ ೩೦೦ ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ವಿವಿಧ ಕ್ಷೇತ್ರಗಳಲ್ಲಿ ಬಯೋ ಇ-೩ ನೀತಿಯ ಅನುಷ್ಠಾನವು ದೇಶದ ಜೈವಿಕ ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುವ ಸಾಧ್ಯತೆಯಿದೆ ಮತ್ತು ಅದು ‘ಹಸಿರು ಬೆಳವಣಿಗೆ’ಯನ್ನು ಉತ್ತೇಜಿಸುತ್ತದೆ. ದೇಶದ ಉನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನಾ ಉಪಕ್ರಮ ಗಳನ್ನು ಪೋಷಿಸಿ ಉದಯೋನ್ಮುಖ ತಂತ್ರeನಗಳು ಮತ್ತು ಆವಿಷ್ಕಾರಗಳನ್ನು ಬಳಸಿಕೊಳ್ಳುವ ಮೂಲಕ ಇದಕ್ಕೆ ಅಡಿಪಾಯ ಹಾಕಲಾಗುವುದು.

ಜೈವಿಕ ಉತ್ಪಾದನೆಯು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಪ್ರಮುಖ ಆಧಾರಸ್ತಂಭ ವಾಗಿದೆ ಮತ್ತು ೨೧ನೇ ಶತಮಾನದ ಬೇಡಿಕೆಗಳನ್ನು ಪೂರೈಸಲು ಪರಿವರ್ತಕ ವಿಧಾನವನ್ನು ಒದಗಿಸುತ್ತದೆ. ಬಹುಶಿಸ್ತೀ ಯ ಪ್ರಯತ್ನವಾಗಿ, ಇದು ಮಾನವ ಜೀವಕೋಶಗಳು ಸೇರಿದಂತೆ ಸೂಕ್ಷ್ಮಜೀವಿಗಳು, ಸಸ್ಯಗಳು ಮತ್ತು ಪ್ರಾಣಿ ಕೋಶ ಗಳ ಸಾಮರ್ಥ್ಯವನ್ನು ತೆರೆದಿಡುವ ಶಕ್ತಿಯನ್ನು ಹೊಂದಿದೆ. ಸುಧಾರಿತ ಉತ್ಪಾದನಾ ತಂತ್ರeನಗಳು ಮತ್ತು ಸಹ ಯೋಗದ ಪ್ರಯತ್ನಗಳ ಮೂಲಕ ಜೈವಿಕ-ಆಧರಿತ ಉತ್ಪನ್ನಗಳ ತಯಾರಿಕೆ, ಅಭಿವೃದ್ಧಿ ಮತ್ತು ವಾಣಿಜ್ಯೀ
ಕರಣವನ್ನು ವೇಗವಽಸುವ ಕೇಂದ್ರೀಕೃತ ಸೌಲಭ್ಯಗಳಾಗಿ ಜೈವಿಕ ಉತ್ಪಾದನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ ಎಂದು ಊಹಿಸಲಾಗಿದೆ.

ಇದು ಜೈವಿಕ ಉತ್ಪಾದನಾ ಪ್ರಕ್ರಿಯೆಗಳ ವ್ಯಾಪ್ತಿ ಹೆಚ್ಚಳ (ಸ್ಕೇಲಬಿಲಿಟಿ), ಸುಸ್ಥಿರತೆ ಮತ್ತು ನಾವೀನ್ಯವನ್ನು ಹೆಚ್ಚಿಸಲು ಸಂಪನ್ಮೂಲಗಳು, ಪರಿಣತಿ ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳುವ ಸಮುದಾಯವನ್ನು ಸೃಷ್ಟಿಸುತ್ತದೆ. ಈ ಜೈವಿಕ ಉತ್ಪಾದನಾ ಕೇಂದ್ರಗಳು ಜೈವಿಕ ಆಧರಿತ ಉತ್ಪನ್ನಗಳ ‘ಲ್ಯಾಬ್-ಟು-ಪೈಲಟ್’ ಮತ್ತು ‘ವಾಣಿಜ್ಯಪೂರ್ವ ಪ್ರಮಾಣದ’ ಉತ್ಪಾದನೆಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತವೆ. ನವೋದ್ಯಮಗಳು ಹೊಸ ಆಲೋಚನೆಗಳನ್ನು ತರುವ ಮತ್ತು ಅಭಿವೃದ್ಧಿಪಡಿಸುವ ಮೂಲಕ ಮತ್ತು ಅವುಗಳನ್ನು ಸಣ್ಣ ಮತ್ತು ಮಧ್ಯಮ
ಗಾತ್ರದ ಉದ್ಯಮಗಳು (ಎಸ್‌ಎಂಇಗಳು) ಮತ್ತು ಸ್ಥಾಪಿತ ತಯಾರಕರಿಗೆ ನೀಡುವ ಮೂಲಕ ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಬಯೋ ಫ್ರೆಂಡ್ರಿ ಎಂದರೆ ಜೈವಿಕ ಎಂಜಿನಿಯರಿಂಗ್ ಪ್ರಕ್ರಿಯೆಗಳನ್ನು ವಿಸ್ತರಿಸಲು ಸುಧಾರಿತ ಗುಚ್ಛಗಳ (ಕ್ಲಸ್ಟರ್ ಗಳ) ರಚನೆ. ಇದು ಆರಂಭಿಕ ವಿನ್ಯಾಸ ಮತ್ತು ಪರೀಕ್ಷಾ ಹಂತಗಳಿಂದ ಪ್ರಾಯೋಗಿಕ ಮತ್ತು ವಾಣಿಜ್ಯಪೂರ್ವ ಉತ್ಪಾದನೆಯವರೆಗೆ ಇರುತ್ತದೆ. ವಿವಿಧ ರೀತಿಯ ಅನ್ವಯಿಕ ಬಳಕೆಗಳಿಗೆ ಸಂಬಂಽಸಿ ಎಂ.ಆರ್.ಎನ್.ಎ. ಆಧರಿತ ಲಸಿಕೆಗಳು ಮತ್ತು ಪ್ರೋಟೀನ್‌ಗಳ ದೊಡ್ಡ ಪ್ರಮಾಣದ ಉತ್ಪಾದನೆಯು ಬಯೋ-ಂಡ್ರಿಯ ಕೆಲವು ಪ್ರಶಂಸನೀಯ ಉದಾಹರಣೆಗಳಾಗಿದ್ದು, ಅವು ಬಹಳ ಮೌಲ್ಯಯುತವಾಗಿರುತ್ತವೆ. ಈ ಗುಚ್ಛಗಳು ಪ್ರಮಾಣೀಕೃತ ಮತ್ತು ಸ್ವಯಂಚಾಲಿತ ಪ್ರಕ್ರಿಯೆಗಳನ್ನು ಬಳಸಿಕೊಂಡು ಜೈವಿಕ ವ್ಯವಸ್ಥೆಗಳು ಮತ್ತು ಜೀವಿಗಳನ್ನು ವಿನ್ಯಾಸಗೊಳಿಸುವಲ್ಲಿ, ನಿರ್ಮಿಸುವಲ್ಲಿ ಮತ್ತು ಪರೀಕ್ಷಿಸುವಲ್ಲಿ ಪರಿಣತಿ ಹೊಂದಿರುತ್ತವೆ.

ಜೈವಿಕ ಎಐ ಕೇಂದ್ರಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಎಐ ಏಕೀಕರಣವನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸುತ್ತವೆ. ಈ ಬಯೋ-ಎಐ ಕೇಂದ್ರಗಳು (ಹಬ್‌ಗಳು) ಜೈವಿಕ ತಂತ್ರಜ್ಞಾನ ಪರಿಣತಿ, ಅತ್ಯಾಧುನಿಕ ಮೂಲ ಸೌಕರ್ಯ ಹಾಗೂ ಎಐ ಮತ್ತು ಯಂತ್ರಕಲಿಕೆಯನ್ನು ಬಳಸಿಕೊಂಡು ದೊಡ್ಡ ಪ್ರಮಾಣದ ಜೈವಿಕ ಡೇಟಾದ
ಏಕೀಕರಣ, ಸಂಗ್ರಹಣೆ ಮತ್ತು ವಿಶ್ಲೇಷಣೆಗೆ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸುತ್ತವೆ. ಈ ಸಂಪನ್ಮೂಲಗಳನ್ನು ವಿವಿಧ ವಿಭಾಗಗಳ ತಜ್ಞರಿಗೆ ಲಭ್ಯವಾಗುವಂತೆ ಮಾಡಲಾಗುವುದು (ಉದಾಹರಣೆಗೆ ಜೀವಶಾಸ್ತ್ರ, ಸಾಂಕ್ರಾಮಿಕ ರೋಗಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಎಂಜಿನಿಯರಿಂಗ್, ಡೇಟಾ ವಿಜ್ಞಾನ). ನವೀನ ಜೈವಿಕ-ಆಧರಿತ ಉತ್ಪನ್ನಗಳ ಸೃಷ್ಟಿಗೆ ಇದು ಅನುಕೂಲ ಮಾಡಿಕೊಡುತ್ತದೆ- ಅದು ಹೊಸ ರೀತಿಯ ಜೀನ್ ಚಿಕಿತ್ಸೆಯಾಗಿರಬಹುದು ಅಥವಾ ಹೊಸ ಆಹಾರ ಸಂಸ್ಕರಣಾ ಪರ್ಯಾಯವಾಗಿರಬಹುದು.

ಈ ಸಂಘಟಿತ ಉಪಕ್ರಮಗಳ ಮೂಲಕ, ಬಯೋ ಇ-೩ ನೀತಿಯು ಉದ್ಯೋಗದಲ್ಲಿ ಹೆಚ್ಚಳವನ್ನು ತರುತ್ತದೆ, ವಿಶೇಷವಾಗಿ ಶ್ರೇಣಿ-೨ ಮತ್ತು ಶ್ರೇಣಿ-೩ ನಗರಗಳಲ್ಲಿ, ಬಯೋಮಾಸ್ ಮೂಲಗಳ ಸಾಮೀಪ್ಯದಿಂದಾಗಿ ಜೈವಿಕ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಭಾರತದ ಆರ್ಥಿಕತೆ, ಪರಿಸರ ಮತ್ತು ಉದ್ಯೋಗದಲ್ಲಿ ಹೂಡಿಕೆ ಮಾಡುವ ಮೂಲಕ, ಈ ಸಮಗ್ರ ನೀತಿಯು ರಾಷ್ಟ್ರದ ‘ವಿಕಸಿತ ಭಾರತ’ ಸಂಕಲ್ಪಕ್ಕೆ ಕೊಡುಗೆ ನೀಡುತ್ತದೆ. ಪರಿಣಾಮಕಾರಿ ವಿಜ್ಞಾನ ನೀತಿಯಾಗಿ ಇದು ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಬಹುದು ಎಂಬುದನ್ನು ಎತ್ತಿ ತೋರಿಸುವ ಮಾನದಂಡವಾಗಿಯೂ ಕಾರ್ಯನಿರ್ವಹಿಸುತ್ತದೆ.

(ಲೇಖಕರು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಹಾಯಕ ಸಚಿವರು)

Leave a Reply

Your email address will not be published. Required fields are marked *