Sunday, 23rd June 2024

ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ನೀಲಿ

ತುಂಟರಗಾಳಿ

ಸಿನಿಗನ್ನಡ

ಕೆಲವು ವರ್ಷಗಳ ಹಿಂದೆ, ಬುರ್ಜ್ ಖಲೀಫಾದ ೧೪೮ನೇ ಮಹಡಿಯಲ್ಲಿ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದ ಟೈಟಲ್ ರಿವೀಲ್ ಆಗಿತ್ತು. ಅದನ್ನು ನೋಡಿ ಕನ್ನಡ ಚಿತ್ರರಂಗ ತುಂಬಾ ಎತ್ತರಕ್ಕೆ ಹೋಗಿದೆ ಎಂದು ಎಲ್ಲರೂ ಮಾತಾಡುತ್ತಿದ್ದರು. ಅಂದು ೨ ಸಾವಿರ ಅಡಿ ಎತ್ತರದ ವರ್ಚುವಲ್ ಪೋಸ್ಟರ್ ರಿಲೀಸ್ ಆಗಿತ್ತು. ಅಲ್ಲದೆ ಸುದೀಪ್ ಅವರ ೨೫ ವರ್ಷಗಳ ಸಿನಿ ಪಯಣದ ೩ ನಿಮಿಷದ ವಿಡಿಯೋ ಕೂಡಾ ಪ್ಲೇ ಆಗಿತ್ತು. ೩ ನಿಮಿಷಗಳ ಕಾಲ ಬುರ್ಜ್ ಖಲೀಫಾದಲ್ಲಿ ಕನ್ನಡ ಮತ್ತು ವಿಕ್ರಾಂತ್ ರೋಣನ ಜತೆ ಕಿಚ್ಚ ಸುದೀಪ್ ಅವರ ವೈಭವ ಕಂಡುಬಂದಿತ್ತು.

ಈ ಸಂದರ್ಭದಲ್ಲಿ ಕಿಚ್ಚನಿಗೆ ಚಿತ್ರರಂಗದ ಹಲವಾರು ಗಣ್ಯರು ಶುಭಕೋರಿದ್ದರು. ಆದರೆ ಇದರ ಜತೆಗೆ ಅಷ್ಟೆಲ್ಲಾ ಖರ್ಚು ಮಾಡಿ ಹಣ ವೇಸ್ಟ್ ಮಾಡಿ ದ್ದಾರೆ, ಅದನ್ನು ಬಡವರಿಗೆ ಕೊಡಬಹುದಾಗಿತ್ತು ಎಂಬ ಕುಹಕಗಳಿಗೇನೂ ಕಮ್ಮಿ ಇರಲಿಲ್ಲ. ಇಂಥವೆಲ್ಲ ಇದ್ದಿದ್ದೇ ಬಿಡಿ. ಹೇಳಿ ಕೇಳಿ ಚಿತ್ರರಂಗ ಅಂದ್ರೆ ವೈಭವಯುತ ರಂಗ. ಅಲ್ಲಿ ಹಣ ಖರ್ಚು ಮಾಡಿ ಹಣ ತೆಗೆಯೋದು ಒಂದು ಕಲೆ. ಅದಕ್ಕೂ ಕೊಂಕು ಮಾತಾಡಿದರೆ ಏನು ಹೇಳೋದು.

ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಅದೆಷ್ಟು ಜನ ಶ್ರೀಮಂತರು ತಮ್ಮ ಹಣವನ್ನು ನಾನಾ ಕಾರಣಗಳಿಗೆ ದುಂದುವೆಚ್ಚ ಮಾಡುತ್ತಿಲ್ಲ? ಇದೇ ಮಾತನ್ನು ಅವರೆಲ್ಲರಿಗೂ ಹೇಳಲಾಗುತ್ತದೆಯೇ. ಹೋಗಲಿ ಬಿಡಿ, ಇತ್ತೀಚೆಗೆ ರಾಕ್‌ಲೈನ್ ನಿರ್ಮಾಣ ಮತ್ತು ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಚಿತ್ರ ಕೂಡಾ ದುಬೈನಲ್ಲಿ ಕನ್ನಡ ಬಾವುಟ ಹಾರಿಸಿ ಸಂಭ್ರಮಿಸಿತ್ತು. ಇದು ಈ ಎರಡು ಸಿನಿಮಾಗಳಿಗೆ ಮಾತ್ರ ಸೀಮಿತ ಆಗಿಲ್ಲ. ಇಲ್ಲಿ ನಮ್ಮ ಕರ್ನಾಟಕದ ಬೆಳಗಾವಿಯ ಪಾಲಿಕೆಯ ಮುಂದೆ ಕನ್ನಡದ ಧ್ವಜ ಹಾರಿದರೆ ಮರಾಠಿಗರು ಕಿರಿಕ್ ಮಾಡುತ್ತಾರೆ. ಚೆನ್ನೈನಲ್ಲಿ ಕನ್ನಡ ಮಾತಾಡಿದರೆ ತಮಿಳರು ಕನ್ನಡಿಗರ ಜತೆ ಹೊಡೆದಾಡುತ್ತಾರೆ.

ಅಷ್ಟೇ ಯಾಕೆ, ನಮ್ಮ ಕರ್ನಾಟಕದಲ್ಲೂ ಹಿಂದಿ ಬೋರ್ಡ್ ಕಾಣಿಸಿದರೆ ನಾವು ಹಿಂದಿ ಹೇರಿಕೆ ಎನ್ನುತ್ತೇವೆ. ಆದರೆ ದುಬೈ ಜನ, ತಮ್ಮ ದೇಶದ ಪ್ರತಿಷ್ಠೆ ಗಳಲ್ಲಿ ಅತ್ಯುನ್ನತವಾದ ಸ್ಥಾನ ಹೊಂದಿರುವ ಬುರ್ಜ್ ಖಲೀ- ಕಟ್ಟಡ, ಇನ್ಯಾವುದೋ ದೇಶದ, ಒಂದು ರಾಜ್ಯದ ಧ್ವಜದ ಕೆಂಪು ಹಳದಿ ಬಾವುಟವನ್ನು ಹೊದ್ದು ಮಿನುಗುತ್ತಿದ್ದರೆ ಅದಕ್ಕೆ ಯಾವ ತಕರಾರನ್ನೂ ಮಾಡಲಿಲ್ಲ. ಬದಲಾಗಿ ಅದನ್ನು ಜತೆಯಾಗಿ ಸಂಭ್ರಮಿಸುತ್ತಾರೆ. ಇದು ನಿಜಕ್ಕೂ ಸಂತಸ ಮತ್ತು ಸೌಹಾರ್ದದ ಪ್ರತೀಕ. ಇದಕ್ಕಾಗಿ ದುಬೈ ಜನತೆಗೆ ಕನ್ನಡಿಗರು ಧನ್ಯವಾದ ಹೇಳಬೇಕಿದೆ.”

’ಕಾಮ’ನ್ ಮ್ಯಾನ್ 

ಏನ್ ಸ್ವಾಮಿ, ನಿಮ್ ಪೆನ್ ಡ್ರೈವ್ ಗಳು ಅಷ್ಟೊಂದ್ ಸೌಂಡ್ ಮಾಡ್ತಾ ಇವೆ?
– ಅಯ್ಯೋ, ಮಣ್ಣಿನ ಮೊಮ್ಮಗ ಅಂದ್ಮೇಲೆ ಉಳುಮೆ ಮಾಡಿರ್ತೀವಿ, ಅದ್ನೇ ದೊಡ್ಡದು ಮಾಡಿದ್ರೆ ಹೆಂಗೆ?

ಅಂದ್ರೆ ನಿಮ್ಮ ಪ್ರಕಾರ ಇದು ಸಣ್ ವಿಷ್ಯ. ನಿಮಗೆ ಇದು ಕೆಟ್ಟ ಹೆಸರು ತರುತ್ತೆ ಅಂತ ಅನ್ನಿಸಲ್ವ?
– ನೋಡೀ ಬ್ರದರ್, ನನ್ ಕಸಿನ್ ಬ್ರದರ್ ಎಷ್ಟೊಂದ್ ಸಿನಿಮಾ ಮಾಡಿದ. ಒಂದೂ ಹಿಟ್ ಆಗ್ಲಿಲ್ಲ. ನಂದು ನೋಡಿ ಸೂಪರ್‌ಹಿಟ್. ಕೆಟ್ಟ ಹೆಸರು ಎಲ್ಲಿ ಬಂತು. ಒಳ್ಳೇ ಹೆಸರೇ ಬಂದಿದೆ.

ಥೋ ಕರ್ಮ, ಹೋಗ್ಲಿ, ಆ ಪೆನ್ ಡ್ರೈವ್‌ನಲ್ಲಿ ಇರೋ ವಿಷ್ಯದ ಬಗ್ಗೆ ನಿಮ್ ಅಭಿಪ್ರಾಯ? 
– ಅಯ್ಯೋ ಅದು ಪೆನ್ ಡ್ರೈವ್ ಅಲ್ಲ, ಸೆಕ್ಸ್ ಡ್ರೈವ್. ವಿಷ್ಯ ಬಿಟ್ಟಾಕಿ.

ಅಲ್ರೀ, ನಿಮಗೆ ಈ ಥರ ನೇರವಾಗಿ ಹೇಳೋಕೆ ನಾಚಿಕೆ ಆಗಲ್ವಾ?
– ಅಷ್ಟೊಂದ್ ವಿಡಿಯೋಸ್ ಎಲ್ಲಾ ನೋಡಿದ್ಮೇಲೂ ಈ ಪ್ರಶ್ನೆ ಕೇಳ್ತೀರಲ್ಲ ನೀವು?

ನಂದ್ ಬಿಡಿ, ಜನ ಏನಂತಾರೆ ಅನ್ನೋ ಭಯನೂ ಇಲ್ವಾ ನಿಮಗೆ?
– ನೋಡ್ರೀ, ‘ಕಾಮ’ನ್‌ಮ್ಯಾನ್ ಸಾವಿರ ಹೇಳ್ತಾನೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳೋಕೆ ಆಗುತ್ತಾ. ಅದೇನೋ ಅಂತಾರಲ್ಲ, ‘ಕಾಮಾ’ಲೆ ಕಣ್ಣಿಗೆ ಲೋಕವೆಲ್ಲಾ
ನೀಲಿ ಅಂತ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಒಂದ್ ಸಲ ಕೆಲಸದ ನಿಮಿತ್ತ ಸ್ಪೇನ್‌ಗೆ ಹೋಗಿದ್ದ. ಅವನು ಅಲ್ಲಿ ತಿಂಗಳುಗಟ್ಟಲೇ ಇರಬೇಕಿತ್ತು. ಆದರೆ, ಇಂಡಿಯಾದ ಊಟಕ್ಕೆ ಅಡಿಕ್ಟ್ ಆಗಿದ್ದ ಖೇಮುಗೆ ಅಲ್ಲಿನ ಊಟ ಅಷ್ಟಾಗಿ ರುಚಿಸಿರಲಿಲ್ಲ. ಹಂಗಾಗಿ ವೀಕೆಂಡ್‌ಗಳಲ್ಲಿ ಅಲ್ಲಿರೋ ಎಲ್ಲಾ ರೆಸ್ಟೋರೆಂಟ್‌ಗಳನ್ನೂ ಹುಡುಕಿಕೊಂಡು ಹೋಗಿ ಅಲ್ಲಿ ಟೇಸ್ಟ್ ಹೇಗಿದೆ ಅಂತ ನೋಡ್ತಿದ್ದ. ಹಿಂಗೇ ಒಂದು ದಿನ ಅಲ್ಲಿ ‘ಫೈಟಿಂಗ್ ಬುಲ್’ ಅನ್ನೋ ರೆಸ್ಟೋರೆಂಟ್ ಕಣ್ಣಿಗೆ ಬಿತ್ತು. ಇವತ್ತು ಈ ಹೊಟೇಲ್‌ನ ಟೇಸ್ಟ್ ಟೆಸ್ಟ್ ಮಾಡೋಣ ಅಂದುಕೊಂಡು ಒಳಗೆ ಹೋಗಿ ಕೂತ. ವೇಟರ್ ಬಂದು ‘ಏನು ಕೊಡ್ಲಿ?’ ಅಂದ.

ಅದಕ್ಕೆ ಖೇಮು, ‘ಇವತ್ತಿನ ಸ್ಪೆಷಲ್ ಏನಿದೆ ತಗೊಂಡ್ ಬಾ’ ಅಂದ. ‘ಸರಿ’ ಅಂತ ಹೋದ ವೇಟರ್, ಒಂದು ಪ್ಲೇಟ್‌ನಲ್ಲಿ ಮೀಟ್ ತಂದಿಟ್ಟ. ಖೇಮು ಅದನ್ನು ತಿನ್ನೋಕೆ ಶುರುಮಾಡಿದ. ಮೊದಲ ಬಾರಿಗೆ ಖೇಮುಗೆ ಸ್ಪೇನ್ ಹೊಟೇಲ್‌ನ ಒಂದು ಡಿಷ್ ತುಂಬಾ ಇಷ್ಟ ಆಗಿಬಿಡ್ತು. ವೇಟರ್‌ನ ಕರೆದು ‘ಇದು ಯಾವ ಡಿಷ್?’ ಅಂತ ಕೇಳಿದ. ಅದಕ್ಕೆ ವೇಟರ್ ಹೇಳಿದ- ‘ಸರ್ ನಿಮಗೆ ಗೊತ್ತು, ಸ್ಪೇನ್‌ನಲ್ಲಿ ಬುಲ್ ಫೈಟಿಂಗ್ ಫೇಮಸ್ ಆಟ. ಇಲ್ಲಿ ಪ್ರತಿದಿನ ನಡೆಯುತ್ತೆ. ಇವತ್ತಿನ ಫೈಟರ್ ಸೋಲಿಸಿದ ಬುಲ್‌ನ ಟೆಸ್ಟಿಕಲ್ಸ್ ಇದು. ಟೆಸ್ಟಿಕಲ್ಸ್ -’ ಅಂದ. ಅದಕ್ಕೆ ಖೇಮು, ‘ಟೇಸ್ಟ್ ತುಂಬಾ ಚೆನ್ನಾಗಿದೆ.

ಇನ್ನೊಂದು ಪ್ಲೇಟ್ ಕೊಡು’ ಅಂದ. ಅದಕ್ಕೆ ವೇಟರ್, ‘ಇಲ್ಲ ಸರ್, ಪ್ರತಿದಿನ ಒಂದ್ ಫೈಟ್ ನಡೆಯೋದು, ಒಂದೇ ಬುಲ್ ಸಿಗೋದು, ಮತ್ತೆ ನಾಳೆನೇ ಈ ಡಿಷ್ ಸಿಗೋದು, ಇದೇ ಟೈಮಿಗೆ ಬಂದು ವೆಯ್ಟ್ ಮಾಡಿದ್ರೆ ಸಿಗುತ್ತೆ’ ಅಂದ. ಸರಿ, ಖೇಮು ಮರುದಿನ ಅದೇ ಸಮಯಕ್ಕೆ ಹೋಗಿ ಅದನ್ನೇ ಆರ್ಡರ್ ಮಾಡಿದ. ವೇಟರ್ ಪ್ಲೇಟ್ ತಂದಿಟ್ಟ. ಎಲ್ಲಾ ತಿಂದ ಮೇಲೆ ವೇಟರ್‌ನ ಕರೆದು, ‘ಟೇಸ್ಟೇನೋ ಚೆನ್ನಾಗಿತ್ತು. ಆದರೆ ನಿನ್ನೆ ನೀನು ಕೊಟ್ಟ ಪೀಸ್‌ಗಳ ಸೈಜ್ ತುಂಬಾ ದೊಡ್ಡದಿತ್ತು. ಇವತ್ತು ತುಂಬಾ ಸಣ್ಣವಿದ್ದವು, ಯಾಕೆ?’ ಅಂತ ಕೇಳಿದ. ಅದಕ್ಕೆ ವೇಟರ್ ಹೇಳಿದ- ‘ಏನ್ ಮಾಡೋದು ಸರ್, ಒಂದೊಂದ್ ಸಲ ಫೈಟ್‌ನಲ್ಲಿ ಬುಲ್ ಕೂಡಾ ಗೆಲ್ಲುತ್ತೆ’.

ಲೈನ್ ಮ್ಯಾನ್

ಐಪಿಎಲ್‌ನಲ್ಲಿ ಎರಡು ಸಲ ದೊಡ್ಡ ಸ್ಕೋರ್ ಮಾಡಿನೂ ಗೆಲ್ಲೋಕಾಗದ ಬೇಜಾರಲ್ಲಿರೋ ಕೆಕೆಆರ್ ತಂಡದ ಗೌತಮ್ ಗಂಭೀರ್
– ‘ಘಮ್’ ಬೀರ್

ಗೆದ್ದಾಗ ಎಗರಾಡುವ ಗಂಭೀರ್ ಸೋತಾಗ
– ‘ಗಂಭೀರ್’ ಈಸ್ ‘ಸೀರಿಯಸ್’

ಕೊಲ್ಕೊತ್ತಾ ‘ನೈಟ್’ ರೈಡರ್ಸ್ ತಂಡ ಸೋತಾಗ ಅದು
– ಕೊಲ್ಕೊತ್ತಾ ಬ್ಯಾಡ್ ‘ನೈಟ್’ ರೈಡರ್ಸ್

ಆರ್‌ಸಿಬಿ ಕಳೆದ ಪಂದ್ಯ ಗೆದ್ದಾಗ ಅನ್ನಿಸಿದ್ದು
– ಒಮ್ಮೊಮ್ಮೆ ಜನ ಕುಡುಕರನ್ನೂ ವಿಳಾಸ ಕೇಳುತ್ತಾರೆ. ಒಮ್ಮೊಮ್ಮೆ ಆರ್‌ಸಿಬಿ ಬೋಲರ್‌ಗಳಿಗೂ ವಿಕೆಟ್ಸ್ ಬೀಳುತ್ತವೆ

ಎಲ್ಲ ಅಂಪೇರ್ ನಿರ್ಧಾರಗಳೂ ‘ಥರ್ಡ್ ಅಂಪೇರ್’ ಹತ್ರ ಹೋಗ್ತಾ ಇವೆ ಅಂದರೆ ಅದರ ಅರ್ಥ ಏನು?
– ಆನ್ ಫೀಲ್ಡ್ ನಲ್ಲಿ ಮಾಡ್ತಿರೋದು ‘ಥರ್ಡ್ ಕ್ಲಾಸ್ ಅಂಪೇರಿಂಗ್’

ಕಾಂಗ್ರೆಸ್‌ಗೆ ವೋಟಾಕಿದವನು ಹೇಳಿದ್ದು

– ಎಲ್ಲರ ಥರ ಸೋಷಿಯಲ್ ಮೀಡಿಯಾದಲ್ಲಿ ನನ್ ಕೈ ಫೋಟೋನೂ ಹಾಕೋಣ ಅಂದ್ಕೊಂಡಿದ್ದೆ. ಆದ್ರೆ ಯಾರಿಗ್ ವೋಟ್ ಹಾಕಿದ್ದೀನಿ ಅಂತ
ಗೊತ್ತಾಗಿಬಿಡುತ್ತೆ ಅನ್ನೋ ಕಾರಣಕ್ಕೆ ಸುಮ್ನಾದೆ.

ಗೆಳೆಯರ ಮಾತು
‘ನೀನಿಷ್ಟೊತ್ತಿಗೆ ಒಂದ್ ಕಾರ್ ತಗೊಂಡಿರಬೇಕಿತ್ತು ಕಣೋ’ ‘ಏನ್ ಕಿಂಡಲ್ ಮಾಡ್ತಾ ಇದ್ದಿಯಾ?’ ‘ಒಳ್ಳೇದ್ ಹೇಳಿದ್ರೆ ಹಿಂಗಂತೀಯ ನೋಡು, ಹೇಳೋ ದನ್ನ ಸ್ಪೋರ್ಟಿವ್ ಆಗಿ ತಗೋಳ್ಳೋ’ ‘ಸ್ಪೋರ್ಟಿವ್ ಆಗಿ ತಗೊಳ್ಳೋಕೋದ್ರೆ ಸ್ಪೋರ್ಟ್ಸ್ ಕಾರೇ ತಗೋಬೇಕಾಗುತ್ತೆ, ಬ್ಯಾಡ ಬಿಡು’.

ಒಂದೇ ಹುಡುಗಿ ಮೇಲೆ ಕಣ್ಣಾಕಿರೋ ಇಬ್ಬರು ಹುಡುಗರು
– ಸಮಾನ ಲುಕ್ಕಿಗಳು

ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು
– ‘ಲಗೂ’ ಗುರು

Leave a Reply

Your email address will not be published. Required fields are marked *

error: Content is protected !!