ಸ್ವಾಸ್ಥ್ಯ ಸಂಪದ
ಡಾ.ಎಸ್.ಪಿ.ಯೋಗಣ್ಣ
yaganna55@gmail.com
ಮನುಷ್ಯನ ಬದುಕಿನ ಮೂಲ ಉದ್ದೇಶ ಸಂತೋಷವಾಗಿರಬೇಕೆಂಬುದು. ಅದಕ್ಕಾಗಿ ಅವನು ಏನೆಲ್ಲಾ ಮಾಡುತ್ತಾನೆ. ಸಾಮಾನ್ಯ ವಾಗಿ ಮನುಷ್ಯ ಅಪೇಕ್ಷಿಸುವ ಪ್ರಮುಖ ಸುಖಗಳಲ್ಲಿ ಜ್ಞಾನಸುಖ, ದೈಹಿಕ ಸುಖ, ಸಂತಾನ ಸುಖ, ಅಧಿಕಾರ ಸುಖ, ಸಂಪತ್ತಿನ ಸುಖ ಪ್ರಮುಖವಾದವುಗಳು.
ದೇಹದ ಕಾರ್ಯಗಳು ಸಹಜವಾಗಿ ಜರುಗಿದಾಗ, ಲೈಂಗಿಕ ಚಟುವಟಿಕೆಗಳು ಸುಖ ನೀಡು ತ್ತವೆ. ತನ್ನ ವಂಶಾಭಿವೃದ್ಧಿಯನ್ನು ಮುಂದುವರೆಸಲು ಮಕ್ಕಳನ್ನು ಪಡೆಯುವುದೂ ಸಹ ಸುಖವೇ. ತನ್ನ ಬದುಕಿಗಾಗಿ ಅಗತ್ಯ ಸಂಪತ್ತನ್ನು ಗಳಿಸಿದಾಗಲೂ ಸಂತೋಷವಾಗುತ್ತದೆ. ತಾನು ಹೇಳಿದಂತೆ ಬೇರೆಯವರು ಕೇಳಿದಾಗ, ತನ್ನ ಅಭಿಪ್ರಾಯಗಳಿಗೆ ಇತರರು ಮನ್ನಣೆ ನೀಡಿದಾಗಲೂ ಸಂತೋಷ ಉಂಟಾಗುತ್ತದೆ (ಅಧಿಕಾರ ಸುಖ). ಮನುಷ್ಯ ಜ್ಞಾನವನ್ನು ಸಂಪಾದಿಸಿಕೊಂಡಂತೆಲ್ಲ ತನಗೆ ಗೊತ್ತಿಲ್ಲದ ವಿಷಯ ಅರಿವಾದಾಗಲೂ ಸಂತೋಷ ವಾಗುತ್ತದೆ.
ಜ್ಞಾನಸುಖಕ್ಕೆ ಹೆಚ್ಚೆಚ್ಚು ಆಕರ್ಷಿತವಾಗುವುದರಿಂದ ತನಗೆ ಹೆಚ್ಚೆಚ್ಚು ಆನಂದ ಲಭಿಸು ತ್ತದೆಯೇ ವಿನಃ ಇತರರಿಗೆ ಯಾವ ಹಿಂಸೆ ಆಗುವುದಿಲ್ಲ. ಇತರರನ್ನು ಶೋಷಣೆ ಮಾಡದೆ, ಹಿಂಸಿಸದೆ ಎಷ್ಟನ್ನು ಬೇಕಾದರೂ ಪಡೆಯಬಹುದಾದ ಏಕೈಕ ಸುಖವಿದು. ಇನ್ನಿತರ ಮೂಲದ ಸುಖಗಳು ಹಾಗಲ್ಲ. ಹೆಚ್ಚೆಚ್ಚು ಅಪೇಕ್ಷಿಸಿದಂತೆ ಅನಾಹುತಗಳು ಖಂಡಿತ. ಜ್ಞಾನವನ್ನು ಇತರರಿಗೆ ಹಂಚುವುದರಿಂದಲೂ ತನಗೂ ಸಂತೋಷ ಲಭಿಸುತ್ತದೆ ಮತ್ತು ಪಡೆದವರೂ ಸಹ ಸಂತೋಷಪಡುತ್ತಾರೆ. ಅಂತಹ ವಿಶಿಷ್ಟ ಸುಖ ‘ಜ್ಞಾನಸುಖ’.
ವಿಶ್ವ ಪುಸ್ತಕ ದಿನ: ಪುಸ್ತಕಗಳು ಹಿಂದಿನ, ಇಂದಿನ ಮತ್ತು ಮುಂದಿನ ಪೀಳಿಗೆಗೆ ಜ್ಞಾನವನ್ನು ಶೇಖರಿಸಿಟ್ಟು ರವಾನಿಸುವ ‘ಜ್ಞಾನ ವಾಹಿನಿ’ಗಳು. ಪುಸ್ತಕಗಳನ್ನು ಉತ್ಪತ್ತಿ ಮಾಡುವ, ವಿತರಿಸುವ, ಓದಿಸುವ, ಸಂರಕ್ಷಿಸುವ ದಿಕ್ಕಿನಲ್ಲಿ ನಿರಂತರವಾಗಿ ಕಾರ್ಯ ಯೋಜನೆಗಳನ್ನು ರೂಪಿಸುವುದು ಅತ್ಯವಶ್ಯಕ. ಈ ದಿಕ್ಕಿನಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಪ್ರತಿವರ್ಷ ಏ.೨೩ರಂದು ವಿಶ್ವ ಪುಸ್ತಕ ದಿನವನ್ನು ವಿಶ್ವಾದ್ಯಂತ ಆಚರಿಸಿ ಪುಸ್ತಕ ಪ್ರೀತಿಯನ್ನು ಹುಟ್ಟಿಸುವ ಕಾರ್ಯವನ್ನು ೧೯೬೫ರಿಂದ ಮಾಡುತ್ತಿದೆ.
ಪ್ರಥಮವಾಗಿ ೧೯೬೫ರಲ್ಲಿ ಇಂಗ್ಲೆಂಡ್ ಮತ್ತು ಐರಿಲೆಂಡ್‌ನಲ್ಲಿ ಪ್ರಾರಂಭವಾದ ವಿಶ್ವ ಪುಸ್ತಕ ದಿನ ಎಲ್ಲಾ ದೇಶಗಳಲ್ಲೂ ಇಂದು ಆಚರಿಸಲಾಗುತ್ತಿದೆ. ಪ್ರತಿವರ್ಷ ದೇಶವೊಂದರ ಪಟ್ಟಣವನ್ನು ರಾಜಧಾನಿ ಎಂದು ಆಯ್ಕೆಮಾಡಿಕೊಂಡು ಪುಸ್ತಕಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾqಲಾಗುತ್ತಿದೆ. ಏ. ೨೩ ಹಲವಾರು ವಿಶ್ವದ ಶ್ರೇಷ್ಠ ಸಾಹಿತಿಗಳು ಹುಟ್ಟಿದ ಮತ್ತು ಮರಣ ಹೊಂದಿದ ದಿನವಾದುದರಿಂದ ಈ ದಿನವನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಬಾರೊನೆಸ್ ಗೈಲ್ ರಿಬ್ಯೂಕ್ ವಿಶ್ವ ಪುಸ್ತಕ ದಿನದ ಸಂಸ್ಥಾಪಕ. ಇದನ್ನು ವಿಶ್ವಪುಸ್ತಕ ಮತ್ತು ಪ್ರಕಾಶಕರ ದಿನವೆಂದೂ ಸಹ ಕರೆಯಲಾಗುತ್ತದೆ. ಪುಸ್ತಕ ದಿನಾಚರಣೆಗಳಿಗೆ ಸಂಬಂಧಿಸಿದಂತೆ ಪ್ರತಿವರ್ಷ ಘೋಷಣಾ ವಾಕ್ಯವೊಂದನ್ನು ಹೊರಡಿಸಿ, ಅದರ
ಆದರ್ಶಗಳನ್ನು ಪ್ರಪಂಚಾದ್ಯಂತ ಪ್ರಚುರಪಡಿಸಲಾಗುತ್ತದೆ. ಈ ವರ್ಷದ ಘೋಷಣಾ ವಾಕ್ಯ ‘ಓದುಗನಾಗಿರು’ ಎಂಬುದಾಗಿದ್ದು, ಪುಸ್ತಕ ಪ್ರೀತಿಯನ್ನು ಜನಸಾಮಾನ್ಯರಲ್ಲಿ ಹುಟ್ಟಿಸುವುದಾಗಿದೆ. ಪುಸ್ತಕೋದ್ಯಮ ನಡೆದು ಬಂದ ಹಾದಿ, ಪುಸ್ತಕಗಳನ್ನು ಏಕೆ ಓದಬೇಕು? ಹೇಗೆ ಓದಬೇಕು? ಓದು ಎಂದರೇನು? ಹೇಗೆ ಪುಸ್ತಕಗಳನ್ನು ಬರೆಯಬೇಕು? ಹೇಗೆ ಸಂರಕ್ಷಿಸಬೇಕು? ಓದುವ ಕ್ರಿಯೆ ಮೆದುಳಿನಲ್ಲಿ ಹೇಗೆ ಜರಗುತ್ತದೆ? ಓದಿನಿಂದಾಗುವ ಪ್ರಯೋಜನಗಳೇನು? ಓದಿನಿಂದ ಸಂತೋಷ ಗಳಿಕೆ ಹೇಗೆ? ಪುಸ್ತಕೋದ್ಯಮದ ಸವಾಲುಗಳೇನು? ಎಂಬಿತ್ಯಾದಿ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.
ಓದು ಎಂದರೇನು?: ಪರಿಸರದಲ್ಲಿರುವ ಎಲ್ಲವುಗಳ ಬಗ್ಗೆ ಪಂಚೇಂದ್ರಿಯಗಳಾದ ದೃಶ್ಯ, ಶ್ರವಣ, ಸ್ಪರ್ಶ, ರುಚಿ, ವಾಸನೆಗಳ ಮೂಲಕ ಸತ್ಯ ಸಂಗತಿಗಳನ್ನು ಮೆದುಳು ಗ್ರಹಿಸಿ, ಅವುಗಳನ್ನು ಅರ್ಥಮಾಡಿಕೊಂಡು ನೋಂದಾಯಿಸಿಕೊಂಡು, ಅವಶ್ಯಕತೆ ಬಿದ್ದಾಗ ಜ್ಞಾಪಿಸಿಕೊಳ್ಳುವ ಬಹು ಅಂಶಗಳಾಧಾರಿತ ಕ್ರಿಯೆಯಿದು. ದೃಶ್ಯದ ಮೂಲಕ ಬಂದ ಮಾಹಿತಿ ಮೆದುಳಿನ ಆಕ್ಸಿಪೀಟಲ್
ಕಾರ್ಟೆಕ್ಸ್‌ಗೂ, ಶ್ರವಣದ ಮೂಲಕ ಬಂದ ಮಾಹಿತಿ ಮೆದುಳಿನ ಟೆಂಪೋರಲ್ ಲೋಬಿಗೂ, ಸ್ಪರ್ಶದ (ಚರ್ಮ) ದ ಮೂಲಕ ಬಂದ ಮಾಹಿತಿ ಪೆರೈಟಲ್ ಲೋಬಿಗೂ, ರುಚಿಯ ಮೂಲಕ ಬಂದ ಮಾಹಿತಿ ಇನ್‌ಸ್ಯೂಲ ಕಾರ್ಟೆಕ್ಸ್‌ಗೂ ಮತ್ತು ವಾಸನೆಯಿಂದ
ಬಂದ ಮಾಹಿತಿ ಪೈರಿ-ರಂ ಮತ್ತು ಹಿಪ್ಪೊಕಾಂಪಸ್ ಗಳಿಗೂ ಮೊದಲು ರವಾನೆಯಾಗುತ್ತವೆ.
ಅಲ್ಲಿಂದ ಮಾಹಿತಿಗಳು ಮೆದುಳಿನ ಸಹಕಾರಿತ ಕಾರ್ಟೆಕ್ಸ್ ಗಳಿಗೆ ರವಾನೆಯಾಗಿ, ಮೆದುಳಿನ ಪೂರ್ಣ ಕಾರ್ಟೆಕ್ಸ್‌ನ ಸಹಾಯದಿಂದ ಸಂಬಂಧಿಸಿದ ಮಾಹಿತಿಗಳನ್ನು ಅರ್ಥಮಾಡಿಕೊಳ್ಳಲಾಗುತ್ತದೆ. ಹೀಗೆ ಅರ್ಥ ಮಾಡಿಕೊಂಡ ಮಾಹಿತಿಗಳು ತಾತ್ಕಾಲಿಕವಾಗಿ ಪ್ಪೊಕಾಂಪಸ್‌ನಲ್ಲಿ ಶೇಖರಣೆಯಾಗುತ್ತವೆ. ಪದೇಪದೇ ಮಾಹಿತಿಗಳು ಹಿಪ್ಪೊಕಾಂಪಸ್‌ಗೆ ರವಾನೆಯಾಗುತ್ತಿದ್ದಲ್ಲಿ ಅವು ಅಂತಿಮ ವಾಗಿ -ಂಟಲ್ ಲೋಬಿನಲ್ಲಿ ಶಾಶ್ವತವಾಗಿ ಶೇಖರಣೆಯಾಗುತ್ತವೆ.
ಮಾಹಿತಿಗಳ ರವಾನೆ ವಿದ್ಯುತ್ ಸಂದೇಶಗಳ ಮಾದರಿಯಲ್ಲಿದ್ದು ಶೇಖರಣೆಯಾಗಿ ನೋಂದಾಯಿತವಾಗುವ ಸಂದರ್ಭದಲ್ಲಿ ಜೈವಿಕ ರಾಸಾಯನಿಕಗಳ ರೂಪಕ್ಕೆ ಪರಿವರ್ತನೆಯಾಗುತ್ತವೆ. ಈ ಕ್ರಿಯೆಯಲ್ಲಿ ಅಸಿಟೈಲ್‌ಕೋಲಿನ್ ಪ್ರಮುಖ ಪಾತ್ರ ವಹಿಸುತ್ತದೆ.
ಜ್ಞಾಪನ ಮಾಡಿಕೊಳ್ಳುವಾಗ ಜೈವಿಕ ರಾಸಾಯನಿಕ ರೂಪದಲ್ಲಿ ಸಂಗ್ರಹವಾಗಿದ್ದ ಮಾಹಿತಿಗಳು ವಿದ್ಯುತ್ ಸೂಚಕಗಳಾಗಿ ಪರಿವರ್ತನೆಯಾಗಿ ನೆನಪಿಗೆ ಬರುತ್ತವೆ. ಓದಿ ಅರ್ಥಮಾಡಿಕೊಂಡ ವಿಷಯವನ್ನು ಅವಶ್ಯಕತೆ ಬಿದ್ದಾಗ ಬರವಣಿಗೆ ಮೂಲಕ, ಮಾತಿನ ಮೂಲಕ, ಚಿಹ್ನೆಗಳ ಮೂಲಕ, ಭಾವ ಪ್ರದರ್ಶನಗಳ ಮೂಲಕ ವ್ಯಕ್ತಮಾಡಲಾಗುವುದು.
ಓದುವ ಕ್ರಿಯೆಯಲ್ಲಿ ಮೆದುಳಿನ ಬಹುಭಾಗಗಳು ಪಾಲುಗೊಂಡಲ್ಲಿ, ಓದು ನೋಂದಣಿಯಾಗುವ, ಅರ್ಥವಾಗುವ ಕ್ರಿಯೆಗಳೂ ಸಹ ವೃದ್ಧಿಯಾಗುವುದರಿಂದ, ಓದುವಾಗ ಮೆದುಳಿನ ಬಹು ಭಾಗಗಳು ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಓದಬೇಕು. ಓದಲು ಶಬ್ದ, ಪದಗಳು, ಮಾತಿನ ಸ್ಪಷ್ಟತೆ, ಪದಸಂಪತ್ತುಗಳ ಅರಿವು ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅತ್ಯವಶ್ಯಕ. ದೃಶ್ಯ ಮಾಧ್ಯಮದ ಓದುವಿಕೆ ಜನ್ಮ ದತ್ತವಾದ ಮೆದುಳಿನ ಕ್ರಿಯೆಯಾದರೂ ಅದು ವ್ಯಕ್ತವಾಗಲು ತರಬೇತಿ ಅತ್ಯವಶ್ಯಕ.
ದೃಶ್ಯ ಮಾಧ್ಯಮದಿಂದ ಓದುವಿಕೆ ಮತ್ತು ಬರವಣಿಗೆಯ ಮೂಲಕ ಮಾಹಿತಿಯನ್ನು ವ್ಯಕ್ತ ಮಾಡುವ ಕ್ರಿಯೆಗಳಿಗೆ ವಿಶೇಷ ತರಬೇತಿ ಅತ್ಯವಶ್ಯಕ. ಇಲ್ಲದಿದ್ದಲ್ಲಿ ಇವು ವ್ಯಕ್ತವಾಗುವುದಿಲ್ಲ. ಇನ್ನಿತರ ಪಂಚೇಂದ್ರಿ ಯಗಳ ಮೂಲಕ ರವಾನೆಯಾಗುವ ಮಾಹಿತಿಗಳಿಗೆ ವಿಶೇಷ ತರಬೇತಿ ಅವಶ್ಯಕವಿಲ್ಲ. ಉದಾ: ಶ್ರವಣ, ರುಚಿ, ಚರ್ಮ(ಸ್ಪರ್ಶ), ವಾಸನೆಗಳ ಮೂಲಕ ರವಾನೆ ಯಾಗುವುದಕ್ಕೆ ವಿಶೇಷ ತರಬೇತಿ ಅವಶ್ಯಕವಿಲ್ಲ. ಮಾಹಿತಿಯನ್ನು ಅರ್ಥಮಾಡಿಕೊಳ್ಳುವಿಕೆ, ನೋಂದಣಿಯಾಗುವಿಕೆ, ಅರ್ಥ ಮಾಡಿಕೊಳ್ಳುವಿಕೆ, ಅವಶ್ಯಕತೆ ಬಿದ್ದಾಗ ಜ್ಞಾಪಿಸಿಕೊಂಡು ವ್ಯಕ್ತಮಾಡುವಿಕೆ ಇವೆಲ್ಲವೂ ‘ಓದುವಿಕೆ’ಯ ಭಾಗಗಳಾಗಿವೆ.
ಪುಸ್ತಕ ಸಂಸ್ಕೃತಿ: ಭಾರತೀಯ ವೇದಗಳು ಇಡಿ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನವಾದ, ಮೊದಲ ಜ್ಞಾನ ಭಂಡಾರ ಗಳಾಗಿದ್ದು, ಇವು ಮೊದಲು ಶ್ರವಣ ಮಾಧ್ಯಮದಲ್ಲಿದ್ದು, ನಂತರ ಕ್ರಿ.ಪೂ. ೧೫೦೦-೧೨೦೦ರಲ್ಲಿ ಅಂದರೆ ಸುಮಾರು ೩೫೦೦
ವರ್ಷಗಳ ಹಿಂದೆ ವ್ಯಾಸ ಮಹರ್ಷಿ ಇವುಗಳನ್ನು ತಾಳೆಗರಿಗಳ ಮೇಲೆ ಬರೆದಿಟ್ಟಿದ್ದು, ವೇದಗಳು ಇಡಿ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನವಾದ ಮೊದಲ ಲಿಖಿತ ಜ್ಞಾನಭಂಡಾರಗಳಾಗಿವೆ ಎಂಬುದು ನಿರ್ವಿವಾದ.
ಅನಂತರ ೧೪ನೇ ಶತಮಾನದಲ್ಲಿ ಜರ್ಮನಿಯ ಜುಹಾನ್ ಗುಟೆನ್ ಬರ್ಗ್ ಎಂಬಾತ ಪ್ರಿಂಟಿಂಗ್ ಮೊಳೆಗಳನ್ನು ಕಂಡುಹಿಡಿದ ನಂತರ ಕಾಗದದ ಮೇಲೆ ಮುದ್ರಣ ಮಾಡುವಿಕೆ ಪ್ರಾರಂಭವಾಗಿರುತ್ತದೆ. ೧೮ನೆಯ ಶತಮಾನದಲ್ಲಿ ಭಾರತದಲ್ಲಿ ಮುದ್ರಣ ಪ್ರಾರಂಭವಾಗಿ ಪುಸ್ತಕೋದ್ಯಮ ಚಾಲ್ತಿಗೆ ಬಂದಿರುತ್ತದೆ. 20ನೇಯ ಶತಮಾನದಲ್ಲಿ ಡಿಜಿಟಲ್ ಆಂದೋಲನ ಪ್ರಾರಂಭ ವಾಗಿದ್ದು, ಮಾಹಿತಿಗಳನ್ನು ಸ್ಕ್ರೀನ್ ಇತ್ಯಾದಿಗಳ ಮೇಲೆ ಸೆರೆ ಹಿಡಿದು ಶೇಖರಿಸುವ, ಓದುವುದು ಸಾಧ್ಯವಾಗಿದೆ.
ಪುಸ್ತಕ ಮತ್ತು ಡಿಜಿಟಲ್ ಓದುವಿಕೆ: ಜ್ಞಾನ ಡಿಜಿಟಲ್‌ನಲ್ಲಿ ಲಭ್ಯವಾದ ನಂತರ ಸ್ಕ್ರೀನ್, ವಾಟ್ಸ್ ಆಪ್ ಇತ್ಯಾದಿಗಳ ಮೂಲಕ ಓದುವಿಕೆ ಶರವೇಗದಲ್ಲಿ ಬೆಳೆಯುತ್ತಿದ್ದು, ಪುಸ್ತಕದ ಓದುವಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುತ್ತದೆ. ಪುಸ್ತಕೋದ್ಯಮ
ಮತ್ತು ಪುಸ್ತಕಗಳ ಓದುವಿಕೆ ಕುಸಿಯುತ್ತಿದ್ದು, ಡಿಜಿಟಲ್ ಓದುವಿಕೆಗೆ ಜನಸಾಮಾನ್ಯರು ಶರವೇಗದಲ್ಲಿ ಶರಣಾಗುತ್ತಿದ್ದಾರೆ. ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಬೆರಳ ತುದಿಯಲ್ಲಿಯೇ ಶೀಘ್ರವಾಗಿ ಮಾಹಿತಿ ಲಭ್ಯವಾಗುವಿಕೆ, ಸುಲಭವಾಗಿ ರವಾನಿಸ ಲಾಗುವಿಕೆ ಮತ್ತು ಹೆಚ್ಚು ಮಾಹಿತಿಗಳನ್ನು ಅತ್ಯಂತ ಕಡಿಮೆ ವಿಸ್ತೀರ್ಣದಲ್ಲಿ ಶೇಖರಣೆ ಮಾಡುವಿಕೆ, ಬೇಕೆಂದಾಗ ಕಾಗದದ ಪ್ರತಿಗಳನ್ನು ಪಡೆಯುವಿಕೆ ಇವು ಡಿಜಿಟಲ್ ಮಾಹಿತಿಯ ಉಪಯೋಗಗಳಾಗಿದ್ದು, ಜನಪ್ರಿಯತೆಗೆ ಪ್ರಮುಖ ಕಾರಣವಾಗಿವೆ.
ದುಬಾರಿ ಬೆಲೆ, ತೂಕ, ಶೇಖರಣೆ ಸಮಸ್ಯೆ, ರವಾನಿಸುವ ತೊಂದರೆಗಳು ಇವು ಪುಸ್ತಕದ ಸಮಸ್ಯೆಗಳಾಗಿದ್ದು, ಪುಸ್ತಕಗಳ ಬಗ್ಗೆ
ಯುವಕರಿಗೆ ತಿರಸ್ಕಾರ ಬರಲು ಕಾರಣವಾಗಿವೆ.
ಪುಸ್ತಕ ಓದುವಿಕೆಯೇ ಶ್ರೇಷ್ಠ: ಕಾರ್ಯಾತ್ಮಕ ಎಂಆರ್‌ಐ ಅನ್ನು ಉಪಯೋಗಿಸಿ ಪುಸ್ತಕ ಓದುವಾಗ ಮತ್ತು ಡಿಜಿಟಲ್ ಓದುವಾಗ ಓದುವಿಕೆಯ ವಿವಿಧ ಹಂತಗಳಲ್ಲಿ ಮೆದುಳಿನಲ್ಲಾಗುವ ಕ್ರಿಯೆಯ ವ್ಯತ್ಯಾಸಗಳನ್ನು ವೈಜ್ಞಾನಿಕವಾಗಿ ಗುರು
ತಿಸಲಾಗಿದೆ. ಡಿಜಿಟಲ್ ಓದುವಿಕೆಯಲ್ಲಾಗುವ ಸ್ಕ್ರೀನ್ ಚಲನೆ, ಬೆಳಕಿನ ಕಿರಣಗಳ ಪರಿಣಾಮ, ಪುಟಗಳಿಲ್ಲದಿರುವಿಕೆ, ಪುಟ ಗಳನ್ನು ತಿರುಗಿಸುವ ಕ್ರಿಯೆ ಇಲ್ಲದಿರುವಿಕೆಗಳ ಕಾರಣದಿಂದ ಓದುವಿಕೆಯ ಹಂತಗಳ ಕ್ರಿಯೆಗಳು ಅದರಲ್ಲೂ ನೋಂದಣಿ ಮತ್ತು ಅರ್ಥಮಾಡಿಕೊಳ್ಳುವಿಕೆ ಕ್ರಿಯೆಗಳು ಇವೆಲ್ಲ ಪುಸ್ತಕ ಓದುವಿಕೆಗಿಂತ ದುರ್ಬಲ ಎಂಬುದು ಸಾಬೀತಾಗಿರುತ್ತದೆ.
ಹಾಗೂ ಮನಸ್ಸು ಮತ್ತು ಕಣ್ಣುಗಳಿಗೆ ಅತೀತ ಸಂಕಟವಾಗುವುದನ್ನು ಗುರುತಿಸಲಾಗಿದೆ. ಪುಸ್ತಕ ಓದುವಿಕೆಯಲ್ಲಿ ಕೈಗಳಲ್ಲಿ ಪುಸ್ತಕವನ್ನು ಹಿಡಿದುಕೊಳ್ಳುವುದರಿಂದ, ಪುಟಗಳನ್ನು ತಿರುಗಿಸುವುದರಿಂದ ಶ್ರವಣ ಮತ್ತು ದೃಶ್ಯ ಮಾಧ್ಯಮಗಳ ಜತೆಗೆ ಸ್ಪರ್ಶ ಮಾಧ್ಯಮವೂ ಸಹ ಜಾಗೃತಗೊಂಡು ಪೆರೈಟಲ್ ಲೋಬು ಸಹ ಪಾಲುಗೊಳ್ಳುತ್ತದೆ ಹಾಗೂ ಕಾಗದದ ವಾಸನೆಯೂ ಸಹ ವಾಸನೆಯ ಮೆದುಳನ್ನು ಜಾಗೃತಗೊಳಿಸುವುದರಿಂದ, ಪುಸ್ತಕದ ಓದಿನಲ್ಲಿ ಮೆದುಳಿನ ಬಹು ಭಾಗಗಳು ಪಾಲುಗೊಳ್ಳುವುದರಿಂದ ಓದುವಿಕೆಯ ವಿವಿಧ ಹಂತಗಳು ಸಬಲವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ದೃಢಪಟ್ಟಿರುತ್ತದೆ.
ಹೇಗೆ ಓದಬೇಕು?: ಓದುವುದರಿಂದ ವಿಷಯಗಳು ಮೆದುಳಿನಲ್ಲಿ ಶಾಶ್ವತವಾಗಿ ನೋಂದಣಿಯಾಗಿ ಅವಶ್ಯಕತೆ ಬಿದ್ದಾಗ ಜ್ಞಾಪಕಕ್ಕೆ ಬರಬೇಕು. ಹಾಗಾಗ ಬೇಕಾದ್ದಲ್ಲಿ ವೈಜ್ಞಾನಿಕವಾಗಿ ಓದಬೇಕು. ಪ್ರಶಾಂತ ಸ್ಥಳದಲ್ಲಿ ಸಹಜ ಬೆಳಕಿರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಧ್ಯಾನಾಸಕ್ತರಾಗಿ ಓದಿ. ಅಂದರೆ ಏನನ್ನು ಓದುತ್ತೀರೋ ನಿಮ್ಮ ಮನಸ್ಸು ಅದರ ಮೇಲೆ ಮಾತ್ರ ಕೇಂದ್ರೀ ಕೃತವಾಗಿರಲಿ.
೪೫ ನಿಮಿಷಗಳಿಗೊಮ್ಮೆ ವಿಶ್ರಾಂತಿ ಪಡೆಯಿರಿ. ಮುಖ್ಯ ವಿಷಯಗಳನ್ನು ಅಡ್ಡಗೆರೆ ಹಾಕಿ ಗುರುತುಮಾಡಿ. ಪುಟಗಳನ್ನು ತಿರುವಿ ಹಾಕುವಾಗ ಅದರ ಪ್ರತಿ ನಿಮ್ಮ ಮನಸ್ಸಿನಲ್ಲಿ ಉಳಿಯುವ ಹಾಗೆ ನಿಧಾನವಾಗಿ ತಿರುಗಿಸಿ. ಪ್ಯಾರ ಮತ್ತು ತಲೆಬರಹಗಳನ್ನು ಹೆಚ್ಚು
ಗಮನಿಸಿ, ಚೆನ್ನಾಗಿ ನಿದ್ರೆಮಾಡಿ, ಧೂಮಪಾನ, ಮದ್ಯಪಾನಗಳಿಂದ ದೂರವಿರಿ, ಮಧ್ಯೆ ಸಂಗೀತ ಕೇಳಿ. ಪ್ರಾತಃಕಾಲ ಓದಲು ಸಕಾಲ. ಓದಿದ ವಿಷಯಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಿ.
ಮೌನವಾಗಿ ಓದುವುದಕ್ಕಿಂತ ಶಬ್ದ ಮಾಡಿ ಓದುವುದರಿಂದ ಚೆನ್ನಾಗಿ ಅರ್ಥವಾಗುತ್ತದೆ ಮತ್ತು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ ಎಂಬುದು ವೈಜ್ಞಾನಿಕ. ಕೈಯಲ್ಲಿ ಪುಸ್ತಕವನ್ನು ಹಿಡಿದು ಓದಬೇಕು. ಪುಸ್ತಕದ ಭಾರವೂ ಸಹ ಮೆದುಳಿನ ಮೇಲೆ ಪರಿಣಾಮಬೀರುತ್ತದೆ. ಮೊದಲು ಪುಸ್ತಕವನ್ನು ಮೇಲ್ಮೈ ಆಗಿ ಓದಿ ಪುಸ್ತಕದ ತಿರುಳನ್ನು ಸಮಗ್ರವಾಗಿ ತಿಳಿದ ನಂತರ ಪ್ರತಿ ಯೊಂದು ವಾಕ್ಯವನ್ನು ಆಳವಾಗಿ ಅರ್ಥೈಸಿಕೊಂಡು ಓದುವುದು ಸೂಕ್ತ.
ಪುಸ್ತಕಗಳು ಹೇಗಿರಬೇಕು?: ಪುಸ್ತಕಗಳು ನೈಜ ಸಂಗತಿಗಳನ್ನೊಳಗೊಂಡಿರಬೇಕು. ಸುಂದರವಾಗಿ ಆಕರ್ಷಣೀಯವಾಗಿರಬೇಕು. ವಿಷಯಗಳ ನಿರೂಪಣೆ ಸರಳವಾಗಿ ಅರ್ಥವಾಗುವ ಹಾಗೆ ಸುಲಭ ಭಾಷೆಯಲ್ಲಿರಬೇಕು. ಜ್ಞಾನಸಂಪಾದನೆ, ಜ್ಞಾಪಕ ಶಕ್ತಿ ಮತ್ತು ಕೇಂದ್ರೀಕರಿಸುವ ಶಕ್ತಿ ವೃದ್ಧಿ, ಮಾನಸಿಕ ಒತ್ತಡ ನಿವಾರಣೆ, ಮೆದುಳಿಗೆ ವ್ಯಾಯಾಮ, ಓದುವಿಕೆಯ ಸಂತೋಷ, ಜೀವನೋ ತ್ಸಾಹ, ಮನೋರಂಜನೆ, ನಿದ್ರೆ ವೃದ್ಧಿ, ಸೃಜನಶೀಲತೆ, ಇತ್ಯಾದಿಗಳು ಓದಿನ ಉಪಯೋಗ.
ಪುಸ್ತಕೋದ್ಯಮ: ಲೇಖಕರು, ಪ್ರಕಾಶಕರು ಮತ್ತು ಮಾರಾಟಗಾರರು ಪುಸ್ತಕೋದ್ಯಮದ ಮೂರು ಕಂಬಗಳಿದ್ದಂತೆ. ಲೇಖಕರು ನೈಜ ಸಂಗತಿಯನ್ನುಳ್ಳ ಸಮಗ್ರ ದೃಷ್ಟಿಕೋನವುಳ್ಳ, ಸಾಮಾಜಿಕ ಶಾಂತಿಯನ್ನು ಕಾಪಾಡುವ, ವಿಷಯಗಳನ್ನು ಮಾತ್ರ ಬರೆಯ ಬೇಕು. ಪುಸ್ತಕೋದ್ಯಮವು ಬಹು ದುಬಾರಿಯಾಗಿದ್ದು, ಪುಸ್ತಕಗಳ ಮಾರಾಟವೂ ಕ್ಷೀಣಿಸುತ್ತಿದೆ. ಸರಕಾರಗಳು ಕುಸಿಯು ತ್ತಿರುವ ಪುಸ್ತಕೋದ್ಯಮಕ್ಕೆ ಚಿಕಿತ್ಸೆ ನೀಡಬೇಕಾಗಿದೆ. ಕೇಂದ್ರ ಸರಕಾರ ಒಂದು ಭಾಷೆಯ ಪುಸ್ತಕಗಳನ್ನು ಇನ್ನಿತರ ಭಾಷೆಗಳಿಗೆ ಅನುವಾದ ಮಾಡುವ ಕಾರ್ಯವನ್ನು ಹೆಚ್ಚಿಸಬೇಕಾಗಿದೆ. ಡಿಜಿಟಲ್ ಓದನ್ನು ಪ್ರಥಮ ಆದ್ಯತೆಯಾಗಿ ಓದುವುದನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಕಾನೂನನ್ನು ರೂಪಿಸುವ ಅವಶ್ಯಕತೆ ಇದೆ.
ಪುಸ್ತಕೋದ್ಯಮವನ್ನು ಪ್ರೋತ್ಸಾಹಿಸಿ ಪುಸ್ತಕ ಪ್ರೇಮವನ್ನು ಹೆಚ್ಚಿಸಿ ಪ್ರತಿಯೊಬ್ಬರನ್ನೂ ಓದುಗನನ್ನಾಗಿ ಪರಿವರ್ತಿಸಿ, ಜ್ಞಾನಸುಖವನ್ನು ವೃದ್ಧಿಸುವುದರಿಂದ ಮಾತ್ರ ಸಾಮಾಜಿಕ ಶಾಂತಿ ಸಾಧ್ಯ.