Sunday, 15th December 2024

ಬುಕ್ ಮೈ ಶೋನಲ್ಲಿ ಎವರ್‌ ಗ್ರೀನ್‌ ಸಿನೆಮಾ !

ತುಂಟರಗಾಳಿ

ಸಿನಿಗನ್ನಡ

ದರ್ಶನ್ ಅವರಕ್ರಾಂತಿ ಸಿನಿಮಾ ರಿಲೀಸ್ ಆಗಿದೆ. ಆದರೆ ಅವರು ಅಂದುಕೊಂಡ ಹಾಗೆ ಸಿನಿಮಾ ಬಂದಿಲ್ಲ. ಹಂಗೆ ಥಿಯೇಟರಿಗೆ ಜನ
ಕೂಡ ಬಂದಿಲ್ಲ. ಅವತ್ತೇ ನಡೆದ ಹರಿಪ್ರಿಯಾ, ವಸಿಷ್ಠ ಸಿಂಹ ಮದುವೆಗೇ ಇದಕ್ಕಿಂತ ಜಾಸ್ತಿ ಜನ ಬಂದಿದ್ರು ಅಂತ ಜನ ಜೋಕ್ ಮಾಡುವಷ್ಟರ
ಮಟ್ಟಕ್ಕೆ ಕ್ರಾಂತಿ ಬಂದು ನಿಂತಿದೆ.

ಆದ್ರೆ, ಪ್ರೈವೇಟ್ ಶಾಲೆಗಳು ಲೂಟಿ ಮಾಡ್ತವೆ ಅಂತ ಹೇಳೋ ಈ ಸಿನಿಮಾದ ೧೦೦ ರು. ಟಿಕೆಟ್‌ಗೆ ೨೦೦ ರು. ಸೀಲ್ ಹಾಕಿ ಮಾರ್ತಾ ಇರೋದು ವಿಶೇಷ. ಅದ್ಸರಿ, ದರ್ಶನ್ ಅವರ ಕಥೆ ಏನು ಅಂತ ಕೇಳಿದ್ರೆ, ಅಯ್ಯೋ ಲೈಟ್ ಬಾಯ್ ಆಗಿzರು ಬಿಡಿ ಅಂತ ಲೈಟ್ ಆಗಿ ತಗೋಳ್ಳೋಕಾಗುತ್ತ? ಅಂತ ಮಾಧ್ಯಮಗಳು ಇವರ ಅಸಹ್ಯ ಮಾತುಗಳನ್ನು ಕೇಳಿ ದೂರ ಇಟ್ರು. ಆದ್ರೆ, ಈಗ ದರ್ಶನ್ ಹಾಕ್ಕೊಂಡ್ ಸಿನಿಮಾ ಮಾಡೋರಿಗೆ ದೊಡ್ಡ ತಲೆನೋವು. ಮೀಡಿಯಾ ಸಪೋರ್ಟ್ ಇಲ್ಲ, ಅಭಿಮಾನಿಗಳನ್ನ ಬಿಟ್ಟು ಬೇರೆ ಪ್ರೇಕ್ಷಕರೂ ದರ್ಶನ್ ಸಿನಿಮಾ ನೋಡೋಕ್ ಆಸಕ್ತಿ ತೋರಿಸ್ತಾ ಇಲ್ಲ.

ಬರೀ ಅಭಿಮಾನಿಗಳನ್ನು ನಂಬಿಕೊಂಡು ಸಿನಿಮಾ ಮಾಡೋಕಾಗುತ್ತ…ಅವರೇನೋ ತಮ್ಮವ ರಿಗೆಲ್ಲ ತಾವೇ ಟಿಕೆಟ್ ಬುಕ್ ಮಾಡಿಸಿ ೨ ದಿನ ಓಪನಿಂಗ್ ಕೊಡಿಸಬಹುದು. ಅದರಿಂದ ಹಿಟ್ ಆಗೋಕಾಗುತ್ತ ಅಂತ ಎಲ್ಲರ ಪ್ರಶ್ನೆ. ಕಂಡವರ ಸಮಾಽ ಹತ್ರ, ಬೇರೆ ಹೀರೋಗಳ ಪ್ರೋಗ್ರಾಮ್
ನಡೆಯೋ ಹತ್ರ ಹೋಗಿ ‘ಡಿ ಬಾಸ್’ ಅಂತ ಕೂಗೋರಿಗೆ ಈಗಾಗ್ಲೇ ಸಾಧು ಕೋಕಿಲ, ಧನಂಜಯ ಮುಂತಾದವರು ನಾಜೂಕಾಗೆ ಕೌಂಟರ್ ಕೊಟ್ಟಿದ್ದಾರೆ.

ಆದ್ರೆ, ಅಲ್ಲಿ ಹೋಗಿ ಡಿ ಬಾಸ್ ಅಂತ ಕೂಗೋರು ಇಲ್ಲಿ ಬಂದು ಸಿನಿಮಾನಾದ್ರೂ ನೋಡಿದ್ರೆ ಕ್ರಾಂತಿ ಇನ್ನೊಂದೆರಡು ದಿನ ಥಿಯೋಟರ್‌ನಲ್ಲಿ ಇರಬಹುದೇನೋ. ಇದರ ಜತೆಗೆ, ಈಗ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಪಕ್ಷಿ ಬಗ್ಗೆ ಕೇಸ್ ಆಗಿದೆ. ಇದೆಲ್ಲ ನೋಡಿದ್ರೆ, ದರ್ಶನ್ ಈಗ ತಮ್ಮ ಫಾರ್ಮ್ ಹೌಸ್‌ನ ಇದ್ರೂ, ಯಾವ್ ವಿಷಯದಲ್ಲೂ ಫಾರ್ಮ್‌ನಲ್ಲಿ ಮಾತ್ರ ಇಲ್ಲ ಅಂತ ಗೊತ್ತಾಗುತ್ತೆ.

ಲೂಸ್ ಟಾಕ್
ದರ್ಶನ್ ತೂಗುದೀಪ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಕ್ರಾಂತಿ ಸಿನಿಮಾ ಹೊಗೆ ಅಂತೆ?
ಇರ್ಲಿ ಬಿಡ್ರೀ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಬಲಿದಾನದ ದಿನ ಸಿನಿಮಾ ರಿಲೀಸ್ ಮಾಡಿದ್ದೀವಿ, ನಮ್ದೂ ಒಂದ್ ಬಲಿದಾನ ಅಂತ ಅಂದ್ಕೊತೀವಿ.

ಅಂದ್ಕೊಬೇಕಾದ್ದೆ, ಸರಿ, ಬುಕ್ ಮೈ ಶೋನಲ್ಲಿ ಎಲ್ಲ ಕಡೆ ಗ್ರೀನ್ ತೋರಿಸ್ತಾ ಇದೆ ನಿಮ್ಮ ಸಿನಿಮಾಗೆ?
ಹೌದ್ರೀ, ನಮ್ಮದು ಎವರ್ ಗ್ರೀನ್ ಸಿನಿಮಾ.

ಮೀಡಿಯಾದಲ್ಲಿ ಬ್ಯಾನ್ ಮಾಡಿದ್ದಾರೆ ಅಂತ ಯೂ ಟ್ಯೂಬ್ ಜತೆ ಸ್ನೇಹ ಬೆಳೆಸಿದ್ರಿ, ಈಗ ಅಲ್ಲೂ ನಿಮ್ಮ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಬರ್ತಿದೆ. ಹೌದಾ, ನಮ್ಮ ಮೋದಿಜಿಗೆ ಹೇಳಿ ಎಲ್ಲ ನೆಗೆಟಿವ್ ರಿವ್ಯೂಗಳನ್ನು ಯೂಟ್ಯೂಬ್ ನಿಂದ ಕಿತ್ತು ಹಾಕಿಸ್ತೀನಿ.

ಓಹೋ, ಏನ್ ಕಿತ್ಕೊತೀರಾ ಕಿತ್ಳೊಳಿ ಅಂತಿzರು, ಈಗ ಕಿತ್ತು ಹಾಕಿಸೋ ಮಾತಾಡ್ತಾ ಇದ್ದೀರಾ?
ಹೌದ್ರೀ, ನಾನ್ ಯಾವಾಗ್ಲೂ ನೇರವಾಗಿ ಮಾತಾಡೋದು, ಅಡ್ಡಗೋಡೆ ಮೇಲೆ ತೂಗುದೀಪ ಇಟ್ಟಂಗೆ ಮಾತಾಡೋಕ್ ಬರಲ್ಲ.

ಸರಿ, ಒಟ್ಟಾರೆ, ನಿಮ್ಮ ಕ್ರಾಂತಿ ಸಿನಿಮಾ ಸಬ್ಜೆಕ್ಟ್ ಬಗ್ಗೆ ಏನ್ ಹೇಳ್ತೀರಾ?
ನೋಡ್ರೀ ಇದು ಬಡವರ್ ಮಕ್ಳನ್ನ ಓದೋಕ್ ಬಿಡ್ರೀ ಅಂತ ಹೇಳೋ ಸಿನಿಮಾ, ನಮ್ಮ ಅಭಿಮಾನಿಗಳಿಗೆ ಒಂದ್ ಸಂದೇಶ ಕೊಡಬೇಕು ಅಂತಾನೇ ಮಾಡಿದ್ದು.

ನೆಟ್ ಪಿಕ್ಸ್
ಖೇಮು ಒಂದ್ಸಲ ಸ್ಲೀಪರ್‌ಕೋಚ್ ಟ್ರೈನ್‌ನಲ್ಲಿ ಲಾಂಗ್ ಜರ್ನಿ ಹೊರಟ. ಬೆಂಗಳೂರಿನಿಂದ ಡೆಲ್ಲಿಗೆ ಹೊರಟ ಟ್ರೈನಿನಲ್ಲಿ ಅವನಿಗೆ ಸ್ಲೀಪರ್‌ಕೋಚ್‌ನಲ್ಲಿ ಜಾಗ ಸಿಗೋದೇ ಕಷ್ಟ ಆಯ್ತು. ಕಷ್ಟ ಪಟ್ಟು ಕಾಸು ಕೊಟ್ಟು ಹೇಗೋ ಒಂದು ಸ್ಲೀಪಿಂಗ್ ಸೀಟ್ ಬುಕ್ ಮಾಡಿದ. ಸರಿ ಖೇಮು ಹೊರಡುವ ದಿನ ಬಂತು. ಸ್ಟೇಷನ್‌ಗೆ ಹೋಗಿ ತನ್ನ ಸೀಟ್ ಎಲ್ಲಿದೆ ಅಂತ ಹುಡುಕಿ ಹೋದ್ರೆ ಅಲ್ಲಿ ಬರೀ ೨ ಸೀಟುಗಳ ಸ್ಲೀಪಿಂಗ್ ಕೋಚ್ ಇತ್ತು. ಅಲ್ಲಿ ಪ್ರಯಾಣ ಮಾಡುತ್ತಿದ್ದು ಇವನದ್ದೇ ವಯಸ್ಸಿನ ಒಂದು ವಿವಾಹಿತ ಅಟ್ರಾಕ್ಟಿವ್ ಹೆಂಗಸು. ಆಕೆಯನ್ನು ಮಾತನಾಡಿಸಿ, ಈ ಜರ್ನಿಯಲ್ಲಿ ನಾವು ಜತೆಗೇ ಪ್ರಯಾಣ ಮಾಡುತ್ತಿದ್ದೇವೆ. ಅಲ್ಲಿಯವರೆಗೂ ಸ್ನೇಹಿತರಾಗಿರೋಣ ಅಂತ ಕೈ ಕುಲುಕಿ ಮಾತನಾಡಿದ ಖೇಮು.

ಸರಿ ರಾತ್ರಿ ಊಟ ಆಯ್ತು, ಮಲಗೋ ಟೈಮು. ಇಬ್ಬರೂ ತಮ್ಮ ತಮ್ಮ ಸ್ಲೀಪಿಂಗ್ ಕೋಚ್‌ನಲ್ಲಿ ಮಲಗೋಕೆ ರೆಡಿ ಆದ್ರು. ಖೇಮು ಮೇಲಿನ ಬರ್ತ್‌ ನಲ್ಲಿ, ಆಕೆ ಕೆಳಗಿನ ಬರ್ತ್‌ನಲ್ಲಿ ಮಲಗಿದರು. ಸ್ವಲ್ಪ ಹೊತ್ತಿನಲ್ಲಿ ಖೇಮುಗೆ ಛಳಿ ಆಗೋಕೆ ಶುರು ಆಯ್ತು. ಮೇಲಿಂದಲೇ, ಕೆಳಗೆ ಮಲಗಿದ್ದ ಆಕೆಯನ್ನು, ನಾವಿಬ್ಬರೂ ಈಗ ಸ್ನೇಹಿತರಲ್ವಾ, ನಂಗೆ ತುಂಬಾ ಛಳಿ ಆಗ್ತಿದೆ. ಇಫ್ ಯೂ ಡೋಂಟ್ ಮೈಂಡ್, ಅಲ್ಲಿ ಕೆಳಗಿರೋ ಒಂದು ಬೆಡ್ ಶೀಟ್ ತೆಗೆದು ಕೊಡ್ತೀರಾ ಅಂತ ಕೇಳಿದ. ಅದಕ್ಕೆ, ಖೇಮು ಕಡೆಗೆ ರೊಮ್ಯಾಂಟಿಕ್ ಆಗಿ ನೋಡುತ್ತಾ, ಆಕೆ ಹೇಳಿದಳು, ನಾವಿಬ್ರೂ ಸ್ನೇಹಿತರು, ತುಂಬಾ ಚಳಿ ಆಗ್ತಿದೆ ಅಂತಿದೀರಾ, ನಿಮಗೆ ಬೆಡ್‌ಶೀಟ್ ಬೇಕು, ಆದ್ರೆ, ನಾವಿಬ್ಬರೂ ಯಾಕೆ ಈ ರಾತ್ರಿಯ ಮಟ್ಟಿಗೆ ಗಂಡ ಹೆಂಡತಿಯರ ಥರ ಇರಬಾರದು.

ಖೇಮುಗೆ ಇದನ್ನು ಕೇಳಿ ಶಾಕ್ ಮತ್ತು ಒಳಗೊಳಗೆ ಎಕ್ಸೈಟ್‌ಮೆಂಟ್ ಆಯ್ತು. ಮೆಲ್ಲಗೆ ಕೆಳಗಿಳಿದು ಬಂದು ಆಕೆಯ ಬೆಡ್ ಶೀಟ್ ನೊಳಗೆ ತೂರಿ ಕೊಳ್ಳಲು ನೋಡಿದ. ಆಗ ಆಕೆ ಸಿಟ್ಟಿನಿಂದ ಹೇಳಿದ್ಳು, ಹಲೋ ನಾನು ಗಂಡ ಹೆಂಡತಿಯರ ಥರ ಇರೋಣ ಅಂತ ಹೇಳಿದ್ದು, ನಿನಗೆ ಬೇಕಾಗಿರೋ ಬೆಡ್ ಶೀಟ್‌ನ ನೀನೇ ಹೋಗಿ ತಗೋ ಅಂತ ಹೇಳೋಕೆ. ಖೇಮುಗೆ ಈಗ ನಿರಾಸೆ ಮತ್ತು ಶಾಕ್ ಆಯ್ತು. ಸಿಟ್ಟು ಬಂದರೂ ತಡೆದುಕೊಂಡು, ಮೆಲ್ಲಗೆ ಹೋಗಿ ಬೆಡ್‌ಶೀಟ್ ತಗೊಂಡು ಮೇಲೆ ಹೋಗಿ ಮಲಗಿಕೊಂಡು ಬೆಡ್ ಶೀಟ್ ಓಪನ್ ಮಾಡಿ, ಗೊರ್ ಎಂದು ಗೊರಕೆ ಹೊಡೆಯುತ್ತ, ಪುರ್ ಅಂತ ಹೂಸು ಬಿಟ್ಟು ಹೇಳಿದ, ಸರಿ, ನೀವು ಹೇಳಿದ ಹಾಗೆ, ಇಬ್ರೂ ಇವತ್ತು ರಾತ್ರಿಯ ಮಟ್ಟಿಗೆ ಗಂಡ ಹೆಂಡತಿ ಥರ ಇರೋಣ.

ಲೈನ್ ಮ್ಯಾನ್

ಹೆಂಗಸರಿಗೆ ಮಾತ್ರ ಗೊತ್ತಿರೋ, ಗಂಡಸರಿಗೆ ಗೊತ್ತಿಲ್ಲದೇ ಇರೋ, ಕಾಮನಬಿಲ್ಲಿನಲ್ಲಿ ಇಲ್ಲದೇ ಇರೋ ಬಣ್ಣಗಳು ಯಾವುವು?
-ಗೋಲ್ಡ, ಸಿಲ್ವರ್

ಯಾವುದೇ ಸಮಸ್ಯೆ ಬರೋಕೆ ಮುಂಚೆ ಅದರ ಬಗ್ಗೆ ಜಾಸ್ತಿ ಆತಂಕಕ್ಕೆ ಒಳಗಾಗಬಾರದು.
-ಎಷ್ಟ್ ಸಲ, ಫುಲ್ ಅರ್ಜೆಂಟ್ ಆಗಿದೆ ಅಂದ್ಕೊಂಡು ಪ್ಯಾಂಟ್ ಬಿಚ್ಚಾಕಿ, ಓಡೋಗಿ, ಟಾಯ್ಲೆಟ್ ಸೀಟ್ ಮೇಲೆ ಕೂತ್ಕೊಂಡು, ಆಮೇಲೆ ಬರೀ ಗ್ಯಾಸ್
ಬಿಟ್ಟು ಎದ್ ಬಂದಿಲ್ಲ ನೀವು?

ಯಾವಾಗಲೂ ಸಣ್ಣ ಬಟ್ಟೆಗಳನ್ನೇ ಹಾಕಿಕೊಳ್ಳೋ ಉರ್ಫಿ ಜಾವೆದ್‌ಗೆ ಕೊಡಬಹುದಾದ ಉಚಿತ ಸಲಹೆ
-THINK BIG!!

ಯಾವ ಧೈರ್ಯದ ಮೇಲೆ ಕ್ರಾಂತಿ ಸಿನಿಮಾ ನಿರ್ಮಾಣ ಆಗಿದೆ?
-ಮಕ್ಕಳು ಓದಬೇಕು ಅನ್ನೋ ಸಿನಿಮಾ, ಓಡುತ್ತೆ ಅನ್ನೋ ನಂಬಿಕೆ.

ವಿಪರ್ಯಾಸ
ಮೀಡಿಯಾಗಳನ್ನು ಬೈಕೊಳ್ಳೋಕೆ ಅಂತಲೇ ಮಾಡಿದಂತಿರೋ ಕ್ರಾಂತಿ ಸಿನಿಮಾ ನಿರ್ಮಾಣ ಮಾಡಿರೋದು ‘ಮೀಡಿಯಾ ಹೌಸ್’ ಸ್ಟುಡಿಯೋಸ್

ಸಾರಿಗೆ ಗಾದೆ
-ಬಾಯಿ ಬಿಟ್ಟು ಕೇಳದೇ ಇದ್ರೆ, ಬಿಎಂಟಿಸಿ ಡ್ರೈವರ್ರೂ ಸ್ಟಾಪ್ ಕೊಡಲ್ಲ

ಪ್ರಯಾಣ ಪ್ರಯಾಸ
ಬಸ್ಸಲ್ಲಿ ಕಣ್ ಮುಚ್ಕೊಂಡು ಕೂತಿದ್ದವನೊಬ್ಬನನ್ನು ನೋಡಿ ಪಕ್ಕದಲ್ಲಿದ್ದವನು ಕೇಳಿದ
-ಯಾಕ್ ಸಾರ್ ಹುಷಾರಿಲ್ವಾ ?
-ಹಂಗೇನಿಲ್ಲ, ಬಸ್ಸಲ್ಲಿ ಈ ವಯಸ್ಸಾದವರು ನಿಂತ್ಕೊಂಡ್ ಪ್ರಯಾಣ ಮಾಡೋದನ್ನ ನನ್ ಕೈಲಿ ನೋಡಕಾಗಲ್ಲ ಅದಕ್ಕೆ.
ಜಯಂತ್ ಕಾಯ್ಕಿಣಿ ಅವರಂಥ ಸಾಹಿತಿ ಸಣ್ಣ ಏಜಲ್ಲಿ ಸಿನಿಮಾಗೆ ಬಂದು ಹೀರೋ ಆಗಿದ್ದಿದ್ರೆ ಏನಾಗ್ತಿತ್ತು?

-‘ಓದು ಬರಹ’ ಬರೋ ಹೀರೋಗಳ ಸಂಖ್ಯೆನಾದ್ರೂ ಜಾಸ್ತಿ ಆಗ್ತಿತ್ತು.
ಫ್ರೀ ಟೈಮ್ ಮಾತು
-ರಣಭೂಮಿಯಲ್ಲಿ ಯುದ್ಧ ನಿಲ್ಲಿಸಿದ್ರೆ- ಕದನ ವಿರಾಮ
-ವಿಧಾನಸೌಧದಲ್ಲಿ ಜಗಳ ನಿಲ್ಲಿಸಿದ್ರೆ -ಸದನ ವಿರಾಮ
ಲೆಜೆಂಡರೀ ಡೆಂಟಿಸ್ಟ್ ಜೀವನ ಚರಿತ್ರೆ
-‘ದಂತ’ಕಥೆ
ಗಾಂಜಾ ಸೇದಿದ್ರೆ ಬೇಲಿಲ್ಲದ ಕೇಸ್ ಆಗುತ್ತೆ
ಗಾಂಜಾ ಗಿರಾಕಿ- ನಾವ್ ಅದಕ್ಕೆ ‘ಸೊಪ್ಪು’ ಹಾಕಲ್ಲ.
Read E-Paper click here