ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
drhsmohan@gmail.com
ಇತ್ತೀಚೆಗೆ ಕರೋನಾ ವೈರಸ್‌ನ ಹಲವು ಪ್ರಭೇದಗಳು ಕಾಣಿಸಿಕೊಂಡು ತಮ್ಮ ಪ್ರಭಾವವನ್ನು ಬೀರಿ ಈ ಸೋಂಕು ಮತ್ತಷ್ಟು ಹರಡಲು ಕಾರಣವಾಗಿರುವುದು
ತಮಗೆ ಗೊತ್ತಿದೆ. ಈ ಹೊಸ ಪ್ರಭೇದಗಳ ವಿರುದ್ಧ ಈಗ ಲಭ್ಯವಿರುವ ಕೋವಿಡ್ ಲಸಿಕೆಗಳು ಹೆಚ್ಚು ಕೆಲಸ ಮಾಡುವುದಿಲ್ಲ ಎಂಬ ಭಾವನೆಯೂ ಇದೆ.
ಮುಂದುವರಿದ ದೇಶವಾದ ಇಸ್ರೇಲ್, ಫೈಜರ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಈಗಾಗಲೇ ಕೊಡಲು ಆರಂಭಿಸಿದೆ. ವಯಸ್ಸಾದವರಿಗೆ ಹಾಗೂ ಬೇರೆ ಕಾಯಿಲೆ ಹೊಂದಿದ ವ್ಯಕ್ತಿಗಳಿಗೆ 3ನೆಯ ಡೋಸ್ (ಬೂಸ್ಟರ್ ಡೋಸ್) ಕೊಡಲು ಇಸ್ರೇಲ್ ಪ್ರಯತ್ನಿಸುತ್ತಿದೆ. ಅಮೆರಿಕವು ತನ್ನ ಹಿರಿಯ ನಾಗರಿಕರಿಗೆ ಮತ್ತು ಹೆಚ್ಚು ರಿಸ್ಕ್ ಅಂಶಗಳನ್ನು ಒಳಗೊಂಡ ವ್ಯಕ್ತಿಗಳಿಗೆ 3ನೆಯ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಫೈಜರ್ ಕಂಪನಿಯ ಜತೆ ಮಾತುಕತೆ ಆರಂಭಿಸಿದೆ.
ಹೌದು, ಮೇಲೆ ತಿಳಿಸಿದಂತೆ ಲಸಿಕೆಯ ಮೂರನೆಯ ಡೋಸ್ ಕೊಡುವ ಬಗ್ಗೆ ಹಲವು ವಲಯಗಳಲ್ಲಿ ಮಾತುಕತೆ ಆರಂಭವಾಗಿದೆ. ಹಾಗಾದರೆ 3ನೆಯ ಬೂಸ್ಟರ್ ಡೋಸ್ ಏಕೆ ಬೇಕು? ಈ ಬಗ್ಗೆ ಸಂಶೋಧಕರು ಯಾವ್ಯಾವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ? ಈಗಿರುವ ಲಸಿಕೆಯ ಶೆಡ್ಯೂಲ್ ಬಗ್ಗೆ ಗಮನ
ಹರಿಸೋಣ. ಈಗ ಎಲ್ಲರಿಗೆ ಗೊತ್ತಿರುವಂತೆ ಹೆಚ್ಚಿನ ಲಸಿಕೆಗಳನ್ನು 2 ಡೋಸ್‌ಗಳಲ್ಲಿ ಕೊಡಲಾಗುತ್ತದೆ. ಹೀಗೆ ಎರಡು ಡೋಸ್‌ಗಳು ಪೂರ್ಣವಾದ ನಂತರ ಹೆಚ್ಚಿನ ಜನರಿಗೆ ಕೋವಿಡ್ ಕಾಯಿಲೆ ಬರುವುದಿಲ್ಲ.
ಇತ್ತೀಚಿನ ಪುರಾವೆಗಳ ಪ್ರಕಾರ ಕರೋನಾ ವೈರಸ್ ನ ಹೊಸ ಪ್ರಭೇದಗಳ ವಿರುದ್ಧ ಅದರಲ್ಲಿಯೂ ಡೆಲ್ಟಾ ಪ್ರಭೇದದ ವಿರುದ್ಧ ಈ ಲಸಿಕೆಗಳು ಹೆಚ್ಚು ಪರಿಣಾಮ ಕಾರಿಯಲ್ಲ. ಇತ್ತೀಚಿನ ಒಂದು ಅಧ್ಯಯನದಲ್ಲಿ Pfizer-BioNTech ಮತ್ತು Oxford – AstraZeneca ಲಸಿಕೆಗಳ ಎರಡೂ ಡೋಸ್ ತೆಗೆದುಕೊಂಡ 95% ವ್ಯಕ್ತಿಗಳಲ್ಲಿ ಡೆಲ್ಟಾ ಪ್ರಭೇದದ ಕರೋನಾ ವೈರಸ್‌ಗೆ ಪ್ರತಿರೋಧ ಪ್ರಮಾಣ ಬಹಳ ಕಡಿಮೆ ಇತ್ತು. ಒಂದೇ ಡೋಸ್ ತೆಗೆದುಕೊಂಡ ವ್ಯಕ್ತಿಗಳಲ್ಲಿ ಪ್ರತಿರೋಧ ಪ್ರಮಾಣ ತುಂಬಾ ಕಡಿಮೆ ಇತ್ತು. ಅದರ ಅರ್ಥ ಈ ಎರಡು ಲಸಿಕೆಗಳ ಒಂದು ಡೋಸ್ ಯಾವುದೇ ರೀತಿಯ ರಕ್ಷಣೆ ಕೊಡುವುದಿಲ್ಲ.
ಇಸ್ರೇಲಿನ ಆರೋಗ್ಯ ಸಚಿವಾಲಯ ಹೊರಡಿಸಿದ ಸುತ್ತೋಲೆಯ ಪ್ರಕಾರ – ಕೋವಿಡ್ ಕಾಯಿಲೆಯ ಲಕ್ಷಣಗಳು ಬರದಿರುವಂತೆ ಮಾಡಲು ಫೈಜರ್- ಬಯೋನ್ ಟೆಕ್ ಲಸಿಕೆಯ ಪರಿಣಾಮ 6 ತಿಂಗಳ ನಂತರ ಶೇ.64ನಷ್ಟು ಕಡಿಮೆಯಾಯಿತು. ಆದರೆ 2 ಫುಲ್ ಡೋಸ್ ಲಸಿಕೆ ಕೊಟ್ಟಾಗ ಅದು ಶೇ.93 ವ್ಯಕ್ತಿಗಳಲ್ಲಿ
ಗಂಭೀರವಾದ ಕೋವಿಡ್ ಕಾಯಿಲೆಯ ಲಕ್ಷಣಗಳು ಬರದಿರುವಂತೆ ತಡೆಯಬಲ್ಲದು. ಅಮೆರಿಕದಲ್ಲಿ ಈ ಬೂಸ್ಟರ್ ಡೋಸ್ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
ಬೂಸ್ಟರ್ ಲಸಿಕೆಗಳೆಂದರೇನು?: ಮಾಮೂಲಿ ಕೊಡುವ ಡೋಸ್‌ಗಿಂತ ಹೆಚ್ಚುವರಿ ಡೋಸ್ ಗಳನ್ನು ಉಪಯೋಗಿಸಿ ಕಾಯಿಲೆಗಳ ವಿರುದ್ಧ ಹೆಚ್ಚಿನ ರಕ್ಷಣೆ ಕೊಡುವುದು. ಕಾರಣ ಎಂದರೆ ಕಾಲಕ್ರಮೇಣ ಲಸಿಕೆಗಳ ಪರಿಣಾಮ ಕುಂದುತ್ತಾ ಬರುತ್ತದೆ.
– ಅಂತ ವೈರಸ್ ಕಾಯಿಲೆಯಲ್ಲಿ ಇದನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ.
– ನಲ್ಲಿ ವರ್ಷಕ್ಕೊಮ್ಮೆ ಬೂಸ್ಟರ್ ಕೊಡಬೇಕು. DPT ಲಸಿಕೆಗೆ 10 ವರ್ಷಕ್ಕೊಮ್ಮೆ ಬೂಸ್ಟರ್ ಡೋಸ್ ಕೊಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ದೇಹದ ಪ್ರತಿರೋಧ ವ್ಯವಸ್ಥೆಯು ತನ್ನ ಪ್ರತಿರೋಧ ಶಕ್ತಿಯನ್ನು ಒಂದೇ ಮಟ್ಟದಲ್ಲಿ ಕಾಯ್ದುಕೊಳ್ಳಲು ಸಾಧ್ಯ. ಮೊದಲು ಉತ್ತೇಜಿಸಿದ ನಿರ್ದಿಷ್ಟ ಆಂಟಿಜೆನ್‌ಗಳನ್ನು
ದೇಹದ ಪ್ರತಿರೋಧ ವ್ಯವಸ್ಥೆ ನೆನಪಿಟ್ಟುಕೊಳ್ಳುತ್ತದೆ. ಮುಂದಿನ ಬಾರಿ ಅದರ ಸಂಪರ್ಕಕ್ಕೆ ಬಂದಾಗ ಪ್ರತಿರೋಧ ವ್ಯವಸ್ಥೆ ಸರಿಯಾದ ಪ್ರತ್ಯುತ್ತರ ಕೊಡುತ್ತದೆ. ಹೆಚ್ಚಾಗಿ ಮೊದಲು ಕೊಟ್ಟ ಲಸಿಕೆಗಳದ್ದೇ ರೀತಿ ಬೂಸ್ಟರ್ ಗಳು ಇರುತ್ತವೆ. ಆದರೆ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಲು ಕೆಲವೊಮ್ಮೆ ಮಾರ್ಪಾಡಾದ ಲಸಿಕೆಗಳನ್ನು ಕೊಡಲಾಗುತ್ತದೆ. ಉತ್ತಮ ಉದಾಹರಣೆ ಎಂದರೆ – ವೈರಸ್ ಪ್ರತಿ ವರ್ಷ ಮ್ಯುಟೇಷನ್ ಹೊಂದಿ ಮಾರ್ಪಾಡಾಗುವುದರಿಂದ ಪ್ರತಿ ವರ್ಷ – ಲಸಿಕೆ ಬದಲಿಸ ಬೇಕಾಗುತ್ತದೆ.
ಬೂಸ್ಟರ್ ಲಸಿಕೆಗಳು ಏಕೆ ಬೇಕು?: ದೇಹದಲ್ಲಿ ಪ್ರತಿರೋಧ ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆಗಾಗ ಕೆಲವು ಆಂಟಿಜೆನ್‌ಗಳ ಸಂಪರ್ಕಕ್ಕೆ ಬರದಿದ್ದಾಗ ನಮ್ಮ ದೇಹದ ಪ್ರತಿರೋಧ ವ್ಯವಸ್ಥೆ ಕಾಯಿಲೆ ಅಥವಾ ಸೋಂಕನ್ನು ತಡೆಯುವ ಶಕ್ತಿಯನ್ನು ಹೊಂದಿರು ವುದಿಲ್ಲ. ಇನ್ನೊಂದು ಕಾರಣ ಎಂದರೆ ವೈರಸ್‌ಗಳ ಪ್ರಭೇದಗಳು. ಕೆಲವು ವೈರಸ್ ಪ್ರಭೇದಗಳು ಲಸಿಕೆಯ ಪ್ರತಿರೋಧ ಪ್ರತಿಕ್ರಿಯೆ ಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತವೆ. ಕೆಲವು ಪ್ರಭೇದ
ಗಳು ಪ್ರತಿರೋಧ ಪ್ರಕ್ರಿಯೆಯ ಸ್ವಲ್ಪ ಭಾಗವನ್ನು ಮಾತ್ರ ತಪ್ಪಿಸಿಕೊಳ್ಳುತ್ತವೆ. ಪರಿಣಾಮ ಎಂದರೆ ಈಗಾಗಲೇ ವೈರಸ್‌ಗೆ ಪ್ರತಿರೋಧ ಪ್ರಕ್ರಿಯೆಯನ್ನು ಹೊಂದಿ ರುವ ವ್ಯಕ್ತಿಗಳಿಗೆ ಸಹಾ ಸೋಂಕು ತರಬಲ್ಲವು. ಹಾಗೆಂದು ಈ ವೈರಸ್ ವ್ಯಕ್ತಿಯ ಪ್ರತಿರೋಧ ಪ್ರಕ್ರಿಯೆಯ ಎಲ್ಲಾ ಭಾಗವನ್ನು ತಪ್ಪಿಸಿಕೊಳ್ಳಲಾಗದು. ಇಂತಹ ಸಂದರ್ಭದಲ್ಲಿ ಬೂಸ್ಟರ್ ಲಸಿಕೆ ಕೊಟ್ಟಾಗ ಪ್ರತಿ ರೋಧ ಪ್ರಕ್ರಿಯೆಯ ಎಲ್ಲಾ ಭಾಗವನ್ನು ಸಚೇತನಗೊಳಿಸುತ್ತದೆ.
ಪರಿಣಾಮ ನಿರ್ದಿಷ್ಟ ವೈರಸ್‌ನ ಪ್ರಭೇದ ಈ ಬೂಸ್ಟರ್ ಡೋಸ್‌ನ ಪರಿಣಾಮ ದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಥವಾ ನಿರ್ದಿಷ್ಟವಾಗಿ ಪ್ರಭೇದವನ್ನೇ ಗುರಿ ಯಾಗಿಸುವ ರೀತಿಯ ಬೂಸ್ಟರ್ ಲಸಿಕೆಯನ್ನು ಉಪಯೋಗಿಸಬಹುದು. ಆಗ ಹೊಸ ಪ್ರತಿರೋಧ ಪ್ರಕ್ರಿಯೆಉತ್ಪತ್ತಿಯಾಗಿ ಯಾವ ವೈರಸ್‌ನ ಭಾಗ ಮೊದಲು
ಆರಂಭದ ಲಸಿಕೆಯಿಂದ ತಪ್ಪಿಸಿ ಕೊಂಡಿತ್ತೋ ಆ ಭಾಗಕ್ಕೂ ಪ್ರತಿರೋಧ ಉಂಟಾಗುವಂತೆ ಮಾಡಬಹುದು. ಅಲ್ಲದೆ ಮೊದಲು ಮೂಲ ವೈರಸ್‌ಗೆ ಪ್ರತಿರೋಧ ಹೊಂದಿದ್ದ ಭಾಗವೂ ಸಹ ಹೊಸ ಪ್ರತಿರೋಧ ಪ್ರಕ್ರಿಯೆ ಹೊಂದಿ ಶಕ್ತಿಯುತವಾಗಿ ವೈರಸ್ ಹೊಸ ಪ್ರಭೇದದ ವಿರುದ್ಧವೂ ರಕ್ಷಣೆ ಕೊಡುವಷ್ಟು ಪ್ರಭಲ ವಾಗುತ್ತದೆ- ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾ ನಿಲಯದ ಕೋವಿಡ್ ಲಸಿಕೆಯ ತಂಡ ಅಭಿಪ್ರಾಯ ಪಡುತ್ತದೆ.
ಯಾರಲ್ಲಿ ಬೂಸ್ಟರ್ ಡೋಸ್ ಅಗತ್ಯವಿದೆ?: ಅಮೆರಿಕದ ಸಿಡಿಸಿಯ ಪ್ರಕಾರ, ಈಗಿರುವ ಪುರಾವೆ ಗಳಲ್ಲಿ ಹೆಚ್ಚಿನ ಕೋವಿಡ್ ಲಸಿಕೆಗಳು ಕರೋನಾ ವೈರಸ್ ವಿರುದ್ಧ ಅತ್ಯಂತ ಪ್ರಬಲ ಪ್ರತಿರೋಧ ಪ್ರಕ್ರಿಯೆಯನ್ನು ಉಂಟು ಮಾಡುತ್ತವೆ. ಈಗಿನ ಕೋವಿಡ್ ಲಸಿಕೆಗಳು ಈಗ ಕೊಡುತ್ತಿರುವ ಡೋಸ್‌ಗಳಲ್ಲಿ ಎಷ್ಟು ಅವಧಿ ಯವರೆಗೆ ರಕ್ಷಣೆ ಕೊಡಬಲ್ಲದು ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಹಾಗಾಗಿ ಈ ಬೂಸ್ಟರ್ ಡೋಸ್‌ನ ಲಸಿಕೆಗಳು ವಯಸ್ಸಾದ ವ್ಯಕ್ತಿಗಳಲ್ಲಿ, ಕಡಿಮೆ ಮಟ್ಟದ ಪ್ರತಿರೋಧ ವ್ಯವಸ್ಥೆ ಹೊಂದಿರುವವರಲ್ಲಿ, ಯಾರ ದೇಹದಲ್ಲಿ ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಂಡು ಉತ್ತಮ ಪ್ರತಿರೋಧ ಶಕ್ತಿ ಹುಟ್ಟಿಕೊಂಡಿಲ್ಲವೋ ಅಂತಹವ ರಲ್ಲಿ ಅವಶ್ಯಕತೆ ಇದೆ ಎನ್ನಲಾಗಿದೆ.
ಈಗಿರುವ ಲಭ್ಯ ಮಾಹಿತಿ ಪ್ರಕಾರ ಯಾವ ವ್ಯಕ್ತಿ ಲಸಿಕೆಗಳಿಗೆ ಹೆಚ್ಚು ಸ್ಪಂದಿಸುತ್ತಾರೋ ಅಂತಹವರಲ್ಲಿ 12 ತಿಂಗಳು ಅಥವಾ 1 ವರ್ಷ ಕಾಲ ಲಸಿಕೆಯ ಪ್ರತಿರೋಧ ಶಕ್ತಿ ಉಳಿಯುತ್ತದೆ ಹಾಗೂ ಹೊಸ ಪ್ರಭೇದಗಳ ವಿರುದ್ಧವೂ ಅವು ಹೋರಾಡ ಬಲ್ಲವು ಎಂದು ಯು.ಕೆ.ಯ ಕಾರ್ಡಿಫ್ ವಿಶ್ವವಿದ್ಯಾ ನಿಲಯದ ಡಾ. ರಿಚರ್ಡ್ ಸ್ಟಾಂಟನ್ ಅಭಿಪ್ರಾಯ ಪಡುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಬೂಸ್ಟರ್ ಡೋಸ್ ಅಗತ್ಯ ಇಲ್ಲ. ಯಾರು ಲಸಿಕೆ ಗಳಿಗೆ ಸರಿಯಾದ ಪ್ರತಿಕ್ರಿಯೆ ತೋರುವು ದಿಲ್ಲವೋ ಅಂತಹವರ ಬಗ್ಗೆ ಜಾಸ್ತಿ ಗಮನ ಕೊಡಬೇಕು.
ವಯಸ್ಸಾದ ವ್ಯಕ್ತಿಗಳಲ್ಲಿ ಚಿಕ್ಕ ವಯಸ್ಸಿನವರಂತೆ ದೀರ್ಘ ಕಾಲದ ಪ್ರತಿರೋಧ ಶಕ್ತಿ ಉಳಿಯುವುದಿಲ್ಲ. ಅಂತಹವರಿಗೆ ಬೂಸ್ಟರ್ ಡೋಸ್ ಅಗತ್ಯ ಎಂದು ಡಾ. ರಿಚರ್ಡ್‌ರ ಅಭಿಪ್ರಾಯ. ಕೊಲಂಬಿಯಾ ಮೇಲ್ ಮನ್ ಪಬ್ಲಿಕ್ ಹೆಲ್ತ್ ಕಾಲೇಜಿನ ಎಪಿಡಿಮಿಯಾಲಜಿ ವಿಭಾಗದ ಮೆಡಿಸಿನ್ ಪ್ರೊಫೆಸರ್ ಡಾ ಜೆಸ್ಸಿಕಾ ಜೆಸ್ ಮನ್‌ರ ಪ್ರಕಾರ – ವೈದ್ಯಕೀಯ ಕಾರಣಗಳಿಂದ ದೇಹದ ಪ್ರತಿರೋಧ ಶಕ್ತಿ ಕುಂದಿದವರಲ್ಲಿ ಉದಾ: ಕಿಡ್ನಿ ಕಸಿ ಮಾಡಿಕೊಂಡವರಲ್ಲಿ, ಲೂಪಸ್‌ನಂತಹ ಆಟೋ
ಇಮ್ಯೂನ್ ಕಾಯಿಲೆ ಇರುವವರಲ್ಲಿ – ಬೂಸ್ಟರ್ ಡೋಸ್ ಅಗತ್ಯವಿದೆ. ಯು.ಕೆಯ ವ್ಯಾಕ್ಸಿನೇಷನ್ ಕಾರ್ಯಕ್ರಮದ ಪ್ರೊ. ಅಂತೋನಿ ಹಾರ್‌ಡೆನ್- ಸದ್ಯದ ಯು.ಕೆ ಯಲ್ಲಿ ಬೂಸ್ಟರ್ ಲಸಿಕೆಗಳನ್ನು ಆರಂಭಿಸಲಾಗುತ್ತದೆ ಹಾಗೂ ಪ್ರತಿ ವರ್ಷಕ್ಕೊಮ್ಮೆ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎನ್ನುತ್ತಾರೆ.
ಬೂಸ್ಟರ್ ಲಸಿಕೆಯ ಬಗೆಗಿನ ವಿವಾದಗಳು: ವೈಜ್ಞಾನಿಕವಾಗಿ ಬೂಸ್ಟರ್ ಲಸಿಕೆಗಳ ಬಗ್ಗೆ ಏನೂ ವಿವಾದವಿಲ್ಲ. 3ನೆಯ ಬೂಸ್ಟರ್ ಡೋಸ್‌ಗಳು ೨ನೆಯ ಬೂಸ್ಟರ್ ನಂತೆಯೇ ಕೆಲಸ ಮಾಡುತ್ತವೆ. ಈಗ ಇರುವ ನಿಜವಾದ ವಿವಾದ ಎಂದರೆ 3ನೆಯ ಬೂಸ್ಟರ್ ಕೊಡುವುದು ಸರಿಯೇ? ಏಕೆಂದರೆ ಜಗತ್ತಿನ ಹಲವಾರು ಬಡ ದೇಶಗಳಲ್ಲಿ ಲಸಿಕೆಗಳು ಸರಿಯಾಗಿ ದೊರಕುತ್ತಿಲ್ಲ. ಅಂತಹ ಸ್ಥಳಗಳಲ್ಲಿ ಈ ಲಸಿಕೆಗಳು ಉಪಯೋಗವಾಗಬೇಕು. ಜನರನ್ನು ಆಸ್ಪತ್ರೆಗಳಿಂದ ದೂರ ಇಡುವುದೇ ಲಸಿಕೆಗಳ ಉದ್ದೇಶ ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಆಕ್ಸ್ಫರ್ಡ್ ಲಸಿಕಾ ಗುಂಪಿನ ನಿರ್ದೇಶಕ ಡಾ ಆಂಡ್ರ್ಯೂ ಪೋಲಾರ್ಡ್ ಅಭಿಪ್ರಾಯ ಪಡುತ್ತಾರೆ.
ಅಲ್ಲದೆ ಲಸಿಕೆಗಳ ಲಭ್ಯತೆ ತುಂಬಾ ಕಡಿಮೆ ಇರುವುದರಿಂದ ಒಂದೂ ಡೋಸ್ ಲಸಿಕೆಗಳು ಯಾರಿಗೆ ಲಭ್ಯವಾ ಗಿಲ್ಲವೋ ಅಂತಹವರಿಗೆ ಹೆಚ್ಚು ಗಮನ ಕೊಡ ಬೇಕೇ ಹೊರತು ಮೂರನೇ ಡೋಸ್‌ಗಳು ನಮ್ಮ ಆದ್ಯತೆ ಆಗಬಾರದು ಎಂದು ಪೋಲಾರ್ಡ್‌ರ ಅಭಿಮತ. ಜಗತ್ತಿನ ಹಲವಾರು ದೇಶಗಳ ಕೋಟ್ಯಂತರ
ಜನರಿಗೆ ಒಂದೂ ಡೋಸ್ ಲಸಿಕೆ ಸಿಗದಿರುವಾಗ ಅಂತಹವರಲ್ಲಿ ಸೋಂಕು ಬರುವ ಸಾಧ್ಯತೆ ಜಾಸ್ತಿ ಇರುವಾಗ, ನಾವು 3ನೆಯ ಡೋಸ್‌ಬಗ್ಗೆ ಚರ್ಚಿಸುವುದು, ಕೊಡುವುದು ನೈತಿಕವಾಗಿ ಸರಿಯೇ ಎಂದು ಮತ್ತೆ ಕೆಲವು ತಜ್ಞರ ಅನಿಸಿಕೆ. ಈಗಾಗಲೇ ತಿಳಿಸಿದಂತೆ ಇನ್ನೂ ಕೆಲವು ತಜ್ಞರು 3 ನೆಯ ಡೋಸ್ ಏಕೆ ಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.
ಲಸಿಕೆಗಳ ಕಾರ್ಯ ವಿಧಾನ: ಲಸಿಕೆಗಳನ್ನು ಕೊಟ್ಟಾಗ ದೇಹದ ಪ್ರತಿರೋಧ ವ್ಯವಸ್ಥೆಯಲ್ಲಿನ ಟಿ ಜೀವಕೋಶಗಳು ಮತ್ತು ಬಿ ಜೀವಕೋಶಗಳು ಸುದೀರ್ಘವಾದ ಪ್ರತಿರೋಧವನ್ನು ಉಂಟು ಮಾಡುತ್ತವೆ. ಬಿ ಜೀವಕೋಶಗಳು ಪ್ರತಿರೋಧ ವ್ಯವಸ್ಥೆಯ ನೆನಪಿನ ಜೀವಕೋಶಗಳು ಅವು ವೈರಸ್ ಅನ್ನು ಬೈಂಡ್ ಮಾಡುವ
ಆಂಟಿಬಾಡಿಗಳನ್ನು ಹುಟ್ಟು ಹಾಕುತ್ತವೆ. ‘ಬಿ’ ಜೀವಕೋಶಗಳು ಈ ಆಂಟಿಬಾಡಿಗಳನ್ನು ಉತ್ಪಾದಿಸುವ ಕ್ರಿಯೆಯಲ್ಲಿ ಟಿ ಜೀವಕೋಶಗಳು ಸಹಾಯ ಮಾಡುತ್ತವೆ. ಕೆಲವು ‘ಟಿ’ ಜೀವಕೋಶಗಳು ವ್ಯಕ್ತಿಯ ಸೋಂಕಿತ ಜೀವಕೋಶಗಳನ್ನು ಸಾಯಿಸುತ್ತವೆ.
ಯಾರು ಕಡಿಮೆ ಪ್ರಮಾಣದ ಕೋವಿಡ್ ಸೋಂಕಿನಿಂದ ಗುಣ ಹೊಂದಿದ್ದಾರೆ ಅಂತಹವರಲ್ಲಿ ಟಿ ಜೀವಕೋಶಗಳ ಪ್ರತಿಕ್ರಿಯೆ ತುಂಬಾ ದೀರ್ಘ ಕಾಲದವರೆಗೆ ಇರುತ್ತದೆ- ಎಂದು ಇತ್ತೀಚಿನ ಒಂದು ಅಧ್ಯಯನ ದಲ್ಲಿ ಕಂಡುಬಂದಿದೆ. ಕಡಿಮೆ ಲಕ್ಷಣಗಳನ್ನು ಹೊಂದಿದ್ದ ಕೋವಿಡ್ ಕಾಯಿಲೆಯಿಂದ ಗುಣ ಹೊಂದಿದವರಲ್ಲಿ ಬಿ
ಜೀವಕೋಶಗಳು, ಕರೋನಾ ವೈರಸ್‌ನ ಹೊಸ ಪ್ರಭೇದಗಳನ್ನು ಗುರಿಯಾಗಿರಿ ಸುವ ಹೊಸ ಆಂಟಿಬಾಡಿಗಳನ್ನು ಉತ್ಪಾದಿಸುತ್ತವೆ – ಎಂದು ಮತ್ತೊಂದು ಅಧ್ಯಯನ ತಿಳಿಸುತ್ತದೆ. ಕರೋನಾ ವಿರುದ್ಧದ ಲಸಿಕೆಯು ಕೂಡ ದೀರ್ಘ ಕಾಲದ ಪ್ರತಿರೋಧ ಪ್ರತಿಕ್ರಿಯೆ ಉಂಟು ಮಾಡು ತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಲಸಿಕೆಯ ಬೂಸ್ಟರ್‌ನ ಸಂಶೋಧನೆಯಲ್ಲಿನ ಪ್ರಮುಖ ಅಂಶ: ವೈರಸ್ ಮ್ಯುಟೇಷನ್ ಹೊಂದಿದ ನಂತರ ಹೊಸ ಪ್ರಭೇದಗಳ ವಿರುದ್ಧ ರಕ್ಷಣೆ ಕಡಿಮೆಯಾಗುತ್ತದೆ. ಡೆಲ್ಟಾ ಮತ್ತು ಬೀಟಾ ಪ್ರಭೇದಗಳ ವಿರುದ್ಧ ಕಡಿಮೆ ಆಂಟಿಬಾಡಿ ಪ್ರತಿಕ್ರಿಯೆ ಕಂಡು ಬರುತ್ತದೆ. ಹಾಗಾಗಿ ಈ ಹೊಸ ಪ್ರಭೇದಗಳ ವೈರಸ್ ವಿರುದ್ಧವೇ ಪ್ರತ್ಯೇಕ
ಬೂಸ್ಟರ್ ಅವಶ್ಯಕತೆ ಇದೆ.
ಇತ್ತೀಚೆಗೆ ಹುಟ್ಟಿಕೊಂಡ ಅಭಿಪ್ರಾಯಗಳು: ಮೊದಲು ಕೊಟ್ಟ ಲಸಿಕೆಯದ್ದೇ ಬೂಸ್ಟರ್ ಕೊಡಬೇಕೇ ? ಅಥವಾ ಅದರ ಬದಲು ಬೇರೆಯ ಲಸಿಕೆಯ ಬೂಸ್ಟರ್ ಕೊಡಬೇಕೆ? ಬೂಸ್ಟರ್ ಯಾವಾಗ ಕೊಡಬೇಕು? ಅದರ ಡೋಸ್ ಎಷ್ಟಿರಬೇಕು? ಬೂಸ್ಟರ್ ಲಸಿಕೆ ಎಲ್ಲಾ ವಯಸ್ಸಿನವರಲ್ಲಿ ಸುರಕ್ಷಿತವೇ? ಈ ಎಲ್ಲಾ ಪ್ರಶ್ನೆಗಳಿಗೆ ವಿeನಿಗಳು ಉತ್ತರ ಹುಡುಕುತ್ತಿದ್ದಾರೆ.