Wednesday, 11th December 2024

ಬಾಯ್ ಫ್ರೆಂಡ್ ಎಂಬ ಭೂತದ ನೆನಪುಗಳು !

ಯಶೋ ಬೆಳಗು

yashomathy@gmail.com

ಅಮ್ಮಾ ನಿಂಗ್ಯಾರೂ boy friend ಇರಲಿಲ್ಲವಾ? ಕಥೆಪುಸ್ತಕ ಓದುತ್ತಿದ್ದ ಮಗ ಇದ್ದಕ್ಕಿದ್ದಂತೆ ತಲೆಯೆತ್ತಿ ಈ ಪ್ರಶ್ನೆ ಕೇಳಿದ್ದ. ಮನಸು ಮೂವತ್ತು ವರುಷಗಳಷ್ಟು ಹಿಂದಕ್ಕೆ ಲಗಾಟಿ ಹೊಡೆದು ಅಳಿದುಳಿದ ನೆನಪುಗಳನ್ನು ಹೆಕ್ಕಿ ಮಾತುಗಳನ್ನು ಹೆಣೆಯಲಾಂಭಿಸಿತು.

ಬಾಯ್ ಫ್ರೆಂಡುಗಳಿರಲಿ, ಫ್ರೆಂಡುಗಳಿದ್ದುದೇ ಕಡಿಮೆ. ಯಾರ ಜತೆಗಾದ್ರೂ ಮಾತಾಡ್ತಿ ದೀನಿ ಅಂತ ಗೊತ್ತಾದ್ರೆ ಅವರ ಕುಲ, ಗೋತ್ರ, ನಡತೆ ಎಲ್ಲವನ್ನೂ ವಿಚಾರಿಸಿ ಸರಿ ಅನ್ನಿಸಿ ದಾಗಲೇ ಆಯ್ತು ಮಾತಾಡಿಕೊಂಡಿರ್ಲಿ ಬಿಡು ಅಂತ ಸುಮ್ಮನಿರುತ್ತಿದ್ದುದು ತಾತ-ಅಜ್ಜಿ. ಅಜ್ಜಿಯದ್ದೇ ಸರ್ಪಗಾವಲು ಎಲ್ಲದಕ್ಕೂ. 1990ರಲ್ಲಿ ನಾನು ಎಸ್ಸೆಸ್ಸೆಲ್ಸಿಯ ಕೊನೆ ವರ್ಷದಲ್ಲಿದ್ದಾಗ ನೀರೇ ಇರದ ಬರಡು ನೆಲವಾದ ಇಟ್ಟುಮಡುವಿನಲ್ಲಿ ಕಟ್ಟಿದ ನಮ್ಮ ಹೊಸಮನೆಗೆ ಶಿಫ್ಟ್ ಆದೆವು.

ಬನಶಂಕರಿ ಮೊದಲನೇ ಹಂತದ ಬ್ಯಾಂಕ್ ಕಾಲೊನಿಯ ಮನೆಯಂದು ಬಾವಿ, ಪುಟ್ಟ ಕೈತೋಟ ಮಾಡಿಕೊಂಡು ಒಂದೆರಡು ಮನೆಗಳನ್ನು ಬಾಡಿಗೆಗೆ ಕೊಟ್ಟು, ಅಕ್ಕಪಕ್ಕದವ ರೊಂದಿಗೆ ನೆಮ್ಮದಿಯಾಗಿದ್ದ ಅಜ್ಜಿಗೆ ಹಳೆಮನೆ ಬಿಟ್ಟು ಬರೋಕೇ ಇಷ್ಟವಿರಲಿಲ್ಲ. ಆ ಬಾವಿಯಲ್ಲಿ ಬೆಳದಿಂಗಳ ರಾತ್ರಿಯಲ್ಲಿ ನೀರು ತುಂಬಿ ಬಂದಿದ್ದು ಕಂಡು ಎಲ್ಲರೂ ಖುಷಿಯಿಂದ ನಲಿದಾಡಿದ್ದು ನಂಗೀಗಲೂ ಹಚ್ಚಹಸಿರಾಗಿ ನೆನಪಿದೆ. ಆದರೂ ತಾತನ ನಿರ್ಧಾರ.

ಮಾತಾಡುವಂತಿರಲಿಲ್ಲ. ಎಸ್ಸೆಸ್ಸೆಲ್ಸಿ ಮುಗಿದು ಅದೇ ಶಾಲೆಯ ಕಟ್ಟಡದಲ್ಲಿದ್ದ ಪಿಯುಸಿಗೆ ಬದಲಾದಾಗ ಯೂನಿ-ರ್ಮಿಲ್ಲದೆ ಕಲರ್ ಡ್ರೆಸ್ ಹಾಕಬಹುದು ಅನ್ನುವುದನ್ನು ಬಿಟ್ಟರೆ ಹೆಚ್ಚೇನೂ ವ್ಯತ್ಯಾಸವೆನಿಸಿರಲಿಲ್ಲ. ಹೊಸ ದಾರಿಯಾದ್ದರಿಂದ ತಾತನೇ
ಕಾಲೇಜಿಗೆ ಬಿಟ್ಟು ಬರುತ್ತಿದ್ದರು. ಆನಂತರ ಬಸ್ ರೂಟ್ ತಿಳಿದುಕೊಂಡು ಬಸ್ಸಲ್ಲಿ ಓಡಾಡುವುದು ರೂಢಿ ಮಾಡಿಕೊಂಡೆ. ಅದೇ ಸಮಯದಲ್ಲಿ ಅದೇ ಬಸ್ಟ್ಯಾಂಡಿನಲ್ಲಿ ಪರಿಚಯವಾದ ಹುಡುಗ ನಮ್ಮ ಮನೆಯ ಮುಂದಿನ ದಾರಿಯ ಇದ್ದುದರಿಂದ ಅವ ನೊಂದಿಗೆ ಹೊಸ ಸಬ್ಜೆಕ್ಟ್ ಗಳ ವಿಷಯ ಮಾತಾಡುತ್ತ ಮನೆಯವರೆಗೂ ನಡೆದು ಬಂದಿದ್ದು ತಿಳಿದು ಅಜ್ಜಿ ಕೆಂಡಾಮಂಡಲ ವಾಗಿದ್ದರು.

ಇನ್ನೊಂದು ಬಾರಿ ಈ ರೀತಿ ಹುಡುಗರೊಂದಿಗೆ ಮಾತಾಡುವುದು ನೋಡಿದರೆ ಅವತ್ತೇ ನಿನ್ನ ಕಾಲೇಜು ಕೊನೆ ಎಂದು ತಾತ warn ಮಾಡಿದರು. ನಾನೇನು ತಪ್ಪು ಮಾಡಿದೆ? ಎಂದು ಅರ್ಥವಾಗದೆ, ಕೇಳುವ ಧೈರ್ಯವೂ ಇಲ್ಲದೆ ಹೆದರಿ ಸುಮ್ಮನಾಗಿದ್ದೆ. ಮರುದಿನ ಇನ್ನೆಲ್ಲಿ ಆ ಹುಡುಗ ಕಂಡು ಮಾತಾಡಿಸಿಬಿಡುತ್ತಾನೋ ಅಂತ ಹೆದರಿ ಒಂದೆರಡು ದಾರಿ ಸುತ್ತಾಡಿಕೊಂಡು ಸ್ವಲ್ಪ ಲೇಟಾಗಿ ಬಸ್ಟ್ಯಾಂಡಿಗೆ ಬರಲಾರಂಭಿಸಿದೆ. ಅಕಸ್ಮಾತ್ತಾಗಿ ಅವನೇ ನಾದರೂ ಕಂಡುಬಿಟ್ಟರೆ ಜೀವವೇ ಹೋದಷ್ಟು ಹೆದರಿ ನಡುಗಿ ಬಿಡುತ್ತಿದ್ದೆ.

ಹೀಗಾಗಿ ನನ್ನ ಕಾಲೇಜಿನ ದಿನಗಳಲ್ಲಿ ಯಾವ ಬಾಯ್ ಫ್ರೆಂಡೂ ಇರಲಿಲ್ಲ ಎಂದು ನಗೆಯಾಡಿದೆ. So boring ಅಮ್ಮಾ… But I hope appa was not like you ಅಂದ. No comparison at all.. ಏಳು ವರುಷ ಒಂದು ಹುಡುಗಿಯನ್ನು ಪ್ರೀತಿಸಿ ಅವಳು ಅಪ್ಪನ ಬಳಿ ಹಣವಿಲ್ಲ, ಶ್ರೀಮಂತಿಕೆಯಿಲ್ಲ, ಹೆಸರಿಲ್ಲ, ಉದ್ಯೋಗವಿಲ್ಲ…. ಎಂದು ತಿರಸ್ಕರಿಸಿ ಹಣ, ಹೆಸರು, ಶ್ರೀಮಂತಿಕೆಯಿದ್ದ ಹುಡುಗ ನನ್ನು ಮದುವೆಯಾಗಿದ್ದರಿಂದ ಮನ ನೊಂದು ಅಷ್ಟು ಸಣ್ಣ ವಯಸ್ಸಿಗೇ ದೇವರನ್ನು ಹುಡುಕುತ್ತ ಹಿಮಾಲಯಕ್ಕೆ ಹೊರಟು ಹೋಗಿದ್ದರಂತೆ ಅಪ್ಪ…. ಎಂದೆ. ಹೌದಾ? ಎಂದು ಬೆರಗಾಗಿ, ಮತ್ತೆ ನೀವಿಬ್ರೂ ಹೇಗೆ ಜತೆಯಾದಿರಿ? ಎಂದು ಕೇಳಿದ.

ಇಪ್ಪತ್ತೈದು ವರ್ಷ ದಷ್ಟು ಸುದೀರ್ಘ ನಡೆಯನ್ನು ಒಂದೇ ಸಲಕ್ಕೆ ಎಲ್ಲವನ್ನೂ ಹೇಳಲಾಗುವುದಿಲ್ಲ. ನೆನಪಾದಾಗ ನೆನಪಾದಷ್ಟು ಹೇಳ್ತೇನೆ ಅಂದೆ. ಆಯ್ತು ಎಂದು ಚಕ್ಕಂಬಕ್ಕಳ ಹಾಕಿ ಕುಳಿತ ಹೇಳು ಅನ್ನುವಂತೆ…. ಪಿಯುಸಿ ಮುಗಿದ ಮೇಲೆ ಜಯನಗರದ ಕಾಲೇಜಿಗೆ ಗ್ರಾಜುಯೇಷನ್ನಿಗೆ ಹೋದಾಗ ಅಲ್ಲಿಯವರೆಗೂ ತಾತ- ಅಜ್ಜಿಯರ ಬಿಗಿಮುಷ್ಠಿಯಲ್ಲಿ ಬಂಧಿಯಾಗಿದ್ದ ನನಗೆ ಹೊಸ ಜಗತ್ತು ಕಂಡಂತಾಯ್ತು. ಫೈನಲ್ ಇಯರ್‌ನಲ್ಲಿರುವಾಗ ಕಾಲೇಜಿನಿಂದ ಹೊಗೆನಕಲ್‌ಗೆ ಹೋದ one day ಟ್ರಿಪ್ಪಿನಲ್ಲಿ ಫೋಟೋ ಗಳನ್ನು ಸೆರೆ ಹಿಡಿಯಲು ನಮ್ಮ ಸಂಬಂಧಿಕರೊಬ್ಬರಿಂದ ಕೆಮೆರಾ ತೆಗೆದುಕೊಂಡು ಹೋಗಿದ್ದೆ.

ಆಗೆಲ್ಲ ಅದು ರೀಲುಗಳಿರುತ್ತಿದ್ದ ಹ್ಯಾಂಡೀ ಕೆಮೆರಾಗಳು. ಫೋಟೋ ಕ್ಲಿಕ್ಕಿಸಲು ಗೆಳತಿಗೆ ಕೊಟ್ಟಾಗ ಕೈಜಾರಿ ನೀರೊಳಗೆ ಬಿದ್ದು ಕೆಮರಾ ಹಾಳಾಗಿ ಹೋಯ್ತು. ಆಗೆಲ್ಲ ದುಡ್ಡೇ ಇರು ತ್ತಿರಲಿಲ್ಲ ನಮ್ಮ ಬಳಿ. ಮನೆಯಲ್ಲಿ ಹೇಳಿದರೆ ಬೈತಾರೆ ಎಂದು ಹೆದರಿ ಅದನ್ನು ಸರಿ ಮಾಡಿಸಿಕೊಡುವಂತೆ ಗೆಳತಿಗೆ ಗೋಗರೆದೆ. ಅವಳು ಹ್ಞೂ ಎಂದು ಹೇಳಿ ಕಾಲೇಜಿಗೆ ಬರುವುದನ್ನೇ ನಿಲ್ಲಿಸಿಬಿಟ್ಟಳು. ಪರೀಕ್ಷೆಗಳು ಹತ್ತಿರವಿದ್ದುದರಿಂದ ಕ್ಲಾಸುಗಳೂ ಅಷ್ಟೇನೂ ಇರದೆ, ಎಲ್ಲರೂ ಮನೆಯ ಓದಿಕೊಳ್ಳುತ್ತಿದ್ದರು.

ಆದರೆ ನನಗೆ ಕೆಮರದ್ದೇ ಟೆನ್ಷನ್. ಏನು ಮಾಡಲಿ? ಎಂದು. ಎಚ್‌ಎಎಲನಲ್ಲಿದ್ದ ಅವಳ ಮನೆಯ ಅಡ್ರೆಸ್ಸನ್ನು ಹುಡುಕಿ ಬಸ್ಸು ಹಿಡಿದು ದಿನಾ ಅವಳ ಮನೆಗೆ ಅಲೆಯುವುದಾಯಿತು. ಇದೇ ಭಯದಿಂದ ಓದಲಾಗದೆ ಒಂದೆರಡು ಎಕ್ಸಾಮ್‌ಗಳಿಗೂ ಅಟೆಂಡ್ ಆಗಲಿಲ್ಲ. ಆದರೆ ಅದನ್ನು ಮನೆಯಲ್ಲಿ ಹೇಳಲಿಲ್ಲ. ಹೀಗಾಗಿ -ನಲ್ ಇಯರ್ ಕಂಪ್ಲೀಟ್ ಆಗದೆ ಉಳಿದು ಬಿಡ್ತು. ಇದರಿಂದ ಭಯದ ಮೇಲೊಂದು ಭಯ ಸೇರಿಕೊಂಡು ಬಿಟ್ಟಿತ್ತು. ಅದಾದ ನಂತರ ಮುಂದಕ್ಕೆ ಓದಲಾಗದೆ, ಎ ದರೂ ಸ್ವಲ್ಪ ದಿನ ಕೆಲಸ ಮಾಡಿದರೆ ಹಣ ಸಿಗುತ್ತದೆ. ಅದರಿಂದ ಕೆಮೆರಾ ರಿಪೇರಿ ಮಾಡಿಸಿಕೊಟ್ಟು, ನನ್ನ ಎಕ್ಸಾಮ್ ಬರೆದು ಉಳಿದ ಸಬ್ಜೆಕ್ಟುಗಳು ಪಾಸು ಮಾಡಿಕೊಳ್ಳುವುದು ಉದ್ದೇಶವಾಗಿತ್ತು.

ಆದರೆ ಅಪ್ಪ ಬಿಲ್ ಕುಲ್ ಒಪ್ಪುತ್ತಿಲ್ಲ. ಅದೆಷ್ಟು ಓದ್ತೀಯೋ ಓದು. ಆದರೆ ಕೆಲಸಕ್ಕೆಲ್ಲ ಕಳಿಸುವುದಿಲ್ಲ. ಹೆಣ್ಣುಮಕ್ಕಳಿಂದ ದುಡಿಸಿಕೊಂಡು ತಿನ್ನುವಷ್ಟು ದಾರಿದ್ರ್ಯ ನಮಗಿನ್ನೂ ಬಂದಿಲ್ಲ ಅನ್ನುವ ಕಡ್ಡಿ ತುಂಡಾಗುವಂಥ ಮಾತುಗಳು. ಎರಡು ದಿನ ಮಾತು ಬಿಟ್ಟು, ಊಟ ಬಿಟ್ಟು ಕೊನೆಗೂ ಅವರಿಂದ ಹ್ಞೂಂ ಅನ್ನಿಸಿಕೊಂಡಿದ್ದಾಯ್ತು. ಅಪ್ಪ ನಿಗೆ ತಿಳಿಯದಂತೆ ಮನೆಯ ಬಳಿಯ ಇದ್ದ ಟೈಪಿಂಗ್ ಇನ್ಸ್ಟಿಟ್ಯೂಟಿನ ಟ್ಯೂಟರ್ ಆಗಿದ್ದರಿಂದ ನಮ್ಮ ಆಫೀಸಿಗೊಂದು ಟೈಪಿ ಬೇಕಿದ್ದಾರೆ. ನಿಮ್ಮಲ್ಲಿ ಯಾರಾ ದರೂ ಇದ್ದರೆ ರೆಫರ್ ಮಾಡಿ ಎಂದು ಕೇಳಿಕೊಂಡು ಜೆಸಿ ರೋಡಿನಲ್ಲಿದ್ದ ಹಾರ್ಡ್‌ವೇರ್ ಕಂಪನಿಯ ಮ್ಯಾನೇಜರೊಬ್ಬರು ಬಂದರು. ನಾನೇ ಯಾಕೆ ಹೋಗಬಾರದು? ಅಂದುಕೊಂಡು ಹೇಳಿದಾಗ, ಅಯ್ಯೋ ಅದಕ್ಕಿಂತ ಸಂತೋಷವೇನಿದೆ? ನಮ್ಮ ಮನೆಯೂ ಇಲ್ಲೇ ಹತ್ತಿರದ ಇದೆ. ನಾನೇ ನಿಮ್ಮನ್ನು pick and drop ಮಾಡ್ತೀನಿ ಎಂದು ಹೇಳಿ ಮನೆಗೆ ಬಂದು ಮಾತಾಡಿ ಒಪ್ಪಿಸಿ ಹೋದರು.

ಆದರೂ ಅವಲಂಬನೆ ಬೇಡವೆಂದೆನಿಸಿ ನಾನು ಬಸ್ಸಿನ ಓಡಾಡುತ್ತಿದ್ದೆ. ಒಂದೆರಡು ತಿಂಗಳಷ್ಟೆ. ಒಮ್ಮೆ ಭಾರತ್ ಬಂದ್ ಅನ್ನುವ ಸುದ್ದಿ ತಿಳಿದು, ಆಫೀಸಿಗೆ ನಾಳೆ ರಜೆ ಇರತ್ತಾ? ಎಂದು ಕೇಳಿದ್ದಕ್ಕೆ, ಅದೇನು tension ನಲ್ಲಿದ್ದರೋ ಏನೋ, ನಿಮ್ಮ ಅಪ್ಪ ನಾಳೆ ಅಂಗಡಿಗೆ ರಜೆ ಮಾಡ್ತಾರಾ? ಎಂದು ಧುಮುಗುಟ್ಟುತ್ತಾ ಕೇಳಿದರು…. ಯಾಕೋ ಇದು ಅಸಂಬದ್ಧವೆನಿಸಿ, ಕೆಲಸಕ್ಕೆ ಹೋಗುವುದು ನಿಲ್ಲಿಸಿದೆ.

ಎರಡು ದಿನಗಳ ನಂತರ ಗಂಡ-ಹೆಂಡತಿ ಇಬ್ಬರೂ ಮನೆಗೆ ಬಂದು ಇಷ್ಟು ಚಿಕ್ಕ ತಮಾಷೆಯ ಮಾತಿಗೆ ಹೀಗೆ ಮುನಿಸಿಕೊಂಡರೆ ಹೇಗೆ ಎಂದು ಸಮಾಧಾನ ಮಾಡಿ ನಾಳೆಯಿಂದ ಬನ್ನಿ ಆಯ್ತಾ ಎಂದರು. ಆಯ್ತು ಎಂದು ತಲೆಯಾಡಿಸಿದೆ ಅಷ್ಟೆ. ಆದರೆ ಹೋಗಲಿಲ್ಲ. ಅದಾದ ನಂತರ ಒಂದು ಆಡಿಟರ್ ಕಚೇರಿಯಲ್ಲಿ ಅಸಿಸ್ಟೆಂಟ್ ಆಗಿ ಸೇರಿಕೊಂಡೆ. ಆಗೆಲ್ಲ ಕಂಪ್ಯೂಟರುಗಳಿಲ್ಲದೆ ಮ್ಯಾನ್ಯುಯಲ್ ಆಗಿದ್ದ ಕಾಲ. ದೊಡ್ಡ ದೊಡ್ಡ ಕಂಪೆನಿಗಳ ಲೆಡ್ಜರ್ ಎಂಟ್ರಿಯನ್ನು tally ಮಾಡುವಷ್ಟರ ಇಡೀ ದಿನ ಕಳೆದು ಹೋಗುತ್ತಿತ್ತು. ಯಾಕೋ ಕೆಲಸ ಇಂಟರೆಸ್ಟಿಂಗ್ ಅನ್ನಿಸಲಿಲ್ಲ.

ಒಂದು ದಿನ ಬಿಟಿಎಸ್ ಸ್ಟ್ರೈಕ್ ಇತ್ತು ಆಗ ತಾನೇ ಊರ್ಮಿಳಾ ಮಾತೋಂಡ್ಕರ್ ಹಾಗೂ ಅಮೀರ್ ಖಾನ್ ರ ‘ರಂಗೀಲಾ ರೇ’ ಸಿನಿಮಾ ಅಲಂಕಾರ್ ಥೇಟರಿನಲ್ಲಿ ಬಂದಿತ್ತು. ನಾನು ನನ್ನ ಗೆಳತಿ ಬಸ್ಸಿಲ್ಲದಿದ್ದರೇನಂತೆ ಕಾಲ ಮತ್ತು ಕಾಲಿದೆಯ ಎಂದು ನಗುತ್ತಾ ಮನೆಯಿಂದ ಚಿತ್ರಮಂದಿರದ ತನಕ ಹನ್ನೆರಡು ಕಿಲೋಮೀಟರು ನಡೆದೇ ಹೋಗಿದ್ದೆವು. ಬರುವಾಗ ಬಸವನ ಗುಡಿಯ
ಆತಿಥ್ಯ ಹೊಟೇಲಿನಲ್ಲಿ ಊಟ ಮಾಡಿ ಬರುವ ಹಾದಿ ಯಲ್ಲಿ ಉದ್ಯೋಗ ಕೇಂದ್ರ ಅನ್ನುವ ಬೋರ್ಡ್ ನೋಡಿ ಇಬ್ಬರೂ ಹೆಸರು ನೊಂದಾಯಿಸಿಕೊಂಡು ಬಂದೆವು.

ಗೆಳತಿ ಅ ಪಾರ್ಟ್ ಟೈಮ್ ಆಗಿ ಕೆಲಸಕ್ಕೆ ಸೇರಿಕೊಂಡಳು, ಒಂದೆರಡು ವಾರಗಳ ನಂತರ, ರವಿ ಬೆಳಗೆರೆ ಅನ್ನುವ ಹೆಸರು ಕೇಳಿದ್ಯೇ ನಮ್ಮಾ? ಅವರ ಪತ್ರಿಕೆಯ ಆಫೀಸಿನಲ್ಲಿ ಕಂಪ್ಯೂಟರ್ ಗೊತ್ತಿರುವವರು ಕಂಪ್ಯೂಟರ್ ಆಪರೇಟರ್ ಆಗಿ ಬೇಕಂತೆ. ಒಂದಷ್ಟು ಕಥೆ, ಕವನ ಗಳಿರುತ್ತವೆ ಅದನ್ನು ಕಂಪ್ಯೂಟರಿನಲ್ಲಿ ಟೈಪ್ ಮಾಡಿಡುವುದು ಅಷ್ಟೆ ಕೆಲಸ. ನಿಮ್ಮ ಮನೆಗೂ ಸಮೀಪವಿದೆ. ಎಂದಾಗ ಹೇಗಿದ್ದರೂ ಕಂಪ್ಯೂಟರ್ ಅಪ್ಲಿಕೇಷನ್ನಿನಲ್ಲಿ ಡಿಪ್ಲೊಮಾ ಮಾಡಿಕೊಂಡಿzನಾದ್ದರಿಂದ ಹೋಗಲು ಉತ್ಸುಕಳಾದೆ.

ಆಗ 15.1996 ಹಾಯ್ ಬೆಂಗಳೂರಿನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಒಂದು ಸಾವಿರ ರುಪಾಯಿ ಸಂಬಳಕ್ಕೆ ಸೇರಿದೆ. ಈಗಿನಂತೆ ಮೆಗಾ ಬೈಟ್, ಗಿಗಾ ಬೈಟ್‌ಗಳದ್ದಲ್ಲ ಡೆ ಪ್ರೋ 386! ಅದರಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಅಕ್ಷರಗಳನ್ನು ಕಲಿಸಿದವರು ರವಿ ಬೆಳಗೆರೆ! ಅದರ ಜತೆಗೇ ಅಕೌಂಟ್ಸ್ ವಿಭಾಗಕ್ಕೆ ಲೆಕ್ಕಪತ್ರಗಳಿಗೆಂದೇ ಮತ್ತೊಂದು ಕಂಪ್ಯೂಟರಿತ್ತು. ಅದೆಲ್ಲ ನೋಡಿಕೊಳ್ಳಲು ಅಕೌಂಟೆಂಟೊಬ್ಬರ ನೇಮಕವಾಯ್ತು. ಅದು ಅವರ ದೂರದ ಸಂಬಂಧಿಯೆಂಬುದು ಆನಂತರ ತಿಳಿಯಿತು.
ಅದೇ ಸಮಯದ ಸಿನಿಮಾ ಪತ್ರಿಕೋದ್ಯಮ ಓದಿ, ಅದರಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದೊಂದಿಗೆ ಸುಮನಾ ಕಿತ್ತೂರು ಸಹ ನಮ್ಮದೇ ಕಂಪ್ಯೂಟರ್ ಸೆಕ್ಷನ್ನಿಗೆ ಸೇರ್ಪಡೆಯಾದಳು.

ಕಥೆ-ಕವನಗಳನ್ನು ಟೈಪು ಮಾಡಿಡುವುದರ ಜತೆಗೆ ಅಕೌಂಟ್ಸನ್ನೇ ಓದಿ ಕಲಿತಿದ್ದ ನನಗೆ ಪಕ್ಕದ ಇದ್ದ ಕಂಪ್ಯೂಟರಿನಲ್ಲಿ Bills, receipt ಎಂಟ್ರಿ ಮಾಡಿಡುವ ಕೆಲಸವೂ ಜತೆಯಾಯ್ತು. ಇದರಿಂದಾಗಿ ಪತ್ರಿಕೆಯ ಏಜೆಂಟರ ಹೆಸರು ಹಾಗೂ ಸ್ಥಳ, ವಿಳಾಸಗಳ ಪರಿಚಯವಾಗುತ್ತಾ ಹೋಯ್ತು. ಜತೆಗೊಂದು ಸ್ನೇಹದ ಪರಿಚಯವೂ ಆಯ್ತು. ನಿಮ್ಗೆ ಯಾರೂ boy friend ಇಲ್ಲ ಅಲ್ವಾ? ಎಂದು ತೆಳ್ಳಗಿನ ದೇಹದ, ಕನ್ನಡಕದ ಹಿಂದಿನ ಕಣ್ಣೊಳಗೆ ಆ ಅಕೌಂಟೆಂಟು ನಕ್ಕಾಗ, ನಿಮಗೆ ಹೇಗೆ ಗೊತ್ತಾಯ್ತು? ಎಂದು ಆಶ್ಚರ್ಯಗೊಂಡಿದ್ದೆ. ಸಮಯಕ್ಕೆ ಸರಿಯಾಗಿ ಬರ್ತೀರಿ. ಸಮಯಕ್ಕೆ ಸರಿಯಾಗಿ ಹೋಗ್ತೀರಿ.

ಯಾರೂ ನಿಮ್ಮನ್ನು ಕೇಳಿಕೊಂಡು ಆಫೀಸಿಗೆ ಬರೊಲ್ಲ. call ಮಾಡೊಲ್ಲ. ಅದ್ರ ಗೊತ್ತಾಗತ್ತೆ ಅಂದಾಗ, ಓಹೋ ಹುಡುಗರು ಇಷ್ಟೆಲ್ಲobserve ಮಾಡ್ತೀರಾ? ಎಂದು ಬಿಂಕದಿಂದ ಕೇಳಿದೆ. Ofcourse we boys are like that ಎಂದು ಲೆಡ್ಜರ್ ಎಂಟ್ರಿ ಮುಗಿಸಿ ನನ್ನತ್ತ ನೋಡಿದಾಗ. ಸರಿ ಸರಿ ಎಂಬಂತೆ ಕಣ್ಣು ಹೊರಳಿಸಿದ್ದೆ.