ಅಭಿವ್ಯಕ್ತಿ
ರಮೇಶ್ ಎಂ.ಕೊಣ್ಣೂರ್
rameshmkonnur@gmail.com
ಸಿನಿಮಾ ನಟ ಚೇತನ್ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಬಗ್ಗೆ ನೀಡಿದ ಹೇಳಿಕೆ ಹಾಗೂ ಅದಕ್ಕೆ ವಿದ್ಯಾಶಂಕರ ಸ್ವಾಮೀಜಿಯವರ ಉತ್ತರದ ವಿಡಿಯೋ ನೋಡ್ತಾ
ಇದ್ದೆ. ಚೇತನ್ ಅವರ ಹೇಳಿಕೆಯಲ್ಲಿ ಎಷ್ಟು ಅಪ್ರಬುದ್ಧತೆ, ವಿಚಾರಹೀನ ಕಲ್ಪನೆ, ಅಭ್ಯಾಸದ ಕೊರತೆ, ತಿಳಿಗೇಡಿತನ ಎದ್ದುಕಾಣುತ್ತದೆ. ಬಹುಶಃ ಚೇತನ್‌ಗೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಎನ್ನುವ ಪದಗಳ ಅರ್ಥ ಏನೂ ಗೊತ್ತಿಲ್ಲ. ಬ್ರಾಹ್ಮಣರಿಂದ ಅಥವಾ ಆ ಪಂಗಡದಿಂದ ಈ ಸಮಾಜಕ್ಕೆ ಆದ ಅನ್ಯಾಯ, ಅಸಮಾನತೆ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸುತ್ತೀರಾ? ಬ್ರಾಹ್ಮಣ್ಯ ಎಂದರೆ ನಿಮ್ಮ ಪ್ರಕಾರ ಏನು? ಸ್ವಾಮೀಜಿಯವರು ಹೇಳಿದಂತೆ ಬ್ರಾಹ್ಮಣ್ಯ ಎಂದರೆ ಬ್ರಹ್ಮವಿದ್ಯೆಯನ್ನು
ತಿಳಿದುಕೊಂಡವರು, ವಿದ್ಯಾವಂತರು.
ಬ್ರಾಹ್ಮಣರ ಪಂಗಡಕ್ಕೆ ಬರುತ್ತಾರೆ. ವೇದಕಾಲದಲ್ಲಿ, ನಾಲ್ಕು ಪಂಗಡಗಳಿದ್ದವು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಬ್ರಾಹ್ಮಣ ಎಂದರೆ ವಿದ್ಯಾವಂತರು, ತಿಳಿವಳಿಕೆಯುಳ್ಳವರು, ವಿದ್ಯಾದಾನ ಮಾಡುವವರು, ವೇದಾಧ್ಯಯನ ಮಾಡಿ ಅದರ ಸಾರ ಹೇಳುವವರು, ಜೀವನದ ಮೌಲ್ಯ ತಿಳಿಸಿ ಕೊಡುವವರು, ಜೀವನ ನಡೆಸುವ ಬಗ್ಗೆ ಹೇಳಿಕೊಡುವವರು. ಕ್ಷತ್ರಿಯರು ಎಂದರೆ ಕ್ಷಾತ್ರ ತೇಜಸ್ಸು ಉಳ್ಳವರಾಗಿ ಸಮಸ್ತ ಸಮಾಜವನ್ನು ಕಾಪಾಡಿ, ಸುರಕ್ಷಿತ ವ್ಯವಸ್ಥೆಯನ್ನು ನೋಡಿ ಕೊಂಡು, ಎಲ್ಲರೂ ನೆಮ್ಮದಿಯಿಂದ ಜೀವನ ಮಾಡಲಿ ಎಂದು ಕೆಲಸ ಮಾಡುವವರು. ವೈಶ್ಯ ಎಂದರೆ ಸಮಸ್ತ ಜನಗಳಿಗೆ ಆಹಾರ, ಉಪಚಾರ, ಸೇವೆ, ಆರೋಗ್ಯವಂತ ಸಮಾಜ ಹಾಗೂ ಕಲ್ಯಾಣದ ಬಗ್ಗೆ ಯೋಚಿಸಿ ಸಂಪೂರ್ಣ ವ್ಯವಸ್ಥೆಯನ್ನು ನೋಡಿಕೊಂಡು ಹೋಗುವವರು.
ಬೇಕಾದ ಸಾಮಾನುಗಳನ್ನು ಉತ್ಪಾದಿಸುವ, ಕೊಳ್ಳುವ, ಮಾರುವ, ವ್ಯಾಪಾರವನ್ನು ನಡೆಸುವುದು ಇತ್ಯಾದಿ… ಕಾಯಕ ಮಾಡುವವರು. ಇನ್ನು ಶೂದ್ರ ಎಂದರೆ ಕೆಲಸ ಮಾಡುವವರು. ಯಾವುದೇ ರೀತಿಯ ಕೆಲಸವನ್ನು ಮಾಡಬಲ್ಲವರು. ದೇಹವನ್ನು ಸದೃಢ ಮಾಡಿಕೊಂಡು ಎಲ್ಲ ಸ್ತರದ ಜನಗಳಿಗೆ ಉಪಚಾರ ಮಾಡು ವವರು. ಈ ರೀತಿಯ ಪ್ರವೃತ್ತಿ ಎಲ್ಲಾ ದೇಶದಲ್ಲಿ, ವ್ಯವಹಾರಿಕ ಜೀವನದಲ್ಲಿ ಕಾಣಬರುವುದು. ನಿಮ್ಮ ಹೇಳಿಕೆ ಪ್ರಕಾರ ಜಾತಿ ಎಂದು ತೆಗೆದುಕೊಂಡರೆ, ಎಲ್ಲ ರೈತರೂ ಒಂದೇ ಪಂಗಡದವರು. ಅದರಲ್ಲಿ ಶೂದ್ರರು, ಗೌಡರು, ಲಿಂಗಾಯತರು, ಬ್ರಾಹ್ಮಣರು ಮುಸಲ್ಮಾನರು, ಕ್ರೈಸ್ತರು ಮುಂತಾದ ಎಲ್ಲ ಪಂಗಡದವರೂ ಇದ್ದಾರೆ.
ಅವರು ಬೆಳೆದ ಬೆಳೆಯನ್ನು ಅವರೇ ಇಟ್ಟುಕೊಂಡು ಹಂಚಲು ಬರುವುದಿಲ್ಲ. ಅದರ ಖರ್ಚು ವೆಚ್ಚ ಕೂಡ ಅವರಿಗೆ ಬೇಕು. ಅವರ ಜೀವನವೂ ನಡೆಯಬೇಕು. ಅಂದರೆ ಅಲ್ಲಿ ಒಂದು ವ್ಯವಹಾರ ಇರಲೇಬೇಕು. ಅಂದರೆ ಮಾರುಕಟ್ಟೆ ಬೇಕೇ ಬೇಕು. ಈ ಮಾರುಕಟ್ಟೆಯನ್ನು ನೋಡಿಕೊಳ್ಳುವ ವೃತ್ತಿಯನ್ನು ಆರಿಸಿಕೊಂಡವರು ವೈಶ್ಯರು. ಅವರನ್ನು ವೃತ್ತಿಯ ಮೇಲೆ ವೈಶ್ಯ ಪಂಗಡ ಎಂದು ಕರೆಯಬಹುದು. ಮುಂದೆ ಇವುಗಳನ್ನೆ ಕಾಯುವ ಕೆಲಸ, ರಕ್ಷಣಾ ವ್ಯವಸ್ಥೆ, ದೇಶದ ಗಡಿ ರಕ್ಷಣೆ, ಕಾನೂನು ಪರಿಪಾಲನೆ ಮುಂತಾದ ಎಲ್ಲ ವ್ಯವಸ್ಥೆಯನ್ನು ನೋಡಿಕೊಂಡು ಬರುವುದು ಕ್ಷತ್ರಿಯ ಪಂಗಡ. ಅದೇ ರೀತಿಯಲ್ಲಿ ಇವೆಲ್ಲದರ ಮೇಲ್ವಿಚಾರಣೆ ಯಾವ ರೀತಿ ಮಾಡಬೇಕು ಎಂಬ ವ್ಯವಸ್ಥೆಯನ್ನು ರೂಪಿಸುವವರು ಬ್ರಾಹ್ಮಣರು.
ಎಲ್ಲಾ ನಾಲ್ಕು ವರ್ಣಗಳಲ್ಲಿ ಎಲ್ಲ ಪಂಗಡದ ಜನರೂ ಇzರೆ. ಎಷ್ಟು ಜನ ಬ್ರಾಹ್ಮಣ, ಲಿಂಗಾಯತರು, ಗೌಡರು, ವೈಶ್ಯರು, ಮುಸಲ್ಮಾನರು, ಕ್ರೈಸ್ತರು ಈ ರೀತಿ ಯಾಗಿ ಅವರವರ ಬುದ್ಧಿವಂತಿಕೆಗೆ ಅವರವರ ಆಯ್ಕೆ ಪ್ರಕಾರ ಈ ಪಂಗಡಗಳಲ್ಲಿ, ವರ್ಣಗಳಲ್ಲಿ ಹಂಚಿಕೆಯಾಗಿಲ್ಲ? ಎಲ್ಲ ವ್ಯವಸ್ಥೆಯಲ್ಲಿ ಎಲ್ಲ ಪಂಗಡದ ಜಾತಿಯ ಜನರೂ ಸೇರಿಕೊಂಡಿzರೆ. ಹಾಗಾದರೆ ಈ ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರ ಮೇಲೆಯೇ ಯಾಕೆ ಇಷ್ಟು ದ್ವೇಷ? ಮೊದಲೆ ಹಳ್ಳಿಯ ಪಂಚಾಯತಿಯಲ್ಲಿ ಎಲ್ಲ ಪಂಗಡದ ಜನ ಇದ್ದು, ಆಯಾ ಪಂಗಡದ ಮುಖಂಡರು ಪಾಲ್ಗೊಂಡು, ಹಳ್ಳಿಯಲ್ಲಿ ಉಂಟಾದ ವ್ಯಾಜ್ಯ, ಕಲಹಗಳನ್ನು ಬಗೆಹರಿಸುವುದು, ಆಪತ್ತು ಬಂದರೆ ಎಲ್ಲರೂ ಸೇರಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು, ಹಳ್ಳಿಯ ಜನರ ಯೋಗಕ್ಷೇಮ ನೋಡಿಕೊಳ್ಳುವುದು, ಹೀಗೆ ವ್ಯವಸ್ಥಿತವಾಗಿ ನಡೆಯುತ್ತಿತ್ತು.
ಪಂಚಾಯತಿ ಅಂದರೆ ಪಂಚ ಮುಖಂಡರು, ಅವರಲ್ಲಿ ಬ್ರಾಹ್ಮಣ, ಲಿಂಗಾಯತ, ಗೌಡ ಅಷ್ಟೇ ಅಲ್ಲ, ಎಲ್ಲ ಪಂಗಡದ ಮುಖಂಡರೂ ಇರುತ್ತಿದ್ದರು. ಕೆಳಸ್ತರದ ಜನರು, ಮುಖಂಡರು, ಎಲ್ಲರೂ ಅವರ ಅಹವಾಲುಗಳನ್ನು ಕೇಳುತ್ತಿದ್ದರು. ಹಿಂದಿನ ಕಾಲದಲ್ಲಿ ಇದ್ದ ಈ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಿ ಚೇತನ ಅವರೇ.
ಇನ್ನು ಬ್ರಾಹ್ಮಣ, ಬ್ರಾಹ್ಮಣ್ಯ ಒಂದು ಭಯೋತ್ಪಾದನೆ ಎಂದಿದ್ದೀರಿ. 3000 ವರ್ಷಗಳಿಗೂ ಮೇಲ್ಪಟ್ಟು ಇವರು ಅಧ್ಯಾತ್ಮಿಕ ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ.
ಒಂದು ಕಾಲದಲ್ಲಿ ಸಂಸ್ಕೃತ ಅಥವಾ ಇನ್ನಿತರ ಯಾವುದೇ ಭಾಷೆ ತೆಗೆದುಕೊಳ್ಳಿ, ಎಲ್ಲರಿಗೂ ಈ ಎಲ್ಲ ಭಾಷೆಗಳ ಮೇಲೆ ಹಿಡಿತ ಇರಲಿಲ್ಲ. ಸರಿಯಾದ ಉಚ್ಛಾರವೂ ಬರುತ್ತಿರಲಿಲ್ಲ. ಈಗಲೂ ಹಾಗೆಯೇ. ಮುಸಲ್ಮಾನರು ಮತ್ತು ಇನ್ನಿತರ ಆಕ್ರಮಣಕಾರರಿಂದ, ವೇದ, ಪುರಾಣ, ಗ್ರಂಥಗಳ ರಕ್ಷಣೆಯನ್ನು ಮಾಡುತ್ತಾ ಅದನ್ನು ಓದಿ ತಿಳಿದುಕೊಂಡು ಬಾಯಿಂದ ಬಾಯಿಗೆ ಹರಡುತ್ತಾ, ಅದರ ಬಗ್ಗೆ ತಿಳಿವಳಿಕೆ ಉಂಟುಮಾಡಿ, ಧರ್ಮದ ರಕ್ಷಣೆ ಮಾಡುತ್ತಾ ಇಂದಿನವರೆಗೆ ಹಿಂದೂ ಧರ್ಮದ ಉಳಿವಿನ ಬಗ್ಗೆ ಪ್ರಯತ್ನಿಸುತ್ತ ಬಂದಿರುವವರೇ ಬ್ರಾಹ್ಮಣರು ಎಂದರೆತಪ್ಪಾಗಲಾರದು. ಈ ಕಾಯಕದಲ್ಲಿ ಕೈಜೋಡಿಸಿದ ಬ್ರಾಹ್ಮಣೇತರರ ಪಾತ್ರವೂ ದೊಡ್ಡದಿದೆ. ಹೀಗೆ ಎಲ್ಲಾ ಪಂಗಡ, ಜಾತಿಯ ಜನರ ರಕ್ಷಣೆಯಿಂದ ಹಿಂದೂಧರ್ಮ ಇಂದಿಗೂ ಉಳಿದುಕೊಂಡು ಬಂದಿದೆ.
ರೋಮ, ಈಜಿಪ್ಟ್ ಮುಂತಾದ ಧರ್ಮದ ರೀತಿ ಪೂರ್ತಿ ನಶಿಸಿ ಹೋಗಿಲ್ಲ. ಬ್ರಾಹ್ಮಣರು ಓದುಬರಹ ಬರದಿದ್ದವರಿಗೆ, ಅವರ ಆಡುಭಾಷೆಯಲ್ಲಿ, ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದರಿಂದ ಹಿಂದೂಸ್ಥಾನದಲ್ಲಿ ಇಂದಿಗೂ ವೇದ, ಪುರಾಣ, ಅಧ್ಯಾತ್ಮ, ಗೀತೆ, ಮಹಾಭಾರತ, ರಾಮಾಯಣ ಮುಂತಾದ ಅನೇಕ ಧಾರ್ಮಿಕ ಗ್ರಂಥಗಳು ಪುಸ್ತಕ ರೂಪದಗಲಿ, ಜನಪದ ಗೀತೆಯ ರೂಪದಗಲಿ, ಮಾತಿನ ರೂಪದಲ್ಲಾಗಲಿ, ಆಚರಣೆಯ ರೂಪದಲ್ಲಾಗಲಿ, ಪ್ರತಿಯೊಬ್ಬನ ಮನದಲ್ಲಿ, ಬಾಯಲ್ಲಿ, ಅವುಗಳ ತಿಳಿವಳಿಕೆ ಇದೆ. ಹಾಗೆಯೇ ಕೆಳಸ್ತರದ ಜನಾಂಗದವರಿಂದ ಹಿಡಿದು ಮೇಲುಸ್ತರದ ಜನಾಂಗದವರೆಗೂ ಅವರವರ ತಿಳಿವಳಿಕೆ, ಮನೆತನ ದಿಂದ ಆಚರಿಸಿಕೊಂಡು ಬಂದ ಪದ್ಧತಿ, ಆಚರಣೆ, ನಡವಳಿಕೆ ಇಂದಿಗೂ ಉಳಿದುಕೊಂಡು ಬಂದಿದೆ.
ಅವರವರ ಆಚರಣೆಗೆ ಯಾವ ಬ್ರಾಹ್ಮಣರೂ ಅಡ್ಡ ಬಂದಿಲ್ಲ. ಹೀಗೆಯೇ ಆಚರಿಸಬೇಕು ಎಂಬ ಕಟ್ಟಳೆ ಹಾಕಿಲ್ಲ, ಹಾಕುವುದೂ ಇಲ್ಲ. ಅವರವರ ಆಚರಣೆಯನ್ನು ಅವರಿಗೆ ಬೇಕಾದಂತೆ ಮಾಡುತ್ತಿzರೆ ಅಲ್ಲವೇ? ಇನ್ನು ಬ್ರಾಹ್ಮಣರ ಆಚರಣೆ, ಮಡಿ – ಮೈಲಿಗೆ, ಆಹಾರ, ಆಚಾರ – ವಿಚಾರದ ಬಗ್ಗೆ ಹೇಳಹೊರಟರೆ, ಅವರು
ಶುದ್ಧತೆಯನ್ನು ಆಚರಿಸುತ್ತಾರೆ, ನಿತ್ಯ ಸ್ನಾನ, ಪೂಜೆ ಮುಂತಾದವುಗಳ ಅಭ್ಯಾಸ ತಲೆತಲಾಂತರದಿಂದ ಬಂದಿದೆ.
ಅದು ಒಂದು ಶಿಸ್ತುಬದ್ಧ ಜೀವನದ ಪ್ರತೀಕ. ಲಿಂಗಾಯತರ, ಗೌಡರ ಮನೆಗಳಲ್ಲೂ ನೀವು ಹೋಗಿ ನೋಡಿ. ಅವರೂ ಇದೇ ರೀತಿ ಸ್ವಚ್ಛತೆಯನ್ನು ಆಚರಿಸುತ್ತಾರೆ. ಮೂರು ಸಾವಿರ ವರ್ಷಗಳಿಂದಲೂ ಯಾರು ಯಾರನ್ನೂ ಈ ತರಹ ಹೆಗಲ ಮೇಲೆ ಕೈಹಾಕಿ ಶೇಕ್ ಹ್ಯಾಂಡ್ ಮಾಡಿಕೊಂಡು ತಮ್ಮ ಪ್ರೀತಿಯನ್ನು ಪ್ರದರ್ಶಿಸು ವುದಿಲ್ಲ. ಇಂದಿಗೂ ಎಲ್ಲರ ಮನೆಯಲ್ಲಿ, ಯಾರೇ ಹೊರಗಿನಿಂದ ಬಂದರೂ, ಅವರು ಯಾವುದೇ ಜಾತಿ ಇರಲಿ, ಬಂದವರನ್ನು ಅಡುಗೆ ಮನೆಗೆ ಬರಗೊಡುವುದಿಲ್ಲ. ಬಂದ ಅತಿಥಿಗಳಿಗೆ ಮಲಗಲು ಬೇರೆ ಕೋಣೆಯನ್ನು ವ್ಯವಸ್ಥೆ ಮಾಡುತ್ತಾರೆಯೇ ಹೊರತು, ತಮ್ಮ ಮಲಗುವ ಕೋಣೆಗೆ, ತಮ್ಮ ಮಕ್ಕಳ ಕೋಣೆಯೊಳಗೆ ಸೇರಿಸುವುದಿಲ್ಲ. ಹಾಗೆಯೇ ಬ್ರಾಹ್ಮಣರಲ್ಲಿ ಕೆಲವು ಆಚರಣೆಗಳಿವೆ.
ಅದು ಬಹಳವಾಗಿ ಸ್ವಚ್ಛತೆಯನ್ನು ಶಿಸ್ತುಬದ್ಧ ಜೀವನವನ್ನು ಕಟ್ಟಿಕೊಂಡು ಬಂದ ವಿಚಾರ. ಅದು ಅವರವರಿಗೆ ಬಿಟ್ಟ ವಿಚಾರ. ಎಲ್ಲರ ವಿಚಾರಗಳನ್ನು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ತತ್ತ್ವಕ್ಕೆ ಒಂದುಗೂಡಿಸಿ ಕಗ್ಗಂಟು ಮಾಡಿ ಅದನ್ನು ಬ್ರಾಹ್ಮಣರ ಆಚರಣೆಯೆಂದು ಮನಬಂದಂತೆ ಮಾತನಾಡುವುದು ಸರಿಯಲ್ಲ. ನೀವು ನಿಮ್ಮ ತಂದೆ ತಾಯಿಯನ್ನು ಕೂರಿಸಿಕೊಂಡು ಅವರ ಪೂರ್ವಿಕರ ಆಚರಣೆಯ ಬಗ್ಗೆ ತಿಳಿದುಕೊಳ್ಳಿ. ಪೂಜೆ – ಪುನಸ್ಕಾರ ಆಚಾರ – ವಿಚಾರ ವ್ಯವಸ್ಥೆಗಳ ಬಗ್ಗೆ ದಯವಿಟ್ಟು
ಕೇಳಿಕೊಂಡು ಅವರು ಅದನ್ನು ಯಾರಿಂದ, ಯಾತಕ್ಕೆ, ಯಾವ ಕಾರಣದಿಂದ, ಯಾರ ಹೇಳಿಕೆಯಿಂದ ಮಾಡುತ್ತಿzರೆ ಎಂದು ಕೇಳಿ ತಿಳಿದುಕೊಳ್ಳಿ. ಆಗ ನಿಮಗೆ ಸ್ವಲ್ಪ ಅರ್ಥ ಆಗಬಹುದು.
ಇನ್ನೊಂದು ವಿಷಯ ವಿದ್ಯಾಶಂಕರ ಸ್ವಾಮಿ ಹೇಳಿದಂತೆ ನಮ್ಮಿಂದ ತಪ್ಪಾಗಿರಬಹುದು ಎಂಬ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಇಲ್ಲಿ ಬ್ರಾಹ್ಮಣ ಎಂದರೆ ಜಾತಿಯಲ್ಲ, ಜ್ಞಾನ ಸಂಪಾದಿಸಿದ ಮನುಷ್ಯ ಎಂದು ಪರಿಗಣಿಸಿ ಮತ್ತು ನಾಲ್ಕು ವರ್ಣಗಳನ್ನು ನೆನಪಿಸಿಕೊಳ್ಳಿ. ಯಾವುದೇ ಒಂದು ವರ್ಣ ಸರಿಯಾಗಿ ಕೆಲಸ ಮಾಡಲಿಲ್ಲ ಎಂದರೆ ಕರ್ತವ್ಯ ವಿಮುಖರಾದರೆ ಸಮಾಜದ, ದೇಶದ, ಭೂಗೋಳದ ವಿನಾಶ ನಿಶ್ಚಿತ. ಹೀಗೆ ಓದಿಕೊಂಡು, ಶಿಕ್ಷಣ ಅಭ್ಯಾಸ ಮಾಡಿ, ಎಷ್ಟೋ ಹಿಂದುಳಿದ ಜನಾಂಗದವರು ಮುಂದೆ ಬಂದಿzರೆ. ಅವರಿಗೆ ಈ ಬ್ರಾಹ್ಮಣರೇ ಸಹಕಾರಿಯಾಗಿzರೆ. ಅಂಬೇಡ್ಕರ್ ಅವರಿಗೆ ಬ್ರಾಹ್ಮಣ ಶಿಕ್ಷಕ. ಅವರನ್ನು ಶಾಲೆಗೆ ಕರೆದು ಪ್ರೋತ್ಸಾಹಿಸದಿದ್ದರೆ ಇಂದು ಅಂಬೇಡ್ಕರ್ ಇಷ್ಟು ದೊಡ್ಡ ವ್ಯಕ್ತಿ ಆಗುತ್ತಿದ್ದರೋ ಇಲ್ಲವೋ? ವ್ಯಾಸ ವಾಲ್ಮೀಕಿ, ಪುರಂದರ, ಕನಕ, ಶಿಶುನಾಳ ಎಷ್ಟು
ಉದಾಹರಣೆಗಳು ಬೇಕು ನಿಮಗೆ? ಅವರ ವಿದ್ಯೆ ಅಧ್ಯಾತ್ಮ ಗ್ರಂಥ, ಸಾಹಿತ್ಯ ಮುಂತಾದವುಗಳನ್ನು ಉಳಿಸಿ ಗೌರವಯುತವಾಗಿ ಬೆಳೆಸದೇ ಇದ್ದಿದ್ದರೆ ಇಂದಿನ ಜನಾಂಗ ಇವುಗಳಿಂದ ವಂಚಿತರಾಗುತ್ತಿರಲಿಲ್ಲವೇ? ಈ ದೇವರು ಎನ್ನುವುದು ಇಡೀ ಜಗತ್ತಿನ ಜನಾಂಗದ ಕಲ್ಪನೆ.
ಇದನ್ನು ಬಿಟ್ಟು ಯಾವ ಧರ್ಮವೂ ಇಲ್ಲ. ಈ ದೇವರ ಕಲ್ಪನೆಯೇ ಒಂದು ವಿಚಿತ್ರ. ಅದು ಆಯಾ ಧರ್ಮಕ್ಕೆ ತಕ್ಕಂತೆ ರೂಪುಗೊಂಡಿದೆ. ಯಾವ ಧರ್ಮದವರೂ ಆ ನಂಬಿಕೆಯನ್ನು ವಿಕೃತಗೊಳಿಸಲು ಸಾಧ್ಯವಿಲ್ಲ. ಅದನ್ನು ವಿಕೃತಗೊಳಿಸಲು ಹೊರಟರೆ ಧರ್ಮಯುದ್ಧ ಆದೀತು. ಅದೇ ರೀತಿ ದೇವರು ಎಂಬ ಕಲ್ಪನೆ ಬಗ್ಗೆ ನಮ್ಮ ದೇವರೇ ಸರಿ, ನಿಮ್ಮ ದೇವರು ತಪ್ಪು, ಅದೆ ಸುಳ್ಳು ಎಂಬ ಕಲ್ಪನೆ ಇಡೀ ಜಗತ್ತಿನ ಜನರಿಗೆ ಯಾವಾಗ ಬರುತ್ತದೆಯೋ ಅಂದೇ ಜಗತ್ತು ನಾಶವಾಗುವುದು ಖಂಡಿತ.
ಅಧ್ಯಾತ್ಮದ ಪರಿಕಲ್ಪನೆ, ಪ್ರತಿಯೊಂದು ಸಮಾಜದಲ್ಲಿಯೂ ಅವರದೇ ಆದ ಅದರದೇ ಆದ ರೀತಿಯಲ್ಲಿ ಮನುಷ್ಯನ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಹಿಂದೂಗಳಲ್ಲಿ ದೇವಸ್ಥಾನ, ಪೂಜೆ, ದೇವರು, ವಿಗ್ರಹ, ಹೂವಿನ ಅಲಂಕಾರ, ಧೂಪ, ದೀಪ, ಗಂಟೆ ಮುಂತಾದವುಗಳ ಜತೆಗೆ ಕೈಮುಗಿಯುವುದು, ಅಡ್ಡ ಬೀಳುವುದು, ಕ್ರೈಸ್ತರಲ್ಲಿ ಚರ್ಚು ಜೀಸಸ್, ಮೇರಿ, ಕ್ರಾಸ್ ಮಂಡಿಯೂರಿ ತಲೆ ಬಾಗಿಸುವುದು. ಮುಸ್ಲಿಮರಲ್ಲಿ ನಮಾಜ್, ಮಂಡಿಯೂರಿ ಕುಳಿತು ಕೈಚಾಚಿ, ಎಡ-ಬಲ ನೋಡಿ ಬಗ್ಗಿ ನಮಿಸುವುದು ಇವೆ ಧಾರ್ಮಿಕ ಮತ್ತು ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಚರಣೆ. ಬ್ರಾಹ್ಮಣರ ಆಚರಣೆಯಲ್ಲಿ ಭಯೋತ್ಪಾದನೆ ಎಲ್ಲಿ ಬಂತು? ಹಾಗೇನಾದರೂ ನಿಮಗೆ ಕಂಡಿದ್ದರೆ, ಇದೇ ತರಹ ಬೇರೆಬೇರೆ ಧರ್ಮದ ಆಚರಣೆ ಯಲ್ಲಿಯೂ ಭಯೋತ್ಪಾದನೆ ಕಾಣಬೇಕಿತ್ತಲ್ಲ? ಅವುಗಳ ಬಗ್ಗೆ ಮಾತನಾಡಲು, ಟೀಕೆ ಮಾಡಲೂ ನಿಮಗೆ ದಮ್ ಇರಬೇಕು ಚೇತನ್.
ಬೇರೆಯವರ ಬಗ್ಗೆ ಈ ರೀತಿ ಬರೆದರೆ, ಹೇಳಿದರೆ ಅವರು ತಕ್ಷಣ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುವವರು ಎನ್ನುವ ಭಯವೇ?. ಆದರೆ ಬ್ರಾಹ್ಮಣರು ಅಮಾಯಕರು ಅವರ ಬಗ್ಗೆ ಏನೇ ಅವಹೇಳನ ಮಾಡಿದರೂ ಅವರು ತಲೆ ಬಗ್ಗಿಸಿಕೊಂಡು, ದೇವರಿದ್ದಾನೆ ನಿನಗೆ ಶಿಕ್ಷೆ ಕೊಡುತ್ತಾನೆ ಅಂದುಕೊಂಡು, ಗೋವಿನ ಗೀತೆಯ ತರಹ ಹೋಗುತ್ತಾರೆ. ಅದಕ್ಕಾಗಿ ನಿಮ್ಮಂಥ ಬುದ್ಧಿಮಾಂದ್ಯಜೀವಿಗಳು, ಪ್ರಜ್ಞಾವಂತ ತಿಳಿಗೇಡಿಗಳು ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ಮತ್ತು ಇಡೀ ಜನಾಂಗವನ್ನು
ಬೈಯ್ಯುತ್ತೀರಿ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಕಾಶ್ಮೀರಿ ಪಂಡಿತರು. ಅವರು ಅಲ್ಲಿಂದ ಓಡಿಬಂದರೇ ಹೊರತು ಆಕ್ರಮಣಕಾರಿಯಾಗಿ ನಡೆದು ಕೊಳ್ಳಲಿಲ್ಲ. ಇಂದಿಗೂ ನಾವು ಮತ್ತೆ ಸ್ವಸ್ಥಾನಕ್ಕೆ ಹೋಗುತ್ತೇವೆ, ಇಂದಲ್ಲ ನಾಳೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಕಾಯುತ್ತಾ ಕ್ಯಾಂಪ್‌ಗಳಲ್ಲಿ ಕಾಲ ಕಳೆಯು ತ್ತಿದ್ದಾರೆ. ಇದೇ ಅವರು ಮಾಡಿದ ತಪ್ಪು.
ಎಲ್ಲರಿಗೂ ಸುಲಭವಾಗಿ ಬೈಯ್ಯಲು ಅಥವಾ ಟೀಕಿಸಲು ಸಿಗುವುದು ಈ ಬ್ರಾಹ್ಮಣ ಬ್ರಾಹ್ಮಣ್ಯ ಅಲ್ಲವೇ? ಒಂದು ಕಡೆ ಭಗವಾನ್ ಮತ್ತೊಂದು ಕಡೆ ಚೇತನ್, ಭಗವಾನ್ – ಚೇತನ್ ವಾಹ್! ಹೂವಿನಹಾರ ಹಾಕಬೇಕು ನಿಮಗೆ ! ಅವರವರ ಪರಂಪರೆಯ ಮಠಾಧೀಶರು ಕಲಿಸಿದ, ಮಂತ್ರ ತಂತ್ರ, ಶ್ಲೋಕ, ಉಕ್ತಿ ಅಥವಾ ಪ್ರಮುಖ ದಾರ್ಶನಿಕರು ಹಾಕಿದ ಮಾರ್ಗ ದರ್ಶನದಲ್ಲಿ, ದೀಕ್ಷೆ, ಮದುವೆ, ಪೂಜೆ ಇತ್ಯಾದಿಗಳನ್ನು ನಡೆಸುತ್ತಾರೆ. ಕ್ರಿಶ್ಚಿಯನ್ನರು, ಪಾದ್ರಿ, ಪೋಪ್, ಬೈಬಲ್‌ನಲ್ಲಿ
ಹೇಳಿದಂತೆಯೇ ನಡೆದುಕೊಳ್ಳುತ್ತಾರೆ. ಹಾಗೆಯೇ, ಮುಸ್ಲಿಂ ಜನಾಂಗದಲ್ಲಿ ಮೌಲ್ವಿಗಳೂ ಇದೇ ರೀತಿಯ ಪಾಠವನ್ನು ಮಸೀದಿಯಲ್ಲಿ, ನಿಖಾ, ಖು, ಖತ್ನಾ, ಮುಂತಾದ ಪ್ರಮುಖ ಕಾರ್ಯಕ್ರಮಗಳಲ್ಲಿ ಖುರಾನ್ ಓದಿ ಆಚರಿಸಿಕೊಂಡು ಬರುವುದು ಪದ್ಧತಿ. ಹಾಗೆಯೇ ಯಹೂದಿಗಳು ಜೊರಾಷ್ಟ್ರೀಯನ್, ಕಾಡು ಜನಾಂಗ, ಬುಡಕಟ್ಟು ಜನಾಂಗ ದಲ್ಲಿಯೂ ಕೆಲವು ಆಚರಣೆ, ಪದ್ಧತಿ, ಪ್ರತೀತಿಗಳನ್ನು ಅವುಗಳ ಮುಖಂಡರು ಹೇಳಿದಂತೆಯೇ ತಲೆತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಮಂತ್ರಪಠಣ ಆಚರಣೆ, ಪದ್ಧತಿಗಳು, ನಂಬಿಕೆಗಳು ಜನಾಂಗದಿಂದ ಜನಾಂಗಕ್ಕೆ ಬೇರೆಬೇರೆ ರೀತಿಯಾಗಿ ಕಾಣುತ್ತವೆ. ಆದರೆ ಎಲ್ಲವನ್ನೂ ಒಟ್ಟಿಗೆ ತುಲನೆ ಮಾಡಿ
ನೋಡಿದರೆ, ಅವರೆಲ್ಲರೂ ಪುರೋಹಿತ ಶಾಹಿಗಳೇ. ಅವರವರ ಗ್ರಂಥಗಳಲ್ಲಿ ಪೂರ್ವಜರು ಹೇಳಿದಂತೆ ಆಚರಣೆ ಮಾಡುತ್ತಾರೆ. ಹಾಗೆ ಮಾಡದಿದ್ದಲ್ಲಿ ನರಕ ಪ್ರಾಪ್ತಿಯಾಗುತ್ತದೆ, ದೇವರು ಕೋಪಗೊಳ್ಳುತ್ತಾನೆ, ಎನ್ನುವ ಇತ್ಯಾದಿ ನಂಬಿಕೆಗಳಿವೆ. ಇದನ್ನೇ ಬ್ರಾಹ್ಮಣರು ಹೇಳಿದರೆ ನಿಮಗ್ಯಾಕೆ ಕೋಪ? ಅವರಿಂದ ದಬ್ಬಾಳಿಕೆ, ಧರ್ಮ ಅಧ್ಯಾತ್ಮಗಳ ಹೇರಿಕೆ. ಅವರ ಹೇಳಿಕೆಯಿಂದ ಬೇರೆ ಜನಾಂಗದವರ ಮನಸ್ಸನ್ನು ಹಾಳು ಮಾಡುತ್ತಿದ್ದಾರೆ.
ಆದರಿಂದ ಈ ಬ್ರಾಹ್ಮಣ, ಬ್ರಾಹ್ಮಣ್ಯವನ್ನು ತಿರಸ್ಕರಿಸಬೇಕು, ಅವರಿಗೆ ಪಾಠ ಕಲಿಸಬೇಕು ಎಂಬ ಹೇಳಿಕೆ ಯಾಕೆ? ಬರೀ ಬ್ರಾಹ್ಮಣರನ್ನೇ ಯಾಕೆ ಗುರಿಯಾಗಿಟ್ಟು ಕೊಂಡು ಮಾತನಾಡುತ್ತೀರಿ? ಬೇರೆ ವರ್ಗದ, ಪಂಗಡದ ಪುರೋಹಿತರು ಇದರಲ್ಲಿ ಭಾಗಿ ಅಲ್ಲವೇ? ಒಮ್ಮೆ ನಿಮ್ಮ ಪ್ರಶ್ನೆ ಮಾಡಿಕೊಂಡು ನೋಡಿ, ಚಿಂತನ, ಮನನ ಮಾಡಿಕೊಳ್ಳಿ. ಅದಕ್ಕೂ ಮುಂಚೆ, ಅವುಗಳಲ್ಲಿ ಏನಿದೆ, ಹೀಗೇಕೆ ಎಂಬುದನ್ನು ಓದಿ ಅರ್ಥೈಸಿಕೊಳ್ಳಿ. ಜಾತಿ, ಧರ್ಮಗಳ ಬಗ್ಗೆ ವಿವಾದಾತ್ಮಕ ಹೇಳಿಕೆ, ಹೀಯಾಳಿಕೆ ಮಾಡುವುದನ್ನು ಬಿಟ್ಟು ಎಲ್ಲರೂ ಸೇರಿ ಒಳ್ಳೆಯ ಸಮಾಜವನ್ನು ಕಟ್ಟೋಣ.