Monday, 16th September 2024

ಸ್ಟುವರ್ಟ್‌ ಬ್ರಾಡ್ ನಿಜಕ್ಕೂ ಬ್ರಾಡ್‌ ಮೈಂಡೆಡ್‌

ತುಂಟರಗಾಳಿ

ಸಿನಿಗನ್ನಡ

ಅಂತೂ ಇಂತೂ ಬಹಳ ದಿನಗಳ ನಂತರ ನಿರ್ದೇಶಕ ಗುರುಪ್ರಸಾದ್ ಮತ್ತೊಂದು ಸಿನಿಮಾ ಶುರು ಮಾಡಿದ್ದರು. ಅದು ರಂಗಾಯಕ ಅನ್ನೋ ಚಿತ್ರ. ಆದರೆ, ಶುರು ಮಾಡಿ ದ್ದಾರೆ ಅಷ್ಟೇ.

ಅದು ಮುಗಿಯೋದು ಯಾವಾಗ, ಬಿಡುಗಡೆ ಆಗೋದು ಯಾವಾಗ ಅಂತ ಗುರು ಪ್ರಸಾದ್ ಅವರನ್ನು ಬಲ್ಲ ಯಾರೂ ಕೇಳಲ್ಲ ಬಿಡಿ. ಯಾಕಂದ್ರೆ ಗುರು ಒಂಥರಾ ಪಂಚವಾರ್ಷಿಕ ಯೋಜನೆ ಥರ ಸಿನಿಮಾ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಗುರುಪ್ರಸಾದ್ ಸಿನಿಮಾ ಶುರು ಮಾಡಿ ದ್ರು, ಅದೂ ತಮ್ಮ ಹಳೆಯ ಮಿತ್ರ ಮತ್ತು ಶತ್ರು ಜಗ್ಗೇಶ್ ಅವರ ಜತೆ. ಗುರು ಮತ್ತು ಜಗ್ಗೇಶ್ ಜತೆಯಾಗಿ ಸಿನಿಮಾ ಮಾಡಿದಾಗ ಚೆನ್ನಾಗೇ ಇದ್ರೂ ನಂತರ ಅವರ ಮಧ್ಯೆ ವೈಮನಸ್ಸು ಉಂಟಾಗಿತ್ತು.

ಮಾತೆತ್ತಿದರೆ ನಾನು ಶಾರದಾ ಸುತ ಅನ್ನುವ ಅವರು ನವರಸ ನಾಯಕ ನನ್ನ ಮುಂದೆ ಏನೂ ಅಲ್ಲ ಎಂಬಂತೆ ವರ್ತಿಸಿದ್ದರು. ಜಗ್ಗೇಶ್ ಅವರ ಜತೆ ಮಾತ್ರವಲ್ಲ, ಅವರ ಜತೆ ಎರಡು ಸಿನಿಮಾ ಮಾಡಿದ ಡಾಲಿ ಧನಂಜಯ ಅವರ ಜತೆಗೂ ಗುರು ಅವರದ್ದು ಇದೇ ರೀತಿಯ ವರ್ತನೆಯಾಗಿತ್ತು. ಈಗ ನಟ ಜಗ್ಗೇಶ್ ತಮ್ಮ ಮಗನ ಹೆಸರೂ ಗುರು ಆಗಿರುವುದರಿಂದಲೋ ಏನೋ, ಗುರು ಪ್ರಸಾದ್ ಅವರನ್ನೂ ತಮ್ಮ ಮನೆ ಮಗ ಎಂದುಕೊಂಡು ಎಲ್ಲವನ್ನೂ ಮರೆತು ಅವರ ಜತೆ ಮತ್ತೊಂದು ಸಿನಿಮಾ ಶುರು ಮಾಡುವ ಮನಸ್ಸು ಮಾಡಿದ್ದರು. ಆದರೆ ಆ ಸಿನಿಮಾ ಏನಾಯ್ತು ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೆಲವರು ಬರುತ್ತೆ ಅಂತಾರೆ, ಕೆಲವರು ನಿಂತು ಹೋಯ್ತು ಅಂತಾರೆ. ಯಾವುದು ಸತ್ಯ ಅಂತ ಸಂಬಂಧಪಟ್ಟವರೇ ಹೇಳಬೇಕು. ನಾವು ಹೇಳಿದ್ರೆ ತಪ್ಪಾಗುತ್ತೆ.

ಇಲ್ಲಿ ಇನ್ನೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಕರೋನಾ ಸಮಯದಲ್ಲಿ ಗುರುಪ್ರಸಾದ್ ಅವರು ಸೋಷಿಯಲ್ ಮೀಡಿಯಾದಲ್ಲಿ
ಕಾಣಿಸಿಕೊಂಡು ಮಾತನಾಡಿದ ರೀತಿ ನೋಡಿದವರು, ಈಯಪ್ಪ ಯಾಕೋ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಅನಿಸಿದ್ದು ನಿಜ. ತೀರಾ ಬಾಯಿಗೆ ಬಂದಂತೆ ಮಾತನಾಡುತ್ತಾ, ಸಿಕ್ಕ ಸಿಕ್ಕವರನ್ನೆ ಬಯ್ಯುತ್ತಾ ಗುರು ಗರಂ ಆಗಿ ರೌದ್ರಾವತಾರ ತಾಳಿದ್ದರು. ಮತ್ತೆ ಇವರು ಸಿನಿಮಾ ಮಾಡೋದು ಡೌಟು ಅನ್ನೋ ಮಟ್ಟಕ್ಕೆ ಅವರ ಮನೋಭಾವ ಆತಂಕ ಹುಟ್ಟಿಸುತ್ತಿತ್ತು.

ಆದರೆ ಈಗ ಗುರು ಸುಧಾರಿಸಿಕೊಂಡಿದ್ದಾರೆ ಅನ್ನೋದು ಮತ್ತೆ ಕಾಣಿಸ್ತಿದೆ. ಯಾಕೆಂದರೆ ಗುರು ಮತ್ತೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿ ತೊಡಗಿ ಕೊಂಡಿದ್ದಾರೆ. ಹೊಸ ಚಿತ್ರಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಮೊದಲಿನಂತೆ ಲವಲವಿಕೆಯಿಂದ ಮಾತಾಡುತ್ತಿದದಾರೆ. ಇದು ನಿಜಕ್ಕೂ ಖುಷಿ ಕೊಡೋ ವಿಷಯ. ಹಾಗಾಗಿ, ಗುರು ಇನ್ನೂ ಸಾಕಷ್ಟು ಸಿನಿಮಾಗಳನ್ನು ಮಾಡುವಷ್ಟು ಸಮರ್ಥರಾಗಿದ್ದಾರೆ ಅಂತ ಬಹಳಷ್ಟು ಜನ ಅಭಿಮಾನಿಗಳು ನಿಟ್ಟುಸಿರು ಬಿಟಿದ್ದಾರೆ.

ಆದರೆ ಈ ಬಾರಿಯಾದರೂ ಕಿರಿಕಿರಿಗಳಿಲ್ಲದೆ ಶೂಟಿಂಗ್ ಮುಗಿಸಿ, ವರ್ಷಗಟ್ಟಲೇ ಸಿನಿಮಾ ಬಿಡುಗಡೆಯನ್ನು ಎಳೆಯದೆ ಚಿತ್ರಮಂದಿರ ಗಳಲ್ಲಿ ಅವರ ನಿರ್ದೇಶನದ ಯಾವುದಾದರೂ ಸಿನಿಮಾ ಬೇಗನೆ ಬಿಡುಗಡೆ ಆಗಲಿ ಅನ್ನೋದು ಎಲ್ಲರ ಹಾರೈಕೆ.

ಲೂಸ್ ಟಾಕ್
ಉದ್ಧವ್ ಠಾಕ್ರೆ (ಕಾಲ್ಪನಿಕ ಸಂದರ್ಶನ)
? ಏನ್ ಸಾರ್, ನಿಮ್ಮ ಪಕ್ಷದಲ್ಲೂ ಅರ್ಧದಲ್ಲಿ ಕೈ ಎತ್ತಿ ಹೋಗೋರು ಇದ್ದಾರೆ ಅಂತ ಅಂದ್ಕೊಂಡಿರಲಿಲ್ಲ
– ಏನ್ ಮಾಡೋದು, ಶಿವಸೇನೆಯಲ್ಲಿ ಠಾಕ್ರೆ ವಂಶದೋರ್ ಬಿಟ್ರೆ ಉಳಿದೋರೆಲ್ಲ ಠಕ್ಕರೇ ಅಂತ ಪ್ರೂವ್ ಆಯ್ತು.
? ನಿಮ್ಮ ಇವತ್ತಿನ ಪರಿಸ್ಥಿತಿಗೆ ಕಾರಣ ಯಾರು?
– ಏಕನಾಥ್ ಶಿಂಧೆ ಮತ್ತು ಅವನ ಹಿಂದೆ ಇರೋ ಕುರಿ ಮಂದೆ
? ನೀವೇ ಬಿಜೆಪಿ ಜತೆ ಅಡ್ಜ ಮಾಡ್ಕಂಡು ಸರಕಾರ ಮಾಡಬಹುದಿತ್ತಪ್ಪ?
– ರೀ, ಸಕ್ಕರೆ ಕಂಡ್ರೆ ಇರುವೆಗಳು ಓಡಿ ಹೋಗ್ತವೆ, ಹುಲಿಗಳಲ್ಲ
? ಸಿಎಂ ಜಾಗದಲ್ಲಿ ಈಗ ಇನ್ನೊಬ್ರು ಕೂರ್ತಾರೆ ನಿಮಗೆ ಏನನ್ನಿಸುತ್ತೆ?
– ಅಯ್ಯೋ, ಪಬ್ಲಿಕ್ ಟಾಯ್ಲೆಟ್‌ನಲ್ಲಿ ನಮ್ ಕೆಲಸ ಮುಗಿಸ್ಕೊಂಡ್ ಬಂದ್ಮೇಲೆ ಇನ್ಯಾರೋ ಹೋಗಿ ಅ ಕೂರ್ತರೆ. ಅದರ ಬಗ್ಗೆ ನಾನ್ಯಾಕೆ ಯೋಚ್ನೆ ಮಾಡ್ಲಿ.
? ನಿಮ್ಮ ಸ್ನೇಹಿತರಾಗಿದ್ದ ಬಿಜೆಪಿಯೋರು ಹಿಂಗೆ ಮೋಸ ಮಾಡಿದ್ರಲ್ಲ, ಆಶ್ಚರ್ಯ ಆಗ್ತಾ ಇಲ್ವಾ?
– ಇಲ್ಲ, ಅವರ ಬಗ್ಗೆ ನಂಗೆ ಚೆನ್ನಾಗಿ ಗೊತ್ತು. ಅವರು ಮೋಸಮಾಡದೇ ಇದ್ದಿದ್ರೆ ಆಶ್ಚರ್ಯ ಆಗ್ತಾ ಇತ್ತು.

ನೆಟ್ ಪಿಕ್ಸ್
ಖೇಮು ಒಂದ್ಸಲ ಸ್ಲೀಪರ್ ಕೋಚ್ ಟ್ರೈನ್‌ನಲ್ಲಿ ಲಾಂಗ್ ಜರ್ನಿ ಹೊರಟ. ಬೆಂಗಳೂರಿನಿಂದ ಡೆಲ್ಲಿಗೆ ಹೊರಟ ಟ್ರೈನಿನಲ್ಲಿ ಅವನಿಗೆ ಸ್ಲೀಪರ್ ಕೋಚ್‌ನಲ್ಲಿ ಜಾಗ ಸಿಗೋದೇ ಕಷ್ಟ ಆಯ್ತು. ಕಷ್ಟ ಪಟ್ಟು ಕಾಸು ಕೊಟ್ಟು ಹೇಗೋ ಒಂದು ಸ್ಲೀಪಿಂಗ್ ಸೀಟ್ ಬುಕ್ ಮಾಡಿದ.

ಸರಿ ಖೇಮು ಹೊರಡುವ ದಿನ ಬಂತು. ಸ್ಟೇಷನ್‌ಗೆ ಹೋಗಿ ತನ್ನ ಸೀಟ್ ಎಲ್ಲಿದೆ ಅಂತ ಹುಡುಕಿ ಹೋದ್ರೆ ಅಲ್ಲಿ ಬರೀ ೨ ಸೀಟುಗಳ ಸ್ಲೀಪಿಂಗ್ ಕೋಚ್ ಇತ್ತು. ಅಲ್ಲಿ ಪ್ರಯಾಣ ಮಾಡುತ್ತಿದ್ದು ಇವನದ್ದೇ ವಯಸ್ಸಿನ ಒಂದು ವಿವಾಹಿತ ಅಟ್ರಾಕ್ಟಿವ್ ಹೆಂಗಸು. ಆಕೆಯನ್ನು ಮಾತನಾಡಿಸಿ, ಈ ಜರ್ನಿಯಲ್ಲಿ ನಾವು ಜತೆಗೇ ಪ್ರಯಾಣ ಮಾಡುತ್ತಿದ್ದೇವೆ. ಅಲ್ಲಿಯವರೆಗೂ ಸ್ನೇಹಿತರಾಗಿರೋಣ ಅಂತ ಕೈ ಕುಲುಕಿ ಮಾತನಾಡಿದ ಖೇಮು. ಸರಿ ರಾತ್ರಿ ಊಟ ಆಯ್ತು, ಮಲಗೋ ಟೈಮು.

ಇಬ್ಬರೂ ತಮ್ಮ ತಮ್ಮ ಸ್ಲೀಪಿಂಗ್ ಕೋಚ್‌ನಲ್ಲಿ ಮಲಗೋಕೆ ರೆಡಿ ಆದ್ರು. ಖೇಮು ಮೇಲಿನ ಬರ್ತ್‌ನಲ್ಲಿ , ಆಕೆ ಕೆಳಗಿನ ಬರ್ತ್‌ನಲ್ಲಿ ಮಲಗಿದರು. ಸ್ವಲ್ಪ ಹೊತ್ತಿನಲ್ಲಿ ಖೇಮುಗೆ ಛಳಿ ಆಗೋಕೆ ಶುರು ಆಯ್ತು. ಮೇಲಿಂದಲೇ, ಕೆಳಗೆ ಮಲಗಿದ್ದ ಆಕೆಯನ್ನು, ನಾವಿಬ್ಬರೂ ಈಗ ಸ್ನೇಹಿತರಲ್ವಾ, ನಂಗೆ ತುಂಬಾ ಛಳಿ ಆಗ್ತಿದೆ. ಇ- ಯೂ ಡೋಂಟ್ ಮೈಂಡ್, ಅಲ್ಲಿ ಕೆಳಗಿರೋ ಒಂದು ಬೆಡ್ ಶೀಟ್ ತೆಗೆದುಕೊಡ್ತೀರಾ ಅಂತ ಕೇಳಿದ. ಅದಕ್ಕೆ, ಖೇಮು ಕಡೆಗೆ ರೊಮ್ಯಾಂಟಿಕ್ ಆಗಿ ನೋಡುತ್ತಾ, ಆಕೆ ಹೇಳಿದಳು, ನಾವಿಬ್ರೂ ಸ್ನೇಹಿತರು, ತುಂಬಾ ಚಳಿ ಆಗ್ತಿದೆ ಅಂತಿದೀರಾ, ನಿಮಗೆ ಬೆಡ್ ಶೀಟ್ ಬೇಕು, ಆದ್ರೆ, ನಾವಿಬ್ಬರೂ ಯಾಕೆ ಈ ರಾತ್ರಿಯ ಮಟ್ಟಿಗೆ ಗಂಡ ಹೆಂಡತಿಯರ ಥರ ಇರಬಾರದು.

ಖೇಮುಗೆ ಇದನ್ನು ಕೇಳಿ ಶಾಕ್ ಮತ್ತು ಒಳಗೊಳಗೆ ಎಕ್ಸೈಟ್‌ಮೆಂಟ್ ಆಯ್ತು. ಮೆಲ್ಲಗೆ ಕೆಳಗಿಳಿದು ಬಂದು ಆಕೆಯ ಬೆಡ್ ಶೀಟ್‌ನೊಳಗೆ ತೂರಿಕೊಳ್ಳಲು ನೋಡಿದ. ಆಗ ಆಕೆ ಸಿಟ್ಟಿನಿಂದ ಹೇಳಿದ್ಳು, ಹಲೋ ನಾನು ಗಂಡ ಹೆಂಡತಿಯರ ಥರ ಇರೋಣ ಅಂತ ಹೇಳಿದ್ದು, ನಿನಗೆ ಬೇಕಾಗಿರೋ ಬೆಡ್ ಶೀಟ್‌ನ ನೀನೇ ಹೋಗಿ ತಗೋ ಅಂತ ಹೇಳೋಕೆ. ಖೇಮುಗೆ ಈಗ ನಿರಾಸೆ ಮತ್ತು ಶಾಕ್ ಆಯ್ತು. ಸಿಟ್ಟು ಬಂದರೂ ತಡೆದುಕೊಂಡು, ಮೆಲ್ಲಗೆ ಹೋಗಿ ಬೆಡ್ ಶೀಟ್ ತಗೊಂಡು ಮೇಲೆ ಹೋಗಿ ಮಲಗಿಕೊಂಡು ಬೆಡ್ ಶೀಟ್ ಓಪನ್ ಮಾಡಿ, ಗೊರ್ ಎಂದು ಗೊರಕೆ ಹೊಡೆಯುತ್ತಾ, ಪುರ್ ಅಂತ ಹೂಸು ಬಿಟ್ಟು ಹೇಳಿದ, ಸರಿ, ನೀವು ಹೇಳಿದ ಹಾಗೆ, ಇಬ್ರೂ ಇವತ್ತು ರಾತ್ರಿಯ ಮಟ್ಟಿಗೆ ಗಂಡ ಹೆಂಡತಿ ಥರ ಇರೋಣ.

ಲೈನ್ ಮ್ಯಾನ್
? ಸ್ಟುವರ್ಟ್ ಬ್ರಾಡ್ ರೆಕಾರ್ಡ್ ಬರೆದಿzರೆ. ಟೆ ಮ್ಯಾಚ್ ಓವರ್ ಒಂದರಲ್ಲಿ 35 ರನ್ ಕೊಟ್ಟು. ಅದರಲ್ಲೂ ಬುಮ್ರಾ ಬ್ಯಾಟಿಂಗ್ ಮಾಡುವಾಗ.
-ಸ್ಟುವರ್ಟ್ ಬ್ರಾಡ್ ನಿಜಕ್ಕೂ ಬ್ರಾಡ್ ಮೈಂಡೆಡ್ ಮನುಷ್ಯ ಬಿಡ್ರಪ್ಪ

? ಜೀವನದಲ್ಲಿ ನೇಮ್ ಮಾಡೋದು ಮುಖ್ಯ ಸರ್ ನೇಮ್ ಅಲ್ಲ.
-ಯಾಕಂದ್ರೆ ಹೆಸರು ರಿಶಬ್ ಆದ್ರೂ,. ಪಂತ್‌ಗೂ ಶೆಟ್ಟಿಗೂ ತುಂಬಾ ವ್ಯತ್ಯಾಸ ಇದೆ.
? ೫ ಬಾಲ್ ಬೋಲ್ ಮಾಡಿ, 6 ಬಾಲ್ ಆಯ್ತು ಅಂತ ವಾದ ಮಾಡೋದು
– ‘ಓವರ್’ ಕಾನಿಡೆ
? ಡಾಕ್ಟರ್ಸ್ ಡೇ ಸ್ಪೆಷಲ್
‘ನಮ್ ಕೈಲಾದಷ್ಟು ಪ್ರಯತ್ನ ಪಟ್ಟಿದ್ದೀವಿ. ಉಳಿದಿದ್ದು ದೇವರಿಗೆ ಬಿಟ್ಟಿದ್ದು’ ‘ವಾತಾವರಣ ಚೇಂಜ್ ಆದ್ರೆ ಅವರು ಸುಧಾರಿಸಿಕೊಳ್ಳಬಹುದು. ಅವರನ್ನ ಎದ್ರೂ ಬೇರೆ ಊರಿಗೆ ಕರ್ಕೊಂಡ್ ಹೋಗಿ’ ‘ಯಾವ್ ಮೆಡಿಸಿನ್ನೂ ವರ್ಕ್ ಆಗ್ತಿಲ್ಲ. ಇನ್ನೇನಿದ್ರೂ ನಿಮ್ಮ ಪ್ರೀತಿ ಮಾತ್ರ ಅವರ ಪ್ರಾಣ ಉಳಿಸೋಕೆ ಸಾಧ್ಯ’

‘ಅವರ ಮನಸ್ಸಿಗೆ ಆಘಾತ ಆಗುವಂಥ ಯಾವ ವಿಷಯಗಳನ್ನೂ ಅವರಿಗೆ ಹೇಳಬೇಡಿ’ ‘ಹೆಚ್ಚು ಅಂದ್ರೆ ಇನ್ನು 6 ತಿಂಗಳು ಬದುಕಬಹುದು, ಅವರ ಆಸೆ ಏನಿದೆಯೋ ಅದನ್ನ ಈಡೇರಿಸಿ’

‘ನಾನು ಡಾಕ್ಟರ್, ದೇವರಲ್ಲ’
‘ಇದರಲ್ಲಿ ನಮ್ಮದೇನೂ ಇಲ್ಲ, ಅವರ ಜೀವ ಉಳಿಸಿದ ಕ್ರೆಡಿಟ, ಹಗಲೂ ರಾತ್ರಿ ಅವರ
ಜೊತೆ ಇದ್ದು ನೋಡಿಕೊಂಡ ಆಕೆಯ ಗಂಡನಿಗೆ ಹೋಗಬೇಕು’
’ಐ Zಞ oಟ್ಟ್ಟqs’
ಆಪರೇಷನ್ ಥಿಯೇಟರ್ ಡಾಕ್ಟರ್‌ಗಳ ಜತೆಗೆ, ಸಿನಿಮಾ ಥಿಯೇಟರ್ ಡಾಕ್ಟರ್‌ಗಳಿಗೂ
ಶುಭಾಶಯಗಳು.

? ಮೊನ್ನೆ ತಾನೇ ಕಮಲ್ ಹಾಸನ್ ವಿಕ್ರಮ್ ಸಿನಿಮಾ, ಆಮೇಲೆ ರವಿಚಂದ್ರನ್ ಮಗನ ತ್ರಿವಿಕ್ರಮ, ಈಗ ಸತೀಶ್ ನೀನಾಸಂ ಅವರ ಡಿಯರ್ ವಿಕ್ರಮ್
-ಒಟ್ನಲ್ಲಿ ಚಿತ್ರರಂಗದ ಹಿಂದೆ ವಿಕ್ರಮ, ಬೇತಾಳನ ಥರ ಹಿಂದೆ ಬಿದ್ದಿದ್ದಾನೆ.

? ತ್ರಿವಿಕ್ರಮ ಚಿತ್ರದ ಒನ್ ಲೈನ್ ವಿಮರ್ಶೆ
-ಜ್ಚಿಠಿಟ್ಟqs ಜ್ಞಿಛಿಞZo ಥಿಯೇಟರ್‌ನಲ್ಲಿ ತ್ರಿವಿಕ್ರಮ ಸಿನಿಮಾ ನೋಡಿದೆ.
ಥಿಯೇಟರ್ ತುಂಬಾ ಚೆನ್ನಾಗಿದೆ.
? ಶ್ರಾವಣ ಸ್ಪೆಷಲ್
-ನಾವು ಶ್ರಾವಣ ಅಂತ ನಾನ್ ವೆಜ್ ತಿನ್ನಲ್ಲ. ಆದ್ರೆ ಈ ಸೊಳ್ಳೆಗಳಿಗೆ ಶ್ರಾವಣ ಇರಲ್ವಾ.. ಆಗ್ಲೂ ನಮ್ ರಕ್ತ ಹೀರ್ತಾವಪ್ಪ..
? ಗಂಡ ಹೆಂಡ್ತಿ ಮ್ಯಾಟ್ರು
-ಅಲ್ಲ ಕಣೇ, ಊಟಕ್ಕೆ ಉಪ್ಪಿನಕಾಯಿನೇ ಹಾಕಲ್ವಲ್ಲ ನೀನು, ಅದನ್ನ ಹಂಗೇ ಇಟ್ಕೊಂಡು ಏನ್ ಮಾಡ್ತಿಯಾ.. ಏನ್ ಉಪ್ಪಿನಕಾಯಿ ಹಾಕ್ಕೊಂಡ್ ನೆಕ್ತೀಯಾ.