Friday, 20th September 2024

ಯಡಿಯೂರಪ್ಪ: ಬಿಜೆಪಿಯ ವರ್ಣರಂಜಿತ ಅಧ್ಯಾಯ

BS Yediyurappa

ಪ್ರಚಲಿತ

ಟಿ.ದೇವಿದಾಸ್

ಯಡಿಯೂರಪ್ಪ ಇಲ್ಲದ ರಾಜ್ಯ ಬಿಜೆಪಿಯನ್ನು ಕಲ್ಪಿಸಿಕೊಳ್ಳುವುದು ಬಹುಕಷ್ಟ ಅಂತ ಅನಿಸಿದ್ದು ಹಿಂದಿನ ಅವಧಿಯ ಬಿಜೆಪಿ ಸರಕಾರದ ಆಡಳಿತವನ್ನು ನೋಡಿದಾಗ! ಅವಲೋಕಿಸಿ ನೋಡಿದರೆ, ಒಬ್ಬೇ ಒಬ್ಬ ಜವಾಬ್ದಾರಿಯುತ ನಾಯಕ ನನ್ನು ಭವಿಷ್ಯದ ನೆಲೆಯಲ್ಲಿ ಕಾಣಲು ಸಾಧ್ಯವಾಗದೇ ಹೋದದ್ದು ಬಿಜೆಪಿಯ ದುರಂತ!

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಾಗ ತಾರಕ್ಕಕ್ಕೇರಿದ್ದ ಪರ, ವಿರೋಧ ಮತ್ತು ಬಂಡಾಯದ ಮಾತುಗಳು ಸಾರ್ವಜನಿಕವಾಗಿ ಹುಟ್ಟಿಕೊಂಡು ಅಪಹಾಸ್ಯಕ್ಕೂ, ಕ್ಲೀಷೆಗೂ, ಜೋಕಿಗೂ, ದ್ವೇಷಕ್ಕೂ, ಸೇಡಿಗೂ, ಚರ್ಚೆಗೂ ಗ್ರಾಸವಾಗಿತ್ತು. ಅದು ತಳಮಟ್ಟದಿಂದ ಪಕ್ಷದ ನೊಗವನ್ನು ಹೆಗಲ ಮೇಲಿಟ್ಟು ಬೆಳೆಸಿದ ಹಿರಿಯರಾದ ಯಡಿಯೂರಪ್ಪರನ್ನು ಸಾರ್ವಜನಿಕವಾಗಿ ಮುಜುಗರಕ್ಕೆ ಒಳಪಡಿಸಿತ್ತು!

ಶತಾಯಗತಾಯ ಇಳಿಸಿಯೇ ಸಿದ್ಧ ಎಂದು ಪ್ರತಿಜ್ಞೆ ಮಾಡಿದವರಂತೆ ಬಾಯಿಗೆ ಬಂದಹಾಗೆ ಮನಸೋ ಇಚ್ಛೆ ಮಾತಾಡಿದವರ ಶ್ರಮದಿಂದ ಯಡಿಯೂರಪ್ಪ ತಾವಾಗಿಯೇ ರಾಜೀನಾಮೆ ಕೊಡುವಂತಾಯಿತು. ಒತ್ತಡಕ್ಕೆ ಅಸಹಜವಾಗಿ ಮಣಿದು ತನಗೊಗ್ಗದ
ಹಾಗೆ ತಳೆದ ಬೆಳೆದ ಪರಿಸ್ಥಿತಿಯ ಪ್ರಭಾವಕ್ಕೆ ಒಳ ಗಾದ ಯಡಿಯೂರಪ್ಪ ಹಿರಿಯರ ಆಶೀರ್ವಾದ ಮತ್ತು ಜೊತೆಯಲ್ಲಿ ದುಡಿದ ವರ ಬೆಂಬಲದೊಂದಿಗೆ ತಾನೇ ಕಟ್ಟಿದ ಮನೆಯಿಂದ ಹೊರಬರುವಾಗಲಂತೂ ಸಂತೋಷದಿಂದ ಪದತ್ಯಾಗ ಮಾಡಲಿಲ್ಲ
ಎಂಬುದನ್ನು ಕನ್ನಡದ ಜನತೆ ನೋಡಿದೆ. ಏರಿದವ ಇಳಿಯಲೇಬೇಕು, ಒಳಗೆ ಹೋದವ ಹೊರ ಬರಲೇಬೇಕೆಂಬ ಲೋಕ ನ್ಯಾಯಕ್ಕೆ ಯಡಿಯೂರಪ್ಪ ಹೊರತಾಗಲೇ ಇಲ್ಲ.

ಸೋಲುವುದು ಯಡಿಯೂರಪ್ಪನವರಿಗೆ ಹೊಸತೇನಲ್ಲ. ಸೋಲುತ್ತಲೇ ಏರುದಾರಿಯ ಹಾದಿಯಲ್ಲಿ ಬೆಳೆದುಬಂದ ಯಡಿ
ಯೂರಪ್ಪನವರಿಗೆ ಹೊಂದಿಕೊಳ್ಳುವ, ಅವಕಾಶವನ್ನು ಬಳಸಿಕೊಳ್ಳುವ ಸ್ವಭಾವ ಅನುಭವಜನ್ಯವಾದುದು. ಅವರು ಕಾಣದ ರಾಜಕೀಯ ಸನ್ನಿವೇಶಗಳಿಲ್ಲ!

ರಾಜ್ಯಪಾಲರೋ ಅಥವಾ ಇನ್ಯಾವುದೋ ತತ್ಸಂಬಂಧಿತ ರಾಜಕೀಯ ಪುನರ್ವಸತಿ ಕೇಂದ್ರದ ಮುಖ್ಯಸ್ಥನಾಗಿ ಮಿಂದು ಪಟ್ಟೆ ಯನ್ನುಂಟು ಹುದ್ದೆಯಲ್ಲಿ ವಿರಾಜಿಸುವ ಮೂಲಕ ತಮ್ಮ ಅಸ್ತಿತ್ವವನ್ನು ರಾಜಕೀಯದ ಹೊರಗೆ ಯಡಿಯೂರಪ್ಪ ಕಾಣುವಂಥ ದಿನಗಳು ದೂರವೇನಿಲ್ಲ ಎಂದು ಹೆಚ್ಚುಕಡಿಮೆ ನಿರ್ಧರಿಸಿದ ಹೊತ್ತಿನ ಮತ್ತೆ ಬಿಜೆಪಿಯಲ್ಲಿ ಯಡಿಯೂರಪ್ಪ ಮೈ ಕೊಡವಿ ಕೊಂಡು ಎದ್ದ ಜಟ್ಟಿಯಂತೆ ಪಕ್ಷ ಸಂಘಟನೆಯನ್ನು ಮತ್ತು ಲೋಕಸಭಾ ಚುನಾವಣೆಯನ್ನು ಗೆಲ್ಲುವ ತಂತ್ರವನ್ನು ಹೆಣೆಯುತ್ತ ಈ ಇಳಿವಯಸ್ಸಿನಲ್ಲಿ ಆವರಿಸಬಹುದಾದ ನಿರ್ಲಿಪ್ತತೆಯಿಂದ ಹೊರಬಂದು ಮಗನ ಮೂಲಕ ರಾಜ್ಯ ಬಿಜೆಪಿಯನ್ನು ನಿಯಂತ್ರಣಕ್ಕೆ ತಗೊಂಡಿದ್ದಾರೆ.

ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯ ಬೆಳವಣಿಗೆಯನ್ನೇ ಅವಲೋಕಿಸಿದರೆ ಯಡಿಯೂರಪ್ಪನವರ ಸದ್ಯದ ಅಸ್ತಿತ್ವ ಗೊತ್ತಾಗುತ್ತದೆ. ಹಾಸ್ಯುಂಡು ಬೀಸಿ ಒಗೆ ದಂಗ ಎನ್ನುವಂತೆ ಆಗದ ಯಡಿಯೂರಪ್ಪ ಬಿಜೆ ಪಿಯ ಹೈಕಮಾಂಡನ್ನು ತನಗೆ ಬೇಕಾದಂತೆ ಬಗ್ಗಿಸಿಕೊಳ್ಳುವಲ್ಲಿ ಯಶಸ್ಸನ್ನು ಕಂಡರು ಎಂದರೆ ಅಚ್ಚರಿಯೇ? ಟಠಿ Zಠಿ Z. ರಾಜ್ಯ ಬಿಜೆಪಿಯ ಚರಿತ್ರೆಯಲ್ಲಿ ಯಡಿಯೂರಪ್ಪನವರನ್ನು ಹೋಲುವ ಇನ್ನೊಂದು ಅಸ್ಮಿತೆ ಬಿಜೆಪಿಯ ಇಲ್ಲವೆಂಬುದು ಬೆಳಕಿನಷ್ಟು ಸತ್ಯ!

ಅಫ್ ಕೋರ್ಸ್ ಕಾಂಗ್ರೆಸ್ಸಲ್ಲೂ ಇಲ್ಲ! ತಳಮಟ್ಟದಿಂದಲೇ ಬಿಜೆಪಿಯನ್ನು ಬೆಳೆಸುತ್ತ ಪಕ್ಷದೊಂದಿಗೇ ಬೆಳೆದವರು ಯಡಿಯೂ ರಪ್ಪ. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಅಷ್ಟೊಂದು ದೊಡ್ಡಮಟ್ಟದ ಹೆಸರಿಲ್ಲದ ಸಂದರ್ಭದಲ್ಲೂ ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪನವರು ಬೆಳೆಸಿದ್ದವರು. ಪಕ್ಷಕ್ಕಾಗಿ ಅವಿರತ ಶ್ರಮಿಸಿದವರು. ಪದತ್ಯಾಗದ ಸಂದರ್ಭದಲ್ಲಿ ಅದನ್ನು ಅವರೇ ಹೇಳಿಕೊಂಡಿzರೆ. ಬಿಜೆಪಿಯೇ ಪಡೆಯಬಹುದು ಎನ್ನುವ ಹೊತ್ತಲ್ಲೂ ಬಹುಮತವನ್ನು ಪಡೆಯದ ಸಂದರ್ಭ ದಲ್ಲಿ ಹೊಂದಾಣಿಕೆಯ ತಂತ್ರಗಾರಿಕೆಯನ್ನು ಜೆಡಿಎಸ್ ನೊಂದಿಗೆ ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿಯ ಸರಕಾರವನ್ನು ರಚಿಸಿದರು.

ಇದಕ್ಕೂ ಮೊದಲು ೧೧೦ ಸೀಟು ಗೆದ್ದು ದಕ್ಷಿಣದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿಯೂ
ಯಡಿಯೂರಪ್ಪನವರದ್ದೇ! ಆ ಮಟ್ಟಿಗೆ ಯಡಿಯೂರಪ್ಪ ಏಕಮೇವಾದ್ವಿತೀಯ ನೇತಾರರೇ ಸರಿ! ಬಿ.ಬಿ.ಶಿವಪ್ಪ ಮತ್ತು ಎ.ಕೆ.ಸುಬ್ಬಯ್ಯರ ರಾಜಕೀಯ ನೇಪಥ್ಯದ ಅನಂತರದಲ್ಲಿ ಕಂಡ ಕಮಲದ ತೆರೆಯಲ್ಲಿ ರಾಜ್ಯ ಬಿಜೆಪಿಯ ಅವಿಭಾಜ್ಯ ಅಂಗ ಮಾತ್ರವಲ್ಲದೆ, ನೇತಾರರೇ ಆಗಿ ಬೆಳೆದವರು ಯಡಿಯೂರಪ್ಪನವರು.

ಯಡಿಯೂರಪ್ಪ ಇಲ್ಲದ ರಾಜ್ಯ ಬಿಜೆಪಿಯನ್ನು ಕಲ್ಪಿಸಿಕೊಳ್ಳುವುದು ಬಹುಕಷ್ಟ ಅಂತ ಅನಿಸಿದ್ದು ಹಿಂದಿನ ಅವಧಿಯ ಬಿಜೆಪಿ
ಸರಕಾರದ ಆಡಳಿತವನ್ನು ನೋಡಿದಾಗ! ಪಕ್ಷದ ಅಸ್ತಿತ್ವ ಮತ್ತು ಅಸ್ಮಿತೆ ಯನ್ನೂ ಸೇರಿಸಿ, ಸರಕಾರದ ಕಾರ್ಯವಿಧಾನಗಳನ್ನು ಅವಲೋಕಿಸಿ ನೋಡಿದರೆ, ಒಬ್ಬೇ ಒಬ್ಬ ಜವಾಬ್ದಾರಿಯುತ ನಾಯಕನನ್ನು ಭವಿಷ್ಯದ ನೆಲೆಯಲ್ಲಿ ಕಾಣಲು ಸಾಧ್ಯವಾಗದೇ ಹೋದದ್ದು ಬಿಜೆಪಿಯ ದುರಂತ!

ಯಾರು ಎಷ್ಟೇ ದನಿಯೇರಿಸಿದರೂ ಬೊಬ್ಬಿರಿದರೂ ಪೌರುಷವನ್ನು ಮೆರೆದರೂ ಯಡಿಯೂರಪ್ಪನವರೇ ಪೂರ್ಣಾವಧಿ ಮುಖ್ಯಮಂತ್ರಿ ಯಾಗಿದ್ದರೆ ಬಿಜೆಪಿ ಹೀನಾಯವಾಗಿ ಸೋಲುತ್ತಿರಲಿಲ್ಲವೇನೋ! ಯಡಿಯೂರಪ್ಪನವರಲ್ಲಿ ಈ ತಾಕತ್ತು ಹುಟ್ಟಿದ್ದು ಅವರು ಸವೆಸಿದ ರಾಜಕೀಯ ಬದುಕು ಮತ್ತು ಅದರಿಂದ ಗಳಿಸಿದ ಶಕ್ತಿಯಿಂದ! ಬಿ.ಬಿ.ಶಿವಪ್ಪನವರ ಸೌಮ್ಯ ಸೌಜನ್ಯ ಮತ್ತು ಎ.ಕೆ.ಸುಬ್ಬಯ್ಯನವರ ನಿಷ್ಠುರತೆಯ ಪ್ರಭಾವ ಯಡಿಯೂರಪ್ಪನವರನ್ನು ಬೆಳೆಸಿದ್ದರೊಂದಿಗೆ ಜಾತಿಯೂ ವರವಾಗಿ ಒದಗಿದ್ದರಿಂದ! ಹದಿನೆಂಟನೆಯ ದಿನದ ಯುದ್ಧದ ಕೌರವನಂತೆ ಸೋತಾಗ ದುರಂತ ನಾಯಕನಾಗಿಯೂ, ಕೆಲವೊಮ್ಮೆ
ಽರೋದಾತ್ತನಾಗಿಯೂ, ಒಮ್ಮೊಮ್ಮೆ ಧಿರೋದ್ಧತನಾಗಿಯೂ ಶೋಭಿಸಿದವರು ಯಡಿಯೂರಪ್ಪ. ಕರಾಳ ತುರ್ತು ಪರಿಸ್ಥಿತಿ ಜನಸಂಘಕ್ಕೆ ಹೊಸಜೀವ ಕೊಟ್ಟಿತು. ಸಂಘ ಪರಿವಾರವನ್ನು ಬೆಳೆಸಿತು. ಯಡಿಯೂರಪ್ಪನವರ ರಾಜಕಾರಣದ ಉತ್ಕರ್ಷದ ಏಳುಬೀಳುಗಳ ಬಗ್ಗೆ ಗೊತ್ತಿದ್ದವರು ಅವರನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ದೇವೇಗೌಡರು ಬಲ್ಲರು. ಸಿದ್ದರಾಮಯ್ಯರೂ ಬಲ್ಲರು.

ತನಗೆ ಬೇಕಾದ ಕ್ಷೇತ್ರದಲ್ಲಿ ತನಗೆ ಬೇಕಾದ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ತಾಕತ್ತು ಕರ್ನಾಟಕದಲ್ಲಿ ಯಾರಿ ಗಾದರೂ ಇದ್ದರೆ ಅದು ಯಡಿಯೂರಪ್ಪನವರಿಗೆ ಮಾತ್ರ ಎಂಬುದು ರಾಜಕೀಯ ವಲಯದ ಮಾತು! ಲಿಂಗಾಯಿತ ಜಾತಿಯು ಹಿಂದೂ ಮತವನ್ನು ನುಂಗಿಹಾಕಿದ್ದಕ್ಕೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಮತ್ತು ಜಾತ್ಯಾಧಾರಿತ
ಉಪ ಮುಖ್ಯಮಂತ್ರಿಗಳ ಆಯ್ಕೆಯೂ ಆಗಿಹೋಯ್ತು. ಅಲ್ಲಿಗೆ ಹಿಂದುತ್ವ ಎಂಬುದು ಬಿಜೆಪಿಗೆ ಕಾಲಿಗೆ ಸಿಗದ ನೆಲವಾಗಿ, ಜಾತೀಯತೆಯ ನೇಣು ಬಿಜೆಪಿಗೂ ಸುತ್ತಿಕೊಂಡಿತು. ಆದರೆ, ಬೇಕಾದುದನ್ನು ಬೇಕಾದ ಸಮಯದಲ್ಲಿ ಬೇಕಾದ ಹಾಗೆ
ಪಡೆದುಕೊಳ್ಳಬಹುದಾದ ಶಕ್ತಿಯಿರುವ ಯಡಿಯೂರಪ್ಪರು ಮಗನಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ದಕ್ಕಿಸಿಕೊಂಡರೇ ವಿನಾಃ ರಾಜಕೀಯದಿಂದ ವಿಮುಖರಾಗಲಿಲ್ಲ. ಎ.ಕೆ.ಸುಬ್ಬಯ್ಯರಂತೆ ಯಡಿಯೂರಪ್ಪ ಹುಟ್ಟು ಹೋರಾಟಗಾರಾದರೂ ಸುಬ್ಬ
ಯ್ಯನವರಂತೆ ಯಾವ ಅತಿಗಳಿಗೆ ಹೋಗುವ ಸ್ವಭಾವದವರಲ್ಲ.

ಮಂಡ್ಯದ ಯಡಿಯೂರಪ್ಪ ಶಿಕಾರಿಪುರಕ್ಕೆ ಸ್ವಯಂಸೇವೆಗೆ ಬಂದರೂ ಅeತವಾಸವನ್ನು ಮುಗಿಸಿ ಮನೆಯಿಂದ ಬೀದಿಗೆ ಬಂದು
ಜನಸಂಘವನ್ನು ಸೇರಿದರು. ಜನಸಂಘದಲ್ಲಿದ್ದಾಗ ಹೆಸರು ಮಾಡದ ಯಡಿಯೂರಪ್ಪ ಜನತಾಪಕ್ಷ ಒಡೆದು ಬಿಜೆಪಿಯಾದಾಗ ಮುಖ್ಯವಾಹಿನಿಯಲ್ಲಿ ನಿಂದರು. ರಾಜಕೀಯ ಪುಡಾರಿಯಾದರು. ಹಲವು ರಾಷ್ಟ್ರೀಯ ಸ್ವಯಂ ಸೇವಕರು ರಾಜಕೀಯ
ಸ್ವಯಂಸೇವಕರಾದರು. ಪುರಸಭೆಯಾದಿಯಾಗಿ ಎಲ್ಲ ಬಗೆಯ ರಾಜಕೀಯ ಸ್ಥಾನಗಳಲ್ಲಿ ದೇಶಭಕ್ತಿ ಗಿಂತಲೂ ಪಕ್ಷಭಕ್ತಿಯೊಂದಿಗೆ
ಮೇಲೇರುತ್ತಲೇ ಬೆಳೆದರು.

ಎಲ್ಲಿ ರಾಜಕೀಯ ಸಾಧ್ಯವೋ ಅಲ್ಲ ಚೂರು ಸಂಶಯ ಬಾರದ ರೀತಿಯಲ್ಲಿ ಅವಕಾಶವನ್ನು ಬಳಸಿಕೊಂಡು ತಮ್ಮತನವನ್ನು
ತುಂಬಿಕೊಳ್ಳುತ್ತಲೇ ರಾಜಕೀಯದ ಏರುದಾರಿಯನ್ನು ಕಂಡರು. ಈ ರೀತಿ ಮೂರು ದಶಕಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಯಡಿಯೂರಪ್ಪ ಪಕ್ಷದ ಅಗ್ರಪಂಕ್ತಿಯ ನೇತಾರರಾಗಿದ್ದಾರೆ. ಕಾಂಗ್ರೆಸ್ಸಿನ ಹೈಕಮಾಂಡ್ ಸಂಸ್ಕೃತಿಯನ್ನು ಬಿಜೆಪಿ ಸೇವಿಸಲಾ ರಂಭಿಸಿದ ಕ್ಷಣದಿಂದ ಯಡಿಯೂರಪ್ಪ ವಾಮಕ್ಕೆ ಸರಿದರೂ ಈಗ ಅವರೇ ರಾಜ್ಯ ಬಿಜೆಪಿ ಹೈಕಮಾಂಡ್ ಆಗಿದ್ದಾರೆಂಬ ಆರೋಪ ಕೇಳಿಬರುತ್ತಿರುವಾಗಲೇ ೮೧ರ ಪ್ರಾಯದ ಯಡಿಯೂರಪ್ಪ ರಾಜ್ಯ ಸುತ್ತುತ್ತಿದ್ದಾರೆ; ಆರೋಪಗಳು ಸತ್ಯವಾಗಲಿ ಅಂತ!

ಪರಿವಾರ ವಾದವನ್ನು ಬಿಜೆಪಿ ಒಪ್ಪುವುದಿಲ್ಲ. ನೆಹರೂ ಮನೆತನದ ಕಪಿಮುಷ್ಠಿಯಲ್ಲಿ ಇರುವ ಕಾಂಗ್ರೆಸ್ಸನ್ನು ಈ ಹಿನ್ನೆಲೆಯಲ್ಲಿ ವಿರೋಧಿಸುತ್ತಲೇ ಬಂದ ಬಿಜೆಪಿ ಈಗ ರಾಜ್ಯದಲ್ಲಿ ಯಡಿಯೂರಪ್ಪನವರ ಕುಟುಂಬದ ಕೈಯಲ್ಲಿ ಬಿಗಿಯಾಗಿದೆ. ತಪ್ಪಿಸಿಕೊಳ್ಳ ಲಾಗದಷ್ಟು ಬಿಗಿಯಾಗಿದೆ. ಯಡಿಯೂರಪ್ಪ ಪರಿವಾರ ವಾದವನ್ನು ಒಪ್ಪಿಕೊಂಡೇ ಹಿಂದುತ್ತ್ವವಾದವನ್ನು ನಿರ್ಲಕ್ಷ್ಯಿಸು ತ್ತಿದ್ದಾರೆ. ತಮಗೆ ಸವಾಲಾಗಿ ನಿಲ್ಲುವವರನ್ನು ಬದಿಗೆ ಸರಿಸುವ ಕೆಲಸವನ್ನು ಮಾಡುತ್ತಲೇ ತಮ್ಮ ಮಗನನ್ನು ಎಮ್ಮೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ, ಇನ್ನೊಬ್ಬ ಮಗನನ್ನು ಸಂಸದನನ್ನಾಗಿ ಮಾಡಿಕೊಂಡು ಪಕ್ಷದ ಮೇಲಿನ ಹಿಡಿತವನ್ನು ತಮ್ಮ ಕೈಯ ಇರುವಂತೆ ಪರಿವಾರ ವಾದವನ್ನು ಬೆಳೆಸುತ್ತಿದ್ದಾರೆ.

ಯಡಿಯೂರಪ್ಪನವರ ಬಗ್ಗೆ ಇಂಥ ಮಾತುಗಳು ಸರಿಹೊತ್ತಿನಲ್ಲಿ ಬಿರುಸಾಗಿವೆ. ಈಶ್ವರಪ್ಪ ಮಾತ್ರ ತಾರಕದಲ್ಲಿ ಹೇಳುತ್ತಿದ್ದಾರೆ. ರಾಜ್ಯಾಧ್ಯಕ್ಷ ವಿಚಾರದಲ್ಲಿ ಹಿಂದೆ ಯತ್ನಾಳರು ಯಡಿಯೂರಪ್ಪನವರ ವಿರುದ್ಧ ನೇರಾನೇರ ಗುಟುರು ಹಾಕಿದ್ದರು. ಆದರೆ,
ಯಡಿಯೂರಪ್ಪನವರಿಗೆ ಇಂಥವು ಹೊಸತೇನಲ್ಲ. ಯಾವ ಬಂಡಾಯಕ್ಕೂ ಬೇಧನೀತಿಗೂ ಒತ್ತಡಕ್ಕೂ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಸ್ವಭಾವವನ್ನು ಹೊಂದಿದವರಲ್ಲ. ಇದು ಅವರ ವೈಶಿಷ್ಟ್ಯ. ಸಾಮಾನ್ಯವಾಗಿ ದೊಡ್ಡಪಟ್ಟಕ್ಕೆ ವ್ಯಕ್ತಿಯೊಬ್ಬ
ಏರಿದರೆ ಅವನ ರಾಜಕೀಯ ಬದುಕಿನ ಏಳುಬೀಳುಗಳನ್ನು ಪ್ರಕಟಿಸುವುದರಲ್ಲಿ ಹೊಸತೇನಿರುವುದಿಲ್ಲ.

ಆದರೆ, ರಾಜಕಾರಣಿಯೊಬ್ಬನ ರಾಜೀನಾಮೆಯ ಸುದ್ದಿಯೊಂದಿಗೆ ಅವನ ರಾಜಕೀಯ ಬದುಕಿನ ಏಳುಬೀಳುಗಳನ್ನು ಪ್ರಕಟಿಸಿದ್ದು ಇದ್ದರೆ ಅದು ಯಡಿಯೂರಪ್ಪನವರ ವಿಚಾರದಲ್ಲಿ ಮಾತ್ರ! ಒಬ್ಬಾತನ ರಾಜಕೀಯ ಜೀವನ ಅಂತ್ಯವಾದಾಗ ಅದರಲ್ಲಿ ಯಾವ ಆಕರ್ಷಣೆಯೂ ಇರುವುದಿಲ್ಲ. ಆದರೆ ಯಡಿಯೂರಪ್ಪ ಮಾತ್ರ ಇದಕ್ಕೆ ಹೊರತಾಗಿ ಕಂಡವರು. ರಾಜೀನಾಮೆ ಕೊಟ್ಟು ಹೊರಬಂದರೂ ರಾಜಕೀಯದಲ್ಲಿ ಇನ್ನೂ ತನ್ನ ಪ್ರಖರತೆ ಮತ್ತು ಪ್ರಾಬಲ್ಯವನ್ನು ಉಳಿಸಿಕೊಂಡಿದ್ದೇನೆಂಬುದನ್ನು ಸಾಬೀತು ಮಾಡಲು ಬಿಸಿಲಿಗೆ ಬಿದ್ದಿದ್ದಾರೆ. ಇದು ಯಡಿಯೂರಪ್ಪನವರ ನಿಜ ವರ್ಚಸ್ಸು ಅಂದರೆ ಉತ್ಪ್ರೇಕ್ಷೆಯಲ್ಲ!

ಆದರೆ, ಯಡಿಯೂರಪ್ಪನವರ ಯುಗಾಂತ್ಯ ಇನ್ನೂ ಅಗಲಿಲ್ಲವಲ್ಲ ಎಂಬುದೇ ಬಿಜೆಪಿಯಲ್ಲಿನ ಸಮಸ್ಯೆ? ರೈತರ ಹೆಸರಲ್ಲಿ ಪ್ರಮಾಣ ಮಾಡಿದ ನಾಯಕರಲ್ಲಿ ಒಂದಿಷ್ಟಾದರೂ ರೈತರ ಋಣ ತೀರಿಸಿದ್ದು ಮಾತ್ರ ಯಡಿಯೂರಪ್ಪ. ಕಳೆದ ಸಾಲಿನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದ ಬಂಡಿ ಬಿದ್ದುಹೋದಾಗ ಕಾಂಗ್ರೆಸ್‌ನಿಂದಲೂ ಜೆಡಿಎಸ್ ನಿಂದಲೂ ಶಾಸಕರ ರಾಜೀನಾಮೆ ಕೊಡಿಸಿ ಅವರನ್ನು ಮರುಚುನಾವಣೆಯಲ್ಲಿ ಗೆಲ್ಲಿಸಿ ಬಹುಮತದ ಸರ್ಕಾರವನ್ನು ಸ್ಥಾಪಿಸಿದ್ದು ಯಡಿ ಯೂರಪ್ಪನವರ ಅಗ್ಗಳಿಕೆ!

ಬದುಕಿನ ಶಾಶ್ವತ ಮೌಲ್ಯಗಳಲ್ಲಿ ಇದು ಸೇರದಿದ್ದರೂ ರಾಜಕೀಯದಲ್ಲಿ ಏನೂ ನಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗುತ್ತದೆ.
ಆಗಲೇ ಅತೃಪ್ತಿಯ ಹೊಗೆ ಬಿಜೆಪಿಯಲ್ಲಿ ಮನೆ ಮಾಡಿತ್ತು! ಆದರೆ ಯಡಿಯೂರಪ್ಪನವರ ವಿರುದ್ಧ ಯಾರೂ ದನಿಯೆತ್ತಲಿಲ್ಲ. ಕೋವಿಡ್ ಹೊಡೆತವನ್ನು ಎದುರಿಸಿಯೇ ಸುಸ್ತಾದ ಯಡಿಯೂರಪ್ಪ ಯಾವುದನ್ನೂ ತೋರಗೊಡದೆ ಭೀಷ್ಮರಂತೆ ಸೈನ್ಯವನ್ನು ನಡೆಸಿದರು. ಸಿಎಂ ಗಾದಿಯಿಂದ ಕೆಳಗಿಳಿಯಲ್ಪಟ್ಟ ಯಡಿಯೂರಪ್ಪ ಉತ್ತರಾಯಣಕ್ಕಾಗಿ ಕಾದ ಭೀಷ್ಮನಂತೆ ಕಾದು ಹೈಕಮಾಂಡನ್ನು ಬಗ್ಗಿಸಿಯೇ ಮಗನ ಮೂಲಕ ಮತ್ತೆ ತೆರೆಗೆ ಬಂದರು. ಎಲ್ಲದಕ್ಕೂ ಕೊನೆಯಿದೆ. ತನ್ನ ಮೇಲಿದ್ದ ಹೈಕಮಾಂಡಿನ ಮುನಿಸನ್ನು ಮೌನವಾಗಿಯೇ ಗೆದ್ದ ಯಡಿಯೂರಪ್ಪ ಭ್ರಷ್ಟರಾಗದೇ ಉಳಿಯಲು ಸಾಧ್ಯವೇ ಇಲ್ಲ.

ಇದು ರಾಜಕೀಯದ ಪಾಡೂ ಅಹುದು. ಸಿಎಂ ಗಾದಿಯಿಂದ ಕೆಳಗಿಳಿದ ಮೇಲೆ ಒಬ್ಬಂಟಿಯಾದ ಅಧೋಮುಖಿಯಾದರು! ಬಿಜೆ
ಪಿಯ ಕರ್ನಾಟಕದ ಅಧ್ಯಾಯದಲ್ಲಿ ಯಡಿಯೂರಪ್ಪ ಒಂದು ವರ್ಣಮಯ ಚಿತ್ರ. ರಾಷ್ಟ್ರೀಯತೆ, ಹಿಂದುತ್ವದ ನೆಲೆಯಲ್ಲಿ ಪ್ರಚಾರ ಮಾಡಿದರೂ ಜಾತಿ ಲೆಕ್ಕಾಚಾರವನ್ನು ಬಿಟ್ಟು ರಾಜಕೀಯದಲ್ಲಿ ಮೇಲೆ ಬರಲು ಸಾಧ್ಯವಿಲ್ಲ ಎಂಬುದು ಯಡಿಯೂರಪ್ಪ ನವರಿಗೆ ಎಂದೋ ಗೊತ್ತಿರುವ ಸತ್ಯ.

ಜಾತಿಯ ಕಾರ್ಡನ್ನು ಬಳಸಿ ಮಗನನ್ನು ಅಧ್ಯಕ್ಷ ಪಟ್ಟಕ್ಕೇರಿಸಿ ಹೆಚ್ಚು ಸೀಟುಗಳನ್ನು ಗೆಲ್ಲಿಸುವುದಕ್ಕೆ ಪಣತೊಟ್ಟು ಹೈಕಮಾಂಡಿಗೆ ತನ್ನ ತಾಕತ್ತು ಮತ್ತು ಅನಿವಾರ್ಯತೆಯನ್ನು ನೇಪಥ್ಯಕ್ಕೆ ಸರಿಯುವ ಮೊದಲು ಮನಗಾಣಿಸಬೇಕೆಂಬ ಹಠಕ್ಕೆ ನಿಂತ ವಿಶ್ವಾಮಿತ್ರ ನಂತೆ ಕಾಣುತ್ತಿರುವ ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ವರ್ಣರಂಜಿತ ಅಧ್ಯಾಯವಾಗಿ ಇತಿಹಾಸದಲ್ಲಿ ಉಳಿಯುತ್ತಾರೆ.