ಪ್ರತಿಸ್ಪಂದನ
ಪ್ರಕಾಶ ಹೆಗಡೆ
‘ಶಿಶಿರಕಾಲ’ ಅಂಕಣವು (ವಿಶ್ವವಾಣಿ ಏ.೫), ಜೀವಿಗಳು ಬಣ್ಣದ ಲೋಕವನ್ನು ತಮ್ಮ ಕಣ್ಣುಗಳ ಮೂಲಕ ಹೇಗೆ ಸಂಸ್ಕರಿಸುತ್ತವೆ ಎಂಬುದನ್ನು ಕಲಿಕೆಯ ರೀತಿಯಲ್ಲಿ ತಿಳಿಸಿದೆ. ಯಾವ ಅಂಕಣವು ಜ್ಞಾನವೃದ್ಧಿಗೆ ಪೂರಕವಾಗಿರುವುದೋ ಅದು ಆ ಅಂಕಣ ಕಾರನ ಉದ್ದೇಶವನ್ನು ಸಾಧಿಸಿದೆ ಎಂದೇ ಅರ್ಥ.
ನಾವು ಕೆಲವು ಪ್ರಾಣಿಗಳಿಗಿಂತ ಹೆಚ್ಚು ಬಣ್ಣಗಳನ್ನು ನೋಡುತ್ತೇವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ರಾಣಿಗಳ ಕಂಗಳಲ್ಲಿ ಮನುಷ್ಯನಲ್ಲಿದ್ದಂತೆ ಶಂಕುಗಳಿದ್ದರೆ (ಇಟ್ಞಛಿ) ಅವೂ ಕೆಲವಷ್ಟು ಬಣ್ಣಗಳನ್ನು ನೋಡಲು ಸಾಧ್ಯವಾಗುತ್ತದೆ. ನಮ್ಮಲ್ಲಿನ ಶಂಕುಗಳು ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳನ್ನು ಗುರುತಿಸಿದರೆ, ಇತರೆ ಶಂಕುಗಳಿರುವ ಜೀವಿಗಳಲ್ಲಿ ಅವು ಬೇರೆ ರೀತಿಯಾಗಿ ಬಣ್ಣಗಳನ್ನು ಗುರುತಿಸುತ್ತವೆ. ನಮ್ಮ ಸಾಕುನಾಯಿ ಮತ್ತು ಬೆಕ್ಕು, ಕಡಿಮೆ ಮತ್ತು ದುರ್ಬಲ ಬಣ್ಣಗಳನ್ನು ನೋಡು ತ್ತವೆ. ಅವುಗಳ ದೃಷ್ಟಿಕೋನವು ಮಸುಕಾದ ಟೋನ್ಗಳ ಬಣ್ಣಗಳಿಂದ ಮಾಡಲ್ಪಟ್ಟಿದೆ.
ಆದಾಗ್ಯೂ, ಕೆಲವು ಪ್ರಾಣಿಗಳು ನಮಗೆ ಸಾಧ್ಯವಾಗದ ಬಣ್ಣಗಳನ್ನು ನೋಡುತ್ತವೆ. ಅಂದರೆ, ಹೆಚ್ಚಿನ ಮನುಷ್ಯರಿಗೆ ಕಾಣಿಸದ ‘ಅಲ್ಟ್ರಾ ವಯಲೆಟ್’ ಎಂಬ ರೀತಿಯ ಬೆಳಕನ್ನು ಜೇಡಗಳು ಮತ್ತು ಅನೇಕ ಕೀಟಗಳು ಕಾಣಬಲ್ಲವು. ಹಾವುಗಳಂಥ ಉರಗಗಳು ಅತಿಗೆಂಪು ಬೆಳಕನ್ನು ನೋಡುವಲ್ಲಿ ಸಮರ್ಥವಾಗಿವೆ. ‘ಪಿಕ್ಸೆಲ್ಗಳು’ ಎಂದು ಕರೆಯಲ್ಪಡುವ ಬಣ್ಣದ ಸಣ್ಣಚೌಕಗಳಿಂದ ಕಂಪ್ಯೂಟರ್ ಪರದೆಗಳು ಮಾಡಲ್ಪಟ್ಟಿವೆ. ನೀವು ಈ ಲಕ್ಷಾಂತರ ಪಿಕ್ಸೆಲ್ಗಳನ್ನು ಸಂಯೋಜಿಸಿದಾಗ, ಅವು ನಿಮ್ಮ ಕಂಪ್ಯೂಟರ್ ನಲ್ಲಿ ಚಿತ್ರವನ್ನು ರೂಪಿಸುತ್ತವೆ. ಅನೇಕ ಕೀಟಗಳ ದೃಷ್ಟಿಯು ಇದೇ ರೀತಿ ನೂರಾರು ಚಿತ್ರಗಳೊಂದಿಗೆ ಮೂಡುತ್ತದೆ.
ಗಾಢವರ್ಣದ ಕಣ್ಣುಗಳನ್ನು (bZh ಚ್ಝಿZh ಛಿqsಛಿo) ಹೊಂದಿರುವವರು ಪ್ರಕಾಶಮಾನ ಬೆಳಕಲ್ಲಿ, ಬಿಸಿಲಿನ ಪ್ರಖರತೆಯಲ್ಲಿಯೂ
ಉತ್ತಮ ದೃಷ್ಟಿಸಾಮರ್ಥ್ಯವನ್ನು ಉಳ್ಳವರಾಗಿರುತ್ತಾರೆ. ಆದ್ದರಿಂದ ಇಂಥವರು ರಾತ್ರಿಯಲ್ಲಿ ವಾಹನ ಚಾಲಿಸುವಾಗ, ಹೆಚ್ಚಿನ ಹೊಳ ಪಿನ/ಪ್ರಖರತೆಯ ಸಂದರ್ಭಗಳಲ್ಲಿ ಉತ್ತಮ ದೃಷ್ಟಿಯನ್ನು ಹೊಂದಿ ವಾಹನ ಚಾಲನೆ ಸರಾಗವಾಗಬಹುದು. ಅದೇ ರೀತಿ, ಬಣ್ಣದ ಗ್ರಹಿಕೆಗಳು ವ್ಯಕ್ತಿನಿಷ್ಠವಾಗಿರುತ್ತವೆ; ಒಬ್ಬ ವ್ಯಕ್ತಿಯು ಗುರುತಿಸುವ ಬಣ್ಣದ ಅನುಭವವು ಇನ್ನೊಬ್ಬರ ಅನುಭವಕ್ಕೆ ನಿಖರವಾಗಿ ಹೊಂದಿಕೆ ಯಾಗದಿರಬಹುದು. ನಾವೆಲ್ಲರೂ ನೋಡುವ ಯಾವುದೇ ಒಂದು ಬಣ್ಣವನ್ನು, ಉದಾಹರಣೆಗೆ ನೀಲಿ ಬಣ್ಣವನ್ನು ತೆಗೆದುಕೊಳ್ಳೋಣ.
ನಾನು ನೋಡುವ ಮತ್ತು ಇತರರು ನೋಡುವ ನೀಲಿಬಣ್ಣದ ಛಾಯೆಯು ವಿಭಿನ್ನವಾಗಿರಬಹುದು. ಇದೇ ನೀಲಿ ಬಣ್ಣವನ್ನು ಇನ್ನಷ್ಟು ಆಳವಾಗಿ ನೋಡೋಣ. ನೀಲಿ ಬಣ್ಣವು ಜೀವಶಾಸ್ತ್ರ, ಮನೋವಿಜ್ಞಾನ, ಕಲೆ ಮತ್ತು ಭಾಷಾಶಾಸವನ್ನು ಸಂಪರ್ಕಿಸುವ ನಿಗೂಢತೆಯ ಸಂಗಮಸ್ಥಾನದಲ್ಲಿದೆ. ನಾವು ನೀಲಿ ಬಣ್ಣವನ್ನು ನೋಡುವ ರೀತಿಯು ವಾಸ್ತವವಾಗಿ ಆಧುನಿಕ ಬೆಳವಣಿಗೆ ಯಾಗಿದೆ ಎಂದು ಹಲವರು ನಂಬುತ್ತಾರೆ. ಶತಮಾನಗಳ ಹಿಂದೆ, ನೀಲಿ ಬಣ್ಣದ ಪರಿಕಲ್ಪನೆಯು ಅಸ್ತಿತ್ವದಲ್ಲಿರಲಿಲ್ಲ ಎಂದು ಒಂದು ಗುಂಪಿನ ವಿಜ್ಞಾನಿಗಳು ವಿಶ್ಲೇಷಣೆ ಮಾಡುತ್ತಾರೆ.
ಇಂದು ಕೆಲವು ಸಂಸ್ಕೃತಿಗಳು ಕೂಡ ಪಾಶ್ಚಾತ್ಯ ಜನರಂತೆ ನೀಲಿ ಬಣ್ಣವನ್ನು ಕಾಣುವುದಿಲ್ಲ/ಪರಿಗಣಿಸುವುದಿಲ್ಲ. ಉದಾಹರಣೆಗೆ,
ನಮೀಬಿಯಾದಲ್ಲಿನ ಹಿಂಬಾ ಬುಡಕಟ್ಟು ಜನಾಂಗದ ಸಂಸ್ಕೃತಿಗಳಲ್ಲಿ ನೀಲಿ ಬಣ್ಣವಿಲ್ಲ. ಅವರಿಗೆ ಪ್ರಾಚೀನ ಗ್ರೀಕರಂತೆ, ನೀಲಿ ಬಣ್ಣವು ಹಸಿರು ಬಣ್ಣದ ರೂಪಾಂತರವಾಗಿದೆ. ಒಟ್ಟಾರೆ ಹೇಳುವುದಾದರೆ, ಬಣ್ಣದ ಜಿಜ್ಞಾಸೆಯ ಕಿಚ್ಚು-ಹುಚ್ಚು ಹಚ್ಚಿದ ಶಿಶಿರ ಹೆಗಡೆಯವರಿಗೆ ಅನಂತ ಧನ್ಯವಾದಗಳು.
(ಲೇಖಕರು ಹವ್ಯಾಸಿ ಬರಹಗಾರರು)