ಅಭಿಮತ
ಗಿರೀಶ್ ಬಿ.
ಈಗ ಪಶ್ಚಿಮ ಬಂಗಾಳದಲ್ಲಿ ಕಾಶ್ಮೀರ ರೀತಿಯ ಹಿಂಸಾಚಾರವನ್ನು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪ್ರಾರಂಭಿಸಿ ಆಗಿದೆ. ಅಲ್ಲಿಂದ ಹಿಂದೂ ಗಳನ್ನು ಓಡಿಸಲು ಶುರುಮಾಡಿಯೂ ಆಗಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಪಶ್ಚಿಮ ಬಂಗಾಳವೂ ಹಿಂದೂ ಗಳ ಪಾಲಿಗೆ ಅಸುರಕ್ಷಿತ ಎನ್ನುವುದಲ್ಲಿ ಯಾವುದೇ ಸಂಶಯವಿಲ್ಲ.
ಹಲವು ವರ್ಷಗಳ ಹಿಂದಿನ ದಿನಗಳವು. ಆಗಸ್ಟ್ 15, ಜನವರಿ 26 ಬಂತೆಂದರೆ ಹುಬ್ಬಳ್ಳಿ- ಧಾರವಾಡದಲ್ಲಿ ಕರ್ಫ್ಯೂ ಅಥವಾ 144 ಕಲಂ ಜಾರಿಗೆ ಬರುವುದು ಖಚಿತವಾಗಿರುತ್ತಿತ್ತು. ಇದಕ್ಕೆ ಕಾರಣ ಈದ್ಗಾ ಮೈದಾನದ ಧ್ವಜಾರೋಹಣ ಗಲಾಟೆ. ಆದರೆ ನಂತರದ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ದಲ್ಲಿ ದೊಡ್ಡ ಗಲಾಟೆಗಳು ಆಗಿರಲಿಲ್ಲ.
ಆದರೆ ಮೊನ್ನೆ ಮಿನಿ ಪಾಕಿಸ್ತಾನದಂತೆ ಭಾಸವಾಗುವ (ಈ ಘಟನೆಯಲ್ಲಿ ಹಿಂಸಾಚಾರವೆಸಗಿದ ಆ ಮುಸ್ಲಿಂ ಉದ್ರಿಕ್ತ ಗುಂಪನ್ನು ಕಂಡಾಗ) ಹಳೆ ಹುಬ್ಬಳ್ಳಿಯಲ್ಲಿ ಬೃಹತ್ ಮುಸ್ಲಿಂ ಗುಂಪು ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿತ್ತು. ಈ ಗಲಭೆಕೋರರು ತಮಗೆ ಧಾರ್ಮಿಕವಾಗಿ ವಿವಾದಾತ್ಮಕ ಪೋಸ್ಟ್ ಹಾಕಿದ ವ್ಯಕ್ತಿಯ ತಲೆ ಕಡಿಯಲು ಆ ಆರೋಪಿ ಯನ್ನು ತಮಗೆ ಒಪ್ಪಿಸುವಂತೆ ಹಠ ಹಿಡಿದಿದ್ದರಂತೆ. ಇದನ್ನು ಪೊಲೀಸರು ನಿರಾಕರಿಸಿದ್ದರು ಮತ್ತು ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದು ಗುಂಪನ್ನು ಶಾಂತಗೊಳಿಸಲು ಯತ್ನಿಸಿದ್ದರು. ಆದರೂ ರೊಚ್ಚಿಗೆದ್ದ, ಮುಸ್ಲಿಂ ಯುವಕರು ಸಮೀಪದ ಆಸ್ಪತ್ರೆಯ ಮೇಲೆ, ದೇವಸ್ಥಾನದ ಮೇಲೆ, ಹಲವು ಹಿಂದೂ ಮನೆಗಳ ಮೇಲೆ ಅಲ್ಲದೆ ಇನ್ನೂ ಸಿಕ್ಕ ಸಿಕ್ಕಲ್ಲಿ ಕಲ್ಲು ತೂರಾಟ ನಡೆಸಿದರು.
ಈ ಸಮಯದಲ್ಲಿ ಅಲ್ಲಿ ದೊಡ್ಡ ಗಲಭೆಯೇ ನಡೆಯಿತು. ಈ ವೇಳೆ ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿ ಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆಯಿಂದ ಹಲವು ವರ್ಷಗಳಿಂದ ಕೋಮು ಗಲಭೆ ಮುಕ್ತವಾದ ಹುಬ್ಬಳ್ಳಿಗೆ ಮತ್ತೆ ದುರ್ಘಟನೆಯ ಕಳಂಕ ಅಂಟಿಕೊಂಡಿತು. ಈ ಗಲಭೆಯು ಪೂರ್ವ ಯೋಜಿತವೇ ಎಂದು ಖಂಡಿತವಾಗಿ ಹೇಳಬಹುದು.
2020ರ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆಯಿಂದ ಹಿಡಿದು ಮೊನ್ನೆ ಹುಬ್ಬಳ್ಳಿಯಲ್ಲಿ ಆದ ಗಲಭೆಯಲ್ಲಿಯೂ ಕಾರಣರಾದವರಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೇಳಿಬರುತ್ತಿರುವುದು ಕಳವಳಕಾರಿ ಸಂಗತಿಯೇ ಹೌದು. ಇನ್ನು ಮೇಲೆ ತನಿಖೆಯಿಂದ ಸಂಪೂರ್ಣ ಸತ್ಯ ಹೊರಬರಬೇಕಾಗಿದೆ. ಅಧಿಕಾರ ಕಳೆದುಕೊಂಡಾಗ ಕಾಂಗ್ರೆಸ್ ಇನ್ನೂ ಅಪಾಯಕಾರಿ ಎನ್ನುವುದು ಆಗಾಗ ಇಂತಹ ಘಟನೆಗಳಿಂದ ಸಾಬೀತಾಗುತ್ತಲೇ ಇರುತ್ತದೆ. ಹಾಗಾದರೆ ಆಡಳಿತ
ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಎಂತಹ ದುಸ್ಸಾಹಸಕ್ಕೆ ಬೇಕಾದರೂ ಇಳಿಯುತ್ತದೆ ಎಂದಾಯಿತಲ್ಲ.
ಮುಂದಿನ ವರ್ಷದಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇದೆಯಲ್ಲ. ಅದಕ್ಕೆ ವಿರೋಧ ಪಕ್ಷಗಳು ತಾವು ಸಕ್ರೀಯರಾಗಿದ್ದೇವೆ ಎಂದು ಈ ರೀತಿಯಲ್ಲಿ ಹೇಳುತ್ತಿದ್ದಾರೆಯೆ? ಆದರೆ ಕೇವಲ ಅಲ್ಪಸಂಖ್ಯಾತರ ವೋಟಿಗೋಸ್ಕರ ಮುಸ್ಲಿಮರ ಓಲೈಕೆ ಮಾಡುವ ಇಂತಹ ರಾಜಕಾರಣಿಗಳು ಕೇವಲ
ಅವರ ಮತಗಳಿಂದ ಮಾತ್ರ ಅಧಿಕಾರಕ್ಕೆ ಬರುತ್ತಾರೆಯೆ? ಅರ್ಥಾತ್ ಹಿಂದುಗಳ ಮತ ಇವರಿಗೆ ಬೇಡವೆ? ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರಿಗೆ, ಮುಸ್ಲಿಮರಿಗೆ ತೊಂದರೆ ಆದಾಗ ಮಾತ್ರ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಎಂದು ನೆನಪಾಗುತ್ತದೆ. ಆದರೆ ಮುಸ್ಲಿಮರು ಇಂತಹ ಗಲಭೆಗೆ ಕಾರಣವಾದಾಗಲೂ ಆ ಜನರು ಈ ನಾಯಕರ ದೃಷ್ಟಿಯಲ್ಲಿ ಅಮಾಯಕರು.
ಇನ್ನು ಹಿಜಾಬ್ ಧರಿಸಿಯೇ ತರಗತಿಗೆ ಹೋಗುತ್ತೇನೆಂದಾಗ, ಹಿಜಾಬ್ ಇಸ್ಲಾಮ್‌ನ ಅವಿಭಾಜ್ಯ ಅಂಗವಲ್ಲವೆಂಬ ನ್ಯಾಯಾಲಯದ ತೀರ್ಪಿನ ವಿರುದ್ಧ ಮುಸ್ಲಿಮರು ಬಂದ್ ಗೆ ಕರೆ ನೀಡಿದಾಗ, ಮುಸ್ಲಿಮರು ಹಿಂದೂ ಮಹಿಳೆಯರ ಬಿಂದಿ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಿದಾಗ ಇಂತಹ ರಾಜಕಾರಣಿಗಳು ಬಾಯಿ ಮುಚ್ಚಿಕೊಂಡಿರುತ್ತಾರೆ. ಆಗಸ್ಟ್ 2020 ರಲ್ಲಿ ಡಿ.ಜೆ. ಹಳ್ಳಿ ಕೆ.ಜಿ. ಹಳ್ಳಿಯಲ್ಲಿ ನಡೆದ ಹಿಂಸಾಚಾರದಲ್ಲಿ, ಗಲಭೆಗೆ ಕಾರಣರಾದ ಯುವಕರ ಪೋಷಕರು ಅಷ್ಟೊತ್ತಿನಲ್ಲಿ ಆತ ಕೊತ್ತಂಬರಿ ಸೊಪ್ಪು ತರಲು ತೆರಳಿದ್ದ ಎಂದು ಹಾಸ್ಯಾಸ್ಪದ ಹೇಳಿಕೆ ಕೊಟ್ಟಿದ್ದರು.
ಈಗ ಹುಬ್ಬಳ್ಳಿಯಲ್ಲಿ ಗಲಭೆಗೆ ಕಾರಣರಾದವರ ಪೋಷಕರು ಪೊಲೀಸ್ ಠಾಣೆಯ ಎದುರಿಗೆ ಬಂದು ತಮ್ಮ ಮಕ್ಕಳನ್ನು ಬಿಡುಗಡೆ ಮಾಡುವಂತೆ ಗೋಳಿಡುತ್ತಿದ್ದಾರೆ. ಇವರ ದೃಷ್ಠಿಯಲ್ಲಿ ಅವರ ಮಕ್ಕಳು ಮುಗ್ದರಂತೆ ಮತ್ತು ಅವರಿಗೆ ಏನೂ ತಿಳಿದೇ ಇಲ್ಲವಂತೆ! ಹಾಗಾದರೆ ಕೆಲವು ಮದರಾಸಗಳಲ್ಲಿ ಮತ್ತು ಕೆಲವರ ಮನೆಯಲ್ಲಿ ಇಂತಹ ಕ್ರೂರಿಗಳಿಗೆ ಯಾವ ರೀತಿ ಶಿಕ್ಷಣ ನೀಡಲಾಗುತ್ತದೆಯೊ ಆ ದೇವರೆ ಬಲ್ಲ. ಒಂದಂತು ಅರ್ಥವಾಗುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ ತಾವು ಅಧಿಕಾರದಲ್ಲಿದ್ದಾಗಲಂತೂ ಇಂತಹ ಮುಸ್ಲಿಂ ಅಪರಾಧಿಗಳು ಶಿಕ್ಷೆಯಿಂದ ಪಾರಾಗುವ ಪ್ರಕರಣಗಳೇ ಹೆಚ್ಚು. ಆದರೆ ಬಿಜೆಪಿ ಸರಕಾರ ವಿದ್ದಾಗ ಏಕೆ ಇಂತಹ ಗಲಭೆ ಕೋರರಿಗೆ ಕ್ರೂರ ಶಿಕ್ಷೆ ವಿಧಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ.
ಉತ್ತರ ಪ್ರದೇಶದಲ್ಲಿ ಅತ್ಯಂತ ಪರಿಣಾಕಾರಿ ಶಿಕ್ಷೆಯ ಕ್ರಮವನ್ನು ಜಾರಿಗೊಳಿಸಿರುವ ಯೋಗಿ ಆದಿತ್ಯನಾಥ್ ಅವರು ಬುಲ್ಡೋಜರ್ ಬಾಬಾ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇದೇ ಮಾದರಿ ಯಲ್ಲಿಯೇ ಕರ್ನಾಟಕದಲ್ಲಿ ಏಕೆ ಶಿಕ್ಷೆ ವಿಧಿಸಬಾರದು. ಇಂತಹ ಗಲಭೆಕೋರರಿಗೆ ಕಠಿಣ ಶಿಕ್ಷೆಯಾಗದೆ, ಮುಂದೆ
ಇಂತಹ ಘಟನೆ ಮರುಕಳಿಸಿದರೆ, ಕರ್ನಾಟಕದಲ್ಲಿ ಬಂಡವಾಳ ಹೂಡಲು ಬಯಸುತ್ತಿರುವ ಅಂತಾರಾಷ್ಟ್ರೀಯ ಕಂಪನಿಗಳು ಹೇಗೆ ರಾಜ್ಯಕ್ಕೆ ಬಂದಾವು ಸ್ವಾಮಿ? ಅದೇ ರೀತಿ ಕರ್ನಾಟಕದಲ್ಲಿ ಕೇವಲ ಕೋಮು ದ್ವೇಷ, ಗಲಭೆಗಳಂತಹ ಘಟನೆಗಳೇ ನಡೆಯುತ್ತಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕರ್ನಾಟಕದ, ದೇಶದ ಮಾನ ಹರಾಜಾದೀತು ಅಲ್ಲವೆ? ಹಲಾಲ್ ಜಟಾಪಟಿ ಆದಾಗ ಟ್ವೀಟ್ ಮಾಡಿ, ಜಾತ್ಯತೀತೆಯ ಪುಂಗಿ ಊದಿದ್ದ ಕಿರಣ ಮಜೂಂದಾರ್ ಎನ್ನುವ ಸೋ ಕಾಲ್ಡ್ ಉದ್ಯಮಿ ಯಾಕೋ ಹುಬ್ಬಳ್ಳಿ ಘಟನೆಯ ಕುರಿತು ಟ್ವೀಟ್ ಮಾಡಿಲ್ಲವಲ್ಲ, ಆಶ್ಚರ್ಯವಾಗುತ್ತಿದೆ!
ಅದೇ ರೀತಿ ಕುಮಾರಸ್ವಾಮಿಯವರು ದೇವಸ್ಥಾನ, ಹಿಂದೂಗಳ ಮನೆ ಮೇಲೆ ಕಲ್ಲು ಎಸೆದವರು ಅಮಾಯಕರು ಎಂದು ಬೊಬ್ಬೆ ಹೊಡೆದಿದ್ದೂ ಖಂಡನೀಯ. ಏಕೆಂದರೆ ಯಾರು ಗಲಭೆಕೋರರನ್ನು ಸಮರ್ಥಿಸಿಕೊಳ್ಳುತ್ತಾರೋ ಮುಂದೊಂದು ದಿನ ಅವರವರ ಮನೆಗೇ ಕಲ್ಲು ಬಿದ್ದಾಗ ಹಿಂದೂಗಳ ನೋವೇನೆಂದು ಅವರಿಗೆ ಅರ್ಥವಾದೀತು. ಅಲ್ಲಿಯವರೆಗೆ ಇಂತಹ ರಾಜಕಾರಣಿಗಳು ಅಲ್ಪಸಂಖ್ಯಾತರ ಓಲೈಕೆಯನ್ನು ಬಿಡುವಂತೆ ಕಾಣುತ್ತಿಲ್ಲ. ಮುಂದೆ ಆಕಸ್ಮಾತ್ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂತೆಂದರೆ, ನಮ್ಮ ಮೇಲಿನ ಅಷ್ಟೂ ಕೇಸ್ ವಾಪಸ್ ತೆಗೆದುಕೊಳ್ಳುವ ಸಿದ್ದರಾಮಯ್ಯನವರಂತಹ ಉದಾತ್ತ ರಾಜಕಾರಣಿಗಳಿದ್ದಾರಲ್ಲ ಬಿಡು ಎಂದೂ ಗಲಭೆಕೋರರು ಬಾಲ ಬಿಚ್ಚಿರಲೂಬಹುದು.
ಹುಬ್ಬಳ್ಳಿಯಲ್ಲಿ ಗಲಭೆಕೋರರು ಎರಡು ಪೊಲೀಸ್ ಪೇದೆಗಳ (ಪಿಸಿ) ಹತ್ಯೆಗೈಯಲು ಸಂಚು ರೂಪಿಸಿದ್ದೂ ತನಿಖೆ ವೇಳೆ ತಿಳಿದುಬಂದಿದೆ ಎಂದರೆ ಇವರು ಯಾವ ರೀತಿ ಉದ್ಧೇಶ ಇಟ್ಟುಕೊಂಡು ದಾಂದಲೆ ನಡೆಸಿದ್ದರು ಎನ್ನುವುದು ಗೊತ್ತಾಗುತ್ತದೆ. ಮುಸ್ಲಿಮರು ಗಲಭೆಯಂತಹ ದುಸ್ಸಾಹಸಕ್ಕೆ ಇಳಿಯಲು ಬಹಳ ವರ್ಷಗಳಿಂದ ನಮ್ಮ ದೇಶದಲ್ಲಿ ನಡೆದುಕೊಂಡುಬಂದಿರುವ ಮುಸ್ಲಿಂ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕರಣವೇ ಪ್ರಮುಖ ಕಾರಣ ಎನ್ನಬಹುದು. ಮಾತೆತ್ತಿದರೆ ಮುಸ್ಲಿಮರು ಅಮಾಯಕರು, ಬಡವರು ಎಂದು ಅವರ ಪರವಾಗಿ ನಿಲ್ಲುವ ರಾಜಕಾರಣಿಗಳು, ಬುದ್ಧಿಜೀವಿಗಳು/ ಪ್ರಗತಿಪರ ರಂತಹ ಜನರಿಂದಲೇ ನಮ್ಮ ದೇಶದಲ್ಲಿ ಹಲವು ಮುಸ್ಲಿಮರು ಈ ಮಟ್ಟಕ್ಕೆ ತಲುಪಿದ್ದು, ಮಾನ್ಯ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನವರೇ ಸರ್ವ ಜನಾಂಗದ ಶಾಂತಿಯ ತೋಟದ ನಿರ್ಮಾಣ ಕೇವಲ ಹಿಂದೂಗಳಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಸಮಾಜದಲ್ಲಿನ ಇತರ ಧರ್ಮದವರ ಸಹಕಾರವೂ ಅಷ್ಟೇ ಮುಖ್ಯ ಎನ್ನುವುದನ್ನು ನೀವುಗಳು ಮೊದಲು ಅರ್ಥಮಾಡಿಕೊಳ್ಳಬೇಕು.
ನಿಮ್ಮ ಮನಸ್ಸಿನೊಳಗೊಂಡು, ಹೊರಗೊಂದು ವರ್ತನೆ ಜನರಿಗೆ ಅರ್ಥವಾಗುವುದಿಲ್ಲವೆಂದು ನೀವು ಭಾವಿಸಿದ್ದರೆ ಅದು ಶುದ್ಧ ಸುಳ್ಳು ಅಷ್ಟೆ.
ಹಿಂದೂಗಳ ನರಮೇಧವನ್ನು ತೋರಿಸಿದ ದಿ ಕಾಶ್ಮೀರ್ ಫೈಲ್ಸ್ ಜಾತ್ಯತೀತರ, ಎಡಪಂಥಿಯರ ಅಪಸ್ವರದ ನಡುವೆಯೂ ಸೂಪರ್ ಹಿಟ್ ಆಯಿತು. ಮುಂದಿನ ದಿನಗಳಲ್ಲಿ ಇದೇ ತರಹದ ಸಿನಿಮಾಗಳು ಮತ್ತೆ ಮತ್ತೆ ಬರಲಿವೆ ಎಂದೂ ಅಂದಾಜಿಸಲಾಗಿದೆ. ಆದ್ದರಿಂದ ಹಿಂದೂಗಳಿಗೆ ದಿ ಕಾಶ್ಮೀರ
ಫೈಲ್ಸ್ ಸಿನಿಮಾ ಒಂಥರಾ ದಿ ಬಿಗಿನಿಂಗ್ ಅಂತಲೇ ಹೇಳಬಹುದು.
ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರದಲ್ಲಿ ತೋರಿಸಿದಂತೆ ಮುಂದೊಂದು ದಿನ ಭಾರತದ ಯಾವುದೇ ಪ್ರದೇಶವಾಗಲಿ, ಅಲ್ಲಿ ಅಲ್ಪಸಂಖ್ಯಾತರು ಅರ್ಥಾತ್
ಮುಸ್ಲಿಮರು ಬಹುಸಂಖ್ಯಾತರಾದರೆ ನಮ್ಮ ಹಿಂದೂಗಳ ಪರಿಸ್ಥಿತಿ ಏನಾದೀತು ಎಂದು ತಿಳಿಯುತ್ತದೆ. ಈಗ ಪಶ್ಚಿಮ ಬಂಗಾಳದಲ್ಲಿ ಕಾಶ್ಮೀರ ರೀತಿಯ ಹಿಂಸಾಚಾರವನ್ನು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪ್ರಾರಂಭಿಸಿ ಆಗಿದೆ. ಅಲ್ಲಿಂದ ಹಿಂದೂಗಳನ್ನು ಓಡಿಸಲು ಶುರುಮಾಡಿಯೂ ಆಗಿದೆ. ಇದು ಹೀಗೆ ಮುಂದುವರಿದರೆ ಮುಂ ದೊಂದು ದಿನ ಪಶ್ಚಿಮ ಬಂಗಾಳವೂ ಹಿಂದೂಗಳ ಪಾಲಿಗೆ ಅಸುರಕ್ಷಿತ ಎನ್ನುವುದಲ್ಲಿ ಯಾವುದೇ ಸಂಶಯವಿಲ್ಲ.
ಉಡುಪಿಯಲ್ಲಿ ಕೆಲವೇ ಕೆಲವು ಮುಸ್ಲಿಂ ಹೆಣ್ಣು ಮಕ್ಕಳಿಂದ ಪ್ರಾರಂಭವಾದ ಹಿಜಾಬ್ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ನ್ಯಾಯಾಲಯದ ತೀರ್ಪು ಹಲವು ಮುಸ್ಲಿಮರಿಗೆ ಸಮಾಧಾನ ತರಲಿಲ್ಲ. ಆದ್ದರಿಂದ ಮುಸ್ಲಿಮರು ರಾಜ್ಯಾದ್ಯಂತ ಬಂದ್‌ಗೂ ಕರೆ ನೀಡಿದರು. ಇದರೊಂದಿಗೆ ಸಂಘರ್ಷ ಪ್ರಾರಂಭಿಸಿದ್ದು ಮುಸ್ಲಿಮರೇ ಎಂದು ಖಂಡಿತವಾಗಿ ಹೇಳಬಹುದು. ಈಗ ಅದು ಆಜಾನ್‌ಗೂ ವ್ಯಾಪಿಸಿದೆ. ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆ ಯವರೆಗೆ ಧ್ವನಿವರ್ಧಕ ಬಳಸದಂತೆ ಮಾನ್ಯ ನ್ಯಾಯಾಲಯದ ಆದೇಶವಿದ್ದರೂ ಬೆಳಗ್ಗೆ ಸುಮಾರು 4 ಗಂಟೆಯಿಂದಲೇ ಕೂಗುವ ಆಜಾನ್ ಮುಸ್ಲಿಮೇತರ ಜನರ ನಿದ್ರೆ ಗೆಡಿಸುತ್ತಿದೆ.
ಇದರ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಕೆಲವು ವರ್ಷಗಳ ಹಿಂದೆ ಇದರ ವಿರುದ್ಧ ಧ್ವನಿ ಎತ್ತಿದ್ದ ಸೋನು ನಿಗಮ್‌ರ ಪ್ರಶ್ನೆಯನ್ನು ತಪ್ಪೆಂದು
ಬಿಂಬಿಸಿ, ಅವರ ಬಾಯಿ ಮುಚ್ಚಿಸಲಾಯಿತು. ಮೊದಲಿನಿಂದ ನಮ್ಮ ದೇಶದಲ್ಲಿ ಮುಸ್ಲಿಮರ ಧಾರ್ಮಿಕ ವಿಧಾನಗಳನ್ನು ಪ್ರಶ್ನಿಸುವುದೇ ಒಂದು ಅಪರಾಧ ಎಂಬಂತೆ ಕಾಂಗ್ರೆಸ್ ಹಾಗೂ ಅದರ ಸಮಾನ ಮನಸ್ಕ ಪಕ್ಷಗಳು ಮತ್ತು ಎಡಪಂಥಿಯರು ಬಿಂಬಿಸುತ್ತಲೇ ಬಂದಿವೆ. ಕೋಮು ಸಾಮರಸ್ಯ ಕೆಡುವುದು ದೇಶದ ಹಿತ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಆದರೆ ಯಾವಾಗಲೂ ಹಿಂದೂಗಳಿಂದ ಮಾತ್ರ ಸಾಮರಸ್ಯ ಸಾಧ್ಯವಿಲ್ಲ. ಎರಡೂ ಕೈಯಿಂದ ಚಪ್ಪಾಳೆಯೇ ಹೊರತು ಒಂದು ಕೈಯಿಂದ ಅಲ್ಲ ಅಲ್ಲವೆ?