ವಿಶ್ಲೇಷಣೆ
ಡಾ.ಜಗದೀಶ ಮಾನೆ ಧಾರವಾಡ
ಟ್ರೂಡೊ ನಾಯಕತ್ವದ ಮೇಲೂ ಕೆನಡಾ ಜನರಿಗೆ ಸಂಪೂರ್ಣ ನಂಬಿಕೆ ಹೊರಟು ಹೋಗುತ್ತದೆ. ಟ್ರಕ್ ಡ್ರೈವರ್ಗಳು ಆರಂಭಿಸಿದ ಈ
ಹೋರಾಟಕ್ಕೆ ಮುಂದೆ ಎಲ್ಲ ಕ್ಷೇತ್ರದ ಜನರೂ ಬೆಂಬಲ ನೀಡುವ ಮೂಲಕ ಟ್ರೂಡೊ ಪಟ್ಟದಿಂದ ಇಳಿಸಿದರೂ ಆಶ್ಚರ್ಯ ಪಡಬೇಕಿಲ್ಲ!
ಕಳೆದ ಹದಿನೈದು ದಿನಗಳಿಂದ ಕೆನಡಾ ರಾಜಧಾನಿಯಾದ ಒಟ್ಟಾವಾ ನಗರದಲ್ಲಿ ಸರಕಾರದ ವಿರುದ್ಧ ಬೃಹತ್ ಹೋರಾಟ ನಡೆದಿದೆ. ಕೇವಲ ಬೆರಳೆಣಿಯ ಟ್ರಕ್ ಡ್ರೈವರ್ಗಳು ಆರಂಭಿಸಿದ ಆ ಒಂದು ಹೋರಾಟದ ಕಿಡಿ ಇದೀಗ ಕಾಡ್ಗಿಚ್ಚಿನಂತೆ ವ್ಯಾಪಕವಾಗಿದೆ. ಅದರ ತೀವ್ರತೆ ಮತ್ತು ಸ್ವರೂಪ ಹೇಗಾಗಿದೆ ಅಂದರೆ, ಇಡೀ ಸರಕಾರವನ್ನೇ ಬುಡ ಮೇಲು ಮಾಡುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಮೇಯರ್ ಜೀಮ್ ವ್ಯಾಕ್ಸನ್ ಕಳೆದ ಭಾನುವಾರ ಕೆನಡಾ ಸರಕಾರ ತುರ್ತುಸ್ಥಿತಿಯನ್ನೂ ಘೋಷಿಸಿದ್ದಾರೆ. ಅಲ್ಲಿನ ಯಾವ ರಸ್ತೆಗಳಲ್ಲಿ ನೋಡಿದರೂ ಟ್ರಕ್ ಗಳಿಂದ ಭರ್ತಿ ಯಾಗಿವೆ. ತಿರುಗಾಡೊಕೆ ಸಾಮಾನ್ಯ ಜನರಿಗೆ ದಾರಿಗಳಿಲ್ಲ, ಬರಿ ಹಾರ್ನ್ ಸೌಂಡ್..! ಭಯಾನಕ ವಾತಾವರಣ ನಿರ್ಮಾಣ ಆಗಿದ್ದರಿಂದ ಅಲ್ಲಿನ ಸರಕಾರಿ ಅಧಿಕಾರಿಗಳು ಕಂಗಾಲಾಗಿ ಹೊಗಿದ್ದಾರೆ, ಇನ್ನು ಪೋಲಿಸರಂತೂ ಏನು ಮಾಡಬೇಕೆಂದು ತಿಳಿಯದೇ ಕೈ ಚೆಲ್ಲಿದ್ದಾರೆ.
ಇದಕ್ಕೆಲ್ಲ ಪರಿಹಾರ ಕೊಡಬೇಕಿದ್ದ ಪ್ರಧಾನಿ ಜಸ್ಟೀನ್ ಟ್ರೂಡೊ ಅವರು ಅಜ್ಞಾತದಲ್ಲಿ ದ್ದಾರೆ. ಹೋರಾಟ ಶುರುವಾಗಲು ಕಾರಣ ಪ್ರಧಾನಿ ಕೋವಿಡ್ ನಿಯಮಗಳನ್ನು ಜಾರಿಗೊಳಿಸಿದ್ದು. ಎರಡೂ ಲಸಿಕೆ ಹಾಕಿಸಿಕೊಳ್ಳದೆ ಇರದವರಿಗೆ ಒಟ್ಟಾವಾ ನಗರದಲ್ಲಿ ಪ್ರವೇಶ ಇಲ್ಲ ಅನ್ನೊ ನಿಯಮ ಹೇರಿದರು. ಅದೇ ಅಲ್ಲಿನ ಜನರಿಗೆ ಸಹನೀಯ ಆದಂತೆ ಅನಿಸುತ್ತಿದೆ.ಬೆನ್ನ ಒಟ್ಟಾವಾ ನಗರದಲ್ಲೆಲ್ಲ ’We want freedom’ ಅನ್ನೊ ಧ್ವನಿ ಬಿಟ್ಟರೆ ಬೆರೇನೂ ಕೆಳಿಸುತ್ತಿರಲಿಲ್ಲ. ’Freedom truck convoy’ ಅನ್ನೊ ಹೆಸರಿನಲ್ಲಿ ನಡೆಯುತ್ತಿದ್ದ ಈ ಹೋರಾಟಕ್ಕೆ ರಾಜಧಾನಿ ಒಟ್ಟಾವಾ ನಗರ ಹಾಗೂ ಸುತ್ತಮುತ್ತಲಿನ ಹಲವಾರು ನಗರಗಳ ಲಕ್ಷಾಂತರ ಜನರು ಭಾಗವಹಿಸಿದ್ದರು.
ಅಲ್ಲದೆ ವಿದೇಶದ ಜನರಿಂದಲೂ ವ್ಯಾಪಕ ಬೆಂಬಲ ಸಿಕ್ಕಿತು. ಪರಿಣಾಮ ಹೋರಾಟಕ್ಕೆ ಮಿಂಚಿನ ಶಕ್ತಿ ಬಂದಿತ್ತು. ಮುಖ್ಯವಾಗಿ ಅಮೆರಿಕದ ಜನ ಹಾಗೂ ರಿಪಬ್ಲಿಕನ್ಸ್ ಈ ಹೋರಾಟದಲ್ಲಿ ಮೂಗು ತೊರಿಸುತ್ತಿದೆ. ಜತೆಗೆ ಈ ಹೋರಾಟಕ್ಕೆ ದೇಣಿಗೆ ರೂಪದಲ್ಲಿ ವಿದೇಶಗಳಿಂದ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದ್ದುದ್ದನ್ನು ಕಂಡ ಕೆನಡಾ ಸರಕಾರದ ಅಧಿಕಾರಿಗಳು ಅಮೆರಿಕದ ವಿರುದ್ಧ ನೇರಾ ನೇರ ಆರೋಪ ಮಾಡುತ್ತ ಕೆಂಡಾಮಂಡಲವಾಗಿದ್ದರು. ಈ ಮೊದಲು ಕೆನಡಾ ಮತ್ತು ಅಮೆರಿಕದ ಸಂಬಂಧ ಚೆನ್ನಾಗೇ ಇತ್ತು.
ಆದರೆ ಅಧ್ಯಕ್ಷ ಟ್ರಂಪ್ ಕಾಲದಲ್ಲಿ ಎರಡೂ ದೇಶಗಳ ಸಂಬಂಧಕ್ಕೆ ಹುಳಿ ಬಿತ್ತು. ಟ್ರಂಪ್ ಅವರಿಗೆ ಟ್ರೂಡೊ ಅವರನ್ನು ಕಂಡರೆ ಆಗುತ್ತಿರ ಲಿಲ್ಲ. ಅವರನ್ನು ಹುಚ್ಚ ಅಂತೆಲ್ಲ ಸಂಬೋಧಿಸುತ್ತಿದ್ದರು. ಅಲ್ಲಿನ ಜನರು ಒಂದು ಕಡೆ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದಿಲ್ಲ ಎಂಬ ಹಟ ಹಿಡಿದಿzರೆ, ಮತ್ತೊಂದೆಡೆ ಕರೋನ ರೂಲ್ಸ್ ಬ್ರೇಕ್ ಮಾಡಲೇಬೇಕು ಅನ್ನೊ ಉದ್ದಟತನ ತೋರುತ್ತಿದ್ದಾರೆ. ಇದರಿಂದ ಬಹಳಷ್ಟು ಕಷ್ಟ ನೋವುಗಳನ್ನು ಅನುಭವಿಸುತ್ತಿರುವವರು ಮಾತ್ರ ಅಲ್ಲಿನ ಬಡ ಜನರು.
ಹೋರಾಟ ಹೀಗೆ ಮುಂದುವರಿದರೆ ಅವರಿಗೆ ಇದರಿಂದ ಜುಗುಪ್ಸೆ ತರಿಸಿದರೂ ಅಚ್ಚರಿ ಇಲ್ಲ. ಹಾಗಂತ ಅಲ್ಲಿನ ಹೋರಾಟಗಾರರೇನು ಬೆಂಕಿ ಹಚ್ಚಿ ರಾದ್ಧಾಂತ, ರಂಪ ಮಾಡುತ್ತಿಲ್ಲ. ಆದರೆ ಈ ಹಾರ್ನ್ನ ಕರ್ಕಶ ಹಾಗೂ ಘೋಷಣೆಗಳು ಅಸಹನೀಯವಾಗಿದೆ. ಕೊನೆ ಪಕ್ಷ ಇದರಿಂದ ಎಲ್ಲಿಯಾದರೂ ಹೊರ ಹೊಗೊಣ ಅಂದ್ರೆ ಟ್ರಕ್ಗಳ ಮೂಲಕ ದಿಗ್ಭಂದನ ವಿಧಿಸಿ ಯಾರೊಬ್ಬರನ್ನೂ ಎಲ್ಲಿಗೂ ಹೋಗೊದಕ್ಕೆ ಬಿಡದ ಹಾಗೆ ಮಾಡಿದ್ದಾರೆ.
ಅಲ್ಲಿನ ಪರಿಸರದ ಸ್ಥಿತಿ ಕೂಡ ಕೆಟ್ಟಿದೆ. ಬರೊಬ್ಬರಿ ಮೈನಸ್ ೨೦ಓ ತಾಪಮಾನಕ್ಕೆ ಅಟೊವಾ ಬಂದು ನಿಂತಿದೆ. ಮೈ ಕೊರೆಯುವ ಆ ಚಳಿ ಭಯಾನಕ ಯುದ್ಧವನ್ನು ಘೋಷಿಸಿದೆ. ಈ ಸ್ಥಿತಿ ಇದ್ದರೂ ಟ್ರಕ್ ಡ್ರೈವರ್ಗಳ ಹೋರಾಟಕ್ಕೆ ಸಣ್ಣ ಒಂದೇ ಒಂದು ಬ್ರೇಕ್ ಕೂಡ ಬಿದ್ದಿಲ್ಲ. ಜಿದ್ದಿಗೆ ಬಿದ್ದವರ ರೀತಿಯಲ್ಲಿ ಹೋರಾಟ ನಡೆಯುತ್ತಲೇ ಇದೆ. ಇದಕ್ಕೂ ಮೊದಲು ವ್ಯಾಕ್ಸಿನೇಷನ್ ವಿರುದ್ಧ ಮಾತನಾಡುತ್ತಿದ್ದ ಜನರಿಗೆ ಈ ಟ್ರಕ್ ಡ್ರೈವರ್ಗಳ ಹೋರಾಟ ಆನೆ ಬಲ ತಂದಂತಾಗಿತ್ತು. ಅಲ್ಲದೇ ಈ ಹೋರಾಟಕ್ಕೆ ವೇದಿಕೆಯೊಂದನ್ನು ರೂಪಿಸಿಕೊಟ್ಟಿತು.
ಯಾಕೆಂದರೆ ಕರೋನ ವ್ಯಾಕ್ಸಿನೇಷನ್ ಮೇಲೆ ಈಗಲೂ ಅದೆಷ್ಟೋ ದೇಶದ ಜನರಿಗೆ ನಂಬಿಕೆ ಇಲ್ಲ. ಆ ಪೈಕಿ ಕೆನಡಾದ ಜನರು ಕೂಡ ಸೇರಿದ್ದಾರೆ. ಸಮರ ಸಾರೊದಕ್ಕೆ ಅವರಿಗೆ ಇದೀಗ ಉಳಿದಿದ್ದು ಒಂದೇ ಹಾದಿ; ಅದು ಈ ’ಫ್ರೀಡಮ್ ಕಾನ್ ವಾಯ’. ಕರೋನ ನಿಯಮ ನಮ್ಮ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಅವರಿಗೆಲ್ಲ ಬೇಕಿರುವುದು ಮಾಸ್ಕ್ನಿಂದ ಮುಕ್ತಿ, ವ್ಯಾಕ್ಸಿನೇಷನ್ನಿಂದ ಬಿಡುಗಡೆ ಮಾತ್ರ. ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಅಂತ ಹೆಳಿದ್ದಕ್ಕೆ ಶುರುವಾದ ಹೋರಾಟ ಇಷ್ಟೊಂದು ಉಗ್ರ ಸ್ವರೂಪಕ್ಕೆ ಹೊಗುತ್ತದೆ ಅನ್ನೊದು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರೂಡೊ ಅವರಿಗೂ ತಿಳಿದಿರ ಲಿಲ್ಲ. ಆತನ ಆದೇಶಕ್ಕೆ ಬಹಳಷ್ಟು ವಿರೋಧ ವ್ಯಕ್ತ ಆಗುತ್ತಿದ್ದಂತೆ ಕೂಡಲೇ ಅಲ್ಲಿನ ಪರಿಸ್ಥಿತಿಯನ್ನು ಕಂಟ್ರೋಲಿಗೆ ತರುವುದು ಪ್ರಧಾನಿಯ ಕರ್ತವ್ಯ ಆಗಿತ್ತು. ಆದರೆ ಅವರು ಮಾಡಿದ್ದು ಹೋರಾಟದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಜನರಿಂದ ದೂರ, ಕಾಣದ ಜಾಗದಲ್ಲಿ ಅಡಗಿ ಕುಳಿತದ್ದು. ಹಲವು ದಿನದ ಹಿಂದೆ ಪ್ರಧಾನಿ ಟ್ರೂಡೊ ಅವರಿಗೆ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿತ್ತು.
ಹಾಗಾಗಿ ಅವರು ಐಸೂಲೇಷನ್ ಆಗಿದ್ದಾರೆ ಅಂತ ಸರಕಾರದ ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದರು. ಆದರೆ ಜನರು, ಟ್ರೂಡೊ ಐಸೂಲೇ ಷನ್ ಆಗದೆ ಅದೆ ಎಸ್ಕೇಪ್ ಆಗಿದ್ದಾರೆ ಅಂತ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದರು. ಆ ತೀವ್ರತೆ ಇದೀಗ ಎಮರ್ಜೆನ್ಸಿ ಹೇರುವ ಮಟ್ಟಕ್ಕೆ ಬಂದಿದೆ. ಜನರು ಯಾವಾಗ ಲಸಿಕೆ ವಿರುದ್ಧ ರೊಚ್ಚಿಗೆ ಎದ್ದಿದ್ದರೊ ಆಗ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಧ್ಯಕ್ಷ ಟ್ರೂಡೊ, ಆ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದರೆ ಕನಿಷ್ಠ ಪಕ್ಷ ಹೀಗೆ ತುರ್ತುಪರಿಸ್ಥಿತಿ ವಿಧಿಸುವ ಧಾರುಣ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ, ಅದೆಲ್ಲವನ್ನು ಬಿಟ್ಟು ಗಲಾಟೆ ಹೆಚ್ಚಾಗುತ್ತಿದ್ದಂತೆ ಅಲ್ಲಿಂದ ಜಾಗ ಖಾಲಿ ಮಾಡಿದ್ರಲ್ಲ ಅಧ್ಯಕ್ಷ?! ಇದರಿಂದ ಹೋರಾಟಗಾರರ ಆಕ್ರೋಶ ಜ್ವಾಲಾಮುಖಿಯಂತೆ ಸೋಟಿಸಿಬಿಟ್ಟಿತು!.
ಇದೀಗ ಈ ಹೋರಾಟ ತಿಳಿಗೊಳಿಸದೇ ಹೊದರೆ ಅಲ್ಲಿ, ಕೋವಿಡ್ ವ್ಯಾಕ್ಸಿನೇಷನ್ ಮೇಲೆ ಅಷ್ಟೇ ಅಲ್ಲ, ಟ್ರೂಡೊ ನಾಯಕತ್ವದ ಮೇಲೂ ಕೆನಡಾ ಜನರಿಗೆ ಸಂಪೂರ್ಣ ನಂಬಿಕೆ ಹೊರಟು ಹೋಗುತ್ತದೆ. ಟ್ರಕ್ ಡ್ರೈವರ್ಗಳು ಆರಂಭಿಸಿದ ಈ ಹೋರಾಟಕ್ಕೆ ಮುಂದೆ ಎಲ್ಲ ಕ್ಷೇತ್ರದ ಜನರೂ ಬೆಂಬಲ ನೀಡುವ ಮೂಲಕ ಟ್ರೂಡೊ ಪಟ್ಟದಿಂದ ಇಳಿಸಿದರೂ ಆಶ್ಚರ್ಯ ಪಡಬೇಕಿಲ್ಲ!
ಕೆನಡಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಕೇವಲ ಒಂದು ಹೋರಾಟವನ್ನು ಹತೋಟಿಗೆ ತರೊದಕ್ಕೆ ಹತ್ತಾರು ದಿನಗಳಾದರೂ ಸಾಧ್ಯ ಆಗುತ್ತಿಲ್ಲ ಅಂದರೆ ಅದರ ತೀವ್ರತೆ ಹೇಗಿದೆ ಅನ್ನೊದನ್ನು ಉಳಿಸಿಕೊಳ್ಳಬಹುದು. ಇದೀಗ ಹೇಡಿಯಂತೆ ಪಲಾಯನ ಮಾಡಿರುವ ಇದೇ ಕೆನಡಾ ಅಧ್ಯಕ್ಷ ಒಂದು ವರ್ಷದ ಹಿಂದೆ ಭಾರತದ ಕುರಿತು ಹೀಗೆ ಹೇಳಿಕೆಯೊಂದನ್ನು ಕೊಟ್ಟಿದ್ದರು. ‘ಭಾರತದಲ್ಲಿ ಕೇಂದ್ರ ಸರಕಾರ
ಜಾರಿಗೆ ತರಲು ಹೊರಟ ಕೃಷಿ ಕಾಯಿದೆ ವಿರುದ್ಧ ಅಲ್ಲಿನ ರೈತರು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಭಾರತದ ಸರಕಾರ ಮೌನ ವಾಗಿರದೆ ರೈತರ ಬೇಡಿಕೆಗಳನ್ನು ಈಡೇರಿಸಿದರೆ ಒಳ್ಳೆಯದು’ ಎಂದಿದ್ದರು.
ನಮ್ಮ ದೇಶದ ಪ್ರತಿಭಟನೆಯ ಬಗ್ಗೆ ಇಷ್ಟೆಲ್ಲ ಮಾತನಾಡಿದ ಟ್ರೂಡೊ, ಇಂದು ತನ್ನದೇ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ಸೈಲೆಂಟ್ ಆಗಿ ಅದೆಲ್ಲಿ ಎಸ್ಕೇಪ್ ಆಗಿzರೊ ಅನ್ನೊದು ಇನ್ನೂ ಯಾರಿಗೂ ತಿಳಿದಿಲ್ಲ. ಭಾರತಕ್ಕೆ ನೀತಿ ಪಾಠ ಹೇಳುವ ಉದ್ದಟತನ ಮಾಡಿದ್ದ
ಟ್ರೂಡೊ ಇಂದು ಅeತ ವಾಸದಲ್ಲಿದ್ದುಕೊಂಡು ಎಮರ್ಜೆನ್ಸಿ ಘೋಷಿಸುತ್ತಾರೆಂದರೆ ಅದೆಂತ ವಿಪರ್ಯಾಸ ಅಲ್ವಾ….!