Sunday, 15th December 2024

ಕೆಲವು ವಿಷಯಗಳನ್ನು ಅಷ್ಟು ಸುಲಭವಾಗಿ ಹೇಳೋಕ್ಕಾಗಲ್ಲ…

ಇದೇ ಅಂತರಂಗ ಸುದ್ದಿ

vbhat@me.com

ಇದು ತಮಾಷೆಯಲ್ಲ. ಕೆಲವರು ಅದೆಷ್ಟು ಕಟ್ಟುನಿಟ್ಟಿನ ವ್ಯಕ್ತಿಗಳೆಂದರೆ ಅವರು, ನಿಯಮವನ್ನು ಸ್ವಲ್ಪವೂ ಉಲ್ಲಂಘಿಸುವುದಿಲ್ಲ. ನೂರಕ್ಕೆ ನೂರು ನಿಯಮ ಪಾಲಿಸುತ್ತಾರೆ. ತಮ್ಮ ಕಾಮನ್‌ಸೆನ್ಸ್ ಅನ್ನು ಪಕ್ಕಕ್ಕೆ ಇಟ್ಟು ನಿಯಮಗಳನ್ನು ಪಾಲಿಸುತ್ತಾರೆ. ಈ ರೀತಿ ನಿಯಮ ಪಾಲಿಸಿದರೆ ಏನಾಗುತ್ತದೆ? ಮೂರು ಪ್ರಸಂಗಗಳನ್ನು ಗಮನಿಸೋಣ.

ಪ್ರಸಂಗ 1: ಗಂಡ ಮನೆಗೆ ಬಂದು ನೋಡ್ತಾನೆ ಅಡುಗೆ ಮನೆಯಲ್ಲ ಒಡೆದ ಕಪ್‌ಗಳು. ಒಂದು ಕ್ಷಣ ಗಾಬರಿಯಾದ. ಬರೀ ಕಪ್ ಗಳು ಮಾತ್ರ ಒಡೆದು ಬಿದ್ದಿವೆ. ಹೆಂಡತಿಯನ್ನು ಕರೆದು, ‘ಏನಾಯ್ತು. ಇದೇನು?’ ಎಂದು ಕೇಳಿದ. ‘ಈ ಹೊಸ ರುಚಿ ಪುಸ್ತಕ ಸರಿಯಿಲ್ಲ ಅಂತ ಕಾಣುತ್ತದೆ’ ಎಂದಳು ಹೆಂಡತಿ. ಗಂಡನಿಗೆ ಅರ್ಥವಾಗಲಿಲ್ಲ. ‘ಕಪ್ ಒಡೆದಿರುವುದಕ್ಕೂ, ಹೊಸ ರುಚಿ ಪುಸ್ತಕಕ್ಕೂ ಏನು ಸಂಬಂಧ?’ ಎಂದು ಕೇಳಿದ. ಅದಕ್ಕೆ ಹೆಂಡತಿ ಹೇಳಿದಳು- ‘ಹಿಡಿಕೆಯಿಲ್ಲದ ಕಪ್ ಅನ್ನು ತೆಗೆದುಕೊಂಡು ಮೂರು ಬಾರಿ ಅಳೆಯಿರಿ ಎಂದು ಕುಕ್‌ಬುಕ್ ನಲ್ಲಿ ಬರೆದಿತ್ತು.

ನಾನು ಒಂದೊಂದೇ ಕಪ್ ತೆಗೆದುಕೊಂಡು ಅದರ ಹಿಡಿಕೆಯನ್ನು ಮುರಿಯಲು ಪ್ರಯತ್ನಿಸಿದೆ. ಪ್ರತಿ ಸಲ ಹೀಗೆ ಪ್ರಯತ್ನಿಸಿದಾ ಗಲೂ ಕಪ್ ಒಡೆದು ಹೋಗುತ್ತಿತ್ತು. ಈ ರೀತಿ ಹದಿನೆಂಟು ಕಪ್‌ಗಳು ಒಡೆದು ಹೋದವು’

ಪ್ರಸಂಗ 2: ಡೋರ್‌ಬೆಲ್ ಸzಯಿತು. ಮನೆಯ ಆಳು ಬಾಗಿಲ ಬಳಿ ಹೋಗಿ ಗ್ಲಾಸಿನ ರಂಧ್ರದ ಮೂಲಕ ಹೊರಗಿರುವವ
ಯಾರೆಂದು ನೋಡಿದ. ಅವನ ಕೈಯಂದು ಬ್ಯಾಗ್ ಇತ್ತು. ನಿಧಾನವಾಗಿ ಬಾಗಿಲು ತೆರೆದ ಆಳು, ‘ಬಾಗಿಲ ಬಳಿಯೇ ಛತ್ರಿ ಯನ್ನು ಬಿಟ್ಟು ಬನ್ನಿ’ ಎಂದ. ಅದಕ್ಕೆ ಅತಿಥಿ, ‘ನಾನು ಛತ್ರಿಯನ್ನು ತಂದಿಲ್ಲವಲ್ಲ’ ಎಂದ, ಅದಕ್ಕೆ ಮನೆಯ ಆಳು, ‘ಮನೆಗೆ ಹೋಗಿ ಛತ್ರಿ ತೆಗೆದುಕೊಂಡು ಬನ್ನಿ. ಯಾಕೆಂದರೆ ಮನೆಯ ಮಾಲೀಕರು ನನಗೆ ಕಟ್ಟುನಿಟ್ಟಾಗಿ ಹೇಳಿದ್ದಾರೆ-ಯಾರೇ
ಬರಲಿ, ಮನೆ ಒಳಗೆ ಬರುವುದಕ್ಕಿಂತ ಮೊದಲು ಅವರ ಛತ್ರಿಯನ್ನು ಬಾಗಿಲ ಬಳಿಯೇ ಬಿಟ್ಟುಬರಬೇಕು.

ಇಲ್ಲದಿದ್ದರೆ ಒಳಗೆ ಬಿಡಬೇಡ ಎಂದು ಹೇಳಿದ್ದಾರೆ. ಛತ್ರಿ ತರದಿದ್ದರೆ, ಮನೆಗೆ ಹೋಗಿ ತೆಗೆದುಕೊಂಡು ಬನ್ನಿ ಹಾಗೂ ಅದನ್ನು ಬಾಗಿಲ ಬಳಿಯೇ ಇಟ್ಟು ಬನ್ನಿ.’

ಪ್ರಸಂಗ 3: ಬ್ಯಾಂಕ್ ದರೋಡೆ ಮಾಡಿ ಪರಾರಿಯಾಗುತ್ತಿದ್ದ ನಾಲ್ವರು ದರೋಡೆಕೋರರನ್ನು ಪೊಲೀಸರು ಬೆನ್ನಟ್ಟಿ ಹೊರಟರು. ಬೆಂಗಳೂರಿನಿಂದ ಅವರನ್ನು ಚೇಸ್ ಮಾಡಿದರೆ ದಾವಣಗೆರೆ, ಹರಿಹರ ದಾಟಿದರೂ ಹಿಡಿಯಲು ಆಗಲಿಲ್ಲ. ಪೊಲೀಸರಿಗಿಂತ ಎರಡು ಕಿ.ಮೀ. ಮುಂದೆ ದರೋಡೆಕೋರರ ಕಾರು ಹೋಗುತ್ತಿತ್ತು. ರಾಣಿಬೆನ್ನೂರು, ಹಾವೇರಿ ದಾಟಿ
ಹುಬ್ಬಳ್ಳಿ ತಲುಪಬೇಕು ಎನ್ನುವಷ್ಟರಲ್ಲಿ ಪೊಲೀಸರು ದರೋಡೆಕೋರರನ್ನು ಹಿಡಿದೇ ಬಿಟ್ಟರು ಎನ್ನುವಾಗ, ಪೊಲೀಸ್ ಜೀಪ್ ಡ್ರೈವರ್ ವಾಹನದ ವೇಗವನ್ನು ಕಡಿಮೆ ಮಾಡಿ ಪಕ್ಕದ ಪೆಟ್ರೋಲ್ ಬಂಕ್‌ನಲ್ಲಿ ತಂದು ನಿಲ್ಲಿಸಿದ.

‘ಪೆಟ್ರೋಲ್ ಖಾಲಿಯಾಯ್ತಾ, ಅಯ್ಯೋ, ಎಂಥ ಗತಿ ಬಂತಪ್ಪ?’ ಎಂದು ಇನ್ಸ್‌ಪೆಕ್ಟರ್ ಹಣೆ ಹಣೆ ಚಚ್ಚಿಕೊಳ್ಳುತ್ತ, ಸ್ಪೀಡೋ ಮೀಟರ್ ನೋಡಿದ. ಪೆಟ್ರೋಲ್ ಖಾಲಿ ಆಗಿರಲಿಲ್ಲ. ಇನ್ನೂ ೮೦ ಕಿ.ಮೀ ಹೋಗುವಷ್ಟು ಪೆಟ್ರೋಲ್ ಇತ್ತು. ಆದರೂ
ವಾಹನ ವನ್ನು ನಿಲ್ಲಿಸಿದ್ದೇಕೆ? ಎಂದು ಇನ್ಸ್‌ಪೆಕ್ಟರ್, ಡ್ರೈವರ್‌ನನ್ನು ಗದರಿದ. ಅದಕ್ಕೆ ಡ್ರೈವರ್ ಹೇಳಿದ -‘ಪ್ರತಿ ೬೦೦ ಕಿಮೀ.ಗೆ ಎಂಜಿನ್ ಆಯಿಲ್ ಬದಲಿಸಬೇಕೆಂಬ ನಿಯಮವಿರುವುದರಿಂದ ಜೀಪ್ ನಿಲ್ಲಿಸಿದೆ.’

ಭಾಷಾ ಕಾಳಜಿ ಹಾಗೂ ಒಂದಷ್ಟು ಪನ್

ರಿಚರ್ಡ್ ಲೆಡರರ್ ಬಗ್ಗೆ ನಾನು ಹಲವಾರು ಸಲ ಬರೆದಿದ್ದೆ. ಇಂಗ್ಲಿಷ್ ಭಾಷೆ ಬಗ್ಗೆ ವಿಶೇಷ ಮಮತೆ ಹೊಂದಿರುವ ವ್ಯಕ್ತಿ. ಭಾಷೆಯನ್ನು ತುಸು ವಿರೂಪಗೊಳಿಸಿದರೆ, ಪದವನ್ನು ತಪ್ಪಾಗಿ ಬರೆದರೆ, ಅಲ್ಲಿಯೇ ಪಾಠ ಮಾಡಲು ನಿಂತು ಬಿಡುವ ಆಸಾಮಿ, ‘ನೀವು ಬಳಸಿದ ಪದ ತಪ್ಪು. ಈ ಸಂದರ್ಭದಲ್ಲಿ ಆ ಪದ ಬಳಸಬಾರದು. ವ್ಯಾಕರಣವೂ ತಪ್ಪಾಗಿದೆ. ನೀವು ಹೀಗೆ ಹೇಳಬೇಕಿತ್ತು’ ಎಂದು ಅ ಒಂದು ಪುಟ್ಟ ಪಾಠ ಮಾಡಿ, ತಿಳಿ ಹೇಳುತ್ತಿದ್ದ ರಿಚರ್ಡ್ ಲೆಡರರ್, ಇದನ್ನೇ ಒಂದು ಅಭಿಯಾನವಾಗಿ ಹಮ್ಮಿಕೊಂಡಿದ್ದ. ಪತ್ರಿಕೆಗಳಲ್ಲಿ ತಪ್ಪನ್ನು ಕಂಡರೂ ಬಿಡುತ್ತಿರಲಿಲ್ಲ.

ಸಂಪಾದಕರಿಗೆ ಫೋನ್ ಮಾಡಿ ದಬಾಯಿಸುತ್ತಿದ್ದ. ರಿಚರ್ಡ್ ತಾವು ಕಂಡ ತಪ್ಪುಗಳನ್ನೆಲ್ಲ ಸಂಗ್ರಹಿಸಿ ಬೇರೆ ಬೇರೆ ಶೀರ್ಷಿಕೆ ಗಳಲ್ಲಿ ಹಲವಾರು ಪುಸ್ತಕಗಳಲ್ಲಿ ಪ್ರಕಟಿಸಿದ್ದೇನೆ. ಆ ಪೈಕಿ Crazy English ಬಹಳ ಜನಪ್ರಿಯ. ಕಳೆದ ಹಲವಾರು
ವರ್ಷಗಳಿಂದ ಲೆಡರರ್, ದಿನಕ್ಕೊಂದು ‘ಪನ್’ ಸಂಗ್ರಹಿಸಿ Pun of the day ಎಂಬ ಕೃತಿಯನ್ನು ಹೊರ ತಂದಿದ್ದೇನೆ. ಆ ಪೈಕಿ ಕೆಲವು ಪನ್ ಇಂಗ್ಲಿಷಿನಲ್ಲಿದ್ದರೆ ಪರಿಣಾಮಕಾರಿಯಾದುದರಿಂದ ಹಾಗೇ ಕೊಡುತ್ತಿದ್ದೇನೆ.

· I am reading a book about anti&gravity. Its impossible to put down.
· I wondered why the baseball was getting bigger. Then it hit me.
· A hole has been found in the nudist camp wall. The police are looking into it.
· He drove his expensive car into the tree and found and how the Mercedes bends.
· To write with a broken pencil is pointless.
· A new type of broom came out, it is sweeping the nation..

ಏನೇನ್ ಬ್ಯಾನ್ ಮಾಡಬಹುದು?
‘ಸಾರ್ಕ್ ರಾಷ್ಟ್ರಗಳು ಭವಿಷ್ಯದಲ್ಲಿ ಏನೇನನ್ನು ನಿಷೇಧಿಸಬಹುದು?’ ಎಂಬ ಬಗ್ಗೆ ಹಿಂದೊಮ್ಮೆ ಬರೆದಿದ್ದನ್ನು ನೆನಪಿಸಿಕೊಳ್ಳು ತ್ತಿದ್ದೇನೆ. ರಷ್ಯನ್ ಆರ್ತೋಡಾಕ್ಸ್ ಚರ್ಚ್‌ನ ಅನುಯಾಯಿಯಾಗಲು ಒಪ್ಪದ ಯಾವುದೇ ಧಾರ್ಮಿಕ ಸಂಘಟನೆಯಿರಲಿ ಅದನ್ನು ರಷ್ಯಾದಲ್ಲಿ ನಿಷೇಽಸಲಾಗುತ್ತದೆ. ಅಮೆರಿಕದ ಓಕ್ಲಹೋಮಾ ರಾಜ್ಯದಲ್ಲಿ ನಾಯಿಯನ್ನು ಕೆಟ್ಟದಾಗಿ ದಿಟ್ಟಿಸಿ ನೋಡು ವುದನ್ನು ಮತ್ತು ನಾಯಿಯತ್ತ ನೋಡುತ್ತ ಮುಖ ಕಿವುಚುವುದನ್ನು ಉಗ್ರಗಾಮಿತ್ವ ವಿರೋಧಿ ಕಾನೂನಿನಡಿ ನಿಷೇಧಿಸಲಾಗಿದೆ.

ಚೀನಾದಲ್ಲಿ ಕಾಲಯಾನ (ಟೈಮ್ ಟ್ರಾವೆಲ್) ಕುರಿತ ಚಲನಚಿತ್ರಗಳನ್ನು ಮತ್ತು ಟಿವಿ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಉತ್ತರ ಕೊರಿಯಾದಲ್ಲಿ ಸ್ವದೇಶಿಯರು ಮೊಬೈಲ್ ಫೋನ್ ಬಳಸುವಂತಿಲ್ಲ. ಬಳಸಿದಲ್ಲಿ ಅವರನ್ನು ಯುದ್ಧಾಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಸಾರ್ಕ್ ರಾಷ್ಟ್ರಗಳು ಭವಿಷ್ಯದಲ್ಲಿ ಏನೇನನ್ನು ನಿಷೇಧಿಸಬಹುದು

ಭಾರತ: ಬೈಸಿಕಲ್ ಮತ್ತು ಟಿಫನ್ ಕ್ಯಾರಿಯರ್ ನಿಷೇಧ. ಬಾಂಬ್‌ಗಳನ್ನು ಹೆಚ್ಚಾಗಿ ಇವುಗಳಲ್ಲಿ ತಾನೇ ಇಡೋದು?
ಪಾಕಿಸ್ತಾನ: ಉಗ್ರಗಾಮಿಗಳು ಬಾಲಿವುಡ್ ಚಿತ್ರ ನೋಡದಂತೆ ನಿಷೇಧ. ಬಾಲಿವುಡ್ ಚಿತ್ರಗಳನ್ನು ನೋಡಿದ ಅವರು ಮುಂಬೈಗೆ ಬಾಂಬ್ ಹಾಕಲು ಬಂದಾಗ ಬಂದ ಕೆಲಸ ಮರೆತು ಬಾಲಿವುಡ್ ತಾರೆಯರನ್ನರಸಿ ಚಿತ್ರನಗರಿಗೆ ಹೋಗಿ ಬಿಟ್ಟರೆ, ಸ್ಫೋದ ಗತಿ?

ಬಾಂಗ್ಲಾದೇಶ: ಗಡಿ ಪ್ರದೇಶದ ಪ್ರಜೆಗಳಿಗೆ ಆಹಾರ ನಿಷೇಧ. ಹಸಿವಿನಿಂದ ಕಂಗೆಟ್ಟು ಅವರು ಭಾರತಕ್ಕೆ ನುಸುಳಬೇಕಲ್ಲ!
ನೇಪಾಳ: ತನ್ನ ಕರೆನ್ಸಿಯ ಮೇಲೆಯೇ ನಿಷೇಧ. ಆಗ ಜನರು ಭಾರತೀಯ ಕರೆನ್ಸಿಯನ್ನು ಒಟ್ಟು ಮಾಡಿ ಮತ್ತು ಪ್ರಿಂಟ್
ಮಾಡತೊಡಗಿ ಪ್ರವಾಸೋದ್ಯಮದ ಆದಾಯ ಹೆಚ್ಚಳಕ್ಕೂ ಮತ್ತು ಅಗತ್ಯ ವಸ್ತುಗಳ ಆಮದು ಹೆಚ್ಚಳಕ್ಕೂ ನೆರವಾಗುತ್ತಾರೆ.
ಶ್ರೀಲಂಕಾ: ’ಟೈಗರ್’ ಎಂಬ ಪದದ ನಿಷೇಧ, ವಿವರಣೆ ಅನಗತ್ಯ.

ಭೂತಾನ್: ಪ್ರಜೆಗಳಿಗೆ ಭಾರತ ಪ್ರವಾಸ ನಿಷೇಧ. ಭಾರತದ ಆಧುನಿಕ ಜೀವನ ಶೈಲಿ ನೋಡಿ ಪ್ರಜೆಗಳು ತಮ್ಮ ಉಡುಗೆ- ತೊಡುಗೆ- ಜೀವನ ಶೈಲಿಯನ್ನೆಲ್ಲ ಬದಲಾಯಿಸಿಕೊಂಡು ಬಿಟ್ಟರೆ ‘ಓಬೀರಾಜ’ ಸಂಪ್ರದಾಯದ ಗತಿಯೇನಪ್ಪಾ?

ಮಾಲ್ಡಿವ್ಸ್: ಮೀನಿನ ಬಳಕೆ ನಿಷೇಧ. ಸಿಗುವ ಮೀನುಗಳನ್ನೆಲ್ಲ ವಿದೇಶಗಳಿಗೆ ಕಳಿಸಿ ಗರಿಷ್ಠ ವಿದೇಶಿ ವಿನಿಮಯ ಗಳಿಸಿದರೆ ತಾನೆ, ಆ ದೇಶ ಉಸಿರಾಡಲು ಸಾಧ್ಯ?

ಯಾರು ಯೂಸ್‌ಲೆಸ್ ಫೆಲೋ?
ಡಾ.ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ನಡೆದ ಘಟನೆ ಯಿದು. ದಿಲ್ಲಿಯ ಇಂಡಿಯಾ ಗೇಟ್ ಬಳಿ ಒಬ್ಬ ಒಂದು ಗಂಟೆ ಯಿಂದ ಬಾಯಿ ಬಡಿದುಕೊಳ್ಳುತ್ತಾ, ‘ನಮ್ಮ ಪ್ರಧಾನಿ ನಿಷ್ಪ್ರಯೋಜಕ ವ್ಯಕ್ತಿ. ಯೂಸ್‌ಲೆಸ್ ಫೆಲೋ’ ಎಂದು ಜೋರಾಗಿ ಕೂಗುತ್ತಿದ್ದ. ಈ ವಿಷಯವನ್ನು ಯಾರೋ ಪೊಲೀಸರಿಗೆ ತಿಳಿಸಿದರು.

ಪೊಲೀಸರು ಅವನ ಕೊರಳಿಪಟ್ಟಿ ಹಿಡಿದು, ‘ನಮ್ಮ ಪ್ರಧಾನಿ ಯನ್ನು ಅವಮಾನಿಸುತ್ತೀಯಾ? ಸ್ಟೇಷನ್‌ಗೆ ನಡಿ’ ಎಂದು ಗದರಿ
ಎಳೆದುಕೊಂಡು ಹೋಗಲು ಯತ್ನಿಸಿದರು. ಆಗ ಆತ, ‘ಸ್ವಾಮಿ, ನನ್ನನ್ನು ಬಿಟ್ಟುಬಿಡಿ. ನಾನು ಆ ಮಾತನ್ನು ನಮ್ಮ ಪ್ರಧಾನಿ
ಯವರನ್ನುದ್ದೇಶಿಸಿ ಹೇಳಿಲ್ಲ. ಬ್ರಿಟನ್ ಪ್ರಧಾನಿಯವರನ್ನು ದ್ದೇಶಿಸಿ ಹಾಗೆ ಹೇಳಿದ್ದೇನೆ. ನನ್ನನ್ನು ನಂಬಿ’ ಎಂದು ಪರಿಪರಿಯಾಗಿ ಬೇಡಿಕೊಂಡ.

ಆದರೆ ಪೊಲೀಸರು ಕೇಳಲಿಲ್ಲ. ಆತನ ಕೆನ್ನೆಗೆ ಎರಡು ಬಾರಿಸಿ ಗದರಿದರು – ‘ನಮ್ಮನ್ನು ಏನಂತ ಭಾವಿಸಿದ್ದೀಯಾ? ನಮ್ಮನ್ನು ಮೂರ್ಖರನ್ನಾಗಿ ಮಾಡ್ತೀಯಾ? ನಮಗೆ ಗೊತ್ತಿಲ್ವ, ನೀನು ನಮ್ಮ ಪ್ರಧಾನಿಯವರನ್ನು ಉದ್ದೇಶಿಸಿಯೇ ಹಾಗೆ ಹೇಳಿದ್ದು ಅಂತ. ನೀನು ಮಾಡಿದ ತಪ್ಪನ್ನು ಒಪ್ಪಿಕೋ. ನೀನು ಹಾಗೆ ಹೇಳಿದ್ದು ಬ್ರಿಟನ್ ಪ್ರಧಾನಿ ಬಗ್ಗೆ ಅಲ್ಲ, ನಮ್ಮ ಪ್ರಧಾನಿ ಬಗ್ಗೆಯೇ. ’

ಸುಲಭದಲ್ಲಿ ಹೇಳೋಕಾಗಲ್ಲ!

ಒಂದೂ ಮಾತನಾಡದೇ ಪೆಗ್‌ನ ಮೇಲೆ ಪೆಗ್ ಹಾಕುತ್ತಿದ್ದ ತಿಪ್ಪೇಶಿ. ಅವನ ಮುಖ ಕಳೆಗುಂದಿತ್ತು. ಅವನನ್ನು ಈ ಸ್ಥಿತಿಯಲ್ಲಿ ಕಂಡು ಈರೇಶಿ ಕಂಗಾಲಾದ. ಹೀಗೆ, ಆಕಾಶವೇ ತಲೆ ಮೇಲೆ ಬಿದ್ದಂತೆ ಕೂರಲು ಕಾರಣವಾದರೂ ಏನು ಎಂದು ಕೇಳಿದ. ‘ಏನೇ ಇದ್ರೂ ಹೇಳ್ಕೋ ಗುರು, ಮನಸ್ಸು ಹಗುರ ಆಗ್ತದೆ ಎಂದು ಮೆತ್ತಗೆ ಹೇಳಿ, ಅವನ ಎದುರಿಗೆ ಕೂತ.

ತಿಪ್ಪೇಶಿ, ಒಮ್ಮೆ ಗೆಳೆಯನನ್ನು ದಿಟ್ಟಿಸಿ ನೋಡಿ-ಕೆಲವು ವಿಷಯಗಳನ್ನು ಅಷ್ಟು ಸುಲಭವಾಗಿ ಹೇಳೋಕಾಗಲ್ಲ’ ಎನ್ನುತ್ತ ಮತ್ತೊಂದು ಮತ್ತೊಂದು ಪೆಗ್ಗಿಗೆ ಆರ್ಡರ್ ಮಾಡಿದ. ‘ಅಯ್ಯೋ, ಅಂಥಾ ಮುಖ್ಯ ವಿಷಯ ಏನು ಅಂತ ಹೇಳು. ಮೊದಲೇ ಹೇಳಿದೆನಲ್ಲ; ಸಂಕಟವನ್ನು ಹೇಳಿಕೊಳ್ಳೋದ್ರಿಂದ ಮನಸ್ಸು ಹಗುರ ಆಗ್ತದೆ’ – ಈರೇಶಿ ಮತ್ತೆ ಪುಸಲಾಯಿಸಿದ.

ಈ ವೇಳೆಗೆ ಅವರ ಮಾತುಕತೆ ಶುರುವಾಗಿ ಹತ್ತು ನಿಮಿಷ ಕಳೆದಿತ್ತು. ತಿಪ್ಪೇಶಿಗೂ ಮಾತಾಡುವ ಉಮೇದು ಬಂದಿತ್ತು. ಆತ
ಹೇಳಿದ: ಇವತ್ತು ಬೆಳಗ್ಗೆ ಏನಾಯ್ತು ಗೊತ್ತ? ನಾನು ಮನೆಯ ಮುಂದಿನ ವರಾಂಡದಲ್ಲಿ ಹಸುವನ್ನು ಕಟ್ಟಿ ಹಾಕಿ ಹಾಲು ಕರೀತಾ
ಇದ್ದೆ. ಒಂದು ಬಕೀಟಿನ ತುಂಬ ಹಾಲು ಕರೆದಿದ್ದೆ. ಇನ್ನೊಂದು ಖಾಲಿ ಬಕೆಟ್ ತಗೊಬೇಕು ಅಂತಿದ್ದಾಗಲೇ ಆ ಹಸು
ಎಡಗಾಲಿನಿಂದ ಬಕೆಟ್‌ಗೆ ಜಾಡಿಸಿ ಒದ್ದುಬಿಡ್ತು.’

‘ಅಯ್ಯೋ ದೇವ್ರೇ, ಹಾಗಾಯ್ತಾ? ಆಮೇಲೆ…’ ಎಂದ ಈರೇಶಿ. ‘ಕೆಲವು ವಿಷಯಗಳನ್ನು ಅಷ್ಟು ಸುಲಭದಲ್ಲಿ ವಿವರಿಸಿ ಹೇಳಲು
ಆಗಲ್ಲ ಅಂದಿದ್ದು ಅದಕ್ಕೆ. ಮುಂದೆ ಏನಾಯ್ತು ಗೊತ್ತ? ಒಂದು ಹಗ್ಗ ತಂದು, ಹಸುವಿನ ಎಡಗಾಲನ್ನು ಅಲ್ಲಿದ್ದ ಕಂಬಕ್ಕೆ ಬಿಗಿದು
ಕಟ್ಟಿ ಮತ್ತೆ ಹಾಲು ಕರೆಯಲು ಶುರು ಮಾಡಿದೆ. ಎರಡನೆ ಬಕೆಟ್ ಕೂಡ ತುಂಬಿತು, ಮತ್ತೊಂದು ಬಕೆಟ್ ಎತ್ತಿಕೋಬೇಕು ಅಂತ
ನಾನು ಯೋಚಿಸ್ತಾ ಇzಗಲೇ ಬಲಗಾಲಿನಿಂದ ಆ ಬಕೆಟ್‌ನ ಜಾಡಿಸಿ ಒದ್ದು ಬಿಡ್ತು….’ ಎಂದು ಒಂದು ಕ್ಷಣ ಮೌನವಾದ
ತಿಪ್ಪೇಶಿ.

‘ಅಯ್ಯೋ ರಾಮ, ಮತ್ತೆ ಒದ್ದು ಬಿಡ್ತಾ ಆಮೇಲೇನಾಯ್ತು ತಿಪ್ಪಣ್ಣಾ?’ ಎಂದು ಈರೇಶಿ ತುಸು ಗಾಬರಿಯಿಂದ ಕೇಳಿದ. ‘ಕೆಲವು ವಿಷಯಗಳನ್ನು ಅಷ್ಟು ಸಲಭವಾಗಿ ಹೇಳೋಕಾಗಲ್ಲ ಅಂತ ಮೊದಲೇ ಹೇಳಲಿಲ್ವಾ ನಾನು? ಇರಲಿ, ಮುಂದೆ ಏನಾಯ್ತು ಕೇಳು, ನಾನು ಎದ್ದು ಹೋಗಿ ಮತ್ತೊಂದು ಹಗ್ಗ ತಂದೆ, ನಂತರ ಹಸುವಿನ ಬಲಗಾಲನ್ನು ಅದಕ್ಕೆ ಬಿಗಿದು ಕಟ್ಟಿದೆ.

ಆಮೇಲೆ, ಮತ್ತು ಬಕೆಟ್ ತಗೊಂಡು ಹಾಲು ಕರೆಯಲು ಶುರು ಮಾಡಿದೆ. ಮೂರನೇ ಬಾರಿ ಕೂಡ ಬಕೆಟ್ ತುಂಬಿ ಹೋಯ್ತು.
ಸದ್ಯ, ಒಂದು ಬಕೆಟ್ ಹಾಲಾದ್ರೂ ಸಿಕ್ತಲ್ಲ ಅಂತ ಖುಷಿಯಾದೆ. ಅದೇ ವೇಳೆಗೆ ಈ ಹಾಳಾದ ಹಸು, ತನ್ನ ಬಾಲದಿಂದ ಬಕೆಟ್‌ಗೆ
ಬೀಸಿ ಹೊಡೀಬೇಕಾ? ಅಷ್ಟೆ, ಆ ಅಷ್ಟೂ ಹಾಲು ಚೆಲ್ಲಿಹೋಯ್ತು…’ ಎಂದ ತಿಪ್ಪೇಶಿ.

‘ಥತ್ತೇರಿಕೆ. ಅದೆ ಪುಂಡ ಹಸು ಅನ್ನುತ್ತೆ, ಹೋಗಿ ಹೋಗಿ ಎಂಥಾ ಕೆಲ್ಸ ಮಾಡಿದೆ ನಿಂಗೆ’ ಎಂದು ಈರೇಶಿ ಪೆದ್ದು ಪೆದ್ದಾಗಿ
ಹೇಳಿದ. ‘ಅಯ್ಯೋ, ಸುಮ್ನಿರಯ್ಯಾ, ಕೆಲವು ವಿಷಯಗಳನ್ನು ಅಷ್ಟು ಸುಲಭವಾಗಿ ಹೇಳೋಕಾಗಲ್ಲ ಅಂತ ನಾನು ಮೊದಲೇ ಹೇಳಿದೆ ತಾನೆ? ಮುಂದೆ ಏನಾಯ್ತು ಗೊತ್ತ? ಈ ಹಾಳಾದ ಬಾಲದಿಂದ್ಲೇ ಇಷ್ಟೆಲ್ಲ -ಜೀತಿ ಆಯ್ತಲ್ಲ ಅಂತ ನಂಗೂ ಸಿಟ್ಟು ಬಂತು. ತಕ್ಷಣ ಹಗ್ಗಕ್ಕೆ ಅಂತ ಹುಡುಕಿದೆ. ಅದು ಸಿಗಲಿಲ್ಲ. ತಕ್ಷಣವೇ ನನ್ನ ಬೆಲ್ಟ್ ಬಿಚ್ಚಿ ಎದುರಿಗಿದ್ದ ಕಂಬಕ್ಕೆ ಹಸುವಿನ ಬಾಲವನ್ನು ಬಿಗಿದು ಕಟ್ಟಿದೆ.

ಆಗ ಏನಾಯ್ತು ಗೊತ್ತ? ಛಕ್ಕಂತ ನನ್ನ ಪ್ಯಾಂಟು ಬಿಚ್ಕೊಂಡು ಸೀದಾ ಕೆಳಗಡೆ ಒಂದು ಬಿಡ್ತು. ಅದೇ ಸಮಯಕ್ಕೆ ಸರಿಯಾಗಿ
ಎದುರು ಮನೆಯ ಮೀನಾಕ್ಷಿ ಕಾಫಿಪುಡಿ ಕೇಳಲಿಕ್ಕೆ ಅಂತ ನಮ್ಮ ಮನೆಗೆ ಬಂದೇ ಬಿಟ್ಟಳು…’  ಹೀಗೆಂದ ತಿಪ್ಪೇಶಿ ಮತ್ತೆ ಅದೇ ಹಳೆಯ ಡೈಲಾಗ್ ಒಗೆದ: ‘ಅದಕ್ಕೆ ಹೇಳಿದ್ದು ನಾನು, ಕೆಲವು ವಿಷಯಗಳನ್ನು ಅಷ್ಟು ಸುಲಭವಾಗಿ ಹೇಳೊಕಾಗಲ್ಲ ಅಂದ್ನಲ್ಲ.!’

ಏಟಿಗೆ ಎದಿರೇಟು
ಕೆಲ ದಿನಗಳ ಹಿಂದೆ, ಪಾಕಿಸ್ತಾನದ ಪೇಶಾವರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾಗಿರುವ ಇಜಾಜ್ ಖಾನ್
ಎಂಬುವವರು ಒಂದು ಟ್ವೀಟ್ ಮಾಡಿದ್ದರು – ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಟು ಮೂಟೆ ಕಟ್ಟಿದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೊರಟು ಹೋದರು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಹ ತೊಲಗುತ್ತಿದ್ದಾರೆ. ಕಮ್ ಆನ್ ಇಂಡಿಯಾ, ಈಗ ನಿರ್ಧಾರ ತೆಗೆದುಕೊಳ್ಳುವ ಸರದಿ ನಿನ್ನದು!’ ಅದಕ್ಕೆ ನಿವೃತ್ತ ಕರ್ನಲ್ ಒಬ್ಬರು ಆ ಟ್ವೀಟ್‌ಗೆ ಕಾಮೆಂಟ್ ಹಾಕಿದ್ದರು – ‘2014 ರ ನಾವು ಆರಂಭಿಸಿದೆವು. ಈಗ ಉಳಿದ ದೇಶಗಳು ನಮ್ಮನ್ನು ಅನುಸರಿಸುತ್ತಿವೆ!’