Sunday, 15th December 2024

ಜಾತಿಗಣತಿ ವರದಿಯ ಹುಯಿಲಿನ ಸುತ್ತಮುತ್ತ

ಭಾಸ್ಕರಾಯಣ

ಎಂ.ಕೆ.ಭಾಸ್ಕರ ರಾವ್

ಕರ್ನಾಟಕದಲ್ಲಿ ಕಾಂತರಾಜು ನೇತೃತ್ವದ ಆಯೋಗ ಮಾಡಿರುವ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ವಿವರಿಸುವ ವರದಿಯೊಂದು ಧೂಳು ಹಿಡಿಯುತ್ತ ಕೂತಿದೆ. ೨೦೧೩-೧೮ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಹೊಣೆ ಒಪ್ಪಿಸಲಾಯಿತು.

ಎಲ್ಲ ಮೇಲು ಜಾತಿಯವರೂ ಜಾತಿ ಗಣತಿಗೆ ವಿರೋಧವಾಗಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆಯವರು ಶಬ್ದ ನುಂಗದೆ ಆರೋಪ ಮಾಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಖರ್ಗೆಯವರು ಈ ಆರೋಪ ವನ್ನು ಮಾಡಲು ರಾಜ್ಯಸಭೆಯ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಅಂದ ಮಾತ್ರಕ್ಕೆ ಅವರಾಗಿಯೇ ಈ ಮಾತನ್ನು ಆಡಿದ್ದಲ್ಲ, ಅವರಷ್ಟಕ್ಕೆ ಅವರನ್ನು ಸುಮ್ಮನೆ ಬಿಟ್ಟಿದ್ದರೆ ಈಗಲೂ ಅವರು ಬಾಯಿ ಬಿಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ.

ರಾಜ್ಯಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯೊಂದರ ಸಂದರ್ಭದಲ್ಲಿ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿಯವರು ‘ಆಡಿಸಿದ ಕಡ್ಡಿ’ ಖರ್ಗೆ ಯವರು ಬಾಯಿ ಬಿಡುವಂತೆ ಮತ್ತು ತಮ್ಮದೇ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷರೂ, ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವ ಕುಮಾರ್ ಹೆಸರನ್ನು ಎಳೆದು ಟೀಕೆ ಮಾಡುವಂತೆ ಮಾಡಿತು. ಆದದ್ದೆಲ್ಲ ಒಳಿತೇ ಆಯಿತೆಂದು ದಾಸರು ಹಾಡಿದ್ದಾರಲ್ಲವೇ…? ಕರ್ನಾಟಕದಲ್ಲಿ ಕಾಂತರಾಜು ನೇತೃತ್ವದ
ಆಯೋಗ ಮಾಡಿರುವ ಶೈಕ್ಷಣಿಕ, ಸಾಮಾಜಿಕ ಸ್ಥಿತಿ ಗತಿ ವಿವರಿಸುವ ವರದಿಯೊಂದು ಧೂಳು ಹಿಡಿಯುತ್ತ ಕೂತಿದೆ.

೨೦೧೩-೧೮ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಹೊಣೆಯನ್ನು ಒಪ್ಪಿಸಲಾಯಿತು. ಅದೇ ಸರಕಾರ ನೇಮಕ ಮಾಡಿದ ಕಾಂತರಾಜು ಅವರು ಅಜಮಾಸು ೧೭೦ ಕೋಟಿ ರು. ವೆಚ್ಚದಲ್ಲಿ ವರದಿ ತಯಾರಿಸಿ ಒಪ್ಪಿಸುವ ಹಂತದಲ್ಲಿ ಏನೆಲ್ಲ ಭಾನಗಡಿಯಾಗಿ ವರದಿ ಧೂಳು ಮುಕ್ಕುವಂತಾಗಿದೆ. ಹಾಲಿ ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಅದನ್ನು ಒಪ್ಪ ಓರಣಗೊಳಿಸಿ ಸರಕಾರಕ್ಕೆ ಸಲ್ಲಿಸ
ಲಿದೆ ಎಂಬ ಭರವಸೆ ಮೂಡಿದೆ.

ಏತನ್ಮಧ್ಯೆ ಕಾಂಗ್ರೆಸ್ ನಾಯಕ ವೈನಾಡ್ ಸಂಸದ ರಾಹುಲ್ ಗಾಂಧಿಯವರು, ತಾವು ಅಧಿಕಾರಕ್ಕೆ ಬಂದಲ್ಲಿ ಇಡೀ ದೇಶದಲ್ಲಿ ಜಾತಿಗಣತಿ ನಡೆಸಿ ಅವಕಾಶ ವಂಚಿತರೆಲ್ಲರಿಗೂ ನ್ಯಾಯ ಒದಗಿಸುವ ಮಾತಾಡಿದ್ದು ಸಿದ್ದರಾಮಯ್ಯನ ವರಿಗೆ ರಾಜಕೀಯ ಅಸ ದೊರೆಯುವಂತೆ ಮಾಡಿತು. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತಾವು ಕರ್ನಾಟಕದಲ್ಲಿ ಅನುಷ್ಠಾನ ಗೊಳಿಸಿಯೇ ಸಿದ್ಧ, ಹೈಕಮಾಂಡ್ ಕೂಡಾ ಅದರ ಪರವಾಗಿದೆ ಎನ್ನುವ ಮೂಲಕ ಒಂದಿಷ್ಟು ರಾಜಕೀಯ ಲಾಭ ಪಡೆಯುವ ಕಸರತ್ತು ನಡೆಸಿದರು.

ತಾವು ಹೊಂದಿರುವ ಸಿಎಂ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಡಿಕೆಶಿಯವರತ್ತ ಯಾರದೋ ಹೆಗಲ ಮೇಲೆ ಬಂದೂಕನ್ನಿಟ್ಟು ಗುಂಡು ಹಾರಿಸುವುದು
ಅವರಿಗೆ ಬೇಕಾಗಿತ್ತು. ಅದನ್ನು ಮಾಡಿದರು. ರಾಜ್ಯದಲ್ಲಿ ಮೇಲ್ಜಾತಿ ಜನ ‘ಹುಯ್’ ಎನ್ನಲು ಅದು ಎಷ್ಟು ಬೇಕೋ ಅಷ್ಟೂ ಕೆಲಸ ಮಾಡಿತು. ಮುಖ್ಯ ವಾಗಿ ಒಕ್ಕಲಿಗರು, ಲಿಂಗಾಯತ ವೀರಶೈವರು ಸಿಡಿದೆದ್ದರು. ಬ್ರಾಹ್ಮಣರು ಬಹಿರಂಗ ಗದ್ದಲ ಮಾಡದಿದ್ದರೂ ಪ್ರತಿಭಟನೆಯಲ್ಲಿ ಒಳಾಂತರಂಗದ ಸಹಮತ ವ್ಯಕ್ತಪಡಿಸಿದರು.

ಒಕ್ಕಲಿಗ ಮಠಾಧೀಶರ ನೇತೃತ್ವದಲ್ಲಿ ಒಕ್ಕಲಿಗ ಮುಖಂಡರ ಸಭೆ ನಡೆದು ಆಯೋಗದ ಶಿಫಾರಸುಗಳ ಜಾರಿ ವಿರುದ್ಧ ಠರಾವನ್ನು ಅಂಗೀಕರಿಸಿತು. ಯಾವು ದೇ ಕಾರಣಕ್ಕೂ ಆಯೋಗದ ವರದಿ ಸ್ವೀಕಾರಾರ್ಹವಲ್ಲ ಎಂಬ ಠರಾವು ಆಧರಿತ ಮನವಿಗೆ ಸ್ವತಃ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಹಿ ಹಾಕಿ ದರು. ಅವರ ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಪಕ್ಷದಲ್ಲಿರುವ ಬಹುತೇಕ ಎಲ್ಲ ಒಕ್ಕಲಿಗ ಮುಖಂಡರೂ ಸಹಿ ಹಾಕಿದರು.

ಬಿಜೆಪಿಯಲ್ಲಿ ಆರ್.ಅಶೋಕ್, ಡಿ.ವಿ. ಸದಾನಂದ ಗೌಡ, ಅಶ್ವತ್ಥನಾರಾಯಣ ಸೇರಿದಂತೆ ಒಕ್ಕಲಿಗ ಶಾಸಕರು, ನಾಯಕರೆಲ್ಲರೂ ಸಹಿ ಹಾಕಿದರು. ಕಾಂಗ್ರೆಸ್‌ನಿಂದ ಮನವಿಗೆ ಮೊದಲ ಸಹಿ ಬಿದ್ದುದು ಸಿದ್ದರಾಮಯ್ಯ ಸಂಪುಟದಲ್ಲಿ ಎರಡನೇ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಂದ. ಸಂಪುಟ ದಲ್ಲಿರುವ ಎಲ್ಲ ಒಕ್ಕಲಿಗರೂ ಡಿಕೆಶಿಯ ವರನ್ನು ಅನುಸರಿಸಿದರು. ಸಿದ್ದ ರಾಮಯ್ಯ ಬಣ, ಡಿಕೆಶಿ ಬಣ ರಾಜಕೀಯ ಮತ್ತೊಮ್ಮೆ ಬಯಲಾ ಯಿತು. ರಾಜ್ಯ
ಸರಕಾರದ್ದು ‘ಒಡೆದ ಮನೆ ಮುರಿದ ಬಾಗಿಲು’ ಎಂಬ ಸಂದೇಶ ದೇಶದ ಉದ್ದಕ್ಕೆ ರವಾನೆ ಯಾಗಲು ಅಷ್ಟು ಸಾಕಾಯಿತು.

ರಾಹುಲ್ ಗಾಂಧಿ ಮಾಡಿದ ಘೋಷಣೆ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ತೆಲಂಗಾಣ ವಿಧಾನಸಭೆ ಚುನಾವಣೆಯ ಮುನ್ನಾದಿನಗಳಲ್ಲಿ ಅಬ್ಬರದ ಪ್ರಚಾರ ಪಡೆಯಿತು. ತೆಲಂಗಾಣ ಅವರ ನಿರೀಕ್ಷೆಯಂತೆ ಕೈ ವಶವಾಯಿತು. ಆದರೆ ಈ ಘೋಷಣೆ ಉತ್ತರ ಭಾರತದ ಮೂರೂ ರಾಜ್ಯಗಳಲ್ಲಿ ಕೆಲಸ ಮಾಡಲಿಲ್ಲ. ಅಲ್ಲಿ ಬಿಜೆಪಿ ತನ್ನ ಕೈಲಿದ್ದುದನ್ನು ಉಳಿಸಿಕೊಂಡಿತು, ಕಾಂಗ್ರೆಸ್‌ನ ಕೈಲಿದ್ದುದನ್ನು ಕಸಿದುಕೊಂಡಿತು. ಇದನ್ನು ರಾಜ್ಯ ಸಭೆಯಲ್ಲಿ ಪ್ರಸ್ತಾ ಪಿಸಿದ ಸುಶೀಲ್ ಕುಮಾರ್ ಮೋದಿ, ಖರ್ಗೆ ಯವರನ್ನು ಕಿಚಾಯಿಸಿದರು.

‘ಏನಾಯಿತು ನಿಮ್ಮ ಘೋಷಣೆ ಗತಿ?’ ಎಂದರು, ‘ಜಾತಿಗಣತಿ ದೇಶ ದಲ್ಲೆಲ್ಲ ನಡೆಯಬೇಕು ಎಂದು ರಾಹುಲ್ ಗಾಂಧಿ ಹೇಳುತ್ತಾರೆ, ಆದರೆ ನಿಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ಸಿದ್ಧವಿರುವ ವರದಿಯ ಅನುಷ್ಠಾನಕ್ಕೆ ನಿಮ್ಮ ಉಪಮುಖ್ಯ ಮಂತ್ರಿಯದೇ ವಿರೋಧವಿದೆ ಯಲ್ಲ’ ಎಂದು ಹೇಳಿ
ಖರ್ಗೆಯವರು ಕೂತಲ್ಲಿ ಕೂರಲಾಗದಂತೆ ಮಾಡಿದರು. ಜಾತಿಗಣತಿ ವರದಿ ಬಿಡುಗಡೆಗೆ ಡಿ.ಕೆ.ಶಿವಕುಮಾರ್ ವಿರೋಧಿಸುತ್ತಿದ್ದಾರೆ, ನೀವೂ (ಬಿಜೆಪಿ
ಯವರು) ವಿರೋಧಿಸುತ್ತಿದ್ದೀರಿ. ಎಲ್ಲ ಪ್ರಬಲ ಮೇಲು ಜಾತಿಯವರೂ ಒಂದಾಗಿದ್ದಾರೆ ಎಂದರು ಖರ್ಗೆ.

ಗಮನಿಸಬೇಕಿರುವ ಸಂಗತಿ ಎಂದರೆ ಡಿಕೆಶಿ, ಕಾಂತರಾಜ್/ಜಯಪ್ರಕಾಶ ಹೆಗ್ಡೆ ವರದಿ ಜಾರಿಗೆ ತಮ್ಮ ವಿರೋಧವನ್ನು ದಾಖಲಿಸಿ ತಿಂಗಳುಗಳೇ ಉರುಳಿ ಹೋಗಿವೆ. ದೇಶದ ಉದ್ದಗಲಕ್ಕೆ, ಕೆಪಿಸಿಸಿ ಅಧ್ಯಕ್ಷರೊಬ್ಬರು ರಾಹುಲ್ ನಿಲುವಿನ ವಿರುದ್ಧ ತಿರುಗಿಬಿದ್ದಿದ್ದಾರೆ. ಆದಾಗ್ಯೂ ಅದನ್ನು ನಿನ್ನೆಮೊನ್ನೆ ವರೆಗೆ
ಹೈಕಮಾಂಡ್ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದರೆ ಅದರ ಹಿಂದೆ ಏನೋ ಹಿಕಮತ್ ಇದೆ ಎಂದೇ ಜನ ಭಾವಿಸುತ್ತಾರೆ. ಡಿಕೆಶಿ ಹೇಳಿದ ಮಾತನ್ನು ಆ ಪಕ್ಷದಲ್ಲಿ ಸಣ್ಣಪುಟ್ಟ ಹೈಕಳು ಆಡಿದ್ದರೆ ಅವರನ್ನು ಪಕ್ಷ ಫುಟ್‌ಬಾಲ್ ತರಹ ಆ ತುದಿಯಿಂದ ಈ ತುದಿಗೆ ಈ ತುದಿಯಿಂದ ಆ ತುದಿಗೆ ಅಟ್ಟುವ ಕೆಲಸ ಮಾಡುತ್ತಿತ್ತು.

ರಾಹುಲ್ ಗಾಂಧಿ ಸಾಮಾನ್ಯ ವಾಗಿ ಇಂಥದಕ್ಕೆಲ್ಲ ನೇರವಾಗಿ ಪ್ರತಿಕ್ರಿಯಿಸುವ ಮನುಷ್ಯ. ಮನಮೋಹನ್ ಸಿಂಗ್ ತರಲು ಉದ್ದೇ ಶಿದ್ದ ಸುಗ್ರೀವಾಜ್ಞೆ ಪ್ರತಿ
ಯನ್ನು ದೆಹಲಿ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮದವರ ಎದುರೇ ಹರಿದು ತಮ್ಮದೇ ಸರಕಾರ ಮುಜುಗರ ಪಡುವಂಥ ಕೆಲಸ ಮಾಡಿದ ಸಾಹಸಿ ಅವರು!
ಅಂಥವರು ಕೂಡಾ ಡಿಕೆಶಿ ವಿಚಾರ ದಲ್ಲಿ ಮೌನ ತಾಳಿದರು ಎನ್ನುವುದು ಹಿಕಮತ್‌ನ ಭಾಗವೆಂದರೆ ಅತಿಶಯೋಕ್ತಿಯಲ್ಲ.

ರಾಜ್ಯಸಭೆಯಲ್ಲಿ ಮಾತಾಡಲೇಬೇಕಾದ ಸನ್ನಿವೇಶವನ್ನು ಸುಶೀಲ್ ಕುಮಾರ್ ಮೋದಿ ಸೃಷ್ಟಿಸಿದರೆಂದೇ ಮಲ್ಲಿಕಾರ್ಜುನ ಖರ್ಗೆ ಬಾಯಿ ತೆರೆದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಬೇಡವಾದ ಉಸಾಬರಿ ತಮಗಾದರೂ ಯಾಕೆ ಬೇಕೆಂದು ಸುಮ್ಮನಿರುವ ಅವರ ತೀರ್ಮಾನ ಠುಸ್ ಆಯಿತೆಂದೇ ಡಿಕೆಶಿ ವಿರುದ್ಧ ಟೀಕಿಸಿದರು. ಹೈಕಮಾಂಡ್ ಎಂದರೆ ಕಾಂಗ್ರೆಸ್‌ನಲ್ಲಿ ನಾವೆಲ್ಲ ನಂಬಿರುವಂತೆ ಎಐಸಿಸಿ ಅಧ್ಯಕ್ಷರು. ಅವರಿಂದಲೇ ಸರಿ ಯಲ್ಲ ನಡವಳಿಕೆ ಎಂಬ ಮಾತು ಬಂದಿದ್ದು ಯಾವೆಲ್ಲ ರೀತಿಯ ಅಡ್ಡಡ್ಡ ಉದ್ದುದ್ದ ಪರಿಣಾಮದ ತಿರುವು ಪಡೆಯಲಿದೆಯೋ ಗೊತ್ತಿಲ್ಲ.

ಅನಪೇಕ್ಷಿತ ಪರಿಣಾಮಗಳು ಉಂಟಾಗದೆಯೂ ಇರಬಹುದು. ಡಿಕೆಶಿಯವರಿಗೆ ಈ ಬಗೆಯ ವಿರೋಧ ಟೀಕೆಗಳನ್ನೆಲ್ಲ ಹ್ಯಾಗೆ ಆಪೋಷನ ಮಾಡಬೇಕು ಎನ್ನುವುದು ಗೊತ್ತೇ ಇದೆ. ಇಂಥ ಮಾತುಗಳಿಗೆಲ್ಲ ಎಂದೂ ಕ್ಯಾರೇ ಎನ್ನದ ಡಿಕೆಶಿಯವರು ಖರ್ಗೆಯವರ ಟೀಕೆಯನ್ನು ಅಂಗಿಯ ಮೇಲಣ ಧೂಳಿನ ಕಣವನ್ನು ಝಾಡಿಸಿ ಕೊಡವಿದಂತೆ ಪಕ್ಕಕ್ಕೆ ತಳ್ಳಿಹಾಕಿದರೆ ಅಲ್ಲಿಗೆ ಖೇಲ್ ಖತಂ.