ತನ್ನಿಮಿತ್ತ
ಎಲ್.ಭಾನುಪ್ರಕಾಶ್
ಕಳೆದ ಒಂದು ದಶಕದಿಂದಿಚೆಗೆ ದೆಹಲಿ ರಾಜಕೀಯ ಮೊಗಸಾಲೆಯಲ್ಲಿ ಹೆಚು ಸದ್ದು ಮಾಡುತ್ತಿರುವ ಹೆಸರು ಅಮಿತ್ ಶಾ.
ಪ್ರಧಾನಿ ನರೇಂದ್ರ ಮೋದಿ ನಂತರದಲ್ಲಿ ಅತ್ಯಂತ ಪ್ರಭಾವಿ ವರ್ಚಸ್ಸನ್ನು ಹೊಂದಿರುವ ನಾಯಕ.
ನರೇಂದ್ರ ಮೋದಿ ಸರಕಾರ ರಾಜಕೀಯವಾಗಿ ಎದುರಿಸುವ ಸವಾಲುಗಳನ್ನು ನಿರಾಯಾಸವಾಗಿ ಪರಿಹರಿಸುವ ಟ್ರಬಲ್ ಶೂಟರ್. ಶಾ ಜನಿಸಿದ್ದು ೨೨ ಅಕ್ಟೋಬರ್ ೧೯೬೪, ಮುಂಬೈನಲ್ಲಿ. ಹುಟ್ಟು ಶ್ರೀಮಂತಿಕೆಯಲ್ಲಿ ಜನಿಸಿದ್ದರೂ, ಬೆಳೆದಿದ್ದು ಮಾತ್ರ
ಶ್ರೀಸಾಮಾನ್ಯನಂತೆ. ಬಾಲ್ಯದಲ್ಲಿ ಅರಬಿಂದೋ ಅವರ ತತ್ತ್ವಗಳಿಂದ ಪ್ರಭಾವಿತರಾಗಿ, ನಂತರ ಆಕರ್ಷಿತವಾಗಿದ್ದು ಭಾರತೀಯ ವಿದ್ಯಾಭವನದ ಸಂಸ್ಥಾಪಕ ಕೆ.ಎಂ.ಮುನಷಿರವರ ಬರಹಗಳಿಗೆ.
ಆದರೆ ಇವತ್ತಿಗೂ ಅಮಿತ್ ಶಾ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆ ನಿಂತಿರುವುದು ೯ನೇ ವಯಸ್ಸಿನಲ್ಲಿ ಓದಿದ ಕೌಟಿಲ್ಯನ ರಾಜಕೀಯ ಚಿಂತನೆಗಳು. ಅಮಿತ್ ಶಾ ಅವರ ರಾಜಕೀಯ ನಡೆಗಳು ಹೇಗೆ ಕುತೂಹಲ ಹುಟ್ಟಿಸುತ್ತವೆಯೋ, ಅವರ ಬಗ್ಗೆ ಎಲ್ಲವೂ ತಿಳಿದಿದೆ ಎಂದು ಖಚಿತವಾಗಿ ಹೇಳುವ ಯಾವ ವ್ಯಕ್ತಿಯೋ ಇಲ್ಲ.
ಅಮಿತ್ ಶಾ ಬದುಕಿನ ಪಥವನ್ನು ವಿಶ್ಲೇಷಣೆ ಮಾಡಿ, ನಾವು ಕಲಿಯಬೇಕಾದ ವಿಷಯವೆಂದರೆ; ಸವಾಲುಗಳನ್ನು ಹೇಗೆ ಅವಕಾಶಗಳಾಗಿ ಪರಿವರ್ತಿಸುವುದು. ಹಾಗೆ ನೋಡಿದರೆ ಶಾ ರಾಜಕೀಯ ಹಾದಿ ಸುಗಮದಲ್ಲ, ದುರ್ಗಮ ಪರ್ವತವನ್ನೇರುವಾಗ ಸಿಗುವ ಕಲ್ಲು ಮುಳ್ಳುಗಳ ದಾರಿಯಂತಿದೆ. ೧೯೮೦ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮಾನ್ಯ ಸದಸ್ಯನಿಂದ, ೨೦೧೯ರ ಗೃಹ ಸಚಿವರಾಗುವವರೆಗೆ ಹತ್ತಾರು ಹುದ್ದೆಯನ್ನು ನಿಭಾಯಿಸಿ ಜಯಿಸಿದ್ದಾರೆ. ೧೯೯೭ರಲ್ಲಿ ಗುಜರಾತ್‌ನ ಸರ್ಖೆಜ್ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಅಮಿತ್ ಶಾ, ವಿರೋಧಿಗಳು ಒಡ್ಡುವ ಎಲಾ ಪಟ್ಟುಗಳನ್ನು ಭೇದಿಸಿಕೊಂಡು ಪ್ರತಿ
ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಿರುವ ಸೋಲು ಕಂಡಿರದ ಸರದಾರ. ಇದು ಅವರ ಚುನಾವಣಾ ಪರಿಣತಿ ಮತ್ತು ಸ್ಥಿರತೆ ಯನ್ನು ಪ್ರತಿಬಿಂಬಿಸುತ್ತದೆ.
೨೦೦೨ರ ಗೋಧ್ರಾ ಗಲಭೆಯ ನಂತರ ನರೇಂದ್ರ ಮೋದಿ ಜನಾದೇಶಕ್ಕೆ ಸಜ್ಜಾಗುತ್ತಾರೆ. ಗುಜರಾತ್ ಬಗ್ಗೆ ರಾಜ್ಯದ ಒಳಗೆ ಮತು ಹೊರಗೆ ಜನರ ಮನಸ್ಸಿನಲ್ಲಿ ನೆಲೆ ನಿಂತಿದ್ದ ನಕಾರಾತ್ಮಕ ಚಿತ್ರಣವನ್ನು ಬದಲಿಸುವ ಇಂಗಿತದಿಂದ ಅಖಂಡ ಗುಜರಾತ್‌ನಲ್ಲಿ
ಗುಜರಾತ್ ಗೌರವ್ ಯಾತ್ರೆ ಕೈಗೊಂಡರು. ಆ ಸಮಯದಲ್ಲಿ ಶಾ ಪಕ್ಷದಲ್ಲಿ ಹೊಂದಿದ ಬೇರುಮಟ್ಟದ ಕ್ರಿಯಾಶೀಲತೆ, ಸಾಂಸ್ಥಿಕ ಪರಿಣತಿ, ವಿಷಯದ ಆಳಕ್ಕಿದ್ದು ಅವಲೋಕಿಸುವ ತೀಕ್ಷ್ಣ ದೃಷ್ಟಿ, ರಾಜಕೀಯ ನಿರ್ವಹಣೆ ಮತು ಕುಗ್ಗದ ಶಕ್ತಿ ಅವರನ್ನು ಮೋದಿ
ನಿಕಟವರ್ತಿಯನ್ನಾಗಿ ಮುಂಚೂಣಿಗೆ ತಂದು ನಿಲ್ಲಿಸಿತ್ತು. ಗೌರವ್ ಯಾತ್ರೆ ಯಶಸ್ಸಿನಿಂದ ಮತ್ತೆ ಗುಜರಾತ್‌ನಲ್ಲಿ ಕಮಲ ಅರಳಿಸಿತು ಈ ಜೋಡಿ.
ಗೃಹ ಸಚಿವರಾಗಿದ್ದಾಗ ಅವರು ಪೊಲೀಸ್ ಪಡೆಯನ್ನು ಆಧುನೀಕರಿಸಿದ ವ್ಯವಸ್ಥಿತ ಕ್ರಮವನ್ನು ಯಾರೂ ಮರೆಯುವಂತಿಲ್ಲ. ಪಾಕಿಸ್ತಾನಕ್ಕೆ ಬಹಳ ಹತ್ತಿರವಿರುವ ಗುಜರಾತ್‌ನಲ್ಲಿ ಭಯೋತ್ಪಾದನೆ ಸುಳಿಯದಂತೆ ನಿಗ್ರಹಿಸಲು, ವಿಶ್ವದಲ್ಲೇ ಮೊದಲೆನಿಸಿದ ಅತ್ಯಾಧುನಿಕ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದರು. ತನಿಖಾ ವಿಜ್ಞಾನದ ಮತ್ತು ಆಂತರಿಕ ಭದ್ರತೆಯ ಅಧ್ಯಯನಕ್ಕೆ ಪೂರಕವಾಗುವಂಥ ಕೋರ್ಸ್‌ಗಳನ್ನು ಪ್ರಾರಂಭಿಸಿ, ಪದವಿ ನೀಡಲು ದೇಶದಲ್ಲೇ ಮೊದಲಬಾರಿಗೆ ರಕ್ಷಾ ಶಕ್ತಿ ವಿಶ್ವ
ವಿದ್ಯಾಲಯವನ್ನು ಸ್ಥಾಪಿಸಿದ್ದು ಇವರ ಹೆಗ್ಗಳಿಕೆಗಳಲ್ಲಿ ಒಂದು.
ಅಲ್ಲಿನ ಕಾರ‍್ಯಕ್ರಮಗಳಿಗೆ ಮಾರ್ಗದರ್ಶಕರಾಗಿದ್ದು ಭಾರತದ ಜೇಮ್ಸ್ ಬಾಂಡ್ ಖ್ಯಾತಿಯ ಅಜಿತ್ ದೋವಲ್. ಅಮಿತ್ ಶಾ ಗೃಹ ಸಚಿವರಾಗಿದ್ದ ಅವಧಿಯಲ್ಲಿ ರ್ಘಕಾಲದ ಕ-ಗಳಾಗಲಿ ಅಥವಾ ಕೋಮು ಗಲಭೆ/ ಸಂಘರ್ಷಗಳಾಗಲಿ ನಡೆಯಲಿಲ್ಲ. ಅವರ
ಅಧಿಕಾರವಧಿಯಲ್ಲಿ ನಡೆದ ಸ್ಮಾರ್ಟ್ ಪೊಲೀಸಿಂಗ್ ಅತಿ ಹೆಚು ಜನಪ್ರಿಯತೆ ಮತು ಯಶಸ್ಸು ಕಂಡಿತು. ಅದನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ಪ್ರಶಂಸಿದ್ದು ವಿಶೇಷ. ಅದಕ್ಕೆ ಉತ್ತಮ ಉದಾಹರಣೆ; ೨೦೦೭ರಲ್ಲಿ ರಾತ್ರೋರಾತ್ರಿ ಟಾಟಾ ತನ್ನ ಉತ್ಪಾದನಾ ಘಟಕವನ್ನು ಪೂರ್ವದಿಂದ ಪಶ್ಚಿಮಕ್ಕೆ ಸ್ಥಳಾಂತರಿಸಿದ್ದು. ಈ ನಿರ್ಣಯವನ್ನು ಗುಜರಾತ್ ರೈತರು ಮತ್ತು ಸಂಘಟನೆಗಳು ಸ್ವಾಗತಿಸಿದ್ದವು. ಆ ನಿಟ್ಟಿನಲ್ಲಿ ಗುಜರಾತ್‌ನ ಭೂ ಸ್ವಾಧೀನ ಪ್ರಕ್ರಿಯೆ ದೇಶಕ್ಕೆ ಮಾದರಿಯಾಗಿದ್ದು ಸುಳ್ಳಲ್ಲ.
೨೦೧೦ – ೨೦೧೨ ಅಮಿತ್ ಶಾ ರಾಜಕೀಯ ಜೀವನದ ಅತ್ಯಂತ ಸವಾಲಿನ ವರ್ಷಗಳು. ಸೋನಿಯಾಗಾಂಧಿ ನಿಯಂತ್ರಣದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಗುಜರಾತ್‌ನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಶಾ ವಿರುದ್ಧ ನಕಲಿ ಎನ್ ಕೌಂಟರ್ ಆರೋಪ ಹೊರಿಸಿತು. ೫ ರಾಜ್ಯದ ಪೊಲೀಸರಿಗೆ ಬೇಕಿದ್ದ ಪಾತಕಿ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಆಯಿತು. ಇದು ನಕಲಿ ಎನ್ ಕೌಂಟರ್ ಎಂದು ಆರೋಪಿಸಲಾಯಿತು. ಜುಲೈ ೨೦೧೦ರಲ್ಲಿ ಸಿಬಿಐ ಚಾರ್ಚ್‌ಶೀಟ್ ಸಲ್ಲಿಸಿತ್ತು. ಶಾ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರನ್ನು ೯೦ ದಿನಗಳ ಜೈಲು ಶಿಕ್ಷೆಗೆ ಗುರಿ ಪಡಿಸಲಾಯಿತು. ಜಾಮೀನಿನ ಮೇಲೆ ಬಿಡುಗಡೆಯಾದರು.
ನ್ಯಾಯಾಲಯ ಗುಜರಾತಿಗೆ ಕಾಲಿಡದಂತೆ ನಿಬಂಧನೆ ಹೇರಿತ್ತು. ಅಮಿತ್ ಶಾ ದೆಹಲಿ ಸೇರಿದರು. ೨ ವರ್ಷ ದೆಹಲಿಯಲ್ಲಿದ ಅಮಿತ್ ಶಾ ಹೆಚ್ಚಾಗಿ ಅಧ್ಯಾತ್ಮಿಕ ಅಧ್ಯಯನದಲ್ಲಿ ನಿರತರಾಗಿದ್ದರೂ, ದೆಹಲಿ ಗದ್ದುಗೆಯ ಮೇಲೆ ಕಣ್ಣಿಡಲು ಆರಂಭಿಸಿದ್ದ ಮಾತ್ರ ನಿಜ. ಶಾ ಲೆಕ್ಕಾಚಾರ ಸುಳ್ಳಾಗಲಿಲ್ಲ ೨೦೧೪ರಲ್ಲಿ ಸಿಬಿಐ ನ್ಯಾಯಾಲಯ ಅವರ ವಿರುದ್ಧ ದಾಖಲಾಗಿದ್ದ ಎಲ್ಲಾ
ಪ್ರಕರಣಗಳು ರಾಜಕೀಯ ಪ್ರೇರಿತವೆಂದು ಕೇಸಿನಿಂದ ಖುಲಾಸೆ ಮಾಡಿತು. ಪಕ್ಷ ಅವರಿಗೆ ಗುಜರಾತ್, ದೆಹಲಿ ಅಥವಾ ಬೇರೆ ಯಾವುದೇ ರಾಜ್ಯದಲ್ಲಿ ಕೆಲಸ ಮಾಡಲು ಮುಕ್ತ ಅವಕಾಶ ನೀಡಿತು. ಆದರೆ ರಾಷ್ಟ್ರ ರಾಜಕಾರಣದ ಮೇಲೆ ದೃಷ್ಟಿ ನೆಟ್ಟಿದ ಶಾ, ದೆಹಲಿ ಗದ್ದುಗೆ ಬಲಪಡಿಸಲು ದೆಹಲಿಯನ್ನು ಆಖಾಡ ಮಾಡಿಕೊಂಡರು.
೨೦೧೪ರ ಜುಲೈನಲ್ಲಿ, ಬೂತ್ ಮಟ್ಟದಿಂದ ಬಂದ ೪೯ ವರ್ಷದ ಕಾರ‍್ಯಕರ್ತ ದೇಶದ ಅವತ್ತಿನ ಎರಡನೇ ಅತಿ ದೊಡ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ತದನಂತರ ನಡೆದಿದೆಲ್ಲವು ಮೈಲುಗಲ್ಲೇ..!
ಹತ್ತರಿಂದ ಹತ್ತು ಕೋಟಿಯ ಪಯಣ. ೧೯೫೧ರಲ್ಲಿ ಕೇವಲ ಹತ್ತು ಜನರಿಂದ ಸ್ಥಾಪಿಸಲ್ಪಟ್ಟ ಭಾರತದ ರಾಜಕೀಯ ಪಕ್ಷ,
ಅಮಿತ್ ಶಾ ಅಧಿಕಾರವಹಿಸಿಕೊಂಡ ನಂತರ ಪ್ರಪಂಚದ ಅತಿ ದೊಡ್ಡ ಪಕ್ಷವಾಗಿ ಬೆಳೆದ ರೀತಿ ಊಹಿಸಲು ಅಸಾಧ್ಯ. ೨೦೧೫ರಲ್ಲಿ ಚೀನಾದ ಕಮ್ಯೂನಿಸ್ಟ್ ಪಾರ್ಟಿಯೇ ಅತ್ಯಂತ ದೊಡ್ಡ ಪಕ್ಷವಾಗಿತು . ಆದರೆ ಬಿಜೆಪಿ ಅತಿ ಕಡಿಮೆ ಅವಧಿಯಲ್ಲಿ ಕಮ್ಯೂನಿಸ್ಟ್ ಪಾರ್ಟಿಯನ್ನ ಹಿಂದಿಕ್ಕಿ ಮುನ್ನುಗಿತ್ತು. ಇದು ಭಾರತೀಯ ರಾಜಕೀಯ ಪಕ್ಷಗಳ ಇತಿಹಾಸದಲ್ಲಿ ಅಭೂತಪೂರ್ವ
ಮೈಲುಗಲ್ಲು. ತಂತ್ರಜ್ಞಾನ ಮತು ಅಂಕಿ – ಸಂಖ್ಯೆಗೆ ಹೆಚ್ಚು ಒತ್ತುಕೊಡುವ ಶಾ, ಅಧಿಕಾರ ವಹಿಸಿಕೊಂಡ ನಂತರ ಎರಡು ಪ್ರಮುಖ ತಿದ್ದುಪಡಿಯನ್ನು ಮಾಡಿದರು.
ತಂತ್ರಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಂಡು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಮತು ಮೊಬೈಲ್ ಆಧಾರಿತ
ಸದಸ್ಯತ್ವ ನೋಂದಣಿ. ಬಿಜೆಪಿ ಜನಸಂಘದಿಂದ ಅನುವಂಶಿಕವಾಗಿ ಪಡೆದ ಒಂದು ಪರಂಪರೆಯೆಂದರೆ; ತನ್ನ ಮತದಾರರನ್ನು ಪಕ್ಷದ ಸದಸ್ಯರನ್ನಾಗಿಸುವುದು. ಈ ವಾದವನ್ನು ಮತ್ತು ಪರಿವರ್ತನೆಯನ್ನು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರು ಪ್ರತಿಪಾದಿಸುತ್ತಿದ್ದರು. ಅವರು ಹೇಳುತ್ತಿದ್ದದ್ದು; ಇಂದಿನ ಎದುರಾಳಿಗಳು ನಮ್ಮ ನಾಳಿನ ಮತದಾರನಾಗಿರಬೇಕು, ನಾಳೆಯ
ಮತದಾರರು ಮುಂದಿನ ನಮ್ಮ ಸದಸ್ಯರಾಗಿರಬೇಕು.
ಆ ಸದಸ್ಯರು ಮುಂದಿನ ದಿನಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ರೂಪಾಂತರಗೊಳ್ಳಬೇಕು. ನಾನಾಜಿ ದೇಶಮುಖ್‌ರ ಗರಡಿಯಲ್ಲಿ ಪಳಗಿದ ಅಮಿತ್ ಶಾ ಉಪಾಧ್ಯಾಯರು ಪ್ರತಿಪಾದಿಸಿದ ನಿಯಮವನ್ನೇ ನಂಬಿದರು. ಶಾ ಪ್ರಾಥಮಿಕವಾಗಿ ಪ್ರತಿರಾಜ್ಯದಲ್ಲಿರುವ ಸದಸ್ಯರ ಸಂಖ್ಯೆ ಮತು ಕಳೆದ ಬಾರಿಯ ಚುನಾವಣೆಯಲ್ಲಿ ಪಕ್ಷ ಪಡೆದ ಮತಗಳ ಅಂತರದಿಂದ ನಿರ್ಣಯ ಕೈಗೊಳ್ಳತ್ತಿದ್ದರು.
ಪ್ರತಿರಾಜ್ಯದಲ್ಲೂ ಗಳಿಸಿದ ಮತಕ್ಕಿಂತ ಸದಸ್ಯರ ಸಂಖ್ಯೆ ಕಡಿಮೆ ಇರುವ ಮಾಹಿತಿ ಸವಾಲಾಗಿ ಎದುರಾಯಿತು. ಪ್ರತಿಯೊಬ್ಬ ಸಕ್ರಿಯ ಕಾರ್ಯಕರ್ತನಿಗೆ ಕನಿಷ್ಠ ನೂರು ಜನರನ್ನು ಸದಸ್ಯರನ್ನಾಗಿ ಮಾಡಲು ಸೂಚಿಸಿದರು. ಜತೆಗೆ ವರ್ಷದಲ್ಲಿ ೭ ದಿನ ಪಕ್ಷದ ಕೆಲಸಕ್ಕೆ ಮೀಸಲಿಡುವಂತೆ ಸೂಚಿಸಿದರು.
ಅಮಿತ್ ಶಾ ತಮ್ಮ ಪ್ರತಿಯೊಂದು ರಾಜಕೀಯ ತಂತ್ರಗಳನ್ನು ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ಹೆಣೆಯುತ್ತಾರೆ. ಎದುರಾಳಿಗಳು ಅದನ್ನು ರಾಜಕೀಯದ ಗಿಮಿಕ್ ಎಂದು ಕರೆಯುವುದುಂಟು. ಆದರೂ ಟೀಕೆಗಳ ಹೊರತಾಗಿ ಅಮಿತ್ ಶಾ ತನ್ನ
ತಂತ್ರಗಳು ಸರಿ ಇವೆಯೆಂದು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ. ಈ ಸದಸ್ಯತ್ವ ಅಭಿಯಾನ ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಿತು. ಪರಿಣಾಮ ಬಿಜೆಪಿ ತನ್ನ ಸಂಪ್ರದಾಯಿಕ ಮತವನ್ನು ತನ್ನಲ್ಲೇ ಉಳಿಸಿಕೊಂಡು, ಒಂದೊಂದೇ ರಾಜ್ಯವನ್ನು
ತನ್ನ ತಕ್ಕೆಗೆ ಹಾಕಿಕೊಳ್ಳಲು ಪ್ರಾರಂಭಿಸಿತ್ತು. ಮುಖ್ಯವಾಗಿ ೨೦೧೯ರ ನರೇಂದ್ರ ಮೋದಿಯವರ ಪ್ರಚಂಡ ಜಯಭೇರಿಯ ಯಶಸ್ಸಿನ ಒಳಗುಟ್ಟು ಇದಾಗಿತ್ತು.
ಸಂವಾದಕ್ಕೆ ಮತ್ತು ಪಕ್ಷಕ್ಕೆ ಆಧುನಿಕತೆಯ ಸ್ಪರ್ಶ ಭಾರತೀಯ ರಾಜಕೀಯ ಇತಿಹಾಸವನ್ನು ಅವಲೋಕಿಸಿದ್ದರೆ ಜನಪ್ರಿಯ ನಾಯಕರು ತಮ್ಮ ವಿಚಾರಧಾರೆಯನ್ನು ನಿರೂಪಿಸಲು ಸಂವಾದಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಕುರುಹು ಗಳಿವೆ. ಅಷ್ಟೇ ಏಕೆ, ಆಧುನಿಕ ಭಾರತದ ಶ್ರೇಷ್ಠ ಸಂವಹನಕಾರರಾಗಿದ್ದ ಮಹಾತ್ಮ ಗಾಂಧಿಜಿ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಸಂವಾದ ವನ್ನು ನಡೆಸಿರುವ ಉದಾಹರಣೆಗಳಿವೆ. ಇದೇ ತಂತ್ರವನ್ನು ಅಮಿತ್ ಶಾ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಕ್ರಿಯಾತ್ಮಕವಾಗಿ, ಕಾರ‍್ಯಕ್ರಮಗಳಿಗೆ ಆಧುನೀಕತೆಯ ಸ್ಪರ್ಶ ನೀಡಿ ಯಶಸ್ವಿಗೊಳಿಸಿದ್ದರು.
ದೇಶದಾದ್ಯಂತ ಸಾಮಾಜಿಕ ಸಲಹೆಗಾರರು ಮತ್ತು ಸುಧಾರಕರನ್ನು ಭೇಟಿ ಮಾಡಿ ಸಂವಾದಗಳು ಹೆಚು ಮುಕ್ತವಾಗಿ ಪಸರಿಸು ವಂತೆ ಮಾಡಿದ್ದು ಮತಗಳಾಗಿ ಪರಿವರ್ತನೆಯಾದವು. ೨೦೧೪ರಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಸಂವಾದ ಕಾರ‍್ಯಕ್ರಮ ಗಳನ್ನು ನಿಲ್ಲಿಸದೆ, ಸಹೋಗ್ ಎಂಬ ವಿಭಾಗದೊಂದಿಗೆ ನಿರಂತರವಾಗಿ ಮುಂದುವರಿಯುವಂತೆ ನೋಡಿಕೊಂಡರು. ಪ್ರತಿದಿನ ಕೇಂದ್ರದ ಒಬ್ಬ ಮಂತ್ರಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಜನರ ಸಮಸ್ಯೆಗೆ ಕಿವಿಕೊಟ್ಟು ಸಹಾಯ ಹಸ್ತ ಚಾಚುವಂತೆ ನಿರ್ದೇಶನ
ನೀಡಿದ್ದು ಇದೇ ಚಾಣಕ್ಷ.
ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿಯ ಭೀಷ್ಮ ಅಡ್ವಾಣಿ, ಸುಷ್ಮ ಸ್ವರಾಜ್, ಪ್ರಮೋದ್ ಮಹಾಜನ್ ಹೀಗೆ ಹಲವರು ಪ್ರಚಂಡ ಸಂವಹನಕಾರರು ಜತೆಗೆ ಸಂವಾದಕಾರರು ಬಿಜೆಪಿಯ ಆಸ್ತಿ. ಈ ಸಾಮರ್ಥ್ಯ ಕಾಂಗ್ರೆಸ್ ನಾಯಕರಲ್ಲಿ ತೀರಾ ಕಡಿಮೆ. ಪ್ರಧಾನಿ
ಅಭ್ಯರ್ಥಿ ರಾಹುಲ್ ಗಾಂಧಿಯಂತೂ ಸಂವಾದ ಕಾರ‍್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸ ಲಾಗದೇ ಮುಖಭಂಗ ಅನುಭವಿಸಿರುವ ಘಟನೆಗಳ ಬಗ್ಗೆ ಒಂದು ಪುಸ್ತಕ ಬರೆಯುವಷ್ಟು ಸರಕು ಲಭ್ಯವಿದೆ. ವಿರೋಧಿ ಬಣದ
ಋಣಾತ್ಮಕ ಅಂಶವನ್ನೇ ಬಂಡವಾಳ ಮಾಡಿಕೊಂಡು ಸಂಪ್ರದಾಯಿಕ ಸಂವಾದವನ್ನು ಅತ್ಯುತ್ತಮವಾಗಿ ಮರುಶೋಧಿಸಿ ತಂತ್ರವಾಗಿಸಿದ ಪೂರ್ಣ ಕ್ರೆಡಿಟ್ ಸಲ್ಲುವುದು ಅಮಿತ್ ಶಾ ಅವರಿಗೆ ಮಾತ್ರ.!
ಶಾ ಅಧಿಕಾರ ವಹಿಸಿಕೊಳ್ಳುವ ಮೊದಲು ಬಿಜೆಪಿಯಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮೋರ್ಚಾಗಳಿದ್ದವು. ಹಲವು ನಿಷ್ಕ್ರೀಯವಾಗಿದ್ದವು. ಶಾ ಬಿಜೆಪಿ ರಚನೆಯನ್ನು ಎರಡು ಭಾಗಗಳಾಗಿ ಮರುವಿನ್ಯಾಸಗೊಳಿಸಿ ದ್ದರು. ಒಂದು ವಿಭಾಗಗಳು ಮತ್ತು ಎರಡು ಯೋಜನೆಗಳು. ಸಕ್ರಿಯವಾಗಿರುವ ಯೋಜನೆಗಳಿಗೆ ಬೆನ್ನೆಲುಬಾಗಿ ವಿಭಾಗಗಳನ್ನು
ರಚಿಸಲಾಯಿತು. ಸದ್ಯ ೧೯ ವಿಭಾಗಗಳು ಮತು ೧೦ ಯೋಜನೆಗಳು ಸಕ್ರಿಯವಾಗಿದೆ.
ವಿಭಾಗಗಳ ವಿನ್ಯಾಸದಲ್ಲೂ ಕಾರ್ಪೊರೇಟ್ ಪರಿಕಲ್ಪನೆಯನ್ನು ಅನುಸರಿಸಿದ್ದು ವಿಶೇಷ. ಹಳೆಯ ಬೇರಿನ ಸಾರಗಳನ್ನೇ ಉಳಿಸಿ ಕೊಂಡು ಪಕ್ಷವನ್ನು ಆಧುನೀಕರಿಸಿದ್ದು ಚುನಾವಣಾ ಫಲಿತಾಂಶಗಳ ಮೇಲೆ ಗುಣಾತ್ಮಕ ಪರಿಣಾಮಗಳನ್ನು ಬೀರಲು ಪ್ರಾರಂಭಿಸಿ ದ್ದವು. ದೇವೇಗೌಡರ ರೀತಿ ರಾಜಕೀಯ ಅಮಿತ್ ಶಾಗೆ ಪೂರ್ಣಾವಧಿಯ ಕಸುಬು. ಇತರ ಪಕ್ಷಗಳ ನಾಯಕರಂತೆ ಚುನಾವಣಾ ಸಮಯದಲ್ಲಿ ಮಾತ್ರ ಸಕ್ರಿಯವಾಗಿ, ಫಲಿತಾಂಶದ ನಂತರ ಮಾಯವಾಗುವುದು ಅವರಿಗೆ ಸಿದ್ಧಿಸಿಲ್ಲ. ಕಾಂಗ್ರೆಸ್ ಯುವರಾಜ ಪ್ರತಿ ಚುನಾವಣೆಯಲ್ಲೂ ಪ್ರಚಾರದ ನಂತರ ಕಣ್ಮರೆಯಾಗಿ, ಮತ್ತೆ ಪ್ರತ್ಯಕ್ಷವಾಗುವುದು ಮುಂದಿನ ಚುನಾವಣೆಯಲ್ಲೇ. ಇದಕ್ಕೇ ವ್ಯತಿರಿಕ್ತ ಗುಣ ಅಮಿತ್ ಶಾ ರಲ್ಲಿದೆ.
ಚುನಾವಣೆಯ ಫಲಿತಾಂಶಗಳು ಪಕ್ಷಕ್ಕೆ ಅನುಕೂಲವಾಗಲಿ ಅಥವಾ ಅನಾನುಕೂಲವಾಗಲಿ ಸ್ಥಳೀಯ ಕಾರ‍್ಯಕರ್ತರೊಂದಿಗೆ
ನಿರಂತರ ಸಂಪರ್ಕದಲ್ಲಿರುತ್ತಾರೆ. ಈ ವಿಭಿನ್ನ ನಡೆಯಿಂದ ಬೇರುಮಟ್ಟದ ಕಾರ‍್ಯಕರ್ತರು ಸಕ್ರಿಯ ವಾಗಿರಲು ಸಹಾಯವಾಗಿದೆ. ಈ ಚಲನಶೀಲತೆ ಯಿಂದಲೇ ಚುನಾವಣೆಗಳು ಯಾವ ಸಮಯದಲ್ಲೇ ಘೋಷಣೆಯಾಗಲಿ ಅಖಾಡಕ್ಕೆ ಧುಮುಕಿ ತಂತ್ರಗಳನ್ನು ಹೆಣೆದು ಎದುರಾಳಿಗಳನ್ನು ಚಿತ್ತು ಮಾಡಿ ಅವರ ತೊಡೆ ನಡುಗಿಸುವುದರಲ್ಲಿ ನೀಸ್ಸಿಮ. ಇವರ ಕಾರ‍್ಯತಂತ್ರಗಳು ಒಂದು ರೀತಿಯ
ready to eat ಆಹಾರದವಿದ್ದಂತೆ.
ಮುಂದೆ ಉತ್ತರಪ್ರದೇಶ, ಬಿಹಾರ ಇತರ ರಾಜ್ಯಗಳ ಚುನಾವಣೆಗಳಲ್ಲಿ ಈ ಚಾಣಕ್ಯ ಯಾವ ಅಸೆ ಪ್ರಯೋಗಿಸುತ್ತಾರೋ ಕಾದು ನೋಡಬೇಕು..!