Thursday, 12th December 2024

ಖಾಸಗಿ ಶಾಲೆಗಳಿಗೆ ಅಕ್ಷರ ದಾಸೋಹ ಬೇಕೆ?

ಅಭಿಪ್ರಾಯ

ಪ್ರಹ್ಲಾದ್ ವಾ ಪತ್ತಾರ, ಕಲಬುರಗಿ 

ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳಿಗೂ ಅಕ್ಷರ ದಾಸೋಹ ಯೋಜನೆ ವಿಸ್ತರಿಸುವ ಪ್ರಸ್ತಾಾಪ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೇಳಿ ಬಂದಿದೆ. ಇದು ವಿಷಾದದ ಸಂಗತಿಯಾಗಿದೆ. ಈಗಾಗಲೇ ಸರಕಾರಿ ಶಾಲೆಗಳು ಮಕ್ಕಳಿಲ್ಲದೇ ಬಣಗುಡುತ್ತಿಿವೆ. ಸರಕಾರ ಏನೆಲ್ಲ ಸ್ಕೀಂ ತಂದರೂ, ಶಾಲೆಗಳ ಸುಧಾರಣೆ ಮಾಡಿದರೂ, ಮೂಲಭೂತ ಸೌಲಭ್ಯ ಹೆಚ್ಚಿಿಸಿದರೂ, ಜಪ್ಪಯ್ಯ ಅಂದರು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಮನಸ್ಸು ಮಾಡುತ್ತಿಿಲ್ಲ. ದಿನೇ ದಿನೇ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆೆ ಕುಸಿಯುತ್ತಿಿದೆ. ಪರಿಸ್ಥಿಿತಿ ಹೀಗಿರುವಾಗ, ಖಾಸಗಿ ಶಾಲೆಗಳಿಗೆ ಈ ಯೋಜನೆ ವಿಸ್ತರಿಸಿದರೆ, ಇರುವ ಸರಕಾರಿ ಶಾಲೆಗಳಲ್ಲಿ ಇನ್ನಷ್ಟು ಬಾಗಿಲು ಮುಚ್ಚಬೇಕಾಗುವುದು. ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳ ಪೋಷಕರು, ಸಾಮಾನ್ಯವಾಗಿ ಆರ್ಥಿಕ ಸ್ಥಿಿತಿವಂತರು. ತಮ್ಮ ಮಕ್ಕಳ ಬಗ್ಗೆೆ ಕಾಳಜಿ ಉಳ್ಳವರು. ಓದು, ಬರಹ ಬಲ್ಲವರು. ನಿರ್ದಿಷ್ಟ ಆದಾಯ ಹೊಂದಿದವರು. ಹಾಗೆಯೇ ನಮ್ಮ ಮಕ್ಕಳು ವೈಯಕ್ತಿಿಕವಾಗಿ ಅಭಿವೃದ್ಧಿಿಯಾಗಬೇಕು ಬೆಳೆಯಬೇಕು ಎನ್ನುವ ಆಕಾಂಕ್ಷೆ ಹೊಂದಿದವರು. ಊರಿನಲ್ಲೇ ಸರಕಾರಿ ಶಾಲೆ ಇದ್ದಾಗ್ಯೂ ವೈಯಕ್ತಿಿಕ ಪ್ರತಿಷ್ಠೆೆ ಕೆಲವು ತಪ್ಪುು ಕಲ್ಪನೆ, ದೂರದೃಷ್ಟಿಿಯ, ಆಲೋಚನೆಯಿಂದ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿರುತ್ತಾಾರೆ.

ಶಿಕ್ಷಣ ಇಲಾಖೆಯಿಂದ ಕನ್ನಡ ಮಾಧ್ಯಮ ಬೋಧಿಸುತ್ತೇವೆ ಎಂದು ಅನುಮತಿ ಪಡೆದ ಖಾಸಗಿ ಶಾಲೆಗಳು, ಆಂಗ್ಲ ಮಾಧ್ಯಮದಲ್ಲಿ ಕಲಿಸುತ್ತಿಿರುವ ಬಗ್ಗೆೆ ಸಾಕಷ್ಟು ಉದಾಹರಣೆಗಳು ರಾಜ್ಯದಲ್ಲಿವೆ. ಯಾವ ಶಾಲೆ ಹೇಗೆ? ಏನು? ಎತ್ತ? ಎಂಬುದು, ಎಷ್ಟು ಶಾಲೆಗಳು ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿಿವೆ ಎನ್ನುವುದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿದಿರುವ ಸಂಗತಿಯೇ ಆಗಿದೆ. ಆದರೆ, ರಾಜಕೀಯ ಒತ್ತಡ, ಪ್ರಭಾವದಿಂದಾಗಿ ಅಧಿಕಾರಿಗಳು ಈ ಕುರಿತು ತಲೆ ಕೆಡಿಸಿಕೊಳ್ಳಲಾರರು.

ಖಾಸಗಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆ ನೀಡಿದರೆ, ಭ್ರಷ್ಟಾಾಚಾರ ಹೆಚ್ಚಾಾಗುವುದು. ಬೋಗಸ್ ಕನ್ನಡ ಶಾಲೆಗಳು ಯೋಜನೆಯ ಲಾಭ ಪಡಿಯುತ್ತವೆ. ಸ್ವ-ಇಚ್ಛೆೆಯಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿರುವುದರಿಂದ ಇವರಿಗೆ ಸರಕಾರದ ಸೌಲಭ್ಯ ಏಕೆ ನೀಡಬೇಕು? ಈ ಪ್ರಸ್ತಾಾವನೆ ಜಾರಿಗೆ ಬಂದಲ್ಲಿ, ಸರಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆೆ ಇನ್ನಷ್ಟು ಕಡಿಮೆಯಾಗುವುದು ನಿಶ್ಚಿಿತ. ಯೋಜನೆ ನೀಡುವ ಮೊದಲು ಇಲಾಖೆಯು ಕೂಲಂಕುಷವಾಗಿ ಯೋಚಿಸಿ ನಿರ್ಧಾರ ತಗೆದುಕೊಳ್ಳಬೇಕು.
ಊರಿನ ಅಕ್ಕಪಕ್ಕದಲ್ಲೇ ಸರಕಾರಿ ಶಾಲೆ ಇದ್ದಾಗ್ಯೂ, ಸ್ವ-ಇಚ್ಛೆೆಯಿಂದ ಪೋಷಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗೆ ಕಳುಹಿಸಿರುವ ಕಾರಣ, ಖಾಸಗಿ ಶಾಲೆಯ ಮಕ್ಕಳಿಗೆ ಸರಕಾರದ ಯಾವ ಸೌಲಭ್ಯಗಳೂ ನೀಡಬಾರದು. ಇಂತ ಅದೊಂದು ಬೆಳವಣಿಗೆ ಜಾರಿಗೆ ಬಂದರೆ, ಸರಕಾರಿ ಸೌಲಭ್ಯಗಳಿಗಾಗಿ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಾಾರೆ. ಇದರಿಂದ ಸರಕಾರಿ ಶಾಲೆಗಳ ಏಳಿಗೆ ಸಾಧ್ಯವಾಗುತ್ತದೆ.