ವಿಶ್ಲೇಷಣೆ
ಶಶಿಕುಮಾರ್ ಕೆ.
shashikumark1995@gmail.com
ಅಮೆರಿಕವು ದಶಕಗಳಷ್ಟು ಹಳೆಯ ರಾಸಾಯನಿಕ ಅಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ಘೋಷಿಸಿದ್ದಾರೆ. ಮೂರು ದಶಕಗಳ ಹಳೆಯ ರಾಸಾಯನಿಕ ಅಸಗಳ ಸಮಾವೇಶದ ಬದ್ಧತೆಯಂತೆ ಅಮೆರಿಕ ಈ ನಿರ್ಧಾರ ತೆಗೆದುಕೊಂಡಿದೆ.
ಅಮೆರಿಕ ಸೇನೆ ಹೊಂದಿದ್ದ ಸುಮಾರು ೫೦೦ ಟನ್ ಮಾರಣಾಂತಿಕ ರಾಸಾಯನಿಕ ಅಸಗಳ ದಾಸ್ತಾನನ್ನು ನಾಶಪಡಿಸಿದ ಬಳಿಕ ಜೋಬೈಡನ್ ಈ ಘೋಷಣೆ ಮಾಡಿದ್ದಾರೆ. ಇದು ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ, ಕೊನೆಯದಾಗಿ ಅಮೆರಿಕ ಸಹಿ ಹಾಕಿತ್ತು ಆ ಕಾರಣ, ರಾಸಾಯನಿಕ ಶಸ್ತ್ರಾಸ್ತ್ರಗಳ ದಾಸ್ತಾನ ನ್ನು ನಾಶಪಡಿಸಿದೆ. ಸುಮಾರು ೭೦,೦೦೦ ಗಳಷ್ಟು ಅಪಾಯಕಾರಿ ರಾಸಾ ಯನಿಕವನ್ನು ಒ.ಪಿ.ಸಿ.ಡಬ್ಲ್ಯೂ ಮೇಲುಸ್ತುವಾರಿಯಲ್ಲಿ ನಾಶಪಡಿಸಲಾಗಿದೆ. ೧೯೯೦ರ ವರದಿಯಂತೆ ಅಮೆರಿಕ ೨೮,೬೦೦ ಕೆಮಿಕಲ್‌ನ್ನು ಹೊಂದಿತ್ತು.
ಇತ್ತೀಚೆಗೆ ಇರಾನ್‌ನಲ್ಲಿಯೂ ರಾಸಾಯನಿಕ ಅಸ್ತ್ರಗಳ ಪ್ರಯೋಗ ನಡೆದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಸ್ತ್ರಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿ ಸಾವನ್ನಪ್ಪಿದ ಮಹ್ಸಾ ಅಮಿನಿ ಪ್ರಕರಣ ಇರಾನ್ ನಾದ್ಯಂತ ೫೦೦೦ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ತಂದಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಮಹ್ಸಾ ಅಮಿನಿ ಸಾವಿನ ಬಳಿಕ ದೇಶದಾದ್ಯಂತ ಹಿಜಾಬ್ ವಿರೋಧಿ ಪ್ರತಿಭಟನೆ ಆರಂಭವಾಗಿ ಮಹಿಳೆಯರು ಬಹಿರಂಗ ವಾಗಿಯೇ ಹಿಜಾಬ, ಬುರ್ಖಾ ಸುಟ್ಟುಹಾಕಿ ಕಟ್ಟರ್ ಇಸ್ಲಾ ಮಿಕ್ ಆಡಳಿತಕ್ಕೆ ಸವಾಲು ಹಾಕಿದ್ದರು. ಅದರ ಬೆನ್ನ ಪ್ರತಿಭಟನೆಯ ತಾಣವಾಗಿರುವ ಶಾಲೆ ಮತ್ತು ಇಂತಹ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳನ್ನು ಮಟ್ಟ ಹಾಕುವ ಸಲುವಾಗಿ ಕನಿಷ್ಠ ೨೩೦ ಶಾಲೆಗಳ ಮೇಲೆ ವಿಷಾನೀಲ ದಾಳಿ ನಡೆಸಲಾಗಿದೆ ಎಂದು ಈ ಕುರಿತು ತನಿಖೆ ನಡೆಸಿದ ಸಂಸದೀಯ ಸತ್ಯಶೋಧನಾ ಸಮಿತಿ ಸದಸ್ಯ ಮೊಹಮ್ಮದ್ ಹಸನ್ ಅಸಫಾರಿ ಬಹಿರಂಗಪಡಿಸಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಸಿರಿಯಾದಲ್ಲೂ ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರಗಳ ಪ್ರಯೋಗ ನಡೆದಿದೆ. ಸೆಪ್ಟೆಂಬರ್ ೨೧, ೨೦೧೩ರ ರಾತ್ರಿ ಸಿರಿಯಾ ರಾಜಧಾನಿ ಢಮಾಸ್ಕಸ್ ನಗರದ ಮೇಲೆ ಸಾರಿನ್ (ಬಣ್ಣ ಮತ್ತು ಪರಿಮಳ ರಹಿತವಾದ ದ್ರವ ರೂಪದ ರಾಸಾಯನಿಕ. ಇದು ನರಗಳ ಕಾರ್ಯದ ಮೇಲೆ ಪ್ರಭಾವ ಬೀರುತ್ತದೆ) ಎಂಬ ವಿಷಾನಿಲವನ್ನು ಬಿಡಲಾಯಿತು. ಇದರ ಪರಿಣಾಮವಾಗಿ ಆ ವಿಷಾನಿಲ ಸೇವಿಸಿದ ಸಾವಿರಾರು ಜನರು ಒಂದೇ ರಾತ್ರಿಯೇ ಅಸುನೀಗಿದ್ದರು.
ಇದಕ್ಕೂ ಮುಂಚೆ ಏಪ್ರಿಲ್ ೨೫, ೨೦೧೩ರಂದು ಇಂತಹ ವಿಷಾನೀಲವನ್ನು ಸಿಂಪಡಿಸಲಾಗಿತ್ತು ಅಂದು ೧೫೦ ಮಂದಿ ಅಸುನೀಗಿ ದ್ದರು. ಆದರೆ ಆ ಘಟನೆ ಬೆಳಕಿಗೆ ಬರಲಿಲ್ಲ. ಈ ವಿಷಾನೀಲವನ್ನು ಬಿಟ್ಟವರು ಸಿರಿಯಾ ದೇಶದ ಅಧ್ಯಕ್ಷರೇ ಆದ ಬಶರ್ ಅಲ್ ಅಸಾದ್ ರವರು. ಇದಾದ ನಂತರ ೨೦೧೭ರ ಏಪ್ರಿಲ್‌ನಲ್ಲಿ ಸಿರಿಯಾದ ಬಂಡುಕೋರರ ಪ್ರಾಬಲ್ಯದ ಇದ್ಲಿಬ್ ಪ್ರಾಂತ್ಯದಲ್ಲಿ ನಾಗರಿಕರ ಮೇಲೆ ಅಲ್ಲಿನ ಸರಕಾರ ರಾಸಾಯನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ನೂರು ಜನರು ಮೃತಪಟ್ಟಿದ್ದರು.
Read E-Paper click here
ಈ ದಾಳಿಯಲ್ಲಿ ಸಾರಿನ್ ಗ್ಯಾಸ್ ಬಳಸಿರುವುದು ತನಿಖೆಯಲ್ಲಿ ಸ್ಪಷ್ಟವಾಗಿತ್ತು. ರಾಸಾಯನಿಕ ಅಸ್ತ್ರಗಳ ಪ್ರಯೋಗವನ್ನು ಮಾಡುವುದರಲ್ಲಿ ಸಿರಿಯಾ ದೇಶ ಸಹ ಕಳ್ಳಾಟ ಮಾಡುತ್ತಿದೆ. ಅಮೆರಿಕ ಮತ್ತು ತನ್ನ ಪರವಿರುವ ರಷ್ಯಾ ಮಧ್ಯಸ್ಥಿಕೆಯಲ್ಲಿ ಎಲ್ಲಾ ರಾಸಾಯನಿಕ ರಾಷ್ಟ್ರಗಳನ್ನು ನಾಶಪಡಿಸಲು ಬಶರ್ ಅಲ್ ಅಸಾದ್ ನೇತೃತ್ವದ ಸಿರಿಯಾ ಸರಕಾರ ಒಪ್ಪಿಕೊಂಡಿತ್ತು. ರಾಸಾಯನಿಕ ಅಸ್ತ್ರಗಳ ನಿಷೇಧ ಸಂಸ್ಥೆಗೆ(ಒ.ಪಿ.ಸಿ.ಡಬ್ಲ್ಯೂ) ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈ ಕ್ರಮವೂ ಅನಿವಾರ್ಯ ವಾಗಿತ್ತು. ತನ್ನ ಬಳಿ ೧೯ ಟನ್‌ಗಳಷ್ಟು ರಾಸಾಯನಿಕ ಅಸಗಳು ಮತ್ತು ಕೈಗಾರಿಕಾ ರಾಸಾಯನಿಕಗಳ ಸಂಗ್ರಹವಿರುವುದಾಗಿ ಸಿರಿಯಾ ಘೋಷಿಸಿಕೊಂಡಿತ್ತು. ಈ ರಾಸಾಯನಿಕಗಳನ್ನು ಬೇರೆ ದೇಶಕ್ಕೆ ಕೊಂಡೊಯ್ದು ನಾಶಪಡಿಸುವುದಾಗಿಯೂ, ಇದಕ್ಕೆ ೩೦ ದೇಶಗಳ ನೆರವು ಪಡೆದುಕೊಳ್ಳುವುದಾಗಿಯೂ ತಿಳಿಸಿತ್ತು. ೨೦೧೫ರಲ್ಲಿ ಡಮಾಸ್ಕಸ್‌ನಲ್ಲಿರುವ ಅಸ್ತ್ರ ಸಂಗ್ರಹಾಗಾರಕ್ಕೆ ಅಂತಾ ರಾಷ್ಟ್ರೀಯ ತಜ್ಞರ ತಂಡ ಭೇಟಿ ನೀಡಿತ್ತು. ಆದರೆ ಇವರನ್ನು ಸುಮಾರು ಒಂದು ಗಂಟೆಯ ಕಾಲ ಗೇಟಿನ ಬಳಿಯೇ ಕಾಯುವಂತೆ ಮಾಡಲಾಗಿತ್ತು.
ಒಳಗೆ ತೆರಳಿದ ತಜ್ಞರಿಗೆ ಕಂಡಿದ್ದು ಖಾಲಿಯಾಗಿದ್ದ ಸಂಗ್ರಹಾಗಾರ. ತನ್ನ ಬಳಿ ಇದ್ದ ರಾಸಾಯನಿಕ ಅಸ್ತ್ರಗಳನ್ನು ಅದಾಗಲೇ ನಾಶಪಡಿಸಲಾಗಿದೆ ಎಂದು ಸಿರಿಯಾ ಸಮರ್ಥಿಸಿಕೊಂಡಿತ್ತು. ಆದರೆ ತಜ್ಞರಿಗೆ ಹೀಗೆ ನಾಶಪಡಿಸಿದ ಕುರುಹು ಕೂಡ ಸಿಕ್ಕಿರಲಿಲ್ಲ. ಆದರೆ ಅನುಮಾನಕ್ಕೆ ಕಾರಣವಾಗಿದ್ದು ತಜ್ಞರನ್ನು ಗಂಟೆಯ ಕಾಲ ಗೇಟಿನ ಬಳಿ ಕಾಯಿಸಿದ್ದು. ಇದಕ್ಕೆ ಸಿರಿಯಾ ನೀಡುವ ಸಮರ್ಥನೆ ಭದ್ರತಾ ತಪಾಸಣೆ ಎಂಬುದಾಗಿದೆ. ಆದರೆ ಆ ಈ ಸಮಯದಲ್ಲಿ ಅಲ್ಲಿದ್ದ ಕುರುಹುಗಳನ್ನು ನಾಶಪಡಿಸಿರುವ ಅನು ಮಾನವಿದೆ. ಅಲ್ಲದೆ ಅಂತರರಾಷ್ಟ್ರೀಯ ತಂಡದಲ್ಲಿದ್ದ ತಜ್ಞರು ಅಸಾದ್ ಪರವಾಗಿ ನಿಂತಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ ರಾಸಾಯನಿಕ ಅನಿಲಗಳ ಬಳಕೆ ಹೊಸದೇನಲ್ಲ.
ಪ್ರಥಮ ವಿಶ್ವ ಯುದ್ಧದ ಸಂದರ್ಭದಲ್ಲಿ ಜರ್ಮನಿ ಕ್ಲೋರಿನ್ ಗ್ಯಾಸ್ ನ ಬಳಕೆ ಮಾಡಿತ್ತು. ನಂತರದ ಒಂದೇ ವರ್ಷದ ಅವಧಿ ಯಲ್ಲಿ ರಾಸಾಯನಿಕ ಅಸ್ತ್ರಗಳು ವ್ಯಾಪಕವಾಗಿ ಬಳಕೆಗೆ ಬಂದವು. ಅಶ್ರುವಾಯು, ಮಸ್ಟರ್ಡ್ ಗ್ಯಾಸ್, ಕ್ಲೋರಿನ್ ಗ್ಯಾಸ್ ಹೆಚ್ಚಾಗಿ ಬಳಕೆಯಾದವು. ಯುದ್ಧದ ಸಂದರ್ಭದಲ್ಲಿ ಇವುಗಳ ಬಳಕೆಯಿಂದಾದ ಸಮಸ್ಯೆಗಳು ಕಡಿಮೆ. ಆದರೆ ಸೈನಿಕರಿಗೆ ಚಿಕಿತ್ಸೆ ನೀಡಿದ ವೈದ್ಯರು ಇವುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸೈನಿಕರು ಸಾಂಪ್ರದಾಯಿಕ ಅಸ್ತ್ರಕ್ಕಿಂತ ರಾಸಾಯನಿಕ ಅನಿಲಗಳ ದಾಳಿಗೆ ಹೆಚ್ಚು ಭಯಪಡುತ್ತಾರೆ.
ಇದು ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಸೈನಿಕರಲ್ಲಿ ಚರ್ಮದ ಉಸಿರು ಗಟ್ಟಿಸು ವಿಕೆ, ಉಸಿರಾಟದ ಪ್ರಕ್ರಿಯೆಗೆ ಶಾಶ್ವತ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದ್ದರು. ಹೀಗಾಗಿ ರಾಸಾಯನಿಕ ಅನಿಲಗಳ ಅಸ್ತ್ರದ ಬಳಕೆಗೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಶತ್ರು ರಾಷ್ಟ್ರ ಬಳಕೆ ಮಾಡಿದರೆ ಮಾತ್ರ ತಾನು ರಾಸಾಯನಿಕ ಅಸ್ತ್ರ ಬಳಸುವುದಾಗಿ ೧೯೪೩ರಲ್ಲಿ ಅಮೆರಿಕ ಹೇಳಿತ್ತು. ನಂತರ ಇಂತಹ ವಿಷಾನೀಲದ ಪ್ರಯೋಗಕ್ಕೆ ಕೈ ಹಾಕಿದ್ದು ಹಿಟ್ಲರ್. ಹಿಟ್ಲರ್‌ನು ೧೯೩೯ರಲ್ಲಿ ತನ್ನ ವಿರೋಧೀಗಳ ಮೇಲೆ ವಿಷಾನೀಲವನ್ನು ಪ್ರಯೋಗಿಸಿದ್ದನು.
ಆದರೆ ವಿಷಾನೀಲದ ದುಷ್ಪರಿಣಾಮ ಅನೇಕ ಜನರು ಅಂಗವಿಕಲರಾಗಿದ್ದರು ಮತ್ತು ಅನೇಕ ಜನರು ಮರಣ ಹೊಂದಿದ್ದರು.
ಭಾರತದಲ್ಲಿ ೧,೦೪೪ ಟನ್‌ಗಳಷ್ಟು ಮಸ್ಟರ್ಡ್ ಗ್ಯಾಸ್‌ನ ಕಚ್ಚಾ ವಸ್ತುಗಳಿವೆ ಎಂದು ೧೯೯೭ರಲ್ಲಿ ಘೋಷಿಸಲಾಗಿತ್ತು. ೨೦೦೯ ರಲ್ಲಿ ಇದನ್ನು ನಾಶಪಡಿಸುವ ಕಾರ್ಯ ಪೂರ್ಣಗೊಂಡಿತ್ತು. ಈ ರಾಸಾಯನಿಕ ಅಸ್ತ್ರಗಳ ಪ್ರಯೋಗವನ್ನು ನಿಲ್ಲಿಸಲು ಸುಮಾರು ೨೦ ವರ್ಷಗಳ ಮಾತುಕತೆಯ ಫಲವಾಗಿ ಕೊನೆಗೂ ಏಪ್ರಿಲ್ ೨೯,೧೯೯೭ರಂದು ಅಮೆರಿಕದ ದೃಢೀಕರಣ ಸಹಿಯೊಂದಿಗೆ ರಾಸಾ ಯನಿಕ ಅಸ್ತ್ರಗಳ ನಿಷೇಧ ಒಪ್ಪಂದ ಜಾರಿಗೆ ಬಂದಿತು.
ಈವರೆಗೂ ವಿಶ್ವದ ೧೬೪ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಇದಕ್ಕೂ ಮುನ್ನ ೧೯೭೨ರಲ್ಲಿ ಅಮೆರಿಕ ಮತ್ತು ರಷ್ಯಾ ದೇಶಗಳು ನಿಶಸ್ತೀಕರಣದ ಬಗ್ಗೆ ಮಾತುಕತೆ ನಡೆಸಿದ್ದವು. ಅದರ ಉದ್ದೇಶ ಆಂಟಿ ಬ್ಯಾಲೆಸ್ಟಿಕ್ ಮಿಸೈಲ್ ಟ್ರೀಟಿ ಪ್ರಸ್ತಾವನೆ ಆಗಿತ್ತು. ಆದರೆ ಅಂತ್ಯದಲ್ಲಿ ರಷ್ಯಾ ಆ ಸಲಹೆಯನ್ನು ತಿರಸ್ಕರಿಸಿತು. ೧೯೭೨ರಲ್ಲಿ ಜೈವಿಕಾಸಗಳು ಮತ್ತು ರಾಸಾಯನಿಕ ಅಸ್ತ್ರಗಳ (ಬ್ಯಾಕ್ಟೀರಿಯೋಲಾಜಿಕಲ್ ಅಂಡ್ ಕೆಮಿಕಲ್ ವೆಪ) ಉತ್ಪಾದನೆ ನಿಷೇಧಿಸುವ ಒಪ್ಪಂದ ಏರ್ಪಟ್ಟಿತು.
ರಾಸಾಯನಿಕ ದಾಳಿಗಳಲ್ಲಿ ಬಳಸುವ ಅನಿಲಗಳು ಯಾವುವೆಂದರೆ
೧. ಕ್ಲೋರಿನ್ ಗ್ಯಾಸ್:
ಹಸಿರು, ಹಳದಿ ಬಣ್ಣದ ಅನಿಲ ಇದಾಗಿದೆ. ಕಣ್ಣು, ಚರ್ಮದಲ್ಲಿ ಕಿರಿಕಿರಿ ಉಂಟುಮಾಡುತ್ತದೆ. ಶ್ವಾಸಕೋಶಕ್ಕೆ ಶಾಶ್ವತ ಹಾನಿ ಉಂಟು ಮಾಡುವುದು, ಉಸಿರಿನೊಂದಿಗೆ ದೀರ್ಘವಾಗಿ ಒಳಕ್ಕೆಳೆದುಕೊಂಡರೆ ಉಸಿರುಗಟ್ಟಿಸಿ ಕೊಲ್ಲಬಹುದು. ಮೊದಲ ವಿಶ್ವ ಸಮರದಲ್ಲಿ ಜರ್ಮನ್ನರು ಈ ಅನಿಲವನ್ನು ಬಳಸಿದ್ದರು.
೨. ಏಜೆಂಟ್ ಆರೆಂಜ್: ಸಸ್ಯ ನಾಶಕಗಳ ಈ ಮಿಶ್ರಣವು ತೀವ್ರ ವಿಷಕಾರಿ ನಂಜನ್ನು ಹೊಂದಿದೆ. ಚರ್ಮ, ಶ್ವಾಸಕೋಶ ಮತ್ತಿತರ ಭಾಗಗಳಲ್ಲಿ ಉರಿ ಉಂಟು ಮಾಡುವ ಇದನ್ನು ವಿಯೆಟ್ನಾಮ್ ಸಮರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿತ್ತು.
೩. ಪೋಸ್ಗೇನ್ ಗ್ಯಾಸ್: ಬಣ್ಣ ರಹಿತವಾದ ಈ ಅನಿಲ ಕ್ಲೋರಿನ್ ಗ್ಯಾಸ್‌ಗಿಂತ ೬ ಪಟ್ಟು ಪ್ರಬಲ. ಶ್ವಾಸಕೋಶದಲ್ಲಿ ರಕ್ತ, ಗಾಳಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ ಉಸಿರು ಕಟ್ಟಿ ಸಾಯುವಂತೆ ಮಾಡುತ್ತದೆ. ಮೊದಲ ವಿಶ್ವ ಸಮರದಲ್ಲಿ ಇದನ್ನು ಬಳಸಲಾಗಿತ್ತು. ಮೊದಲನೇ ವಿಶ್ವ ಸಮರದ ರಾಸಾಯನಿಕ ಸಮರದಲ್ಲಿ ಶೇ.೬೦ಕ್ಕೂ ಹೆಚ್ಚಿನ ಸಾವು ಈ ಅನಿಲದಿಂದಲೇ ಸಂಭವಿಸಿತ್ತು.
೪. ಸರೀನ್: ಸಿರಿಯಾ ಸಮರದಲ್ಲಿ ಕಾಣಿಸಿಕೊಂಡ ಸರೀನ್ ಗ್ಯಾಸ್ ಅತ್ಯಂತ ವಿಷಕಾರಿ ಅನಿಲ. ಉಸಿರುಗಟ್ಟಿಸುವುದರ ಜೊತೆಗೆ
ಹೃದಯ ವೈಫಲ್ಯಕ್ಕೂ ಈ ನರ್ವ್ ಗ್ಯಾಸ್ ಕಾರಣವಾಗುತ್ತದೆ. ಜರ್ಮನ್ ವಿಜ್ಞಾನಿಗಳಿಂದ ಸಂಶೋಧಿಸಲ್ಪಟ್ಟಿರುವ ಈ ಅನಿಲ
ಮೊದಲ ಹಾಗೂ ದ್ವಿತೀಯ ಜಾಗತಿಕ ಸಮರದಲ್ಲಿ ಬಳಕೆಯಾಗಿತ್ತು.
೫. ಮಸ್ಟರ್ಡ್ ಗ್ಯಾಸ್: ವಿಪರೀತ ವಾಸನೆಯ ಈ ಅನಿಲ ದೇಹದ ಬೊಕ್ಕೆಗಳನ್ನು ಉಂಟುಮಾಡುತ್ತದೆ ಮತ್ತು ತಾತ್ಕಾಲಿಕ
ಅಂಧತ್ವವನ್ನು ಉಂಟುಮಾಡುತ್ತದೆ. ಜಾಸ್ತಿ ಸೇವಿಸಿದರೆ ಸಾವು ಖಚಿತ. ಎರಡನೇ ಜಾಗತಿಕ ಸಮರ ಮತ್ತು ಗಲ್ಫ್ ಸಮರದಲ್ಲಿ ಈ ಅನಿಲವನ್ನು ಬಳಸಲಾಗಿತ್ತು.
ರಾಸಾಯನಿಕ ಅಸ್ತ್ರಗಳ ಪ್ರಯೋಗದ ಲಕ್ಷಣಗಳೆಂದರೆ ಈ ಅನಿಲ ಸ್ಪೋಟವು ಸಾವಿನಂತೆ ದೇಹದ ಮೇಲೆ ಯಾವುದೇ ಗಾಯ ವಾಗುವುದಿಲ್ಲ. ಉಸಿರು ಕಟ್ಟುವಿಕೆ, ಸ್ನಾಯು ಸೆಳೆತದ ನಡುಕ ವಿಷಾನಿಲ ಸೇವಿಸಿದಾಗ ಕಂಡುಬರುವ ಲಕ್ಷಣಗಳು.
ಜಗತ್ತಿಗೆ ಇಂದು ಅಣುಬಾಂಬ್ ಬೆದರಿಕೆಗಿಂತಲೂ ಅತ್ಯಂತ ಭಯಾನಕ ಬೆದರಿಕೆ ಎಂದರೆ ಅದು ಶತ್ರು ದೇಶಗಳ ರಾಸಾಯನಿಕ ಅಸ್ತ್ರಗಳ ಬಳಕೆ. ಇದೊಂದು ನೂತನ ಯುದ್ದ ತಂತ್ರವಾಗಿದ್ದು, ಹಲವಾರು ದೇಶಗಳು ಈಗಾಗಲೇ ಇಂತಹ ಭಯಾನಕ ತಂತ್ರ ವನ್ನು ಅನುಸರಿಸಿವೆ. ಇರಾನ್ ಮತ್ತು ಸಿರಿಯಾಗಳು ಸಹ ಇದೇ ಮಾರ್ಗದಲ್ಲಿ ಸಾಗಿದ್ದು ತನ್ನ ದೇಶದ ನಾಗರಿಕರ ಮೇಲೆಯೇ ವಿಷಾನಿಲ ಪ್ರಯೋಗಿ ಸಿದ್ದು ಅತ್ಯಂತ ದುರಂತ ಎನ್ನಬಹುದು. ಜಾಗತಿಕ ಸಮುದಾಯವು ಇಂತಹ ವಿನಾಶಕಾರಿ ಅಸ್ತ್ರಗಳನ್ನು ಪ್ರಯೋಗಿಸುವ ದೇಶ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.