Sunday, 24th November 2024

ಚೇತನ್ ಸ್ಟೇಟ್ಸ್’ಮೆಂಟ್

ತುಂಟರಗಾಳಿ

ನೆಟ್ ಪಿಕ್ಸ್

ನ್ಯಾಷನಲ್ ಹೈ ವೇನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ಡ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಖೇಮು ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಖೇಮುದೇನೂ ತಪ್ಪಿರಲಿಲ್ಲ. ಆಕೆಯೇ – ಆಗಿ ರಾಂಗ್ ಸೈಡಲ್ಲಿ ಬಂದು ಗುದ್ದಿದ್ದಳು. ಇಬ್ಬರ ಕಾರಿಗೂ ಡ್ಯಾಮೇಜ್ ಆಗಿತ್ತು. ಖೇಮು ಅವಳ ಬಳಿ ಎಲ್ಲದರ ಖರ್ಚು ವಸೂಲಿ ಮಾಡಬೇಕು ಎಂದುಕೊಂಡು ಬಂದ.

ಆದರೆ ಹುಡುಗಿಯನ್ನ ನೋಡಿ ಒಂದು ಕ್ಷಣ ಮೈಮರೆತ. ಅಷ್ಟು ಚೆನ್ನಾಗಿದ್ಳು ಹುಡುಗಿ. ಅವಳು ಸೀದಾ ಇವನ ಬಳಿ ಬಂದವಳೇ, ಕಾಮ್ ಆಗಿ ಮಾತಾಡಿ ದಳು. ‘ಇಲ್ನೋಡಿ, ಇಬ್ಬರ ಕಾರೂ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿದೆ. ಆದರೆ ನಮಗಿಬ್ಬರಿಗೂ ಏನೂ ಆಗಿಲ್ಲ. ಇದರ ಅರ್ಥ ಏನು?’ ಅಂತ ಕೇಳಿದಳು. ‘ಏನು?’ ಅಂದ ಖೇಮು. ‘ನೋಡಿ, ನಮ್ಮಿಬ್ಬರನ್ನು ಸೇರಿಸೋಕೆ ಅಂತನೇ ದೇವರು ಈ ರೀತಿ ಮಾಡಿದ್ದಾನೆ.

ಅವನ ಮನಸ್ಸಿನಲ್ಲಿ ನಾವಿಬ್ಬರೂ ಜೊತೆಯಾಗಿ ಜೀವನ ಮಾಡಬೇಕು ಅನ್ನೋ ಆಸೆ ಇದೆ ಅನ್ನಿಸುತ್ತೆ. ಹಾಗಾಗಿ ನಮ್ಮನ್ನ ಈ ರೀತಿ ಭೇಟಿ ಮಾಡಿಸಿದ್ದಾನೆ’ ಅಂತ ರೊಮ್ಯಾಂಟಿಕ್ ಆಗಿ ಹೇಳಿದಳು. ಅದನ್ನು ಖೇಮು ಒಂದೇ ನಿಮಿಷದಲ್ಲಿ ಅವಳ ಕಡೆ ಆಕರ್ಷಿತನಾದ. ಆ ಹುಡುಗಿ ಮತ್ತೆ ಹೇಳಿದಳು, ‘ಅಲ್ನೋಡಿ, ನನ್ನ ಕಾರು ಅಷ್ಟೊಂದ್ ಡ್ಯಾಮೇಜ್ ಆಗಿದ್ದರೂ, ಅದರಲ್ಲಿದ್ದ ಈ ವಿಸ್ಕಿ ಬಾಟಲ್ ಮಾತ್ರ ಹಾಗೇ ಇದೆ. ಇದರ ರ್ಥ, ದೇವರು ನಮ್ಮ ಜೀವನದ ಈ ಪ್ರಮುಖ ಘಳಿಗೆಯನ್ನು ಎಂಜಾಯ್ ಮಾಡಿ ಅಂತ ನಮಗೆ ಹೇಳ್ತಾ ಇದ್ದಾನೆ’. ಖೇಮು ಹೌದು ಅಂತ ತಲೆ ಆಡಿಸಿದ.

ತಕ್ಷಣ, ಖೇಮುಗೆ ಒಂದು ಗ್ಲಾಸಿನಲ್ಲಿ ವಿಸ್ಕಿ ಸುರಿದು ಕೊಟ್ಟಳು. ಅವಳನ್ನು ನೋಡುತ್ತಾ ವಿಸ್ಕಿ ಹೀರುತ್ತಿದ್ದ ಖೇಮುಗೆ ಗ್ಲಾಸ್ ಖಾಲಿ ಆಗಿದ್ದೇ ಗೊತ್ತಾಗಲಿಲ್ಲ. ಮತ್ತೆ ವಿಸ್ಕಿ ಹಾಕಿದಳು ಹುಡುಗಿ. ಅದನ್ನೂ ಹೀರುತ್ತಾ ಖೇಮು, ‘ಅರೇ, ಬರೀ ನನಗೇ ಕುಡಿಸುತ್ತಿದ್ದೀಯ, ನೀನು ಕುಡಿಯಲ್ವಾ?’ ಅಂತ ಕೇಳಿದ. ಅದಕ್ಕೆ ಹುಡುಗಿ ಹೇಳಿದಳು, ‘ಇಲ್ಲ, ನಾನು ಪೊಲೀಸ್ ಬರ್ಲಿ ಅಂತ ಕಾಯ್ತಾ ಇದ್ದೀನಿ’.

ಲೂಸ್ ಟಾಕ್
ಚೇತನ್ ಅಹಿಂಸಾ (ಕಾಲ್ಪನಿಕ ಸಂದರ್ಶನ)
ಅಲ್ರೀ, ಚೇತನ್ ಅಹಿಂಸಾ ಅಂತ ಹೆಸರಿಟ್ಕೊಂಡು, ಯಾವಾಗ್ಲೂ ಹಿಂಸೆಗೆ ದಾರಿ ಆಗೋ ಥರಾನೇ ಸ್ಟೇಟ್ ಮೆಂಟ್ ಕೊಡ್ತಾ ಇರ್ತೀರಲ್ಲ?
-ನಾನು ಮೊದ್ಲು ‘ಸ್ಟೇಟ್ಸ್’ ನಲ್ಲಿ ಇದ್ದಾನಲ್ವಾ, ಅದಕ್ಕೇ ಸ್ಟೇಟ್ ಮೆಂಟ್ ಕೊಡೋದು ನನ್ನ ಹಾಬಿ

ನಿಮ್ಮ ಸ್ಟೇಟಸ್ ಏನೇ ಇರಬಹುದು, ಆದ್ರೆ, ನಮ್ಮ ಸ್ಟೇಟ್ ಕಂಡೀಷನ್ ನೋಡ್ಕೊಂಡ್ ಮಾತಾಡ್ಬೇಕಲ್ವಾ?
-ನಂಗೆ ಹಿಂಗೆ ಕಂಡೀಷನ್ ಹಾಕ್ಬಾರ್ದು, ನಾನ್ ಯಾವಾಗ್ಲೂ ಕಂಡೀಷನ್ ಆಗೇ ಮಾತಾಡ್ತೀನಿ.

ಏನ್ರೀ, ಇದು, ಅಮೆರಿಕಾ ಇಂಗ್ಲಿಷ್ ಬಿಟ್ಟು ನಮ್ಮ ಬಟ್ಲರ್ ಇಂಗ್ಲಿಷ್ ಶುರು ಮಾಡಿಬಿಟ್ರಿ, ಸರಿ, ಬರೀ ಇದೇ ಮಾಡ್ತೀರೋ ಇ
ಸಿನಿಮಾನೂ ಮಾಡ್ತೀರೋ? ನಿಮ್ಮ ಲಾ ಸಿನಿಮಾ ಯಾವುದು ಅಂತ ನಿಮಗಾದ್ರೂ ನೆನಪಿದೆಯಾ?
-ಅಲ್ರೀ, ಸಿನಿಮಾದಲ್ಲಿ ಆಕ್ಟ್ ಮಾಡೋಕೆ ಅವಕಾಶ ಸಿಕ್ಕಿದ್ದಿದ್ರೆ, ಇದೆ ಯಾಕ್ ಮಾಡ್ತಿದ್ದೆ?

ಅದೂ ಸರಿನೇ..ಆದ್ರೆ ಮೊನ್ನೆ ಮಾತಾಡಿದ್ದೆಂದು, ಇವತ್ತು ಮಾತಾಡೋದೊಂದು ಅನ್ನೋ ಥರ ಆಡ್ತೀರಂತೆ ನೀವು?
-ಮತ್ತೆ, ‘ಆ ದಿನಗಳ’ಲ್ಲಿ ಮಾತಾಡಿದ್ದನ್ನ, ಮತ್ತೆ ಈ ದಿನಗಳಲ್ಲೂ ಮಾತಾಡೋಕಾಗುತ್ತಾ?

ಆಯ್ತಪ್ಪ, ಇಷ್ಟೆ ಮಾತಾಡ್ತೀರಲ್ಲ, ನಿಮ್ಮ ಉದ್ದೇಶ ಏನು ಅಂತ ಅಟ್ ಲೀ ನಿಮಗಾದ್ರೂ ಸ್ಪಷ್ಟವಾಗಿ ಗೊತ್ತಿದೆಯಾ?
-ಉದ್ದೇಶದ್ ಮನೆ ಹಾಳಾಯ್ತು, ನಂಗೆ ಸರಿಯಾಗಿ ನನ್ನ ದೇಶ ಯಾವ್ದು ಅಂತಾನೇ ಸರಿಯಾಗಿ ಗೊತ್ತಾಗ್ತಿಲ್ಲ.

ಓಹೋ, ನಿಮ್ಮನ್ನು ನೋಡಿನೇ, ‘ಓ ನನ್ನ ಚೇತನಾ, ಆಗು ನೀ ಅನಿಕೇತನಾ’ ಅಂತ ಕುವೆಂಪು ಅವರು ಹಾಡು ಬರೆದಿದ್ದು ಅನ್ಸುತ್ತೆ

-ಕುವೆಂಪುನಾ? ಅದ್ಯಾರು?

ನಿಮಗೆ ಪರ್ಮನೆಂಟ್ ದೇಶ ಇಲ್ಲ ಅನ್ನೋ ಕಾರಣಕ್ಕೆ, ನಿಮಗೆ ಕಾಲು ಒಂದ್ಕಡೆ ನಿಲ್ಲಲ್ಲ, ನೆಲದ ಮೇಲೆ ಕಾಲು ನಿಲ್ಲಲ್ಲ ಅಂತ ಜನ ಮಾತಾಡ್ಕೊತಾ ಇದ್ರು, ಈಗ ಹಿಂಗೆ ಕೇಳೋದ್ ನೋಡಿದ್ರೆ ಕುತ್ತಿಗೆ ಮೇಲೆ ತಲೆ ನಿಲ್ಲಲ್ಲ ಅನ್ಸುತ್ತೆ
-ಇದೇನ್ ಪ್ರಶ್ನೆನೋ, ಪ್ರಬಂಧನೋ ಗೊತ್ತಾಗ್ತಿಲ್ಲ. ಆದ್ರೂ, ಈ ನಿ ವಿಷಯ ಬಂದ್ರೆ ನನ್ನದು ಅಂತ ‘ಒಂದ್ ಸ್ಟ್ಯಾಂಡ್’ ಇರುತ್ತೆ. ಅದಕ್ಕೆ ತಕ್ಕಂಗೆ ಮಾತಾಡ್ತೀನಿ ಅಷ್ಟೇ.

ಬರೀ ಸ್ಟ್ಯಾಂಡ್ ಇದ್ರೆ ಸಾಲದು, ಒಂದ್ ಸ್ಟ್ಯಾಂಡರ್ಡ್ ಇರಬೇಕು, ಅದು ಜನಕ್ಕೆ ಅಂಡರ್‌ಸ್ಟ್ಯಾಂಡ್ ಕೂಡಾ ಆಗಬೇಕು ಅಲ್ವಾ?
-ಅವೆ ಗೊತ್ತಿಲ್ರೀ, ಒಟ್ನಲ್ಲಿ ಈ ವಿಷಯದಲ್ಲಿ ‘ಐ ಸ್ಟ್ಯಾಂಡ್ ವಿಥ್ ಮೈ ಸೆಲ್ಫ್’ ಅಷ್ಟೇ.

ಅಯ್ಯೋ, ನೀವ್ ಎದ್ರೂ ನಿಂತ್ಕೊಳಿ, ಈಗ ಸದ್ಯಕ್ಕೆ ಮಾತು ನಿಲ್ಲಿಸ್ರಪ್ಪಾ ಸಾಕು..
-ಹಲೋ, ಜಾಸ್ತಿ ಮಾತಾಡ್ತಿರೋದ್ ನಾನಾ, ನೀವಾ? ೫ ಪ್ರಶ್ನೆ ಅಂತ ಹೇಳಿ ೧೦ ಪ್ರಶ್ನೆ ಆಯ್ತು. ಒಂದ್ ಉತ್ತರಕ್ಕೆ ಎಷ್ಟು ಮಾರ್ಕ್ಸ್ ಅಂತಾನೂ ಹೇಳಿಲ್ಲ. ನಿಮಗೆ ಮಾರ್ಕ್ಸ್ ವಾದ ಗೊತ್ತಾ?

ಲೈನ್ ಮ್ಯಾನ್

ಬ್ರಿಟನ್‌ನಲ್ಲಿ ಟ್ರಸ್ ರಾಜಿನಾಮೆಯಿಂದ ಖುಷಿ ಆಗಿದ್ದು ಯಾರಿಗೆ?
-ರಿಷಿಗೆ

ಮುಂದಿನ ದಿನಗಳಲ್ಲಿ ರಿಷಿ, ಟ್ರಸ್‌ಗೆ ಹೇಳೋ ಮಾತು 
-ಸಿಕ್ಕಿದ್ದು ಕೈ ಬಿಟ್ಟು ನೀ ದಾನಿಯಾದೆ, ಅದಕ್ಕೇ ನಾನು ಪ್ರಧಾನಿಯಾದೆ
ಲಕ್ಕಿ ಮ್ಯಾನ್ ರಿಷಿ ಸುನಾಕ್ ಬ್ರಿಟನ್ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸೋ ಸಮಾರಂಭ
-ಪ್ರಧಾನಿ ಪ್ರಶಸ್ತಿ ಪ್ರದಾನ ಸಮಾರಂಭ

ನಿಮಗೆ ಪ್ರಧಾನಿ ಆಗೋ ಅವಕಾಶ ಮತ್ತೆ ಸಿಕ್ಕಿದೆ. ಇದರ ಬಗ್ಗೆ ಏನ್ ಹೇಳ್ತೀರ?
-ರಿಷಿ ಸುನಾಕ್: ನಾನು ಅವಸರ ಮಾಡ್ಲಿಲ್ಲ. ಅದಕ್ಕೇ ನಂಗೆ ಅವಕಾಶ ಸಿಕ್ಕಿದೆ. ನಿಧಾನವೇ ಪ್ರಧಾನ. ನಿಧಾನಿಯೇ ಪ್ರಧಾನಿ.

ಹೆಡ್ ಬುಷ್ ಸಿನಿಮಾ ಚೆನ್ನಾಗಿದೆಯಾ ಅಲ್ವಾ ಅಂತ ಕೇಳಿದಾಗ ಸ್ಪಷ್ಟವಾಗಿ ಉತ್ತರ
ಕೊಡದೇ ಇದ್ರೆ ಅದು
-ಬೀಟಿಂಗ್ ಅರೌಂಡ್ ದ ಬುಷ್
ಕೆಲವರಿಗೆ ಎಲ್ಲಾ ಹೇಳಿದ್ರೂ ಬುದ್ಧಿ ಬರಲ್ಲ ಅನ್ನೋದನ್ನು ಹಿಂಗೂ ಹೇಳಬಹುದು
-ಕುರುಡರ ಜೊತೆ ಕಣ್ಣಾಮುಚ್ಚಾಲೆ ಆಡೋಕಾಗುತ್ತಾ?

ಒಂದ್ ಡೌಟು
ನಿಂಗೆ ಇಗೋ ಜಾಸ್ತಿ ಅಂತ ಹೇಳಿದಾಗ, ‘ಹೌದು’ ಅಂತ ಒಪ್ಪಿಕೊಳ್ಳೋನಿಗೆ
ಇಗೋ ಇದೆ ಅಂತ ಅರ್ಥನಾ? ಇಲ್ಲ ಅಂತ ಅರ್ಥನಾ?
ಕೆಲವು ಪದಗಳನ್ನು ಹೆಂಗೆ ಉಪಯೋಗಿಸ್ತೀವಿ ಅನ್ನೋದು ಮುಖ್ಯ
-ಹುಟ್ಟುಹಬ್ಬ-ಕಾರ್ಯಕ್ರಮ
-ತಿಥಿ-ಕಾರ್ಯ
ಎಲ್ಲರೂ ಸಿನಿಮಾ ನೋಡಿ ಗೆದ್ರೆ- ಅದು Zಜಿಞಟ್ಠo eಜಿಠಿ.
ಥಿಯೇಟರ್‌ನಲ್ಲಿ ಮೂರ್ ದಿನನೂ ಓಡದೇ ಇದ್ರೂ ಸೂಪರ್ ಹಿಟ್ ಅಂತ
ಬೋರ್ಡ್ ಹಾಕ್ಕೊಂಡಾಗ, ಇದ್ಯಾವಾಗ ಯಾರಿಗೂ ಗೊತ್ತಿಲ್ಲದಂಗೆ ಹಿಟ್ ಆಯ್ತು
ಅನ್ಸುತ್ತಲ್ಲ- ಅದು Zಟ್ಞqsಞಟ್ಠo eಜಿಠಿ

ಹಸುವಿನ ಮರಿ- ಕರು
ಮೊಸಳೆಯ ಮರಿ- ಹಸುಳೆ ಮೊಸಳೆ
ತೀರಾ ಕಡಿಮೆ ಸಂಬಳದ ಕೆಲಸಗಳು ಸಿಗೋ ಜಾಗ
-ಚಾಕರಿ.ಕಾಮ್
ಟ್ರಾಫಿಕ್ ಬುದ್ಧನ ಸ್ವಗತ
ಮನೆಯಿಂದ ಗಾಡಿ ತಗೊಂಡ್ ಹೊರಡುವಾಗ ಇವತ್ ಯಾರನ್ನೂ ಬೈಕೋಬಾರ್ದು ಅಂತ ಎಷ್ಟೇ ಡಿಸೈಡ್ ಮಾಡ್ಕೊಂಡ್ ಹೋದ್ರೂ, ವಾಪಸ್ ಬರೋ ಅಷ್ಟೊತ್ತಿಗೆ ಕಲ್ತಿರೋ ಬೈಗುಳಗಳೆಲ್ಲ ಬಾಯಲ್ಲಿ ಬಂದಿರ್ತವೆ.

ಅಗ್ನಿ ಶಾಮಕ ದಳದಲ್ಲಿ ಕೆಲಸ ಮಾಡುವವನನ್ನು ವಜಾ ಮಾಡಿದ್ರೆ, ಅದರರ್ಥ
He is ‘FIRE’d
ಅಹಿಂಸೆ ಬಗ್ಗೆ ಮಾತಾಡೋ ಚೇತನ್ – ಚೇತನ್ ಅಹಿಂಸಾ
-ತಮ್ಮ ಸಿನಿಮಾಗಳಲ್ಲಿ ಬರೀ ಹಿಂಸೆ ಬಗ್ಗೆ ಮಾತಾಡೋ ವಿನೋದ್ ಪ್ರಭಾಕರ್- ಹಿಂಸಾ ವಿನೋದ