Thursday, 19th September 2024

ಮನುಕುಲದ ಅದ್ಭುತ ಪ್ರತಿಭೆ, ವಿಜ್ಞಾನಿ ಮೇಡಮ್ ಕ್ಯೂರಿ…

 ತನ್ನಿಮಿತ್ತ ಲೇಖನ

ಕ್ಯಾನ್ಸರ್ ರೋಗದ ಚಿಕಿತ್ಸೆೆಯಲ್ಲಿ ಬಳಸುವ ರೇಡಿಯಂನಂತಹ ಬಹು ಉಪಯೋಗಿ ವಿಕಿರಣಶೀಲ ಧಾತುವನ್ನು ಕಂಡುಹಿಡಿದ ಶ್ರೇಯಸ್ಸು ಕಾರಣರಾದ ಮೇಡಮ್ ಕ್ಯೂರಿ ರವರ ಇಂದು 152ನೇಯ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ
ವಿಶೇಷವಾದ ಲೇಖನ.

ಬಾಕ್‌ಸ್‌; ಮೇರಿ ಹುಟ್ಟಿಿದ ವರ್ಷವೇ ಆಕೆಯ ತಾಯಿಗೆ ಕ್ಷಯರೋಗ ಅಂಟಿಕೊಂಡಿತು. ತನ್ನ ಈ ರೋಗ ಮಕ್ಕಳಿಗೆಲ್ಲಿ ಅಂಟಿಕೊಳ್ಳುವುದೋ ಭಯದಲ್ಲಿ ಜಾಗೂರಕತೆಯಿಂದಲೇ ಮಕ್ಕಳಿಗೆ ಪ್ರೀತಿ ತೋರುತ್ತಿಿದ್ದಳು.

152ನೇ ಜನ್ಮ ವರ್ಷಾಚರಣೆಯ ಆರಂಭ. ಈ ಸುಸಂಧರ್ಭದಲ್ಲಿ ಅವರ ಕುರಿತಾದ ಒಂದು ಲೇಖನ.
1896ರಲ್ಲಿ ಹೆನ್ರಿಿ ಬೆಕ್ವೆೆರಲ್ ಅಚಾನಕ್ಕಾಾಗಿ ವಿಕಿರಣ ಪಟುತ್ವವವನ್ನು ಕಂಡು ಹಿಡಿದರು. ‘ಒಂದು ಧಾತುವು ತನ್ನಷ್ಟಕ್ಕೆೆ ತಾನು ವಿಕಿರಣಗಳನ್ನು ಉತ್ಸರ್ಜಿಸಿ ಕ್ಷಯಿಸಿ ಹೋಗುವ ವಿದ್ಯಮಾನವೇ ವಿಕಿರಣ ಪಟುತ್ವ’, ಯಾವ ಧಾತುಗಳು ಸ್ವಾಾಭಾವಿಕವಾಗಿ ವಿಕಿರಣಗಳನ್ನು ಉತ್ಸರ್ಜಿಸುತ್ತವೆಯೋ ಅವುಗಳನ್ನು ಸ್ವಾಾಭಾವಿಕ ವಿಕಿರಣಶೀಲ ಧಾತುಗಳು ಎನ್ನಲಾಗುತ್ತದೆ. ಇಲ್ಲಿ ಉತ್ಸರ್ಜಿಸಲ್ಪಡುವ ವಿಕಿರಣಗಳಿಗೆ ಬೆಕ್ವೆೆರಲ್ ಕಿರಣಗಳು

ಈ ವಿಕಿಣಪಟುತ್ವ, ವಿಕಿರಿಣಶೀಲ ವಸ್ತುಗಳ ಕುರಿತು ಉನ್ನತ ಮಟ್ಟದ ಅಧ್ಯಯನ ಮಾಡಿ ಕ್ಯಾಾನ್ಸರ್ ರೋಗದ ಚಿಕಿತ್ಸೆೆಯಲ್ಲಿ ಬಳಸುವ ರೇಡಿಯಂ ನಂತಹ ಬಹು ಉಪಯೋಗಿ ವಿಕಿರಣಶೀಲ ಧಾತುವನ್ನು ಕಂಡುಹಿಡಿದ ಶ್ರೇಯಸ್ಸು ಮೇಡಮ್ ಕ್ಯೂರಿಗೆ ಸಲ್ಲುತ್ತದೆ, ವಿಜ್ಞಾನ ಕ್ಷೇತ್ರದ ನೊಬೆಲ್ ಪಾರಿತೋಷಕಗಳು ಆಗಿನ ಕಾಲದಲ್ಲಿ ಕೇವಲ ಪುರುಷರ ಪಾಲಾಗುತ್ತಿಿದ್ದವು ಇಂತದರಲ್ಲಿ ಆ ಪಾರಿತೋಷಕ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದವರೇ ಈ ಮೆಡಮ್ ಮೇರಿ ಕ್ಯೂರಿ. ‘ಮೇರಿ ಕ್ಯೂರಿ’ ಎಂಬುದು ಒಂದು ಹೆಸರಲ್ಲ. ವೈಜ್ಞಾನಿಕ ಚಿಂತನೆ, ಸಂಶೋಧನಾ ಮನೋಭಾವ, ಕಠಿಣ ಪರಿಶ್ರಮ, ನಿಸ್ವಾಾರ್ಥ ಬದುಕು, ಜೀವಪರ ಮೌಲ್ಯ, ದಿಟ್ಟತನ, ದೈತ್ಯ ಸಾಧನೆಗಳ ಒಂದು ಮಹಾನ್ ಸಂಕೇತ.

ಮೇರಿಯ ಹುಟ್ಟು ಮತ್ತು ಬಾಲ್ಯದಲ್ಲಿ ಬೆಳೆದ ರೀತಿ; ‘ಮೇರಿ ಕ್ಯೂರಿ’ ಹುಟ್ಟಿಿದ್ದು ನವಂಬರ್ 7ರ, 1867ರಲ್ಲಿ, ರಷ್ಯಾಾ ಸಾಮ್ರಾಾಜ್ಯದ ಚಕ್ರಾಾಧಿಪತ್ಯದಡಿ ನಲುಗಿದ್ದ ಮಧ್ಯ ಯುರೋಪಿನ ಒಂದು ಪುಟ್ಟ ದೇಶವಾದ ಪೋಲೆಂಡ್‌ನಲ್ಲಿ ತಂದೆ ವ್ಲಾಾಡಿಸ್ಲಾಾವ್ ಸ್ಲ್ಕೋೋಡೋವ್ಸ್ಕಿಿ. ತಾಯಿ ಬ್ರೋೋನಿಸ್ಲವಾ ಸ್ಲ್ಕೋೋಡೋವ್ಸ್ಕಿಿ. ಇಬ್ಬರೂ ವೃತ್ತಿಿಯಿಂದ ಅಧ್ಯಾಾಪಕರು. ದಂಪತಿಗಳಿಗೆ ಐದು ಜನ ಮಕ್ಕಳು ಜೊಸೆಫ್, ಸೋಫಿಯಾ, ಬ್ರೋೋನ್ಯಾಾ, ಹೆಲೆನಾ ಹಾಗೂ ಕೊನೆಯವಳೇ ಮಾನ್ಯಾಾ (ಮೇರಿ ಕ್ಯೂರಿ).

ಮೇರಿ ಹುಟ್ಟಿಿದ ವರ್ಷವೇ ಆಕೆಯ ತಾಯಿಗೆ ಕ್ಷಯರೋಗ ಅಂಟಿಕೊಂಡಿತು. ತನ್ನ ಈ ರೋಗ ಮಕ್ಕಳಿಗೆಲ್ಲಿ ಅಂಟಿಕೊಳ್ಳುವುದೋ ಎಂಬ ಭಯದಲ್ಲಿ ಜಾಗೂರಕತೆಯಿಂದಲೇ ಮಕ್ಕಳಿಗೆ ಪ್ರೀತಿ ತೋರುತ್ತಿಿದ್ದಳು. ಪೋಲೆಂಡನ್ನು ರಷ್ಯನ್ನರು ಆಳುತ್ತಿಿದ್ದರು. ಅದು ರಷ್ಯಾಾದ ಚಕ್ರವರ್ತಿ ತ್ಸಾಾರ್ ನ ಸರ್ವಾಧಿಕಾರಕ್ಕೆೆ ಒಳಪಟ್ಟಿಿತ್ತು. ಸ್ಥಳೀಯರು ತಮ್ಮ ನಾಡಿನ ಮಾತೃ ಭಾಷೆಯ ಮೇಲೆ ಅಭಿಮಾನ ಇಟ್ಟುಕೊಳ್ಳುವ ಅಂತಹ ಕ್ರೂರ ಪರಿಸರದಲ್ಲಿ ಈ ಕುಟುಂಬ ವಾಸಿಸುತಿತ್ತು. ಮನೆ ತುಂಬ ಐದು ಮಕ್ಕಳ ಗದ್ದಲಮಯ ಕುಟುಂಬವಾದರೂ ಇದರ ಮಧ್ಯೆೆಯೇ ಮೇರಿ ಬೆಳೆಸಿಕೊಂಡ ವಿಶೇಷ ಗುಣವೇ ‘ಏಕಾಗ್ರತೆ’. ಬಾಲ್ಯದಲ್ಲಿ ಬೆಳೆದ ಈ ಗುಣ ಅವಳ ಜೀವನದುದ್ದಕ್ಕೂ, ತನ್ನೆೆಲ್ಲಾ ಸಾಧನೆಗಳಿಗೆ ಒಂದು ಭದ್ರ ಬುನಾದಿಯಾಯಿತು. ಬಾಲ್ಯದಲ್ಲಿ ಅವಳಿಗೆ ಅಚ್ಚಳಿಯದಂತೆ ನೆನಪಿನಲ್ಲಿ ಉಳಿದದ್ದು ತಂದೆ ಗಾಜಿನ ಕಪಾಟಿನಲ್ಲಿಟ್ಟಿಿದ್ದ ವೈಜ್ಞಾನಿಕ ಉಪಕರಣಗಳು. ಪೊಲೆಂಡ್‌ನಲ್ಲಿ ಹೆಣ್ಣು ಮಕ್ಕಳಿಗೆ ವಿಜ್ಞಾನ ಕಲಿಸ ಕೂಡದು ಎಂದು ರಷ್ಯಾಾ ಕಟ್ಟಾಾಜ್ಞೆ ತಂದೆ ತಂದ ವೈಜ್ಞಾನಿಕ ಸಲಕರಣೆಗಳು ಮೂಲೆಗುಂಪಾಗಿದ್ದವು. ಆ ಸಲಕರಣೆಗಳೇ ಅವಳಿಗೆ ವಿಜ್ಞಾನ ಕಲಿಯಲು ಕುತೂಹಲ ಪ್ರೇರಣೆ ನೀಡಿದವು.

ಸ್ವಾಾಭಿಮಾನಿಯಾದ ಪೊಫೆಸರ್ ಸ್ಕೋೋಡೋವ್ ಸ್ಕಿಿ , ‘ತ್ಸಾಾರ್’ನ ಆಡಳಿತಕ್ಕೆೆ ತಲೆ ಕೆಡಿಸಿಕೊಳ್ಳದ್ದರಿಂದ ಅವರಗೆ ವೃತ್ತಿಿಯಲ್ಲಿ ಹಿಂಬಡ್ತಿಿಯಾಯಿತು. ವಾಸವಿರಲು ಕೊಟ್ಟ ವಸತಿ ಸೌಕರ್ಯವನ್ನು ಸರಕಾರ ಹಿಂತೆಗೆದುಕೊಂಡಿತ್ತು. ಸಂಬಳ ಕಡಿಮೆ ಆದದ್ದರಿಂದ ಕುಟುಂಬ ತೀರಾ ದಾರಿದ್ರ್ಯದ ಸುಳಿಗೆ ಸಿಲುಕಿತು. 1876ರಲ್ಲಿ ಸೋಫಿಯಾ ಮತ್ತು ಬ್ರೊೊನ್ಯಾಾ ಇಬ್ಬರೂ ವಿಷಮಶೀತ ಜ್ವರಕ್ಕೆೆ ಸಾವನ್ನಪ್ಪಿಿದರು. ಎರಡು ವರ್ಷದ ತಾಯಿ ಕೊನೆಯುಸಿರೆಳೆದಳು. ಈ ಆಘಾತವನ್ನು ಕುಟುಂಬ ಸಹಿಸುವದು ಕಷ್ಟವಾಯಿತು. ಆದರೂ ತಂದೆ ಮಕ್ಕಳಿಗೆ ಸಾಹಿತ್ಯ, ಭೌತಶಾಸ್ತ್ರ, ರಾಸಾಯನಶಾಸ್ತ್ರ, ಕಲೆ ಇವುಗಳನ್ನು ಪರಿಚಯಿಸಿ ಅವರಲ್ಲಿ ಓದುವ ಹಂಬಲವನ್ನು ಇಮ್ಮಡಿಗೊಳಿಸಿದರು. ಮೇರಿ ಈ ಮಧ್ಯೆೆ ಚಿನ್ನದ ಪದಕದೊಂದಿಗೆ ಶಾಲಾ ವಿದ್ಯಾಾಭ್ಯಾಾಸ ಮುಗಿಸಿದಳು. ಪೋಲೆಂಡ್‌ನಲ್ಲಿ ಮಹಿಳೆಯರಿಗೆ ಉನ್ನತ ವ್ಯಾಾಸಂಗ ನಿಷಿದ್ಧವಾಗಿದ್ದರಿಂದ ಎಷ್ಟೇ ಪ್ರತಿಭೆಯಿದ್ದರೂ ಈ ಮೂರು ಮಕ್ಕಳು ತಮ್ಮ ಕಲಿಕೆಯ ಆಸೆಯನ್ನು ಅದುಮಿಟ್ಟುಕೊಳ್ಳ ಬೇಕಾಯಿತು.

ಮನೆ ಆಳಾಗಿ ದುಡಿದಳು ಮೇರಿಯಾದ ಅಕ್ಕ ಬ್ರೋೋನ್ಯಾಾಳು ಕಲಿಯಲು ಪ್ಯಾಾರಿಸ್‌ಗೆ ಹೋಗಲು ನಿರ್ಧರಿಸಿದಳು ಅವಳ ಕಲಿಕೆಗೆ ಸಹಾಯವಾಗಲೆಂದು ಮೇರಿ ಶ್ರೀಮಂತರ ಮನೆಯಲ್ಲಿ ಪೂರ್ಣಾವಧಿಯ ಗವರ್ನೆಸ್ ಕೆಲಸಕ್ಕೆೆ ಕೇವಲ 400 ರೊಬೆಲ್‌ಗೆ ದುಡಿದು, ಆ ಹಣವನ್ನು ಅಕ್ಕ ಬ್ರೋೋನ್ಯಾಾಳಿಗೆ ಕಲಿಕೆಗೆ ನೆರವಾಗಲು ನಿಂತಳು. ಯೌವನಕ್ಕೆೆ ಕಾಲಿಟ್ಟ ಮೇರಿ ಮನಸ್ಸಿಿನಲ್ಲಿ ಪ್ರೀತಿಯ ಭಾವನೆ ಚಿಗುರಿತು. ತಾನು ದುಡಿಯುತ್ತಿಿದ್ದ ಶ್ರೀಮಂತರ ಹಿರಿಯ ಮಗ ಕ್ಯಾಾಸಿಮೀರ್ ಜೋರೊಸ್ಕಿಿ ವಾರ್ಸಾದಲ್ಲಿ ಓದುತ್ತಿಿದ್ದವ ರಜೆಗೆ ಬಂದಾಗ, ಮೇರಿಯ ತಾಳ್ಮೆೆ, ಸಹನಶೀಲತೆ, ಬುದ್ಧಿಿವಂತಿಕೆಗೆ ಮನಸೋತ ಆತ ಮೇರಿಯನ್ನು ಪ್ರಾಾರಂಭಿಸಿದ. ಇವಳಿಗೂ ತಾರುಣ್ಯದ ಆ ಭಾವ ಹಿತವೆನಿಸಿತು. ಆದರೆ, ಈ ಪ್ರೀತಿಯನ್ನು ಹುಡುಗನ ತಂದೆ ತಾಯಿ ಒಪ್ಪಲಿಲ್ಲಾ, ಅವರ ಪ್ರೇಮ ವಿಫಲವಾಯಿತು ಮೇರಿಯ ಮೊದಲ ಪ್ರೇಮ ಹೃದಯದಲ್ಲಿ ಮಾಯದ ಗಾಯವನ್ನುಂಟುಮಾಡಿತು. ತನ್ನ ಬದುಕಿಗಾಗಿ ಈ ಎಲ್ಲ ನೋವು ಅಪಮಾನಗಳನ್ನು ಸಹಿಸಿಕೊಂಡಳು. ಕೆಲವು ಸಲ ಅಕ್ಕನಿಗೆ ಪತ್ರ ಬರೆಯಬೇಕು ತನ್ನ ಹೃದಯದ ನೋವನ್ನೆೆಲ್ಲಾ ಹೇಳಬೇಕು ಎಂದು ಯೋಚಿಸಿದರೂ ಅವಳಲ್ಲಿ ಪತ್ರ ಕೊಂಡುಕೊಳ್ಳುವಷ್ಟೂ ಹಣವಿರುತ್ತಿಿರಲಿಲ್ಲ, ಇಂತಹ ಸಂಧರ್ಭದಲ್ಲಿ ತನ್ನೆೆಲ್ಲಾ ನೋವನ್ನು ನುಂಗಿಕೊಂಡು

ಪ್ಯಾಾರಿಸ್‌ಗೆ ಪಯಣದಲ್ಲಿ ಈ ಮಧ್ಯೆೆ 1890 ರಂದು ಸಹೋದರಿ ಬ್ರೋೋನ್ಯಾಾಳಿಂದ ಮೇರಿಗೆ ಪ್ಯಾಾರಿಸ್‌ಗೆ ಬರುವಂತೆ ಪತ್ರ ಬಂದಿತು. ಈ ರಜೆಯಲ್ಲಿ ಕ್ಯಾಾಸಿಮೀರ್ ಮತ್ತು ನಾನು ಮದುವೆಯಾಗುವುದಾಗಿಯೂ ಇಲ್ಲಿ ವಸತಿಗೆ ಯಾವ ತೊಂದರೆಯೂ ಇಲ್ಲವೆಂದು ಅದರಲ್ಲಿ ಬರೆದಿತ್ತು. ಇಷ್ಟು ದಿನ ಕಷ್ಟದ ದುಡಿಮೆ, ಪ್ರೇಮ ವೈಫಲ್ಯಗಳಿಂದ ನೊಂದಿದ್ದ ಅವಳು ಹೊಸ ಹುರುಪಿನಿಂದ, ಭವಿಷ್ಯದ ಬಗ್ಗೆೆ ದೃಢ ನಿರ್ಧಾದೊಂದಿಗೆ ಪ್ಯಾಾರಿಸ್‌ಗೆ ಹೊರಟಳು.
ಪ್ಯಾಾರಿಸ್‌ನಲ್ಲಿ ಅಕ್ಕ ಭಾವರ ಸ್ವಾಾಗತದೊಂದಿಗೆ, ಸೋರ್ಬನ್ನಿಿನ ವಿಶ್ವವಿದ್ಯಾಾಲಯಕ್ಕೆೆ ಸೇರಿದಳು ಅಚ್ಚುಕಟ್ಟಾಾದ ಪ್ರಯೋಗ ಶಾಲೆ, ವಿಶಾಲ ಗ್ರಂಥಾಲಯ, ಉತ್ತಮ ಪುಸ್ತಕಗಳು ಮೇರಿಯ ಕಲಿಯುವ ಕನಸುಗಳಿಗೆ ಉತ್ಸಾಾಹ ಹೊಮ್ಮಿಿಸಿದವು. ಪ್ರಾಾರಂಭದಲ್ಲಿ ಫ್ರೆೆಂಚ್ ಭಾಷೆ ಕಠಿಣವೆನಿಸಿದರೂ ಕಷ್ಟಪಟ್ಟು, ಏಕಾಗ್ರತೆಯಿಂದ ಕಲಿತಳು. ಅಕ್ಕನ ಮನೆಯು ಚಿಕ್ಕದಾಗಿದ್ದರಿಂದ ಅಲ್ಲಿಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ತನ್ನ ಗ್ರಂಥಾಲಯ ಮತ್ತು ಪ್ರಯೋಗಾಲಯಗಳಿಗೆ ಹತ್ತಿಿರವಿರುವ ’ಲ್ಯಾಾಟಿನ್ ಕ್ವಾಾಟರರ್’ನಲ್ಲಿ ಚಿಕ್ಕದಾದ ಕೋಣೆಯನ್ನು ಬಾಡಿಗೆ ಹಿಡಿದಳು. ಕೋಣೆಯಲ್ಲಿ ಹಾಸಿಗೆ, ಸಣ್ಣ ಮೇಜು, ಕುರ್ಚಿ, ಎರಡು ತಟ್ಟೆೆಗಳು, ಮೂರು ಲೋಟ ಹಾಗೂ ಅಧ್ಯಯನಕ್ಕೆೆ ಪುಸ್ತಕಗಳು ಇವೇ ಅವಳ ಆಸ್ತಿಿಯಾಗಿದ್ದವು. ತಂದೆ ಕಳಿಸುತಿದ್ದ ಹಣ ಸಾಕಾಗಾದೇ ಒಂದೇ ಹೊತ್ತು ಊಟ ಮಾಡಿದ್ದೂ ಇತ್ತು, ರಕ್ತ ಹೀನತೆಯಿಂದ ಕೆಲವೊಮ್ಮೆೆ ಪ್ರಯೋಗಶಾಲೆಯಲ್ಲೇ ತಲೆತಿರುಗಿ ಬಿದ್ದಿದ್ದೂ ಆಯಿತು. ಇದನ್ನು ತಿಳಿದ ಅಕ್ಕ ಭಾವ ಉಪಚರಿಸಿದ್ದರು. 1893ರಲ್ಲಿ ಭೌತಶಾಸ್ತ್ರದಲ್ಲಿ ಮೊದಲನೇ ಸ್ಥಾಾನದಲ್ಲಿ ತೇರ್ಗಡೆ ಹೊಂದಿ, 1894ರಲ್ಲಿ ಗಣಿತದಲ್ಲಿ ಎರಡನೇ ಸ್ಥಾಾನ ಪಡೆದು, ವಿಶ್ವವಿದ್ಯಾಾಲಯಕ್ಕೆೆ ಕೀರ್ತಿ ತಂದಳು.

ಬಾಳಸಂಗಾತಿಯ ಆಗಮನದಿಂದ ಭೌತಶಾಸ್ತ್ರಜ್ಞ ಪಿಯರಿ ಈಗಾಗಲೇ ‘ಫೀಝೋ ಇಲೆಕ್ಟ್ರಿಿಸಿಟಿ’ ಸಿದ್ಧಾಾಂತವನ್ನು ತನ್ನ ಅಣ್ಣನೊಡನೆ ಇನ್ನು ಉನ್ನತ ವ್ಯಾಾಸಂಗ ಮಾಡುತ್ತಿಿದ್ದರು, ಯಾವುದೋ ಒಂದು ಸಮಾರಂಭದಲ್ಲಿ ಭೇಟಿಯಾದ ಮೇರಿ ಮತ್ತು ಪಿಯರಿ ಇಬ್ಬರೂ ತಮ್ಮ ಅಧ್ಯಯನ ಕ್ಷೇತ್ರವನ್ನು ಕುರಿತು ಚರ್ಚಿಸುತ್ತಾಾ ಆದ ಸ್ನೇಹ ಮುಂದೆ ಅದು ಪ್ರೀತಿಗೆ ಸಿಲುಕಿತು, ಜುಲೈ 26, 1896ರಲ್ಲಿ ಇಬ್ಬರೂ ವಿವಾಹವಾದರು.

ಮಗುವಿನ ತಾಯಿಯಾದರೂ ಸಂಶೋಧನೆ ಬಿಡಲಿಲ್ಲಾ. ಆದರೆ, ಈ ದಂಪತಿಗೆ 1897ರಲ್ಲಿ ಮುದ್ದಾದ ಹೆಣ್ಣುಗು ಜನಿಸಿತು. ಮಗುವಿಗೆ ಐರೀನ್ ಎಂದು ನಾಮಕರಣ ಮಾಡಿದರು. ಮಗು ಜನಿಸಿದ ಕೆಲವೇ ದಿನಗಳಲ್ಲಿ ವೈದ್ಯರ ನಿರ್ಲಕ್ಷಿಸಿ ಮತ್ತೆೆ ತನ್ನ ವಿಜ್ಞಾನ ಸಂಶೋಧನೆಯಲ್ಲಿ ನಿರತಳಾದಳು ಮೇರಿ, ಪ್ಲಿಿಚ್ ಬ್ಲೆೆಂಡ್ ಎಂಬ ಖನಿಜದಲ್ಲಿ ಥೋರಿಯಂ ಹಾಗೂ ಯುರೇನಿಯಂ ಧಾತುಗಳ ವಿಕಿರಣ ಶಕ್ತಿಿಯನ್ನು ಪರಿಶೀಲಿಸಿದಳು. ಪತಿ ಪಿಯರಿ ಅವಳ ಪ್ರತಿ ಸಾಥ್ ನೀಡುತ್ತಿಿದ್ದರು. ಎಷ್ಟೋೋ ದಿನ ಪ್ರಯೋಗ ಶಾಲೆ ಬಿಟ್ಟು ಹೊರ ಹೋಗದೇ ಸದಾ ವಿಕಿರಣಗಳ ಪ್ರಭಾವಕ್ಕೆೆ ಒಳಗಾಗಿದ್ದೂ ಇದೆ. ನಿರಂತರ ಸಂಶೋಧನೆಯ ಪ್ರತಿಫಲವಾಗಿ 1898ರಲ್ಲಿ ಹೊಸ ಧಾತು ಕಂಡು ಹಿಡಿದರು, ಯಾವ ದೇಶದಲ್ಲಿ ಮಹಿಳೆಯರಿಗೆ ವಿಜ್ಞಾನ ಕಲಿಯಲು ಒದಗಿಸಿದ್ದಿಲ್ಲವೋ ಅದೇ ದೇಶ ಪೋಲೆಂಡ್ ಎಂಬುದನ್ನು ‘ಪೊಲೊನಿಯಂ’ ಎಂದು ಆ ಧಾತುವಿಗೆ ಹೆಸರಿಟ್ಟರು. ಮುಂದೆ ಎರಡನೇ ಹೊಸ ಧಾತು ‘ರೇಡಿಯಂ’ನ್ನು ಸಂಶೋಧಿಸಿದರು.

ಸಂಶೋಧನೆಗೆ ಒಲಿದ ನೊಬೆಲ್ ಪಾರಿತೋಷಕದಲ್ಲಿ, ಹಗಲು ರಾತ್ರಿಿ ಎನ್ನದೇ ದುಡಿದ ಈ ದಂಪತಿಗಳು ಒಟ್ಟು 34 ವೈಜ್ಞಾನಿಕ ಪ್ರಬಂಧಗಳನ್ನು ಬರೆದಿದ್ದರು. ಇದರ ಪ್ರತಿಫಲವಾಗಿ ಹಲವು ಪ್ರಶಸ್ತಿಿಗಳು ಮೇಡಮ್ ಕ್ಯೂರಿಗೆ ದೊರೆತವು, ‘ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಿಯು 1903, ಡೇವಿ ಮೆಡಲ್, ಎಲ್ಲಿಯೇಟ್ ಕ್ರಿಿಸನ್ ಮೆಡಲ್, ಅಲ್ಬಟ್ ಮೆಡಲ್, ನೊಬೆಲ್-1911, ವಿಲ್ಲಿಯರ್ಡ್ ಗಿಬ್‌ಸ್‌ ಅವಾರ್ಡ್.

ಗಂಡ ಪಿಯರಿಯ ನಿಧನದಿಂದಾಗಿ, 1906 ರ ಎಪ್ರಿಿಲ್ 19ರಂದು ಪಿಯರಿ ಹೆಂಡತಿಗೆ ‘ಪ್ರಯೋಗಾಲಯಕ್ಕೆೆ ಬರುತ್ತೀಯಲ್ಲಾ’? ಎಂದು ಹೇಳಿ ಹೊರಟ, ಸುರಿವ ಮಳೆಯಲ್ಲಿ ರಸ್ತೆೆಯಲ್ಲಿ ನಡೆಯುತ್ತಿಿದ್ದ ಪಿಯರಿಯ ಮೇಲೆ ರಭಸದಿಂದ ಬಂದ ಕುದುರೆ ಗಾಡಿಯು ಹಾಯ್ದು ಸ್ಥಳದಲ್ಲೇ ಮೃತನಾದ. ವಿಷಯ ತಿಳಿದ ಮೇರಿಗೆ ಆಘಾತವಾಯಿತು. ತನ್ನ ಮಕ್ಕಳಿಗೋಸ್ಕರ, ಸಂಶೋಧನೆಗೋಸ್ಕರ, ಮತ್ತೆೆ ಅವಳು ತನ್ನೆೆಲ್ಲಾ ದುಃಖವನ್ನು ಸಹಿಸಿಕೊಂಡಳು.
ತನ್ನ ಗಂಡ ನಿಲ್ಲಿಸಿದ ಪ್ರಯೋಗಗಳನ್ನು ಮುಂದುವರೆಸಿದಳು. 1906 16 ರಂದು ಸೋರ್ಬನ್ನಿಿನ ವಿಶ್ವವಿದ್ಯಾಾಲಯ ದಲ್ಲಿ ಪ್ರೊೊಫೆಸರ್ ಹುದ್ದೆ ದೊರಕಿತು, ಆ ಹುದ್ದೆ ಪಡೆದ ಮೊದಲ ಮಹಿಳೆ ಇವಳೇ ಅಗಿದ್ದಳು. ಪ್ರೀತಿಯ ಗಂಡನನ್ನು ಕಳೆದುಕೊಂಡ ಮೇರಿ ಪುಸ್ತಕದಲ್ಲಿ ತನ್ನ ಎಲ್ಲ ಭಾವನೆಗಳನ್ನೂ ಬರೆಯುತ್ತಾಾ ಏಕಾಂತದಲ್ಲಿ ಬದುಕುವದನ್ನು ರೂಢಿಸಿಕೊಂಡಳು.

ಮೇರಿಯ ಅಂತಿಮ ಕ್ಷಣಗಳು; ಮೇರಿಯ ಹಿರಿಯ ಮಗಳು ತಾಯಿಯಂತೆ ವಿಜ್ಞಾನ ಕ್ಷೇತ್ರ ಆಯ್ದು ಕೊಂಡರೆ, ಕಿರಿಯ ಮಗಳು ‘ಈವ್’ ಸಂಗೀತ ಕ್ಷೇತ್ರವನ್ನು ಆಯ್ದು ಕೊಂಡಳು. ಕೊನೆಯ ಘಳಿಗೆಯಲ್ಲಿ ಇಬ್ಬರೂ ಮಕ್ಕಳಿಗೆ ಒತ್ತಡ ನಿರ್ಭಂಧದ ವಾತಾವರಣವನ್ನು ಮೇರಿ ನಿರ್ಮಿಸಲಿಲ್ಲ. ಆಗಿನ ಶ್ರೇಷ್ಠ ಪತ್ರಕರ್ತೆ ವಿಲಿಯಂ ಬ್ರೌೌನ್ ಮೆಲೋನ್ ಎಂಬಾಕೆ ಮೇರಿಯನ್ನು ಅದೆಷ್ಟೂ ವರ್ಷಗಳಿಂದ ಆರಾಧಿಸಿತ್ತಿಿದ್ದಳು. ಒಮ್ಮೆೆ ಮೇರಿ ಜತೆ ಮಾತನಾಡುವ ಅವಕಾಶ ಸಿಕ್ಕಾಾಗ, ಆಕೆ ಮೇರಿಯನ್ನು ‘ಇಡೀ ಜಗತ್ತಿಿನಲ್ಲಿ ನಿಮಗೆ ಬೇಕಾದದ್ದನ್ನು ಆರಿಸಿಕೊಳ್ಳಿಿ ಎಂದರೆ ನೀವೇನನ್ನು ಆರಿಸಿಕೊಳ್ಳತ್ತೀರಿ’ ಎಂದು ಕೇಳಿದರು. ಅದಕ್ಕೆೆ ಪ್ರತಿಯಾಗಿ ಮೇರಿ ‘ನನ್ನ ಪ್ರಯೋಗ ಶಾಲೆಗೆ ಒಂದು ಗ್ರಾಾಂ ರೇಡಿಯಮ್ ಬೇಕು. ಅದರ ಬೆಲೆ ಈಗ ಒಂದು ಲಕ್ಷ ಅಷ್ಟು ಹಣ ನನ್ನ ಬಳಿ ಇಲ್ಲ’. ಎಂದರು. ಆಗ ಪತ್ರಕರ್ತೆ ಕ್ಷಣ ದಂಗಾದರು ಕಾರಣ, ರೇಡಿಯಂ ಕಂಡು ಹಿಡಿದಾಕೆಗೆ ಇಂದು ರೇಡಿಯಂಗಾಗಿ ಪರಿತಪಿಸುವುದು ವಿಪರ್ಯಾಸ ಅನಿಸಿತು. ಸಂಕಟವೂ ಆಯಿತು, ಪತ್ರಿಿಕೆಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ಕೊನೆಗೆ ಕ್ಯಾಾನ್ಸರ್‌ಗೆ ತುತ್ತಾಾದ ಮೇರಿಗೆ ಚಿಕಿತ್ಸೆೆಗೆ ಹಣವಿರಲಿಲ್ಲಾ, 1934ರ ಮೇ ತಿಂಗಳಲ್ಲಿ ಪ್ರಯೋಗ ಶಾಲೆಯಿಂದ ಬಂದು ಮಲಗಿದ ಮೇರಿ ಮತ್ತೆೆ ಏಳಲಾಗಲಿಲ್ಲ. ಅಂದು ಜುಲೈ 4, 1934 ಪ್ರಾಾತಃಕಾಲ ಮೇರಿಯು ಇಹಲೋಕ ತ್ಯಜಿಸಿದರು. ಮಾಜಿ ಪ್ರಧಾನಿ ‘ಲಾಲ್ ಬಹಾದ್ದೂರ್ ಶಾಸ್ತ್ರೀಜಿ’ಯವರು ಮೇಡಮ್ ಕ್ಯೂರಿಯವರ ಜೀವನ ಚರಿತ್ರೆೆಯನ್ನು ಮೊಟ್ಟ ಮೊದಲ ಬಾರಿಗೆ ಹಿಂದಿಗೆ ಅನುವಾದಿಸಿದ್ದಾರೆ. ಇಂತಹ ಮಹಿಳಾ ಸಾಧಕಿ ನಮ್ಮೆೆಲ್ಲರ ಹೆಮ್ಮೆೆ. ಅವಳ ಏಕಾಗ್ರತೆ, ನಿರಂತರ ಪ್ರಯೋಗ, ಸಾಧಿಸುವ ಛಲ ಸದಾಕಾಲ ಅನುರಣನೀಯ.

Leave a Reply

Your email address will not be published. Required fields are marked *