Thursday, 12th December 2024

ಏನಾದರೂ ಮಾಡಿ, ಸಿನಿಮಾನ ಸಿನಿಮಾ ಥರ ನೋಡು

ತುಂಟರಗಾಳಿ

ಸಿನಿಗನ್ನಡ

ಚಿತ್ರರಂಗದಲ್ಲಿ ಈಗೀಗ ಹೊಸ ಖಾಯಿಲೆ ಶುರು ಆಗಿದೆ. ಇದನ್ನು ಖಾಯಿಲೆ ಅನ್ನೋದೋ ಅಥವಾ ಖಯಾಲಿ ಅನ್ನೋದು ಗೊತ್ತಾಗ್ತಿಲ್ಲ. ಆದ್ರೆ, ಇತ್ತೀಚೆನ ಬಾಯ್ಕಾಟ್ ಸಂಸ್ಕೃತಿಯ ಜೊತೆಗೆ ಈಗ ನಮ್ಮ ಭಾವನೆಗಳಿಗೆ ಧಕ್ಕೆ ಬಂದಿದೆ ಅಂತ ಸಿನಿಮಾಗಳಿಗೆ ಕೊಕ್ಕೆ ಹಾಕುವ ಮನಸ್ಥಿತಿಗಳು ಜಾಸ್ತಿ ಆಗುತ್ತಿವೆ.

ಇದಕ್ಕೆ ಕಾರಣ ರಾಜಕೀಯ ಅಂದ್ರೆ ತಪ್ಪಿಲ್ಲ. ಚಿತ್ರರಂಗದಲ್ಲಿ ಪೊಲಿಟಿಕಲ್ ಸಿನಿಮಾಗಳು ಬರೋದು ಕಾಮನ್. ಆದರೆ ಸಿನಿಮಾಗಳಿಗೇ ಪೊಲಿಟಿಕಲ್ ಆಂಗಲ್ ಬರ್ತಾ ಇರೋದು ಇತ್ತೀಚಿನ ಕೆಟ್ಟ ಬೆಳವಣಿಗೆ. ಇಲ್ಲಿ ಗಮನಿಸ ಬೇಕಾದ ಅಂಶಗಳು ಅಂದ್ರೆ ಇವ್ಯಾವೂ ಒಳ್ಳೆಯ ಉದ್ದೇಶದಿಂದ ಅಥವಾ ನಿಜವಾದ ಭಾವನೆಗಳಿಗೆ ಧಕ್ಕೆ ತರೋ ಸಂಗತಿಗಳಲ್ಲ.

ಬದಲಾಗಿ ಚಿತ್ರಕ್ಕೆ ಸಂಬಂಧಪಟ್ಟ ಯಾರಾದರೂ ಒಂದು ರಾಜಕೀಯ ಪಂಗಡದ ಪರ ಮಾತಾಡಿದರೆ ಅವರ ವಿರೋಧಿ ಪಕ್ಷಗಳು ಬೇಕೆಂತಲೇ ಮಾಡುತ್ತಿರುವ ಬೃಹನ್ನಾಟಕಗಳು ಇವು.

ಮಾತೆತ್ತಿದರೆ ಅವರಿಗೆ ಅವಮಾನ ಆಗಿದೆ, ಇವರಿಗೆ ಅವಮಾನ ಆಗಿದೆ ಅಂತ ಕುಂಟು ನೆಪ ಹೂಡಿ ಸಮಾಜದ ಆರೋಗ್ಯ ಕೆಡಿಸುವ ಪ್ರಯತ್ನಗಳು ಇವು. ಇದು ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದು ತುಂಬಾ ಕೀಳಾಗಿ ವರ್ತಿಸುತ್ತಿರುವ ಅನೇಕ ಉದಾ ಹರಣೆಗಳನ್ನು ನಾವು ಇಂದು ನೋಡಬೇಕಾಗಿರೋದು ದುರದೃಷ್ಠಕರ. ಇದರಿಂದ ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ಮಾಡುವ ಮಂದಿ ಈಗ ಏನಾದರೂ ಮಾಡು, ಮೊದಲು ಸಿನಿಮಾನ ಸಿನಿಮಾ ಥರ ನೋಡು ಅಂತ ಇಂಥ ಕಿರಿಕ್ ಪಾರ್ಟಿ ಗಳಿಗೆ ಹೇಳಬೇಕಾಗಿರೋ ಪರಿಸ್ಥಿತಿ ಬಂದಿದೆ.

ಇಂಥ ಬೆಳವಣಿಗೆಗಳನ್ನು ನೋಡಿದಾಗ ಒಮ್ಮೊಮ್ಮೆ, ಸರಿಯೋ ತಪ್ಪೋ, ಸಿನಿಮಾ ಅನ್ನೋದು ನಿರ್ದೇಶಕರ ಸ್ವಾತಂತ್ರ್ಯ, ಅವರಿಗೆ ಇಷ್ಟ ಆಗಿದ್ದನ್ನು ಅವರು ಮಾಡ್ತಾರೆ, ನಿಮಗೆ ಇಷ್ಟ ಇದ್ರೆ ನೋಡಿ, ಇಂದ್ರೆ ಬಿಡಿ ಅನ್ನೋ ಕಾನೂನು ಬಂದ್ರೆ ಒಳ್ಳೆಯದು
ಅನ್ನಿಸೋದು ನಿಜ.

ಲೂಸ್ ಟಾಕ್
ಡಾಲಿ ಧನಂಜಯ (ಕಾಲ್ಪನಿಕ ಸಂದರ್ಶನ) 
ಏನ್ ಸಾರ್, ನಿಮ್ಮ ವಿರುದ್ಧ ಪಿತೂರಿ ನಡೀತಾ ಇದೆ ಅನ್ಸುತ್ತೆ. ಹೆಡ್ ಬುಷ್ ಥರ ರೌಡಿಸಂ ಸಿನಿಮಾ ಮಾಡಿದ್ರಿ ಅಂತನಾ?
-ಎಂಥದ್ದೂ ಇಲ್ಲ. ಅಲ್ಲಮ್ಮಾ, ನಾನು ಅಲ್ಲಮ ಮಾಡಿದಾಗ ಇವರೆಲ್ಲ ಎಲ್ಲಮ್ಮಾ ಹೋಗಿದ್ರು?

ಸರಿ, ಮತ್ತೆ ನಿಮ್ ಪ್ರಕಾರ ಅವರಿಗೆ ಹೆಡ್ಡು ಬುಷ್ ಮೇಲೆ ಕೆಂಗಣ್ಣು?
-ಯಾಕಾದ್ರೂ ಇರ್ಲಿ, ಆದ್ರೆ ನಾನು ಅದಕ್ಕೆಲ್ಲ ಹೆಡ್ ಏಕ್ ಮಾಡಿಕೊಳ್ಳಲ್ಲ. ಬೀಟಿಂಗ್ ಅರೌಂಡ್ ದಿ ಬುಷ್ ಅನ್ನೋ ಥರ
ಮಾತಾಡಲ್ಲ. ಏನಿದ್ರೂ ಮುಖದ ಮೇಲೆ ಹೊಡೆದಂಗೆ ಅಷ್ಟೇ.

ಸರಿ, ಈಗ ಯಾರ್ ಸರಿ, ರ್ಯಾ ತಪ್ಪು ಅಂತ ಹೆಂಗ್ ಡಿಸೈಡ್ ಮಾಡೋದು, ಟಾಸ್ ಹಾಕೋಣ್ವಾ?
-ಟಾಸ್ ಹಾಕಿದ್ರೆ ನಾನೇ ಗೆದು. ಯಾಕಂದ್ರೆ ಹೆಡ್ಡು ಬುಷ್ ಎರಡೂ ಪೂರಾ ಕಾ ಪೂರಾ ಮೇರಾ ಹೈ.

ಓ, ಅದೂ ನಿಜ, ಆದ್ರೆ ಡಾಲಿ ಮೇಲೆ ಯಾಕೆ ಸುಖಾ ಸುಮ್ನೆ ಕೆಲವರು ದಾಳಿ ಮಾಡ್ತಾ ಇರೋದು?
-ಅವ್ರ್ ಏನ್ ಮಾಡಿದ್ರೂ ಸುಖ ಇಲ್ಲ ಬಿಡಿ. ಯಾಕಂದ್ರೆ, ನನ್ ಹೆಸ್ರು ಡಾಲಿ, ಅವರು ಹಾಕಿದ ತಾಳಕ್ಕೆ ಕುಣಿಯೋ ಡಾಲ್
ಅಲ್ಲ. ಆದ್ರೂ ಇವ್ರು ಸುಮ್ನೆ ಕಿರಿಕ್ ಮಾಡ್ತಾ ಇರೋದ್ ನೋಡಿದ್ರೆ ದಾಲ್ ಮೇ ಕುಚ್ ಕಾಲಾ ಹೈ ಅನ್ನಿಸ್ತಿದೆ.

ಸರಿ, ಅದೇನೋ ಬಡವರ ಮಕ್ಕಳು ಬೆಳಿಬೇಕು ಅಂತ ಚಳುವಳಿ ಶುರು ಮಾಡಿದ್ದೀರಂತೆ?
-ಚಳುವಳಿ ಏನಿಲ್ಲ, ಬಡವರನ್ನ ತುಳಿಬೇಕು, ಅವರ ಮುಖಕ್ಕೆ ಮಸಿ ಬಳೀಬೇಕು ಅಂತೀರೋರನ್ನ ತಡೆಯೋ ಪ್ರಯತ್ನ ಅಷ್ಟೇ.

ನೆಟ್ ಪಿಕ್ಸ್
ಖೇಮುನ ಮಾವ ಪುಲ್ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ಅವರನ್ನು ನೋಡಿದ ಎಲ್ಲಾ ಡಾಕ್ಟರ್‌ ಗಳೂ ಅವರು ಬದುಕೋ ಯಾವ ಸಾಧ್ಯತೆಗಳೂ ಇಲ್ಲ ಅಂತ ಹೇಳಿದ್ರು. ಅಲ್ಲದೆ, ಪೇಷೆಂಟ್ ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಯಾವ ಡಾರ್ಕ್ಟ ಕೂಡ ಆಪರೇಷನ್ ಮಾಡಲು ಮುಂದೆ ಬರಲಿಲ್ಲ. ಅಳಿಯ ವೇಮು ಕೂಡ ಸ್ವತಃ ಡಾಕ್ಟರ್‌ ಆಗಿದ್ದ. ಹಾಗಾಗಿ ಖೇಮು ಆಗಿzಗ್ಲಿ ಒಂದ್ ಕೈ ನೋಡೇ ಬಿಡೋಣ ಅಂತ ಆಪರೇಷನ್ ಮಾಡಲು ತಯಾರಾದ.

ಆಪರೇಷನ್ಗೆ ಮುಂಚೆ ಮಂಚದ ಮೇಲೆ ಮಲಗಿದ್ದ ಖೇಮು ಮಾವ ಆಪರೇಷನ್ ಛೇಂಬರ್ಗೆ ಬಂದ ಖೇಮುವನ್ನು ನೋಡಿ ಸನ್ನೆ ಮಾಡಿ ನಿನ್ನ ಬಳಿ ಏನೋ ಹೇಳಬೇಕು ಹತ್ತಿರ ಬಾ ಅಂತ ಕರೆದ್ರು, ಖೇಮು ಹೋದ. ಖೇಮುನ ಕಿವಿಯಲ್ಲಿ ಅವನ ಮಾವ ಏನೋ ಹೇಳದ್ರು. ಸರಿ ಆಪರೇಷನ್ ಶುರುವಾಯ್ತು, ಸತತ ನಾಲ್ಕು ತಾನು ಆಪರೇಷನ್ ನಡೆಯಿತು. ಏನೇ ಆದ್ರೂ ರೋಗಿ ಬದುಕೊಲ್ಲ ಅಂದಿದ್ದ ಡಾಕ್ಟಗಳಿಗೆ ಅಚ್ಚರಿ ಎಂಬಂತೆ ಆಪರೇಷನ್ ಸಕ್ಸಸ್ ಫಲ, ಇದೊಂದು ವೈದ್ಯಲೋಕದ ವಿಸ್ಮಯ
ಎಂದರು ಅವರೆಲ್ಲ.

ಎಲ್ಲರೂ ನಿರಾಳವಾಗಿ ಆಪರೇಷನ್ ಕೋಣೆಯಿಂದ ಹೊರಬಂದ ಖೇಮುವನ್ನು ’ಇದೆ ಹೇಗಾಯ್ತು. ನಿಮ್ಮ ಮಾವ ಆಪರೇಷನ್ಗೆ ಮುಂಚೆ ನಿಮ್ಮ ಕಿವಿಯಲ್ಲಿ ಏನೋ ಹೇಳಿದ್ರಂತೆ, ಏನು ಹೇಳಿದ್ರು’ ಅಂತ ಕೇಳಿದ್ರು ಆಸ್ಪತ್ರೆಯ ಸೀನಿಯರ್‌, ಡಾಕ್ಟರ್ಸ, ಅದಕ್ಕೆ ಖೇಮು ಹೇಳಿದ ’ಮಾವ ಹೇಳಿದ್ದು ಇಷ್ಟೆ, ನೋಡಪ್ಪ ಅಳಿಮಯ್ಯ, ನಾನು ನಿಮ್ಮ ಮಾವ ಅಂತ ನರ್ವಸ್ ಆಗ್ ಬೇಡ.

ಧೈರ್ಯವಾಗಿ ನನ್ ಕೆಲಸ ನೀನು ಮಾಡು, ಉಳಿದಿದ್ದು ದೇವರಿಗೆ ಬಿಟ್ಟಿದ್ದು, ಆದ್ರೆ ಒಂದ್ ಮಾತ್ ನೆನಪಿಟ್ಟೋ, ನಿಮ್ಮತ್ತೆಗೆ ನನ್ನ ಬಿಟ್ರೆ ಯಾರೂ ಇಲ್ಲ ನಾನು ಹೆಚ್ಚುಕಮ್ಮಿ ಆಗಿ ಸತ್ತು ಹೋದ್ರೆ, ಅವಳು ನಿಮ್ಮ ಮನೆಯ ಒಂದು ಇರ್ತಾಳೆ, ಅವಳನ್ನ ಚೆನ್ನಾಗಿ ನೋಡ್ಕೊಳಪ್ಪಾ’,

ಲೈನ್ ಮ್ಯಾನ್
ಶಾಸಕರಿಗೆ ಹಣ ಕೊಟ್ರೆ: ಆಪರೇಷನ್ ಕಮಲ
ಪತ್ರಕರ್ತರಿಗೆ ಹಣ ಕೊಟ್ರೆ: ಕೋ-ಆಪರೇಷನ್ ಕಮಲ

ಗಂಧದ ಗುಡಿ ನೋಡಿ ಬಂದವರು ಏನಂತಿದ್ದಾರೆ?
-ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ
-ಚಿತ್ರ’ಮಂದಿರ’ಗಳಲ್ಲಿ ಗಂಧದ ಗುಡಿ’
ದೇವರ ಹೆಸರು ಬಳಸಿಕೊಂಡು, ದೇವಸ್ಥಾನಗಳನ್ನು ಉದ್ಯಮವನ್ನಾಗಿ ಮಾಡಿಕೊಂಡಿರೋರ ಉದ್ಯೋಗ
-ಗುಡಿ ಕೈಗಾರಿಕೆ

ದೀಪಾವಳಿ ಸಮಯದ ಜ್ಞಾನೋದಯ
-ಲೈಫಲ್ಲಿ ಯಾರು, ಯಾವಾಗ, ಹೆಂಗ್ ಬತ್ತಿ ಇಡ್ತಾರೆ ಅಂತ ಬೇಕಾದ್ರೂ ಗೆಸ್ ಮಾಡ್ಬೋದು, ಆದ್ರೆ, ರೋಡಲ್ಲಿ ಯಾರು, ಎಲ್ಲಿ ಪಟಾಕಿ ಇಟ್ಟಿರ್ತಾರೆ ಅಂತ ಗೆಸ್ ಮಾಡೋದ್ ಕಷ್ಟ

ಪೊಲಿಟಿಕಲ್ ಡೌಟ್
-ದೇಶದ ೧೩೦ ಕೋಟಿ ಜನರ ಪರವಾಗಿ ಕೇಳ್ತಾ ಇದ್ದೀನಿ ಅಂತ ಮಾತಾಡ್ತಾರಲ್ಲ, ಇವ್ರಿಗೆಲ್ಲ ನಮ್ಮನ್ನು ಕೇಳದೇ, ನಮ್ಮ ಪರವಾಗಿ ಮಾತಾಡೋ ಅಧಿಕಾರ ಕೊಟ್ಟೋರು ಯಾರು?
ರಿಷಿ ಸುನಾಕ್ ಬ್ರಿಟನ್ ಪ್ರಧಾನಿ ಆದ್ಮೇಲೆ ನಮ್ಮ ಮಾಧ್ಯಮಗಳು ಮಾಡಿದ ಮೊದಲ ಕೆಲಸ
-ರಿಷಿ ಮೂಲ ಹುಡುಕೋದು

ನಾಲ್ಕು ಭಾಷೆಗಳ ಚಿತ್ರಗಳಲ್ಲಿ ನಟಿಸೋ ನಟ
-ಚತುರ್ಭಾಷಾ ನಟ
ನಾಲ್ಕು ಜನ ಮೆಚ್ಚುವಂಥ ಕನ್ನಡ ಮಾತಾಡೋ ನಟ ಸುಚೇಂದ್ರ ಪ್ರಸಾದ್
-ಚತುರ ಭಾಷಾ ನಟ
ಒಂದೇ ಘಟನೆಯನ್ನು ಮತ್ತೆ ಮತ್ತೆ ತೋರಿಸಿ ಕಿರಿಕಿರಿ ಮಾಡುವ ಟಿವಿ ಚಾನೆಲ್ ಗಳ ವರದಿ
-ಘಟ‘ನಾವಳಿ’
ವೆಯ್ಟ ಲಿಫ್ಟರ್ ಅಂದ್ರೇನು?
-ತೂಕ ಹೆಚ್ಚಿಸಿಕೊಳ್ಳುವವನು