Tuesday, 5th November 2024

ಮುಂದಿನ ಪೀಳಿಗೆಗೆ ನೀಡೋಣ ಸ್ವಚ್ಛ ಪ್ರಕೃತಿ

ಸಲಹೆ

ರವಿಶಂಕರ್‌ ಭಟ್‌

ನಾವು ಸೋಪ್, ಶಾಂಪೂ, ಹ್ಯಾಂಡ್ ವಾಶ್ ಮುಂತಾದ ಮಾರ್ಜಕಗಳಿಂದ ಉತ್ಪತ್ತಿಯಾಗುವ ನೊರೆಗೆ ಎಷ್ಟೊಂದು ಮಾರು ಹೋಗಿದ್ದೇವೆ ನೋಡಿ. ನೊರೆ ಹೆಚ್ಚಾಗಿ ಬಂದರೆ ಹೆಚ್ಚು ಶುಚಿಗೊಳ್ಳುತ್ತದೆ ಎಂಬುದು ನಾವು ನಮ್ಮ ಮನಸ್ಸಿನಲ್ಲಿ ಮಾಡಿಕೊಂಡ ಗ್ರಹಿಕೆ (ನಿಶ್ಚಯ), ಇದು ದಶಕಗಳಿಂದ ನಾವು ನೋಡಿದ ವರ್ಣರಂಜಿತ ಜಾಹೀರಾತುಗಳ ಪ್ರಭಾವ. ಹಾಗಾದರೆ ನೊರೆ ಜಾಸ್ತಿ ಬರಲು ಸೋಪ್- ಶಾಂಪೂ – ಹ್ಯಾಂಡ್ ವಾಶ್ ಇತರ ಮಾರ್ಜಕಗಳಲ್ಲಿ ಏನನ್ನು ಬಳಸುತ್ತಾರೆ? ಸಲ್ಫೇಟ್‌ಗಳನ್ನು ಸಾಬೂನಿನ ಉತ್ಪನ್ನಗಳಲ್ಲಿ ಯಥೇಚ್ಛವಾಗಿ ಬಳಸುವರು.

ಸಲ್ಫೇಟ್‌ಗಳು (Chemical surfactants ,detergents) ನೀರಿನ ಮೇಲ್ಮೆೆ ಸೆಳೆತವನ್ನು ಕಡಿಮೆಗೊಳಿಸಿ, ಕೊಳಕನ್ನು ವಿಲೀನಗೊಳಿಸಿ ಕೊಂಡು, ಕೊಳಕಾದ ವಸ್ತುವಿನ ಮೇಲ್ಮೆೆ ಯನ್ನು ಪೂರ್ತಿಯಾಗಿ ತೇವಗೊಳ್ಳುವಂತೆ ಮಾಡುತ್ತದೆ. ಇದು ವಸ್ತುವನ್ನು ಶುಭ್ರ ವಾಗಿಸುವಲ್ಲಿ ಸಹಕಾರಿ. ಸಲ್ಫೇಟ್‌ಗಳಲ್ಲದೆ ಇನ್ನು ಅನೇಕ ರಾಸಾಯನಿಕಗಳನ್ನು ಮಾರ್ಜಕಗಳಲ್ಲಿ ಬಳಸುತ್ತಾರೆ (ಉದಾಹರಣೆ ಬ್ಲೀಚರ್ಸ್, ಆಪ್ಟಿಕಲ್ ಬ್ರೈಟನರ್ಸ್, ಫೋಸ್ಪೇಟ್ಸ್‌ ಇತ್ಯಾದಿ ಇತ್ಯಾದಿ..) ಅವುಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದು ಕೊಳ್ಳೋಣ.

ಇಂದು ಹಲವರು ಅನುಭವಿಸುತ್ತಿರುವ ಚರ್ಮ ಸಂಬಂಧಿ ಕಾಯಿಲೆ, ಕೂದಲು ಉದುರುವಿಕೆ, ಕೂದಲು ತೆಳುಗೊಳ್ಳುವಿಕೆ ಎಲ್ಲವೂ ಸಲ್ಫೇಟ್‌ಗಳನ್ನೊಳಗೊಂಡ ಉತ್ಪನ್ನಗಳ ನಿರಂತರ ಬಳಕೆಯ ಪ್ರತಿಫಲ. ಅದೇ ರೀತಿ, ಜಲಮಾಲಿನ್ಯ – ಕೆರೆಯಲ್ಲಿನ ನೊರೆ (ಬೆಂಗಳೂರಿನ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ), ಜಲಜೀವ ಸಂಕುಲಗಳ ಮರಣ, ಭೂಮಾಲಿನ್ಯ ಇವು ಸಲ್ಫೇಟ್‌ಗಳ ಇನ್ನೊಂದು ಕೊಡುಗೆ.

ಹಾಗಾದರೆ ಸಲ್ಫೇಟ್‌ಗಳಿಗೆ ಪರ್ಯಾಯವಿಲ್ಲವೇ? ಇದೆ, ‘ಸ್ಯಾಪೊನಿನ್; ಇದು ನೈಸರ್ಗಿಕ ಮಾರ್ಜಕ ( Natural Surfactant), ಸ್ಯಾಪೊನಿನ್‌ಗಳು ಅಂಟುವಾಳಕಾಯಿ ಹಾಗೂ ಶೀಗೆಕಾಯಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ (ಇನ್ನೂ ಕೆಲವು ನೈಸರ್ಗಿಕ ವಸ್ತುಗಳಲ್ಲಿ ಸ್ಯಾಪೊನಿನ್ ಇದ್ದರೂ ಪ್ರಮಾಣ ಕಡಿಮೆ). ಅಂಟುವಾಳಕಾಯಿ ಹಾಗೂ ಶೀಗೆಕಾಯಿ ಪ್ರಕೃತಿ ನಮಗೆ ನೀಡಿದ ವರದಾನ.

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಇವುಗಳನ್ನು ಶುಚಿಗೊಳಿಸುವ ಪ್ರಕ್ರಿಯೆಯಲ್ಲಿ ಬಳಸುತ್ತಿದ್ದಾರೆ. ಸ್ಯಾಪೊನಿನ್‌ಗಳು
ನೀರಿನ ಮೇಲ್ಮೆೆ ಒತ್ತಡವನ್ನು ಕಡಿಮೆ ಮಾಡಿ (ಸಲ್ಫೇಟ್‌ಗಳಂತೆಯೇ) ಶುಚಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಇವುಗಳು ಸಲ್ಫೇಟ್‌ಗಳಂತೆ ಹಾನಿಕಾರಕವಲ್ಲ, ಕಡಿಮೆ ನೊರೆ ಉಂಟುಮಾಡುವುದು, ನೀರನ್ನು ಕಲುಷಿತಗೊಳಿಸುವುದಿಲ್ಲ, ಪರಿಸರ ಸ್ನೇಹಿ. ಇಂದೂ ಸಹ ಎಷ್ಟೋ ಹಿರಿಯರು ಶಾಂಪೂ ಬದಲಾಗಿ ಅಂಟುವಾಳ, ಶೀಗೆಕಾಯಿಯನ್ನು ಬಳಸುವುದುಂಟು. ಆದರೆ, ನಮ್ಮ ಆಧುನಿಕ ಜೀವನಶೈಲಿಯನ್ನೊಮ್ಮೆ (ಪಾಶ್ಚಾತ್ಯ ಎನ್ನಬಹುದೇ?) ಪರಿಶೀಲಿಸಿ, ನಾವು ನಮ್ಮ ದಿನಾರಂಭಿಸಿಸು ವುದೇ ರಾಸಾಯನಿಕ ದಂತ ಮಂಜನಗಳಿಂದ, ಆಮೇಲೆ ಸೋಪ್, ಶಾಂಪೂ, ಹ್ಯಾಂಡ್ ವಾಶ್ ಇತ್ಯಾದಿ ಇತ್ಯಾದಿ. ಎಲ್ಲವೂ ರಾಸಾಯನಿಕಮಯ!

ಇದೇ ಒಂದು ಪ್ರಮುಖ ಕಾರಣವನ್ನು ಇಟ್ಟುಕೊಂಡು, ನಾವು ನಮ್ಮ Biological Research Innovation Centre and Solutions – BRICSBiological Research Innovation Centre and Solutions – BRICS ಸಂಸ್ಥೆಯಲ್ಲಿ ಗಹನವಾದ ಸಂಶೋಧನೆ ನಡೆಸಿ, ಅಂಟುವಾಳ ಕಾಯಿ, ಶೀಗೆಕಾಯಿ ಹಾಗೂ ಇನ್ನಿತರೆ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ, ನೈಸರ್ಗಿಕ ಮಾರ್ಜಕಗಳನ್ನು ತಯಾರಿಸಿ ದ್ದೇವೆ.

EcoSwachh 3REcoSwachh 3R ನ್ಯಾಚುರಲ್ ಹೋಂ ಕೇರ್ ಪ್ರಾಡಕ್ಟ್ಸ್, EcoSattva3REcoSattva3R ನ್ಯಾಚುರಲ್ ಪರ್ಸನಲ್ ಕೇರ್ ಪ್ರಾಡಕ್ಟ್ಸ್‌ ಎಂಬ ಬ್ರಾಂಡ್ ಶೀರ್ಷಿಕೆಯಡಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳು ರಾಸಾಯನಿಕ ಮಾರ್ಜಕಗಳಷ್ಟೇ ಸಶಕ್ತ (In terms of cleaning ability), ಆದರೆ ಈ ಉತ್ಪನ್ನಗಳು ನಮಗೆ ಹಾಗೂ ನಮ್ಮ ಪರಿಸರಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ನಮ್ಮ ಕಂಪನಿಯ ಎಲ್ಲ ಸಾಬೂನು ಉತ್ಪನ್ನಗಳೂ ಕಡಿಮೆ ನೊರೆ ಉಂಟು ಮಾಡುವಂಥ ಉತ್ಪನ್ನಗಳು.

ನೆನಪಿಡಿ, ಅಂಟುವಾಳಕಾಯಿ, ಶೀಗೆಕಾಯಿ ದ್ರಾವಣವನ್ನು ನೀವೂ ಕೂಡ ನಿಮ್ಮ ಮನೆಯಲ್ಲಿ ಮಾಡಬಹುದು. ಆದರೆ ಯಾಂತ್ರಿಕ ಜೀವನದಲ್ಲಿ ಸಮಯದ ಅಭಾವ, ಲಭ್ಯತೆಯ ಕೊರತೆ, ಸರಿಯಾದ ಕ್ರಮ ಗೊತ್ತಿಲ್ಲದೇ ಇರುವುದು, ಮುಂತಾದ ಸಮಸ್ಯೆಗಳಿಂದ ಅನೇಕರಿಗೆ ಪರಿಸರದ ಬಗ್ಗೆ ಕಾಳಜಿ ಇದ್ದರೂ ಬೇರೆ ಉಪಾಯವಿಲ್ಲದೆ ರಾಸಾಯನಿಕ ಉತ್ಪನ್ನಗಳನ್ನು ಬಳಸು ತ್ತಿದ್ದಾರೆ.

ಅಂತವರು (ಹಾಗೂ ಎಲ್ಲರೂ) ನಮ್ಮ ಕಂಪನಿಯ ನ್ಯಾಚುರಲ್ ಕ್ಲೀನಿಂಗ್ ಪ್ರಾಡಕ್ಟ್‌‌ಗಳನ್ನು ಬಳಸಬಹುದು. ಈ ಮೂಲಕ ನಾವು ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛ ಸುಂದರ ಪ್ರಕೃತಿಯನ್ನು ನೀಡೋಣ.