Sunday, 15th December 2024

ಮಹಾರಾಷ್ಟ್ರದ ಉದ್ದಟತನಕ್ಕೆ ಕಡಿವಾಣ ಅಗತ್ಯ

ಭಾರತದಲ್ಲಿ ಒಂದು ಪ್ರದೇಶದದಿಂದ ಇನ್ನೊಂದು ಪ್ರದೇಶದಲ್ಲಿ ಆಚಾರ -ವಿಚಾರ, ಭಾಷೆ, ವೇಷ, ಆಹಾರ ಪದ್ಧತಿ ವಿಭಿನ್ನವಾಗಿದ್ದರು ದೇಶದ ವಿಚಾರಕ್ಕೆ ಬಂದಾಗ ಏಕತೆಯನ್ನು ಪ್ರತಿಯೊಬ್ಬರು ಪ್ರರ್ದಶಿಸುತ್ತಾರೆ.

ಇತ್ತೀಚಿಗೆ ಮಹಾರಾಷ್ಟ್ರದ ಗಡಿಯಲ್ಲಿನ ಕನ್ನಡ ಶಾಲೆಗಳಿಗೆ ಮಾರಾಠಿ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ವ್ಯವಸ್ಥಿತವಾಗಿ ಕನ್ನಡವನ್ನು ತುಳಿಯುವ ಪ್ರಯತ್ನವಾಗಿದ್ದು ಕನ್ನಡಿಗರು ಇದರ ವಿರುದ್ಧ ಹೋರಾಟ ಮಾಡುವುದು ಅನಿರ್ವಾಯವಾಗಿದೆ. ಭಾರತ ಸ್ವಾತಂತ್ರ್ಯವಾದ ಮೇಲೆ ಭಾಷಾ ಪ್ರಾಂತ್ಯಗಳ ರಚನೆಯಾಯಿತು. ಅದಕ್ಕೆ ಮೂಲ ಕಾರಣ ಆಂಧ್ರದ ಪೊಟ್ಟಿ ಶ್ರೀರಾಮುಲು, ೧೯೫೨ರಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯ ರಚನೆಗೆ ಒತ್ತಾಯಿಸಲಾಯಿತು, ಮಹಾತ್ಮ ಗಾಂಽಯ ಅನುಯಾಯಿಯಾಗಿದ್ದ ಚೆನ್ನೈನ ಪೊಟ್ಟಿ ಶ್ರೀರಾಮುಲು(ಅಮರಜೀವಿ ಶ್ರೀರಾಮುಲು) ೫೮ ದಿನಗಳ ಕಾಲ
ಅನ್ನಾಹಾರ ತ್ಯಜಿಸಿದರು ಹಾಗೂ ಕೊನೆಗೆ ಡಿಸೆಂಬರ್ ೧೫ರ ನಡುರಾತ್ರಿಯಲ್ಲಿ ಮರಣಹೊಂದಿದರು.

ಇದಾದ ನಂತರ ಭಾರತದ ಮೊಟ್ಟ ಮೊದಲ ಭಾಷಾವಾರು ಪ್ರಾಂತ್ಯವಾಗಿ ಆಂಧ್ರಪ್ರದೇಶ ಹುಟ್ಟಿಕೊಂಡಿತು. ಇದೆ ಸಮಯದಲ್ಲಿ ಕನ್ನಡ ಮಾತಾನಡುವ ಪ್ರದೇಶಗಳಲ್ಲಿ ಹೋರಾಟ ಮೈಸೂರು ರಾಜ್ಯವಾಗಿ ನಂತರ ಕರ್ನಾಟಕ ರಾಜ್ಯವಾಯಿತು, ಈ ಸಮಯದಲ್ಲಿ ಕನ್ನಡ ಬಾಷಿಕರು ಮಹಾರಾಷ್ಟ್ರದಲ್ಲಿ ಮತ್ತು ಮರಾಠಿ ಬಾಷಿಕರು ಕರ್ನಾಟಕದ ಪ್ರದೇಶಗಳಲ್ಲಿ ಉಳಿಯುವಂತಾಯಿತು. ನಂತರ ೧೯೫೬ ಭಾಷಾವಾರು ಪ್ರಾಂತ್ಯಗಳ ರಚನೆಯಾಯಿತು, ಈ ರಚನೆಯ ಉದ್ದೇಶ ಪ್ರಾದೇಶಿಕ ಭಾಷೆಗಳು ಉಳಿಯಬೇಕು, ಬೆಳೆಯಬೇಕು ಮತ್ತು ಅಭಿವೃದ್ಧಿ ಹೊಂದಬೇಕು ಎಂಬುದು.

ಮಕ್ಕಳು ಯಾವ ಭಾಷೆಯನ್ನಾದರೂ ಕಲಿಯಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಲಿ, ಆದರೆ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡವು ಮುಖ್ಯ ವಾಗಿರುತ್ತದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ೧೯೫೬ ರ ರಾಜ್ಯಗಳ ಮರುಸಂಘಟನೆ ಕಾಯಿದೆಯ ಪ್ರಕಾರ ರಾಜ್ಯ ಗಡಿಗಳನ್ನು
ಭಾಷಾವಾರು ರೇಖೆಗಳ ಮೇಲೆ ಪುನಃ ರಚಿಸಿದಾಗ, ಬೆಳಗಾವಿಯು ಹಿಂದಿನ ಮೈಸೂರು ರಾಜ್ಯದ ಭಾಗವಾಯಿತು. ಈ ಕಾಯಿದೆಯು ೧೯೫೩ ರಲ್ಲಿ ನೇಮಕ ಗೊಂಡ ನ್ಯಾಯಮೂರ್ತಿ ಫಜಲ್ ಅಲಿ ಆಯೋಗದ ಸಂಶೋಧ ನೆಗಳನ್ನು ಆಧರಿಸಿದೆ ಮತ್ತು ಎರಡು ವರ್ಷಗಳ ನಂತರ ತನ್ನ ವರದಿಯನ್ನು ಸಲ್ಲಿಸಿತು.

ಮರಾಠಿ ಪ್ರಾಬಲ್ಯವಿರುವ ಬೆಳಗಾವಿಯ ಭಾಗಗಳು ಮಹಾರಾಷ್ಟ್ರದಲ್ಲಿ ಉಳಿಯಬೇಕು ಎಂದು ಮಹಾರಾಷ್ಟ್ರ ಪ್ರತಿಪಾದಿಸುತ್ತಿರುವುದು ಎರಡು ರಾಜ್ಯಗಳ ನಡುವಿನ ಮುಖ್ಯ ವಿವಾದವಾಗಿದೆ. ಮಹಾರಾಷ್ಟ್ರ ಸರಕಾರ ಸದಾ ಗಡಿ ವಿವಾದ ತೆಗೆದು ಕನ್ನಡಿಗರಿಗೆ ನೋವುಂಟು ಮಾಡುತ್ತಲೆಯಿರುತ್ತದೆ. ಕರ್ನಾಟಕ ರಾಜ್ಯ ಶೇ.೬೦ ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದ್ದನ್ನು ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವುದು, ಗಡಿ ಭಾಗದಲ್ಲಿ ಕನ್ನಡಿಗರು ಹೆಚ್ಚಿರುವ ಪ್ರದೇಶದಲ್ಲಿ ಮರಾಠಿ ಅಧಿಕಾರಿಗಳನ್ನು ನೇಮಿಸುವ ಮೂಲಕ ಅಽಕಾರ ಸ್ಥಾಪಿಸಲು ಪ್ರಯತ್ನ ಪಡುವುದು ಮತ್ತು ಮಹಾರಾಷ್ಟ್ರದ ಚಂದಾಪುರದಲ್ಲಿ ಕಲ್ಲಿದ್ದಲು ಮಾಫಿಯಾದವರಿಂದ ಕರ್ನಾಟಕ ವಿದ್ಯುತ್ ಪ್ರಸರಣೆ ಇಲಾಖೆಯಲ್ಲಿನ ೪೦ ಅಧಿಕಾರಿಗಳ ಮೇಲೆ ದಾಳಿಮಾಡಿಸಿರುವುದು.

ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆಯಲ್ಲ. ಈಗ ಮಹಾರಾಷ್ಟ ಸರಕಾರ ಒಂದು ಹೆಜ್ಜೆ ಮುಂದೆ ಹೋಗಿ ಗಡಿ ಭಾಗದ ಸಾಂಗ್ಲಿ ಮತ್ತು ಸೊಪುರದ ಕನ್ನಡ ಶಾಲೆಗಳಿಗೆ ಮರಾಠಿ ಅಧಿಕಾರಿಗಳನ್ನು ನೇಮಿಸುವ ಮೂಲಕ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ಭವಿಷ್ಯದಲ್ಲಿ ಅಳಿಸಿ ಹಾಕುವ ಹುನ್ನಾರವನ್ನು ಮಹಾರಾಷ್ಟ್ರ ಸರಕಾರದ ಧೋರಣೆಯಾಗಿದೆ, ಇದನ್ನು ಕರ್ನಾಟಕ ಸರಕಾರ ತಡೆಯಬೇಕು ಮತ್ತು ಸರಕಾರಕ್ಕೆ ಎಲ್ಲ ಕನ್ನಡಿ ಗರು ಬೆಂಬಲ ನೀಡಬೇಕು. ೧೯೮೦ ರ ದಶಕದಲ್ಲಿ ಕನ್ನಡಕ್ಕಾಗಿ ಗೋಕಾಕ್ ಚಳುವಳಿ ನಡೆದು ಯಶ್ವಸಿ ಸಹ ಆಗಿತ್ತು, ಪ್ರಸ್ತುತ ಇಂತಹ ಚಳುವಳಿಯ ಅಗತ್ಯವಿದ್ದು ಕನ್ನಡ ಚಿತ್ರರಂಗ, ಕನ್ನಡ ಹೋರಾಟ ಸಂಘಟನೆಗಳು ಸರಕಾರಕ್ಕೆ ಬೆಂಬಲ ನೀಡುವ ಮೂಲಕ ಮಹಾರಾಷ್ಟ್ರ ಸರಕಾರದ ಕನ್ನಡ ಬಾಷೆಯ ಮೇಲಿನ ದೌರ್ಜನ್ಯವನ್ನು ತಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಾಡುವ ಮೂಲಕ ಕನ್ನಡವನ್ನು ರಕ್ಷಿಸಬೇಕು.

(ಲೇಖಕರು: ಸಂಶೋಧನಾ ವಿದ್ಯಾರ್ಥಿ, ಹವ್ಯಾಸಿ ಬರಹಗಾರರು)