ಪ್ರಚಲಿತ
ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರು
ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಸಂಬಂಧಿಸಿದಂತೆ ಹತ್ತು ಹಲವು ರೀತಿಯ ಗೊಂದಲಗಳು ನನ್ನನ್ನು ಕಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ಮುಂದೆ ಕೆಲವೊಂದು ವಿಷಯ ಗಳನ್ನು ಪ್ರಸ್ತಾಪಿಸಬೇಕಿದೆ.
ಸ್ವಾತಂತ್ರ್ಯ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಭಾರತದ ಜನರ ಸಂವಿಧಾನಾತ್ಮಕವಾದ ಬದುಕಿನ ಅನುಕೂಲಗಳಿಗೆ ತಕ್ಕಂತೆ ಹಲವಾರು ಹೊಸ ನಿಯಮ ಗಳನ್ನು ಜಾರಿಗೊಳಿಸಲಾಗಿದೆ ಹಾಗೂ ಇನ್ನಷ್ಟು ನಿಯಮಗಳನ್ನು ಮಾರ್ಪಾಟು ಗೊಳಿಸಲಾಗಿದೆ. ಇದರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೊಳಿಸಲಾದ ಬದಲಾವಣೆ ಗಳೂ ಪ್ರಮುಖವಾಗಿ ಸೇರಿದೆ. ಈ ಪೈಕಿ ಇದೀಗ ಭಾರತ ಸರಕಾರವು ಜಾರಿಗೊಳಿಸಲು ಹೊರಟಿರುವ ಹೊಸ ಶಿಕ್ಷಣ ನೀತಿ- 2020 ದೇಶದ ಸಂವಿಧಾನಾತ್ಮಕ ಆಶಯಗಳಿಗೆ ಮತ್ತು ಸಾಮಾಜಿಕ ನ್ಯಾಯದ ಕಲ್ಪನೆಗೆ ವ್ಯತಿರಿಕ್ತ ವಾಗಿದ್ದು ಶಿಕ್ಷಣದ ಮೂಲಕ ಸಾಧ್ಯವಾಗುವಂತಹ ಸಮೃದ್ಧ ಭಾರತದ ನಿರ್ಮಾಣಕ್ಕೆ ಪೂರಕ ವಾಗಿರದೇ ಮತ್ತೊಮ್ಮೆ ಬಹುತ್ವದ ಮೌಲ್ಯವನ್ನು ನಾಶ ಮಾಡುವ ಕೇಸರೀಕರಣದ ಉದ್ದೇಶವನ್ನು ಜಾರಿ ಗೊಳಿಸಲು ಹೊರಟಿದೆ.
ಇನ್ನು ಬದಲಾವಣೆ ಹೆಸರಿನಲ್ಲಿ ಬರುತ್ತಿರುವ ಈ ಹೊಸ ಶಿಕ್ಷಣ ನೀತಿಯು ಈ ದೇಶದ ಸಂವಿಧಾನಿಕ ಮೌಲ್ಯ ಗಳಿಗೆ ಅನುಸಾ_ರವಾಗಿ ರೂಪುಗೊಂಡಿರುವ ಶೈಕ್ಷಣಿಕ ಮಾದರಿಯನ್ನು ಹಾಳು ಮಾಡುವ ಮತ್ತು ಮನು ವಾದದ ಬಹುತೇಕ ರೀತಿಯ ನೀತಿಗಳನ್ನು ಶಿಕ್ಷಣ ವ್ಯವಸ್ಥೆ ಮೂಲಕ ಮಕ್ಕಳಲ್ಲಿ ಸೇರಿಸಲು ಮಾಡುತ್ತಿರು ವಂತಹ ಹುನ್ನಾರವಾಗಿದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಲು ಹೊರಟಿರುವ ಈ ಮಾರ್ಪಾಟುಗಳ ಬಗ್ಗೆ ಕೇಳಿದರೆ, ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಯನ್ನು ಕಾಲ ಕಾಲಕ್ಕೆ ಬದಲಿಸುತ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸುವುದಕ್ಕೆ ಪೂರಕವಾಗಿ ಈಗ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ ಎಂಬ ಮಾತನ್ನು ಸರಕಾರ ಹೇಳುತ್ತಿದೆ.
ಆದರೆ ಈ ಹಿಂದಿನ ಬದಲಾಣೆಗಳು ಮತ್ತು ಈಗಿನ ಬದಲಾವಣೆಯ ಸ್ವರೂಪವನ್ನು ಗಮನಿಸು ತ್ತಿದ್ದರೆ, ನಿಜಕ್ಕೂ ಒಮ್ಮೆ ಎಲ್ಲರೂ ಆತಂಕ ಪಡಬೇಕಾದಂತಹ ಸಂವಿಧಾನ ವಿರೋಧಿ ಉದ್ದೇಶ ವನ್ನು ಒಳಗೊಂಡಿದೆ. ದೇಶದ ಎಲ್ಲಾ ವರ್ಗದ ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕುವಂತಹ ಶಿಕ್ಷಣ ವ್ಯವಸ್ಥೆಯ ನೀತಿಯಲ್ಲಿ ಈ ಹಿಂದೆ ಉಂಟಾಗಿರುವ ಬದಲಾವಣೆಗಳು ಮತ್ತದರ ಉದ್ದೇಶವನ್ನು ಗಮನಿಸಬೇಕಿದೆ.
1968ರಲ್ಲಿ ಮೊದಲ ಬಾರಿ ಭಾರತದ ಪ್ರಧಾನ ಮಂತ್ರಿ_ಗಳಾಗಿದ್ದ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣವನ್ನು ಉತ್ತೇಜಿ_ಸುವ ಸಲುವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಯಿತು. 1968ರ ಶಿಕ್ಷಣ ನೀತಿಯು ದೇಶದ ಸಮಗ್ರ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ನೀತಿಗಳನ್ನು ರೂಪಿಸಿ, 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿ, ಅದಾದ 18 ವರ್ಷಗಳ ಬಳಿಕ ಶಿಕ್ಷಣ ಕ್ಷೇತ್ರದ ಆಧುನಿಕತೆಗೆ ಅನುಸಾರವಾಗಿ ಅಂದಿನ ಪ್ರಧಾನಿ ರಾಜೀವ್ ಗಾಂಽ ಅವರ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹತ್ತರ ಬದಲಾವಣೆಗಳು ಆದವು.
ಇದಾದ ತರುವಾಯ 1986 ರಲ್ಲಿ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ಜಾರಿಗೊಳಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯು ನಿಜಕ್ಕೂ ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಕ್ರಾಂತಿಕಾರಕ ನಡೆ. ಈ ವೇಳೆ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಯಿತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ರಾಜೀವ್ ಗಾಂಧಿಯವರು ಸ್ಕಾಲರ್ ಶಿಪ್ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಪರಿಶಿಷ್ಟ ಜಾತಿ ಸಮುದಾಯಗಳಿಂದಲೇ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳನ್ನು ಶಿಕ್ಷಕ ವೃತ್ತಿಗೆ ಬರುವಂತೆ ನಿಯಮಾ ವಳಿಗಳನ್ನು ರೂಪಿಸಿದರು. ಬಡ ಕುಟುಂಬದ ಮಕ್ಕಳು ದಿನನಿತ್ಯ ಶಾಲೆಗೆ ಬರಲು ಪೂರಕ ವಾಗುವಂತೆ ಪ್ರೋತ್ಸಾಹ ಧನ, ಹಾಸ್ಟೆಲ್ ವ್ಯವಸ್ಥೆ ಮತ್ತು ಇನ್ನಿತರ ಅನುಕೂಲಗಳನ್ನು ಜಾರಿಗೊಳಿಸಿದರು.
ಶಾಲೆಗೆ ಬರಲು ಸಾಧ್ಯವಾಗದ ಆದರೆ ಓದಲು ಆಸಕ್ತಿ ಉಳ್ಳ ಹೆಣ್ಣು ಮಕ್ಕಳಿಗಾಗಿ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯಗಳನ್ನು ತೆರೆದು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಲ್ಲರೂ ನೆನೆಸಿಕೊಳ್ಳ ಬಹುದಾದಂತಹ ಕ್ರಮಗಳನ್ನು ಜಾರಿಗೊಳಿಸಿದರು. ಇದೇ ಅವಧಿಯಲ್ಲಿ ದೇಶದ ಶಿಕ್ಷಣದ ಮೇಲೆ ಶೇ.6 ಜೆಡಿಪಿಯನ್ನು ವಿನಿಯೋಗಿಸಬೇಕೆಂಬ ಗಂಭೀರ ಆಲೋಚನೆಗಳು ಮುನ್ನಲೆಗೆ ಬಂದವು.
ಇನ್ನು 2005ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ಜಾರಿಗೊಳಿಸಲಾದ ಶಿಕ್ಷಣ ನೀತಿಯಲ್ಲಿನ ಬದಲಾವಣೆಗಳು ತಾಂತ್ರಿಕ ಶಿಕ್ಷಣವನ್ನು ಪಡೆಯುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳ ಮೂಲಕ ತಮ್ಮ ಮಗಳನ್ನು ಸಾಕಾರಗೊಳಿಸಿಕೊಳ್ಳುವಂತಹ ಅವಕಾಶ ವನ್ನು ಸೃಷ್ಟಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಪ್ರಸ್ತುತ ಜಾರಿಗೊಳಿಸಲು ಹೊರಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಬಹಳಷ್ಟು ಸಮಸ್ಯೆಯಿಂದ ಕೂಡಿದ್ದು ಪ್ರಜಾಪ್ರ ಭುತ್ವ ನೆಲದ ಬಹುತ್ವದ ಆಶಯಗಳನ್ನು ಹತ್ತಿಕ್ಕುವ ಮತ್ತು ಶಿಕ್ಷಣ ವ್ಯವಸ್ಥೆಯ ಮೂಲಕ ತಮ್ಮ ರಾಜಕೀಯ ಸಿದ್ಧಾಂತವನ್ನು ಮಕ್ಕಳಲ್ಲಿ ಬಿತ್ತಲು ಹೊರಟಿರುವ ಹೊತ್ತಿಗೆಯಂತಿದೆ.
ಮೊದಲನೆಯದಾಗಿ, ಬಾಲ್ಯದ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದನೇ ತರಗತಿಗೆ ಸೇರುವ ಮೊದಲು, ಮಕ್ಕಳು ಬಾಲವಾಟಿಗೆ ಹೋಗಬೇಕೆಂಬ ಆಲೋಚನೆಯನ್ನು ಮುಂದಿಡಲಾಗಿದೆ. ಆದರೆ ಈಗಾಗಲೇ ಇದೇ ಪದ್ಧತಿಗೆ ಅನುಸಾರವಾಗಿ ಜಾರಿಯಲ್ಲಿರುವ ಅಂಗನವಾಡಿ, ವ್ಯವಸ್ಥೆ ಇದ್ದರೂ ಬಾಲವಾಟಿಗೆ ಹೆಸರಿನಲ್ಲಿ ಹೆಚ್ಚಿನ ಗೊಂದಲವನ್ನು ಉಂಟು ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದು ನನಗೆ ತಿಳಿಯುತ್ತಿಲ್ಲ. ಎರಡನೆಯದಾಗಿ, ವೈವಿಧ್ಯಮಯ ಭಾಷೆ ಮತ್ತು ಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಭಾರತದ ಶಿಕ್ಷಣ ನೀತಿಯು ಎಲ್ಲರ ಬದುಕಿನ ರೀತಿ ನೀತಿಗಳನ್ನು ಪ್ರತಿನಿಽಸುವಂತೆ ಇರಬೇಕು. ಆದರೆ, ಕೇಂದ್ರ ಸರಕಾರವು ರೂಪಿಸಿದ ನೀತಿ ನಿರೂಪಣೆ ಸಮಿತಿಯಲ್ಲಿ ಕೇವಲ ಐದು ಮಂದಿ ಜನರಿದ್ದು ಈ ಪೈಕಿ ಕೇವಲ ಒಬ್ಬರೇ ಒಬ್ಬ ಶಿಕ್ಷಣ ತಜ್ಞರಿದ್ದು ಉಳಿದವರು ನಾಲ್ವರೂ ನಿವೃತ್ತ ಐಎಎಸ್ ಅಧಿಕಾರಿಗಳಾಗಿದ್ದು ಒಂದು ದೇಶದ ಶಿಕ್ಷಣ ವ್ಯವಸ್ಥೆಯನ್ನು ಇವರಷ್ಟೇ ಮಂದಿ ಹೇಗೆ ರೂಪಿಸಲು ಸಾಧ್ಯವೆಂಬ ಪಕ್ಷ ಅತ್ಯಂತ ಮುಖ್ಯವಾಗಿ ಕಾಡುತ್ತದೆ.
ಅಲ್ಲದೇ 5 ಜನರಲ್ಲಿ ನಾಲ್ವರು ದೆಹಲಿಯ ನಿವಾಸಿಗಳಾಗಿದ್ದು ಒಬ್ಬರು ಗುಜರಾತಿನವರಾಗಿದ್ದಾರೆ. ಅಲ್ಲದೇ ಹೆಸರಿಗೆ ಒಬ್ಬ ಮಹಿಳೆಯನ್ನು ನೇಮಿಸಿದ್ದು, 28 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿರುವ ಅಖಂಡ ಭಾರತವನ್ನು ಕೇವಲದಾರು ಮಂದಿ ತಜ್ಞರು ಹೇಗೆ ಪ್ರತಿನಿಧಿಸುತ್ತಾರೆ ಎಂಬುದು ನನ್ನಲ್ಲಿ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಆರ್.ಎಸ್.ಸುಬ್ರಮಣಿಯನ್ ಸಮಿತಿಯು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ನೀಡಲಾದ 230 ಪುಟಗಳ ವರದಿಯನ್ನು ಸಾರ್ವಜನಿಕರ ಚರ್ಚೆಗೆ ಬಿಡದೇ ಗುಟ್ಟಾಗಿ ಇಟ್ಟಿರುವುದರ ಉದ್ದೇಶವೇನು ಎಂಬುದನ್ನು ಸರಕಾರ ಹೇಳಬೇಕು.
ಇನ್ನು ಈ ಹಿಂದೆ ಅಂದರೆ 1968, 1986 ಮತ್ತು 2007ರ ಅವಧಿಯಲ್ಲಿ ಜಾರಿಗೊಳಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಯಾವೆಲ್ಲಾ ಬದಲಾವಣೆಗಳು ಸಂಭವಿಸಿವೆ ಮತ್ತು ಆ ಬದಲಾವಣೆಗಳನ್ನು ಹೊರತು ಪಡಿಸಿ ಮತ್ಯಾವ ಬದಲಾವಣೆಗಳನ್ನು ನಾವು ಜಾರಿಗೊಳಿಸಬೇಕು ಎಂಬುದರ ಕುರಿತು 2020ರಲ್ಲಿ ಏನನ್ನೂ ಹೇಳದ ಕಾರಣ, ಇದು ತನ್ನದೇ ಆದ ಒಂದಷ್ಟು ಅಜೆಂಡಾಗಳನ್ನು ಶಿಕ್ಷಣ ವ್ಯವಸ್ಥೆಯ ಮೂಲಕ ನಮ್ಮ ಮೇಲೆ ಒತ್ತಾಯ ಪೂರ್ವಕವಾಗಿ ಹೇರಲು ಬಂದಿ ರುವ ಶಂಕೆಯಿದೆ 7 ನೇ ಶತಮಾನದಲ್ಲಿ ಹರ್ಷವರ್ಧನನ ಆಸ್ಥಾನದ ಕವಿಯಾಗಿಯಾಗಿದ್ದ ಸಂಸ್ಕೃತ ಗದ್ಯ ಬರಹಗಾರ ಬಾಣಭಟ್ಟನ 64 ಕಲೆಗಳ ಉಲ್ಲೇಖವನ್ನು ಆಧರಿಸಿ ವೈಜ್ಞಾನಿಕ ವಿಷಯಗಳಾದ ಗಣಿತ ಮತ್ತು ಭೌತಶಾಸ್ತ್ರಕ್ಕೆ ಭಾರತದ ಮೂಲವಿದ್ದು ಬಾಣಭಟ್ಟನ ಕಾಲದಲ್ಲಿ ಉಲ್ಲೇಖಿಸಿದ ಸಂಗತಿಗಳನ್ನೇ ಈಗಿನ ಕಾಲದ ಶಿಕ್ಷಣ ವ್ಯವಸ್ಥೆಗೆ ಮರಳಿ ತರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.
ಆದರೆ ಹರ್ಷವರ್ಧನನ್ನು ಹೊಗಳಲು ಆತ ಆಸ್ಥಾನ ಕವಿಯಾಗಿದ್ದ ಸಂಸ್ಕೃತ ಬರಹಗಾರ ಹೇಳಿದ ವೈಜ್ಞಾನಿಕ ಉಲ್ಲೇಖಗಳನ್ನೇ ಈಗಿನ ಶಿಕ್ಷಣ ವ್ಯವಸ್ಥೆಗೆ ಅಳವಡಿಸಲು ಹೊರಡುವುದಾದರೆ ಭಾರತ ಮತ್ತು ಜಗತ್ತಿನ ಮಟ್ಟದಲ್ಲಿ ಉಂಟಾದ ವೈಜ್ಞಾನಿಕ ಸಂಶೋಧನೆ, ಅವಿಷ್ಕಾರಗಳನ್ನು ಹೇಗೆ ನೋಡಬೇಕು? ಇದು ವೈದಿಕಶಾಹಿಗಳ ವೈಜ್ಞಾನಿಕ ಮುಖವಾಡದಲ್ಲಿರುವ ಮೌಲ್ಯವನ್ನು ಜಾರಿ ಮಾಡಲು ಹೊರಟಿರುವ ಪ್ರಯತ್ನವಲ್ಲದೇ ಇನ್ನೇನು? ಆಧುನಿಕ ಶಿಕ್ಷಣ ವ್ಯವಸ್ಥೆಗೆ ರಾಜರ ಕಾಲದಲ್ಲಿದ್ದ ತಕ್ಷಶಿಲೆ ಮತ್ತು ನಳಂದಾ ವಿಶ್ವವಿದ್ಯಾಲಯದ ಶೈಕ್ಷಣಿಕ ಸಂಪ್ರದಾಯವನ್ನು ಜಾರಿಗೊಳಿಸುವ ಬಗ್ಗೆ ಮಾತನಾಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಯೆಂಬುದು ಯಾರೋ ಕೆಲವೇ ಉನ್ನತ ವರ್ಗಗಳ ಸ್ವತ್ತಾಗಿದ್ದ ಮತ್ತು ರಾಜ ಪ್ರಭುತ್ವದ ನಿಯಂತ್ರಣಕ್ಕೆ ಒಳಗಾಗಿದ್ದ ಕಾಲದ ಶೈಕ್ಷಣಿಕ ರೀತಿ ನೀತಿಗಳನ್ನು ಈಗ ಪ್ರಸ್ತಾಪಿಸುತ್ತಿರುವುದು ಪ್ರಜಾಪ್ರಭುತ್ವದ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಸಂಬಂಧ ಪಡದಂತಹ ಸಂಗತಿಯಾಗಿದೆ.
ಹೀಗಿದ್ದರೂ ಪ್ರಾಚೀನ ವ್ಯವಸ್ಥೆಯು ಈಗಿನ 21 ನೇ ಶತಮಾನತದ ಶಿಕ್ಷಣ ವ್ಯವಸ್ಥೆಗೆ ಹೊಂದುತ್ತದೆ ಎನ್ನುವ ಪ್ರಸ್ತಾಪವನ್ನು ಮುಂದಿಡುತ್ತಿರು_ವವರು ಅದು ವಸ್ತುನಿಷ್ಠವಾಗಿ ಹೇಳಬೇಕು.ಪದವಿಪೂರ್ವ ಶಿಕ್ಷಣ ವ್ಯವಸ್ಥೆಯನ್ನು 3 ರಿಂದ 4 ವರ್ಷಕ್ಕೆ ಏರಿಸುವ ಪ್ರಸ್ತಾಪವಿದ್ದು ಇಲ್ಲಿ ಸೂಕ್ತ ಪ್ರಮಾಣಪತ್ರ ದೊಂದಿಗೆ ನಿರ್ಗಮನ ಅವಕಾಶವನ್ನು ಕಲ್ಪಿಸುವ ಆಲೋಚನೆಯನ್ನು ಮುಂದಿಡಲಾಗುತ್ತಿದೆ. ಭಾಷೆ, ಸಾಹಿತ್ಯ, ಇತಿಹಾಸ, ರಾಜಕೀಯ, ಅರ್ಥಶಾಸ್ತ್ರ, ಸಮಾಜಶಾಸ್ತ್ರದಂತಹ ವಿಷಯ ಗಳಲ್ಲಿ ಯಾವ ರೀತಿಯಾಗಿ ಪ್ರಮಾಣಪತ್ರವನ್ನು ನೀಡ_ಲಾಗುತ್ತದೆ.
ಹೀಗೆ ನೀಡಿದರೆ ಅವರ ಮುಂದಿನ ಉದ್ಯೋಗ ಅವಕಾಶಗಳ ಪಾಡು ಏನಾಗಿರುತ್ತದೆ ಎಂಬುದರ ಕಲ್ಪನೆಯು ಸರಕಾರದ ಈ ನೀತಿಗೆ ಇದೆಯೇ ? ವಿಸ್ತತ ಅಧ್ಯಯನವು ಮುಖ್ಯವಾಗಿರುವ ಕಲಾ ವಿಷಯಗಳಿಗೆ ಮಧ್ಯ ನಿರ್ಗಮನದಂತಹ ದಾರಿಗಳು ಯಾವ ರೀತಿಯ ಜ್ಞಾನವನ್ನು ವೃದ್ಧಿ ಗೊಳಿಸುತ್ತವೆ ? ಸಾಮಾಜಿಕ ಆರ್ಥಿಕ ಅಸಮಾನತೆ ಕಾರಣಕ್ಕೆ ವಂಚಿತ ಸಮುದಾಯಗಳಿಂದ ಬಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣವು ಯಶಸ್ವಿಯಾಗಿ ಸಾಗಲು ಕಾಲೇಜು ಮತ್ತು ವಿಶ್ವವಿ ದ್ಯಾಲಯದಲ್ಲಿ ಉನ್ನತ ಮಟ್ಟದ ಬೆಂಬಲ ಕೇಂದ್ರವನ್ನು ಸ್ಥಾಪಿಸಿ ಅವರಿಗೆ ಹಣಕಾಸು ಮತ್ತು ಶೈಕ್ಷಣಿಕ ಬೆಂಬಲ ನೀಡಲಾಗುವುದೆಂದು ಹೇಳಲಾಗಿದೆ. ಆದರೆ ಈ ಬೆಂಬಲ ಕೇಂದ್ರಗಳ ನಿಯಂತ್ರಣ ವ್ಯವಸ್ಥೆ ಯಾರಿಗೆ ಸೇರಿರುತ್ತದೆ ಎಂಬುದನ್ನು ಸರಕಾರ ಸ್ಪಷ್ಟವಾಗಿ ತಿಳಿಸಬೇಕು.
ಇನ್ನು ತ್ರಿಭಾಷಾ ಸೂತ್ರದಲ್ಲಿ ಧ್ವನಿ ವಿಜ್ಞಾನ ಮತ್ತು ಉಚ್ಚಾರಣಾ ವಿಧಾನಗಳನ್ನ ಬರ ಮಾಡಿಕೊಳ್ಳಲು ಸಂಸ್ಕೃತವನ್ನು ಒಂದು ಭಾಷೆಯನ್ನಾಗಿ ಪರಿಗಣಿಸಿರುವುದು ನಿಜಕ್ಕೂ ಭಾಷೆಯೊಂದರ ಬಲವಂತದ ಹೇರಿಕೆಯಾಗಿದೆ. ಕಾರಣ ಧ್ವನಿ ವಿಜ್ಞಾನ ಮತ್ತು ಉಚ್ಚಾರಣಾ ವಿಧಾನಗಳು ಎಲ್ಲಾ ಭಾಷೆಯಲ್ಲೂ ಇದ್ದು ಒಂದು ರೀತಿಯಲ್ಲಿ ಮಾತೃಭಾಷೆಯನ್ನು ಕಡೆಗಣಿಸುವುದು ಮತ್ತು ದ್ರಾವಿಡ ಭಾಷೆಯ ಅಸ್ತಿತ್ವಕ್ಕೆ ಪೆಟ್ಟು ಕೊಡುವ ಮನುವಾದದ ತಂತ್ರವು ಇಲ್ಲಿ ಅಡಗಿದೆ. ಕೇಂದ್ರ ಸರಕಾರವು ರಾಷ್ಟ್ರೀಯ ಅಧ್ಯಾಪಕ ಶಿಕ್ಷಣ ಪರಿಷತ್ತಿನ ನಿಯಂತ್ರಣ ಅಧ್ಯಾಪಕರ ರಾಷ್ಟ್ರೀಯ ವೃತ್ತಿ ಮಾನದಂಡಗಳನ್ನು ರೂಪಿಸುವ ಜವಾಬ್ದಾರಿಯನ್ನು ನೀಡಲಾಗಿದ್ದು, ಈ ಪರಿಷತ್ತಿನ ಸದಸ್ಯರು ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಇನ್ನು ಬಹಳಷ್ಟು ಅಪಾಯಕಾರಿ ಎಂಬಂತೆ ಆರ್ಎಸ್ಎಸ್ನ ಮೂಲ ಶಿಕ್ಷಣ ಸಂಸ್ಥೆಗಳಾದ ರಾಷ್ಟ್ರೋತ್ಥಾನ ಪರಿಷತ್ತಿನ ಶಿಕ್ಷಕರು ಮತ್ತು ಅದರ ಮುಖ್ಯಸ್ಥರುಗಳು ನಿಯಮಿತವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಚರ್ಚೆಯಲ್ಲಿ ತೊಡಗಿ ತಮ್ಮ ಸಲಹೆಗಳನ್ನು ಸರಕಾರಕ್ಕೆ ನೀಡುತ್ತಿದ್ದಾರೆಂಬ ಮಾಹಿತಿಯಿದ್ದು, ಬಹುತ್ವವನ್ನು ನಾಶ ಮಾಡುವ ಹಿಂದುತ್ವದ ಬೀಜಗಳನ್ನು ಶಿಕ್ಷಣ ವ್ಯವಸ್ಥೆಯ ಮೂಲಕ ಜಾರಿ_ಗೊಳಿಸುವ ಕೇಂದ್ರ ಸರಕಾರದ ಅಪಾಯಕಾರಿ ಪ್ರಯತ್ನವಾಗಿದೆ. ಒಟ್ಟಾರೆಯಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ – 2020. ನಿಜಕ್ಕೂ ಪ್ರಜಾಪ್ರಭುತ್ವದ ಅಡಿಯಲ್ಲಿರುವ ಶಿಕ್ಷಣ ವ್ಯವಸ್ಥೆವನ್ನು ದುರ್ಬಲಗೊಳಿಸುವ ಮತ್ತು ಮೌಡ್ಯ ಮತ್ತು ಕೋಮು ವಾದದ ಬೀಜಗಳನ್ನು ಶಿಕ್ಷಣದ ವ್ಯವಸ್ಥೆಯ ಮೂಲಕ ಭವಿಷ್ಯದ ಮಕ್ಕಳಲ್ಲಿ ಗಟ್ಟಿಗೊಳಿಸಲು ಹೊರಟಿರುವ ಈ ಕೋಮುವಾದಿ ಸರಕಾರದ ಹುನ್ನಾರವಾಗಿದೆ.