Thursday, 12th December 2024

ಕೃತಕ ಬುದ್ದಿಮತ್ತೆಗಳು ಬರೀ ಕಂಪ್ಯೂಟರ್‌ಗಷ್ಟೇ ಅಲ್ಲ !

ಜ್ಞಾನ-ವಿಜ್ಞಾನ

ಪ್ರಕಾಶ್ ಕುಮಾರ್‌

ದಿನಪೂರ್ತಿ ಕೆಲಸದ ನಂತರ ನೀವು ಒಂದು ಉಲ್ಲಾಸಭರಿತ ವಾಕಿಂಗ್‌ಗಾಗಿ ಹೋಗುತ್ತಿದ್ದೀರಿ ಎಂದು ಭಾವಿಸಿರಿ. ದಾರಿಯ ಒಂದು ಬಸ್‌ಸ್ಟಾಪ್‌ನಲ್ಲಿ ಒಂದು ಕಸದ ಬುಟ್ಟಿ ತುಂಬಿ ಚೆಲ್ಲುತ್ತಿರುವುದನ್ನು ಗಮನಿಸುತ್ತೀರಿ. ಹಾಗೇ ಮುಂದುವರೆದು ನೀವು ಸಾರ್ವಜನಿಕ ಶೌಚಾಲಯ ಬಳಸಲು ಹೋಗು ತ್ತೀರಿ, ಆದರೆ ಮೂಗು ಮುಚ್ಚಿಕೊಳ್ಳುವಷ್ಟು ದುರ್ನಾತ ಬರುತ್ತದೆ.

ಭಾರತೀಯ ಸಾರ್ವಜನಿಕ ಪ್ರದೇಶಗಳು ದೀರ್ಘ ಕಾಲದಿಂದ ತ್ಯಾಜ್ಯ ಮತ್ತು ನಿಷ್ಕ್ರಿಯ ಉಪಯುಕ್ತತೆಗಳ ತಪ್ಪು ನಿರ್ವಹಣೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಜನರು ಹೊರಗಿರುವಾಗ ಸಾಮಾನ್ಯವಾಗಿ ನೀರನ್ನು ಕುಡಿಯದಿರುವುದು ಅಥವಾ ನೈಸರ್ಗಿಕ ಕರೆಯನ್ನು ಹಿಡಿದಿಟ್ಟುಕೊಳ್ಳು ವುಂತಹ ಹಾನಿಕಾರಕ ಕ್ರಮಗಳನ್ನು ಆಶ್ರಯಿಸುತ್ತಾರೆ. ಆದಾಗ್ಯೂ, ಅನೇಕರಿಗೆ ಬೇರೆ ಯಾವುದೇ ಆಯ್ಕೆಯಿಲ್ಲ. ನಗರಾದ್ಯಂತ ನೂರಾರು ಶೌಚಾಲಯ ಗಳಿರುವ ಕಾರಣ, ಮುನ್ಸಿಪಾಲಿಟಿಯವರೂ ಇದೆಲ್ಲರ ಮೇಲ್ವಿಚಾರಣೆ ಸಾಮರ್ಥ್ಯದಲ್ಲಿ ಕೊರತೆಯನ್ನು ಎದುರಿಸುತ್ತಾರೆ. ಆದರೆ ಇಂತಹ
ಅಸಮರ್ಪಕತೆಗಳಿಗೆ, ಇಂಟರ್ನೆಟ್ ಆಫ್ ಥಿಂಕ್ಸ್ ಹೊಂದಿದ ಸಾಧನಗಳು ಸಹಾಯ ಮಾಡಲಿವೆ.

ಐಒಟಿ ವ್ಯವಸ್ಥೆ ಒಂದು ಭೌತಿಕ ವಸ್ತುಗಳ ಗುಚ್ಚ, ಉದಾಹರಣೆಗೆ: ಸೆನ್ಸಾರ್‌ಗಳನ್ನು ಹೊಂದಿರುವ, ಡೇಟಾವನ್ನು ಉತ್ಪಾದಿಸುವ ಮತ್ತು ರವಾನಿಸುವ ಸ್ಮಾರ್ಟ್ ಡಸ್ಟ್‌ಬಿನ್‌ಗಳು, ಈ ದತ್ತಾಂಶದ ಆಧಾರದ ಮೇಲೆ ಕೇಂದ್ರೀಯ ವ್ಯವಸ್ಥೆಯು ಕಸ ಸಂಗ್ರಹ ಟ್ರಕ್ ಅನ್ನು ಕಳುಹಿಸುವುದೋ ಅಥವಾ ಟ್ರಕ್ ಅನ್ನು ಸಮಯಕ್ಕೆ ಸರಿಯಾಗಿ ನಿಯೋಜಿಸದಿದ್ದಕ್ಕಾಗಿ ಮಾರಾಟಗಾರರಿಗೆ ದಂಡ ವಿಧಿಸುವುದೋ ಎಂದು ನಿರ್ಧಾರ ತೆಗೆದುಕೊಳ್ಳುತ್ತದೆ.

ಸ್ಮಾರ್ಟ್ ಡಸ್ಟ್‌ಬಿನ್‌ಗಳು ಸಂವೇದಕಗಳನ್ನು ಹೊಂದಿರುವುದರಿಂದ, ಅವು ಪೂರ್ಣ ಸಾಮರ್ಥ್ಯವನ್ನು ತಲುಪಿದಾಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತವೆ. ಅಐ- ಆಧಾರಿತ ಕ್ಯಾಮೆರಾಗಳು ಡಸ್ಟ್‌ಬಿನ್‌ಗಳ ಸ್ಥಿತಿಯನ್ನು ಮಾತ್ರವಲ್ಲದೆ, ಅದರ ಸುತ್ತಮುತ್ತ ಕಸ ಹಾಕುವವರನ್ನು ಗುರುತಿಸುತ್ತವೆ.
ಇದೇ ರೀತಿ ಐಒಟಿ ಸೆನ್ಸಾರ್‌ಗಳು ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಯನ್ನು ಗುರುತಿಸುವುದಲ್ಲದೇ, ವಾಸನೆಯನ್ನು ಗ್ರಹಿಸುತ್ತವೆ. ಹಾಗೇ ಸಾರ್ವಜನಿಕ ಸ್ಥಳಗಳಲ್ಲಿನ ಜನಸಂಖ್ಯೆಯನ್ನು ಮಾನಿಟರ್ ಮಾಡಬಹುದು. ಇವೆ ಸ್ಮಾರ್ಟ್ ಸೆನ್ಸಾರ್‌ಗಳನ್ನು ಹೊಂದಿರುವ ಶೌಚಾಲಯಗಳು ಕೇಂದ್ರ ಸಂಸ್ಥೆಗೆ ದತ್ತಾಂಶವನ್ನು ಕಳಿಸಿದಾಗ, ಪೌರಾಧಿಕಾರಿಗಳಿಗೆ ಆ ಶೌಚಾಲಯದ ಸ್ವಚ್ಛತೆಯನ್ನು ಮಾನಿಟರ್ ಮಾಡುವುದು ಸುಲಭವಾಗುತ್ತದೆ. ಹಾಗೇ ಇದು ಪೌರ ಕಾರ್ಮಿಕರಿಗೆ ಕರೆ ಅಥವಾ ಮೆಸೇಜ್ ಮೂಲಕ ಅಲರ್ಟ್ ಮಾಡಬಹುದು.

ಹಾಗೇ ಇದು ಪೌರ ಅಧಿಕಾರಿಗಳು, ಗುತ್ತಿಗೆದಾರರು ಒಪ್ಪಂದದಂತೆ ಸರಿಯಾಗಿ ಸೇವೆ ನೀಡುತ್ತಿzರೆಯೇ ಎಂಬುದನ್ನು ತಿಳಿದು, ಸ್ವಚ್ಛತೆಗೆ ತಕ್ಕಂತೆ ಸಂಬಳವನ್ನು ನಿಗದಿ ಮಾಡಬಹುದು. ಈ ರಿಯಲ್ ಟೈಮ್ ಅಲರ್ಟ್‌ಗಳಿಂದ ಸಾರ್ವಜನಿಕ ಸ್ಥಳಗಳನ್ನು ಭೌತಿಕವಾಗಿ ಮಾನಿಟರ್ ಮಾಡುವ ಪ್ರಯಾಸ ತಪ್ಪಲಿದೆ. ನಗರ ಪ್ರದೇಶಗಳು ಜಗತ್ತಿನಾದ್ಯಂತ ಈ ಸ್ಮಾರ್ಟ್ ಶೌಚಾಲಯಗಳ ಮೇಲೆ ಬಂಡವಾಳ ಹೆಚ್ಚಿಸುತ್ತಿರುವುದಕ್ಕೆ ಇನ್ನೊಂದು ಕಾರಣವಿದೆ. ಐಒಟಿ ಮತ್ತು ಮಷೀನ್ ಲರ್ನಿಂಗ್ (ML) ಸಂಯೋಜಿತ ಶೌಚಾಲಯಗಳು ನಗರಗಳ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಗಳಲ್ಲಿ ಗಮನಾರ್ಹ ಬದಲಾವಣೆ ತರುವುದರ ಜೊತೆಗೆ ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ.

ಮಷೀನ್ ಲರ್ನಿಂಗ್ ಕೃತಕ ಬುದ್ಧಿಮತ್ತೆಯ(AI) ಒಂದು ರೂಪವಾಗಿದ್ದು, ಇದು ಮನುಷ್ಯರಂತೆ ದೊಡ್ಡ ಪ್ರಮಾಣದ ದತ್ತಾಂಶವನ್ನು ಸಂಗ್ರಹಿಸಿ,
ನಿಗದಿತ ನಮೂನೆಗಳನ್ನು ಗುರಿತಿಸಿ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಐಒಟಿ ಮತ್ತು ಮಷೀನ್ ಲರ್ನಿಂಗ್ ಸಾಧನಗಳು ಅಧಿಕಾರಿಗಳಿಗೆ ಸಾರ್ವಜನಿಕ ಆರೋಗ್ಯ ಮತ್ತು ರೋಗದ ಹರಡುವಿಕೆಯಲ್ಲಿ ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ. ಚರಂಡಿಗಳಲ್ಲಿನ ಸೆನ್ಸಾರ್‌ಗಳಿಂದ ಸಂಗ್ರಹಿಸಿದ ಮಾಹಿತಿ ಯಿಂದ ಮುಂಬರುವ ರೋಗಗಳನ್ನು ಮೊದಲೇ ಊಹಿಸಿ, ಸಿದ್ಧತೆ ಮಾಡಿಕೊಳ್ಳಬಹುದು. ಕೋವಿಡ್ ಸಮಯದಲ್ಲಿ, ವಿಜ್ಞಾನಿಗಳು ಚರಂಡಿಗಳಲ್ಲಿನ ಸೆನ್ಸಾರ್ ಮಾಹಿತಿಯಿಂದ ರೋಗದ ಹಬ್ಬುವಿಕೆ ದಿನಾಂಕವನ್ನು ಮೊದಲೇ ನಿಖರವಾಗಿ ಹೇಳುತ್ತಿದ್ದರು.

ಈ ಐಒಟಿ ಸೆನ್ಸಾರ್‌ಗಳು ವ್ಯಕ್ತಿಗಳಿಗೆ ವೈಯಕ್ತಿಕ ಸಲಹೆ ನೀಡಲು ಕೂಡ ಬಳಸಬಹುದು. ಶೌಚಾಲಯಗಳ ಬೌಲ್‌ಗಳಲ್ಲಿ ಸೆನ್ಸಾರ್ ಅಳವಡಿಸಿದರೆ, ಇದು ಬೆಳಗಿನ ಜಾವದ ಮೂತ್ರವನ್ನು ಶೋಧಿಸಿ, ಯಾವುದೇ ರೋಗದ ಮುನ್ಸೂಚನೆಯನ್ನು ಹೇಳಬಹುದು. ಇಂದಿನ ಸೆನ್ಸಾರ್‌ಗಳು ಮೂತ್ರದಲ್ಲಿನ ಹೆಚ್ಚಿನ ಸಕ್ಕರೆ ಅಥವಾ ಗ್ಲುಕೋಸ್‌ನ್ನು ಪತ್ತೆ ಹಚ್ಚುತ್ತವೆ. ಇವುಗಳನ್ನು ಮಷೀನ್ ಲರ್ನಿಂಗ್ ಜೊತೆ ಸಂಯೋಜಿಸಿದರೆ, ಸ್ಮಾರ್ಟ್ ಶೌಚಾಲಯಗಳು ಒಬ್ಬ ವ್ಯಕ್ತಿಯ ಆರೋಗ್ಯದ ಸ್ಥಿತಿಯನ್ನು ನಿಖರವಾಗಿ ಹೇಳಲಿವೆ. ಹಾಗೇ ಈ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಶೌಚಾಲಯ ಬಳಸುತ್ತಿರುವ ವ್ಯಕ್ತಿಯ ಮೊಬೈಲ್‌ಗೆ ಆಪ್ ಮೂಲಕ ಕಳುಹಿಸಬಹುದು. ಹಾಗೇ ಸಾರ್ವಜನಿಕ ಅಧಿಕಾರಿಗಳು ಈ ಮಾಹಿತಿಯನ್ನು ಕಲೆ ಹಾಕಿ, ಆ ಪ್ರದೇಶದ
ಜನರ ಅರೋಗ್ಯಕ್ಕಾಗಿ ಸುರಕ್ಷಿತ ಯೋಜನೆಗಳನ್ನು ಅಭಿವೃದ್ಧಿಪಡಿಸಬಹುದು.

ನಗರಗಳು ಎದುರಿಸುತ್ತಿರುವ ಹೊಸ ಸವಾಲುಗಳಲ್ಲಿ ಪ್ರಾದೇಶಿಕ ನೀರಿನ ಜಲಮೂಲಗಳ ಸಂರಕ್ಷಣೆಯೂ ಒಂದು. ಬಹುತೇಕ ಭಾರತೀಯ ನಗರ ಗಳು ಹೆಚ್ಚಿನ ಮಳೆಯನ್ನು ಪಡೆಯುತ್ತಿದ್ದರೂ, ತೀವ್ರಗತಿಯ ನಗರೀಕರಣ ಮತ್ತು ಘನತ್ಯಾಜ್ಯಗಳ ಅನಿಯಂತ್ರಿತ ವಿಸರ್ಜನೆಗಳಿಂದ ಸರೋವರ ಜಲಮಾಲಿನ್ಯ, ಕೃಷಿ ಮತ್ತು ಕೈಗಾರಿಕಾ ಮಾಲಿನ್ಯಗಳಿಂದ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ.

ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF)ವರದಿಯ ಪ್ರಕಾರ, ಜನಸಂಖ್ಯಾ ಹೆಚ್ಚಳ ಮತ್ತು ಹವಾಮಾನ ಬಿಕ್ಕಟ್ಟಿನಿಂದ ೨೦೫೦ರ ವೇಳೆಗೆ ೩೦ ಭಾರತೀಯ ನಗರಗಳು ನೀರಿನ ಅಪಾಯವನ್ನು ಎದುರಿಸಲಿವೆ. ಇದನ್ನು ತಪ್ಪಿಸಲು ಇರುವ ಒಂದೇ ದಾರಿಯಂದರೆ, ಜಲಮೂಲಗಳನ್ನು ಪುನಶ್ಚೇತನಗೊಳಿಸುವುದು. ಕೃತಕ ಬುದ್ಧಿಮತ್ತೆಗಳು ಈ ಕೆರೆಗಳ ಪುನಶ್ಚೇತನಗೊಳಿಸುವ ಕ್ರಿಯೆ ಯನ್ನು ಗಮನಾರ್ಹವಾಗಿ ಸುಧಾರಿಸಲಿವೆ. ಹಲವಾರು ಟೆಕ್ ಕಂಪನಿ ಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿ ನೀರಿನ ಸಂರಕ್ಷಣೆ ಮಾಡುತ್ತಿವೆ. ಈ ಕಂಪನಿಗಳು ಐಒಟಿ, ಸೆನ್ಸಾರ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿ ನೀರಿನ ಸರಂಕ್ಷಣೆಯನ್ನು ಹೇಗೆ ಮಾಡಲಿವೆ ಗೊತ್ತೇ? ಮಾನವನಿಂದಾಗುವ ಜಲ ಮಾಲಿನ್ಯ ತಡೆಯಲು ಪ್ರಮುಖವಾಗಿ
ಎರಡು ಹಂತಗಳಲ್ಲಿ ಕಾರ್ಯೋನ್ಮುಖರಾಗಬೇಕು. ನೀರಿನ ಗುಣ ಮಟ್ಟವನ್ನು ಮಾನಿಟರ್ ಮಾಡುವುದು ಮತ್ತು ನೀರಿನ ಗುಣಮಟ್ಟದ ಆಧಾರದ ಮೇಲೆ ಸೂಕ್ತ ಪರಿಹಾರಗಳನ್ನು ಕೈಗೊಳ್ಳುವುದು.

ಸಂರಕ್ಷಣೆಗಾರರು ಟೆಕ್ ಕಂಪನಿಗಳೊಂದಿಗೆ ಕೈ ಜೋಡಿಸಿ ಐಒಟಿ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಕೆರೆಗಳನ್ನು ರಕ್ಷಿಸಿಬಹುದು. ವಿಶಾಲ ಪ್ರದೇಶಗಳಲ್ಲಿ ವೈರ್ಲೆಸ್ ಸೆರ್ನ್ಸಾ ನೆಟ್ವರ್ಕ್‌ಳನ್ನು ಅಳವಡಿಸಿ, ನೀರಿನ ಗುಣಮಟ್ಟದ ಸೂಚಕಗಳಾದ ಕ್ಲೋರೋಫಿಲ, ಕರಗಿದ ಆಮ್ಲಜನಕದ ಪ್ರಮಾಣ ಮತ್ತು ನೈಟ್ರೇಟ್ ಪ್ರಮಾಣವನ್ನು ಮಾನಿಟರ್ ಮಾಡಬಹುದು. ನೀರಿನ ಗುಣಮಟ್ಟದ ಇನ್ನೊಂದು ಪ್ರಮಾಣ ವೆಂದರೆ, ಆ ನೀರಿನಲ್ಲಿ ವಾಸಿಸುವ ಜಲಚರಗಳ ಆಧಾರದ ಮೇಲೆ. ಬಯೋ ಸೆನ್ಸಾರ್ ಅಳವಡಿಸಿ, ಜಲಚರಗಳಗುವ ಅನೈಸರ್ಗಿಕ ಬದಲಾವಣೆಗಳ ಮೂಲಕ ನೀರಿನ ಮಾಲಿನ್ಯದ ಮುನ್ಸೂಚನೆ ಪಡೆಯಬಹದು. ಈ ಮಾಹಿತಿಯನ್ನು ಸಂಗ್ರಹಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೂಡ ಕೈಗೊಳ್ಳಬಹುದು. ಈ ಕ್ಷೇತ್ರದಲ್ಲಿನ ಇನ್ನೊಂದು ಅವಿಷ್ಕಾರವೆಂದರೆ, ಐಒಟಿ ಸೆನ್ಸಾರ್‌ಗಳನ್ನು ಬಳಸಿ ಸಾರ್ವಜನಿಕ ಶೌಚಾಲಯಗಳಲ್ಲಿ ನೀರಿನ ಮಿತ ಬಳಕೆ ಮಾಡಬಹುದು. ಇದನ್ನು
‘-ಶ್ರೂಮ’ನಂತಹ ಹಲವು ಸ್ಟಾರ್ಟ್ ಅಪ್‌ಗಳು ಈಗಾಗಲೇ ಅಳವಡಿಸಿಕೊಂಡಿವೆ.

ಈ ಐಒಟಿ ಸಾಧನಗಳು ನಗರ ವಾತಾವರಣಗಳಲ್ಲಿ ಸಾರ್ವಜನಿಕ ಸಂತೃಪ್ತಿಯನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿವೆ. ಇವು ನಗರ ಪ್ರದೇಶ ಗಳನ್ನು ಇನ್ನಷ್ಟು ಆರೋಗ್ಯಕರ, ಸುರಕ್ಷಿತ ಮತ್ತು ಸಮರ್ಥ ಗೊಳಿಸುವದರಲ್ಲಿ ಯಾವುದೇ ಶಂಕೆಯಿಲ್ಲ.