Saturday, 14th December 2024

ಸೂಕ್ಷ್ಮ ಸಂದರ್ಭದಲ್ಲಿ ವಿವೇಚನೆ ಇರಲಿ

ವಿಶ್ಲೇಷಣೆ

ರಮಾನಂದ ಶರ್ಮಾ

ಕಾಂಗ್ರೆಸ್ ಪಕ್ಷದಲ್ಲಿ ಏನೋ ಮಿಸ್ ಆದಂತಿದೆ. ಹೈಕಮಾಂಡ್‌ನ ಹಿಡಿತ ಕೂಡ ಸಡಿಲವಾದಂತೆ ಕಾಣುತ್ತದೆ. ಪಕ್ಷದ ಆಂತರಿಕ ಸಮಸ್ಯೆಗಳ ಬಗೆಗೆ ಬಹಿರಂಗ ಹೇಳಿಕೆ ನೀಡಬಾರದು, ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಬಾರದು ಎಂಬ ಹೈಕಮಾಂಡ್/ಹಿರಿಯ ನಾಯಕರ ಎಚ್ಚರಿಕೆ ಮತ್ತು ಸೂಚನೆಯ ಹೊರತಾಗಿಯೂ ಹೇಳಿಕೆಗಳು ಹೊರಬರುತ್ತಿರುವುದು ಪಕ್ಷಕ್ಕೆ ಮತ್ತು ಹೈಕಮಾಂಡ್‌ಗೆ ಮುಜುಗರ ಉಂಟುಮಾಡುತ್ತಿದೆ. ನಿಗಮ-ಮಂಡಳಿಗೆ ನೇಮಕದ ವಿಷಯ ದಿನೇದಿನೆ ಜಟಿಲವಾಗುತ್ತಿದ್ದು, ಹೊಸ ಸರಕಾರ ಅಧಿಕಾರ ವಹಿಸಿಕೊಂಡು ನವಮಾಸ ತುಂಬುತ್ತಿದ್ದರೂ ಇನ್ನೂ ಅದು ತಾರ್ಕಿಕ
ಅಂತ್ಯ ಕಾಣುತ್ತಿಲ್ಲ.

ಬಿಜೆಪಿ ಸರಕಾರದ ಸಮಯದಲ್ಲಿ ನಗೆಪಾಟಲಿಗೆ ಈಡಾಗಿದ್ದ ಈ ನೇಮಕಾತಿ ಪ್ರಹಸನವು ಇನ್ನೂ ‘ಇಂದಲ್ಲ ನಾಳೆ’ ಘಟ್ಟದಲ್ಲಿಯೇ ಇದ್ದು, ಲೇವಡಿ ಮಾಡಲು ಬಿಜೆಪಿಯವರಿಗೆ ಭರಪೂರ ಆಹಾರ ಒದಗಿಸಿದೆ. ಹೈಕಮಾಂಡ್‌ನ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಽಕ್ಕರಿಸಿ ಮುಖ್ಯಮಂತ್ರಿಗಳ ಅಽಕಾರಾವಽ ಬಗೆಗೆ ಹೇಳಿಕೆಗಳನ್ನು ನೀಡಿ ವಿವಾದವನ್ನು ಜೀವಂತವಾಗಿಡುವ ಪ್ರಹಸನ ಮುಂದುವರಿದಿದೆ. ಈ ವಿಷಯವನ್ನು ಕೆಲವರು ಇನ್ನೂ ಚಾಲ್ತಿ ಯಲ್ಲಿ ಇಡುತ್ತಿರುವಂತೆ, ಉಪಮುಖ್ಯಮಂತ್ರಿಗಳ ನೇಮಕಾತಿ ಯನ್ನು ಕೆಲವರು ಕೆದಕುತ್ತಿದ್ದಾರೆ.

ಹೆಚ್ಚುವರಿ ಡಿಸಿಎಂಗಳ ನೇಮಕಾತಿ ಅಜೆಂಡಾ ನಮ್ಮ ಮುಂದಿಲ್ಲ ಎಂದು ಹೈಕಮಾಂಡ್ ಸ್ಪಷ್ಟೀಕರಿಸುತ್ತಿದ್ದರೂ, ಭೋಜನಕೂಟದ ಹೆಸರಲ್ಲಿ ಕೆಲವರು ಒಗ್ಗೂಡಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಮೂವರು ಡಿಸಿಎಂಗಳಿದ್ದರೆ ಆಡಳಿತಕ್ಕೆ ಹೆಚ್ಚಿನ ಅನುಕೂಲ ಮತ್ತು ಲೋಕಸಭಾ ಚುನಾವಣೆಯನ್ನು ಗೆಲ್ಲಲು ಸಹಾಯಕಾರಿ ಎನ್ನುವ ವಾದ ಬೇರೆ. ಹೆಚ್ಚುವರಿ ಡಿಸಿಎಂ ವಿಷಯವನ್ನು ಇಲ್ಲಿಗೇ ಬಿಡಬೇಕು ಎಂದು ಫರ್ಮಾನು ಹೊರಡಿಸಿರುವ ಹೈಕಮಾಂಡ್, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲುವತ್ತ ಶ್ರಮಿಸ ಬೇಕೆಂದು ಕರೆನೀಡಿದೆ.

ಮಂತ್ರಿಗಳ ಕ್ಷೇತ್ರದಲ್ಲಿ ಸೋತರೆ ಸಂಬಂಧಿತ ಮಂತ್ರಿಯ ತಲೆದಂಡ ಖಚಿತ ಎಂಬ ಸಂದೇಶವನ್ನೂ ರವಾನಿಸಿದೆ. ಈಗ ಡಿಸಿಎಂ ನೇಮಕಾತಿಗೆ ಮುಂದಾ ದರೆ ಅದು ಜೇನುಗೂಡಿಗೆ ಕೈಹಾಕಿದಂತಾಗುತ್ತದೆ ಎಂಬ ಸತ್ಯವನ್ನು ಹೈಕಮಾಂಡ್ ಅರಿತಂತಿದೆ. ಅದು ಸಹಜವೂ ಹೌದು; ಯಾವುದೇ ರಾಜಕೀಯ ಪಕ್ಷಕ್ಕೆ ಚುನಾ ವಣೆಯನ್ನು ಗೆಲ್ಲುವುದಕ್ಕಿಂತ ಮಹತ್ವದ ಬೇರಾವ ವಿಷಯವೂ ಇರುವುದಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುವಂತೆ ಸುಮಾರು ೧೦ ಮಂತ್ರಿಗಳಿಗೆ ಹೈಕಮಾಂಡ್ ಸೂಚಿಸಿದೆಯಂತೆ; ಆದರೆ, ಮಂತ್ರಿ ಪದವಿ ಬಿಟ್ಟು ಹೀಗೆ ಸ್ಪಸ್ಪರ್ಧಿಸಲು ಯಾರಲ್ಲೂ ಅಂಥ ಉತ್ಸಾಹವಿಲ್ಲ ಎನ್ನಲಾಗುತ್ತಿದೆ. ಒಂದೊಮ್ಮೆ ಗೆದ್ದರೆ, ಅವರ ಮಕ್ಕಳಿಗೆ ಅಥವಾ ಅವರು ಸೂಚಿಸಿದ ವರಿಗೆ ವಿಧಾನಸಭಾ ಕ್ಷೇತ್ರ ದಲ್ಲಿ ಸ್ಪಸ್ಪರ್ಧಿಸಲು ಅವಕಾಶ ನೀಡುವ ಭರವಸೆಯನ್ನೂ ಕೊಟ್ಟಿದ್ದರೂ ಯಾರೂ ಮುಂದೆ ಬರುತ್ತಿಲ್ಲ ಎಂಬುದು ಲಭ್ಯಮಾಹಿತಿ. ತಮ್ಮ ಬದಲಿಗೆ ತಮ್ಮ ಮಕ್ಕಳಿಗೇ ಲೋಕಸಭಾ ಟಿಕೆಟ್ ನೀಡಿ ಎಂದು ಕೆಲ ಮಂತ್ರಿಗಳು ಹೇಳುತ್ತಿದ್ದಾರಂತೆ. ರಾಜ್ಯಕ್ಕೆ ಯಾರೇ ಇರಲಿ, ಆದರೆ ದೆಹಲಿಗೆ ಮೋದಿ ಖಚಿತ ಎಂಬಂತಿರುವ ರಾಜಕೀಯ ವಾತಾವರಣವನ್ನು ಅವರು ಗ್ರಹಿಸಿರಬೇಕು ಎಂಬುದು ವೀಕ್ಷಕರ ಅಭಿಪ್ರಾಯ.

ರಾಜಕಾರಣಿಗಳು ಚುನಾವಣೆಗೆ ಸ್ಪಽಸುವಾಗ ಹುಂಬತನ ತೋರಿಸದೆ, ಗೆಲುವಿನ ಸಾಧ್ಯಾಸಾಧ್ಯತೆಗಳನ್ನು ಎಲ್ಲ ಆಯಾಮ ಗಳಿಂದಲೂ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಈ ನಿಟ್ಟಿನಲ್ಲಿ ಅವರು ಮಾಧ್ಯಮ ವರದಿಗಳು, ರಾಜಕೀಯ ಪಂಡಿತರ ವಿಶ್ಲೇಷಣೆಗಳು, ಇತ್ತೀಚೆಗೆ ಸಾಮಾನ್ಯವಾಗಿರುವ ಚುನಾವಣಾ
ಪೂರ್ವ ಸಮೀಕ್ಷೆಗಳನ್ನು ನೆಚ್ಚುವುದರ ಜತೆಗೆ, ಜ್ಯೋತಿಷಿಗಳನ್ನೂ ಗೋಪ್ಯವಾಗಿ ಭೇಟಿಮಾಡಿ ಸಲಹೆ ಪಡೆಯುತ್ತಾರೆ. ಕೆಲವರು ಏಜೆನ್ಸಿಗಳಿಂದ ಸಮೀಕ್ಷೆ ಮಾಡಿಸಿ ಮತದಾರರ ಒಲವು ಅರಿಯಲು ಯತ್ನಿಸುವುದೂ ಉಂಟು.

ಕಾರಣ, ಚುನಾವಣೆಯೆಂಬುದೀಗ ಒಂದು ರೀತಿಯಲ್ಲಿ ಬಿಜಿನೆಸ್ ಆಗಿಬಿಟ್ಟಿದ್ದು, ರಿಟರ್ನ್ಸ್‌ನ ಖಾತ್ರಿಯಿಲ್ಲದೆ ಯಾರೂ ಈ ಅಖಾಡಕ್ಕೆ ಧುಮುಕುವುದಿಲ್ಲ. ಹೀಗಾಗಿ ಸಕಾರಾತ್ಮಕ -ಲಿತಾಂಶದ ಭರವಸೆ ಇದ್ದಾಗ ಮಾತ್ರವೇ ಅವರು ಮುಂದುವರಿಯುತ್ತಾರೆ. ರಾಜ್ಯದ ಪ್ರಸಕ್ತ ರಾಜಕೀಯ ವಾತಾವರಣವು ೨೦೨೩ರ ಮೇ ತಿಂಗಳಲ್ಲಿ ಇದ್ದಂತೆ ಇಲ್ಲ. ‘ಗ್ಯಾರಂಟಿ ಅಲೆ’ ಕ್ರಮೇಣ ತಗ್ಗುತ್ತಿದೆ. ಗ್ಯಾರಂಟಿಗಳ ಭರಾಟೆಯಲ್ಲಿ ಅಭಿವೃದ್ಧಿ ಹಳಿತಪ್ಪಿದೆ ಎಂಬ ಮಾತಿನ ಜತೆಗೆ ಅನುದಾನದ ಕೂಗು ಮಾರ್ದನಿಸುತ್ತಿದೆ. ಆದರೆ ಆಂತರಿಕ ಸಂಘರ್ಷದಲ್ಲೇ ಮುಳುಗಿರುವ ರಾಜ್ಯ ಬಿಜೆಪಿ, ಈ ವಿಷಯದಲ್ಲಿ ಅಷ್ಟೊಂದು ಜೋರಾಗಿ ಗರ್ಜಿಸುತ್ತಿಲ್ಲವಷ್ಟೇ.

ಮತ್ತೊಂದೆಡೆ, ‘ಅಯೋಧ್ಯೆ ಪರ್ವ’ದಿಂದಾಗಿ ದೇಶಾದ್ಯಂತ ಭಾರಿ ಸಂಚಲನೆ ಸೃಷ್ಟಿಯಾಗಿದೆ. ರಾಮಮಂದಿರದ ಉದ್ಘಾಟನೆಯ ಗಳಿಗೆಯನ್ನು ಎದುರು ನೋಡುತ್ತಿರುವ ಜನರಲ್ಲಿ ಒಂದು ರೀತಿಯ ಹಬ್ಬದ ಸಂಭ್ರಮ ಮನೆಮಾಡಿದೆ. ಇದು ಒಂದು ಧರ್ಮ ಅಥವಾ ಪಂಗಡದ ಹಬ್ಬವಾಗದೇ, ಸಮಸ್ತ ಭಾರತೀಯರ ಸಂಭ್ರಮಾಚರಣೆಯಾಗುತ್ತಿದೆ ಹಾಗೂ ೨೦೧೪ ಮತ್ತು ೨೦೧೯ರ ಮೋದಿ ಅಲೆಯನ್ನೂ ಮೀರಿಸಿದೆ.

ಜನರೇ ಈ ಸಡಗರದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿರುವಾಗ ಕಾಂಗ್ರೆಸ್ ಪಕ್ಷವು ‘ಇದು ಆರೆಸ್ಸೆಸ್‌ನ, ಒಂದು ಪಕ್ಷದ ಸಮಾರಂಭ’ ಎಂದೆಲ್ಲಾ ಆರೋಪಿಸಿ ಸಮಾರಂಭದ ಆಮಂತ್ರಣವನ್ನು ನಿರಾಕರಿಸಿರುವುದು, ೧೪೦ ಕೋಟಿ ಭಾರತೀಯರ ಭಾವನೆ ಮತ್ತು ಪ್ರಜ್ಞೆಯನ್ನು ಚುಚ್ಚಿದೆ ಎನ್ನಬಹುದು. ಈ ನಿರಾಕರಣೆಯು ಒಂದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರುವಂಥ ಸಂಗತಿಯಲ್ಲ. ರಾಮಮಂದಿರದ ಉದ್ಘಾಟನೆಯ ದಿನದಂದು ರಾಜ್ಯದ ಎಲ್ಲಾ
ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಬೇಕೆಂದು ರಾಜ್ಯ ಸರಕಾರ ನಿರ್ದೇಶನ ನೀಡಿದ್ದರೂ, ಕಾಂಗ್ರೆಸ್‌ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಧಿನಾಯಕಿ ಸೋನಿಯಾ ಗಾಂಧಿಯವರು ಆಮಂತ್ರಣವನ್ನು ನಿರಾಕರಿಸಿರುವುದು ಪಕ್ಷಕ್ಕೆ ಕಪ್ಪುಚುಕ್ಕೆಯಾಗಿದೆ; ಕಾಂಗ್ರೆಸ್ ಹಿಂದೂ-ವಿರೋಧಿ ಎಂಬ ಆರೋಪಕ್ಕೂ ಇದು ಇಂಬು ನೀಡುತ್ತಿದೆ. ಬಿಜೆಪಿಯು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮತಗಳ ಧ್ರುವೀಕರಣ ಮಾಡಿ ಕೊಳ್ಳುವುದರಲ್ಲಿ ಸಂದೇಹವಿಲ್ಲ. ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಸೇರದೇ ಹೀಗೆ ತನ್ನದೇ ಹಾದಿಯಲ್ಲಿ ಸಾಗುತ್ತಿರುವ ಕಾಂಗ್ರೆಸ್, ಅಧಿಕಾರದ ಗದ್ದುಗೆ ಹಿಡಿಯಲು ಕೇವಲ ಒಂದು ಸಮಾಜದ ಮತಗಳಷ್ಟೇ ಸಾಕಾಗುವುದಿಲ್ಲ ಎಂಬ ಸತ್ಯವನ್ನು ಅರಿಯಬೇಕಿತ್ತು.

ಖರ್ಗೆ ಮತ್ತು ಸೋನಿಯಾರ ನಿಲುವಿಗೆ ಪಕ್ಷದ ಹಲವರ ಸಹಮತವಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಅವರಿಬ್ಬರ ನಿಲುವು ಪಕ್ಷದ ನಿಲುವು ಆಗಿರುವುದರಿಂದ, ಮುಂಬರುವ ಚುನಾವಣೆಯಲ್ಲಿ ಅದರಿಂದಾಗಿ ಕಾಂಗ್ರೆಸ್‌ಗೆ ಒಂದಷ್ಟು ಹಾನಿಯಾಗಬಹುದು. ಪಕ್ಷದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಸನ್ನಿಹಿತವಾಗಿರುವಾಗ, ಮತದಾರರ ಒಲವು ಯಾವ ಕಡೆಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಕಾಂಗ್ರೆಸ್ ವಿವೇಚನಾಯುತ ಹೇಳಿಕೆ ನೀಡಬಹುದಿತ್ತು, ನಡೆದುಕೊಳ್ಳಬಹುದಿತ್ತು.

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)