Thursday, 12th December 2024

ಕಾಂಗ್ರೆಸ್ಸಿಗರ ಇತಿಹಾಸ ಜ್ಞಾನ ಮೊಣಕಾಲಿನ ಮಟ್ಟಕ್ಕೆ !?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಮುಸಲ್ಮಾನರಿಗಾಗಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನ ಮಂತ್ರವಾಗಿದ್ದ ‘ವಂದೇಮಾತರಂ’ ಉದ್ಘರಿಸುವುದಿಲ್ಲ. ಹೆತ್ತಮ್ಮನಿಗೆ ಅಮ್ಮಾ ಎಂದಂತೆ ಭಾರತಮಾತೆಗೆ ಜೈ, ಭುವನೇಶ್ವರಿಗೆ ಜೈಕಾರವನ್ನೂ ಹಾಕಲಾಗದ ಹೇಡಿಗಳ ಬಾಳು ಬಾಳುತ್ತಿದ್ದಾರೆ. ಮುಸಲ್ಮಾನರಿಗೆ ನೋವಾಗುತ್ತದೆಂದು ನಮ್ಮ ಯೋಧರನ್ನೇ ಅವಮಾನಿಸು ತ್ತಾರೆ.

1947 ರಲ್ಲಿ ಗಾಂಧಿಗೆ ಮಹಮದ್ ಅಲಿ ಜಿನ್ನಾ ಗಿಣಿಗೆ ಹೇಳಿದ ಹಾಗೆ ಹೇಳುತ್ತಾನೆ; ‘ಬೇಡ ಗಾಂಧೀಜಿ ಹಿಂದೂ ಮುಸ್ಲಿಂ ಭಾಯಿಭಾಯಿ ಆಗಿರಲು ಸಾಧ್ಯವಿಲ್ಲ, ಭಾರತದಲ್ಲಿರುವ ಮುಸಲ್ಮಾನ ರನ್ನೆಲ್ಲ ಪಾಕಿಸ್ತಾನಕ್ಕೆ ಕಳಿಸಿಬಿಡಿ, ಅಲ್ಲಿರುವ ಹಿಂದೂಗಳನ್ನೆಲ್ಲ ಭಾರತಕ್ಕೆ ಕರೆಸಿಕೊಳ್ಳಿ, ನಮ್ಮದು ಮುಸ್ಲಿಂರಾಷ್ಟ್ರ, ನಿಮ್ಮದು ಹಿಂದೂರಾಷ್ಟ್ರವಾಗಿದ್ದರೇನೇ ಎರಡೂ ಧರ್ಮಕ್ಕೂ ಒಳ್ಳೆಯದು, ದಯಮಾಡಿ ಒಪ್ಪಿಕೊಳ್ಳಿ’ ಎಂದು ಅಂಗಲಾಚುತ್ತಾನೆ. ಆದರೆ ಸ್ವಾತಂತ್ರ್ಯ ಬಂದಮೇಲೆ ಕಾಂಗ್ರೆಸನ್ನು ವಿಸರ್ಜಿಸಿ ಎಂದಿಂದ ಗಾಂಧಿಗೆ ಸ್ವತಃ ತಮ್ಮ ಚಳವಳಿಯನ್ನೇ ವಿಸರ್ಜಿಸಲು ಮನಸ್ಸಾಗದೆ ಜತೆಗೆ ಅಗತ್ಯಕ್ಕಿಂತ ದುಬಾರಿಯಾದ ಶಾಂತಿ, ಅಹಿಂಸೆ, ಹಿಂದೂಮುಸ್ಲಿಂ ಭಾಯಿಭಾಯಿ ಸಿದ್ಧಾಂತ ದಿಂದ ಅಲಂಕೃತಗೊಂಡಿದ್ದರು.

ಹೀಗಾಗಿ ‘ಪಾಕಿಸ್ತಾನದಲ್ಲಿರುವ ಹಿಂದೂಗಳ ಕತೆ ನನಗೆ ಬೇಡ, ಇಲ್ಲಿರುವ ಒಬ್ಬ ಮುಸಲ್ಮಾನ ನನ್ನೂ ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ’ ಎಂದು ನಿರಾಕರಿಸಿಬಿಟ್ಟರು. ಕೊನೆಗೆ ‘ನಿಮ್ಮ ಹಣೆಬರಹ’ ಎಂದುಕೊಂಡು ಜಿನ್ನಾ ಹೊರಟಿದ್ದು ಇತಿಹಾಸ. ಮುಂದೆ ಪಾಕಿಸ್ತಾನಲ್ಲಿ ಲಕ್ಷಾಂತರ ಹಿಂದೂಗಳ ಮೇಲೆ ಅತ್ಯಾಚಾರ, ಹತ್ಯಾಕಾಂಡಗಳಾಗಿ ಗೂಡ್ಸ್ ರೈಲಿನಲ್ಲಿ ಹಿಂದೂಗಳ ಹೆಣಗಳು ಭಾರತದೊ ಳಕ್ಕೆ ಬೀಳುತ್ತಿರುವಾಗ ನಮ್ಮ ಗಾಂಧಿ ಮಹಾತ್ಮ ‘ಹೊಸದಾಗಿ ಸಂಸಾರ ಕಟ್ಟಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ಭಾರತ ೫೫ಕೋಟಿ ಹಣ ನೀಡಬೇಕು, ದೆಹಲಿಯ ಗಲಭೆಗಳನ್ನು ನಿಲ್ಲಿಸಬೇಕು’ ಎಂದು ಹಠಹಿಡಿದು ಕೂರುತ್ತಾರೆ.

ಅವರ ಮುಂದೆ ಕೆಚ್ಚೆದೆಯ ಭಾರತೀಯರೂ ನಿರ್ವೀರ್ಯರಾಗಿ ನಿಲ್ಲುವಂಥ ಸನ್ನಿವೇಶ ನಿರ್ಮಾಣಗೊಳ್ಳುತ್ತದೆ. ಇಂಥ ಅಧರ್ಮ, ಅನೀತಿ,
ಅಸಂಬದ್ಧ, ಅವೈಜ್ಞಾನಿಕ ಪರಿಸ್ಥಿತಿಯಲ್ಲಿ ಕುಪಿತನಾಗಿ ಗನ್ ಕೈಗೆತ್ತಿಕೊಂಡದ್ದೇ ನಾಥುರಾಮ್ ಗೋಡ್ಸೆ. ಗಾಂಧಿಯ ಆತ್ಮ ಅದೇನೆಂದು ಚೀರಿ ಕೊಂಡು ದೇಹವನ್ನು ಬಿಟ್ಟಿತೋ ಏನೋ ಆದರೆ ಅಂದು ಮುಸಲ್ಮಾನರಿಗಾಗಿ ಮಿಡಿದ ಗಾಂಧಿಯ ಆತ್ಮ ಮುಂದೆ ಕಾಂಗ್ರೆಸ್ ನಾಯಕರ ದೇಹ ದೊಳಗೆ ಈಗಲೂ ಸೇರಿಕೊಳ್ಳುತ್ತಲೇ ಇದೆ.

ಪರಧರ್ಮಗಳ ಮೇಲೆ ಆಕ್ರಮಣ ಮಾಡಿದ ಇತಿಹಾಸವಿಲ್ಲದ ಅಂಥ ಅನಿವಾರ್ಯವೇ ಇಲ್ಲದ ಶೇ.80ರಷ್ಟು ಹಿಂದೂಗಳಿದ್ದರೂ ಕೇವಲ ೧೫ರಷ್ಟು
ಇರುವ ಮುಸಲ್ಮಾನರನ್ನು ಅಗತ್ಯಕ್ಕಿಂತ ಅಸಹಜವಾಗಿ ಓಲೈಸುವುದೊಂದೇ ಕಾಂಗ್ರೆಸ್‌ನ ಹುಟ್ಟುಗುಣವಾಗಿ ಬಂದುಬಿಟ್ಟಿದೆ. ಭಾರತದ ಮುಸಲ್ಮಾನರಿಗೆ ಹಿಂದೂಗಳಿಂದ ಇರುವೆಯಷ್ಟೂ ನೋವು ಕೆಡಕುಗಳಿಲ್ಲದಿದ್ದರೂ ‘ಅಯ್ಯೋ, ಹಿಂದೂಗಳಿಂದ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಉಳಿಗಾಲವಿಲ್ಲ, ಅವರಿಗಿರುವ ಒಂದೇ ಮಾರ್ಗವೆಂದರೆ ಕಾಂಗ್ರೆಸ್ ಮಾತ್ರ’ ಎಂಬ ಗುಮ್ಮವೆಂಬ ಬುರ್ಖಾವನ್ನು ಸಮಸ್ತ ಮುಸಲ್ಮಾನರ ಮೇಲೆ ಹೊದಿಸಿಬಿಟ್ಟಿದ್ದಾರೆ.

ಪಾಕಿಸ್ತಾನ ಬಾಂಗ್ಲ ದೇಶದಲ್ಲಿ 1947ರಲ್ಲಿದ್ದ ಹಿಂದೂಗಳ ಜನಸಂಖ್ಯೆ ಮತ್ತು ಹಿಂದೂಗಳ ದೇವಸ್ಥಾನಗಳು ಇಂದಿಗೂ ಸರ್ವನಾಶವಾಗುತ್ತಿದೆ. ಆದರೆ ಭಾರತದಲ್ಲಿ 1947ರಿಂದ ಇಲ್ಲಿಯವರೆಗೂ ಮುಸಲ್ಮಾನರ ಜನಸಂಖ್ಯೆ ಮತ್ತು ಮಸೀದಿ ದರ್ಗಾಗಳ ಸಂಖ್ಯೆ ಎಣಿಸಲಸಾಧ್ಯವೆಂಬಂತೆ ನಿರ್ಮಾಣ ಗೊಳ್ಳುತ್ತಲೇ ಇರುತ್ತದೆ. ಆದರೆ ಕಾಂಗ್ರೆಸ್ ಪ್ರಕಾರ ಮುಸಲ್ಮನರು ಅತಂತ್ರರು, ಹಿಂದೂಗಳು ಭಯೋತ್ಪಾದಕರು. ಭಾರತದಲ್ಲಿ ಹಿಂದೂಗಳು ಸ್ವಜಾತಿ ರೋಗಕ್ಕೆ ಬಲಿಯಾಗದೇ ಏಕತೆಯಿಂದ ಬಲಿಷ್ಠವಾಗಿದ್ದಷ್ಟೂ ಮುಸಲ್ಮಾನರು ಹೆಚ್ಚು ಸುರಕ್ಷಿತರಾಗಿರುತ್ತಾರೆ. ಹತ್ತು ಹಿಂದೂ ಮನೆಗಳ ಮಧ್ಯೆ ಒಂದು ಮುಸಲ್ಮಾನರ ಮನೆ ಇದ್ದರೆ ಆ ಮುಸಲ್ಮಾನರು ಹೆಚ್ಚು ಸುರಕ್ಷಿತರಾಗಿ ಪ್ರೀತಿಸಲ್ಪಡುತ್ತಾರೆ. ಆದರೆ, ಹತ್ತು ಮುಸಲ್ಮಾನರ ಮನೆಗಳ ಮಧ್ಯೆ ಒಬ್ಬ ಹಿಂದೂ ಮನೆ ಅತ್ಲಾಗಿರಲಿ, ಒಬ್ಬ ಹಿಂದೂ ಸಹಜವಾಗಿ ವರ್ತಿಸಲು ಹೆದರಬೇಕಾದ ಪರಿಸ್ಥಿತಿಯನ್ನು ಇಂದಿನ ನೀಚ ರಾಜಕಾರಣಿಗಳು ಮಾಡಿಕೂರಿಸಿದ್ದಾರೆ.

ಕಾಂಗ್ರೆಸ್ ಮಾತ್ರವಲ್ಲದೇ ದೇಶದ ಬಿಜೆಪಿಯೇತರ ಎಲ್ಲ ಪಕ್ಷಗಳೂ ಅದೆಂಥಾ ಅವೈಜ್ಞಾನಿಕ ಅವಿವೇಕತನವನ್ನು ನಂಬಿಕೊಂಡಿದೆಯೆಂದರೆ ಬರಿಯ ಮುಸಲ್ಮಾನರು ಒಂದೇ ಪಕ್ಷಕ್ಕೆ ಮತ ನೀಡಿದರೂ ಒಂದು ರಾಜ್ಯವನ್ನಾಗಲಿ, ದೇಶವನ್ನಾಗಲಿ ಗೆದ್ದು ಆಳುವಂಥ ಪರಿಸ್ಥಿತಿಯಿಲ್ಲ (ಸದ್ಯಕ್ಕಿಲ್ಲ !?). ಆದರೂ ಬಹುಸಂಖ್ಯಾತ ಹಿಂದೂಗಳನ್ನು ಕಡೆಗಣಿಸಿ ಬರಿಯ ಮುಸಲ್ಮಾನರ ಮತಗಳಿಗಾಗಿ (ಮುಸಲ್ಮಾನರಿಗಲ್ಲ!) ಎಂತೆಂಥ ಓಲೈಕೆಗಳನ್ನು ಮಾಡುತ್ತಿzರೆಂದರೆ ತಮ್ಮ ಸ್ವಧರ್ಮ ಹಿಂದುತ್ವಕ್ಕೆ ಶಾಪವಾಗಿಬಿಡುತ್ತಿದ್ದಾರೆ.

ಇವರ ತಿಕ್ಕಲು ಲಕ್ಷಣಗಳನ್ನು ನೋಡಿ-ಇಸ್ಲಾಂನಲ್ಲಿ ಜನ್ಮದಿನಾಚರಣೆಗೆ ಅವಕಾಶವಿಲ್ಲದಿದ್ದರೂ ಟಿಪ್ಪು ಜಯಂತಿ ಮಾಡಬೇಕು, ಮುಸಲ್ಮಾನರ ಒಂದು
ನಾಯಿಗೂ ತೊಂದರೆಕೊಡದಿದ್ದರೂ ಆರ್‌ಎಸ್ಸೆಸ್ ಅನ್ನು ತಾಲಿಬಾನ್ ಭಯೋತ್ಪಾದಕರಿಗೆ ಹೋಲಿಸುತ್ತಾರೆ, ಹಿಂದೂಗಳ ಹಬ್ಬಗಳಿಗೆ ಮುಸಲ್ಮಾನ ರನ್ನು ಆಹ್ವಾನಿಸಿ ಸತ್ಕರಿಸದಿದ್ದರೂ ಅವರ ಹಬ್ಬಗಳಿಗೆ ಹೋಗಿ ಉಡುಗೆತೊಡುಗೆ ತೊಟ್ಟು ಬಿರಿಯಾನಿ ಮೆದ್ದು ಬರುತ್ತಾರೆ. ಮುಸಲ್ಮಾನರು ಅದೇನು ತಿಳಿದುಕೊಳ್ಳುತ್ತಾರೋ ಏನೋ ಎಂಬ ಗಢಗಢ ಭಯದಿಂದ ಇವರುಗಳೇ ತಮ್ಮ ದೇವಾಲಯಗಳಿಗೆ ಹೋಗುವುದಿಲ್ಲ, ಹೋದರೂ ತಿಲಕ ತೀರ್ಥ
ಸ್ವೀಕರಿಸುವುದಿಲ್ಲ. ರಾಷ್ಟ್ರಧ್ವಜದ ಕೇಸರಿಯನ್ನು ಕೆಂಪು ಎನ್ನುತ್ತಾರೆ. ಮದರಾಸಗಳಲ್ಲಿ ಮಕ್ಕಳು ಕುರಾನ್ ಅಭ್ಯಸಿಸಬಹುದು. ಆದರೆ ಹಿಂದೂ ಮಕ್ಕಳು ಭಗವದ್ಗೀತೆ ಕಲಿತರೆ ಕೋಮುವಾದ. ದಸರಾ ಹಬ್ಬದಲ್ಲಿ ಚಾಮುಂಡಿದೇವಿಗೆ ಪೂಜಿಸದ ಹಿಂದು ಶಾಸಕಿಯೊಬ್ಬಳು ಅ-ಏಸು-ಹಿಂದೂ ದೇವತೆಯ ಫೋಟೋವನ್ನು ಪೂಜಿಸುತ್ತಾಳೆಂದರೆ ಅವರಿನ್ನೆಷ್ಟು ಭಯಂಕರವಾಗಿ ಮುಸಲ್ಮಾನರ ಓಲೈಕೆಯೆಂಬ ಭಯದಲ್ಲಿದ್ದಾರೆ ಊಹಿಸಿಕೊಳ್ಳಿ.

ಮುಸಲ್ಮಾನರಿಗಾಗಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನ ಮಂತ್ರವಾಗಿದ್ದ ‘ವಂದೇಮಾತರಂ’ ಉದ್ಘರಿಸುವುದಿಲ್ಲ. ಹೆತ್ತಮ್ಮನಿಗೆ ಅಮ್ಮಾ ಎಂದಂತೆ ಭಾರತ ಮಾತೆಗೆ ಜೈ, ಭುವನೇಶ್ವರಿಗೆ ಜೈಕಾರವನ್ನೂ ಹಾಕಲಾಗದ ಹೇಡಿಗಳ ಬಾಳು ಬಾಳುತ್ತಿದ್ದಾರೆ. ಮುಸಲ್ಮಾನರಿಗೆ ನೋವಾಗುತ್ತದೆಂದು ನಮ್ಮ ಯೋಧರನ್ನೇ ಅವಮಾನಿಸುತ್ತಾರೆ. ಕಾಂಗ್ರೆಸ್‌ನ ರಾಜ್ಯ ಕಾರ್ಯಾಧ್ಯಕ್ಷನೊಬ್ಬ ಹಿಂದೂ ಎಂಬ ಪದವೇ ಅಶ್ಲೀಲವೆನ್ನುತ್ತಾನೆ. ಹಿಂದೂ ಸಂಸ್ಕೃತಿ- ಪರಂಪರೆಯನ್ನು ಸಿಕ್ಕಸಿಕ್ಕಾಗೆಲ್ಲ ಅವಹೇಳನ ಮಾಡುತ್ತಾರೆ, ಕಾಶ್ಮೀರದ ನೊಂದ ಪಂಡಿತರ ಮೇಲೆ ಎಳ್ಳಷ್ಟೂ ಸಹಾನುಭೂತಿ ಇವರಿಗಿಲ್ಲ ಮತ್ತು ಅಂಥ ಚಲನಚಿತ್ರ ತೋರಿಸಿದರೆ ಅದನ್ನೂ ನೋಡುವುದಿಲ್ಲ.

ಪದವಿ ಪಡೆದ ಮುಸ್ಲಿಂ ಯುವಕರು ಭಯೋತ್ಪಾದನೆ ಯಲ್ಲಿ ಸಿಕ್ಕಿಬಿದ್ದರೂ ಅವರನ್ನು ಖಂಡಿಸಿ ಹೇಳಿಕೆ ನೀಡುವುದಿಲ್ಲ. ಬೀದಿ ಹೆಣವಾಗಿ ಸತ್ತ ಹಿಂದೂ ಗಳ ಮನೆಗೆ ತೆರಳಿ ಅವರಲ್ಲಿ ಸಂತಾಪ ಸೂಚಿಸುವುದಕ್ಕೂ ಢವಢವ ಇವರಿಗೆ. ಹೀಗೆ ಮಗು ಸಹಜವಾಗಿದ್ದರೂ ಅದನ್ನು ಚಿವುಟಿ ಗೋಳಾಡಿಸಿ ಮತ್ತೇ ಮಮಕಾರ ತೋರುವಂತೆ ಮುಸಲ್ಮಾನರು ಎಂದಿಗೂ ಹಿಂದೂಗಳೊಡನೆ ಅನ್ಯೋನ್ಯದಿಂದ ಇರದಂತೆ ಅವರನ್ನು ಬಳಸಿಕೊಂಡು ಓಲೈಸುವ ನಾಟಕಗಳನ್ನು ಆಡಿಕೊಂಡೇ ರಾಜಕಾರಣವನ್ನು ನಡೆಸಿಕೊಂಡು ಬರುತ್ತಿರುವ ಪಕ್ಷಗಳು ಅಧಿಕಾರದಲ್ಲೂ ‘ಅಲ್ಪಸಂಖ್ಯಾತ’ ಪಕ್ಷಗಳಾಗಿ ಹೋಗಿವೆ. ಇದರಿಂದ ದಿಕ್ಕೆಟ್ಟ ಮಾನಸಿಕ ಅಪ್ರಬುದ್ಧ ಜೋಕರ್‌ಗಳು ಪಕ್ಕದ ಮನೆಯ ಅಪ್ಪನ ಬಳಿಹೋಗಿ ತನ್ನ ಅಪ್ಪನ ಮೇಲೆಯೇ ಬೈದಾಡಿದಂತೆ ವಿದೇಶಗಳ ನೆಲದಲ್ಲಿ ನಿಂತು ಭಾರತವನ್ನು ಅವಮಾನಿಸುತ್ತಿದ್ದಾರೆ.

ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆನ್ನುವುದಕ್ಕೆ ಇದೇ ಸಾಕ್ಷಿ. ಮೊನ್ನೆ ನೋಡಿ, ಉಡುಪಿಯ ಮಿಥುನ್ ರೈ ಎಂಬ ಕಾಂಗ್ರೆಸಿಗ ಗಾಂಧಿಯ ಆತ್ಮ ದೇಹದೊಳಗೆ ಹೊಕ್ಕಂತೆ ಉಡುಪಿಯ ದೇವಾಲಯಕ್ಕೆ ಮುಸಲ್ಮಾನರು ಭೂಮಿ ನೀಡಿದ್ದಾರೆ ಎಂದಿದ್ದಾನೆ. ಇಂಥ ಹೇಳಿಕೆಗಳು ಏನನ್ನು ಸೂಚಿಸುತ್ತದೆಂದರೆ ಕಾಂಗ್ರೆಸಿಗರ ಇತಿಹಾಸದ ಜ್ಞಾನ ಮೊಳಕಾಲಿನ ಮಟ್ಟಕ್ಕಷ್ಟೇ ಸೀಮತವೆಂಬುದು ಪಕ್ಕಾ ಆಗುತ್ತಿದೆ. ಕಾಂಗ್ರೆಸಿಗರು ಅದೆಂಥಾ ಇತಿಹಾಸ ಜ್ಞಾನ ಹೊಂದಿದ್ದಾರೆಂದರೆ ಮದಕರಿನಾಯಕನ ಮೇಲೆ ದಾಳಿ ಮಾಡಿದ ಹೈದರಾಲಿಯ ಇತಿಹಾಸವನ್ನು ಹೇಳುವುದಿಲ್ಲ.

ಆದರೆ ಆತನ ಮತಾಂಧ ಮಗ ಟಿಪ್ಪುವಿನ ಸುಳ್ಳಿನ ಇತಿಹಾಸವನ್ನು ಮಾತ್ರ ಹೇಳಿಕೊಳ್ಳುತ್ತಾರೆ. ಘುಲಾಂ, ಮಮ್ಲುಕ್, ಖಿಲ್ಜಿ, ತುಗಲಕ್, ಸಯ್ಯಿದ್,
ಲೊದಿ, ಬಹುಮನಿ, ಮೊಘಲ್‌ರಂಥ ಹಿಂದೂಗಳ ಸರ್ವನಾಶಗಳನ್ನೇ ಮಾಡಿಕೊಂಡು ಬಂದ ಮತಾಂಧರೇ ಇವರ ಆದಿಪುರುಷರು. ಅಂಥವರನ್ನು
ಸೆದೆಬಡಿದ ಹಿಂದೂ ರಾಜರುಗಳಾದ ಶ್ರೀಕೃಷ್ಣದೇವರಾಯ, ಮಹಾ ರಾಣ ಪ್ರತಾಪಸಿಂಹ, ಛತ್ರಪತಿ ಶಿವಾಜಿಯ ಇತಿಹಾಸವನ್ನು ಎಂದಿಗೂ ಸ್ಮರಿಸುವು ದಿಲ್ಲ. ಎಲ್ಲೂ ಪುರಾಣ, ರಾಮಾಯಣ, ಮಹಾ ಭಾರತದ ಪಾತ್ರಗಳು ನೀತಿ ಧರ್ಮಗಳನ್ನು ಉದಾಹರಿಸುವುದಿಲ್ಲ. ಶಂಕರಚಾರ್ಯ, ಮದ್ವಾಚಾರ್ಯ, ರಾಮಾನುಜಚಾರ್ಯರ ನೀತಿಸಾರಗಳನ್ನು ಯಾವುದೇ ಕಾಂಗ್ರೆಸ್ ನಾಯಕ ಸ್ಮರಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಆಯುರ್ವೇದ, ಆರ್ಯಭಟ, ವೇದ ಉಪನಿಷತ್ತುಗಳಲ್ಲಿರುವ ಧರ್ಮಾತೀತ ವಿಚಾರಗಳನ್ನು ಹೇಳುವುದಿಲ್ಲ.

ಹೊಟ್ಟೆ ತುಂಬಿಸುವ ಕ್ಯಾಂಟಿನ್‌ಗೆ ‘ಅನ್ನಪೂರ್ಣ’ವೆಂಬ ಸಾರ್ಥಕ ಹೆಸರಿಡದೆ ಇಂದಿರಾಗಾಂಧಿ ಹೆಸರಿಡುತ್ತಾರೆ. ಇವರುಗಳು ಬಂಕಿಮಚಂದ್ರ ಚಟರ್ಜಿ, ಬಾಲಗಂಗಾಧರ ತಿಲಕ್, ಪರಮಹಂಸರು, ಸ್ವಾಮಿವಿವೇಕಾನಂದರು, ನೇತಾಜಿ, ಶಾಸ್ತ್ರೀಜಿ, ಸರದಾರ್ ಪಟೇಲರಂಥ ದಿಗ್ಗಜರನ್ನು ಹೊಗಳುವುದಿಲ್ಲ. ಆದರೆ ಗಾಂಧಿ-ನೆಹರು ಕುಟುಂಬ ಮತ್ತು ಸ್ವಾತಂತ್ರಕ್ಕಾಗಿ ಸತ್ತ ‘ಕಾಂಗ್ರೆಸ್ ನಾಯಿ’ಗಳ ಬಗ್ಗೆಯಷ್ಟೇ ಇವರ ಭಾಷಣ. ಅದರ ಹಿಂದಿನ ಇತಿಹಾಸಕ್ಕೆ ಇವರುಗಳು ಹೋಗುವುದೇ ಇಲ್ಲ. ಹಿಂದೂಗಳಲ್ಲಿ ಬ್ರಾಹ್ಮಣರೇ ಇವರ ಮೊದಲ ದುಷ್ಮನ್. ಆದರೆ ಗುಟ್ಟಾಗಿ ಹೋಮ-ಹವನ, ನಿಂಬೆಹಣ್ಣಿನ ನಂಬಿಕೆಯನ್ನು ಭರ್ಜರಿಯಾಗಿ ಮಾಡುತ್ತಾರೆ. ಮತ್ತೊಬ್ಬ ಪೇಶ್ವೆ ಬ್ರಾಹ್ಮಣರ ಇತಿಹಾಸದಲ್ಲಿ ಪಿಎಚ್‌ಡಿ ಮಾಡಿ ಇಂದಿನ ಬ್ರಾಹ್ಮಣರನ್ನು ದ್ವೇಶಿಸುವಂತೆ ಕರೆನೀಡುತ್ತಾನೆ.

ಇನ್ನು ರಾಜ್ಯದಲ್ಲಿ ಲಿಂಗಾಯಿತರಿಗಾಗಿ ಬಸವಣ್ಣ, ಶಿವಕುಮಾರಸ್ವಾಮೀಜಿಗಳು, ಒಕ್ಕಲಿಗಾರಿಗಾಗಿ ಕೆಂಪೇಗೌಡ, ಕುವೆಂಪು, ಕುರುಬರಿಗಾಗಿ ಕನಕ
ದಾಸರು, ರಾಯಣ್ಣ, ದಲಿತರಿಗಾಗಿ ಬುದ್ಧ ಅಂಬೇಡ್ಕರ್ ಹೀಗೆ ಆಯಾ ಜಾತಿಗೆ ಇಂತಿಷ್ಟು ಇತಿಹಾಸವನ್ನು ಸೀಮಿತಗೊಳಿಸಿದ್ದಾರೆ. ಹೀಗೆ
ಕಾಂಗ್ರೆಸಿ ಗರ ಭಾರತ ಇತಿಹಾಸ ಜ್ಞಾನ ಮೊಣಕಾಲಿನ ಮಟ್ಟದವರೆಗೂ ಮಾತ್ರವೇ ಹೊರತು ಇಡೀ ಜಗತ್ತಿಗೇ ಬೆಳಕಾದ ಸನಾತನ ಇತಿಹಾಸವನ್ನು
ಸ್ಮರಿಸುವ, ಭಾರತೀಯ ಪರಂಪರೆಯನ್ನು ಎತ್ತಿಹಿಡಿಯುವ ತಲೆಮಟ್ಟದ ಸ್ವಾಭಿಮಾನದ ಮೆದುಳೇ ಇವರುಗಳ ತಲೆಯಲಿಲ್ಲ. ತಾನು ಅಧಿಕಾರಕ್ಕೆ
ಬಂದರೆ ಮುಸಲ್ಮಾನರಿಗೆ ೧೦ ಸಾವಿರ ಕೋಟಿ ನೀಡುತ್ತೇನೆ ಎನ್ನುತ್ತಾರೇ ಹೊರತು ‘ನಾನು ಗೆದ್ದರೆ ಹಿಂದೂಗಳಿಗೆ’ ಈ ವಾಕ್ಯ ಅವರಿಗೆ ಅಶ್ಲೀಲ ಬಿಡಿ.
ಇನ್ನು ವೈಟ್ ಅಂಡ್ ವೈಟ್ ‘ಓರಾಡುವ’ ಫಾರ್ಚುನರ್, ಇನ್ನೋವಾ ಗಿರಾಕಿಗಳನ್ನು ಕೇಳಿನೋಡಿ- ಅವರ ಇತಿಹಾಸ ಜ್ಞಾನ ಮತ್ತದೇ ಕೆಂಪೇಗೌಡ,
ಕುವೆಂಪು, ಟಿಪ್ಪು ಆಗಿರುತ್ತದೆಯೇ ಹೊರತು ಬರಿಯ ಆಡುಭಾಷೆಯಾಗಿದ್ದ ಕನ್ನಡಕ್ಕೆ ಲಿಪಿಯನ್ನು ಸೃಷ್ಟಿಸಿ ಕನ್ನಡಕ್ಕೆ ಗ್ರಂಥಸ್ಥ ಸ್ಥಾನಮಾನ ನೀಡಿ, ಕನ್ನಡಿಗರೂ ಒಂದು ರಾಜ್ಯವನ್ನು ಕಟ್ಟಿ ಆಳುವುದನ್ನು ತೋರಿಸಿದ ಮಯೂರಶರ್ಮ, ದಕ್ಷಿಣ ಭಾರತದಲ್ಲಿ ಇಸ್ಲಾಂ ಆಕ್ರಮಣವನ್ನು ತಡೆದು ಕನ್ನಡವೂ ಸೇರಿದಂತೆ ಹಿಂದೂ ಧರ್ಮ ಸಂಸ್ಕೃತಿನ್ನು ರಕ್ಷಿಸಿದ ವಿದ್ಯಾರಣ್ಯ, ಹರಿಹರಬುಕ್ಕರಾಯ, ಪ್ರೌಢದೇವರಾಯ, ಶ್ರೀಕೃಷ್ಣದೇವರಾಯ, ರಾಮರಾಯ ರನ್ನಾಗಲಿ, ಕನ್ನಡದ ಇತಿಹಾಸವನ್ನು ಕಟ್ಟಿಕೊಟ್ಟ ಕನ್ನಡಕುಲ ಪುರೋಹಿತ ಆಲೂರು ವೆಂಕಟರಾಯರಾಯ, ಜಿ.ವೆಂಕಟಸುಬ್ಬಯ್ಯ, ಡಾ.ಎಂ.ಚಿದಾ ನಂದಮೂರ್ತಿ, ಎಸ್.ಎಲ.ಭೈರಪ್ಪರಂಥ ಮೇದಾವಿಗಳನ್ನಾಗಲೀ ಯಾವ ಪೋಸ್ಟ್‌ಪೇಯ್ಡ್ -ಪ್ರೀಪೇಯ್ಡ್ ಗಿರಾಕಿಗಳೂ ಸ್ಮರಿಸುವುದಿಲ್ಲ.

ಇಂಥವರ ಮತ್ತು ಕಾಂಗ್ರೆಸಿಗರ ಇತಿಹಾಸeನ ಒಂದೇ ಆಗಿಹೋಗಿದೆ. ಸನಾತನ ಪರಂಪರೆಗೆ ಆದಿ-ಅಂತ್ಯವೇ ಇಲ್ಲದಾಗ, ಧರ್ಮಾಂಧತೆಯಿಂದ ಭಾರತಕ್ಕೆ ಕಾಲಿಟ್ಟು ದೇವಾಲಯಗಳನ್ನು ಮಸೀದಿ ಸಮಾಧಿಗಳನ್ನಾಗಿ ಪರಿವರ್ತಿಸಿದ ಇಸ್ಲಾಂ ದರೋಡೆಕೋರರು, ವ್ಯಾಪಾರಕ್ಕಾಗಿ ಬಂದು ದೇಶವನ್ನು ಕೊಳ್ಳೆಹೊಡೆದ ಬ್ರಿಟಿಷರು ಹೀಗೆ ಈ ಭೂಮಿಯಲ್ಲಿ ಅಸ್ತಿತ್ವವೇ ಇಲ್ಲದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ನೆಲೆ-ಬೆಳೆ-ಬೆಲೆಯನ್ನು ನೀಡಿದವರು ಮೆದುಳು- ಹೃದಯ ಶ್ರೀಮಂತ ಹಿಂದೂಗಳು. ಜಗತ್ತಿನ ಮೂಲೆಮೂಲೆಗಳಲ್ಲಿ ಬಗೆದಷ್ಟು ಹಿಂದುತ್ವದ ಭಗ್ನಾವಶೇಷಗಳು ಕುರುಹುಗಳು ದೊರಕುತ್ತಿವೆ.

ಹಿಂದೂಗಳ ಅಸ್ತಿತ್ವಕ್ಕೆ ವ್ಯಾಪ್ತಿಯೇ ಇಲ್ಲ. ಆದರೂ ಉಡುಪಿ ದೇವಾಲಯಕ್ಕೆ ಮುಸಲ್ಮಾನರು ಭೂಮಿ ನೀಡಿದರು! ಸಮುದ್ರದ ನೀರಿಗೆ ಒಂದು ಲೋಟ
ನೀರು ಸುರಿದು ಸಮುದ್ರ ತುಂಬಿಸಿದೆ ಎನ್ನುವ ಮತಿಗೇಡಿಗಳು ! ಜೈ ಗಾಂಧೀಜಿ !