Saturday, 14th December 2024

ಸಂವಿಧಾನ-ಸಂಸತ್‌ಗಿಂತಲೂ ರಾಹುಲ್ ದೊಡ್ಡವ್ರಾ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ರಾಹುಲ್‌ಗಾಂಧಿಯವರ ಅರ್ಹತೆ ಅದೇನೆಂಬುದು ಇಡೀ ಜಗತ್ತಿಗೇ ಗೊತ್ತುಬಿಡಿ. ಆದರೆ ಹಿಂದೂಗಳ ರಾಷ್ಟ್ರವಾಗಿ ಭಾವಿಸಿದ್ದ ದೇಶವನ್ನು 1976 ರಲ್ಲಿ ಇಂದಿರಾ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿದ ಭಾರತದಲ್ಲಿ ಜಾತಿ ನಿಂದನೆ ಎಂಬುದು ಘೋರ ಅಪರಾಧ ಎಂಬುದು ಸತ್ಯ.

ಅದ್ಯಾವುದ್ರಿ ನೀವು ಹೇಳುತ್ತಿರುವ ಸತ್ಯ? ನರೇಂದ್ರ ಮೋದಿಯವರನ್ನು ಕಳ್ಳ ಎಂದು ಪಾಕಿಸ್ತಾನದ ಪ್ರಜೆಗಳೂ ಹೇಳುವುದಿಲ್ಲ. ಮೋದಿಯವರು ಅದೆಷ್ಟು ಆಸ್ತಿ ಹೊಂದಿದ್ದಾರೆಂದು ಅಕ್ಷರಜ್ಞಾನವಿಲ್ಲದ ಮಂಡ್ಯಾದ ಬೋರೇಗೌಡನೂ ಹೇಳಿಬಿಡುತ್ತಾನೆ. ಆದರೆ ಪ್ರಧಾನಿ ಅಭ್ಯರ್ಥಿಯಾಗಿ ನಿಮಗೇನಾಗಿದೆ? ಪಾಪ, ರಾಹುಲ್‌ಗಾಂಧಿಯನ್ನು ನೋಡುತ್ತಿದ್ದರೆ ನಿಜಕ್ಕೂ ಅನುಕಂಪ ಹುಟ್ಟುತ್ತದೆ. ಕಾಂಗ್ರೆಸ್ ಪಕ್ಷ ಅಸ್ತಿತ್ವವಿರುವುದೇ ನೆಹರು ಕುಟುಂಬದ ಕುಡಿಗಳಿಂದ.

ಕಾಂಗ್ರೆಸಿಗರಿಗೆ ಪಕ್ಷದ ಪಲ್ಲಕ್ಕಿಯಲ್ಲಿ ರಾಹುಲ್‌ಗಾಂಧಿ ಸದಾ ವಿರಾಜಮಾನ ರಾಗಿರಲೇಬೇಕು. ಕಾಂಗ್ರೆಸ್ ಸಾಮ್ರಾಜ್ಯದ ಯುವರಾಜನ ಮುಂದೆ ಮುತ್ಸದ್ದಿ ಗಳಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರೂ ಆಸ್ಥಾನದ ಮಂತ್ರಿ ಗಳಂತೆ ಆಜ್ಞೆಯನ್ನು ಪಾಲಿಸಿ ಸಂತುಷ್ಟಗೊಳಿಸಿ ಪೊರೆಯ ಬೇಕೇ ಹೊರತು ವ್ಯತಿರಿಕ್ತವಾಗಿ ನಡೆದುಕೊಳ್ಳುವುದು ನಿಷಿದ್ಧ. ಹೀಗೆ ರಾಹುಲ್ ಗಾಂಧಿ ಯನ್ನು ಭಾರತದ ಪ್ರಧಾನಿ ಮಾಡಲೇಬೇಕೆಂದು ಅಹರ್ನಿಶಿ ಬದುಕನ್ನು ತೇಯುತ್ತಿರುವ ಕಾಂಗ್ರೆಸಿಗರ ಸ್ವಾಮಿನಿಷ್ಠೆ ವರ್ಣಿಸಲು ಅಸಾಧ್ಯ. ಇದಕ್ಕಾಗಿ ತಮ್ಮ ಕುಟುಂಬದ ಸದಸ್ಯರನ್ನುಗಳೆನ್ನೇ ಅಖಾಡಕ್ಕಿಳಿಸಿ ಅಗ್ನಿಪರೀಕ್ಷೆಗೆ ಒಳಪಡಿಸುತ್ತಿರು ವುದು ಮನಕಲಕುವ ವಿಚಾರ.

ನೋಡಿ, ಖರ್ಗೆಯವರು ತಮ್ಮ ಪುತ್ರ ಪ್ರಿಯಾಂಕ್ ಅವರನ್ನು ಮೂರನೇ ಬಾರಿಗೆ ಜಯಿಸಿಕೊಂಡು ಬರುವ ಪ್ರಯತ್ನದಲ್ಲಿದ್ದಾರೆ.
ಹಾಗೆಯೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ ಇನ್ನು ಅನೇಕ ನಾಯಕರು, ಅದರಲ್ಲೂ ವೈದ್ಯನಾಗಿ ಪ್ರಜೆಗಳ ಸೇವೆ ಮಾಡಬೇಕಿದ್ದ ತಮ್ಮ ಮಗ ಯತೀಂದ್ರನನ್ನು ರಾಜಕೀಯಕ್ಕೆ ತಂದಿರುವುದು ರಾಹುಲ್‌ಗಾಂಧಿಯ ಪಟ್ಟಾಭಿಷೇಕಕ್ಕಾಗಿನ ಪಣದಲ್ಲಿನ ಅಳಿಲು ಸೇವೆಯಾಗಿ. ಹೀಗೆ ತಾವುಗಳಲ್ಲದೇ ತಮ್ಮ ಮಕ್ಕಳನ್ನು ಕುಟುಂಬದ ಸದಸ್ಯರನ್ನು
ಚುನಾವಣಾ ರಣರಂಗದಲ್ಲಿ ಅರ್ಜುನನಂತೆ ದೂಡಿ ಗೆಲ್ಲಿಸಿಕೊಂಡು ಬಂದು ಆ ಮೂಲಕ ಕಾಂಗ್ರೆಸ್ ಸಾಮ್ರಾಜ್ಯವನ್ನು ಪುನರ್‌ನಿರ್ಮಿಸಿ ಅದರೊಳಗೆ ರಾಹುಲ್‌ಗಾಂಧಿಗೆ ಪಟ್ಟಾಭಿಷೇಕ ನೆರವೇರಿಸಿ ಗಾಂಧಿ ಕುಟುಂಬದ ವಿಜಯೋತ್ಸವವನ್ನು ಆಚರಿಸುವ ರಣೋತ್ಸಾಹದಲ್ಲಿದ್ದಾರೆ.

ಆದರೆ ಪಾಪ, ರಾಹುಲ್‌ಗಾಂಧಿಯನ್ನು ಮಾತ್ರ ಚಕ್ರವ್ಯೂಹದೊಳಗೆ ಅಭಿಮನ್ಯುವಿನಂತೆ ಬಿಟ್ಟು ಬಲಿಕೊಡುತ್ತಿರುವುದು ಶೋಚನೀಯ. ಮನೆಯ ಮಗನೊಬ್ಬ ದಡ್ಡ ಪೆದ್ದ ಅವಿವೇಕಿ ಅಜ್ಞಾನಿ ಅಯೋಗ್ಯನಾದರೆ ಅದಕ್ಕೆ ಕಾರಣ ಯಾರಾಗುತ್ತಾರೆ ಹೇಳಿ? ಅವನ ಹೆತ್ತವರ ಹೆಗಣದ ಮುದ್ದು ಅಥವಾ ನಿರ್ಲಕ್ಷ್ಯ. ಜತೆಗೆ ಆತನ ಸುತ್ತಲಿನ ಪೋಷಕರು ಶಿಕ್ಷಕರು ಹಿತಚಿಂತಕ ವಂಚಕರ ಪಾತ್ರವೂ ಸೇರಿಕೊಳ್ಳುತ್ತದೆ. ಇಂಥ ಮಗನ ಬೆನ್ನಿನ ಕೆಳಭಾಗಕ್ಕೆ ಒಂದೆರಡು ಕೊಟ್ಟು ಕೂರಿಸಿಕೊಂಡು ಸರಿಯಾಗಿ ಪಾಠಹೇಳಿ ಆತನ ಮುಂದಿನ ಭವಿಷ್ಯವನ್ನು ರೂಪಿಸುವ ಹೊಣೆಗಾರಿಗೆ ತಂದೆ- ತಾಯಿಗಳಿಗಿರುತ್ತದೆ. ಅದೂ ಅಂಥ ಮಗನನ್ನು
ಲೋಕವೇ ಮುಠ್ಠಾಳ ಎಂದು ಭಾವಿಸಿದಾಗ ಆತನನ್ನು ಸರಿದಾರಿಗೆ ತರಬೇಕಾದ್ದು, ಭವಿಷ್ಯವನ್ನು ರೂಪಿಸಬೇಕಾದವರ ಆದ್ಯಕರ್ತವ್ಯ.

ಇಲ್ಲದಿದ್ದರೆ ವಿದ್ಯೆ ಕಲಿಸದ ಗುರು | ಬುದ್ಧಿ ಕಲಿಸದ ತಂದೆ | ಬಿದ್ದಿರಲು ಬಂದು ನೋಡದ ತಾಯಿ-ಇವರು ಶುದ್ಧ ವೈರಿಗಳು ಎಂಬ ಸರ್ವಜ್ಞನ ವಚನಕ್ಕೆ ದೃಷ್ಟಾಂತವಾಗುತ್ತದೆ. ಅದನ್ನು ಬಿಟ್ಟು ಅಯ್ಯೋ ನಮ್ಮ ಯುವರಾಜ, ಅವನೇ ನಮ್ಮ ಸೂತ್ರಧಾರ
ಎಂದು ಆತನ ಪಲ್ಲಕ್ಕಿ ಹೊರುತ್ತಾ ಹೋದರೆ, ಆತ ಸರ್ಕಸ್‌ನಲ್ಲಿರುವ ಹುಲಿಯಾಗುತ್ತಾನೆ ಹೊರತು ದೇಶ ಉದ್ಧಾರ ಮಾಡುವ ಹುಲಿಯಂತೂ ಆಗಲಾರ. ಎಚ್.ಡಿ. ಕುಮಾರಸ್ವಾಮಿಯನ್ನು ಕೇಳಿ ನೋಡಿ.

ತಮ್ಮ ಪುತ್ರ ನಿಖಿಲ್ ಚಿತ್ರರಂಗ ಪ್ರವೇಶಿಸಲು ಎಷ್ಟೆಲ್ಲಾ ವಿದ್ಯೆ-ಕಲೆಗಳನ್ನು ಕಲಿಸಿ ಜಾಗ್ವಾರ್ ಏರಿಸಿದ್ದಾರೆಂಬುದು ಅವರಿಗೆ ಗೊತ್ತು. ಕೇವಲ ರೀಲ್ ಹೀರೋ ಆಗುವುದಕ್ಕೇ ಅಷ್ಟೊಂದು ಯೋಗ್ಯತೆಗಳನ್ನು ಸಿದ್ಧಿಸಿಕೊಳ್ಳಬೇಕಾದರೆ ದೇಶದ ರಿಯಲ್ ಹೀರೋ ಪ್ರಧಾನಿ ಆಗಬೇಕಾದರೆ ಏನೆಲ್ಲಾ ಯೋಗ್ಯತೆಗಳನ್ನು ಕರಗತ ಮಾಡಿಕೊಳ್ಳಬೇಕೆಂಬುದು ರಾಹುಲ್‌ಗಿಂತ ದೇಶದ ಪ್ರಜೆಗಳಿಗೆ ಹೆಚ್ಚು ತಿಳಿದಿದೆ.

ಇನ್ನು ಮತ್ತೆ ಕಾಂಗ್ರೆಸಿಗರ ಭಾಗ್ಯವಿಧಾತ ರಾಹುಲ್‌ಗಾಂಧಿಯವರ ವಿಚಾರಕ್ಕೆ ಬಂದರೆ ಅವರ ಇಂದಿನ ಪರಿಸ್ಥಿತಿಗೆ ಅವರ ಸುತ್ತಲಿನ ನಾಯಕರುಗಳೇ ಪರೋಕ್ಷ ಕಾರಣರಾಗುತ್ತಾರೆ. ರಾಹುಲ್‌ಗಾಂಧಿಯವರ ಅರ್ಹತೆ ಅದೇನೆಂಬುದು ಇಡೀ
ಜಗತ್ತಿಗೇ ಗೊತ್ತುಬಿಡಿ. ಆದರೆ ಹಿಂದೂಗಳ ರಾಷ್ಟ್ರವಾಗಿ ಭಾವಿಸಿದ್ದ ದೇಶವನ್ನು 1976 ರಲ್ಲಿ ಇಂದಿರಾ ಗಾಂಧಿಯವರು
ಸಂವಿಧಾನಕ್ಕೆ ತಿದ್ದುಪಡಿ ತಂದು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿದ ಭಾರತದಲ್ಲಿ ಜಾತಿ ನಿಂದನೆ ಎಂಬುದು ಘೋರ ಅಪರಾಧ ಎಂಬುದು ಸತ್ಯ.

ದೇಶದ ಜನ ಕೊಲೆಗಡುಕರು, ಅತ್ಯಚಾರಿಗಳು, ದೇಶದ್ರೋಹಿಗಳನ್ನೆಲ್ಲಾ ಸಹಿಸಿಕೊಂಡು ಬಿಡುತ್ತಾರೆ. ಆದರೆ ಜಾತಿ ನಿಂದನೆ ವಿಚಾರದಲ್ಲಿ ಮಾತ್ರ ಇಡೀ ದೇಶಕ್ಕೆ ಬೆಂಕಿ ಹಚ್ಚುವಂತೆ ದಂಗೆ ಏಳುತ್ತಾರೆ. ಇಂಥ ಜಾತ್ಯತೀತ ದೇಶದಲ್ಲಿ ಪ್ರಧಾನಿಯೊಬ್ಬರ
ಅದರಲ್ಲೂ ಇಡೀ ವಿಶ್ವವೇ ಭಾರತವನ್ನು ಹಿಂಬಾಲಿಸುವಂತೆ ದೇಶವನ್ನು ಕಟ್ಟುತ್ತಿರುವ ನಿಸ್ವಾರ್ಥ ನರೇಂದ್ರಮೋದಿಯವರ ಜಾತಿಯ ಜನಾಂಗವನ್ನೇ ಕಳ್ಳರು ಎಂದು ಅವಿವೇಕದ ಭಾಷಣ ಹೊಡೆದಾಗ ತೈಲವನ್ನು ಉತ್ಪಾದಿಸುವ ಕುಲಕಸುಬಿನ
ಹಿಂದುಳಿದ ಗಾಣಿಗ ಸಮುದಾಯದ ಮೋದಿ ಉಪನಾಮದ ಜನಾಂಗವು ಸುಮ್ಮನಿರುತ್ತಾರೆಯೇ? ರಾಹುಲ್‌ಗಾಂಧಿಯ ಅದೃಷ್ಟವೆಂದರೆ ಬ್ರಾಹ್ಮಣರಂತೆ ಗಾಣಿಗ ಸಮುದಾಯವೂ ಸುಮ್ಮನಿದ್ದವು. ಆದರೆ ಆ ಸಮುದಾಯದ ಸ್ವಾಭಿಮಾನಿ ವ್ಯಕ್ತಿಯೊಬ್ಬರು ಜಾತಿನಿಂದನೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಈಗ ರಾಹುಲ್‌ಗಾಂಧಿಗೆ ಇಂಥ ದುಸ್ಥಿತಿ
ಬಂದೊದಗಿದೆ.

ಆದರೆ ಇಂಥ ಗೂಬೆಯನ್ನು ಮಾತ್ರ ಬಿಜೆಪಿ ಮತ್ತು ಸರಕಾರದ ಮೇಲೆ ಕೂರಿಸಲಾಗುತ್ತಿದೆ. ಆದರೆ ಇಂಥ ಒಂದು ಜಾತಿ
ಹೆಸರಿನವರೆಲ್ಲರೂ ಕಳ್ಳರು ಎಂದು ಇನ್ನಾವುದೇ ಪ್ರಬಲ ಜಾತಿಯ ವಿರುದ್ಧ ಮಾತನಾಡಿದಿದ್ದರೆ ಇಷ್ಟೊತ್ತಿಗೆ ಸಮಾಜ ಹೊತ್ತಿ ಉರಿಯುತಿತ್ತು. ತಮಾಷೆಯೆಂದರೆ ರಾಹುಲ್‌ಗಾಂಽಯ ಜಾತಿಯನ್ನು ನಿಂದಿಸಿ ಭಾಷಣ ಮಾಡಲು ಯಾವನಿಗೂ ಸಾಧ್ಯವಿಲ್ಲ. ಏಕೆಂದರೆ ರಾಹುಲ್‌ಗಾಂಧಿ ಜಾತಿ ಯಾವುದೆಂದು ದೇಶದ ಪ್ರಜೆಗಳಿಗೆ ಸ್ಪಷ್ಟವಾಗಿಲ್ಲ.

ಆಯ್ತು, ಮಾತನಾಡಿದ ತಪ್ಪಿಗೆ ನ್ಯಾಯಾಲಯ ಜೈಲುಶಿಕ್ಷೆಯನ್ನು ವಿಽಸಿದೆ. ಇಂಥ ಸಮಯದಲ್ಲಿ ರಾಹುಲ್‌ಗಾಂಧಿಯ ಹಿತಚಿಂತಕರು ಪ್ರಮಾದವನ್ನು ಅರ್ಥೈಸಿ ಒಂದು ಕ್ಷಮಾಪಣೆಯ ಹೇಳಿಕೆಯನ್ನಾದರೂ ಕೊಡಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಸತ್ಯಹರಿಶ್ಚಂದ್ರನ ನೆರಳು ಮೈಮೇಲೆ ಬಿದ್ದಂತೆ ರಾಹುಲ್‌ಗಾಂಧಿ ಸತ್ಯ ಹೇಳಿದ್ದಕ್ಕೆ ಶಿಕ್ಷೆಯಾಗಿದೆ ಎಂದು ಅವಿವೇಕದ
ಸಮರ್ಥನೆಯ ಮೂಲಕ ಪರೋಕ್ಷವಾಗಿ ರಾಹುಲ್‌ಗಾಂಧಿಯ ಮೇಲೆ ಆಳಿಗೊಂದು ಕಲ್ಲು ಎಸೆಯುತ್ತಿದ್ದಾರೆ. ಅದ್ಯಾವುದ್ರಿ ಸತ್ಯ? ನರೇಂದ್ರ ಮೋದಿಯವರನ್ನು ಕಳ್ಳ ಎಂದು ಪಾಕಿಸ್ತಾನದ ಪ್ರಜೆಗಳೂ ಹೇಳುವುದಿಲ್ಲ.

ಮಲ್ಲಿಕಾರ್ಜುನ ಖರ್ಗೆಯವರು ‘ರಾಹುಲ್‌ಜೀ, ಲಲಿತ್‌ಮೋದಿ, ನೀರವ್‌ಮೋದಿ ಕಳ್ಳರು ಓಕೆ, ಆದರೆ ನರೇಂದ್ರಮೋದಿ ಯವರನ್ನು ಕಳ್ಳ ಎಂದು ಅದೇಗೆ ಹೇಳಿದೆಯಪ್ಪಾ? ಸ್ವಲ್ವವಾದರೂ ಯೋಚಿಸ ಬೇಡವಾ, ಮೋದಿಯವರು ಅದೆಷ್ಟು ಆಸ್ತಿ ಹೊಂದಿದ್ದಾರೆಂದು ಅಕ್ಷರಜ್ಞಾನವಿಲ್ಲದ ಮಂಡ್ಯದ ಬೋರೇಗೌಡನೂ ಹೇಳಿಬಿಡುತ್ತಾನೆ. ಆದರೆ ವಂಚಕರೊಂದಿಗೆ ನರೇಂದ್ರ ಮೋದಿಯವರನ್ನು ಹೋಲಿಸಿದ್ದು ಬಹಳ ತಪ್ಪು. ಇದರಿಂದ ನಿಮಗಲ್ಲದೇ, ಹಗಲುರಾತ್ರಿ ಪಕ್ಷಕ್ಕಾಗಿ ಮಣ್ಣುಹೊರುತ್ತಿರುವ ನಮಗೂ ಮುಜುಗರವಾಗಿದೆ. ಮೊದಲು ಒಂದು ಕ್ಷಮಾಪಣಾ ಹೇಳಿಕೆ ಕೊಟ್ಟು ಗಾಣಿಗ ಸಮುದಾಯದವರಲ್ಲಿ ಕ್ಷಮೆ ಕೋರಿಬಿಡಿ, ಇದರಿಂದ ನಿಮಗೂ ಪಕ್ಷಕ್ಕೂ ಒಳಿತು’ ಎಂದು ರಾಹುಲ್ ಗಾಂಧಿಯ ತಲೆಸವರಿ ಹೇಳಬಹುದಾಗಿತ್ತು.

ಏಕೆಂದರೆ ಅವರಿಗೆ ತಮ್ಮ ಮಗನಿಗಿಂತ ರಾಹುಲ್ ಭವಿಷ್ಯ ಮಿಗಿಲಲ್ಲವೇ? ಸಮ್ಮೋಹನಕ್ಕೊಳಗಾಗಿದ್ದಾರೆಂದರೆ ಒಬ್ಬ
ನಾಯಕನೂ ಜಾತಿನಿಂದನೆಯನ್ನು ಖಂಡಿಸಿ ರಾಹುಲ್‌ಗಾಂಧಿಯನ್ನು ತಿದ್ದುವ ಕೆಲಸಕ್ಕಿಳಿಯದೇ ನ್ಯಾಯಾಲಯದ ತೀರ್ಪನ್ನೇ ಧಿಕ್ಕರಿಸಿ ಸಮರ್ಥಿಸಿಕೊಳ್ಳುತ್ತಿರುವುದು ದುರಂತ. ನೆನಪಿಸಿಕೊಳ್ಳಿ ನರೇಂದ್ರ ಮೋದಿಯವರನ್ನು ಸೋನಿಯಾಗಾಂಧಿ ಮೌತ್ ಕಾ ಸೌದಾಗರ್ ಎಂದರು. ಅನೇಕರು ಚಾಯ್ವಾಲಾ, ಚೋರ್, ಚೌಕಿದಾರ್ ಚೋರ್ ’ಎಂದರು.

ಸಿದ್ದರಾಮಯ್ಯ ನರಹಂತಕ ಎಂದರು. ಕೆಲ ಮತಾಂಧರು ಮೋದಿಯವರ ತಲೆ ತೆಗೆಯಬೇಕು, ಮೋದಿಯವರನ್ನು ಕೊಂದು ನಾಯಿಗಳಿಗೆ ಎಸೆಯಬೇಕು ಎಂದೆಲ್ಲಾ ಹೇಳಿಕೆಗಳನ್ನು ಕೊಟ್ಟಾಗಲೂ ಮೋದಿಯವರು ಕ್ಷಮಿಸಿ ಮುನ್ನಡೆದರು. ಇನ್ನು ಸಂಸತ್ ಸದಸ್ಯ ಸ್ಥಾನವನ್ನು ದ್ವೇಷದಿಂದ ಕಿತ್ತುಕೊಳ್ಳಲಾಗಿದೆಯೆಂದು ಪ್ರತಿಭಟನೆಗಿಳಿದಿರುವುದು ವಿಪರ್ಯಾಸ. ನ್ಯಾಯಾಲಯದಿಂದ 2 ವರ್ಷ ಜೈಲುಶಿಕ್ಷೆಗೆ ಗುರಿಯಾದ ಸಂಸದನ ಸ್ಥಾನ ಅನರ್ಹಗೊಳ್ಳುವುದು ಸಂವಿಧಾನದ ನಿಯಮವಾಗಿದ್ದು ಅದರಂತೆ ರಾಹುಲ್‌ಗಾಂಽ ಸಂಸದನ ಸ್ಥಾನ ಕಳೆದುಕೊಂಡಿದ್ದಾರೆ.

ಮುಸಲ್ಮಾನರ ಭಾವನೆಗಳನ್ನು ಘಾಸಿಗೊಳಸಿದರೆಂಬ ಕಾರಣಕ್ಕೆ ಹೆಣ್ಣುಮಗಳು ನೂಪೂರ್ ಶರ್ಮರನ್ನು ಪಕ್ಷದಿಂದ ಉಚ್ಚಾಟಿಸಿ ಬಿಜೆಪಿಯ ನೈತಿಕತೆ ತೋರಿತ್ತು. ಪದೇ ಪದೇ ವಿವೇಕವಿಲ್ಲದ ಮಾತುಗಳನ್ನಾಡುತ್ತಾ, ಅಸಂಬದ್ಧವಾಗಿ ಭಾಷಣ
ಮಾಡುತ್ತಾ, ಪ್ರಬುದ್ಧತೆ ಬೆಳೆಸಿಕೊಳ್ಳದ, ವಿದೇಶಗಳಲ್ಲಿ ಕೂತು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಾ, ನ್ಯಾಷನಲ್ ಹೆರಾಲ್ಡ್‌ನಂಥ ಬಹುಕೋಟಿ ಹರಗರಣದಲ್ಲಿ ಸಿಲುಕಿ ಪ್ರಜಾಪ್ರಭುತ್ವದ ಆಶಯಗಳಿಗೆ ತದ್ವಿರುದ್ಧವಾಗಿ ಸಿಲುಕಿರುವಾಗ
ಇಂಥವ ರನ್ನೆಲ್ಲಾ ಸಮಾಜ ಸಹಿಸಿಕೊಂಡು ಕೂರಬೇಕೆ? ಬಂಗಾರದಂಥ ತನ್ನ ಮಗನನ್ನು ಕಳ್ಳ ಎಂದಾಗ ಹೀರಾಬೆನ್‌ನಂಥ
ಮಹಾತಾಯಿಯ ಆತ್ಮ ಇನ್ನೆಷ್ಟು ನೊಂದುಕೊಂಡು ಶಪಿಸುತ್ತದೆ ಹೇಳಿ? ಕಳ್ಳತನ ಮಾಡದಿದ್ದರೂ ಕಳ್ಳರನ್ನು ಬೆಂಬಲಿಸಿದ ವರೂ ಅಪರಾಧಿಗಳೆಂದು ಪರಿಗಣಿಸಲಾಗುವ ದೇಶದಲ್ಲಿಧಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಅಪರಾಧಿಯನ್ನು ಇಟ್ಟುಕೊಳ್ಳುವುದಕ್ಕೆ ಸಂವಿಧಾನದ ಗುಡಿ ಸಂಸತ್‌ಗೇನು ಮಾನ ಮರ್ಯಾದೆಗಳಿಲ್ಲವೇ? ವಿಚಿತ್ರ ನೋಡಿ.

ದೇಶದ ಮೇಲೆ ದಾಳಿ ಮಾಡಿದ ಇಸ್ಲಾಂ ದರೋಡೆಕೋರರನ್ನು ಭಯೋತ್ಪಾದಕರ ಜಾತಿಧರ್ಮವನ್ನು ಕಾಂಗ್ರೆಸ್  . ತಮ್ಮ ಅಜ್ಜಿ ಇಂದಿರಾಗಾಂಧಿಯನ್ನು ಕೊಂದ ಸಿಖ್ ಸಮುದಾಯವನ್ನು ನಿಂದಿಸಲಿಲ್ಲ. ತನ್ನ ತಂದೆ ರಾಜೀವ್‌ಗಾಂಧಿಯನ್ನು
ಕೊಂದ ಶ್ರೀಲಂಕಾ ತಮಿಳರ ಜಾತಿಯನ್ನು ನಿಂದಿಸಲಿಲ್ಲ. ಆದರೆ ದೇಶಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟು ದುಡಿಯು ತ್ತಿರುವ ಮೋದಿಯವರನ್ನು ನಿಂದಿಸಿದವರನ್ನು ಆ ಶ್ರೀರಾಮನೇ ನೋಡಿಕೊಳ್ಳುತ್ತಾನೆ ಬಿಡಿ. ಒಂದೊಮ್ಮೆ ಲಲಿತ್, ನೀರವ್‌ ರಂತೆ ಮೋದಿಯೂ ಕಳ್ಳರಾಗಿದ್ದರೆ, ರಾಹುಲ್‌ ಗಾಂಧಿ ಹರಿಶ್ಚಂದ್ರರಾಗಿದ್ದರೆ ಮೋದಿಯವರ ಆಸ್ತಿಯನ್ನೆಲ್ಲಾ ರಾಹುಲ್‌ಗಾಂಽ ಪಡೆದುಕೊಂಡು, ತನ್ನ ಆಸ್ತಿಯನ್ನೆಲ್ಲಾ ಮೋದಿಯವರಿಗೆ ಬಿಸಾಡಿ ಅದಲುಬದಲು ಮಾಡಿಕೊಳ್ಳಲಿ.

ಇನ್ನು ರಾಹುಲ್‌ಗಾಂಧಿಗಾಗಿ ಮಿಡಿಯುತ್ತಿರುವ ತುಡಿಯುತ್ತಿರುವ ಪ್ರತಿಯೊಬ್ಬರ ಕುಟುಂಬಕ್ಕೂ ರಾಹುಲ್‌ಗಾಂಧಿಯಂಥ ಸುಪುತ್ರನನ್ನೇ ಆ ಭಗವಂತ ಕರುಣಿಸಲಿ. ಹಾಗೆಯೇ ಮೋದಿ ಮೋದಿ ಎಂದು ಕೂಗಾಡುವವರಿಗೆಲ್ಲಾ ಆ ಭಗವಂತ ನರೇಂದ್ರ ಮೋದಿಯವರಂಥ ಮಕ್ಕಳನ್ನೇ ಕರುಣಿಸಲಿ. ಅಂಥ ಮಕ್ಕಳು ಅಸಲಿ ಮಿಸ್ಟರ್ ಬೀನ್ ಸಿನಿಮಾ ನೋಡಿಕೊಳ್ಳುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತುತ್ತಿರುವಾಗಲೇ ದೇಶದಲ್ಲಿನ ಹೆಗ್ಗಣ ನರಿ ನಾಯಿ ಗೂಬೆ ಕಪಟಗಳು ಈ ಮಟ್ಟಕ್ಕೆ ಕಂಗಾಲಾಗುತ್ತಿದ್ದಾರೆಂದರೆ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಆಗಲಿ ನೋಡಿ. ವಿನಾಶಾಯ ದುಷ್ಕೃತ ಸಂಭವಾಮಿ ಯುಗೇ ಯುಗೇ…!