Thursday, 31st October 2024

ಸಂವಿಧಾನ ತತ್ವಗಳು ಸಾಕಾರಗೊಳ್ಳಲಿ

ಆಚರಣೆ

ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ಧಾರವಾಡ 

ಭಾರತ ಸಂವಿಧಾನ ನಿರ್ಮಾಪಕರ ಸೇವೆಯನ್ನು ಸ್ಮರಿಸುವ ಸಲುವಾಗಿ ಈ ದಿನಾಚರಣೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಕ್ಟೋೋಬರ್ 11, 2015ರಂದು ಮುಂಬೈನಲ್ಲಿ ಅಂಬೇಡ್ಕರ್ ಮೆಮೋರಿಯಲ್‌ಗೆ ಅಡಿಗಲ್ಲು ಸಮಾರಂಭ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿಯವರು ನವಂಬರ್ 26ರಂದು ‘ಸಂವಿಧಾನ ದಿನ’ ಎಂದು ಪ್ರತಿ ವರ್ಷ ಆಚರಿಸುವುದಾಗಿ ಘೋಷಣೆ ಮಾಡಿದ್ದು, ಇದರ ಬಗ್ಗೆೆ ವಿಶೇಷ ಲೇಖನ.

ಭಾರತದ ಸಂವಿಧಾನದಲ್ಲಿ ಸೇರಿಸಲಾಗದ ಹಲವಾರು ಅಂಶಗಳನ್ನು ಬ್ರಿಿಟನ್ ಮಾದರಿಯಂತೆ ಸಂಪ್ರದಾಯದ ಮೂಲಕ ಆಚರಣೆಗೆ ತರಬೇಕು. ಅಂತಹ ವಾತಾವರಣ ಮತ್ತು ಮನೋಭಾವವನ್ನು ಸಮಾಜದಲ್ಲಿ ಬೆಳೆಸಬೇಕು. ಎಂದು ರಾಜೇಂದ್ರ ಪ್ರಸಾದ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಅಭಿಪ್ರಾಾಯಪಟ್ಟಿಿದ್ದಾಾರೆ.

ಹೆಂಡತಿ ಮಾರಣಾಂತಿಕ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾಾಳೆ. ಗಂಡ ಉನ್ನತ ವ್ಯಾಾಸಂಗಕ್ಕಾಾಗಿ ವಿದೇಶಕ್ಕೆೆ ಹೊರಟು ನಿಂತಿದ್ದಾಾರೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿಿರುವ ತನ್ನ ಹೆಂಡತಿಗಿಂತ ಉನ್ನತ ಶಿಕ್ಷಣವೇ ಅವರಿಗೆ ಮಹತ್ವವಾಯಿತೆ? ಇವರೆಂತಹ ಹೃದಯ ಹೀನ! ಎಂದು ಒಂದು ಕ್ಷಣವಾದರೂ ಅನ್ನಿಿಸದಿರದು. ಹೌದು, ತಾನು ಅನುಭವಿಸಿದ ನೋವು, ಅವಮಾನಗಳು ಅವರನ್ನು ಅಷ್ಟೊೊಂದು ಕಠೋರ ವ್ಯಕ್ತಿಿಯನ್ನಾಾಗಿ ಮಾಡಿದ್ದವು. ಈ ದೇಶದ ಅನಿಷ್ಠ ಜಾತಿ ವ್ಯವಸ್ಥೆೆಯನ್ನು ನಿರ್ಮೂಲನಗೊಳಿಸಬೇಕು. ದಾಸ್ಯಕ್ಕೆೆ ಸಿಕ್ಕ ಜನರ ಪಾಲಿಗೆ ಹೊಸ ಬದುಕು ಕಟ್ಟಬೇಕು ಎಂಬ ಮಹತ್ವಾಾಕಾಂಕ್ಷೆಯನ್ನು ಇಟ್ಟುಕೊಂಡು, ಅಂದು ದೀನಬಂಧು ಡಾ. ಬಾಬಾ ಸಾಹೇಬ್ ಅಂಬೇಡ್ಕರರು ‘ತಮ್ಮ ವೈಯಕ್ತಿಿಕ ಬದುಕಿಗಿಂತ ಈ ದೆೇಶದ ಹಿತ ಮುಖ್ಯ’ವೆಂದು ಉನ್ನತ ವ್ಯಾಾಸಂಗಕ್ಕಾಾಗಿ ವಿದೇಶಕ್ಕೆೆ ತೆರಳಿದರು. ಬುದ್ಧನ ನಿರ್ಮೋಹಿತ್ವವನ್ನು ಇಟ್ಟುಕೊಂಡು ಹಗಲಿರುಳು ಶ್ರಮವಹಿಸಿದರು. ಈ ದೇಶಕ್ಕೊೊಂದು ಸಂವಿಧಾನವನ್ನು ರಚಿಸಿಕೊಟ್ಟರು.

ಭಾರತದ ಸಂವಿಧಾನವನ್ನು ಅನುಮೋದಿಸಿದ ದಿನ ನವಂಬರ್ 26ನ್ನು ‘ಕಾನೂನು ದಿನ’ ಎಂದು 1979ರಿಂದ ಆಚರಿಸಲಾಗುತ್ತಿಿತ್ತು. ಜಸ್ಟಿಿಸ್ ಎಲ್.ಎಂ. ಸಿಂಗ್ವಿಿಯವರು ಭಾರತ ಸಂವಿಧಾನ ನಿರ್ಮಾಪಕರ ಸೇವೆಯನ್ನು ಸ್ಮರಿಸುವ ಸಲುವಾಗಿ ಈ ದಿನಾಚರಣೆಯ ಪರಿಪಾಟವನ್ನು ಹಾಕಿದ್ದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಕ್ಟೋೋಬರ್ 11, 2015ರಂದು ಮುಂಬೈನಲ್ಲಿ ‘ಅಂಬೇಡ್ಕರ್ ಮೆಮೋರಿಯಲ್’ಗೆ ಅಡಿಗಲ್ಲು ಸಮಾರಂಭ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿಯವರು ನವಂಬರ್ 26ನ್ನು ‘ಸಂವಿಧಾನ ದಿನ’ ಎಂದು ಪ್ರತಿ ವರ್ಷ ಆಚರಿಸುವುದಾಗಿ ಘೋಷಣೆಯನ್ನು ಮಾಡಿದರು. ಈ ಕುರಿತು ನವೆಂಬರ್ 19ರಂದು ಕೇಂದ್ರ ಸರಕಾರ ಗೆಜೆಟ್ ಪ್ರಕಟಣೆಯನ್ನು ಸಹ ಹೊರಡಿಸಿತು.

ಕಾನೂನಿನ ಆಳ್ವಿಿಕೆಯೆ ಪ್ರಜಾಪ್ರಭುತ್ವದ ಮೂಲಾಧಾರ ಎಂದು ನಮ್ಮ ಸಂವಿಧಾನ ನಿರ್ಮಾಪಕರು ಭಾವಿಸಿದ್ದರು. ನಮ್ಮ ಸಂವಿಧಾನ ಏಕಾಏಕಿ ರಚನೆಯಾದುದಲ್ಲ. (1895ರಲ್ಲಿ ತಿಲಕ್‌ರು ಭಾರತ ಸಂವಿಧಾನದ ಬಿಲ್ಲನ್ನು ರಚಿಸಿದ್ದರು. 1928ರಲ್ಲಿ ಮೊತಿಲಾಲ್ ನೆಹರೂ ಕಮಿಟಿ ಸಹ ಸಂವಿಧಾನದ ಕರಡು ತಯಾರಿಸಿತ್ತು. ಕೊನೆಯದಾಗಿ ಬಿ.ಎನ್.ರಾವ್ ಎಂಬ ಬುದ್ಧಿಿವಂತ ಐಸಿಎಸ್ ಅಧಿಕಾರಿ ವಿದೇಶಿ ಸಂವಿಧಾನಗಳನ್ನು ಅಧ್ಯಯನ ಮಾಡಿ, ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಹೋಗಿ ಖುದ್ದು ಅಧ್ಯಯನ ಮಾಡಿ ಸಂವಿಧಾನದ ಪ್ರಾಾಥಮಿಕ ಕರಡನ್ನು ರಚಿಸಿ ಪೆಬ್ರುವರಿ 1948ರಂದು ಕರಡು ಸಮಿತಿ ಮುಂದೆ ಸಲ್ಲಿಸಿದರು.) ಅಂಬೇಡ್ಕರ್ ನೇತೃತ್ವದ ಕರಡು ರಚನಾ ಸಮಿತಿ ಮತ್ತು ಸಂವಿಧಾನದ ರಚನಾ ಸಮಿತಿಯ 389 ಜನ ಪ್ರತಿನಿಧಿಗಳು ಸತತ 2 ವರ್ಷ 11 ತಿಂಗಳು ಮತ್ತು 18 ದಿನಗಳ ಕಾಲ ಚರ್ಚೆ ಮಾಡಿ, ಒಟ್ಟು 63,96,729 ರುಪಾಯಿಗಳನ್ನು ವೆಚ್ಚಮಾಡಿ ಸಂವಿಧಾನವನ್ನು ನವಂಬರ 1948ರಲ್ಲಿ ಸಿದ್ಧಪಡಿಸಿದರು. ಅದೇ ಕರಡನ್ನು 1949 ನವಂಬರ 26ರಂದು ಅಂಗೀಕರಿಸಲಾಯಿತು. ಆದರೆ, ಅದರಲ್ಲಿ ಬ್ರಿಿಟಿಷ್‌ರಿಂದ ರಚಿತಗೊಂಡ ‘1935ರ ಭಾರತ ಸರಕಾರ ಕಾಯಿದೆ’ ಬಹಳಷ್ಟು ಅಂಶಗಳನ್ನು ಅಳವಡಿಸಿಕೊಂಡಿದ್ದು ವಿಶೇಷ ಮತ್ತು ವಿಚಿತ್ರ! ಇದನ್ನು ಆರ್‌ಎಸ್‌ಎಸ್ ವಿರೋಧಿಸಿತು. ಶುದ್ಧ ಮತ್ತು ಸ್ವದೇಶಿ ಸಂವಿಧಾನವನ್ನು ರಚಿಸಬೇಕೆಂದು ಅದು ಆಗ್ರಹಿಸಿತ್ತು.

ಪ್ರಜಾಪ್ರಭುತ್ವದ ಸ್ವಾಾಸ್ಥ್ಯ ಮತ್ತು ಸಮೃದ್ಧಿಿಯ ಸಮಾಜವನ್ನು ಸ್ಥಾಾಪಿಸುವ ಉದ್ದೇಶದಿಂದ ಅಸ್ತಿಿತ್ವಕ್ಕೆೆ ಬಂದಿದೆ. ಆದರೆ, ಅದು ಕ್ರಮಿಸಿದ ಹಾದಿಯನ್ನು ಗಮನಿಸಿದರೆ ಸಂವಿಧಾನದ ಉದ್ದೇಶ ಸಫಲವಾಗಿದೆಯೇ ಎಂಬ ಪ್ರಶ್ನೆೆಗೆ ಸದೃಢವಾದ ಉತ್ತರ ನಮಗೆ ಸಿಗುವುದಿಲ್ಲ. ಹಾಗಂತ ಸಂವಿಧಾನ ವಿಫಲವಾಗುತ್ತಿಿದೆ ಎಂದಲ್ಲ. ಆದರೆ, ಯಾವುದೇ ಕಾನೂನು ಅಥವಾ ಕಟ್ಟಳೆಗಳಿಂದಲೇ ಮಾತ್ರ ಇಡೀ ಸಮಾಜದ ಗತಿಯನ್ನು ಬದಲಿಸಲು ಸಾಧ್ಯವಿಲ್ಲ. ಆ ಸಮಾಜದ ವ್ಯಕ್ತಿಿಗಳ ಹಾಗೂ ಸಮುದಾಯದ ಮನೋಭಾವ ಮತ್ತು ಪ್ರವೃತ್ತಿಿಗಳು ಅದಕ್ಕೆೆ ಪೂರಕವಾಗಿ ಸ್ಪಂದಿಸಿದಾಗ ಪ್ರಗತಿ ಕಾಣಲು ಸಾಧ್ಯ. ಅಧಿಕಾರ ಮತ್ತು ಪ್ರಭುತ್ವಗಳು ವಿಕೇಂದ್ರಿಿಕರಣಕ್ಕೆೆ ಒಳಗಾಗುತ್ತಿಿವೆ. ಮಾಧ್ಯಮ ಮತ್ತು ನಾಗರಿಕ ಸಮಾಜ ಹೆಚ್ಚು ಪ್ರಭಲವಾಗುತ್ತಿಿದೆ. ಸಾರ್ವಜನಿಕ ರಂಗದ ಪ್ರತಿಯೊಂದು ಹಂತದಲ್ಲಿ ಜನರ ಕ್ರಿಿಯಾತ್ಮಕ ಭಾಗವಹಿಸುವಿಕೆ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತಿಿದೆ.

ಪ್ರಜಾಪ್ರಭುತ್ವ ಎಂಬುದು ಕೇವಲ ಸರಕಾರದ ಒಂದು ವಿಧಾನವಾಗಿ ಉಳಿದಿಲ್ಲ. ಅದು ರಾಜಕೀಯದ ನಿರಂತರ ಪ್ರಯೋಗ ಶಾಲೆ. ಹೊಸ ಹೊಸ ಸವಾಲುಗಳನ್ನು ಎದುರಿಸುತ್ತ ಕಾಲಮಾನಕ್ಕೆೆ ತಕ್ಕಂತೆ ರೂಪಾಂತರವಾಗುತ್ತ ನಡೆಯುತ್ತಿಿದೆ. ಅದು ಜನರ ಜೀವನ ವಿಧಾನವಾಗುತ್ತಿಿದೆ. ಹಿಂದಿಗಿಂತ ಇಂದು ಸಂವಿಧಾನ, ಕಾನೂನು ಮತ್ತು ಪ್ರಜಾಸತ್ತಾಾತ್ಮಕ ಆಳ್ವಿಿಕೆಯ ಕಡೆಗೆ ಜನ ಹೆಚ್ಚು ಗಮನ ಕೊಡುತ್ತಿಿದ್ದಾಾರೆ. ಸಾಮಾಜಿಕ ಚಳವಳಿಗಳು, ರಾಜಕೀಯ ತಲ್ಲಣಗಳು ಈ ಪ್ರಜಾಪ್ರಭುತ್ವವನ್ನು ಬದಲಾಯಿಸುತ್ತವೆಯೇನೋ ಎನ್ನುವಷ್ಟರಲ್ಲಿ ಅವೇ ಘಟನೆಗಳು ಪ್ರಜಾಪ್ರಭುತ್ವವನ್ನು ಗಟ್ಟಿಿಗೊಳಿಸುತ್ತ ನಡೆಯುತ್ತವೆ. ಪ್ರಜಾಪ್ರಭುತ್ವದ ಸಂರಚನೆಗಳಾದ: ಶಾಸಕಾಂಗ, ಕಾರ್ಯಾಂಗ, ನ್ಯಾಾಯಾಂಗ, ಸಂವಿಧಾನಾತ್ಮಕ ಮತ್ತು ಶಾಸನಾತ್ಮಕ ಆಯೋಗಗಳು, ರಾಜಕೀಯ ಪಕ್ಷಗಳು, ಒತ್ತಡ ಗುಂಪುಗಳು, ಮಾಧ್ಯಮ ಹಾಗೂ ಮತದಾರ ವರ್ಗ ಹಿಂದಿಗಿಂತ ಇಂದು ಪಾರದರ್ಶಕತೆಗೆ ಹಾಗೂ ಸಂವೇದನೆಗೆ ಒಳಗಾಗುತ್ತಿಿವೆ. ಸಂವಿಧಾನದ ಅಂಗಗಳ ನಡುವೆ ಆಗಾಗ ವೈಚಾರಿಕ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಅವು ಸಂವಿಧಾನ ಮತ್ತು ಸ್ವಾಾತಂತ್ರ್ಯ ಹೋರಾಟದ ಸ್ಫೂರ್ತಿಯ ತತ್ವಾಾದರ್ಶಗಳ ಹಿನ್ನೆೆಲೆಯಲ್ಲಿ ನಡೆಯುವ ಸಕಾರತ್ಮಕ ಪ್ರಕ್ರಿಿಯೆಗಳು.

ಆದರೆ, ಸಮಾನತೆಯ ಮೌಲ್ಯಗಳ ಮೇಲೆ ರಚನೆಯಾದ ಸಂವಿಧಾನವು ಇನ್ನೂ ಆಚರಣೆಯಲ್ಲಿ ಬರಬೇಕಾಗಿದೆ. ಸಮಾನತೆ ಯೆಂಬುದು ಕೇವಲ ಚುನಾವಣೆಯಲ್ಲಿ ಮತದಾನಕ್ಕೆೆ ಮಾತ್ರ ಸೀಮಿತವಾಗಿದೆ. ಅಧಿಕಾರ ಶ್ರೀಮಂತರ, ಪ್ರಬಲ ಜಾತಿಯ ಜನರ ಪಾಲಾಗುತ್ತಿಿದೆ. ಬಡವರು ಬಡವರೇ ಆಗುತ್ತಿಿದ್ದಾಾರೆ. ಚುನಾವಣಾ ವೆಚ್ಚ ಒಬ್ಬ ಜನಸಾಮಾನ್ಯ ಇಂದು ಜನಪ್ರತಿನಿಧಿಯಾಗದಂತೆ ಮಾಡಿದೆ. ಅಸ್ಪಶ್ಯತೆ, ದೌರ್ಜನ್ಯಗಳು, ಸಾಮಾಜಿಕ ಬಹಿಷ್ಕಾಾರ ಅವ್ಯಾಾಹತವಾಗಿ ನಡೆಯುತ್ತಲೇ ಇವೆ. ನಿರುದ್ಯೋೋಗ, ಬಡತನ, ಬಿಕ್ಷಾಟಣೆ, ಅನಾರೋಗ್ಯ, ಅಪೌಷ್ಟಿಿಕತೆ ಹಾಗೂ ಅನಕ್ಷರತೆಗಳು ಇನ್ನೂ ಕಾಡುತ್ತಲೇ ಇವೆ. ಇಂತಹ ಹಲವಾರು ನ್ಯೂನೆತೆಗಳು ಪ್ರಜಾಪ್ರಭುತ್ವಕ್ಕೆೆ ಕಪ್ಪುು ಚುಕ್ಕೆೆಗಳಾಗಿವೆ.

ಎಲ್ಲ ಸಮಸ್ಯೆೆಗಳಿಗೆ ಪರಿಹಾರವನ್ನು ಅಥವಾ ಮಾರ್ಗೋಪಾಯಗಳನ್ನು ಸೂಚಿಸುವ ನಿಯಮಗಳನ್ನು ಸಂವಿಧಾನದಲ್ಲಿ ಸೇರಿಸಲು ಆಗುವುದಿಲ್ಲ. ‘ಸಂವಿಧಾನವು ನಾವು ಯಾವ ದೆಸೆಯಲ್ಲಿ ಸಾಗಬೇಕು ಎಂಬುದನ್ನು ಮಾತ್ರ ಹೇಳುತ್ತದೆ. ಸಾಮಾಜಿಕ ಸಂರಚನೆಗಳು ಆ ಅಂಶಗಳನ್ನು ಯಾವ ಗತಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ನಿರ್ಧರಿಸಬೇಕು’ ಎಂದು ರಾಜ್ಯಶಾಸ್ತ್ರಜ್ಞ ಆ್ಯಂಡ್ರೆೆ ಬೆಟ್ಲೇ ಹೇಳುವ ಮಾತು ಆಳುವ ವರ್ಗಕ್ಕೆೆ ನಿರ್ದೇಶನವಾಗಿದೆ. ‘ಭಾರತದ ಸಂವಿಧಾನದಲ್ಲಿ ಸೇರಿಸಲಾಗದ ಹಲವಾರು ಅಂಶಗಳನ್ನು ಬ್ರಿಿಟನ್ ಮಾದರಿಯಂತೆ ಸಂಪ್ರದಾಯದ ಮೂಲಕ ಆಚರಣೆಗೆ ತರಬೇಕು. ಅಂತಹ ವಾತಾವರಣ ಮತ್ತು ಮನೋಭಾವವನ್ನು ಸಮಾಜದಲ್ಲಿ ಬೆಳೆಸಬೇಕು’ ಎಂದು ರಾಜೇಂದ್ರ ಪ್ರಸಾದ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಅಭಿಪ್ರಾಾಯಪಟ್ಟಿಿದ್ದಾಾರೆ.

ಆದರೆ, ಸಂಪ್ರದಾಯ ಹೋಗಲಿ, ಲಿಖಿತ ಸಂವಿಧಾನದ ನಿಯಮಗಳನ್ನು ನಾವು ಸರಿಯಾಗಿ ಅನುಸರಿಸುತ್ತಿಿಲ್ಲ. ಸಂವಿಧಾನ ರಚನೆಯಾಗಿ ಕೇವಲ 60 ವರ್ಷಗಳಲ್ಲಿ ಸುಮಾರು 116 ತಿದ್ದುಪಡಿಯನ್ನು ಮಾಡಲಾಗಿದೆ. ಆದರೆ, 200 ವರ್ಷಗಳ ಹಳೆಯದಾದ ಅಮೆರಿಕ ಸಂವಿಧಾನಕ್ಕೆೆ ಇದುವರೆಗೆ ಕೇವಲ 27 ತಿದ್ದುಪಡಿಗಳನ್ನು ಮಾಡಲಾಗಿದೆ. ಜಗತ್ತಿಿನಲ್ಲಿಯೇ ಅತೀ ದೊಡ್ಡ ಸಂವಿಧಾನ, ಅತಿ ಹೆಚ್ಚು ಕಾಯಿದೆಗಳನ್ನು ಹೊಂದಿದ ದೇಶ ನಮ್ಮದು, ಆದರೆ, ಜಗತ್ತಿಿನಲ್ಲಿಯೇ ಅತೀ ಹೆಚ್ಚು ಅಪರಾದಗಳು ನಮ್ಮ ದೇಶದಲ್ಲಿ ನಡೆಯುತ್ತಿಿವೆ. ಸಂವಿಧಾನ, ಸಂಪ್ರದಾಯ, ಲಿಖಿತ, ಅಲಿಖಿತ ನಿಯಮಗಳು ಎಷ್ಟಿಿದ್ದರೇನು ಅವುಗಳ ಆಚರಣೆ ಮತ್ತು ಅವುಗಳ ಮೇಲೆ ಜನರಿಗೆ ಗೌರವ ಇಲ್ಲದೆ ಹೋದಮೇಲೆ ಸಂವಿಧಾನ ಇದ್ದು ಸತ್ತಂತೆ.

ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ ಮತ್ತು ರಾಜಕೀಯ ನಡವಳಿಕೆಗಳಲ್ಲಿ ವ್ಯತ್ಯಾಾಸ ಕಂಡುಬರುತ್ತಿಿವೆ. ವ್ಯವಸ್ಥೆೆ ಪ್ರಾಾತಿನಿಧಿಕವಾಗಿದೆಯೇ ಹೊರತು ಮತದಾರರಿಗೆ ಜವಾಬ್ದಾಾರಿಯುತವಾಗಿಲ್ಲ. ಅಧಿಕಾರದ ಆಸೆಗಾಗಿ ಒಂದು ಬಹುಮತ ಸರಕಾರವನ್ನು ಅಲ್ಪ ಮತಕೆ ತರುವುದು, ಮತಗಳನ್ನು ಖರೀದಿಸಿದಂತೆ ಜನಪ್ರತಿನಿಧಿಗಳನ್ನು ಖರೀದಿಸಿ ಸರಕಾರವನ್ನು ಕೆಡುವುವ ಕೇಡಿನ ರಾಜಕಾರಣ ನಡೆಯುತ್ತಿಿದೆ. ಸಂಸತ್ತು, ಶಾಸನ ಸಭೆಗಳು ದೇಶದ, ರಾಜ್ಯದ ಆಗುಹೋಗುಗಳ ಬಗ್ಗೆೆ ಗಂಭೀರ ಚರ್ಚೆ ಮಾಡುತ್ತಿಿಲ್ಲ. 1950ರ ದಶಕದಲ್ಲಿ ಪ್ರತಿವರ್ಷ ಸುಮಾರು 128 ದಿನ ಸಂಸತ್ತು ಅಧಿವೇಶ ನಡೆಸಿದರೆ, 80ರ ದಶಕದಲ್ಲಿ 100 ದಿನ, 90ರ ದಶಕದಲ್ಲಿ ಕೇವಲ 70 ದಿನ ಹಾಗೂ 2004 ರಿಂದ 2009 ರ ಅವಧಿಯಲ್ಲಿ ವಾರ್ಷಿಕ ಕೇವಲ 66 ದಿನ ಅಧಿವೇಶನ ನಡೆಯಿತು. ನಡೆದಷ್ಟು ದಿನ ಬರಿ ಗದ್ದಲ ಗೌಜುಗಳಲ್ಲಿ ಮುಳುಗಿ ಹೋಯಿತು. ಬ್ರಿಿಟನ್ ಸಂಸತ್ತು ತಪ್ಪದೆ ಪ್ರತಿವರ್ಷ 200 ದಿನ ಅಧಿವೇಶನ ನಡೆಸುತ್ತದೆ. ಬ್ರಿಿಟನ್ ಮಾದರಿಯ ಸಂಸದೀಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಮೇಲೆ, ಅವರು ಹಾಕಿಕೊಟ್ಟ ಮೇಲ್ಪಂಕ್ತಿಿ ನಮಗೆ ಅನುಕರಣೀಯವಾಗದಿರುವುದು ವಿಷಾದನೀಯ.

ಮಹಾತ್ಮಾಾ ಗಾಂಧೀಜಿಯವರು ಭಾರತ ಸಂವಿಧಾನ ರಚನೆಗೂ ಮುಂಚೆ ತಮ್ಮ ಆಶಯವನ್ನು ಹೀಗೆ ವ್ಯಕ್ತಪಡಿಸಿದ್ದರು
ಆದರೆ, ದೇಶದಲ್ಲಿ ನಡೆಯುತ್ತಿಿರುವ ಕಾನೂನಿನ ಉಲ್ಲಂಘನೆ, ಅಧಿಕಾರಿಗಳ ದರ್ಪ-ಡೌಲುಗಳು, ಸಂವಿಧಾನ ಮತ್ತು ಕಾನೂನನ್ನು ಸ್ವಂತ ಹಿತಕ್ಕಾಾಗಿ ಬಳಸುವುದು. ತಮ್ಮ ವಿರುದ್ಧ ಮಾತನಾಡುವವರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಿಸುವುದು ನಿರಾಂತಕವಾಗಿ ನಡೆಯುತ್ತಿಿದೆ. ದುರ್ಬಲರನ್ನು, ಅಮಾಯಕರನ್ನು ರಕ್ಷಿಸುವಲ್ಲಿ ಕಾನೂನು ಸೋಲುತ್ತಿಿದೆ. ಪ್ರಬಲರು ಕಾನೂನಿನ ಮೇಲೆ ಸವಾರಿ ಮಾಡುತ್ತಿಿದ್ದಾಾರೆ. ಈ ಎಲ್ಲ ಬೆಳವಣಿಗೆಯನ್ನು ನೋಡಿದರೆ ಗಾಂಧೀಜಿಯವರ ಕನಸಿನ ಸಂವಿಧಾನ ಇನ್ನೂ ಅಸ್ತಿಿತ್ವಕ್ಕೆೆ ಬಂದೇ ಇಲ್ಲ ಅನ್ನಿಿಸುತ್ತದೆ.