Thursday, 12th December 2024

ಸಂವಿಧಾನ ನೀಡಿದ ಪವಿತ್ರ ಹಕ್ಕು, ಕರ್ತವ್ಯ ಮತದಾನ

ಅಭಿಮತ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

sachidanandashettyc@gmail.com

“YOUR VOTE COUNTS”.
“YOUR VOTE IS INVALUABLE.”

ಚುನಾವಣೆಯೆಂಬುದು ಪ್ರಜಾಪ್ರಭುತ್ವದ ಹಬ್ಬ. ಮತದಾನವೆಂಬುದು ಸಂವಿಧಾನ ನೀಡಿದ ಪವಿತ್ರವಾದ ಹಕ್ಕು. ಮತದಾನ ಕೇವಲ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಮತ್ತು ಕರ್ತವ್ಯ ವೂ ಹೌದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹರೂ ಮತದಾನ ಮಾಡುವ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಮತದಾನದ ವಿಚಾರದಲ್ಲಿ ಮತದಾರ ತನ್ನ ಪ್ರಜ್ಞಾವಂತಿಕೆಯನ್ನು ಕಳೆದುಕೊಳ್ಳಬಾರದು.

ಮತಗಟ್ಟೆಗೆ ಹೋಗುವ ಮುನ್ನ ಜಾತಿ, ಮತ, ಧರ್ಮದ ಭಾವನೆಯನ್ನು ಕಳೆದುಕೊಂಡು ಕಣದಲ್ಲಿರುವ ಅಭ್ಯರ್ಥಿಗಳ ಗುಣಾವ ಗುಣಗಳ ಬಗ್ಗೆ ಚಿಂತನೆ ಮಾಡಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ದ್ವೇಶ ರಹಿತ ರಾಜಕಾರಣ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಾತಿನಿಧ್ಯ ನೀಡುವ ಜನನಾಯಕರನ್ನು ಆಯ್ಕೆ ಮಾಡಬೇಕಾಗಿದೆ. ಮತದಾನ ಪ್ರತಿಯೊಬ್ಬ ಪ್ರಾಪ್ತ ವಯಸ್ಕನ ಮೂಲಭೂತ ಹಕ್ಕು. ಅದನ್ನು ಪಾಲಿಸುವುದು ನಿಷ್ಠಾ ವಂತ ಪ್ರಜೆಯ ಕರ್ತವ್ಯ. ಕೇವಲ ಹಕ್ಕು ಮಾತ್ರವಲ್ಲ ಜವಾ ಬ್ದಾರಿ ಮತ್ತು ಕರ್ತವ್ಯವೂ ಆಗಿದೆ. ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುವುದೇ ಪ್ರಜಾಪ್ರಭುತ್ವ.

ಪ್ರಜಾಪ್ರಭುತ್ವವು ಒಂದು ಜನಪ್ರಿಯ ರಾಜಕೀಯ ವ್ಯವಸ್ಥೆಯೂ ಆಗಿದೆ. ಇದನ್ನು ನಂಬಿದ ದೇಶ ನಮ್ಮದು. ಚುನಾಯಿತ
ಪ್ರತಿನಿಧಿ ಗಳಿಂದ ಸಾಮಾಜಿಕ ಸಮಾನತೆ, ಪ್ರಜಾಪ್ರಭುತ್ವ ತತ್ವಗಳ ಅನುಷ್ಠಾನ, ಸರ್ವರಿಗೂ ಸಮಾನತೆಯನ್ನು ಅನುಷ್ಠಾನ ಗೊಳಿಸುವುದೇ ಪ್ರಜಾಪ್ರಭುತ್ವ. ನಮ್ಮ ಸಂವಿಧಾನವು ಇದನ್ನು ಒಪ್ಪಿಕೊಂಡಿದೆ. ಮತದಾನ ಈ ನಿಟ್ಟಿನಲ್ಲಿ ಪ್ರಮುಖ ಮಾನ ದಂಡ.

ನಮ್ಮ ದೇಶ ಹಾಗೂ ಇಡೀ ವಿಶ್ವಕ್ಕೆ ಸತ್ಯ, ಅಹಿಂಸೆ ಮತ್ತು ಧರ್ಮವನ್ನು ಬೋಽಸಿದ ನಾಡಿನಲ್ಲಿ ನಾವು ಜನಿಸಿದ್ದೇವೆ ಮತ್ತು ನಾವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆನ್ನುವುದನ್ನು ಪ್ರತಿಯೊಬ್ಬ ಜವಾಬ್ದಾರಿಯುತ, ಪ್ರಜ್ಞಾವಂತ ನಾಗರಿಕರಾದ ನಾವೆಲ್ಲರೂ ಹೆಮ್ಮೆ ಪಡಲೇಬೇಕು. ಆದರೆ ಕೆಲವೊಮ್ಮೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಹೊಂದಾಣಿಕೆಯ ಬಗ್ಗೆ ವಿವೇಕಯುಕ್ತ ಪ್ರಜ್ಞಾವಂತರು ಬೆಳಕು ಚೆಲ್ಲಬೇಕೋ ಎಂದೆನಿಸುತ್ತದೆ. ಈ ವಿಧಾನಗಳ ಒಳಿತನ್ನು ಸ್ವೀಕರಿಸದೇ ಅದರ ನಿಯಮಗಳಿಂದ ತಪ್ಪಿಸಿಕೊಳ್ಳುವ (evasive method) ಅಲ್ಪಾವಧಿಯ ಲಾಭಕ್ಕಾಗಿ (fugitive) ಸ್ವಾರ್ಥಿಗಳು ಪ್ರಾಮಾಣಿಕರನ್ನು ಮೋಸಗೊಳಿಸುತ್ತಿದ್ದಾರೆ ಎಂದರೆ ತಪ್ಪಿಲ್ಲ.

ಇದೀಗ ಕರ್ನಾಟಕ ರಾಜ್ಯದ ವಿಧಾನಸಭೆಗೆ ನಡೆಯಲಿರುವ ಚುನಾವಣೆ ರಂಗೇರಿದೆ. ಬಿಸಿಲಿನ ಧಗೆ ಮತ್ತು ತಾಪಮಾನ ಮತ್ತು ಚುನಾವಣೆಯ ಕಣದಲ್ಲಿರುವ ಸ್ಪರ್ಧಿಗಳ ಪೈಪೋಟಿ ಕಾವೇರುತ್ತಿದೆ. ಈ ಚುನಾವಣೆಯ ಫಲಿತಾಂಶ ರಾಜ್ಯದ ಭವಿಷ್ಯ ಮತ್ತು ರಾಜ್ಯದ ಜನರ ಹಿತದೃಷ್ಠಿ ಯಾವ ದಿಕ್ಕಿಗೆ ಸಾಗಬೇಕು ಎಂಬುದನ್ನು ನಿರ್ದೇಶಿಸಲಿದೆ. ಜವಾಬ್ದಾರಿಯುತ ಪ್ರಜೆಗಳಾದ ನಾವು ಪ್ರಜಾಪ್ರಭುತ್ವದ ಯಶಸ್ಸಿಗೆ ಅವಶ್ಯಕವಾಗಿರುವಂತಹ ಮತ್ತು ವಿಧಾನಸಭೆಯ ಅಧಿವೇಶನದಲ್ಲಿ ತನ್ನ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಿಖರವಾಗಿ, ಖಚಿತವಾಗಿ ಶ್ರಮಿಸುವ, ರಾಜ್ಯದ ಹಿತಾಸಕ್ತಿಗೆ ಬೆಳಕು ಚೆಲ್ಲುವ ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆ ಯನ್ನು ಪ್ರತಿಪಾದಿಸುವುದು ತನ್ನ ಮೂಲಭೂತ ಕರ್ತವ್ಯವೆಂದು ತಿಳಿಯುವ ಅಭ್ಯರ್ಥಿಯನ್ನು ಶಾಸಕನಾಗಿ ಆರಿಸಬೇಕಾಗಿದೆ.

‘Bad politicians are elected by good people who don’t vote’  ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಶೇ.೬೫-೭೦ರಷ್ಟು ಮತದಾನ ನಡೆದರೆ ಅದೇ ಭಾರೀ ಮತದಾನ ಎಂದು ಭಾವಿಸುವುದು, ಹೆಚ್ಚೂ ಕಡಿಮೆ ಅರ್ಧದಷ್ಟು ಮತದಾರರು ಚುನಾವಣಾ ಪ್ರಕ್ರಿಯೆಯಿಂದ ಹೊರಗಿರುವುದು ನಮ್ಮ ಚುನಾವಣಾ ಪದ್ಧತಿಯ ಅತೀ ದೊಡ್ಡ ನ್ಯೂನತೆ. ಯಾರೇ ಆಡಳಿತಕ್ಕೆ ಬಂದರೂ ಸರಕಾರದ ಕಾರ್ಯವೈಖರಿಯಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ವೆಂಬುದೇ ಬಹಳಷ್ಟು ನಾಗರಿಕರು ಮತದಾನದಲ್ಲಿ ನಿರಾಸಕ್ತಿ ವಹಿಸಲು ಮುಖ್ಯ ಕಾರಣವಾಗಿದೆ.

ಇನ್ನೊಂದು ಗಂಭೀರ ಸಮಸ್ಯೆಯೆಂದರೆ ನಗರಗಳಲ್ಲಿನ ಯುವ ಮತದಾರರು ಮತದಾನದಲ್ಲಿ ತೋರುತ್ತಿರುವ ನಿರಾಸಕ್ತಿ. ಇದು ಚುನಾವಣಾ ಫಲಿತಾಂಶದ ಮೇಲೆ ಗಂಭೀರ ಪರಿಣಾಮನ್ನು ಬೀರುತ್ತದೆ. ಅವರು ವಿದ್ಯಾವಂತರಿದ್ದಾರೆ, ಆರ್ಥಿಕವಾಗಿ
ಸಬಲ ರಾಗಿದ್ದಾರೆ, ಮೌಲ್ಯಯುತ ಮನಸ್ಕರೂ ಆಗಿದ್ದಾರೆ. ಆದರೆ ತಮ್ಮ ಮೌಲ್ಯಯುತ ಮತದ ಬಗ್ಗೆ ತಿರಸ್ಕಾರ ಮನೋಭಾವನೆ ಯನ್ನು ತೋರಿಸುತ್ತಾರೆ. ಮತದಾನದ ಬಗ್ಗೆ ಸಂಪೂರ್ಣ ಉದಾಸೀನರಾಗಿದ್ದಾರೆ. ಇದರಿಂದಾಗಿ ಗುಣಮಟ್ಟದ ಅರ್ಹ ಅಭ್ಯರ್ಥಿಯು ಸೋಲನ್ನನುಭವಿಸುವ ಸನ್ನಿವೇಶ ನಿರ್ಮಾಣವಾಗುತ್ತದೆ.

ಚುನಾವಣೆಯಲ್ಲಿ ಅಭ್ಯರ್ಥಿಯ ಬಹುಮತದ ಬೆಂಬಲವು ಆತನನ್ನು ಆರಿಸುತ್ತದೆ. ಈ ರೀತಿಯಾಗಿ ನೂರರಲ್ಲಿ ೫೧ ಜನರ ಬೆಂಬಲವನ್ನು ಅನುಭವಿಸುವವನು ಚುನಾಯಿತನಾಗುತ್ತಾನೆ ಮತ್ತು ಎಲ್ಲಾ ನೂರು ಜನರ ಮೇಲೆ ಆಳ್ವಿಕೆ ನಡೆಸುತ್ತಾನೆ. ಇಲ್ಲಿ ಪ್ರತಿಯೊಂದು ಮತದ ಮೌಲ್ಯವು ಅರಿವಾಗುವುದಿಲ್ಲವೇ? ಸಮಾಜದಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯು ತಾನು ಸುಖವಾಗಿ ಜೀವಿಸಬೇಕೆಂದು ಭಾವಿಸುತ್ತಾನೆ. ಸುಖವಾಗಿ ಜೀವನ ನಡೆಸಬೇಕಾದರೆ ವ್ಯವಸ್ಥಿತವಾದ ಸಮಾಜದಲ್ಲಿ ಜೀವನ ನಡೆಸಬೇಕು. ಆಗ ಮಾತ್ರ ಅವನ ಈ ಆಸೆ ಈಡೇರಲು ಸಾಧ್ಯ. ಸಮಾಜದಲ್ಲಿ ನೆಮ್ಮದಿ ಶಾಂತಿ ಇದ್ದರೆ ಮಾತ್ರ ವ್ಯಕ್ತಿಯೊಬ್ಬ ಸುಖವಾಗಿ ಜೀವಿಸಬಲ್ಲ. ಸಮಾಜದಲ್ಲಿ ಶಾಂತಿ, ನೆಮ್ಮದಿಯಿರಬೇಕಾದರೆ ಅಂತಹ ಸಮಾಜದಲ್ಲಿ ನೀತಿನಿಯಮಗಳಿರಬೇಕು. ಕಟ್ಟುಕಟ್ಟಳೆಗಳಿರಬೇಕು.

ಇಂತಹ ನೀತಿ ನಿಯಮ, ಕಟ್ಟುಕಟ್ಟಳೆಗಳನ್ನು ಕಾನೂನುಗಳೆಂದು ಕರೆಯಲಾಗುತ್ತದೆ. ಕಾನೂನುಗಳನ್ನು ರಚಿಸುವ,
ಅವುಗಳನ್ನು ಜಾರಿಗೆ ತರುವ, ಉಲ್ಲಂಸಿದವರನ್ನು ಶಿಕ್ಷಿಸುವ ಅಧಿಕಾರ ಯಾವ ಸಂಸ್ಥೆಗಿದೆಯೋ ಅದನ್ನು ಸರಕಾರ ಎಂದು ಕರೆಯಲಾಗುತ್ತದೆ. ಜನರನ್ನು ನಿಯಂತ್ರಣ ದಲ್ಲಿಡಲು ಕಾನೂನುಗಳು ಇರುವಂತೆ, ಸರಕಾರವನ್ನು ನಿಯಂತ್ರಣದಲ್ಲಿಡಲು ಸದಾ ಕಾನೂನಿರುತ್ತದೆ. ಅದನ್ನೇ ಸಂವಿಧಾನಾತ್ಮಕ ಕಾನೂನು ಎಂದು ಕರೆಯಲಾಗುತ್ತದೆ.

ನಮ್ಮ ಸಂವಿಧಾನವು ಸರ್ವೋಚ್ಚ ಕಾನೂನಾಗಿದೆ ಮತ್ತು ಇದು ಸರಕಾರವನ್ನು ಸ್ಥಾಪಿಸುವ ಕಾರ್ಯವಿಧಾನವನ್ನು ಸೂಚಿಸು ತ್ತದೆ. ಸಂವಿಧಾನವಿಲ್ಲದೆ ನಾವು ಯಶಸ್ವಿ ಪ್ರಜಾಪ್ರಭುತ್ವವನ್ನು ಯೋಚಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಜನರ ಸರಕಾರ, ಜನರಿಂದ ಮತ್ತು ಜನರಿಗಾಗಿ ಎಂದು ವ್ಯಾಖ್ಯಾನಿಸಲಾಗಿದೆ. ‘ಇಲ್ಲಿ ನಮ್ಮ ಮತಗಳು ಎಣಿಕೆಯಾಗುತ್ತವೆ’ ಎಣಿಕೆ ಮಾತ್ರವಲ್ಲದೆ ಸರಕಾರವನ್ನು ರಚಿಸಬಹುದು, ಮಾರ್ಪಡಿಸಬಹುದು ಅಥವಾ ಸರಕಾರವನ್ನು ಬೀಳಿಸಲೂ ಬಹುದು.

ಚುನಾವಣೆಗಳು ಪ್ರಜಾಪ್ರಭುತ್ವದ ಅತ್ಯಗತ್ಯ ಸಾಧನವಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರು ಸಾರ್ವಭೌಮರಾಗಿದ್ದಾರೆ ಮತ್ತು ಅವರು ತಮ್ಮ ಸಾರ್ವಭೌಮತ್ವವನ್ನು ತಮ್ಮ ಪ್ರತಿನಿಧಿಗಳ ಮೂಲಕ ಮತ್ತು ಚುನಾವಣಾ ಪ್ರಕ್ರಿಯೆಯ ಮೂಲಕ ಅಧಿಕಾರದ ಗದ್ದುಗೆಗೇರಿಸುತ್ತಾರೆ. ಮಾನವ ಸ್ವಾತಂತ್ರ್ಯ, ಕ್ರಮೇಣ ಕಳೆದು ಹೋದ ಸ್ವಾತಂತ್ರ್ಯ ಮತ್ತು ಅಧಿಕಾರದ ನಡುವಿನ ಹೋರಾಟ
ಶಾಶ್ವತವಾಗಿದೆ. ಪ್ರತೀ ಪ್ರಜಾಪ್ರಭುತ್ವ ಸಮಾಜವು, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಬೇಕಾಗಿದೆ.

ನಾವು ನಮ್ಮ ಮತದಾನದ ಹಕ್ಕನ್ನು ಚಲಾಯಿಸಲು ನಿರ್ಧರಿಸುವಾಗ ನಮ್ಮ ಆದ್ಯತೆಗಳು: ‘ರಾಷ್ಟ್ರ ಮೊದಲು, ಆಮೇಲೆ ಪಕ್ಷ’, ‘ಪಕ್ಷ ಮತ್ತು ಅಭ್ಯರ್ಥಿಗಳ ನಡುವೆ ಪಕ್ಷ ಮೊದಲು’, ‘ಅಭ್ಯರ್ಥಿ ಮತ್ತು ಹಣದ ನಡುವೆ, ಅಭ್ಯರ್ಥಿ ಮೊದಲು’. ಆದ್ದರಿಂದ
ನಾವೆಲ್ಲರೂ ಏಕರೂಪವಾಗಿ ಮತ ಚಲಾಯಿಸೋಣ ಮತ್ತು ಆದ್ಯತೆಗಳ ಪ್ರಕಾರ ರಾಷ್ಟ್ರದ ಹಿತದೃಷ್ಠಿಯಿಂದ ಉತ್ತಮ ವಾದದ್ದನ್ನು ಆಶಿಸೋಣ.

ನಮ್ಮ ಚುನಾವಣೆ ಹೇಗಿರಬೇಕು? ಎಂದೊಡನೆ ಮುಕ್ತವಾಗಿರಬೇಕು ಎಂಬುದು ಸರ್ವೇ ಸಾಧಾರಣವಾಗಿ ಕೇಳಿ ಬರುವ ಮಾತು. ಆದರೆ ಈ ಮುಕ್ತ ಎನ್ನುವ ಮಾತಿನ ವ್ಯಾಪ್ತಿ ಎಷ್ಟು? ಮುಕ್ತ ಎನ್ನುವುದರ ಅರ್ಥ ಚುನಾವಣೆಯಲ್ಲಿ ಯಾವುದೇ ಆಕ್ರಮಣಗಳಿರ ಬಾರದು, ಮತದಾರರ ಮೇಲೆ ಯಾವುದೇ ರೀತಿಯ ಒತ್ತಡ ತಂತ್ರವನ್ನು ಉಪಯೋಗಿಸಬಾರದು. ಮತದಾರ ಮುಕ್ತ ಮನಸ್ಸಿನಿಂದ ಪೂರ್ವಾಪರ ಯೋಚಿಸಿ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದ ಅವಕಾಶವಿರಬೇಕು ಎನ್ನುವುದು. ದುರಾದೃಷ್ಟವಶಾತ್ ಪ್ರತಿಬಾರಿ ಚುನಾವಣೆ ನಡೆದಾಗಲೂ ಭೃಷ್ಟಾಚಾರ, ಚುನಾವಣೆಯಲ್ಲಿ ಹಣದ ಬಳಕೆ, ಮತ, ಧರ್ಮ, ಜಾತಿ ಪಂಗಡಗಳನ್ನು ಎತ್ತಿ
ಕಟ್ಟುವುದು, ಪ್ರತಿ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಅಭ್ಯರ್ಥಿ ಯಾವ ಜಾತಿಯವನು, ಆ ಜಾತಿಯ ಎಷ್ಟು ಮತದಾರರಿದ್ದಾರೆ ಎಂದೇ ಲೆಕ್ಕ ಹಾಕಲಾಗುತ್ತದೆ.

ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗಲೂ ಕೂಡಾ ಜಾತಿಯೇ ಅಳತೆಗೋಲಾಗಿರುತ್ತದೆ ಹೊರತು ಅರ್ಹತೆಯನ್ನಲ್ಲ. ಬಂಡವಾಳ ಶಾಹಿಗಳ ಮತ್ತು ಮಾಫಿಯಾಗಳ ಹಾವಳಿ ಅವರು ಹಣದಿಂದ ಓಟುಗಳನ್ನು ಕೊಳ್ಳುತ್ತಾರೆ ಮತ್ತು
ಖರ್ಚು ಮಾಡುವ ನೂರು ಪಟ್ಟು ಸಂಪಾದಿಸಿಕೊಳ್ಳುತ್ತಾರೆ. ಆದ್ದರಿಂದ ಜನರು ಚುನಾವಣೆಯ ಮೇಲೆ ವಿಶ್ವಾಸವನ್ನು ಕಳೆದು ಕೊಂಡಿದ್ದಾರೆ. ಕಾನೂನು ಮತ್ತು ನಿಯಮ ಉಲ್ಲಂಘನೆ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಶತ್ರುಗಳು.

ಭ್ರಷ್ಟಾಚಾರಿಗಳು, ದೇಶದ್ರೋಹಿಗಳು, ಸಮಯ ಸಾಧಕರು, ಸಹಕಟುಂಬ ಸ್ವಾರ್ಥಿಗಳು ನಮ್ಮನ್ನು ಆಳಿಕೊಳ್ಳುವಂತೆ ಮಾಡಿ ಕೊಳ್ಳುತ್ತಿದ್ದೇವೆ. ಚುನಾವಣಾನಿಧಿಯು ನಮ್ಮ ಪ್ರಜಾಪ್ರಭುತ್ವದ ಅತೀದೊಡ್ಡ ಅಪಾಯ. ಯಾವುದು ಏನೇ ಇರಲಿ ಏನೇ ಆಗಲಿ ನಾವು ನಮ್ಮ ಚುನಾವಣೆಗಳ ಪಾವಿತ್ರೀಕರಣವನ್ನು ಯಾವುದೇ ಬೆಲೆ ತೆತ್ತಾದರೂ ನಿರ್ವಹಿಸಬೇಕು ಮತ್ತು ಯಾವುದೇ ಕಾರಣ ವನ್ನು ನೀಡದೆ ಮೂಲಭೂತವಾದಿ ಧೋರಣೆಯಿಲ್ಲದೆ ನಮ್ಮ ಮೂಲಭೂತ ಹಕ್ಕಾದ ಪವಿತ್ರ ಮತವನ್ನು  ಚಲಾಯಿಸ ಬೇಕಾಗಿದೆ.

ಲೇಖಕರು: ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರು ಮತ್ತು ಸಂದರ್ಶಕ ಪ್ರಾಧ್ಯಾಪಕರು