Saturday, 23rd November 2024

ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ಗೆ ಇರದ ಸ್ವಾತಂತ್ರ

ವೀಕೆಂಡ್ ವಿತ್ ಮೋಹನ್

camohanbn@gmail.com

ಭಾರತದ ಸಂವಿಧಾನವು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿತವಾಗಿದೆ. ಸಂವಿಧಾನಕ್ಕೆ ಬೇಕಿರುವ ಹಕ್ಕು ಪ್ರಜೆಗಳಿಂದ ಬರುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಆರಿಸಿ ಕಳುಹಿಸುವ ಶಾಸಕರು ಹಾಗೂ ಸಂಸತ್ ಸದಸ್ಯರ ಮೂಲಕ ಸಂವಿಧಾನವು ತನ್ನ ಹಕ್ಕನ್ನು ಪಡೆಯುತ್ತದೆ. ಬ್ರಿಟಿಷರು ಭಾರತ ಬಿಟ್ಟು ಹೊರಡಲು ಸಿದ್ಧರಾದ ಬಳಿಕ ಶುರುವಾದ ಸಂವಿಧಾನ ರಚನೆಯ ಪ್ರಕ್ರಿಯೆಯ ಹಿಂದೆ ಹಲವು ಅಚ್ಚರಿಯ ವಿಷಯಗಳಿವೆ. ಅಂದಿನ ಕಾಲಘಟ್ಟದಲ್ಲಿ ಜಗತ್ತಿನಲ್ಲಿದ್ದಂತಹ ಹಲವು ಮುಂದುವರೆದ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನದ
ಕಲ್ಪನೆ ಪ್ರಾರಂಭವಾಗಿತ್ತು.

ಜವಾಹರಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭ್ ಭಾಯ್ ಪಟೇಲರು ಸಂವಿಧಾನದ ರಚನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಾನೂನು ತಜ್ಞರು ಹಾಗೂ ಸಂವಿಧಾನ ತಜ್ಞರನ್ನು ಬಳಸಿಕೊಳ್ಳಬೇಕೆಂದು ಮಹಾತ್ಮಾ ಗಾಂಧಿಯವರ ಬಳಿ ಹೇಳಿದ್ದರು. ಆದರೆ ಅವರ ಮಾತನ್ನು ಒಪ್ಪದ ಮಹಾತ್ಮಾಗಾಂಧಿ ಭಾರತದಲ್ಲಿ ಬಾಬಾ ಸಾಹೇಬರಂತಹ ತಜ್ಞರಿರುವಾಗ ಇತರೆ ದೇಶದ ತಜ್ಞರ ಅವಶ್ಯಕತೆ ಇಲ್ಲವೆಂಬುದನ್ನು ನೆಹರೂವಿಗೆ ಮನವರಿಕೆ ಮಾಡಿಕೊಡುತ್ತಾರೆ.

ಸಮಯದ ಅಭಾವವಿರುವ ಕಾರಣ ಅಂತಾರಾಷ್ಟ್ರೀಯ ಮಟ್ಟದ ತಜ್ಞರನ್ನು ಬಳಸಿಕೊಳ್ಳೋಣವೆಂದು ನೆಹರು ಹೇಳುತ್ತಾರೆ. ಆದರೆ ಮಹಾತ್ಮಗಾಂಧಿ ನೆಹರು ಮಾತನ್ನು ಕೇಳುವುದಿಲ್ಲ. ಮಹಾತ್ಮಗಾಂಧಿ ಬಾಬಾಸಾಹೇಬರ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರವಷ್ಟೇ ನೆಹರು ಬಾಬಾಸಾಹೇಬರರನ್ನು ‘ಸಂವಿಧಾನ ರಚನೆಯ ಕರಡು ಪರಿಷ್ಕರಣೆಯ’ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಬಾಬಾಸಾಹೇಬರರಿಗೆ ಭಾರತೀಯ ಸಂವಿಧಾನ ರಚನೆಯ ಬಗ್ಗೆ ಹಲವು ಕನಸುಗಳಿತ್ತು.

ಸ್ವತಃ ಶೋಷಿತ ಸಮಾಜ ದಿಂದ ಬಂದಿದ್ದಂತಹ ಬಾಬಾಸಾಹೇಬರಿಗೆ ಭಾರತದ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಅಗತ್ಯವಿರುವ ಸಂವಿಧಾನವನ್ನು ರಚಿಸುವ ಯೋಚನೆ ಇತ್ತು. ಸಂವಿಧಾನದ ಕರಡಿನಲ್ಲಿದ್ದಂತಹ ಹಲವು ಸಮಸ್ಯೆಗಳ ಬಗ್ಗೆ ಬಾಬಾಸಾಹೇಬರು ಧ್ವನಿ ಎತ್ತಿದ್ದರು, ಬಾಬಾಸಾಹೇಬರು ಧ್ವನಿ ಎತ್ತಿ ದಂತಹ ಹಲವು ವಿಷಯಗಳ ಬಗ್ಗೆ ನೆಹರು ತಲೆ ಕೆಡಿಸಿಕೊಂಡಿರಲಿಲ್ಲ. ಬಾಬಾಸಾಹೇಬರನ್ನು ಸಂವಿಧಾನದ ಕರಡು ಪರಿಷ್ಕರಣೆಯ ಅಧ್ಯಕ್ಷರನ್ನಾಗಿ ಮಾಡಿದ್ದರೂ ಸಹ ಅವರ ಸಲಹೆಗಳಿಗೆ ಪರಿಷ್ಕರಣಾ ಮಂಡಳಿಯಲ್ಲಿ ನೆಹರು ಹೆಚ್ಚಿನ ಮಹತ್ವವನ್ನು ನೀಡಲು ಬಿಡುತ್ತಿರಲಿಲ್ಲ. ಈ ವಿಷಯವನ್ನು ಸ್ವತಃ ಬಾಬಾಸಾಹೇಬರು ಹೇಳಿಕೊಂಡಿzರೆ. ಬಾಬಾಸಾಹೇಬರ ಸಲಹೆಯನ್ನು ತಿರಸ್ಕರಿಸಿ ನೆಹರು ನೇತೃತ್ವದಲ್ಲಿ ಅಳವಡಿಸಿದ ಸಂವಿಧಾನದ ಹಲವು ಪರಿಚ್ಛೇದಗಳು ಇಂದಿಗೂ ಭಾರತದಲ್ಲಿ ಅನೇಕ ಸಮಸ್ಯೆಯನ್ನು ಹುಟ್ಟುಹಾಕುತ್ತಿವೆ.

ಸಂವಿಧಾನದಲ್ಲಿ ಜಮ್ಮು ಹಾಗೂ ಕಾಶ್ಮೀರಕ್ಕೆ ನೆಹರು ನೀಡಿದ ವಿಶೇಷ ಸ್ಥಾನಮಾನವನ್ನು ಬಾಬಾಸಾಹೇಬರು ಅಂದೇ ನಿರಾಕರಿಸಿದ್ದರು. ದೇಶದಲ್ಲಿ ಎರಡೆರಡು ಸಂವಿಧಾನವಿರುವುದು ಒಳ್ಳೆಯ ಬೆಳವಣಿಗೆಯಲ್ಲವೆಂಬುದನ್ನು ಅಂದೇ ಹೇಳಿದ್ದರು. ಕಾಶ್ಮೀರಕ್ಕೊಂದು ಸಂವಿಧಾನ ಇತರ ರಾಜ್ಯಗಳಿ ಗೊಂದು ಸಂವಿಧಾನವಿರುವುದು ಬಾಬಾಸಾಹೇಬರಿಗೆ ಇಷ್ಟವಿರಲಿಲ್ಲ. ಅಂದಿನ ಬಾಬಾಸಾಹೇಬರಿಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದ ರಿಂದಾಗುವ ಅನಾಹುತಗಳ ಕರಾರುವಕ್ಕಾದ ಅರಿವಿತ್ತು. ಜನಸಂಘದ ಸಂಸ್ಥಾಪಕರಾದ ಶ್ಯಾಮ ಪ್ರಸಾದ್ ಮುಖರ್ಜಿ ಅವರೂ ಸಹ ಒಂದು
ದೇಶದಲ್ಲಿ ಎರಡು ಸಂವಿಧಾನವಿರಬಾರದೆಂದು ಸ್ಪಷ್ಟವಾಗಿ ಹೇಳಿದ್ದರು.

ಅವರ ವಿರೋಧದ ನಡುವೆಯೂ ನೆಹರು ಅಬ್ದುನ ಸ್ನೇಹಕ್ಕೆ ತಲೆಬಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರು. ಪರಿಣಾಮ ಕಣಿವೆ ರಾಜ್ಯದಲ್ಲಿ
ಏಳು ದಶಕಗಳ ಕಾಲ ದಂಗೆಗಳು ಗಲಭೆಗಳು ಆಗುತ್ತಲೇ ಇತ್ತು. ವಿಶೇಷ ಸ್ಥಾನಮಾನ ನೀಡಿದರೂ ಸಹ ಕಾಶ್ಮೀರದ ಪ್ರತ್ಯೇಕತಾವಾದಿಗಳು ಪಾಕಿಸ್ತಾನ ದೊಂದಿಗೆ ಕೈ ಜೋಡಿಸಿzರೆ. ದೇಶ ವಿರೋಽ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಅರ್ಥಶಾಸ್ತ್ರದಲ್ಲಿ ನಿಪುಣರಾಗಿದ್ದಂತಹ ಬಾಬಾಸಾಹೇಬರಿಗೆ ಭಾರತದ ಆರ್ಥಿಕ ಸಚಿವಾಲಯದಲ್ಲಿ ಸಚಿವರಾಗಬೇಕೆಂಬ ಆಸೆಯಿತ್ತು. ಆದರೆ ನೆಹರು ತಮ್ಮ ಸರಕಾರದಲ್ಲಿ ಬಾಬಾಸಾಹೇಬರನ್ನು ಕಾನೂನು ಸಚಿವರನ್ನಾ ಗಿಸುವ ಮೂಲಕ ಅವರ ಆಸೆಗೆ ತಣ್ಣೀರು ಎರಚಿದ್ದರು.

ಗಾಂಧೀಜಿ ಮತ್ತು ಸರ್ದಾರ್ ವಲ್ಲಭ್ ಭಾಯ್ ಪಟೇಲರ ಆಗ್ರಹಕ್ಕೆ ಬಿದ್ದು ಬಾಬಾಸಾಹೇಬರನ್ನು ನೆಹರು ಸಂಪುಟದಲ್ಲಿ ಸೇರಿಸಿಕೊಂಡಿದ್ದರು. ಓರ್ವ ಅರ್ಥಶಾಸದ ತಜ್ಞರಾಗಿದ್ದಂತಹ ಬಾಬಾಸಾಹೇಬರ ಪ್ರತಿಭೆಯನ್ನು ದೇಶದ ಹಿತಕ್ಕಾಗಿ ಬಳಸಬಹುದೆಂಬುದು ನೆಹರೂವಿಗೆ ಮಹತ್ವದ ಸಂಗತಿಯಾಗಿ
ಕಾಣಿಸಲೇ ಇಲ್ಲ. ಸಂವಿಧಾನದ ವಿಷಯದಲ್ಲಿ ಬಾಬಾಸಾಹೇಬರು ಮಾಡಬೇಕಿದ್ದ ಕೆಲಸದ ಸನ್ನಿವೇಶ ಹಾಗೂ ಹಿನ್ನಲೆಗಳನ್ನು ತಿಳಿಯಬೇಕಾದ ಅಗತ್ಯವಿದೆ.

ಸಂವಿಧಾನ ಸಮಿತಿಯಲ್ಲಿದ್ದ ಹೆಚ್ಚಿನ ಸದಸ್ಯರಿಗೆ ದೇಶದ ಭವಿಷ್ಯಕ್ಕಿಂತಲೂ ತಮ್ಮ ಸ್ವಂತ ಭವಿಷ್ಯವೇ ಮುಖ್ಯವಾಗಿತ್ತೆಂಬುದು ಬಾಬಾಸಾಹೇಬರಿಗೆ ತಿಳಿದಿತ್ತು. ಹೀಗಾಗಿ ಸಂವಿಧಾನದಲ್ಲಿ ಬಳಸಬೇಕಿರುವ ಶಬ್ದಗಳ ಬಗ್ಗೆ ತಪ್ಪಿರಬಾರದೆಂಬುದರ ಬಗ್ಗೆ ವಿಶೇಷ ಕಾಳಜಿಯನ್ನು ಅವರು ವಹಿಸಿದ್ದರು. ‘ಅಲ್ಪ ಸಂಖ್ಯಾತ’ವೆಂಬ ಪದವನ್ನು ಬಳಸಿದರೆ, ಕೆಲವರು ತಮ್ಮ ರಾಜಕೀಯಕ್ಕಾಗಿ ಅದೇ ಪದವನ್ನು ಬಳಸಿಕೊಂಡು ಸಮಸ್ಯೆಗಳನ್ನು ಸೃಷ್ಟಿಸಬಹುದ ದೆಂಬುದರ ಸ್ಪಷ್ಟ ಅರಿವಿದ್ದಂತಹ ಬಾಬಾಸಾಹೇಬರು, ಆ ಜಾಗದಲ್ಲಿ ’ಸಮಾಜದ ಯಾವುದೇ ಭಾಗ’ವೆಂಬ ಪದವನ್ನು ಬಳಸಿದ್ದರು. ಅಂದು ಅಂಬೇಡ್ಕರರು ಊಹಿಸಿದ ಹಾಗೆ ಇಂದು ಅಲ್ಪಸಂಖ್ಯಾತರೆಂಬ ಪದದಡಿಯಲ್ಲಿ ನಡೆಯುತ್ತಿರುವ ರಾಜಕೀಯ ಒಂದಲ್ಲ ಎರಡಲ್ಲ. ಈ ಪದವನ್ನೇ ರಾಜಕೀಯ ಮುನ್ನೆಲೆಗೆ ತಂದು ಬಹುಸಂಖ್ಯಾತರಾಗುತ್ತಿರುವ ಧರ್ಮವೊಂದನ್ನು ಓಲೈಸಲು ಪ್ರತಿನಿತ್ಯ ಇಲ್ಲಸಲ್ಲದ ರಾಜಕೀಯ ನಡೆಯುತ್ತಲಿದೆ.

ಚುನಾವಣೆಯಲ್ಲಿ ಮತ ನೀಡಿದರೆಂಬ ಕಾರಣಕ್ಕೆ ಋಣಸಂದಾಯದ ರಾಜಕೀಯ ದೇಶದೆಡೆ ನಡೆಯುತ್ತಿದೆ. ಹಿಂದೂ ಧರ್ಮಕ್ಕಿಲ್ಲದ ಅನೇಕ ಸವಲತ್ತು
ಗಳನ್ನು ಇಸ್ಲಾಂ ಧರ್ಮಕ್ಕೆ ನೀಡಲಾಗುತ್ತಿದೆ. ಸಂವಿಧಾನ ರಚಿಸುವಾಗ ಬಾಬಾಸಾಹೇಬರು ಸಂಸತ್ತಿನ ಸದಸ್ಯರು ಹಾಗೂ ಮಂತ್ರಿಗಳ ಅಸಮಾಧಾನ ವನ್ನು ಆಗಾಗ ಎದುರಿಸಬೇಕಿತ್ತು. ಸಂವಿಧಾನದಲ್ಲಿ ಮೊದಲು ೨೪೩ ಅನುಚ್ಚೇದಗಳು ಮತ್ತು ೧೩ ಅನುಸೂಚಿಗಳಿದ್ದವು. ಬಾಬಾಸಾಹೇಬರು ಅವುಗಳಿಗೆ ತಿದ್ದುಪಡಿಯ ಸಲಹೆ ನೀಡಿ ೩೯೫ ಅನುಚ್ಚೇದ, ಎಂಟು ಅನುಸೂಚಿಗಳ ಸಂವಿಧಾನವನ್ನು ರಚಿಸಿದರು. ಕೆಲವೊಮ್ಮೆ ಕಾಂಗ್ರೆಸ್ ಪಕ್ಷದ ಸದಸ್ಯರ ಒತ್ತಡಕ್ಕೊಳಗಾಗಿ ಕೆಲವು ವಿಧಿಗಳನ್ನು ಹಾಗೆಯೆ ಉಳಿಸಿಕೊಳ್ಳಬೇಕಿತ್ತು. ಬಾಬಾಸಾಹೇಬರಿಗೆ ಇಷ್ಟವಾಗಿರದಿದ್ದರೂ, ವಿಧಿಯಿಲ್ಲದೆ ಅವರು ಸಮ್ಮತಿಸಬೇಕಿತ್ತು.

ಇಷ್ಟಾದರೂ ಬಾಬಾಸಾಹೇಬರ ವಿರೋಧಿಗಳಾಗಿದ್ದವರು ಅವರ ವಿರುದ್ಧ ಹಲವರನ್ನು ಪರಸ್ಪರ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದರು. ಅವರ ಕೆಲಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವಂತೆ ಹೇಳಿಕೊಡುತ್ತಿದ್ದರು. ಹೀಗಾಗಿ ಬಾಬಾಸಾಹೇಬರು ಯಾವ ಸಂಗತಿಗಳನ್ನು ಸಂವಿಧಾನದಲ್ಲಿ ಸೇರಿಸಲು ಇಷ್ಟಪಡು
ತ್ತಿದ್ದರೋ ಅವುಗಳಿಗೆ ಒಪ್ಪಿಗೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಅವರು ತಮ್ಮ ಇಚ್ಛೆಯ ವಿಷಯಗಳನ್ನು ಹಲವು ಬಾರಿ ನೇರವಾಗಿ ಹೇಳಲಾಗದೇ ಇತರರ ಬಾಯಿಂದ ಹೇಳಿಸುತ್ತಿದ್ದರು. ಅಂತಹವರಿಗೆ ಬಾಬಾಸಾಹೇಬರು ಅದೆಷ್ಟು ಚೆನ್ನಾಗಿ ತರಬೇತಿ ನೀಡುತ್ತಿದ್ದರೆಂದರೆ ವಾದ ಕೇಳುವವರಿಗೆ ಮಾತನಾಡುತ್ತಿರುವವರು, ಬೇರೆಯವರಾದರೂ ವಿಚಾರವೆಲ್ಲವೂ ಬಾಬಾಸಾಹೇಬರದ್ದೇ ಎಂದೆನಿಸುತ್ತಿತ್ತು.

ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾರರ ಕ್ಷೇತ್ರಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಅವರು ಹಿಂದುಳಿದ ವರ್ಗದ ಪ್ರತಿನಿಧಿ ನಾಗಪ್ಪರವರಿಂದ ಮಾಡಿಸಿದ್ದರು. ಆ ದಿನ ಬಾಬಾಸಾಹೇಬರು ಸದನದಲ್ಲಿ ಹಾಜರಿರಲಿಲ್ಲ. ಒಟ್ಟಿನಲ್ಲಿ ಬಾಬಾಸಾಹೇಬರಿಗೆ ತಮ್ಮ ಮನದ ಇಚ್ಛೆಗನುಗುಣವಾಗಿ ಸಂವಿಧಾನವನ್ನು ಸಂಪೂರ್ಣ ವಾಗಿ ರಚಿಸಲಾಗಲಿಲ್ಲವೆಂಬ ನೋವಿತ್ತು. ಅವರ ವಿರೋಧಿಗಳೆಲ್ಲರೂ ಸಂವಿಧಾನವನ್ನು ರಚಿಸಿದವರು ನೀವೇ ಎಂದು ಹೇಳಿದಾಗಲೆ, ಬಾಬಾಸಾಹೇಬರು ‘ಇಲ್ಲ ಸ್ವಾಮಿ ನಾವು ಒಂದು ಪರಂಪರೆಯ ವಾರಸುದಾರರು, ನೋಡಿ ಸಂವಿಧಾನ ರಚಿಸಿದವರು ನೀವೆಂದು ಜನ ಹೇಳುತ್ತಿದ್ದಾರೆ. ಆದರೆ ನಾನು ಕಷಪಟ್ಟು ದುಡಿದು, ನನಗೆ ಏನನ್ನು ಮಾಡಲು ತಿಳಿಸಲಾಗಿತ್ತೋ ಅದನ್ನು ಮಾಡಿದೆ ಎಂದು ಹೇಳಿದ್ದರು.

ಇಂದಿನ ಕಾಲಘಟ್ಟದಲ್ಲಿ ಹಲವು ನಾಯಕರು ಜಾತ್ಯತೀತತೆಯ ಹೆಸರಿನಲ್ಲಿ ಮುಸಲ್ಮಾನರ ಹಕ್ಕುಗಳ ಬಗ್ಗೆ ತೋರಿಸುವ ಓಲೈಕೆಯ ಪ್ರೀತಿ ಎಲ್ಲರಿಗೂ ತಿಳಿದಿರುವ ವಿಷಯ. ಅಂದಿನ ಕಾಲದಲ್ಲಿಯೇ ಬಾಬಾಸಾಹೇಬರು ಜಾತ್ಯತೀತತೆಗೆ ಸಂಬಂಧಿಸಿದಂತೆ ಯೋಚಿಸುವ ಪರಿ ಎಷ್ಟು ಸ್ಪಷ್ಟವಾಗಿತ್ತೆಂದರೆ,
ಸಂವಿಧಾನದ ಸಭೆಯ ಚರ್ಚೆಯೊಂದರಲ್ಲಿ ಜಾತ್ಯತೀತತೆಯ ನಿಜ ಅರ್ಥವನ್ನು ಅವರು ಹೇಳಿದ್ದರು. ಜಾತ್ಯತೀತವೆಂದರೆ ಜನರ ಧಾರ್ಮಿಕ ಭಾವನೆ ಗಳನ್ನು ಲೆಕ್ಕಿಸಬಾರದೆಂದಲ್ಲ. ಆದರೆ ಯಾವುದೋ ಒಂದು ಮತವನ್ನು ಇತರರ ಮೇಲೆ ಹೇರಲು ಲೋಕಸಭೆಗೆ ಅವಕಾಶವಿಲ್ಲವೆಂಬುದು
ಜಾತ್ಯತೀತ ರಾಜ್ಯದ ಅರ್ಥ ಎಂದು ಹೇಳಿದ್ದರು.

ಸಂವಿಧಾನ ರಚನೆಯ ಸಂದರ್ಭದಲ್ಲಿ ಸಂವಿಧಾನದ ಮೇಲಿನ ಮುಸಲ್ಮಾನರ ದೃಷ್ಟಿಕೋನ ಬಾಬಾಸಾಹೇಬರಿಗೆ ಅಚ್ಚರಿಯನ್ನೇ ನುಂಟು ಮಾಡಿರಲಿಲ್ಲ. ಮುಸಲ್ಮಾನರೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ ಸಹ ಗಾಂಽಜಿಯವರಿಗೆ ಅವರ ಮಾನಸಿಕತೆಯ ಅನುಭೂತಿಯ ಅರಿವಾಗಲಿಲ್ಲವೆಂಬುದರ
ಬಗ್ಗೆ ಬಾಬಾಸಾಹೇಬರಿಗೆ ಆಶ್ಚರ್ಯವಿತ್ತು. ಮುಸಲ್ಮಾನರಿಂದ ಬಹುದೂರವಿದ್ದ ‘ಬರ್ನಾಡ್ ಶಾ’ಗೆ ಅರ್ಥವಾಗಿದ್ದಂತಹ ಸಂಗತಿ ಗಾಂಧೀಜಿಯವರಿಗೆ ಅರ್ಥವಾಗಿಲ್ಲವವೆಂಬ ಬೇಜಾರು ಬಾಬಾಸಾಹೇಬರಿಗಿತ್ತು. ಈ ವಾಸ್ತವಿಕತೆಯ ಸಂಪೂರ್ಣ ಅರಿವು ಇದ್ದ ಕಾರಣದಿಂದಾಗಿ ಸಂವಿಧಾನ ಪ್ರಕ್ರಿಯೆಯಲ್ಲಿ ಮುಸಲ್ಮಾನರ ನಡವಳಿಕೆಯ ಅಂದಾಜು ಬಾಬಾಸಾಹೇಬರಿಗೆ ಮೊದಲೇ ಇತ್ತು.

ತಾವು ಅಲ್ಪಸಂಖ್ಯಾತರಾಗಿದ್ದುಕೊಂಡು ತಮ್ಮ ಹಿತ ಕಾಪಾಡಿಕೊಳ್ಳಬೇಕೆಂಬುದಷ್ಟೇ ಅವರಿಗಿದ್ದಂತಹ ಲಕ್ಷ್ಯ, ಹಿಂದೂಗಳು ಬಹುಸಂಖ್ಯಾತರಾಗಿರುವ ಕಾರಣಕ್ಕಾಗಿ ರಾಜಕೀಯವಾಗಿ ಮುಸಲ್ಮಾನರಿಗೆ ಕಾಣಿಸುತ್ತಿದ್ದಂತಹ ಏಕೈಕ ಮಾರ್ಗವೆಂದರೆ ತಮ್ಮದೇ ಪ್ರತ್ಯೇಕ ಮತದಾರ ಕ್ಷೇತ್ರದ ಬೇಡಿಕೆಯನ್ನಿಟ್ಟು ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುವುದು. ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತರಾಗಿ ವಾಸಿಸುವ ಹೊಸ ಪ್ರಾಂತ್ಯಗಳನ್ನು ರಚಿಸುವ ಯೋಚನೆ ಮುಸ್ಲಿಂ ನಾಯಕರಿಗಿತ್ತು.

ಈ ವ್ಯವಸ್ಥೆಯಲ್ಲಿ ತಾವು ರಾಜಕೀಯದ ಮೂಲಕ ಹೊಸ ಪ್ರಾಂತ್ಯಗಳಲ್ಲಿ ಹಿಂದುಗಳನ್ನು ಒತ್ತೆಯಾಗಿರಿಸಿ ಬಹುಸಂಖ್ಯಾತರಾಗಿರುವ ಹಿಂದೂಗಳು ಮುಸಲ್ಮಾನರೊಂದಿಗೆ ಚೆನ್ನಾಗಿ ವ್ಯವಹರಿಸಬಹುದೆಂಬ ಉದ್ದೇಶ ಮುಸ್ಲಿಂ ನಾಯಕರಲ್ಲಿತ್ತು. ಅವುಗಳನ್ನು ದೃಢ ಹಾಗೂ ಶಕ್ತಿಯುತವಾಗಿ ಮಾಡುವುದೇ ಇವರಿಗೆ ಎಲ್ಲಕ್ಕಿಂತಲೂ ಮುಖ್ಯವಾಗಿತ್ತು. ಈ ನಿಟ್ಟಿನಲ್ಲಿ ಮುಸ್ಲಿಂ ನಾಯಕರು ಪ್ರತ್ಯೇಕ ’ಸಿಂಧ್’ ಪ್ರಾಂತ್ಯದಲ್ಲಿ ಜವಾಬ್ದಾರಿಯುತವಾದ ಸರಕಾರ ಸ್ಥಾಪಿಸುವ ಬೇಡಿಕೆ ಇಟ್ಟಿದ್ದರು.

ಪ್ರಾಂತ್ಯಗಳಿಗೆ ವಿಶೇಷಾಧಿಕಾರ ನೀಡುವ ಬೇಡಿಕೆಯೊಂದಿಗೆ ಕೇಂದ್ರದಲ್ಲಿ ಹಿಂದುಗಳಿಗೆ ಪ್ರಾತಿನಿಧ್ಯ ಕಡಿಮೆಗೊಳಿಸುವ ಪ್ರಯತ್ನವನ್ನೂ ಮಾಡಿದರು. ಈ ನಿಟ್ಟಿನಲ್ಲಿ ಅವರು ಬ್ರಿಟಿಷ್ ಇಂಡಿಯಾ ಇದ್ದಾಗ ನಿರ್ಧರಿಸಲಾಗಿದ್ದ ಸ್ಥಾನಗಳ ಪೈಕಿ ಮೂರನೇ ಒಂದು ಭಾಗದಷ್ಟು ಮುಸಲ್ಮಾನರಿಗೆ ನೀಡಬೇಕೆಂಬ ಬೇಡಿಕೆಯನ್ನಿಟ್ಟರು. ಇವೆಲ್ಲದರ ಅರಿವಿದ್ದ ಕಾರಣಕ್ಕಾಗಿಯೇ ಬಾಬಾಸಾಹೇಬರು ಹಿಂದೂ ಸಮಾಜದಲ್ಲಿ ಶೋಷಣೆಗೊಳಗಾದರೂ ಸಹ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲಿಲ್ಲ. ಕ್ರಿಶ್ಚಿಯನ್ ಮಿಷನರಿಗಳ ಅಪಾಯಕಾರಿ ಮತಾಂತರವನ್ನು ವಿರೋಧಿಸಿ ಕ್ರಿಶ್ಚಿಯನ್ ಧರ್ಮಕ್ಕೂ ಮತಾಂತರ ವಾಗಲಿಲ್ಲ.

ಸ್ವತಂತ್ರ ಭಾರತವು ಮತ್ತೊಂದು ‘ಈ ಇಂಡಿಯಾ ಕಂಪನಿ’ಯಾಗುವುದು ಅವರಿಗೆ ಇಷ್ಟವಿರಲಿಲ್ಲ. ಸಂವಿಧಾನ ಶಿಲ್ಪಿ ಬಾಬಾಸಾಹೇಬರ ಹೆಸರನ್ನು ಬಳಸಿಕೊಂಡು ಇಲ್ಲಸಲ್ಲದ ರಾಜಕೀಯ ಮಾಡುವ ಕಾಂಗ್ರೆಸ್ಸಿನ ನಾಯಕರು, ಅವರು ಬದುಕಿದ್ದಾಗ ಸಂವಿಧಾನದ ರಚನೆಯ ವಿಷಯದಲ್ಲಿ ಅವರಿಗೆ ಸ್ವಾತಂತ್ರ್ಯ ನೀಡದೆ ಅವಮಾನ ಮಾಡಿದ್ದರು. ಅವರಲ್ಲಿನ ಆರ್ಥಿಕ ಜ್ಞಾನವನ್ನು ಬಳಸಿಕೊಳ್ಳದೇ ಅವರಿಗಿಷ್ಟವಿಲ್ಲದ ಮಂತ್ರಿಗಿರಿಯನ್ನು ನೀಡಿದ್ದರು. ಅವರ ಸಲಹೆಗಳನ್ನು ತಿರಸ್ಕರಿಸಿ ಅನೇಕ ಪರಿಚ್ಚೇದಗಳನ್ನು ಸಂವಿಧಾನದಲ್ಲಿ ಸೇರಿಸಿದ್ದರು.

ಸಂವಿಧಾನದ ರಚನೆಯ ಪ್ರಕ್ರಿಯೆಯಲ್ಲಿ ಬಾಬಾಸಾಹೇಬರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಸಂಸತ್ತಿನಲ್ಲಿ ಜೈ ಸಂವಿಧಾನ್ ಘೋಷಣೆ ಕೂಗುತ್ತಾರೆ. ಕಾಂಗ್ರೆಸ್ಸಿಗರಿಗೆ ಬೇಕಿರುವುದು ಇಂದಿರಾಗಾಂಧಿಯ ’’Constitution of ಇಂದಿರಾ’ ಆದರೆ ಭಾರತೀಯರಿಗೆ ಬೇಕಿರುವುದು
ಬಾಬಾ ಸಾಹೇಬರ ’Constitution of INDIA’