Sunday, 15th December 2024

ಮೂಲಸೌಕರ್ಯಗಳ ಯೋಜನೆಗಳ ಸುರಕ್ಷತೆ, ಆರೋಗ್ಯಕರ ಆರ್ಥಿಕತೆಗೆ ಸಹಕಾರಿ

ಅಭಿವ್ಯಕ್ತಿ

ರಾಜೀವ್‌ ಕುಮಾರ್‌, ಉಪಾಧ್ಯಕ್ಷರು, ನೀತಿ ಆಯೋಗ

ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಿರುವ ಕಡೆ ದೊಡ್ಡ ಪ್ರಮಾಣದ ನಿರ್ಮಾಣ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಮುಂದುವರಿಸಲು ಬಲವಾದ ಕಾರಣಗಳಿವೆ.

ಸಾಂಕ್ರಾಮಿಕ ರೋಗದ ಸೋಂಕು, ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಗುಣಪಡಿಸುವ ವಿಧಾನದ ಬಗ್ಗೆ ಕಡಿಮೆ ತಿಳಿವಳಿಕೆ ಇದ್ದ ಭಾರತವು 2020ರ ಮಾರ್ಚ್ 24 ರಂದು 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿತು. ಅದು ಹಂತ ಹಂತವಾಗಿ ಕೊನೆ ಗೊಳ್ಳುವ ಮೊದಲು 2020ರ ಮೇ 31ರವರೆಗೆ ಇತ್ತು. ಆ ಲಾಕ್‌ಡೌನ್‌ನಿಂದ ನಷ್ಟ ಹೆಚ್ಚಾಗಿತ್ತು, ಆದರೆ ಅಗತ್ಯವಾಗಿತ್ತು. ವೈರಸ್ ಮತ್ತು ಅದರ ನಡವಳಿಕೆಯ ಬಗ್ಗೆ ನಾವು ಹೆಚ್ಚು ತಿಳಿದುಕೊಂಡಂತೆ, ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಹೈಪರ್ – ಲೋಕಲ್ ವಿಧಾನವು ಆರ್ಥಿಕ ಚಟುವಟಿಕೆ ಮತ್ತು ಜೀವನೋಪಾಯಗಳ ಮೇಲೆ ಲಾಕ್‌ಡೌನ್‌ಗಿಂತ ಕಡಿಮೆ ಪರಿಣಾಮ ಬೀರುತ್ತದೆ ಎಂಬುದು ಮನದಟ್ಟಾಯಿತು.

ಸಾಂಕ್ರಾಮಿಕದ ಮೊದಲ ಅಲೆಯ ಅಂತ್ಯದ ವೇಳೆಗೆ, ಈ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ, ವಿವಿಧ ರಾಜ್ಯಗಳು ಸಾಂಕ್ರಾಮಿಕ, ಸನ್ನದ್ಧತೆಯ ಸ್ಥಿತಿ ಮತ್ತು ಜೀವ ಮತ್ತು ಜೀವನೋಪಾಯಗಳ ನಡುವಿನ ಸಮತೋಲನದ ವಿಭಿನ್ನ ಹಂತಗಳಲ್ಲಿವೆ ಎಂಬುದು ಸ್ಪಷ್ಟವಾಯಿತು. ವೈರಾಣು ಬಾಧೆಯಿಲ್ಲದ ಜಿಗಳಲ್ಲಿದ್ದ ಉದ್ಯಮಗಳನ್ನು ಮುಚ್ಚುವಂತೆ ಒತ್ತಾಯಿಸುವುದು ಸಾಂಕ್ರಾಮಿಕ ನಿರ್ವಹಣೆಯಲ್ಲಿ ತಮ್ಮ ಸ್ಥಳೀಯ ಕಾರ್ಯತಂತ್ರಗಳನ್ನು ನಿರ್ಧರಿಸಲು ರಾಜ್ಯಗಳಿಗೆ ನೀಡುವ ಕಳಪೆ ಆಯ್ಕೆಯಾಗಿತ್ತು.

ವಾಣಿಜ್ಯ ಬ್ಯಾಂಕುಗಳ ಆಹಾರೇತರ ಸಾಲದ ಶೇ.5 ಕ್ಕಿಂತ ಕಡಿಮೆ ಬೆಳವಣಿಗೆಗೆ ಹೋಲಿಸಿದರೆ ಬ್ಯಾಂಕ್ ಠೇವಣಿಗಳ ಎರಡು – ಅಂಕಿಯ ಬೆಳವಣಿಗೆಯು ಬೇಡಿಕೆಯಲ್ಲಿನ ಕುಸಿತವನ್ನು ಪ್ರತಿಬಿಂಬಿಸುತ್ತದೆ. ಉದ್ಯಮದಲ್ಲಿ ಸಾಮರ್ಥ್ಯದ ಬಳಕೆ ಇನ್ನೂ ಶೇ.70 ಕ್ಕಿಂತ ಕಡಿಮೆಯಿದೆ, ಇದು ಸ್ವಯಂ – ಬಲಪಡಿಸುವ ಹೂಡಿಕೆ ಚಕ್ರವನ್ನು ಉತ್ತೇಜಿಸುತ್ತದೆ ಎಂದು ನಂಬಲಾದ ಶೇ.80  ಕ್ಕಿಂತಲೂ ಕಡಿಮೆ. ಗಣನೀಯ ಮತ್ತು ಅಲ್ಪಾವಧಿಯ ನಗದು ವರ್ಗಾವಣೆ ಬೆಳವಣಿಗೆಯ ಪ್ರಚೋದನೆಗಳು ಅಲ್ಪಕಾಲಿಕ
ವಾಗಿರುತ್ತವೆ, ಭಾರತವನ್ನು ಯಾವುದೇ ಸುಸ್ಥಿರ ಪ್ರಯೋಜನಗಳಿಲ್ಲದ ಇನ್ನೂ ಹೆಚ್ಚಿನ ಸಾಮಾನ್ಯ ಸರಕಾರಿ ಸಾಲಕ್ಕೆ ದೂಡುತ್ತವೆ.

ಭಾರತವು ಅಜಾಗರೂಕ ವಿತ್ತೀಯ ವಿಸ್ತರಣೆಯ ಹಾದಿಯನ್ನು ತ್ಯಜಿಸಿತು ಮತ್ತು ತುಲನಾತ್ಮಕವಾಗಿ ಹೆಚ್ಚಿನ ಆರ್ಥಿಕ ಪರಿಣಾಮ ಮತ್ತು ಉದ್ಯೋಗ ಸೃಷ್ಟಿಯ ಸಾಮರ್ಥ್ಯವನ್ನು ಹೊಂದಿರುವ ಕ್ಷೇತ್ರಗಳ ಮೇಲಿನ ವೆಚ್ಚಗಳ ಮೂಲಕ ಆರ್ಥಿಕತೆಯ ಉತ್ಪಾದಕ ಸಾಮರ್ಥ್ಯವನ್ನು ಸುಧಾರಿಸುವತ್ತ ಗಮನಹರಿಸಿತು. ಇದು ಭಾರತದ ಆರ್ಥಿಕತೆಯನ್ನು ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕ
ವಾಗಿಸುತ್ತದೆ.

ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರವು ಆರ್ಥಿಕತೆಯ ಇತರ ಕ್ಷೇತ್ರಗಳಲ್ಲಿ ಹೂಡಿಕೆಯ ಪ್ರತಿ ಯೂನಿಟ್‌ಗೆ ಸೃಷ್ಟಿಯಾಗುವ ಉದ್ಯೋಗಗಳಿಗೆ ಹೋಲಿಸಿದರೆ ಖರ್ಚು ಮಾಡಿದ ಹಣಕ್ಕೆ ಸುಮಾರು ಐದು ಪಟ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಈ ಕ್ಷೇತ್ರಗಳಲ್ಲಿನ ಅತಿದೊಡ್ಡ ಉದ್ಯಮಗಳು ತಮ್ಮ ಉದ್ಯೋಗಿಗಳಲ್ಲಿ ಸೋಂಕು ಹರಡುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಉತ್ಪಾದನೆ ಮತ್ತು ಸೇವೆಗಳಲ್ಲಿ  ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಮೂಲಕ ಮತ್ತು ಜೀವನೋಪಾಯವನ್ನು ಒದಗಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು
ಮೂಲಸೌಕರ್ಯ, ಲಾಜಿಸ್ಟಿಕ್ಸ್‌ನಲ್ಲಿ ಹೂಡಿಕೆಯನ್ನು ವೇಗಗೊಳಿಸಲು ಮತ್ತು ನಗರಗಳಲ್ಲಿ ಪುನರುಜ್ಜೀವ ಮತ್ತು
ಪುನರುತ್ಪಾದನೆಯನ್ನು ಸುಧಾರಿಸುವುದು ಸೂಕ್ತವಾಗಿದೆ.

ನಿರ್ಮಾಣ ಅಥವಾ ಮೂಲಸೌಕರ್ಯದ ಸಂಪನ್ಮೂಲಗಳನ್ನು ಪರ್ಯಾಯವಾಗಿ ಆಸ್ಪತ್ರೆಗಳಲ್ಲಿ ಹೂಡಿಕೆ ಮಾಡಬಹುದು ಎಂಬ ವಾದವೇ ತಪ್ಪಾದುದು. ಭಾರತಕ್ಕೆ ಖಂಡಿತವಾಗಿಯೂ ಹೆಚ್ಚು ಹೆಚ್ಚು ಉತ್ತಮ ಆಸ್ಪತ್ರೆಗಳು ಬೇಕಾಗುತ್ತವೆ. ಆದರೆ ಈ ವೆಚ್ಚವನ್ನು ಅಗತ್ಯ ಸಂಖ್ಯೆಯ ಆರೋಗ್ಯ ಸೇವಾ ವೃತ್ತಿಪರರನ್ನು ಸೃಷ್ಟಿಸುವ ನಿಧಾನಗತಿಯ ಚಕ್ರದೊಂದಿಗೆ ಮಾಡಬೇಕಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಸರಕಾರವು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಗಮನ ನೀಡಿದ್ದು, ಆರೋಗ್ಯ ಮತ್ತು ಯೋಗ ಕ್ಷೇಮಕ್ಕೆ ಒಟ್ಟಾರೆ ವಿನಿಯೋಗವನ್ನು ಕಳೆದ ವರ್ಷಕ್ಕಿಂತ ಶೇ.135 ರಷ್ಟು ಹೆಚ್ಚಿಸಿದೆ.

2014ರಿಂದ, ಏಮ್ಸ ಕ್ಯಾಂಪಸ್‌ಗಳ ಸಂಖ್ಯೆ ಆರರಿಂದ 22ಕ್ಕೇರಿದ್ದು, ಇದು ಶೇ.267ರಷ್ಟು ಹೆಚ್ಚಳವಾಗಿದೆ. ವೈದ್ಯಕೀಯ ಕಾಲೇಜುಗಳು ಶೇ.48ರಷ್ಟು ಹೆಚ್ಚಳದೊಂದಿಗೆ 381 ರಿಂದ 565ಕ್ಕೆ, ಅವುಗಳ ಸ್ನಾತಕ ಸೀಟುಗಳು ಶೇ. 58% ರಷ್ಟು ಹೆಚ್ಚಳ ದೊಂದಿಗೆ 54348 ರಿಂದ 85726ಕ್ಕೆ ಮತ್ತು ಸ್ನಾತಕೋತ್ತರ ಸೀಟುಗಳು ಶೇ.80 ರಷ್ಟು ಹೆಚ್ಚಳದೊಂದಿಗೆ 30191 ರಿಂದ 54275 ಕ್ಕೆ ಏರಿಕೆಯಾಗಿವೆ. ಆರೋಗ್ಯ ವೃತ್ತಿಪರರ ಸಂಖ್ಯೆಯಲ್ಲಿನ ವೃದ್ಧಿಯ ವೇಗವು ದೇಶದ ಇತಿಹಾಸ ದಲ್ಲಿಯೇ ಅಭೂತಪೂರ್ವವಾಗಿದೆ.

ನಿರ್ಮಾಣ ಅಥವಾ ಮೂಲಸೌಕರ್ಯ ವೆಚ್ಚವು ಆಮ್ಲಜನಕ, ಔಷಧಗಳು ಅಥವಾ ಲಸಿಕೆಗಳನ್ನು ಒದಗಿಸುವುದರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ವಾದವೂ ತಪ್ಪು. ವಿವಿಧ ಹಂತಗಳಲ್ಲಿ ಪೂರೈಕೆ, ಸಮನ್ವಯ ಮತ್ತು ಅನುಷ್ಠಾನಗಳ ಅಡಚಣೆಯಿಂದಾಗಿ ಖರ್ಚು ಮಾಡದೇ ಉಳಿದ ಅನುದಾನವೂ ಇದೆ. ಉದಾಹರಣೆಗೆ, ಕಳೆದ ಅಕ್ಟೋಬರ್‌ನಲ್ಲಿ ದೈನಂದಿನ
ಸೋಂಕುಗಳು ಕ್ಷೀಣಿಸುತ್ತಿದ್ದಾಗಲೂ, ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗಾಗಿ 162 ಆಮ್ಲಜನಕ ಘಟಕಗಳನ್ನು 2020 ರಲ್ಲಿಯೇ ಸ್ಥಾಪಿಸಲು ಕೇಂದ್ರವು ಆದೇಶಿಸಿತ್ತು, ಆದರೂ. ಏಪ್ರಿಲ್ ಮಧ್ಯದ ವೇಳೆಗೆ ಕೇವಲ 33 ಘಟಕಗಳನ್ನು ಮಾತ್ರ ಸ್ಥಾಪಿಸಲಾಗಿದೆ.

ಇದಕ್ಕೆ ಅಡಚಣೆಯಾಗಿರುವುದು ಹಣಕಾಸಿನ ಸಂಪನ್ಮೂಲಗಳಲ್ಲ ಎಂಬುದು ಸ್ಪಷ್ಟವಾಗಿದೆ. ಸಾಂಕ್ರಾಮಿಕ ರೋಗವನ್ನು
ಎದುರಿಸಲು ಕೈಗೊಂಡಿರುವ ಕ್ರಮಗಳು ಯಾವುದೇ ಸಮಯದಲ್ಲೂ ಕಿಂಚಿತ್ತೂ ಆರ್ಥಿಕ ಅಡಚಣೆಯನ್ನು ಎದುರಿಸಿಲ್ಲ ಎಂದು ಮತ್ತೆ ಮತ್ತೆ ಒತ್ತಿ ಹೇಳಬೇಕಾಗಿದೆ. ಆದ್ದರಿಂದ ನವದೆಹಲಿಯ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯು, ಆರೋಗ್ಯ ಮತ್ತು ಮಾಲಿನ್ಯದಂಥ ವಲಯಗಳ ಸಂಪನ್ಮೂಲಗಳನ್ನು ಕಿತ್ತುಕೊಳ್ಳುತ್ತಿದೆ ಎಂಬ ಪ್ರತಿಪಾದನೆಗಳು ತಪ್ಪಾಗಿವೆ ಮತ್ತು
ದುರುದ್ದೇಶಪೂರಿತವಾಗಿವೆ.

ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಮೊದಲೇ ದೆಹಲಿಯ ಪುನರಾಭಿವೃದ್ಧಿ ಯೋಜನೆಯು ಪ್ರಾರಂಭವಾಯಿತು. ಆರ್ಥಿಕತೆಗೆ ಈ ಸಾರ್ವಜನಿಕ ವೆಚ್ಚಗಳಿಂದ ಸೃಷ್ಟಿಯಾಗುವ ಉದ್ಯೋಗಗಳು ಮತ್ತು ಬೇಡಿಕೆಯ ಅಗತ್ಯವಿರುವಾಗ, ಈ ಯೋಜನೆ ಗಳನ್ನು ಮಧ್ಯದಲ್ಲಿ ನಿಧಾನಗೊಳಿಸುವುದು ಅಥವಾ ಅವುಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು ನಿಜಕ್ಕೂ ಹಾಸ್ಯಾಸ್ಪದ
ವಾದುದು. ಈ ಯೋಜನೆಗಳ ಉಸ್ತುವಾರಿ ವಹಿಸಿರುವ ಹೆಸರಾಂತ ಕಂಪನಿಗಳು ಸೋಂಕುಗಳ ಹರಡುವಿಕೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವಾಗ ಇದು ವಿಶೇಷವಾಗಿ ನಿಜವೆನಿಸುತ್ತದೆ.

ಪ್ರಸ್ತುತ ಹಲವೆಡೆ ಚದುರಿರುವ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಂದೇ ಸ್ಥಳದಲ್ಲಿ ಕ್ರೋಡೀಕರಿಸುವುದು ಖಂಡಿತವಾಗಿಯೂ ಅವುಗಳ ಕಾರ್ಯವೈಖರಿಯನ್ನು ಸುಧಾರಿಸುತ್ತದೆ. ಕಚೇರಿಗಳನ್ನು ಹಂಚಿಕೆಯ ಸಾರಿಗೆ ಮೂಲಕ ಉತ್ತಮ ವಾಗಿ ಸಂಪರ್ಕಿಸುವ ಮೂಲಕ ಸಮಯ ಉಳಿತಾಯವಾಗುತ್ತದೆ, ರಸ್ತೆಯಲ್ಲಿ ದಟ್ಟಣೆ ಮತ್ತು ಮಾಲಿನ್ಯ ಕಡಿಮೆಯಾಗುತ್ತದೆ. ಇಂದು ವಿವಿಧ ಭವನಗಳಿಗೆ ಭೇಟಿ ನೀಡುವವರಿಗೆ ಈ ಕಟ್ಟಡಗಳ ಜೀವಿತಾವಧಿ ಮುಕ್ತಾಯವಾಗಿದೆ ಎಂಬುದು ಗೊತ್ತಾಗುತ್ತದೆ.

ವಿಶೇಷವಾಗಿ ಇಂಧನ ದಕ್ಷತೆಯ ಅಗತ್ಯಗಳನ್ನು ಮತ್ತು ಆರಾಮದಾಯಕವಾಗಿ ವಿನ್ಯಾಸಗೊಳಿಸಲಾದ ಕೆಲಸದ ಸ್ಥಳಗಳ ಅಗತ್ಯವನ್ನು ಗಣನೆಗೆ ತೆಗೆದುಕೊಂಡರೆ ಇದು ಸ್ಪಷ್ಟವಾಗುತ್ತದೆ. ಈ ಬಹುತೇಕ ಕಟ್ಟಡಗಳು ಹಲವು ವರ್ಷಗಳಿಂದ ತೇಪೆ ಕೆಲಸ ಮತ್ತು ವಿಸ್ತರಣೆಗಳಿಂದ ವಿರೂಪಗೊಂಡಿವೆ. ಸೋಂಕಿನ ಮರು – ವರ್ಧನೆಯ ವೇಗವನ್ನು ನಿಧಾನಗೊಳಿಸುವ ಪ್ರಯತ್ನಗಳು ಮತ್ತು ಪರಿಹಾರಗಳಿಗೆ ಸರಕಾರ ತನ್ನೆ ಗಮನ ನೀಡುತ್ತಿದೆ.

ಅದೇ ಸಮಯದಲ್ಲಿ, ಮೂಲಸೌಕರ್ಯ ಮತ್ತು ನಿರ್ಮಾಣ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದರಿಂದ ಭಾರತದ ಬಂಡವಾಳ ವೆಚ್ಚವನ್ನು ತಗ್ಗಿಸಲು, ಬಂಡವಾಳವನ್ನು ವೇಗವಾಗಿ ಮರುಬಳಕೆ ಮಾಡಲು ಮತ್ತು ನಮ್ಮ ಆರ್ಥಿಕತೆಯ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ವೇಗವನ್ನು ಹೆಚ್ಚಿಸಲು ನೆರವಾಗುತ್ತದೆ. ಸೋಂಕು ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ನಿರ್ವಹಿಸುವುದರ ಜೊತೆಗೆ ಮೂಲಸೌಕರ್ಯ ಮತ್ತು ದೊಡ್ಡ ನಿರ್ಮಾಣ ಯೋಜನೆಗಳನ್ನು ಮುಂದುವರಿಸು ವುದು ನಮ್ಮ ಆರ್ಥಿಕತೆಯನ್ನು ಮೊದಲಿನ ಆರೋಗ್ಯಕರ ಸ್ಥಿತಿಗೆ ಮರಳಿಸಲು ಸಹಾಯ ಮಾಡುತ್ತದೆ.