Sunday, 15th December 2024

ಹೆದರಿಕೆಗೆ ಹೆದರಿಕೆ ಹುಟ್ಟಿಸುವಷ್ಟು ಧೈರ್ಯ ಬೆಳೆಸಿಕೊಳ್ಳಬೇಕು

ಪರಿಶ್ರಮ

ಪ್ರದೀಪ್ ಈಶ್ವರ‍್

parishramamd@gmail.com

ಈ ಪ್ರಪಂಚದಲ್ಲಿ ಏಕಾಗ್ರತೆ ಮತ್ತು ನಂಬಿಕೆ ಮುಖ್ಯ. ಇವೆರಡೇ ಇದ್ರೆ ಸಾಲದು, ತುಂಬ ಜನ ಚನ್ನಾಗಿ ಓದುತ್ತಾರೆ, ಆದ್ರೆ ಏನು ಸಾಧಿಸ ಲಾಗದೆ ಉಳಿದುಬಿಡ್ತಾರೆ. ಗ್ರೇಟ್ ಸ್ಟೇಜ್‌ಗೆ ಯಾಕೆ ತಲುಪಲು ಆಗಲ್ಲ ಅಂದ್ರೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲ್ಲ. ಜತೆಗೆ ಧೈರ್ಯ ವನ್ನೂ ನಿಮ್ಮ ಜತೆ ಇರೋಹಾಗೆ ನೋಡಿಕೊಳ್ಳಿ.

ಸೋಲು ಸನಿಹಕ್ಕೆ ಬಂದಾಗ ಗೆಲುವು ಬಾಳ ಸಂಗತಿ ಯಾಗಬೇಕು. ಸೈಕಲ್ ನಲ್ಲೋ, ಗಾಡಿನನಲ್ಲೋ ಬಿದ್ದೋದ್ರೆ ಯಾರು ನೋಡದಂಗೆ ಎದ್ದೇಳಿ, ಆದ್ರೆ ಜೀವನದಲ್ಲಿ ಬಿದ್ದೋದ್ರೆ ಎರು ನೋಡೋ ಹಂಗೆ ಎದ್ದೇಳಿ. ಜೀವನದಲ್ಲಿ ಏನೋ ಸಾಽಸಬೇಕು ಅಂತ ಕನಸು ಕಟ್ಟಿಕೊಂಡಿ ರೋರಿಗೆ ಹೆದರಿಕೆ ಅನ್ನೋದು ಬಹಳಷ್ಟು ಜನರನ್ನ ಬೀದಿಗೆ ತಂದು ಬಿಡುತ್ತೆ. ಗೆಲುವಿನ ಸಾಮ್ರಾಜ್ಯಕ್ಕೆ ಅಧಿಪತಿಗಳಾಗ ಬೇಕಾದವರನ್ನ ಅರ್ಧದ ನಿಲ್ಲಿಸಿ ಬಿಡುತ್ತೆ.

ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಿ ಹವ್ಯಾಸವನ್ನ ಬದಲಾಯಿಸಿಕೊಳ್ಳಿ ಹಣೆಬರಹ ಬದಲಾಗಿ ಬಿಡುತ್ತೆ. ದೃಷ್ಟಿಯನ್ನ ಸ್ವಲ್ಪ ಬದಲಾಯಿಸಿಕೊಳ್ಳಿ ಸೃಷ್ಟಿಯೇ ಬದಲಾಗಿಬಿಡುತ್ತೆ. ದಡ ಸೇರದೆ ಇದ್ರೆ ಬದಲಾಯಿಸಿಬೇಕಾದುದ್ದು ದೋಣಿ ಯನ್ನಲ್ಲ ದಿಕ್ಕನ್ನ! ಆ ದಿಕ್ಕನ್ನ ಬದ ಲಾಯಿಸಿ ನೋಡಿ ಈ ಪ್ರಪಂಚದಲ್ಲಿ ಗೆಲುವಾಗಲಿ ಸೋಲಾಗಲಿ ಯಾವುದೇ ವ್ಯಕ್ತಿಗಿರಲ್ಲ. ಒಬ್ಬ ವ್ಯಕ್ತಿ ಗೆದ್ದ ಅಂದ್ರೆ ಆತನ ಪ್ರಯತ್ನ ಗೆದ್ದಿದೆ ಅಂತ. ಒಬ್ಬ ವ್ಯಕ್ತಿ ಸೋತ ಅಂದ್ರೆ ಆತನ ಪ್ರಯತ್ನ ಸೋತಿದೆ ಅಂತ.

ಆ ಕಾರಣನಕ್ಕೆ Success is not final failure is not final don’t stop until your victory becomes an history ಅಂತ ಕರಿಯೋದು. ಎಲ್ಲ ಯುವಕ ಯುವತಿಯರಿಗೆ ಒಂದು ಮಾತು ಹೇಳೋಕೆ ಇಷ್ಟ ಪಡ್ತಿನಿ. ಒಂದು ಸಮಸ್ಯೆ ಎದುರಾದಾಗ ರೂಟ್ cause ಹುಡುಕಿ. ನಮ್ಮ ಉಜಟಗೆ ನಮ್ಮ ಸ್ವಾಭಿಮಾನಕ್ಕೋ ಬಲಿಯಾಗಿ ನಮ್ಮ ತಪ್ಪನ್ನ ಅರ್ಥ ಮಾಡಿಕೊಳ್ಳದಿದ್ರೆ ಮುಂದಿನ ಗೆಲುವಿನ ಹೆಜ್ಜೆಯನ್ನ ಇಡೋಕಾಗಲ್ಲ. ಒಂದು ಲಾಠಿ ತಗೊಂಡು ಒಂದು ನಾಯಿಯನ್ನ ಹೊಡಿದ್ರೆ ಆ ನಾಯಿ ಲಾಠಿಯನ್ನ ಕಿತ್ತುಕೊಳ್ಳುತ್ತೆ. ಅದೇ ಲಾಠಿ ತಗೊಂಡು ಒಂದು ಸಿಂಹಕ್ಕೆ ಹೊಡಿರಿ ಆ ಹೊಡೆದಿರುವ ವ್ಯಕ್ತಿಯನ್ನ ಎಳೆದುಕೊಳ್ಳುತ್ತೆ. ನಾಯಿಗೆ ಲಾಠಿ ಪ್ರಾಬ್ಲಮ್ ಸಿಂಹಕ್ಕೆ ಹೊಡೆದಿ ರೋನು ಪ್ರಾಬ್ಲಮ.

ಯಾವತ್ತು ಅಷ್ಟೇ ಸಮಸ್ಯೆಯ ರೂಟ್ cause ಹುಡುಕಬೇಕು. ಪ್ರತಿ ಸಮಸ್ಯೆಯಿಂದ ಪ್ರತಿ ತಪ್ಪಿನಿಂದ ನಾವೊಂದು ಪಾಠವನ್ನ ಕಲಿಯ ಬೇಕು. ಆವಾಗ್ಲೇ ಜೀವನದಲ್ಲಿ ಏನನ್ನಾದರೂ ಮಾಡಲು ಸಾಧ್ಯ ಬಹಳಷ್ಟು ಜನ Instant ಆಗಿ ಸಕ್ಸಸ್ ಬಯಸುತ್ತಾರೆ. ಒಂದು ಚಿಕ್ಕ ಸೋಲು ಬರೋಹಾಗಿಲ್ಲ ಕುಗ್ಗಿಹೋಗ್ತಾರೆ. ಏನೋ ಸಾಧಿಸಬೇಕೆಂದು ದೊಡ್ಡದಾಗಿ ಕನಸು ಕಾಣ್ತಾರೆ.ಆದ್ರೆ ಚಿಕ್ಕ ಚಿಕ್ಕ ವಿಮರ್ಶೆಗಳಿಗೆ ಬಲಿಯಾಗಿ ಬಿಡುತ್ತಾರೆ. ಈ ಪ್ರಪಂಚವನ್ನು ಕಾಡುತ್ತಿರುವ ಅತಿ ದೊಡ್ಡ ರೋಗದ ಹೆಸರು ಒಪಿನಿಯನ್. ಅವ್ರು ಏನ್ ಅನ್ಕೋತಾರೆ ಇವ್ರು
ಏನ್ ಅನ್ಕೋತಾರೆ ಪ್ರತಿ ಅಭಿಪ್ರಾಯಕ್ಕೆ ಕಿವಿ ಕೊಡಬಾರದು. ನೋಡಿ ಒಪಿನಿಯ ಏನ್ ಇದೆ ಬೆಳಿಗ್ಗೆ 9 ಗಂಟೆಗೆ ಸ್ಕೂಲ್ ಬೆಲ್ ಆದಾಗ ಒಂದು ತರಾ ಬೇಜಾರಾಗುತ್ತೆ. ಅದೇ ಸಂಜೆ 4 ಗಂಟೆಗೆ ಬೆಲ್ ಹೊಡೆದ್ರೆ ಒಂದು ರೀತಿ ಸಂತೋಷ ಅಂದ್ರೆ ಸೇಮ್ ಬೆ ಬೆಳಿಗ್ಗೆ ಒಂದುಥರ ಅನ್ಸುತ್ತೆ. ಸಂಜೆ ಮನೆಗೆ ಬರುವಾಗ ಒಂದು ಥರ ಅನ್ಸುತ್ತೆ. ಒಪಿನಿಯಗೆ ಆದಷ್ಟು ಕಿವಿ ಕೊಡಬೇಡಿ.

ಗೆಲುವಿನ ಜರ್ನಿಯಲ್ಲಿ ಏನಾದರು ಸಾಧಿಸಬೇಕು ಅಂದ್ರೆ ನಿಮ್ಮ ಮೇಲೆ ನಿಮಗೆ ಗಟ್ಟಿಯಾದ ನಂಬಿಕೆ ಇರಬೇಕು. ಚದುರದ ಏಕಾಗ್ರತೆ ಯಿರಬೇಕು. ಸಾಧಿಸುತ್ತಿವಿ ಎಂಬ ನಂಬಿಕೆ ಇರಬೇಕು. ಈ ಪ್ರಪಂಚದಲ್ಲಿ ಏಕಾಗ್ರತೆ ಮತ್ತು ನಂಬಿಕೆ ಮುಖ್ಯ. ಇವೆರಡೇ ಇದ್ರೆ ಸಾಲದು, ತುಂಬ ಜನ ಚನ್ನಾಗಿ ಓದುತ್ತಾರೆ, ಆದ್ರೆ ಏನು ಸಾಧಿಸಲಾಗದೆ ಉಳಿದುಬಿಡ್ತಾರೆ. ಗ್ರೇಟ್ ಸ್ಟೇಜ್‌ಗೆ ಯಾಕೆ ತಲುಪಲು ಆಗಲ್ಲ ಅಂದ್ರೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲ್ಲ. ಜತೆಗೆ ಧೈರ್ಯವನ್ನೂ ನಿಮ್ಮ ಜತೆ ಇರೋಹಾಗೆ ನೋಡಿಕೊಳ್ಳಿ. ಅಪ್ಪಿ ತಪ್ಪಿ ಕೂಡ ಹೊಸ್ತಿಲಿಗೆ ಭಯನ ಇನ್ವೈಟ್ ಮಾಡಬೇಡಿ. Be careful ಒಂದು ಮಾತು ನೆನಪಿಟ್ಟು ಕೊಳ್ಳಿ A ಇಂದ Z ಗೆ Alphabets ನಲ್ಲಿ ಅ ಲೆಟರ್ ಬೆಂಡ್ ಆಗಿರುತ್ತೆ. ಆ ಲೆಟರ್ ಬೆಂಡ್ ಆಗಿರುತ್ತೆ,

ಇ ಲೆಟರ್ ಬೆಂಡ್ ಆಗಿರುತ್ತೆ. ಆದ್ರೆ ಒಂದೇ ಒಂದು ಲೆಟರ್ ಮಾತ್ರ ಬೆಂಡ್ ಆಗಿರಲ್ಲ, ಅದು I ಅನ್ನೋ ಲೆಟರ್. ಅಂದ್ರೆ ನಾನು, ನಾವು ಯಾವತ್ತು ಬೆಂಡ್ ಆಗಬಾರದು. ದೈರ್ಯವಾಗಿರಬೇಕು. Alphabet ನಲ್ಲಿರೋ I ಲೆಟರ್ರೆ ಹೇಳ್ತಿದೆ. ಯಾರ್ ಮುಂದೆ ಬೆಂಡ್
ಆಗಬೇಡ ಅಂತ, ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಈ ಪ್ರಪಂಚದಲ್ಲಿ ನಿನ್ನ ಸಕ್ಸಸ್ ನಿನ್ನ ಕುಟುಂಬಕ್ಕೆ ತುಂಬಾ ಮುಖ್ಯ. ನಿನ್ನನ್ನ ಒಬ್ಬ ಅಧ್ಬುತ ಪ್ರತಿಭೆಯನ್ನಾಗಿ ನೋಡಬೇಕೆಂದು ಅಪ್ಪ ಅಮ್ಮ ಕನಸು ಕಂಡಿರ್ತಾರೆ. ಆದ್ರೆ ನೀವು ಒಂದು ಚಿಕ್ಕ ಸೋಲಿಗೆ ಹೆದರಿಬಿಟ್ರೆ ಹೇಗೆ!

ಒಂದು ಸಲ ನ್ಯೂಯಾರ್ಕ್ ನಗರದಲ್ಲಿ ಪ್ಯಾಬಿಲೋ ಪಿಕಾಸೋ ನಡೆದುಕೊಂಡು ಹೋಗ್ತಿರ್ತಾರೆ, ಒಂದು ಲೇಡಿ ಬಂದು ಕೇಳ್ತಾಳೆ. ಪ್ಯಾಬಿಲೋ ಪಿಕಾಸೋ ನಿನ್ನ ಬಗ್ಗೆ ಜನ ತುಂಬಾ ಮಾತಾಡ್ತಾರೆ. ಬಹಳಷ್ಟು ಮಾತಾಡ್ತಾರೆ. ನೀನೇನೋ World ಫೇಮಸ್ ಪೈಂಟರ್ ಅಂತೆ, ತಗೋಳಿ ಈ ಪೇಜ್‌ನಲ್ಲಿ ಏನಾದ್ರು ಬರೆದುಕೊಡಿ ಎಂದು ಕೇಳ್ತಾಳೆ.

30 ಸೆಕೆಂಡ್‌ಗೆ ಪ್ಯಾಬಿಲೋ ಪಿಕಾಸೋ ಗೀಚಿ ಕೊಡ್ತಾನೆ. Go lady this is the Worth of 50 Lakhs ಅಂತ ಹೇಳ್ತಾನೆ. ಆಕೆ ಹೇಳ್ತಾಳೆ 30 ಸೆಕೆಂಡ್ ಗೀಚಿ ಬಿಟ್ಟು, 50 ಲಕ್ಷ ಅಂತ ಹೇಳ್ತಿಯ! ಇರ್ಲಿ ಬಿಡು ಅಂತ ಹೇಳಿ ಹೋಗಿ ಯಾವುದೋ Paint ಶಾಪ್‌ಗೆ ತೋರಿಸ್ತಾಳೆ, ಕರೆಕ್ಟ್ ಅಮ್ಮ ಇದು 50 ಲಕ್ಷ ಬೆಲೆಬಾಳುತ್ತೆ ಅಂತಾರೆ. ಆಕೆಗೆ ಶಾಕ್ ಆಗಿ ಮಾರನೇ ದಿನ ಪ್ಯಾಬಿಲೋ ಪಿಕಾಸೋನ ಹುಡುಕಿಕೊಂಡು ಬಂದು ಕೇಳ್ತಾಳೆ ಪಿಕಾಸೋ 30 ಸೆಕೆಂಡ್‌ಲಿ 50 ಲಕ್ಷ ವರ್ಥ್ ತರುತಕಂಥ ಪೇಂಟಿಂಗ್ ಹೆಂಗ್ ಮಾಡ್ದೆ.

ಪ್ಯಾಬಿಲೋ ಪಿಕಾಸೋ ಹೇಳ್ತಾರೆ, ಕರೆP ಅಮ್ಮ 30 ಸೆಕೆಂಡ್‌ಲಿ ನಾನು 50 ಲಕ್ಷ ವರ್ಥ್ ಬರುವ ಪೈಂಟ್ ಗೀಚ್ದೆ ಆದ್ರೆ ಅದಕ್ಕೆ 30
ವರ್ಷದ ಕಷ್ಟ ಇತ್ತು, 30 ವರ್ಷದ ತಪಸ್ಸಿತ್ತು, 30 ವರ್ಷದ ಏಕಾಗ್ರತೆ ಇತ್ತು ಲೈಫಲ್ಲಿ ಯಾರಿಗೂ ಇನ್ಸ್ಟಂಟ್ ಸಕ್ಸಸ್ ಬರಲ್ಲ. ಕಣ್ಣಿಗೆ ಹೊರಗಿನ ಪ್ರಪಂಚ ಗೊತ್ತು ಕಣ್ಣೀರಿಗೆ ಒಳಗಿನ ಪ್ರಪಂಚ ಗೊತ್ತು. ಕಷ್ಟ ಬಂದಾಗ ಕಣ್ಣೀರಾಕಿ ಅವಮಾನ ಮಾಡಬೇಡಿ.

ಯುವಕ ಯುವತಿಯಲ್ಲಿ ಇರ್ತಕ್ಕಂತ ಸಾಮರ್ಥ್ಯ ಪ್ರಪಂಚಕ್ಕೆ ಗೊತ್ತಾಗ್ಬೇಕು ಈಗಾಗಲೇ ನಾವು ಭಾರತೀಯರು ನಂ.1 ಪ್ರಪಂಚದಲ್ಲಿ ಪ್ರತಿ ಕ್ಷೇತ್ರದಲ್ಲೂ ಭಾರತೀಯರು ನಂ.1 ಆಗಿರಬೇಕು, ಅದರಲ್ಲಿ ಕನ್ನಡಿಗರು ಸಾಕಷ್ಟು ಮಂದಿ ಇರಬೇಕು. ದೈರ್ಯವಾಗಿರಿ ಬಹಳಷ್ಟು
ಜನಕ್ಕೆ ಒಬ್ಬೊಬರಿಗೆ ಒಂದೊಂದು ಭಯ. ಪರೀಕ್ಷೆ ಬರೆಯುವ ಭಯ, ಬಿಸಿನೆಸ್ ಮಾಡೋ ವ್ಯಕ್ತಿಗೆ ಸೋತು ಹೋಗ್ತೀನಿ ಅನ್ನೋ ಭಯ, ಪ್ರತಿಯೊಬ್ಬರಿಗೆ ಒಂದೊಂದು ಭಯ. ನೀವು ಮಳೆ ಬರೋ ಮೊದಲೇ ಛತ್ರಿ ಹಿಡಿದು ಬಿಸಿಲು ಬರೋ ಮುಂಚೆನೇ ನೆರಳನ್ನ ಹುಡುಕಿದರೆ ಲೈಫಲ್ಲಿ ಉದ್ದಾರ ಎಲ್ಲಿ ಆಗ್ತೀವಿ ರಿಗೆ ಇಡಬೇಕು ರಿಗೆ ಇಡಲ್ಲ ಅಂದ್ರೆ ಬಹಳಷ್ಟು ಜನ ಹೇಳ್ತಾರೆ ಸರ್ ಈ ಕೆಲಸ ತುಂಬಾ ಕಷ್ಟ ಅಂತ easy
ಇದ್ದಿದ್ರೆ ಬೀದಿಗೆ ಹತ್ತತ್ತು ಜನ ಮಾಡ್ತಾರೆ.

ಪ್ರತಿ ಕೆಲಸದಲ್ಲಿ ಕಷ್ಟ ಇರುತ್ತೆ. ಅಲ್ಲಿ ನಿಮ್ಮ ಏಕಾಗ್ರತೆ ಬಯಸುತ್ತೆ. ನಿಮ್ಮ ಅಚಲವಾದ ಗಟ್ಟಿತನ ಬಯಸುತ್ತೆ. ಯಾವುದಕ್ಕೂ
ಹೆದರ ದಂತ ಗಟ್ಟಿತನ ಇರಬೇಕು. ಧೈರ್ಯ ಅಂದ್ರೆ ಭಯ ಇಲ್ಲದೆ ಇರುವುದಲ್ಲ ಭಯವನ್ನ ದಾಟುವುದು.