Friday, 22nd November 2024

ನ್ಯಾಯಾಲಯವೇ ನಂಜಾದೊಡೆ ಇನ್ನಾರಿಗೆ ದೂರಲಿ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ನಮ್ಮಲ್ಲಿನ ಬಹುಪಾಲು ಜಾತಿ ಸ್ವಾಮೀಜಿಗಳು, ಮಠಗಳು ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿದೆಯೋ ಆ ಭಗವಂತನೇ ಬಲ್ಲ. ಕನ್ಹಯ್ಯ ಹತ್ಯೆ ಹಿಂದೂಗಳಿಗೆ ಎದುರಾಗಿರುವ ಸವಾಲು ಎಂದು ಪರಿಗಣಿಸುವ ಪರಿಜ್ಞಾನವೇ ಇವರುಗಳಿಗಿಲ್ಲ. ಇವರುಗಳು ಧರ್ಮದ ಪ್ರತಿಪಾದಕರಾಗಿದ್ದರೆ ಬೀದಿಗಿಳಿದು ಪ್ರತಿಭಟಿಸಬೇಕಿತ್ತು.

ಅಮೆರಿಕ ವರ್ಲ್ಡ್ ಟ್ರೇಡ್ ಸೆಂಟರ್‌ನ ಕಟ್ಟಡವನ್ನು ಅಷ್ಟು ಎತ್ತರಕ್ಕೆ ಕಟ್ಟಿದ್ದರಿಂದಲೇ ಬಿನ್‌ಲಾಡನ್ ಅದನ್ನು ಧ್ವಂಸ ಗೊಳಿಸಿದ್ದು. ಅದರಿಂದಾದ ಸಾವುನೋವುಗಳಿಗೆ ಅಮೆರಿಕವೇ ಕಾರಣ. ಹೀಗಾಗಿ ಅದರ ಅಧ್ಯಕ್ಷರು ಬಹಿರಂಗ ಕ್ಷಮೆ ಕೋರಬೇಕು. ಮುಂಬ ಯಿಯ ತಾಜ್ ಹೋಟೆಲ್ ಅತ್ಯಂತ ಖ್ಯಾತಿ ಪಡೆದಿದ್ದರಿಂದಲೇ ಭಯೋತ್ಪಾದಕರು ಒಳನುಗ್ಗಿ ನಮ್ಮ ಭದ್ರತಾ ಸಿಬ್ಬಂದಿ ಯನ್ನು, ನಾಗರಿಕರನ್ನು ಕೊಂದದ್ದು.

ಆದ್ದರಿಂದ ಅದನ್ನು ನಿರ್ಮಿಸಿದ ಜೆಮ್ ಶೆಡ್‌ಜೀ ಟಾಟಾ ಅವರು ದೇಶದ ಕ್ಷಮೆ ಕೇಳಬೇಕು. ಹೀಗೆಯೇ ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ, ಅಬ್ದುಲ್ ಕರೀಂ ತೆಲಗಿ ಛಾಪಾ ಕಾಗದ ಹಗರಣಕ್ಕೆಲ್ಲ ಸರಕಾರವೇ ಕಾರಣ. ಅವೆಲ್ಲ ಘಟನೆಗಳಿಗೆ ಕ್ಷಮೆ ಯಾಚಿಸ ಬೇಕು… ಇಂಥ ಅಸಂಬದ್ಧ ವಿಡಂಬನಾತ್ಮಕ ಟ್ರೋಲ್‌ಗಳಿಗೆ ಕಾರಣವಾಗಿದ್ದು ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ, ಊಹಿಸಲೂ ಸಾಧ್ಯವಾಗದ ‘ಐತಿಹಾಸಿಕ ಉಪದೇಶ’.

ದೇಶ ಮಾತ್ರವಲ್ಲ ವಿಶ್ವವೇ ಅಮಾಯಕ ಕನ್ಹಯ್ಯಲಾಲ್ ಶಿರಚ್ಛೇದನ ಪ್ರಕರಣ ಕಂಡು ಗಾಬರಿಗೊಂಡಿದೆ. ಆ ರಾಜ್ಯದ ಕಾನೂನು ಸುವ್ಯವಸ್ಥೆಯ ಪ್ರಶ್ನೆ ಎದ್ದಿದೆ. ಹಿಂದೂಗಳ ಭವಿಷ್ಯದ ಚಿಂತೆ ಕಾಡುತ್ತಿದೆ. ಅಫ್ಗಾನಿಸ್ತಾನದ ತಾಲಿಬಾನಿಗಳ ಮನಃಸ್ಥಿತಿಯ ಆರಂಭಿಕ ಹೆಜ್ಜೆಯ ಅನಾವರಣ ಗುಜರಾತ್‌ನ ಆಪ್ರಕರಣದಲ್ಲಾಗಿದೆ. ದೇಶದ ಸಂವಿಧಾನ, ಕಾನೂನು, ಪ್ರಜಾಪ್ರಭುತ್ವಕ್ಕೇ ದೊಡ್ಡ ಸವಾಲು ಮತ್ತು ಅಪಾಯ ಎದುರಾಗಿದೆ. ಯಾವ ದಿಕ್ಕಿನಿಂದ ನೋಡಿದರೂ ಸುಪ್ರೀಂ ಕೋರ್ಟ್ ಇಂಥ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ಮಟ್ಟ ಹಾಕುವಂತೆ ಮಾರನೆಯ ದಿನವೇ ಸರಕಾರಗಳಿಗೆ ಎಚ್ಚರಿಕೆ ನೀಡಬೇಕಾದ್ದು ಸಹಜ ಮತ್ತು ನಿರೀಕ್ಷಿತವಾಗಿತ್ತು.

ದೌರ್ಭಾಗ್ಯವೆಂದರೆ ನಮ್ಮ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಇದೆಲ್ಲಕ್ಕೂ ಬಿಜೆಪಿಯ ಮಾಜಿ ವಕ್ತಾರೆಯನ್ನು  ಹೊಣೆ ಮಾಡಿಬಿಟ್ಟಿತು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪರ್ಡಿವಾಲ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠ ನೂಪೂರ್ ಶರ್ಮ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಅವರೇ ಕಾರಣ, ನೂಪೂರ್ ದೇಶದ ಕ್ಷಮೆಕೋರಬೇಕು ಎಂದು ಹೇಳಿ ಬಿಟ್ಟಿತು. ಇಷ್ಟಕ್ಕೂ ಆಕೆಯ ಅರ್ಜಿಯನ್ನು ತಿರಸ್ಕರಿಸುವ ಎಲ್ಲ ಅಧಿಕಾರವೂ ಕೋಟ್ ಗಿತ್ತು. ಆದರೆ ಆ ವ್ಯಾಪ್ತಿ ಮೀರಿ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿರುವುದು ಪ್ರಜ್ಞಾವಂತ ನಾಗರಿಕ ರನ್ನು ಆಘಾತಕ್ಕೆ ಕೆಡವಿದೆ.

ಇದಕ್ಕೂ ಅಸಮಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಜೆ.ಬಿ ಪರ್ಡಿವಾಲಾ ಇಂಥ ಪ್ರತಿಕ್ರಿಯೆಗಳು ಅಪಾಯಕಾರಿಯೆಂದು ಹೇಳಿದ್ದಾರೆ. ಆದರೆ ಕಾನೂನೇ ಬೇರೆ, ವ್ಯಕ್ತಿಗತ ತರ್ಕವೇ ಬೇರೆಯಲ್ಲವೇ? ದೇಶದ ಜನರ ಭಾವನೆಗಳನ್ನೂ ಮೀರಿದ ಧೋರಣೆಗಳು ಒಮ್ಮೊಮ್ಮೆ ಕಾನೂನು, ನ್ಯಾಯಾಲಯಗಳನ್ನೇ ಯಾಂತ್ರಿಕವಾಗಿ ಬಾಸವಾಗಿಬಿಡುತ್ತದೆ. ಈಗಾಗಲೇ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ವಿಳಂಬದಿಂದಾಗಿ ನ್ಯಾಯಾಲಯದ ಮೇಲಿನ ವಿಶ್ವಾಸ, ನಂಬಿಕೆ ಕಳೆದುಕೊಂಡಿದ್ದಾರೆ.

ಹೀಗಿರುವ ಜನಗಳ ಭಾವನೆಗಳ ವಿರುದ್ಧವಾಗಿ ಇಂಥ ಹೇಳಿಕೆಗಳು ಬಂದರೆ ಜನ ಇನ್ಯಾರಿಂದ ನ್ಯಾಯ ನಿರೀಕ್ಷಿಸಬೇಕು ಹೇಳಿ? ದೇಶಕ್ಕಾಗಿ ದೇಶದ ಪ್ರಜೆಗಳಿಗಾಗಿ ನ್ಯಾಯಾಲಯವೇ ಹೊರತು ಇನ್ನೇತಕ್ಕಾಗಿ ಹೇಳಿ? ನ್ಯಾಯಮೂರ್ತಿಗಳ ಅಭಿಪ್ರಾಯಕ್ಕೆ ಸಾರ್ವಜನಿಕರಿಂದ ವ್ಯತಿರಿಕ್ತ ಅಭಿಪ್ರಾಯಗಳು ಹೊರಹೊಮ್ಮಿರಬಹುದು. ಆದರೆ ಅದರ ಹಿಂದೆ ನೈತಿಕ ಪ್ರಶ್ನೆಯೊಂದಿದೆ. ಅದೇನೆಂದರೆ ‘ಶಿವಮೊಗ್ಗದಲ್ಲಿ ರಾಷ್ಟ್ರಪ್ರೇಮಿ ಹರ್ಷನ ಹತ್ಯೆಯಾದಾಗ ಅದಕ್ಕೆ ಕಾರಣರಾದವರು ಆ ಆರು ಮಂದಿ ಹಿಜಾಬ್
ವಿವಾದ ಹುಟ್ಟುಹಾಕಿದ ವಿದ್ಯಾರ್ಥಿನಿಯರೇ? ದಕ್ಕಾಗಿ ಆ ವಿದ್ಯಾರ್ಥಿನಿಯರು ದೇಶದ ಕ್ಷಮೆ ಕೇಳಬೇಕು’ ಎಂಬ ಸಾರ್ವಜನಿಕರ ಪ್ರಶ್ನೆ ಮತ್ತು ದನಿ ಇದೆಯಲ್ಲ ಅದನ್ನೂ ಈ ನ್ಯಾಯಮೂರ್ತಿಗಳಿಬ್ಬರೂ ಪರಾಮರ್ಶಿಸಬಹುದಲ್ಲವೇ? ನೂರು ಅಪರಾಧಿಗಳಿಗೆ ಶಿಕ್ಷೆಯಾದರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನ್ಯಾಯಾಲಯದ ಮೂಲಮಂತ್ರ.

ಹಾಗೆಯೇ ಒಬ್ಬಾಕೆಯ ಹೇಳಿಕೆಗಿಂತಲೂ ಅಮಾನುಷವಾಗಿ ಕೊಲೆಯಾದ ನಿರಪರಾಧಿ ಕನ್ಹಯ್ಯನ ಕುಟುಂಬ ಮತ್ತು ಗಾಬರಿ ಗೊಂಡು ಕಂಗಾಲಾಗಿರುವ ಇಡೀ ದೇಶದ ಜನರ ಆತಂಕ ಕಳವಳಕ್ಕೆ ಮೊದಲು ಸ್ಪಂದಿಸಿ ಇಂಥ ಮತಾಂಧರರನ್ನು ಕೂಡಲೇ ಮಟ್ಟಹಾಕುವಂತೆ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದರೆ ಜನ ನಮ್ಮ ನ್ಯಾಯಾಲಗಳ ಬಗ್ಗೆ ಗೌರವ ಹೆಚ್ಚುತ್ತಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಇಂಥ ಹೇಳಿಕೆಗಳನ್ನು ವಿರೋಧಿಸಿ 15 ನಿವೃತ್ತ ನ್ಯಾಯಮೂರ್ತಿಗಳು, 77 ನಿವೃತ್ತ ಅಧಿಕಾರಿಗಳು ಮತ್ತು 25 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಸೇರಿದಂತೆ ಒಟ್ಟು 117 ಮಂದಿಯ ನಿಯೋಗವು ಮುಖ್ಯ ನ್ಯಾಯಮೂರ್ತಿಗಳಾದ ಎನ್. ವಿ. ರಮಣ ಅವರಿಗೆ ಪತ್ರ ಬರೆದಿದ್ದಾರೆ.

ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಇತ್ತೀಚಿನ ಹೇಳಿಕೆಗಳ ಮೂಲಕ ಲಕ್ಷ್ಮಣರೇಖೆ ದಾಟಿದ್ದಾರೆ ಮತ್ತು ನಾವು ಬಹಿರಂಗ ಹೇಳಿಕೆ ನೀಡುವಂತೆ ಮಾಡಿದೆ ಎಂದಿರುವುದು ಎಲ್ಲ ಸುದ್ದಿ ವಾಹಿನಿಗಳಲ್ಲಿಯೂ ಏಕಕಾಲಕ್ಕೆ ಪ್ರಸಾರವಾಯಿತು.
ನ್ಯಾಯಮೂರ್ತಿಗಳ ಈ ಅಭಿಪ್ರಾಯಗಳು ತೀವ್ರ ಚರ್ಚಾರ್ಹವಾಗಿವೆ ಮತ್ತು ನ್ಯಾಯಾಂಗದ ನೈತಿಕತೆಗಳಿಗೆ ಪೂರಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿನ ದುರ ದೃಷ್ಟಕರ ಹೇಳಿಕೆಗಳು ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ನ್ಯಾಯಾಂಗ ವ್ಯವಸ್ಥೆಗೆ ಅಳಿಸಲಾಗದ ಕಲೆ ಮೂಡಿಸಿದೆ ಎಂದು ಟೀಕಿಸಿದ್ದಾರೆ.

ನ್ಯಾಯಾಂಗದ ದಾಖಲೆಗಳಲ್ಲಿ, ಇಂಥ ದುರದೃಷ್ಟಕರ ಹೇಳಿಕೆಗಳಿಗೆ ಸಮನಾಗಿರುವುದು ಬೇರೆ ಇಲ್ಲ. ದೇಶದ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುವಷ್ಟು ಸಮರ್ಥವಾಗಿರುವುದರಿಂದ ಇದನ್ನು ಪರಿಹರಿಸಲು
ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಪತ್ರದಲ್ಲಿ ದೂರಿದ್ದಾರೆ. ನ್ಯಾಯಾಲಯವೇ ನಂಜಾದಡೆ ಇನ್ನಾರಿಗೆ ಹೋಗಿ ದೂರಲಿ? ಇನ್ನು ದೇಶದ ಶಾಸಕಾಂಗದ ಪರಮ ಜಾತ್ಯತೀತ ತಾಯಿಯ ಮೊಲೆಹಾಲು ಕುಡಿದವರಂತೆ ಅಬ್ಬರಿಸಿ
ಬೊಬ್ಬಿರಿಯುವ ನಾಯಕರ ನಡೆಗಳನ್ನು ನೋಡುತ್ತಿದ್ದರೆ ಇವರೆ ಮನುಷ್ಯರಾಗಿ ಬದುಕಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ.

ರಕ್ಕಸರಿಗಿಂತಲೂ ಅಪಾಯಕಾರಿಯಾದ ಮತಾಂಧರಿಂದ ಕನ್ನಯ್ಯಲಾಲ್ ಹತ್ಯೆಯಾದಾಗ ದೇಶದೆಡೆ ಹಿಂದೂ ಸಂಘಟನೆಗಳು, ಬಿಜೆಪಿ ಹೊರತು ಪಡಿಸಿದರೆ ಮತ್ಯಾವ ಎಡಗೈ ನೆಕ್ಕುವ ಪಕ್ಷಗಳಾಗಲೀ, ಲದ್ದಿಜೀವಿಗಳಾಗಲೀ, ವಿಚಾರವ್ಯಾದಿ ಗಳಾಗಲೀ ಬೀದಿಗೆ ಬಂದು ಪ್ರತಿಭಟಿಸುವುದಿರಲಿ, ಕನಿಷ್ಠ ಖಂಡಿಸಲಿಲ್ಲ. ಕೆಲವರ ಟ್ವೀಟರ್ ಹೇಳಿಕೆಗಳು ಮಾತ್ರ ನಪುಂಸಕರ ಬಾಯಲ್ಲಿ ಗಂಡಸು ತನದ ಹೇಳಿಕೆಗಳಾಗಿದ್ದವೇ ಹೊರತು ಉಳಿದ್ಯಾವುದೂ ಸದ್ದುಮಾಡಲಿಲ್ಲ.

ಇನ್ನು ಈ ಹತ್ಯೆಯನ್ನು ಖಂಡಿಸಿ ಪ್ರeವಂತ ಮುಸಲ್ಮಾನ ಸಂಘಟನೆಗಳು ಬಹುಸಂಖ್ಯಾತ ಹಿಂದೂಗಳ ಸಮಾಧಾನಕ್ಕಾದರೂ ಹೊರಬಂದು ವಿರೋಧಿಸಿ ಪ್ರತಿಭಟನೆ ಮಾಡುತ್ತಾರೆಯೇ ಎಂದು ನಿರೀಕ್ಷಿಸಿದರೆ ಅದೂ ಶುದ್ಧ ಮೌನಂ ಸಮ್ಮತಿ ಲಕ್ಷಣಂ ಎಂಬಂತಿದೆ. ಪಾಕಿಸ್ತಾನ ಜಿಂದಾಬಾದ್ ಕೂಗಿ ಪಾಕಿಸ್ತಾನದ ಬಾವುಟ ಹಾರಿಸಿ ನಮ್ಮ ಯೋಧರನ್ನು ಅವಮಾನಿಸಿದ ದೇಶ ದ್ರೋಹಿಗಳ ಪರವೆಲ್ಲ ನಿಂತು ಎದೆಬಡಿದುಕೊಂಡು ಅವರನ್ನು ಪಕ್ಷದೊಳಗೆ ಸೇರಿಸಿಕೊಳ್ಳುವ ದೇಶಗೇಡಿಗಳಲ್ಲಿ ಮನುಷ್ಯ ವಿರೋಧಿ ಮತಾಂಧರ ಕೃತ್ಯವನ್ನು ಖಂಡಿಸುವ ಯಾವ ಗಂಡಸುತನವೂ ಉಳಿದಿಲ್ಲ.

ಇನ್ನು ನಮ್ಮ ನಾಡಿನಲ್ಲಿ ಬರಗೆಟ್ಟ ಸಾಹಿತಿಗಳು, ತಿರುಪೆ ಕವಿಗಳು, ಪ್ರಗತಿಪರರೆಂಬ ಅಡ್ಡಕಸುಬಿಗಳು, ಸಮಯಕ್ಕೆ ತಕ್ಕಂತೆ ಬಣ್ಣಹಚ್ಚುವ ತಿಕ್ಕಲು ನಟನಟಿಯರು ಟಿಪ್ಪು ಕತ್ತಿಯ ಮೇಲೆ ಸವರಿದ ಬೆಣ್ಣೆಯನ್ನು ನೆಕ್ಕುತ್ತಾ ಮಜಾ ಅನುಭವಿಸುವುದಕ್ಕೆ
ಸೀಮಿತ. ಇನ್ನು ನಮ್ಮಲ್ಲಿನ ಬಹುಪಾಲು ಜಾತಿ ಸ್ವಾಮೀಜಿಗಳು, ಜಾತಿ ಪೋಷಿತ ಮಠಗಳು ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿದೆಯೋ ಆ ಭಗವಂತನೇ ಬಲ್ಲ. ಕನ್ಹಯ್ಯ ಹತ್ಯೆ ನಮ್ಮ ಸಮಸ್ತ ಹಿಂದೂಗಳಿಗೆ ಎದುರಾಗಿರುವ ಸವಾಲು ಎಂದು ಪರಿಗಣಿಸುವ ಸಹಜ ಪರಿಜ್ಞಾನವೇ ಇವರುಗಳಿಗಿಲ್ಲ.

ನಿಜಕ್ಕೂ ಇವರುಗಳು ಹಿಂದೂಧರ್ಮದ ಪ್ರತಿ ಪಾದಕರಾಗಿದ್ದರೆ ಇಷ್ಟೊತ್ತಿಗೆ ಎಲ್ಲ ಜಾತಿಯ ಮಠಾಧೀಶರೂ ಒಂದಾಗಿ ಬೀದಿಗಿಳಿದು ಪ್ರತಿಭಟಿಸಬೇಕಿತ್ತು. ಆದರೆ ಇವರಿಗೇನಿದ್ದರೂ ತಮ್ಮ ಜಾತಿಯ ಯಾವ ಪುಟಗೋಸಿ ನಾಯಕ ರಾಜಕೀಯದಲ್ಲಿ ಬಲಗೊಳ್ಳಬೇಕು ರಾಜ್ಯವನ್ನು ಆಳಬೇಕೆಂಬುದರದ್ದೇ ಮಹಾತಪಸ್ಸು. ಮಹಾರಾಷ್ಟ್ರದಲ್ಲಿ ಇಬ್ಬರು ಸಂತರನ್ನು ನಾಯಿಗಳಂತೆ ಬಡಿದು ಕೊಂದಾಗಲೇ ಇವರು ಮೇಲೇಳಲಿಲ್ಲ. ಇನ್ನು ಸತ್ತ ಕನ್ನಯ್ಯ ಯಾವ ಲೆಕ್ಕ? ಧರ್ಮ ಸಂವೇದನೆಯಲ್ಲಿ ಮುಸ್ಲಿಂ ಮುಖಂಡರು ಮೌಲ್ವಿಗಳೇ ಲೇಸು.

ಹಿಂದೂಗಳು ಕೆಲಸಕ್ಕೆ ಬಾರದ ಡೋಂಗಿತನವನ್ನು ತೆವಲಾಗಿಸಿಕೊಂಡು ಸ್ವಧರ್ಮ ರಕ್ಷಣೆ ಧರ್ಮಾಭಿಮಾನ (ಪರಧರ್ಮ ನಿಂದನೆ- ಧರ್ಮಾಂಧತೆಯಲ್ಲ) ಆತ್ಮಾಭಿಮಾನ ಹೀನರಾಗಿ ತಮ್ಮ ಮಕ್ಕಳ ತಲೆಯೊಳಗೆ ಸ್ವಜಾತಿ ಅಮಲು ತುಂಬಿ ಎಕರೆಟ್ಟಲೆ ಜಮೀನು, ಬಂಗಲೆ, ಕಾರು, ಒಡವೆ, ಪದವಿ, ಅಸಹ್ಯಕರ ಶ್ರೀಮಂತಿಕೆ, ಐಷಾರಾಮಿ ಶೋಕಿಯ ಬದುಕು ಕಟ್ಟಿಕೊಳ್ಳುವುದರ ಕಳೆದುಬಿಡಿ. ಮುಂದೊಂದು ದಿನ ರಕ್ಕಸ ಜಿಹಾದಿಗಳ ಸಂತತಿ ಹೆಚ್ಚಾಗಿ ಮನೆಯೊಳಗೆ ನುಗ್ಗಿ ನಿಮ್ಮ ವಂಶಸ್ಥರ ಕತ್ತುಕೋಯ್ದು ಎಲ್ಲವನ್ನೂ ಅನುಭವಿಸಿ ತೀರುತ್ತಾರೆ.

ಇಂಥ ದೃಶ್ಯಗಳ ಟ್ರೇಲರ್ ಅನ್ನು ಈಗಾಗಲೇ ರಾಜಸ್ಥಾನದಲ್ಲಿ ‘ತಾಲಿಬಾನಿ’ಗಳು ತೋರಿಸಿದ್ದಾರೆ. ಹಾಗಂತ ಹಿಂದೂಗಳು ಮತಾಂಧ ರಕ್ತಪಿಪಾಸು ಆಗಬೇಕು ಎಂದಲ್ಲ. ಹಿಂದೂಗಳಾಗಿ ಹುಟ್ಟಿದ್ದಕ್ಕಾಗಿ ಒಬ್ಬ ಬಂಕಿಮಚಂದ್ರರು,  ಸ್ವಾಮಿ ವಿವೇಕಾ ನಂದರು, ಬಾಲಗಂಗಾಧರ ತಿಲಕರು, ವೀರಸಾವರ್ಕರರು, ನೇತಾಜಿ, ಸರದಾರ ಪಟೇಲರು ಆದರಷ್ಟೇ ಸಾಕು. ಅದನ್ನು ಬಿಟ್ಟು ಧರ್ಮವನ್ನು ರಕ್ಷಿಸಲು ವಿದ್ಯಾರಣ್ಯರು, ಹರಿಹರಬುಕ್ಕರು, ಶ್ರೀಕೃಷ್ಣದೇವರಾಯ, ಶಿವಾಜಿ ಮತ್ತೊಮ್ಮೆ ಹುಟ್ಟಿಬರುತ್ತಾರೆಂಬ ಕನಸು ಕಾಣುತ್ತ ಕುಳಿತರೆ ಪದೇಪದೇ ಹುಟ್ಟಿಬರುವುದು ಮಾತ್ರ ಗಾಂಧೀಜಿ, ನೆಹರು, ಜಿನ್ನಾ, ಇಂದಿರಾಗಾಂಧಿಯಷ್ಟೇ !

ಕೊನೆಯದಾಗಿ ಜಿಹಾದಿಗಳು ಎಚ್ಚರಿಕೆ ನೀಡಿzರೆ ; ಹಿಂದೂಗಳು ಗಾಢ ಗೊರಕೆಯಲ್ಲಿರುತ್ತಾರೆ !