ಅವಲೋಕನ
ಡಾ.ಆರ್.ಜಿ.ಹೆಗಡೆ
ramhegde62@gmail.com
ದೇಶಗಳು, ಮನುಷ್ಯರು ಇತಿಹಾಸ ಗಳಿಂದ ಪಾಠ ಕಲಿಯುತ್ತಿರು ವಂತಿಲ್ಲ. ಕಳೆದ ಶತಮಾನದ ಇತಿಹಾಸದಿಂದ ಕೂಡ. ಏಕೆಂದರೆ ಅದೇ ರೀತಿಯ ಜಾಗತಿಕ ದುರಂತಗಳು – ಮುಖ್ಯವಾಗಿ ಹಿಟ್ಲರ್ ಸೃಷ್ಟಿಸಿದಂಥವು – ಮರಳಿ ಬರುತ್ತಿವೆ.
ಥೀಮ್‌ಗಳು, ವಿಧಾನಗಳೆಲ್ಲ ಅವೇ. ದೇಶವೊಂದೇ ಬೇರೆ. ಇಂದಿನ ಚೀನಾ ಅಂದಿನ ಜರ್ಮನಿಯ ಸ್ಥಾನವನ್ನು ಆಕ್ರಮಿಸಿದೆ. ಅಷ್ಟೇ. ಬೆಳವಣಿಗೆಯನ್ನು ಚೀನಾ ಆಕ್ರಮಣಕಾರಿಯಾಗಿ ಜಗತ್ತಿಗೆ ಹೇಳಿಕೊಂಡಿದ್ದು ಬಹುಶಃ ಕೋವಿಡ್ –19ರ ಮೂಲಕ. ಅನಿಸುವಂತೆ, ಬಂದಿರುವ ಕೋವಿಡ್ ಚೀನಾ ಸೃಷ್ಟಿಸಬಹುದಾದ, ಎರಡನೆಯ ಮಹಾ ಯುದ್ಧಕ್ಕಿಂತಲೂ ಘೋರವಾದ ದುರಂತ ವೊಂದರ ಮುನ್ನುಡಿ. ಈ ಮಾತುಗಳಿಗೆ ಸಾಕ್ಷಿ ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್ ಮನಸ್ಥಿತಿ ಹಾಗೂ ಆತ ಚೀನಾವನ್ನು ಮುನ್ನಡೆಸುತ್ತಿರುವ ರೀತಿ. ಗಮನಿಸಿ. ಬಹುಶಃ ಕರೋನಾ ಸೃಷ್ಟಿ ಒಂದು ದುಷ್ಟ ಉದ್ದೇಶದ ಭಾಗ. ವಿರೋಧಿಗಳ ಮೇಲೆ ಅಥವಾ ಯುದ್ಧದ ಸಂದರ್ಭದಲ್ಲಿ ಬಳಕೆಗಾಗಿ. ಮಾತು ಏಕೆಂದರೆ ‘ಗೇನ್ ಆಫ್ ಜಂಕ್ಷನ್’ ಹೆಸರಿನ ಈ ಗುಪ್ತ ಯೋಜನೆ ವುಹಾನ್ ಲ್ಯಾಬೊರೇಟರಿಯಲ್ಲಿ ನಡೆದಿದ್ದು ಚೀನೀ ಸೈನ್ಯದ
ಕಣ್ಗಾವಲಿನಲ್ಲಿ. ವಿಜ್ಞಾನಿಗಳಾದ ಡಾಲ್ಗ್ಲಿಷ್ ಹಾಗೂ ಸೊರೆನ್ಸನ್ ಹೇಳುವಂತೆ ಈ ವೈರಸ್ ನೈಸರ್ಗಿಕವಾಗಿರಲು ಸಾಧ್ಯವೇ ಇಲ್ಲ.
ಅದಕ್ಕೆ ಮಾನವ ಪ್ರಾಣಿಯ ಇತಿಹಾಸವಿಲ್ಲ. ಮತ್ತೆ ವರದಿಗಳ ಪ್ರಕಾರ ಇನ್ನೂ ಹೆಚ್ಚು ಅಪಾಯಕಾರಿಯಾಗಿರಬಲ್ಲ ವೈರಸ್ ಗಳೂ ಚೀನಾ ಬಳಿ ಇವೆ. ಚೀನಾ ದುರುದ್ದೇಶ ಅರಿಯಲು ಸಾಂದರ್ಭಿಕ ಸಾಕ್ಷ್ಯ ಗಮನಿಸಿ. ಇಂಥದೊಂದು ವೈರಸ್ ಅಕಸ್ಮಾತ್ ಹುಟ್ಟಿಕೊಂಡರೆ ದೇಶವೊಂದು ಕಳವಳದಲ್ಲಿರುತ್ತಿತ್ತು. ಅದರ ಪರೀಕ್ಷೆಗೆ, ತಡೆಗೆ ಅಂತಾರಾಷ್ಟ್ರೀಯ ಸಹಾಯ ಪಡೆಯುತ್ತಿತ್ತು. ಆದರೆ ಚೀನಾ ನಿಗೂಢವಾಗಿ ಮೌನವಾಗಿದೆ. ಈ ಕುರಿತಾದ ಶೋಧನೆಗೆ ಅಂತಾರಾಷ್ಟ್ರೀಯ ವಿಜ್ಞಾನಿಗಳನ್ನು ಒಳಬಿಟ್ಟುಕೊಳ್ಳಲು ನಿರಾಕರಿಸಿದೆ. ದಾಖಲೆಗಳನ್ನು ತಿರುಚಿದೆ. ಆ ಲ್ಯಾಬ್‌ನಲ್ಲಿ ಕೆಲಸ ಮಾಡಿದ ಜನ ಕಾಣೆಯಾಗಿ ಹೋಗಿದ್ದಾರೆ. ಚೀನಾದಲ್ಲಿ ಷಿ
ಒಪ್ಪಿಗೆ ಇಲ್ಲದೆ ಗಾಳಿ ಕೂಡ ಬೀಸುವದಿಲ್ಲ. ಜಗತ್ತನ್ನೇ ಅಲುಗಾಡಿಸುವ ಘಟನೆಗಳು ಆತನ ಲಕ್ಷ್ಯದಲ್ಲಿರದೆ ನಡೆಯಲು ಸಾಧ್ಯವಿದೆಯೇ? ಕರೋನಾ ಏಕೆ ಒಂದು ಟೆಸ್ಟ್ ಡೋಸ್ ಆಗಿರಲು ಸಾಧ್ಯವಿದೆ ಮತ್ತು ಅದು ಚೀನಾಕ್ಕೆ ಏನು ವಿಷಯಗಳನ್ನು ಹೇಳಿಹೋಗಿದೆ ಎನ್ನುವುದನ್ನು ಗಮನಿಸಬೇಕು.
ಒಂದನೆಯ ವಿಷಯ. ಅದು ದೇಶಗಳನ್ನು, ಮಾರುಕಟ್ಟೆಗಳನ್ನು ನಾಶಮಾಡಬಲ್ಲ ಹೊಸ ತಂತ್ರಗಳನ್ನು ಷಿ ಗೆ ಕಲಿಸಿದೆ. ಹಾಗಾಗಿ ಷಿ ಇನ್ನೂ ಅಪಾಯಕಾರಿ
ವೈರಸ್‌ಗಳಿಗಾಗಿ ಹುಡುಕಾಡುವ ಸಾಧ್ಯತೆ ಇದೆ. ಇನ್ನೂ ಮಹತ್ವದ್ದು ಎರಡನೆಯ ಪಾಠ. ತನ್ನನ್ನು ಎದುರು ಹಾಕಿಕೊಳ್ಳುವ ಶಕ್ತಿ ಅಮೆರಿಕವನ್ನು ಹಿಡಿದು ಜಗತ್ತಿನ ಯಾವ ರಾಷ್ಟ್ರಕ್ಕೂ / ಒಕ್ಕೂಟಕ್ಕೂ ಇಲ್ಲ ಎನ್ನುವುದು ಷಿ ಗೆ ತಿಳಿದು ಹೋಗಿದೆ. ರಾಷ್ಟ್ರಗಳು ಚೀನಾವನ್ನು ಗಟ್ಟಿಯಾಗಿ ಪ್ರಶ್ನಿಸಲೇ ಇಲ್ಲ. ಇದು ಚೀನಾದ ಸುಪ್ರೀಮಸಿಯನ್ನು ಒಪ್ಪಿಕೊಂಡಂತಾದ ವಿಷಯ ಎನ್ನುವುದೂ ತಿಳಿದು ಹೋಗಿದೆ. ಮತ್ತೆ ಅಮೆರಿಕಾ ಹಾಗೂ ಪಾಶ್ಚಿಮಾತ್ಯ ದೇಶಗಳು ಅಧಿಕಾರಿಗಳ ಮುಸ್ಸಂಜೆ ಗಳಲ್ಲಿವೆ.
ಅವಕ್ಕೆ ಈಗ ಯುದ್ಧ ಮಾಡುವ ಬಯಕೆ ಅಥವಾ ಸಾಮರ್ಥ್ಯ ಇಲ್ಲ ಎನ್ನುವುದೂ ಬಹುಶಃ ಷಿ ಯ ಭಾವನೆ. ಅಮೆರಿಕಕ್ಕಂತೂ ಜಗತ್ತಿನಾದ್ಯಂತ ವೈರಿಗಳಿದ್ದಾರೆ. ಮುಸ್ಲಿಂ ದೇಶಗಳು ಅಮೆರಿಕವನ್ನು ಬೆಂಬಲಿಸುವುದಿಲ್ಲ. ಮತ್ತೆ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ಒಂದಾಗಿ ಹೋರಾಡುವುದು ಅಸಂಭವದ ಮಾತು ಇತ್ಯಾದಿ ತಿಳಿದುಹೋದಂತಿದೆ. ಜಗತ್ತನ್ನು ಆಳುವ ಚೀನಾ ಕನಸು ಕರೋನೋತ್ತರದ ಇಪ್ಪತ್ತೊಂದನೆಯ ಶತಮಾನದಲ್ಲಿ ಕಾರ್ಯಸಾಧು ಎಂಬ ತೀರ್ಮಾನಕ್ಕೆ ಷಿ ಬಂದಿರುವ ಸಾಧ್ಯತೆ ಇದೆ.
ಷಿ ಕೂಡ ಹಿಟ್ಲರ್‌ನದೇ ಮನಸ್ಥಿತಿಯಲ್ಲಿರುವವನು. ಹಿಟ್ಲರ್ ತನ್ನ ಆರ್ಯನ್ ಜನಾಂಗ ಜಗತ್ತನ್ನು ಆಳಲು ಹುಟ್ಟಿದ್ದು ಎಂದು ಭಾವಿಸಿದ್ದ. ಉಳಿದೆಲ್ಲಾ ಜನಾಂಗ ಗಳು ತನ್ನ ಕೈಯಲ್ಲ ಸಾಯಲು ಹುಟ್ಟಿದವು ಎಂದು ಆತ ತೀರ್ಮಾನಿಸಿದ್ದ. ಹಿಟ್ಲರ್‌ನ ಮಾದರಿಯಲ್ಲೇ ಷಿ ಕೂಡ ಈಗಾಗಲೇ ಷಿಕ್ಸಿಯಾನ್ ಪ್ರಾಂತದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಸಂಖ್ಯೆಯ ಬೇರೆ ಜನಾಂಗದವರನ್ನು ಭಾರೀ ಸಂಕಟಕ್ಕೆ ದೂಡಿಯಾಗಿದೆ. ಬೇಡವಾದವ ರನ್ನು ಮುಗಿಸುವ ಮಾವೋ ತ್ಸೆ ತುಂಗ್ ಕಾಲದ ‘ಗುಲಾಗ್ ವ್ಯವಸ್ಥೆ’ ಮರಳಿ ಬಂದಿದೆ. ಷಿ ನಂಬಿರುವುದು ‘ತಿಯಾನ್ಕ್ಸಿಯಾ’ ಅಂದರೆ ‘ಆಕಾಶದಡಿ ಇರುವ ಎಲ್ಲವನ್ನೂ ಆಳುವ ದೈವದತ್ತ ಅಧಿಕಾರ’ ಚೀನಾಕ್ಕೆ ಇದೆ ಎಂಬ ತತ್ತ್ವಜ್ಞಾನದಲ್ಲಿ. ಮತ್ತೆ ತಾನು ‘ಸ್ವರ್ಗದ ಮಗ’ ಎಂಬ ಭಾವನೆ ಆತನಿಗೆ ಇದೆ ಎಂದು ವರದಿಗಳಿವೆ. ಈ ಹಿನ್ನೆಲೆಯಲ್ಲಿಯೇ ಷಿ ಚೀನಾದ ಸಂವಿಧಾನ
ಲಿಟಲ್ ರೆಡ್ ಬುಕ್’ ಅನ್ನು ಬದಲಾಯಿಸಿ ತನಗೆ ಜೀವಮಾನ ಕಾಲದ ಅಧಿಕಾರ ನೀಡಿಕೊಂಡಿರುವುದು ಮತ್ತು ತನ್ನ ಮಹಾ ನಾಯಕತ್ವ ದ ‘ಕಲ್ಟ’ ಅನ್ನು ದಿನೇ ದಿನೆ ಬೆಳೆಸಿಕೊಳ್ಳುತ್ತಿರುವುದು.
ಷಿ ಯನ್ನು ಚೀನೀ ಮಾಧ್ಯಮಗಳು ದೇವರಂತೆ ಬಿಂಬಿಸುತ್ತಿವೆ. ಆತ ರಾಜಕೀಯ ಬಂಽಯಾಗಿ ಕಳೆದ ಗುಹೆಗಳು ಇಂದು ಪವಿತ್ರ ಸ್ಥಳಗಳು. ಚೀನಾದಲ್ಲಿ ಎಲ್ಲೆಲ್ಲೂ ಷಿಯ ವರ್ಣ ಚಿತ್ರಗಳು ರಾರಾಜಿಸುತ್ತಿವೆ. ವಿರುದ್ಧ ಬರುವ ಚಿಕ್ಕ ಟೀಕೆಯನ್ನೂ ನಿಷ್ಕರುಣೆಯಿಂದ ಹತ್ತಿಕ್ಕಲಾಗುತ್ತಿದೆ. ಬೇಡವಾದ ಸುದ್ದಿಗಳು ಹೊರಬರದಂತೆ ಮಾಧ್ಯಮಗಳ ಮೇಲೆ, ಸೋಷಿಯಲ್ ಮೀಡಿಯಾದ ಮೇಲೆ ಕಣ್ಣಿಡಲಾಗಿದೆ. ನಾಯಕತ್ವದ ಈ ವಿಧಾನವನ್ನು ಪಾಬ್ಲೊ ಆರ್ಡೆನರ್ ಎನ್ನುವ ವಿದ್ವಾಂಸ ‘ಶಾರ್ಪ್
ಪವರ್’ ಎಂದು ಕರೆದಿದ್ದಾನೆ. ನಾಯಕನೊಬ್ಬ ತನ್ನ ಹೆಬ್ಬಯಕೆಯ/ಈಗೋದ ಈಡೇರಿಕೆಗಾಗಿ ದೇಶದ ಇತಿಹಾಸ, ಸಂಸ್ಕೃತಿ, ಶಿಕ್ಷಣ ವ್ಯವಸ್ಥೆಗಳು, ಮಾಧ್ಯಮ, ಸೈನ್ಯ ಇತ್ಯಾದಿ ಎಲ್ಲವನ್ನೂ ಬಳಸಿಕೊಳ್ಳಬಲ್ಲ ವಿಧಾನ ಅದು. ‘ಸಂಸ್ಕೃತಿ ಅಧ್ಯಯನ’ಕ್ಕಾಗಿ ಕನ್ಯೂಷಿಯಸ್ ಕೇಂದ್ರ ಗಳನ್ನು ಆರಂಭಿಸಿರುವ ಆತ ದೇಶದ ಮನಸ್ಥಿತಿಯನ್ನು ಹಿಟ್ಲರನ ಜರ್ಮನಿಯಂಥಹುದೇ ರೀತಿಯ ವಿಸ್ಪೋಟಕಾರಿ ನ್ಯಾಶನಲಿಸ್ಟ್ ಮನಸ್ಥಿತಿಗೆ ತಂದುಬಿಟ್ಟಿದ್ದಾನೆ.
ಬೇರೆ ತಯಾರಿಗಳೂ ಆಗಿವೆ. ಮುಖ್ಯವಾಗಿ ಜಾಗತಿಕ ಶಕ್ತಿಯ ಸೈನ್ಯದ ಸಿದ್ಧತೆ. ಲಿಂಡ್ಸೇ ಮೇಯ್ಜ್ ಎನ್ನುವ ಬರಹಗಾರನ ಪ್ರಕಾರ ಚೀನಾ ಸೈನ್ಯ ಒಂದು ದೈತ್ಯ ಶಕ್ತಿ. ೨.೮ ಮಿಲಿಯನ್ ಸೈನಿಕರನ್ನು ಹೊಂದಿರುವ ಅದರ ವಾರ್ಷಿಕ ಬಜೆಟ್ 261 ಬಿಲಿಯನ್ ಡಾಲರ್‌ಗಳು. ಚೀನಾದ ಒತ್ತು ಇರುವುದು ಹೈ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯ ಮೇಲೆ. ಬಯೋ ಹಾಗೂ ಕೆಮಿಕಲ್ ವೆಪನ್‌ಗಳು, ನ್ಯೂಕ್ಲಿಯರ್ ಸಿಡಿತಲೆಗಳು, 1000 ಕಿ.ಮೀ.ಚಲಿಸಬಲ್ಲ ಲಾಂಗ್
ರೇಂಜ್ ಮಿಸೈಲ್‌ಗಳು, ವೇಗವಾಗಿ ಚಲಿಸಬಲ್ಲ ರಸ್ತೆಗಳು ಎಲ್ಲವೂ ಚೀನಾದ ಬಳಿ ಇವೆ. ಸೈಬರ್ ಮತ್ತು ಎಲೆಕ್ಟ್ರಾನಿಕ್ ಯುದ್ಧ ಸಲಕರಣೆಗಳಿವೆ. ವೈರಸ್‌ಗಳು, ವಿಷಾನಿಲ ಗಳು, ನ್ಯೂಕ್ಲಿಯರ್ ಶಸ್ತಾಸಗಳು ಎಲ್ಲವೂ ಅದರ ಬತ್ತಳಿಕೆಯಲ್ಲಿವೆ.
ಯುದ್ಧನೆಲೆಗಳಿಗಾಗಿ ಚೀನಾ ಕೃತಕ ನಡುಗಡ್ಡೆಗಳನ್ನೇ ಕಟ್ಟಿದೆ. ಬೇರೆ ದೇಶಗಳ ಕಂಪ್ಯೂಟರ್‌ಗಳನ್ನು ಹಾಳುಗೆಡವಲು ಹ್ಯಾಕರ್ ಗಳ ಪಡೆಯನ್ನೂ ಚೀನಾ ಅಭಿವೃದ್ಧಿಪಡಿಸಿದೆ. ಸೈನಿಕರಿಗೆ ಹೆಚ್ಚಿನ ಶಕ್ತಿ ಕೊಡಬಲ್ಲ ಔಷಧಗಳನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಅದು ತೊಡಗಿದೆ ಎಂಬ ವರದಿಗಳೂ ಪ್ರಕಟವಾಗಿವೆ.
ಇಷ್ಟೇ ಅಲ್ಲ. ಜಾಗತಿಕ ಸಾಮ್ರಾಜ್ಯಶಾಹಿ ತಂತ್ರಗಾರಿಕೆಯಲ್ಲೂ ಚೀನಾ ಕಲ್ಪನಾತೀತವಾಗಿ ಮುಂದೆ ಹೋಗಿದೆ ಮತ್ತು ಅರ್ಧ ಜಗತ್ತನ್ನೇ ಈಗಾಗಲೇ ಅಡಿಯಾ ಳಾಗಿಸಿಕೊಂಡಿದೆ.
ಇಂಥ ತಂತ್ರಗಾರಿಕೆಯ ಭಾಗವಾಗಿ ಹುಟ್ಟಿಕೊಂಡಿರುವುದು ಅದರ ಬೆಲ್ಟ್ ರೋಡ್ ಇನಿಶಿಯೇಟಿವ್. ಈ ಕುತಂತ್ರದ ಅಂಗವಾಗಿ ಚೀನಾ ಪೂರ್ವ ಏಷ್ಯಾದ ತುತ್ತತುದಿಯಿಂದ ಹಿಡಿದು ಯುರೋಪಿನ ತುದಿಯ ವರೆಗೂ ಮತ್ತು ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯದ ರಾಷ್ಟ್ರಗಳಲ್ಲಿನ ಪ್ರಮುಖ ಸ್ಥಳಗಳಿಗೂ ಬೆಸೆಯಬಲ್ಲ ರೋಡ್ ನೆಟ್‌ವರ್ಕ್‌ಗಳನ್ನು, ಪೋರ್ಟ್‌ಗಳನ್ನು, ನಗರಗಳನ್ನು ಈಗಾಗಲೇ ಕಟ್ಟಿ ನಿಲ್ಲಿಸಿದೆ. ಕುಟಿಲ ತಂತ್ರ ಅದು.
ಚೀನಾದ ಕಂಪನಿಗಳು ಕೆಲಸ ಮಾಡುತ್ತವೆ. ಚೀನಾ ಆ ದೇಶಗಳಿಗೆ ಸಾಲ ನೀಡುತ್ತದೆ. ಬದಲಿಗೆ ಆ ದೇಶಗಳಲ್ಲಿ ಚೀನಾ ತನ್ನ ನೆಲೆ ಸ್ಥಾಪಿಸುತ್ತದೆ. ಮತ್ತೆ ಅವುಗಳಿಗೆ ಸಾಲ ತೀರಿಸಲು ಅಸಾಧ್ಯವಾದಾಗ ಆ ದೇಶದ ಮೇಲಿನ ಹತೋಟಿ ಚೀನಾಕ್ಕೆ ಬರುತ್ತದೆ. ಹಾಂಗ್‌ಕಾಂಗ್‌ಅನ್ನು ಮುಳುಗಿಸಿರುವ ಚೀನಾ ಈಗ
ತೈವಾನ್ ಕಡೆ ನೋಡುತ್ತಿದೆ. ಹೀಗೆಯೇ ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳವನ್ನು ತನ್ನ ಅಡಿಯಾಳಾಗಿಸಿ ಕೊಂಡಿದೆ. ಫಲವೆಂದರೆ ಚೀನೀ ಕಂಪನಿಗಳಿಗೆ, ಚೀನಾಕ್ಕೆ ದುಡ್ಡು. ರಾಷ್ಟ್ರಗಳ ಮೇಲೆ ಹತೋಟಿ. ಉದಾಹರಣೆಗೆ ಶ್ರೀಲಂಕಾದಲ್ಲಿ ಚೀನಾ ಒಂದು ಭಾರೀ ಬಂದರು ಕಟ್ಟಿದೆ. ಬದಲಿಗೆ ಆ ಬಂದರಿನ ಸುತ್ತಮುತ್ತ ಹದಿನೈದು ಸಾವಿರ ಹೆಕ್ಟೇರ್ ಭೂಮಿ ಈಗ ಚೀನಾದ ವಶದಲ್ಲಿದೆ. ಹೀಗೆ ಯುದ್ಧ ವಿಲ್ಲದೆಯೇ ಹೊಸ ಜಾಗತಿಕ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಚೀನಾ ಸೃಷ್ಟಿಸಿಯೇ ಬಿಟ್ಟಿದೆ.
ಕಳವಳದ ವಿಷಯವೆಂದರೆ ರಷ್ಯಾ ಕೂಡ ಚೀನಾದತ್ತ ವಾಲಿದೆ. ಮತ್ತೆ ಪುಟಿನ್ ಕೆಜಿಬಿಯಲ್ಲಿ ಕೆಲಸ ಮಾಡಿದ, ಸೈನ್ಯದ ಹಿನ್ನೆಲೆಯಿಂದ ಬಂದ ವ್ಯಕ್ತಿ. ಷಿ ಹಾಗೂ ಪುಟಿನ್ ಸೇರಿದರೆ ಗಾಳಿ ಬೆಂಕಿ ಸೇರಿದ ಹಾಗೆ. ಎಲ್ಲಕಿಂತ ಮುಖ್ಯ ವಿಷಯವೆಂದರೆ ಅಂದಾಜು ಗಳ ಪ್ರಕಾರ ಕೆಲವೇ ವರ್ಷಗಳಲ್ಲಿ ಅಮೆರಿಕವನ್ನು ಓವರ್‌ಟೇಕ್ ಮಾಡಿ ಜಗತ್ತಿನ ಅತಿಹೆಚ್ಚು ಸಂಪದ್ಭರಿತ ವಾಗಲಿರುವ ಚೀನಾಕ್ಕೆ ಎಂಥ ಸಾಹಸಕ್ಕೂ ಇಳಿಯಬಲ್ಲ ಆರ್ಥಿಕತೆ ಇದೆ. ಹೀಗೆ ಕೆಟ್ಟ ಬುದ್ಧಿ, ಸೊಕ್ಕು, ಮನಸ್ಸು ಮಾಡಿದ್ದನ್ನು ಸಾಽಸಿಬಲ್ಲ ಶಕ್ತಿ, ತಾಂತ್ರಿಕತೆ ಮತ್ತು ಸಂಪನ್ಮೂಲ ಎಲ್ಲವನ್ನೂ ಹೊಂದಿರುವ ಚೀನಾ ಈಗ ಹಿಂದಿನ ಶತಮಾನದ ಜರ್ಮನಿಯಂತೆ ದೇಶಗಳನ್ನು
ಒಂದೊಂದಾಗಿ ತನ್ನ ಆರ್ಥಿಕ ಕುತಂತ್ರಗಳ ಮೂಲಕ, ಅವಶ್ಯಕತೆ ಬಿದ್ದರೆ ಸೈನ್ಯ ಬಲದ ಮೂಲಕ ನುಂಗಲು ಆರಂಭಿಸಿದೆ.
ಷಿ ಹಿಟ್ಲರ್‌ನಂತೆ ಹುಂಬನಲ್ಲ. ಚಾಣಾಕ್ಷ. ವಿಷಯ ಇದು. ಹಿಂದಿನ ಜರ್ಮನಿಯ ರೀತಿಯಲ್ಲಿಯೇ ಸಿದ್ಧಗೊಂಡಿರುವ ಚೀನಾ ಇಂದಿನ ಜಗತ್ತನ್ನು ದೊಡ್ಡ
ದುರಂತ ವೊಂದರ ಅಂಚಿಗೆ ತಂದು ನಿಲ್ಲಿಸಿದೆ. ಏನು ದುರಂತ? ವಿಶ್ವಸಂಸ್ಥೆಯ ಮಾತಿಗೆ ಅಥವಾ ಆರ್ಥಿಕ ದಿಗ್ಬಂಧನಕ್ಕೆ ಇಂದಿನ ಚೀನಾ ಬಗ್ಗುವುದಿಲ್ಲ. ಮತ್ತೆ ಚೀನಾ ವಿರುದ್ಧ ರಾಷ್ಟ್ರಗಳು ಯುದ್ಧಕ್ಕೆ ಹೋದರೆ ಅದು ಮೂರನೆಯ ಮಹಾಯುದ್ಧವಾಗಲಿದೆ. ಊಹೆಗೆ ಮೀರಿದ ರೀತಿಯ ಮಾನವ ದುರಂತಗಳು
ಎದುರಾಗಲಿವೆ. ಹಾಗೆಂದು ಚೀನಾ ವಿರುದ್ಧ ಜಗತ್ತು ಕ್ರಮ ಕೈಗೊಳ್ಳದಿದ್ದರೆ ಚೂರು ಚೂರಾಗಿ ಅದು ದೇಶಗಳನ್ನು ನುಂಗಿಬಿಡಲಿದೆ. ಅದೂ ದೊಡ್ಡ ಮಾನವ ದುರಂತವೇ.
ಏಕೆಂದರೆ ಚೀನಾಕ್ಕೆ ಮಾನವಾಧಿಕಾರ, ಪ್ರಜಾಪ್ರಭುತ್ವ ಇಂಥ ಕಲ್ಪನೆಗಳಲ್ಲಿ ನಂಬಿಕೆ ಇಲ್ಲ. ಜಾಕ್ ಮಾ ಅಂತವರನ್ನೇ ಚೀನಾ ಸದ್ದಿಲ್ಲದೆ ನಾಪತ್ತೆ ಮಾಡಿದೆ. ಉಳಿದವರೆಲ್ಲ ಯಾವ ಲೆಕ್ಕ? ಬುಲ್‌ಡೋಝರ್‌ನಿಂದ ಹೊಂಡ ತೋಡಿ ಜನರನ್ನು ಹೂತು ಹಾಕುತ್ತದೆ. ಅಷ್ಟೆ. ಇನ್ನು ಹತ್ತು ವರ್ಷಗಳಲ್ಲಿ ಸಂಭವಿಸಬಹುದಾದ ಇಂಥ ದುರಂತದ ಟ್ರೇಲರ್ ಕರೋನಾ. ಮತ್ತೆ ಭಾರತಕ್ಕಂತೂ ತುಂಬ ಗಂಭೀರ ಸವಾಲಿನ ವಿಷಯ ಇದು. ಚೀನಾದ ಬಂದೂಕಿನ ಗುರಿ ಇರುವುದು ನಮ್ಮ
ಮೇಲೆಯೇ. ಐತಿಹಾಸಿಕ ವಾಗಿಯೂ ನಮ್ಮ ಸಂಬಂಧಗಳು ರಕ್ತಸಿಕ್ತವಾಗಿಯೇ ಇವೆ. ಅಲ್ಲದೆ ಸುತ್ತಮುತ್ತಲಿನ ದೇಶಗಳು ಹೆಚ್ಚುಕಡಿಮೆ ಚೀನಾ ಪದತಲದಲ್ಲಿವೆ. ಭಾರತವನ್ನು ಒಮ್ಮೆ ಮಣಿಸಿದರೆ ಇಡೀ ಏಷ್ಯಾ ಚೀನಾದ ಅಡಿಯಲ್ಲಿ ಬರುತ್ತದೆ.
ಜಗತ್ತಿನ ಬಹುದೊಡ್ಡ ಮಾರುಕಟ್ಟೆ ಕೈವಶವಾಗುತ್ತದೆ ಎನ್ನುವ ಲೆಕ್ಕಾಚಾರ ಚೀನಾ ಹೊಂದಿರಲು ಸಾಧ್ಯವಿದೆ. ಇಂಥ ಪ್ರಯತ್ನದಲ್ಲಿ ಚೀನಾ ಹಲವು ವರ್ಷಗಳಿಂದಲೂ ತೊಡಗಿದೆ. ಪದೇ ಪದೆ ನಮ್ಮನ್ನು ಕೆಣಕುತ್ತಲೇ ಬಂದಿದೆ. ಕರೊನೋತ್ತರವಾಗಿ ಕಿರುಕುಳವನ್ನು ನಾನಾ ವಿಧದಲ್ಲಿ ಹೆಚ್ಚಿಸುತ್ತಲೇ ಹೋಗುತ್ತದೆ
ಎಂದೇ ನಾವು ನಿರೀಕ್ಷಿಸುವುದು ಒಳ್ಳೆಯದು. ಮತ್ತೆ ಯುರೋಪಿಯನ್ ದೇಶಗಳು ನಮ್ಮ ನೆರವಿಗೆ ಖಂಡಿತ ನಿಲ್ಲುತ್ತವೆ ಎನ್ನುವ ಖಾತ್ರಿಯೇನೂ ಇಲ್ಲ. ಅಂಥ ಶಕ್ತಿ
ಯುರೋಪಿಯನ್ ದೇಶಗಳಲ್ಲಿ ಉಳಿದಿಲ್ಲ ಕೂಡ. ಹಾಗಾಗಿ ನಮ್ಮ ಕಾಳಜಿ ನಾವು ನೋಡಿಕೊಳ್ಳಬೇಕು.
ಈ ಸವಾಲನ್ನು ಎದುರಿಸುವುದು ಹೇಗೆ? ಸವಾಲನ್ನು ಎದುರಿಸುವ ಒಂದೇ ದಾರಿ ನಾವೂ ಚೀನಾದಂತೆಯೇ ಆರ್ಥಿಕವಾಗಿ ಬೆಳೆಯುವುದು ಮಾತ್ರ. ಕನಿಷ್ಠ ಶೇ. ೧೦ರಷ್ಟು ವಾರ್ಷಿಕ ಬೆಳವಣಿಗೆಯ ದರವನ್ನು ನಾವು ಸಾಧಿಸಲೇಬೇಕು. ಅಂದರೆ ಮಾತ್ರ ಚೀನಾದ ಎದುರು ನಿಲ್ಲಲು ಬೇಕಾದ ಸೈನ್ಯದ ಆಧುನೀಕರಣ, ಮೂಲ ಸೌಕರ್ಯ ಬೆಳವಣಿಗೆ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳ ಅಭಿವೃದ್ಧಿಗೆ ಬೇಕಾಗುವ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಹಾಗೆಂದು
ಆರ್ಥಿಕ ಬೆಳವಣಿಗೆ ಸುಲಭವೇನೂ ಅಲ್ಲ. ಅದಕ್ಕೆ ಬೇಕಿರುವುದು ಆರ್ಥಿಕ ಶಿಸ್ತು, ಹೊಸ ಯೋಚನೆಗಳು ಮತ್ತು ಬದ್ಧತೆ. ಅಲ್ಲದೆ ಗುರಿ ಸಾಧಿಸಲು ಹಲವು ವಿಷಯಗಳನ್ನು ನಾವು ಒಮ್ಮೆಲೇ ಮಾಡಬೇಕಿದೆ. ಒಂದನೆಯದು ಜನಸಂಖ್ಯೆಯ ನಿಯಂತ್ರಣ ಮತ್ತು ಯುನಿಫಾರ್ಮ ಸಿವಿಲ್ ಕೋಡ್ ಜಾರಿ. ಹಾಗೆಯೇ
ಮಾಡಬೇಕಿರುವುದು ನಷ್ಟದಲ್ಲಿ ಬಿದ್ದಿರುವ ಎಲ್ಲ ಪಬ್ಲಿಕ್ ಎಂಟರ್‌ಪ್ರೈಸಸ್‌ಗಳ ಖಾಸಗೀಕರಣ ಮತ್ತು ಆಡಳಿತ ವ್ಯವಸ್ಥೆಯ ಆಧುನೀಕರಣ.
ಜತೆಗೆ ಸೋರಿಕೆ ತಡೆಗಟ್ಟುವ ಸಲುವಾಗಿ ಭ್ರಷ್ಟಾಚಾರವನ್ನು ನಾನ್ – ಬೇಲೇಬಲ್ ಅಪರಾಧ ವನ್ನಾಗಿಸಬೇಕಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಫಾಸ್ಟ್‌ಟ್ರಾಕ್
ಗೊಳಿಸಬೇಕಿದೆ. ಕೇಂದ್ರ ರಾಜ್ಯಗಳ ನಡುವಿನ ಸಂಬಂಧಗಳನ್ನು ಮರುಪರಿಶೀಲಿಸಿ ಅವುಗಳ ಕಾರ್ಯ ನಿರ್ವಹಣೆಯನ್ನು ಸಮರಸಗೊಳಿಸಬೇಕಿದೆ.
ಸರಕಾರಗಳು ನಿಜವಾದ ಬಡವರ ಕಾಳಜಿಯನ್ನು ಮಾತ್ರ ತನ್ನ ಕೈಯಲ್ಲಿಟ್ಟಕೊಂಡು ಉಳಿದಂತೆ ಖಾಸಗೀಕರಣದತ್ತ ಮುನ್ನಡೆಯಬೇಕಿದೆ. ಕಾನೂನು ವ್ಯವಸ್ಥೆಯನ್ನು ಬಲಪಡಿಸಿದರೆ ರಾಜಕೀಯ ವ್ಯವಸ್ಥೆಯನ್ನೂ ಜವಾಬ್ದಾರಿಯುತಗೊಳಿಸಲು ಸಾಧ್ಯ. ಜತೆಗೇ ದುಡಿಯುವ ಸಂಸ್ಕೃತಿ ಬೆಳೆಸುವ ಅಗತ್ಯವಿದೆ.
ಸೈನ್ಯವನ್ನು ಆಧುನೀಕರಣಗೊಳಿಸಿ ಚೀನಾದ ವಿರುದ್ಧ ನಿಲ್ಲಬಲ್ಲ ಯಂತ್ರವನ್ನಾಗಿ ಅದನ್ನು ಸಿದ್ಧಪಡಿಸಲೇಬೇಕಿದೆ.
ಅಂದರೆ ಚೀನಾವನ್ನು ಎದುರಿಸಬೇಕಾದರೆ ನಾವು ಒಂದು ಒಟ್ಟಾರೆಯಾದ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಮಾರ್ಪಾಡನ್ನು ಅಳವಡಿಸಿಕೊಳ್ಳಬೇಕಿದೆ. ವಿಷಯದ ಗಂಭೀರತೆ ಯನ್ನು ಅರ್ಥ ಮಾಡಿಕೊಂಡು ಕಾರ್ಯಪ್ರವೃತ್ತರಾದರೆ ಮಾತ್ರ ಬರಬಹುದಾದ ದುರಂತವನ್ನು ನಾವು ತಪ್ಪಿಸಿಕೊಳ್ಳಬಹುದೇನೋ?