Friday, 22nd November 2024

ಚುನಾವಣಾ ಆಯೋಗಕ್ಕೊಂದು ಕೋವಿಡ್ ಟೆಸ್ಟ್ !

ಅಭಿಮತ

ಎಸ್.ವೈ.ಖುರೇಶಿ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ

ಚುನಾವಣಾ ಆಯೋಗದಲ್ಲಿ ಕೆಲಸ ಮಾಡಿದ ಅಥವಾ ಚುನಾವಣೆಯ ಕೆಲಸಕ್ಕೆ ನಿಯೋಜನೆಗೊಳ್ಳುವ ಯಾರಿಗಾದರೂ ಬಿಹಾರಕ್ಕೆ ಹೋಗಿ ಎಂದರೆ ಒಂದು ಕ್ಷಣ ಯೋಚಿಸುವ ಕಾಲವಿತ್ತು. ವೈಯಕ್ತಿಕವಾಗಿ ಬಿಹಾರದಲ್ಲಿ ಹಲವು ವರ್ಷಗಳ ಕಾಲ ಚುನಾವಣಾ ಕೆಲಸದಲ್ಲಿ ತೊಡಗಿದ್ದರಿಂದ, ನನಗೆ ಈ ಅನುಭವ ಚೆನ್ನಾಗಿಯೇ ಇದೆ.

ಈ ರೀತಿ ಬಿಹಾರ ಚುನಾವಣೆ ಎಂದರೆ ಮೂಗು ಮುರಿಯುವುದಕ್ಕೆ ಕಾರಣವೂ ಇದೆ. ಕೆಲ ದಶಕಗಳ ಹಿಂದೆ ಇಡೀ ರಾಷ್ಟ್ರದಲ್ಲಿ ನಡೆಯುತ್ತಿದ್ದ ಚುನಾವಣೆ ಒಂದು ಭಾಗವಾದರೆ, ಬಿಹಾರದ ಚುನಾವಣೆಯೇ ಇನ್ನೊಂದು ಭಾಗ. ಬಿಹಾರದಲ್ಲಿ ಚುನಾವಣೆ ಎಂದರೆ, ಅಲ್ಲಿ ಗಲಭೆ, ಗಲಾಟೆ, ಅಧಿಕಾರಿಗಳ ಮೇಲೆ ದಾಳಿ, ಮತಗಟ್ಟೆಯ ಬಳಿ ಮಾರಾಮಾರಿ ಸಾಮಾನ್ಯ ಎನ್ನುವಂತಾಗಿತ್ತು.

ಇದಿಷ್ಟೇ ಅಲ್ಲದೇ, ಅಲ್ಲಿನ ಚುನಾವಣೆ ವೇಳೆ ಬಳಸುವ ಮತ ಪೆಟ್ಟಿಗಳನ್ನೇ ಕದ್ದುಕೊಂಡು ಹೋಗುವ ಸ್ಥಿತಿಯಿತ್ತು. ಇದನ್ನು ನಿಯಂತ್ರಿಸಲು ಅಲ್ಲಿನ ಚುನಾವಣಾ ಆಯೋಗ ಹತ್ತು ಹಲವು ರೀತಿಯಲ್ಲಿ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಬಾರಿಯ ಚುನಾವಣೆ ನಡೆದಾಗಲೂ ಬಿಹಾರದಲ್ಲಿ ರಕ್ತಪಾತವಿಲ್ಲದೇ ಚುನಾವಣಾ ಸಮಾಪ್ತಿಯಾದ ಇತಿಹಾಸವೇ ಇರಲಿಲ್ಲ. ಕೇವಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮಾತ್ರವಲ್ಲದೇ, ಚುನಾವಣಾ ಕೆಲಸಕ್ಕೆ ನಿಯುಕ್ತಿ ಹೊಂದುವ ಅಽಕಾರಿಗಳ ವಿರುದ್ಧವೂ ಅನೇಕ ಬಾರಿ ಹಲ್ಲೆಯಾಗಿರುವ ನಿದರ್ಶನಗಳು ನಮ್ಮ ಮುಂದಿವೆ.

Quote from Hello Dolly song, by Jerry Herman:While the band’s playin’

Edit Post

Add New


Post draft updated. Preview post

Word count: 1012   Last edited by ವಿಶ್ವವಾಣಿ on November 18, 2020 at 1:41 am

PushAlert Notification

Reaction Buttons

 
 

 Reaction button shortcode.

Update your default settings

Publish

 Status: Draft Edit status
 Visibility: Public Edit visibility
 Publish immediately Edit date and time
ReadabilityNeeds improvement
SEONot available

Categories

Tags

Separate tags with commas

News Types

AddToAny

Video Thumbnail

A video thumbnail will be found for this post when it is published.

Featured Image

Yoast SEO

Url preview:

vishwavani.news › ಚುನಾವಣಾ-ಆಯೋಗಕ್ಕೊಂದು-ಕೋವಿ

SEO title preview:

ಚುನಾವಣಾ ಆಯೋಗಕ್ಕೊಂದು ಕೋವಿಡ್ ಟೆಸ್ಟ್ ! – Vishwavani Kannada Daily

Meta description preview:

Please provide a meta description by editing the snippet below. If you don’t, Google will try to find a relevant part of your post to show in the search results.

Author

ಒಂದು ಹಂತದಲ್ಲಿ ಬಿಹಾರ ಚುನಾವಣಾ ಕಾರ್ಯಕ್ಕೆ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದಾರೆ ಎಂದರೆ, ಅದು ಅಧಿಕಾರಿ ಗಳಿಗೆ ಶಿಕ್ಷೆ ಎನ್ನುವ ರೀತಿಯಲ್ಲಿ ಮಾತುಗಳು ಕೇಳಿಬರುತ್ತಿದ್ದವು. ಬಿಹಾರದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದಾಗ, ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷರಾಗಿ ಟಿ.ಎನ್ ಶೇಷನ್ ನೇಮಕಗೊಂಡಾಗ, ಚುನಾವಣಾ ಪ್ರಕ್ರಿಯೆಯಲ್ಲಿ ಹತ್ತು ಹಲವು ಬದಲಾವಣೆ ತಂದರು. ಅದರಲ್ಲಿ ಬಿಹಾರದಲ್ಲಿ ಶಾಂತಿಯುತ ಮತದಾನಕ್ಕೆ ಅಗತ್ಯ ಭದ್ರತೆಯನ್ನು ನೀಡಿ ದ್ದೂ ಸಹ ಒಂದು ಎಂದರೆ ತಪ್ಪಾಗುವುದಿಲ್ಲ. ಮತಪೆಟ್ಟಿಗೆ ಕಳವು ಹಾಗೂ ಅಽಕಾರಿಗಳ ಮೇಲಾಗುತ್ತಿದ್ದ ಹಲ್ಲೆಯನ್ನು ತಪ್ಪಿಸುವ ಉದ್ದೇಶದಿಂದ ಶೇಷನ್ ಅವರು ಪ್ಯಾರಾ ಮಿಲಿಟರಿ ಫೋರ್ಸ್ ಬಳಸಿದರು. ಈ ರೀತಿ ಸೇನೆಯ ನೆರವಿ
ನೊಂದಿಗೆ ಬಿಹಾರದಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆಗೆ ನಾಂದಿ ಹಾಡಿತ್ತು. ಅಂತಹ ಪರಿಸ್ಥಿತಿಯಿಂದ ಇಂದು, ಸುಸೂತ್ರವಾಗಿ, ಕರೋನಾ ನಡುವೆಯೂ ಯಶಸ್ವಿಯಾಗಿ ಚುನಾವಣೆ ಮುಗಿಸುವ ಹಂತಕ್ಕೆ ಆಯೋಗ ಬಂದಿದೆ.

ಇದಿಷ್ಟೇ ಅಲ್ಲದೇ, ಇಡೀ ದೇಶಕ್ಕೆ ಮಾದರಿ ಯಾಗುವ ರೀತಿಯಲ್ಲಿ ಚುನಾವಣೆ ನಡೆಸಿದ ಕೀರ್ತಿಗೆ ಆಯೋಗ ಪಾತ್ರವಾಗಿದೆ. ಗೂಂಡಾಗಿರಿಯ ಚುನಾವಣಾ ಪ್ರಕ್ರಿಯೆಯಿಂದ ಈ ಮಾದರಿ ಚುನಾವಣಾ ಪ್ರಕ್ರಿಯೆ ತನಕ ಸಾಗಿರುವ ದಾರಿ ನಿಜಕ್ಕೂ ಅದ್ಭುತ. ಬಿಹಾರ ವಿಧಾನಸಭೆ ಚುನಾವಣೆ ಹಲವು ರೀತಿಯಲ್ಲಿ ಅಭೂತ ಪೂರ್ವವಾಗಿತ್ತು. ಮೊದಲನೆಯದಾಗಿ, ಕೋವಿಡ್-೧೯ 
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈಗ ಚುನಾವಣೆ ನಡೆಸುವುದು ಸಾಧ್ಯವೇ ಎಂಬ ಬಗ್ಗೆಯೇ ಅನುಮಾನಗಳಿದ್ದವು. ನಂತರ ಹಲವಾರು ರಾಜಕೀಯ ಪಕ್ಷಗಳು ಕೂಡ ಚುನಾವಣೆ ಮುಂದೂಡುವಂತೆ ಕೂಗೆಬ್ಬಿಸಿದ್ದವು.

ಭಾರತದ ಚುನಾವಣಾ ಆಯೋಗ (ಇಸಿಐ) ಮೊದಲಿಗೆ ಚುನಾವಣೆ ನಡೆಸುವ ಬಗ್ಗೆ ಕೆಲ ಅನುಮಾನಗಳನ್ನು ಹೊಂದಿದ್ದರೂ, ನಂತರ ಬೇರೆ ಬೇರೆ ದೇಶಗಳಲ್ಲಿ ಯಶಸ್ವಿಯಾಗಿ ಸಾರ್ವತ್ರಿಕ ಚುನಾವಣೆ ನಡೆಸಿದ್ದನ್ನು ನೋಡಿ ಧೈರ್ಯ ತಂದುಕೊಂಡಿತ್ತು. ವಿಶೇಷವಾಗಿ, ದಕ್ಷಿಣ ಕೊರಿಯಾದಂತಹ ದೇಶಗಳು ಕರೋನಾದ ನಡುವೆಯೇ ನಡೆಸಿದ ಚುನಾವಣೆಯಲ್ಲಿ ಹಿಂದೆಂದಿಗಿಂತ ಹೆಚ್ಚು ಮತದಾರರು ಮತಗಟ್ಟೆಗಳಿಗೆ ಬಂದು ವೋಟು ಹಾಕಿದ್ದರು.

ಒಟ್ಟು ೩೪ ದೇಶಗಳು ತಮ್ಮ ದೇಶದ ಶಾಸನ ಸಭೆಗಳಿಗೆ ಅಥವಾ ಅಧ್ಯಕ್ಷ ಸ್ಥಾನಕ್ಕೆ ಈ ಅವಧಿಯಲ್ಲಿ ಚುನಾವಣೆ ನಡೆಸಿದ್ದವು.
ಆದರೂ ಅಪಾಯ ಮೈಮೇಲೆಳೆದುಕೊಳ್ಳದಿರಲು ಚುನಾವಣಾ ಆಯೋಗ ಬೇರೆ ಬೇರೆ ದೇಶಗಳ ಚುನಾವಣಾ ಆಯೋಗಗಳನ್ನು ಸಂಪರ್ಕಿಸಿ ಅವು ಚುನಾವಣೆ ನಡೆಸುವಾಗ ಎದುರಿಸಿದ ಸಮಸ್ಯೆ ಹಾಗೂ ನಂತರದ ಪರಿಣಾಮಗಳನ್ನು ಅಧ್ಯಯನ ಮಾಡಿತು. ನಂತರ ನಮ್ಮ ದೇಶದಲ್ಲೇ ರಾಜ್ಯಸಭೆ ಮತ್ತು ವಿವಿಧ ರಾಜ್ಯಗಳಲ್ಲಿ ವಿಧಾನ ಪರಿಷತ್ ಚುನಾವಣೆಗಳನ್ನು ಕೋವಿಡ್-೧೯
ಮಾರ್ಗಸೂಚಿಯಡಿ ನಡೆಸಿ ನೋಡಿತು. ಆಗ ಅದಕ್ಕೊಂದು ವಿಶ್ವಾಸ ಮೂಡಿತು.

ಬೇರೆ ದೇಶಗಳ ಮಾಹಿತಿ ಹಾಗೂ ಇಲ್ಲಿನದೇ ಅನುಭವದೊಂದಿಗೆ ಆಗಸ್ಟ್ ತಿಂಗಳಿನಲ್ಲಿ ಬಿಹಾರದ ವಿಧಾನಸಭೆ ಚುನಾವಣೆಗೆಂದೇ ಚುನಾವಣಾ ಆಯೋಗ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಸ್ಯಾನಿಟೈಸರ್, ಸಾಮಾಜಿಕ ಅಂತರ ಮುಂತಾದ ಸಾಮಾನ್ಯ ಕ್ರಮಗಳ ಜತೆಗೆ ಪ್ರತಿ ಮತಗಟ್ಟೆಗಳಲ್ಲಿ ಮತದಾನ ಮಾಡುವ ಗರಿಷ್ಠ ಮತದಾರರ ಸಂಖ್ಯೆಯನ್ನು ೧೫೦೦ರಿಂದ
೧೦೦೦ಕ್ಕೆ ಇಳಿಸುವಂತಹ ಮಹತ್ವದ ಬದಲಾವಣೆಯನ್ನೂ ಮಾಡಿತು. ಅದರಿಂದಾಗಿ ಬಿಹಾರಕ್ಕೆ ೪೦,೦೦೦ ಹೆಚ್ಚುವರಿ
ಮತಗಟ್ಟೆಗಳು ಸೇರ್ಪಡೆಯಾದವು. ಅಲ್ಲಿಗೆ ಹೆಚ್ಚುವರಿ ಇವಿಎಂಗಳನ್ನು ಪೂರೈಸಬೇಕಾಯಿತು. ಮತ ಎಣಿಕೆ ಕೇಂದ್ರಗಳಲ್ಲಿ ಜನಸಂದಣಿಯಾಗುವುದನ್ನು ತಪ್ಪಿಸಲು ಪ್ರತಿ ಹಾಲ್‌ನಲ್ಲಿ ಹಾಕುತ್ತಿದ್ದ ಟೇಬಲ್‌ಗಳ ಸಂಖ್ಯೆಯನ್ನು ೧೪ರಿಂದ ಏಳಕ್ಕೆ ಇಳಿಸ ಲಾಯಿತು.

ಚುನಾವಣಾ ಪ್ರಚಾರ ಕೈಗೊಳ್ಳುವಾಗ ಅಭ್ಯರ್ಥಿಗಳು ಮನೆಮನೆ ಪ್ರಚಾರಕ್ಕೆ ಗರಿಷ್ಠ ಜನರೊಂದಿಗೆ ಮಾತ್ರ ಹೋಗಬಹುದು ಎಂದು ನಿರ್ಬಂಧ ವಿಧಿಸಲಾಯಿತು. ಬೆಂಗಾವಲು ವಾಹನಗಳ ಸಂಖ್ಯೆಯನ್ನು ೧೦ರ ಬದಲು ಐದಕ್ಕೆ ಸೀಮಿತಗೊಳಿಸಲಾಯಿತು. ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಮಕ್ಕೆ ಅನುಗುಣವಾಗಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಬಹುದಾದವರ ಗರಿಷ್ಠ ಸಂಖ್ಯೆಯನ್ನು ನಿಗದಿಪಡಿಸಲಾಯಿತು. ನಾಮಪತ್ರ ಸಲ್ಲಿಕೆ, ಅಫಿಡವಿಟ್ ಸಲ್ಲಿಕೆ ಹಾಗೂ ಭದ್ರತಾ ಠೇವಣಿಯಿರಿಸಲು
ಆನ್‌ಲೈನ್ ಸೌಕರ್ಯ ನೀಡಲಾಯಿತು.

ಕರೋನಾ ಹಿನ್ನೆಲೆಯಲ್ಲಿ ಮತದಾನ ಮಾಡಲು ಬರುವವರ ಸಂಖ್ಯೆ ಬಹಳ ಕಡಿಮೆಯಾಗಬಹುದು ಎಂದು ವಿರೋಧ ಪಕ್ಷಗಳು ಆಕ್ಷೇಪ ಎತ್ತಿದ್ದವು. ಅದಕ್ಕೆ ಉತ್ತರವಾಗಿ ಚುನಾವಣಾ ಆಯೋಗ ೮೦ ವರ್ಷ ಮೀರಿದವರಿಗೆ, ಕೋವಿಡ್ ರೋಗಿಗಳಿಗೆ, ವಿಕಲ ಚೇತನರಿಗೆ ಹಾಗೂ ಅಗತ್ಯ ಸೇವೆಗಳಲ್ಲಿರುವ ನೌಕರರಿಗೆ ಅಂಚೆ ಮತದಾನದ ಆಯ್ಕೆ ನೀಡಿತು. ಜೊತೆಗೆ ಈಗಿರುವ ಪ್ರಸಿದ್ಧ ಸ್ವೀಪ್ (ಸಿಸ್ಟಮ್ಯಾಟಿಕ್ ವೋಟರ್ ಎಜುಕೇಶನ್ ಫಾರ್ ಎಲೆಕ್ಟೋರಲ್ ಪಾರ್ಟಿಸಿಪೇಶನ್) ಕಾರ್ಯಕ್ರಮವನ್ನೂ ಬಳಸಿಕೊಳ್ಳಲು
ಅವಕಾಶ ನೀಡಿತು.

ಹೀಗಾಗಿ ಬಿಹಾರದ ಚುನಾವಣೆಯಲ್ಲಿ ಮತದಾನ ತೃಪ್ತಿಕರ ಪ್ರಮಾಣದಲ್ಲೇ ಆಗಿದೆ. ಅದರೊಂದಿಗೆ ಚುನಾವಣಾ ಆಯೋಗದ ನಿಲುವು ಸರಿ ಎಂಬುದೂ ಸಾಬೀತಾಗಿದೆ. ಜನರು ಒಂದೆಡೆ ಸೇರುವುದನ್ನು ತಪ್ಪಿಸಲು ಡಿಜಿಟಲ್ ಪ್ರಚಾರ ನಡೆಸಬೇಕು ಎಂಬ ಚುನಾವಣಾ ಆಯೋಗದ ನಿಯಮದ ಬಗ್ಗೆ ಕೆಲ ರಾಜಕೀಯ ಪಕ್ಷಗಳು ಆಕ್ಷೇಪ ಎತ್ತಿದ್ದವು. ಬಿಜೆಪಿಯವರ ಬಳಿ ತಾಂತ್ರಿಕ ಹಾಗೂ ಹಣಕಾಸು ಸೌಕರ್ಯಗಳು ಜಾಸ್ತಿಯಿರುವ ಕಾರಣ ಡಿಜಿಟಲ್ ಪ್ರಚಾರದಿಂದ ಅನಗತ್ಯವಾಗಿ ಬಿಜೆಪಿಗೆ ಲಾಭ ಮಾಡಿಕೊಟ್ಟಂತಾ ಗುತ್ತದೆ ಎಂಬುದು ಅವುಗಳ ತಕರಾರಾಗಿತ್ತು.

ಹಾಗೆಯೇ, ನಮ್ಮ ದೇಶದ ಚುನಾವಣಾ ಪ್ರಚಾರದಲ್ಲಿ ದೊಡ್ಡ ದೊಡ್ಡ ರ‍್ಯಾಲಿಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ವರ್ಚುವಲ್ ರ‍್ಯಾಲಿಗಳು ಅಂತಹ ಸಾರ್ವಜನಿಕ ರ‍್ಯಾಲಿಗೆ ಸಮವಾಗಲು ಸಾಧ್ಯವೇ ಎಂಬ ಅನುಮಾನ ಎಲ್ಲರಿಗೂ ಇತ್ತು. ಆನ್ ‌ಲೈನ್ ರ‍್ಯಾಲಿಗಳಿಗೆ ಅವುಗಳದೇ ಆದ ಮಿತಿಗಳಿರುವುದು ನಿಜ. ಇಂಟರ್‌ನೆಟ್ ಸೌಕರ್ಯವಿಲ್ಲದ ಕುಗ್ರಾಮಗಳನ್ನು, ಗುಡ್ಡಗಾಡು
ಪ್ರದೇಶಗಳನ್ನು ಹಾಗೂ ಅರಣ್ಯ ಪ್ರದೇಶಗಳನ್ನು ಅವುಗಳ ಮೂಲಕ ತಲುಪುವುದು ಸಾಧ್ಯವಿಲ್ಲ. ಅದರಲ್ಲೂ, ಬಿಹಾರದಲ್ಲಿ ಇಂಟರ್‌ನೆಟ್ ಇರುವುದು ಶೇ.೩೭ರಷ್ಟು ಭಾಗದಲ್ಲಿ ಮಾತ್ರ. ಅಲ್ಲಿ ಸ್ಮಾರ್ಟ್ನ್ ಫೋನ್ ಬಳಕೆದಾರರ ಸಂಖ್ಯೆ ಶೇ.೨೭ ಮಾತ್ರ ಇದೆ.

ಇನ್ನು, ವರ್ಚುವಲ್ ರ‍್ಯಾಲಿಗಳಲ್ಲಿ ಬಿಜೆಪಿ ಎತ್ತಿದ ಕೈ ಎಂಬುದೂ ನಿಜವೇ. ಆದರೆ, ಚುನಾವಣೆ ಘೋಷಿಸಿದ ಮೇಲೆ ಎಲ್ಲಾ ಪಕ್ಷ ಗಳೂ ಸಾಕಷ್ಟು ಸಾರ್ವಜನಿಕ ರ‍್ಯಾಲಿಗಳನ್ನೇ ಆಯೋಜಿಸಿದವು. ಅದು ಚುನಾವಣಾ ಆಯೋಗಕ್ಕೆ ಕಳವಳ ಉಂಟುಮಾಡಿತ್ತು. ನಂತರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಆಯೋಗ ಬಿಗಿಯಾದ ಕ್ರಮ ಕೂಡ ತೆಗೆದುಕೊಂಡಿತು.

ಆಯೋಗ ಇನ್ನೂ ಕೆಲವು ಸವಾಲುಗಳನ್ನು ಎದುರಿಸಿತ್ತು. ಸುಳ್ಳು ಸುದ್ದಿ ಮತ್ತು ಪ್ರೊಪಗ್ಯಾಂಡಾಗಳೂ ಅವುಗಳಲ್ಲೊಂದು. ಇವೆರಡರ ವಿರುದ್ಧವೂ ಆಯೋಗ ಕಠಿಣ ಕ್ರಮ ತೆಗೆದುಕೊಂಡಿತು. ಸೋಷಿಯಲ್ ಮೀಡಿಯಾಗಳ ಜತೆಗೆ ಈ ವಿಷಯದಲ್ಲಿ ಒಪ್ಪಂದ ಮಾಡಿಕೊಂಡು, ಸಮಸ್ಯಾತ್ಮಕ ಪೋಸ್ಟ್‌ಗಳನ್ನು ತೆಗೆದುಹಾಕಲು ವ್ಯವಸ್ಥೆ ಮಾಡಿತು. ಇತ್ತೀಚೆಗೆ ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆ ಪ್ರಕಟಿಸಿದ ತನಿಖಾ ವರದಿಯಲ್ಲಿ ಫೇಸ್‌ಬುಕ್ ಹೇಗೆ ರಾಜಕೀಯ ಪಕ್ಷಪಾತಿಯಾಗಿ ವರ್ತಿಸುತ್ತದೆ ಎಂಬುದನ್ನು ಬಹಿರಂಗಪಡಿಸಲಾಗಿತ್ತು. ಆ ವರದಿಯ ಪ್ರಕಾರ, ಫೇಸ್ ಬುಕ್ ಇಂಡಿಯಾ ಹಲವಾರು ಸಂದರ್ಭಗಳಲ್ಲಿ
ಆಡಳಿತಾರೂಢ ಪಕ್ಷಗಳ ನಾಯಕರು ಪ್ರಕಟಿಸುವ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆದುಹಾಕದೆ ಹಾಗೇ ಬಿಡುತ್ತಿತ್ತು.

ಹೀಗಾಗಿ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಷಯದಲ್ಲಿ ಹಾಗೂ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳ ವಿಷಯದಲ್ಲಿ ಚುನಾವಣಾ ಆಯೋಗದ ನಡೆಯನ್ನು ರಾಜಕೀಯ ಪಕ್ಷಗಳು ಪ್ರಶ್ನಿಸಿದ್ದವು. ಹೀಗಾಗಿ ಚುನಾವಣಾ ಆಯೋಗ ಸ್ವಯಂಪ್ರೇರಿತ ನೀತಿ ಸಂಹಿತೆಯನ್ನು ರೂಪಿಸಿತ್ತು.

ಇನ್ನು, ಮತ ಎಣಿಕೆಯ ದಿನ ನಡೆದ, ಹಿಂದೆಂದೂ ಕೇಳರಿಯದ ವಿದ್ಯಮಾನವೆಂದರೆ ಚುನಾವಣಾ ಆಯೋಗ ಒಂದಲ್ಲ ಎರಡಲ್ಲ ನಾಲ್ಕು ಬಾರಿ ಪತ್ರಿಕಾಗೋಷ್ಠಿ ನಡೆಸಿ ಸಂಭವನೀಯ ಅನುಮಾನಗಳನ್ನು ಬಗೆಹರಿಸಲು ಯತ್ನಿಸಿದ್ದು. ವಿಶೇಷವಾಗಿ, ಗೆಲುವಿನ ಅಂತರ ಬಹಳ ಕಡಿಮೆಯಿದ್ದಾಗ ಉದ್ಭವಿಸುವ ಅನುಮಾನ ಹಾಗೂ ಗೊಂದಲಗಳನ್ನು ಆಯೋಗ ಸಮರ್ಥವಾಗಿ ಬಗೆಹರಿಸಿತು.
ಮಂಗಳವಾರ ಮಧ್ಯಾಹ್ನ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಕೋವಿಡ್ ಸಂಬಂಧಿ ವಿಶೇಷ ಕ್ರಮಗಳಿಂದಾಗಿ ಮತ ಎಣಿಕೆ ನಿಧಾನವಾಗಲಿದೆ ಮತ್ತು ಮಧ್ಯರಾತ್ರಿಯವರೆಗೂ ನಡೆಯಬಹುದು ಎಂದು ಹೇಳಿತು.

ಬಿಹಾರದ ಮುಖ್ಯ ಚುನಾವಣಾಧಿಕಾರಿ ಮತಗಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗುವುದನ್ನು ತಪ್ಪಿಸಲು ಶೇ.೪೦ರಷ್ಟು ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಅದರರ್ಥ, ಹೆಚ್ಚುವರಿ ೪೦,೦೦೦ ಇವಿಎಂಗಳ ಮತ ಎಣಿಕೆ ಮಾಡಲು ಪ್ರತಿ ಇವಿಎಂಗೆ ೨೦ರಿಂದ ೩೦ ನಿಮಿಷ ಹೆಚ್ಚು ಬೇಕಾಗುತ್ತಿತ್ತು. ಇನ್ನು, ಮತ ಎಣಿಕೆ ಕೇಂದ್ರಗಳಲ್ಲಿ ಎಣಿಕೆ ಮೇಜುಗಳ
ಸಂಖ್ಯೆಯನ್ನು ಒಂದೊಂದು ಕೊಠಡಿಯಲ್ಲಿ ೧೪ರಿಂದ ಏಳಕ್ಕೆ ಇಳಿಸಲಾಗಿತ್ತು. ಅದೇ ವೇಳೆ, ಮತ ಎಣಿಕೆ ಸುತ್ತುಗಳು ಮತ್ತು ಫಲಿತಾಂಶ ಪ್ರಕಟಿಸುವ ಸುತ್ತುಗಳನ್ನು ಶೇ.೪೦ ರಿಂದ ೫೦ರಷ್ಟು ಹೆಚ್ಚಿಸಲಾಗಿತ್ತು.

ಆಯೋಗ ಈ ಸ್ಪಷ್ಟನೆ ನೀಡಿದ ಮೇಲೆ ಚುನಾವಣಾ ಅಕ್ರಮಗಳ ಬಗ್ಗೆ ಸಾಮಾನ್ಯವಾಗಿ  ಬಹಳ ಬೇಗ ಹರಡುವ ವದಂತಿಗಳಿಗೆ ಮೊದಲೇ ತಣ್ಣೀರು ಎರಚಿದಂತಾಯಿತು. ನಂತರ ಮಂಗಳವಾರ ಮಧ್ಯರಾತ್ರಿ ಗೆದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ವ್ಯತ್ಯಾಸ ಕಾಣಿಸುತ್ತಿದೆ ಎಂದು ಇನ್ನೊಂದು ದೊಡ್ಡ ಆಕ್ಷೇಪ ಕೇಳಿಬಂತು. ಹಾಗೆಯೇ, ಸುಮಾರು ೧೦ ಕ್ಷೇತ್ರಗಳಲ್ಲಿ ಫಲಿತಾಂಶ ಘೋಷಿಸಲು ಆಗುತ್ತಿರುವ ವಿಳಂಬದ ಬಗ್ಗೆಯೂ ಆಕ್ಷೇಪ ಕೇಳಿಬಂತು. ಗೆದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿನ ವ್ಯತ್ಯಾಸದ ಬಗ್ಗೆ ಪ್ರತಿ
ಪ್ರಕರಣವನ್ನೂ ಸೂಕ್ತವಾಗಿ ತನಿಖೆ ನಡೆಸಲಾಗುವುದು ಎಂದು ಆಯೋಗ ಭರವಸೆ ನೀಡಿತು.

ಇನ್ನು, ಫಲಿತಾಂಶ ಪ್ರಕಟಣೆ ವಿಳಂಬದ ವಿಷಯಕ್ಕೆ ಬಂದರೆ, ಅಭ್ಯರ್ಥಿಗಳು ಅಂಚೆ ಮತಗಳನ್ನು ಮರು ಎಣಿಕೆ ಮಾಡುವಂತೆ
ಕೇಳುವುದು ಹಾಗೂ ಇವಿಎಂಗಳು ತೋರಿಸುವ ಮತಗಳ ಸಂಖ್ಯೆಯನ್ನು ಹೊಸತಾಗಿ ಕೂಡಿಸಲು ಕೇಳುವುದು ಸರ್ವೇಸಾಮಾನ್ಯ. ಹೀಗಾಗಿ ಒಂದಷ್ಟು ವಿಳಂಬವಾಗುತ್ತದೆ. ತಿರಸ್ಕೃತವಾದ ಅಂಚೆ ಮತಗಳ ಸಂಖ್ಯೆಗಿಂತ ಗೆಲುವಿನ ಅಂತರ ಕಡಿಮೆಯಿದ್ದರೆ ಅವು ಗಳನ್ನು ಮರು ಎಣಿಕೆ ಮಾಡುವುದು ಕಡ್ಡಾಯ. ಒಂದು ಕ್ಷೇತ್ರದಲ್ಲಂತೂ ಕೇವಲ ೧೨ ಮತಗಳ ಅಂತರದಿಂದ ಗೆಲುವು ನಿರ್ಧ ರಿಸುವ ಸಂದರ್ಭ ಬಂದಿತ್ತು. ಇಂತಹ ಸಂದರ್ಭದಲ್ಲಿ ನಮಗೆ ರಾಜಸ್ಥಾನದ ಪ್ರಕರಣ ನೆನಪಾಗಬೇಕು. ಅಲ್ಲಿನ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿ.ಪಿ.ಜೋಶಿ ಅವರು ೨೦೦೮ರಲ್ಲಿ ಕೇವಲ ಮತದ ಅಂತರದಿಂದ ಸೋತಿದ್ದರು.

ಅದನ್ನು ಅವರು ಗೌರವದಿಂದ ಒಪ್ಪಿಕೊಂಡಿದ್ದರು. ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲ ಗಂಭೀರ ಪ್ರಶ್ನೆಗಳು ಎದ್ದಿದ್ದ ರಿಂದ ಚುನಾವಣಾ ಆಯೋಗದ ಇಮೇಜ್‌ಗೆ ಧಕ್ಕೆ ಉಂಟಾಗಿತ್ತು. ಅದನ್ನು ಸರಿಪಡಿಸಿಕೊಂಡು ತನ್ನ ದಕ್ಷತೆಯನ್ನು ಸಾಬೀತು  ಪಡಿಸಲು ಬಿಹಾರದ ಚುನಾವಣೆಯು ಚುನಾವಣಾ ಆಯೋಗಕ್ಕೆ ಉತ್ತಮ ಅವಕಾಶವಾಗಿತ್ತು.

ಎಲ್ಲಾ ದೇಶಗಳೂ ಪರಸ್ಪರರಿಂದ ಪಾಠಗಳನ್ನು ಕಲಿಯಲು ಎದುರು ನೋಡುತ್ತಿರುವ ಈ ಹೊತ್ತಿನಲ್ಲಿ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುವುದಕ್ಕೆ ಬಿಹಾರದ ವಿಧಾನಸಭೆ ಚುನಾವಣೆ ಒಂದು ಅತ್ಯುತ್ತಮ ಉದಾಹರಣೆಯಾಗಬಲ್ಲದು.