ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಬಾಬರಿ ಮಸೀದಿ ಕೆಡವಿದ ನಂತರದಲ್ಲಿ, ಒಂದು ಕೋಮಿನ ಜನರಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಹೌದು, ಮಾಧ್ಯಮಗಳಲ್ಲಿ ಆಗ ಆ ಕೋಮನ್ನು ಹೆಸರಿಸುವ ಪದ್ಧತಿ ಇರಲಿಲ್ಲ. ಹಾಗಿದ್ದೂ ಅದು ಯಾವ ಕೋಮೆಂದು ಓದಿದವರಿಗೂ, ಕೇಳಿದವರಿಗೂ, ವೀಕ್ಷಿಸಿದವರಿಗೂ ಅರ್ಥವಾಗುತ್ತಿತ್ತು.
ಮಾರಕಾಸ್ತ್ರಗಳನ್ನು ತುಂಬಿಕೊಂಡಿದ್ದ ಒಂದು ಲಾರಿಯನ್ನು ನಾನೂ ನೋಡಿದ್ದೆ. ಮೇಲಾಗಿ, ಇಡೀ ದೇಶ ಸಹಜ ಸ್ಥಿತಿಗೆ ಮರಳಿದ ಬಹುದಿನಗಳ ನಂತರ ಮೈಸೂರು ನಗರ ಹಿಂಸಾಪೂರ್ವ ಸ್ಥಿತಿಗೆ ಹಿಂದಿರುಗಿತ್ತು. ಈ ವಿದ್ಯಮಾನಗಳ ನೇರ ಪರಿಚಯವಿದ್ದ ಹಿನ್ನೆಲೆಯಲ್ಲಿ, ಹಲವು ವರ್ಷಗಳ ನಂತರ, ನನಗೆ ದೊರಕಿದ ಖಚಿತ ಮಾಹಿತಿಯೊಂದನ್ನು ಅಂದಿನ ಪೊಲೀಸ್ ಆಯುಕ್ತರಿಗೆ ಖುದ್ದಾಗಿ ಮುಟ್ಟಿಸಿದ್ದೆ. ದೇಶದ್ರೋಹಿ ಬೆಳವಣಿಗೆಯ ಕುರಿತಾದ ಮಾಹಿತಿ ಅದಾಗಿತ್ತು.
ಈ ಪಾರಂಪರಿಕ ನಗರದ ಬಗ್ಗೆ ಅತೀವ ಕಾಳಜಿ ಹಾಗೂ ಪ್ರೀತಿ ಇರುವ ನನಗೆ ಆ ಆಯುಕ್ತರು ನನ್ನ ಮೇಲೆಯೇ ಬಾಂಬ್ ರೂಪದ ಪ್ರಶ್ನೆಯನ್ನೆಸೆದರು: ನೀವುಬಿಜೆಪಿಯೇ? ಹಾಗೆಂದು, ಸೂಕ್ಷ್ಮ ಓದುಗರಿಗೆ ಅವರು ಆ ಕೋಮಿನವರೇನಲ್ಲ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ ಎಂದು ಭಾವಿಸಿದ್ದೇನೆ.
ಟಿವಿ ಯುಗಕ್ಕೆ ಮುಂಚೆ ಟ್ರಾನ್ಸಿಸ್ಟರ್ ಹಿಡಿದು ಗಟ್ಟಿಯಾಗಿ ಕ್ರಿಕೆಟ್ ಕಾಮೆಂಟರಿಯನ್ನು ಹಾಕಿಕೊಂಡು ಓಡಾಡುವ ಪಾದಚಾರಿ ಯರನ್ನು ಸ್ಕೋರೆಷ್ಟು ಎಂದು ಕೇಳುವ ಪರಿಪಾಠವಿತ್ತು. ಅದೇ ಮತ್ತು ಅಷ್ಟೇ ಕುತೂಹಲದಿಂದ, ಕೋಮು ಗಲಭೆಯಲ್ಲಿ ಸತ್ತವರ ಪೈಕಿ ‘ಏ’ ಎಷ್ಟು, ‘I’ ಎಷ್ಟು ಎಂದು ಪೊಲೀಸರನ್ನು ಕೆಲವು ಜಾತ್ಯತೀತ ವರದಿಗಾರರು ಕೇಳುತ್ತಿದ್ದ ಪರಿಪಾಠವೂ ಇತ್ತು. ಆ ಸ್ಕೋರ್ ಸಮವಾದೊಡನೆ ಶಾಂತಿ ಮರುಕಳಿಸಬಹುದೆಂಬ ಲೆಕ್ಕಾಚಾರ ಪೊಲೀಸ ರಲ್ಲಿರುತ್ತದೆ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಅಶಾಂತಿ ತಲೆದೋರಿತು. ವಾತಾವರಣವನ್ನು ತಿಳಿಗೊಳಿಸಲು, ಬಹದ್ದೂರ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಪ್ರಹಸನವೊಂದನ್ನು ನಿಯೋಜಿಸಲಾಗಿತ್ತು. ರಂಗಾಯಣದಲ್ಲಿ ಅಡ್ಡಾಡುವ ಕೆಲವು ಕಲಾವಿದರು ರೂಪಿಸಿದ ಸ್ಕಿಟ್ ಅದು. ಹೇಗೆ ಮಸೀದಿಗಳಲ್ಲಿ ಕೋಮು ಗಲಭೆಗೆ ಪ್ರಚೋದಿಸಲಾಗುತ್ತದೆ ಎಂದು ಬಿಂಬಿಸಲಾಯಿತು. ಶುಕ್ರವಾರದ ಜತೆ ಗುರುವಾರವನ್ನು ಸರಿದೂಗಿಸುವ ಸಲುವಾಗಿ, ತನ್ನ ಭಕ್ತರಿಗೆ ರಾಘವೇಂದ್ರ
ಮಠದಲ್ಲಿ ಹೇಗೆ ಹಿಂಸೆಯನ್ನು ಬೋಽಸಲಾಗುತ್ತದೆ ಎಂದೂ ನಟನೆಯ ಮೂಲಕ ತೋರಿಸಲಾಯಿತು. (ಸದ್ಯಕ್ಕೆ ಸುದ್ದಿಯಲ್ಲಿ ರುವ ನಟ ಚೇತನ್ ಆಗಿನ್ನೂ ಮುಂಚೂಣಿಯಲ್ಲಿರಲಿಲ್ಲ. ಅವರ ತಂದೆ ಈ ಪ್ರಹಸನದ ರೂವಾರಿಯೋ ಅಲ್ಲವೋ ನನಗೆ ತಿಳಿದಿಲ್ಲ.) ಕದಡಲ್ಪಟ್ಟ ಶಾಂತಿ ಮತ್ತಷ್ಟು ಕದಡುವ ಸಾಧ್ಯತೆಯನ್ನರಿತ ಪೊಲೀಸ್ ಆಯುಕ್ತ ಸುನೀಲ್ ಅಗರ್ವಾಲ್ ಪ್ರಹಸನ ವನ್ನು ಸಾಕುಮಾಡೆಂದರು.
ಅದೇ ಸಂದರ್ಭದಲ್ಲಿ, ಕಲಾಮಂದಿರದಲ್ಲಿ ಶಾಂತಿ ಸಭೆಯೊಂದನ್ನು ಕರೆಯಲಾಗಿತ್ತು. ಪದ್ಧತಿಯಂತೆ, ಎರಡೂ ಕೋಮಿನ ಗಣ್ಯರನ್ನು ಆಮಂತ್ರಿಸಲಾಗಿತ್ತು. ಆ ಕೋಮಿನ ಗಣ್ಯರೊಬ್ಬರು ಈ ಕೋಮಿನ ಗ್ರಂಥವನ್ನು ಪಟಪಟನೆ ಉದ್ಧರಿಸಿದರು. ನಂತರ ಮಾತನಾಡಿದ ಸುನೀಲ್ ಆ ಕೋಮಿನವರಾಗಿಯೂ ಅವರು ತಿಳಿದುಕೊಂಡಿರುವಷ್ಟು ಈ ಕೋಮಿನವನಾದ ತಮಗೇ ತಿಳಿದಿಲ್ಲ ಎಂದು ಅವರ ಬಗ್ಗೆ ಮೆಚ್ಚಿಗೆಯನ್ನೂ ತಮ್ಮ ತಿಳಿವಳಿಕೆಯ ಅಭಾವದ ಬಗ್ಗೆ(ಯೇ) ಅತೃಪ್ತಿ ವ್ಯಕ್ತಪಡಿಸಿದರು. ಹಾಗೆ ಸಾರ್ವ ಜನಿಕವಾಗಿ ಘೋಷಿಸುವಾಗ ಅವರು ಖಾಕಿ ತೊಟ್ಟಿದ್ದರು.
ಯೂನಿಫಾರ್ಮ್ ಧರಿಸಿದವರಿಗೆ ಅದಾವ ಧರ್ಮ ಎಂದು ನನಗನ್ನಿಸಿತ್ತು. ನನಗೆ ಅಂದು ಹಾಗೆ ಅನ್ನಿಸಲಿಕ್ಕೆ ಹಿಂದೂವಿನ ನಿತ್ಯ
ಔದಾರ್ಯ ಮನಃಸ್ಥಿತಿ ಕಾರಣ. ಹಾಗೆ ನೋಡಿದರೆ, ಸುನೀಲ್‌ರದ್ದೂ ಹಿಂದೂ ಔದಾರ್ಯವೇ. ಶತಪಥ ಬ್ರಾಹ್ಮಣವನ್ನು ನಿರರ್ಗಳವಾಗಿ ಉದ್ಧರಿಸಿ ಮಾತನಾಡಿದ ಆ ಮುಸ್ಲಿಂ ಗಣ್ಯರು ಹಿಂದೂ ಧರ್ಮದ ಬಗ್ಗೆ ತಮಗಿಂತ ಹೆಚ್ಚು ಅರಿತಿದ್ದರ ಬಗ್ಗೆ ಅವರು ವ್ಯಕ್ತಪಡಿಸಿದ ಪ್ರಶಂಸೆ ಅದಾಗಿತ್ತು. (ಬ್ರಾಹ್ಮಣವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮುಸ್ಲಿಂ ಗಣ್ಯರನ್ನು ನಟ ಚೇತನ್‌ರಿಂದ ರಕ್ಷಿಸುವ ಉದ್ದೇಶದಿಂದ ಅವರ ಹೆಸರನ್ನು ಗೌಪ್ಯವಾಗಿರಿಸಿದ್ದೇನೆ.) ಇದೀಗ ನನಗೆ ಮನವರಿಕೆಯಾಗಿದೆ.
ನಾನಂದು ಹಾಗೆ ಅರ್ಥೈಸಿದ್ದು ತಪ್ಪು. ಸುನೀಲ್‌ರದ್ದು ಸದುದ್ದೇಶವಾಗಿತ್ತು. ಪುಣ್ಯಕ್ಕೆ, ನನಗಂದು ಅನ್ನಿಸಿದ್ದನ್ನು ನಾನು ಮಾಧ್ಯಮದಲ್ಲೂ ವ್ಯಕ್ತಪಡಿಸಲಿಲ್ಲ. ಒಂದು ವೇಳೆ ವ್ಯಕ್ತಪಡಿಸಿದ್ದರೂ, ನನ್ನ ಆಸ್ತಿಯಂತೂ, ಮಾಧ್ಯಮದಲ್ಲಿ ನನ್ನ ಸೇವಾ
ಅವಧಿಯಷ್ಟೇ ಸುದೀರ್ಘವಾದ ಮಾಧ್ಯಮ ನೆಂಟಿರುವ ಬರ್ಖಾ ದತ್ತರ ಒಟ್ಟು ಮೌಲ್ಯದಿಂದ ಸಾವಿರಾರು ಯೋಜನೆಗಳಷ್ಟು ಹಿಂದೆಯೇ ಇರುತ್ತಿತ್ತು. ಅವಧಿ ಒಂದೇ ಆದರೇನು, ಪ್ರತಿಭೆಯೂ ಬೇಕಲ್ಲವೇ!
ಹೆಸರುವಾಸಿ ಫ್ರೆಂಚ್ ಪತ್ರಕರ್ತ ಫ್ರಾನ್ಸ್ವಾಗೋತಿಯೆ (Francois Gothier) ಸಿದ್ಧಪಡಿಸಿದ್ದಾರೆಂದು ಹೇಳಲಾದ ಒಂದು ಪಟ್ಟಿ ಇದೆ. ಹಿಂದೂಗಳಿಗೆ ಮತ್ತು ಹಿಂದೂ ಧರ್ಮಕ್ಕೆ ಸಂಚಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಐವತ್ತು ಪ್ರಮುಖರ ಹೆಸರು ಅದರಲ್ಲಿದೆ. ನೆಟ್ಟಗಿದ್ದ ಭಾರತೀಯ ಶಿಕ್ಷಣ ಪದ್ಧತಿಯನ್ನೂ, ತನ್ಮೂಲಕ ಅದರ ಭವ್ಯ ಸಂಸ್ಕೃತಿಯನ್ನೂ, ದಿಕ್ಕುತಪ್ಪಿಸಿದ ಥಾಮಸ್ ಬಿ ಮೆಕಾಲೆಯಿಂದ ಹಿಡಿದು, ಭಾರತಕ್ಕೆ ವಧುವಾಗಿ ಕಾಲಿಟ್ಟ ನಂತರ ಶುಕ್ರದೆಶೆಯನ್ನನ್ನುಭವಿಸುತ್ತಿರುವ ಪರಗರ್ಭ
ಶ್ರೀಮಂತೆ ಸೋನಿಯಾ ಗಾಂಧಿ, ಆಕೆಯ ಪುತ್ರ, ಪುತ್ರಿ; ಪೋಪ್, ಬಾಬರ್, ಔರಂಗಜೇಬ್, ಓವೈಸಿ, ಪತ್ರಕರ್ತರಾದ ಎನ್ ರಾಮ, ಬರ್ಖಾ ದತ್, ಸಾಗರಿಕಾ ಘೋಷ್, ರಾಜದೀಪ್ ಸರ್ದೇಸಾಯಿಗಳೆಲ್ಲರೂ ಅದರಲ್ಲಿ ರಾರಾಜಿಸುತ್ತಾರೆ.
ಬಹುತೇಕ ಹೆಸರುಗಳನ್ನು ವರ್ತಮಾನದ ಸಾಧಾರಣ ಅರಿವಿರುವವರೂ ಊಹಿಸಬಹುದು. ಚುನಾವಣೆಯಲ್ಲಿ ಸೋತೂ ಮುಖ್ಯ ಮಂತ್ರಿಯಾಗಿ ಪೀಠಾರೋಹಣ ಮಾಡಿರುವ ಮಮತಾ ಬ್ಯಾನರ್ಜಿಯೂ ಕಪ್ಪು ಪಟ್ಟಿಯಲ್ಲಿದ್ದಾಳೆ. ಹುಲಿ ಬೇಟೆಯಾಡಿದರೆ, ಹದ್ದುಗಳಿಗೂ ಹಬ್ಬ. ಸೋನಿಯಾ ಒಪ್ಪತ್ತು ಉಂಡು ಮಿಗಿಸಿದ ಎಲೆಯಲ್ಲಿನ ಎಂಜಲಿಗೂ ಕೆಲ ಪತ್ರಕರ್ತರಲ್ಲಿ ಆಹ್ಲಾದಕರ ಪೈಪೋಟಿಯಿದೆ.
ದೆಹಲಿಯಲ್ಲಿದ್ದು ಅದರ ವಾಸನೆ ಹಿಡಿಯದಿದ್ದರೆ ಪತ್ರಕರ್ತರಾಗಲು ನಾಲಾಯಕ್ಕು. ಸೋನಿಯಾ ಮತ್ತು ಆಕೆಯ ವರಪುತ್ರ ರಾಹುಲ್ ಗಾಂಧಿಯ ಔದಾರ್ಯ ಬಂಗಾಳಕ್ಕೂ ವಿಸ್ತರಿಸಿದೆ. ಅಲ್ಲಿನ ವಿಧಾನ ಸಭಾ ಚುನಾವಣೆಯಲ್ಲಿ ಮುಖಭಂಗವಾಗಿದ್ದನ್ನು ತಾಯಿ – ಮಗ ಮರೆತಿzರೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಗೆಲ್ಲಬೇಕಾದ ಸೆಪ್ಟೆಂಬರ್ ಉಪಚುನಾವಣೆಯಲ್ಲಿ ಮಮತಾ
ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲವಂತೆ.
ನಿಲ್ಲಿಸಿದರೆ ಗೆದ್ದೇ ಬಿಡುತ್ತಾರೇನೊ ಅನ್ನುವಂತೆ. ಅಧಿಕಾರ ಹಿಡಿದಿದ್ದೇ ಹಿಡಿದಿದ್ದು, ಬಂಗಾಳದಲ್ಲಿ ಮಮತಾ ಹಿಂದೂಗಳ ಬೇಟೆಗಾಗಿ ಹುಚ್ಚುನಾಯಿಗಳನ್ನು ಛೂ ಬಿಟ್ಟಿದ್ದಾರೆ. ಕಳೆದ ಆರು ವಾರಗಳಲ್ಲಿ ಆ ನತದೃಷ್ಟ ರಾಜ್ಯದ ಹಿಂದೂಗಳು ಅನು ಭವಿಸಿದ ಕ್ರೌರ್ಯ ಕಾಶ್ಮೀರದ ಪಂಡಿತರು ಕಂಡ ನರಕದ ಪ್ರತಿರೂಪದಂತಿದ್ದವು. ತೃಣಮೂಲ ಕಾಂಗ್ರೆಸ್ ಗೆದ್ದಿದ್ದೇ ಗೆದ್ದಿದ್ದು ಮಮತೆಯ ಚುನಾವಣೆಗೆ ಮುನ್ನ ಪೂಜೆ ಸಲ್ಲಿಸಿದ ಹನುಮಾನ್ ತೃಣವಾಗಿ ಹೋದ.
ಹಿಂದೂಗಳ ಹತ್ಯಾಕಾಂಡ ನಡೆಸಿದ ಟಿಪ್ಪು, ಬ್ರಿಟಿಷರ ವಿರುದ್ಧದ ಯುದ್ಧಕ್ಕೆ ಮೊದಲು ಸ್ಥಳೀಯ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದ್ದನಂತೆ! ಪಂಡಿತರೆಂದರೆ ಯಾರಿಗೂ ಕಣ್ಣೀರು ಬರದು. ಮೃಗೀಯ ದಾಳಿಗೆ ಆದಿವಾಸಿ ಯುವತಿಯೂ ಬಲಿಯಾದಳು. ಆದರೂ, ಪಶುಪ್ರಭುತ್ವದ ವಿರುದ್ಧ ದನಿ ಎತ್ತುವವರಿಲ್ಲ. ಏಕೆಂದರೆ, ಹಿಂದೂ – ವಿರೋಧಿಗಳ ಚಿತ್ತ ಮೋದಿಯನ್ನು ಹಣಿಸುವತ್ತ. ಅವನನ್ನು ಹಣಿಸುವುದು ಕಷ್ಟ, ಆದ್ದರಿಂದ ಹೈರಾಣಾಗಿಸುವ ಹುನ್ನಾರ.
ಜಗತ್ತನ್ನು ಬಲಾತ್ಕಾರದಿಂದ ಇಸ್ಲಾಮೀಕರಣಗೊಳಿಸುವ ಪಣತೊಟ್ಟ ಇಸ್ಲಾಮಿಕ್ ಸ್ಟೇಟ್ (ಐಎಸ್) ಪಕ್ಕದ ಬಾಂಗ್ಲಾ ದೇಶವನ್ನು ಪ್ರವೇಶಿಸಿ ಐದಾರು ವರ್ಷಗಳಾದವು. ಭಾರತದ ಗಡಿಗೆ ಐಎಸ್ ಬಂದಾಗಿದೆ ಎಂದು ಬರೆದಿದ್ದೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಕ್ಯಾಂಪಸ್ ರೆಕ್ರೂಟ್ಮೆಂಟ್‌ಗೆ ಬಂದವರಂತೆ ನೆರೆದೇಶಗಳ ನಿರಾಶ್ರಿತರನ್ನೂ ಒಳಗೊಂಡ ಬಂಗಾಳದ ನಿರುದ್ಯೋಗಿಗಳಿಗೆ ಐಎಸ್ ಕೆಂಪು ಹಾಸು ಹಾಸಿಯಾಗಿತ್ತು. ಕೇರಳದಿಂದ ಗಂಡಂದಿರೊಂದಿಗೆ ಓಡಿ ಹೋಗಿ ಗಂಡಂದಿರು ಸತ್ತ ನಂತರ ಆಫ್ಗಾನಿಸ್ತಾನ ದಲ್ಲಿ ಸೆರೆಯಲ್ಲಿರುವ ಮಹಿಳಾ ಐಎಸ್‌ಗಳನ್ನು ಭಾರತ ಹಿಂಪಡೆಯಬೇಕೇ ಬೇಡವೇ ಎಂಬುದರ ಕುರಿತು ದ ಹಿಂದೂ ಪತ್ರಿಕೆ ಮೊನ್ನೆ ತಾನೇ ಚರ್ಚೆ ಏರ್ಪಡಿಸಿತ್ತು!
ಅವರಿಗೆ ಉಜ್ವಲ ಭವಿಷ್ಯ ಕಲ್ಪಿಸಿಕೊಡಲು ಮಮತಾ ಏಕೋ ಮುಂದಾಗಿಲ್ಲ. ಈಗ ಕೋವಿಡ್ ಕಾರಣದಿಂದ ಕೋಟಿಗಟ್ಟಲೆ
ಭಾರತೀಯರು ನಿರುದ್ಯೋಗಿಗಳಾಗಿದ್ದಾರೆ. ಸೋನಿಯಾ ಮತ್ತು ಆಕೆಯ ವಿವಿಧ ರಾಜ್ಯಗಳ ಏಜೆಂಟರುಗಳ ಅಕ್ಕಿಯ ಚೀಲಗಳ ಆಸೆಗೆ ಅವರು ಬೇಸ್ತು ಬೀಳದಂತೆ ನೋಡಿಕೊಳ್ಳಬೇಕಾದ ಹೆಚ್ಚುವರಿ ಜವಾಬ್ದಾರಿ ಮೋದಿಯ ಮೇಲಿದೆ. ಮತಾಂತರದ ಗಾಳಕ್ಕೆ ಹಿಂದೂಗಳು ಬೀಳುವುದನ್ನು ತಪ್ಪಿಸುವುದಕ್ಕಿಂತ ಮುಂಚೆ ಪಶ್ಚಿಮ ಬಂಗಾಳದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರಕಾರ
ಮುಂದಾಗಬೇಕಿದೆ.
ಮಮತಾಳ ಸಿಡಿಮಿಡಿಯ ಸ್ಯಾಂಪಲ್ ಕರ್ನಾಟಕದಲ್ಲೂ ನೋಡಿಯಾಗಿದೆ. ಮೂರು ವರ್ಷಗಳ ಕೆಳಗೆ ಎಚ್.ಡಿ. ಕುಮಾರ ಸ್ವಾಮಿಯ ಪ್ರಮಾಣವಚನ ಸಮಾರಂಭಕ್ಕೆ ಆಮಂತ್ರಿಸಲ್ಪಟ್ಟಿದ್ದ ಮಮತಾ ಬೆಂಗಳೂರಿನ ವಾಹನ ಸಂಚಾರದ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡು ಅರ್ಧ ಕಿಮೀ ನಡೆದು ನಂತರ ಅಂದಿನ ಡಿಜಿಪಿ ನೀಲಮಣಿಯ ಮೇಲೆ ಎಗರಾಡಿದ್ದರು. ಇರಲಿ. ಆ ಸಮಾರಂಭ
ನಡೆದಿದ್ದೇ ಹಿಂದೂ ವಿರೋಧಿ ಶಕ್ತಿಗಳ ರಟ್ಟೆಯ ಬಲ ಪ್ರದರ್ಶನಕ್ಕಾಗಿ. ಮುಖ್ಯಮಂತ್ರಿಯಾಗಿಯೇ ಇಷ್ಟು ಹಾವಳಿ
ನಡೆಸು ತ್ತಿರುವ ಮಮತಾ ಇನ್ನು ಪ್ರಧಾನಿಯಾದರೆ ಏನು ಗತಿ ಎಂಬುದನ್ನು ಹಿಂದೂಗಳು ಊಹಿಸಬೇಕು.
ಆದರೆ ಮಮತಾ ಒಬ್ಬರೇ ದುರಂತದ ಮೂಲವಲ್ಲ. ಅಂದು ವೇದಿಕೆಯ ಮೇಲಿದ್ದ ಯಾರೇ ಪ್ರಧಾನಿಯಾದರೂ (ಅಥವಾ ಒಬ್ಬರ
ನಂತರ ಒಬ್ಬರು ಸರತಿಯಲ್ಲಿ ಪ್ರಧಾನಿಯಾದರೂ) ಅದರ ಪರಿಣಾಮ ವಿಭಿನ್ನ ವಾಗಿರುವುದಿಲ್ಲ. ಮುಂದಿನ ಜನ್ಮದಲ್ಲಿ
ಮುಸ್ಲಿಮನಾಗಿ ಹುಟ್ಟುವ ಮುಕ್ತ ಹಂಬಲವಿರುವ ದೇವೇಗೌಡರ ಪಕ್ಷದವರು ಪಟ್ಟವೇರಿದರೂ ಅದೇ ಗತಿ.
ಆ ಬಯಕೆಯನ್ನು ಹೊಂದಿರುವುದೂ ಹಿಂದೂ ವಿರೋಧಿ ಮನಃಸ್ಥಿತಿಯೇ. ಅಂದರೆ, ಅವರಿಗೆ ಹಿಂದೂ ಧರ್ಮ ಸಮ್ಮತವಲ್ಲ ಎಂದು. ಗೋತಿಯೇ ಪಟ್ಟಿಗೆ ಸೇರಿಸಬೇಕಾದ ಅನೇಕ ಹೆಸರುಗಳಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರದ್ದೂ
ಒಂದು. ಅವರನ್ನು ಪದಚ್ಯುತಿಗೊಳಿಸಲು ಏನೆ ಕಾರಣಗಳನ್ನು ನೀಡುತ್ತಾರೆ. ಹಿಂದೂಗಳ ಹಿತಾಸಕ್ತಿಯನ್ನು ಕಾಪಾಡುವುದರಲ್ಲಿ ವಿಫಲರಾಗಿದ್ದಾರೆ ಎನ್ನುವುದನ್ನು ಬಿಟ್ಟು. ಇಲ್ಲಿ ಮತ್ತೊಂದು ಪಟ್ಟಿಯನ್ನು ಪ್ರಸ್ತಾಪಿಸಬೇಕು.
ಮೊನ್ನೆ ಪಶ್ಚಿಮ ಬಂಗಾಳದಲ್ಲಿ ನೇಮಕವಾದ ಐವತ್ತು ಜನ ಮುಸ್ಲಿಂ ಸಬ್ ಇನ್ಸ್‌ಪೆಕ್ಟರ್‌ಗಳ ಪಟ್ಟಿ – ವಾಟ್ಸಾಪ್ಪಿನಲ್ಲಿ ಹರಿದಾ ಡುತ್ತಿದೆ. ಈಗಾಗಲೇ ಆಕ್ರಮಣಗೊಂಡು ಹೆದರಿ ನಡುಗುತ್ತಿರುವ ಹಿಂದೂಗಳ ದೂರುಗಳನ್ನು ಸಮರ್ಪಕವಾಗಿ ವಿಚಾರಿಸದೆ, ಸಂತ್ರಸ್ತರು ಸರ್ವೋಚ್ಚ ನ್ಯಾಯಾಲಯದ ನೆರವು ಕೋರಿದ್ದಾರೆ. ಕುರಿಗಳನ್ನು ನೋಡಿಕೊಳ್ಳಲು ತೋಳವನ್ನು ನೇಮಕ ಮಾಡಿ ದಂತಿದೆ. ಹಿಂದೂ ಧರ್ಮಕ್ಕೆ ಎಷ್ಟೆ ಕಂಟಕಗಳು! ಸ್ವದೇಶದ ಅನಾಥರಾದ ಹಿಂದೂ ಧರ್ಮೀಯರು.