Wednesday, 18th September 2024

ಅಪರಾಧಗಳ ಸುತ್ತ, ಅಪರಾಧಿ ವಾತಾವರಣ

ಅಭಿಪ್ರಾಯ

ಅಪರ್ಣಾ ಹೆಗಡೆ

ಹಣ ಮತ್ತೆ ಹಸಿವು ಅಪರಾಧಗಳಿಗೆ ಮನುಷ್ಯನನ್ನ ದೂಡುತ್ತದೇನೋ! ಮನುಷ್ಯನಿಗೆ ಭಾವನೆಯಿದೆ, ವಿಚಾರ ಮಾಡುವ ಶಕ್ತಿಯಿದೆ, ತನ್ನನ್ನ ತಾನು
ನಿಗ್ರಹಿಸಿಕೊಳ್ಳುವ ಸಾಮರ್ಥ್ಯ ಕೂಡ ಇದೆ. ಮೃಗದಂತೆ ವರ್ತಿಸುವುದು ಅಪರಾಧ. ಪ್ರಾಣಿಗಳಿಗೆ ತಮ್ಮ ಭಾವನೆಗಳನ್ನ ತಡೆ ಹಿಡಿಯುವುದು ತಿಳಿದಿಲ್ಲ. ಕೋಪ ಬರಲಿ ಅಥವಾ ಭಯವಾಗಲಿ ಅರಚುವುದು, ಕಚ್ಚುವುದು, ತಮ್ಮ ಕೋಡಿನಿಂದಲೋ, ನಖದಿಂದಲೋ ಪರಚುವುದು ಒಟ್ಟಿನಲ್ಲಿ ಆಕ್ರಮಣ ಮಾಡುವುದು, ಪ್ರಾಣ ಹಾನಿ ಮಾಡುವುದು ಮೃಗಸ್ವರೂಪ.

ಮಾನಸಿಕ ಶಾಸ್ತ್ರದಲ್ಲಿ ಮನಸ್ಸು ಮುಕ್ತವಾಗಿ ಇರಬೇಕು ಎಂದು ಹೇಳಿದ್ದಿದ್ದರೂ ಕೂಡ ಆ ಮನಸ್ಸಿಗೆ ಸ್ವಲ್ಪವಾದರೂ ಬಟ್ಟೆ ತೊಡಿಸಲೇ ಬೇಕು. ಅದಿಲ್ಲವಾದರೆ ಆಕ್ರಮಣ ಮನೋಭಾವನೆ ತಲೆ ಎತ್ತುತ್ತದೆ. ಬಿಗಿಯಾದ ಕಾನೂನಿನ ಅಡಿಯಲ್ಲಿಯೂ ಕೂಡ ಅಪರಾಧಗಳು ಜರುಗುತ್ತಲೇ ಇವೆ. ಧರ್ಮದ ಹೆಸರಿನಲ್ಲಿ, ಜಾತಿಯ ನೆಪದಲ್ಲಿ, ರಾಜಕೀಯದ ಒಳ ಸುಳಿಯಲ್ಲಿ, ಯಾರದೋ ಪ್ರತಿಭೆಯೆನ್ನ ಹತ್ತಿಕ್ಕಲಿಕ್ಕಾಗಿ, ಅದರ ಹೊರತಾಗಿ ಮನೆಮನೆಯಲ್ಲಿ ಹಿಂಸೆ ಕ್ರೌರ್ಯಗಳು ಕಾಣುತ್ತಲೆ ಇವೆ. ಅಪರಾಧಿಗಳು ಹೊಸ ಹೊಸ ರೂಪದಿಂದ ತಮ್ಮ ಕಾರ್ಯ ಸಾಧನೆಯನ್ನ ಮಾಡು
ತ್ತಲೆ ಇzರೆ. ಸೈಬರ್ ಅಪರಾಧಗಳು ಅತ್ಯಂತ ವಿಸ್ತಾರವಾಗಿ, ಅದೆಷ್ಟೋ ಜನರನ್ನ ಬಲಿತೆಗೆದುಕೊಳ್ಳುತ್ತಲೆ ಇದೆ.

ಹಾಗಾದರೆ ಈ ಅಪರಾಧಗಳಿಗೆ ಅಪರಾಧ ಮನಸ್ಥಿಗೆ ಕಾರಣವಾದರೂ ಏನು!? ಒಬ್ಬ ವ್ಯಕ್ತಿ ಹುಟ್ಟಿದಾಗಿನಿಂದ ತನ್ನ ಕೊನೆಯ ಉಸಿರಿನತನಕ ತನ್ನ ಇಡೀ ಜೀವನವನ್ನ ಸಮಾಜದಲ್ಲಿ ಕಳೆಯುತ್ತಾನೆ. ವ್ಯಕ್ತಿ ತನ್ನ ಬೇಕು ಬೇಡಗಳಿಗೆ, ತನ್ನ ಒಡನಾಟಕ್ಕೆ, ತನ್ನ ಅಗತ್ಯ ಪೂರೈಕೆಗಳಿಗೆ, ಹಾಗೂ ತನ್ನ ಎಲ್ಲ ಚಟುವಟಿಕೆಗೆ ಯಾವ ರೀತಿಯ ಸಮಾಜವನ್ನ ಆಯ್ದುಕೊಳ್ಳುತ್ತಾನೋ, ಯಾವ ರೀತಿಯ ಸಮಾಜದಲ್ಲಿ ಬೆಳೆಯುತ್ತಾನೋ ಆ ವ್ಯಕ್ತಿ ಅದರಂತೆ
ರೂಪಗೊಳ್ಳುತ್ತಾನೆ. ಕ್ರಿಮಿನಲ್ ವಾತಾವರಣದಲ್ಲಿ ಬೆಳೆದ ವ್ಯಕ್ತಿ ಅದೆಷ್ಟೇ ವಿದ್ಯಾವಂತನಾದರೂ ಅವನೊಳಗೊಬ್ಬ ಕ್ರೈಂ ಮನಸ್ಥಿತಿಯ ನೆರಳು ಅವಿತುಕೊಂಡಿರುತ್ತದೆ. ಒಂದು ಸಮಯ ಆ ಕ್ರಿಮಿನಲ್ ಆಚೆ ಬರುತ್ತಾನೆ ಕೂಡ.

ಇಂದು ಒಂದು ದೊಡ್ಡ ಆಘಾತಕಾರಿ ಸಂಗತಿ ಎಂದರೆ ಪ್ರೌಢ ವಯಸ್ಕರ ಅಪರಾಧ ವನ್ನ ಮನೆಯವರು ಮುಚ್ಚಿಹಾಕು ವುದು. ಇದರಿಂದ ಆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾದರೂ ಹೇಗೆ ತಾನೆ ಆಗುತ್ತದೆ!? ಕಾನೂನು ಏನೋ ಹೆಣ್ಣಿನ ಪರವಾಗಿಯೇ ಇದೆ, ಆದರೆ ಆಕೆಗೆ ಭದ್ರತೆ ಆದರೂ ಎಷ್ಟು ಇದೆ!? ಪ್ರೀತಿಯ ನಶೆಯನ್ನ ಏರಿಸಿಕೊಂಡವರು ಕೇವಲ ಹದಿ ಹರೆಯದವರೊಂದೆ ಅಲ್ಲ. ಒಂದು ಮೊಡವೆಯ ಕತೆ ಮುಗಿದಿರುವ ವಯಸ್ಕರು ಕೂಡ. ಪ್ರೀತಿ ಎನ್ನುವುದೇನೋ ಮನಸು, ಭಾವನೆಗೆ ಸಂಬಂಧಿಸಿರುವುದು ಒಪ್ಪೋಣ.

ಆದರೆ ಆ ಪ್ರೀತಿಯ ಹೆಸರಿನಲ್ಲಿ ಭಾವನೆಯನ್ನೆ ಮರೆತು ವ್ಯವಹರಿಸುತ್ತಾರಲ್ಲ ಶೋಚನಿಯವೇ ಸರಿ. ಯಾವುದೇ ನಾಗರಿಕ ಸಮಾಜ ಈ ಅಪರಾಧಗಳನ್ನ ಬಯಸುವುದಿಲ್ಲ. ಆದರೆ, ಈ ಅಪರಾಧಗಳನ್ನ ತಡೆಯಲು ನಾಗರಿಕರ ಸಮಾಜ ಎಡವುತ್ತಿದೆ. ಈ ಪ್ರೀತಿ ಎನ್ನುವ ವಿಷಯವೇ ತೆಗೆದುಕೊಂಡರೆ, ಆಕೆ ಅಥವಾ ಅವನು ತನಗೊಂದೆ ಎನ್ನುವುದರಿಂದ ಪ್ರಾರಂಭ ವಾಗಿ ಅತಿಯಾದ mಟooಛಿooಜಿqಛಿ ನಿಂದ ಮಾನಸಿಕ ರೋಗಿಯಾಗುವ ಸಾಧ್ಯತೆ.  ಈmಟooಛಿooಜಿqಛ್ಞಿಛಿoo ಸೈಕೋ ಆಗಿ ಪರಿವರ್ತಿಸುತ್ತದೆ ಎಂದು moqseಟ್ಝಟಜqs ಹೇಳುತ್ತದೆ.

ಹಾಗಾದರೆ ಈ ಅಪರಾಧಿಗಳಿಗೆ ನಿಜದಲ್ಲಿ ಭಾವನೆಗಳು ಇರುವುದಿಲ್ಲವೇ!? ಇರುತ್ತದೆ. ಆದರೆ ಆ ಭಾವನೆಗಳ ಮೇಲೆ ಹಿಡಿತ ಇರದ ಕಾರಣ ಅವರಿಂದ ಘಟನೆಗಳು ಘಟಿಸುತ್ತವೆ. ಒಂದು ಸಾಮಾನ್ಯ ಉದಾಹರಣೆಯಾಗಿ ನಮ್ಮ ಪುರಾಣಗಳ ಕತೆಗಳನ್ನ ನಾವು ನೋಡ ಬಹುದು. ದುರ್ಯೋಧನ ತನ್ನ
ಅಹಂಕಾರ, ಅಽಕಾರದ ಆಸೆ, ಮತ್ಸರಕ್ಕೆ ಬಿದ್ದು ಅಪರಾಧ ಗಳನ್ನ ಮಾಡುತ್ತಾನೆ. ಶಿಶುಪಾಲನ ಅಪರಾಧ, ರಾವಣನ ಅಪರಾಧ. ಅಂದರೆ ಈ ರಾಕ್ಷಸೀಯ ಗುಣ, ತಮೋ ಗುಣ ಅಂದರೆ ಯಾರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೋ ಅವರು ತನ್ನನ್ನ ತಾನು ಪ್ರಕಟ ಪಡಿಸಿಕೊಳ್ಳಲು, ತಾನು ಒಂದಷ್ಟು ಮುಖ್ಯ ಭೂಮಿಕೆಗೆ ಬರಲೇ ಬೇಕು ಎಂಬ ಹಪಹಪಿಕೆ ಅಪರಾಧ ಮಾಡಿಸುತ್ತದೆ.

ಈ ಅಪರಾಧದಲ್ಲಿ ಹೆಣ್ಣು ಗಂಡು ಎನ್ನುವ ಬೇಧವಿಲ್ಲ. ಅಪರಾಧ ಲೋಕದಲ್ಲಿ ಎಲ್ಲರೂ ಒಂದೆ. ಒಂದು ಹೆಣ್ಣು ಮಗಳು, ವಿದ್ಯಾವಂತೆ. ಆದರೆ ಆಕೆ ಮಾಡುವ ಕೆಲಸ ಜನ ರಿಂದ ಹಣ ಪಡೆದು, ನಿಮಗೆ ಉದ್ಯೋಗ ಕೊಡಿಸುತ್ತೇನೆ, ನಿಮ್ಮ ಮಕ್ಕಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಸೀಟ್ ಕೊಡಿಸುತ್ತೇನೆ ಎಂದು ಮೋಸದ ವ್ಯವಹಾರ. ಒಂದು ವೇಳೆ ಈ ಹಣ ಕೊಡುವಂತ ವ್ಯಕ್ತಿಗಳು ತಮಗೆ ಕೆಲಸ ಸಿಗದೆ ಇದ್ದಾಗ ಮರಳಿ ಹಣವನ್ನೇನಾದರೂ ಕೇಳಿದರೆ ಬೆದರಿಸು ವುದು. ಇಲ್ಲಿ ಪ್ರತಿ ಜೀವಿಯೂ ತಾನು ಬದುಕ ಬೇಕು ಎನ್ನುವ ಕಾರಣಕ್ಕೆ ಪ್ರತಿದಿನ ಹೋರಾಟ ಮಾಡುತ್ತಲೆ ಇರುತ್ತಾನೆ ಈ ಹೋರಾಟದ ಸಮಯ ನಡೆಯುವ ಸಂಘರ್ಷ, ಮನೋಕ್ಲೇಶ, ಆರ್ಥಿಕ, ಸಾಮಾಜಿಕ ಕಾರಣ ಅಪರಾಧಗಳ ಉಗಮವಾಗುತ್ತದೆ. ಅತಿ ಯಾದ ಮಾದಕ ಪದಾರ್ಥದಗಳ
ಸೇವನೆ, ಉದ್ವೇಗ ಹಿಡಿತ ವಿಲ್ಲದ ಕೋಪ, ಇವೆಲ್ಲವೂ ಕೂಡ ಅಪರಾಧಗಳಿಗೆ ದಾರಿ.

ಮನುಷ್ಯನಿಗೆ ಎಲ್ಲವೂ ತಕ್ಷಣ ಕೈಗೆಟುಕಬೇಕು. ನಮ್ಮ ವಿಚಾರ ಶ್ರೀಮಂತವಾಗಿಲ್ಲವಾದರೂ ಬದುಕು ಮಾತ್ರ ಶ್ರೀಮಂತಿಕೆಯದಾಗಿರ ಬೇಕು. ಒಬ್ಬ ಇದ್ದಾನೆ ಅವನಿಗೆ ಸದಾ ಹೊಸ ಹೊಸ ಹೆಂಗಸರ ಖಯಾಲಿ. ಸ್ವಲ್ಪ ಹಣವಂತ ಚೆಂದದ ಹೆಂಗಸರನ್ನ ಮಾತಿಗೆ ಎಳೆದು ತನ್ನ ಹೆಂಡತಿಗೆ ಪರಿಚಯಸು ವುದು. ಆಕೆ ಅತಿ ಆಪ್ತಳಾಗಿ ಬಟ್ಟೆ ಬದಲಿಸುವಾಗಲೂ ಜೊತೆಗೆ ಸಾಗುವಷ್ಟು ಸಲುಗೆಯ ಹೊಂದಿ ಪಾಪದ ಹೆಣ್ಣು ಮಕ್ಕಳ ಬೆತ್ತಲೆ ಫೋಟೋಗಳನ್ನ ಅವರಿಗೆ ಅರಿವಿಲ್ಲದೇ ತೆಗೆದು ಬ್ಲ್ಯಾಕ್ ಮೇಲ್ ಮಾಡುವ ಖದೀಮರು. ಇಂತಹವರು ನಮ್ಮ ನಡುವೆ ಸದ್ದಿಲ್ಲದೇ ನುಸುಳಿ ಬಿಡುತ್ತಾರೆ. ಈ ನುಸುಳುವಿಕೆಯ ಅರಿವಾಗುವಷ್ಟರಲ್ಲಿ ಸಮಯ ಮಿಂಚಿ ಹೋಗಿರುತ್ತದೆ. ಆದರೆ ಇಂತಹವರ ಕುರಿತು ಯಾವ ಕಾನೂನು ಏನೂ ಮಾಡಲಾರದು. ಯಾಕೆಂದರೆ ಅವರ ಜೊತೆ ಒಂದಷ್ಟು ಸ್ವಾರ್ಥ ಲಾಲಸೆಯ ಅಧಿಕಾರಿಗಳು, ಮಾಧ್ಯಮದವರು, ರಾಜಕೀಯ ಮುತ್ಸದ್ದಿಗಳು ಕೂಡ ಪಾಲುದಾದರು.

ಹಾಗೆಯೆ ಎಲ್ಲಿ ಅಶಿಕ್ಷಿತರ, ಬಡವರ ಸಂಖ್ಯೆ ಇರುತ್ತದೋ ಅಲ್ಲಿಯೂ ಅಪರಾಧ ಹೆಚ್ಚು. ಅದಕ್ಕಾಗಿಯೆ ಸ್ಲಂಗಳಲ್ಲಿ ಕಳ್ಳರು, ಖದೀಮರು, ಕೊಲೆಗಡುಕರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಸ್ಲಂ ಎಂದರೆ ಸಣ್ಣದಾದ ಭೂಗತ ಲೋಕ ಎನ್ನುವ ಭಯ ಕೂಡ ಜನಸಾಮಾನ್ಯರಲ್ಲಿ ಇದೆ. ಎಲ್ಲಿ ಸಂಸ್ಕಾರದ ಕೊರತೆ ಇರುತ್ತದೋ ಅಲ್ಲಿ ಮನುಷ್ಯ ಹಾದಿತಪ್ಪುತ್ತಾನೆ. ಎಲ್ಲಿ ಅತಿ ಶೋಕಿ ಮತ್ತು ವ್ಯಸನಕ್ಕೆ ದಾಸನಾಗಿರುತ್ತಾನೋ ಅಲ್ಲಿ ತನ್ನ ದುಶ್ಚಟಕ್ಕಾಗಿ, ಶೋಕಿಗಾಗಿ ಮತ್ತೊಬ್ಬರನ್ನ ದೋಚುವ ಹಂತಕ್ಕೆ ಇಳಿಯುತ್ತಾನೆ. ಸುಭಾಷ್ ಚಂದ್ರ ಬೋಸ್ ಅವರು ಒಂದು ಮಾತನ್ನ ಹೇಳುತ್ತಾರೆ. ಅನ್ಯಾಯ ಮತ್ತು ತಪ್ಪುಗಳೊಂದಿಗೆ ರಾಜಿಯನ್ನ ಮಾಡಿಕೊಳ್ಳುವುದೇ ಅತ್ಯಂತ ದೊಡ್ಡ ಅಪರಾಧ ಎಂದು.

ಯಾಕೆಂದರೆ ಅನ್ಯಾಯ ನಡೆಯುತ್ತಿದೆ ಎಂದಾಗ ನೋಡಿಕೊಂಡು ಸುಮ್ಮನಿದ್ದರೆ ಆ ಅನ್ಯಾಯಗಳಿಗೆ ಮುಕ್ತಿ ಸಿಗುವುದಿಲ್ಲ. ಇದನ್ನ ಶ್ರೀ ಕೃಷ್ಣ ಕೂಡ ಹೇಳುತ್ತಾನೆ. ಕೌರವನ ಸಭೆಯಲ್ಲಿ ದ್ರೌಪದಿಯ ವಸವನ್ನ ಸೆಳೆಯುವಾಗ ಮೌನವಾಗಿದ್ದ ಎಲ್ಲರೂ ಅಪರಾಧಿಗಳೆ ಹಾಗಾಗಿ ಅಪರಾಧ ಮಾಡುವವನಿ ಗಿಂತ ಆ ಅಪರಾಧವನ್ನ ನೋಡಿ ಸುಮ್ಮನಿರುವುದು ಮಹಾ ಅಪರಾಧ ಎಂದು. ಆದರೆ ಎಲ್ಲರೂ ನಮ್ಮ ನಮ್ಮ ನೆಮ್ಮದಿ, ನಮ್ಮ ಬದುಕು, ನಮ್ಮ ಕುಟುಂಬದ ಸುರಕ್ಷತೆ ಎಂದು ಯೋಚೀಸುವುದು ಸಹಜ. ಹೀಗೆ ಯೋಚಿಸುವುದು ಅಪರಾಧಿಗಳಿಗೆ ಜನರ ದೌರ್ಬಲ್ಯವನ್ನ ತೋರಿಸಿದಂತೆ ಮತ್ತು
ಆ ದೌರ್ಬಲ್ಯ ಅವರಿಗೆ ಏಣಿ ಆದಂತೆ. ಹಗಲಿನಲ್ಲಿ ಕೊಲೆ ಗಳನ್ನ ಮಾಡುತ್ತಾರೆ, ಬ್ಲಾಕ್ ಮೇಲ್ ಮಾಡಿ ಹಣವನ್ನ ದೋಚುತ್ತಾರೆ ಹೀಗೆ ನಾನಾಕಾರದಿಂದ.

ಹೆಣ್ಣು ಎಂದಾದರೆ ಮೊದಲು ಮಾನಸಿಕವಾಗಿ ಆಕೆಯನ್ನ ಕುಗ್ಗಿಸಲು ಆಕೆಯ ಚಾರಿತ್ರ್ಯವನ್ನೇ ಮಾತನಾಡಿ ಒಂದಷ್ಟು ವಿಕೃತ ತೃಪ್ತಿಯನ್ನ ಪಡೆಯು ತ್ತಾರೆ. ಅಂಗೈನಲ್ಲಿ ಇರುವ ಮೊಬೈಲಿಂದ ಸುಲಭ ವಾಗಿ ಜನ ಸಂಪರ್ಕ ಮಾಡುತ್ತಾ ಮಾಡುತ್ತಾ ಸೈಬರ್ ಕ್ರೈಂ ಎಸಗುವವರು ಎಷ್ಟೋ ಲೆಕ್ಕವಿಲ್ಲ. ಇಂತಹ ಅಪರಾಧಗಳು ನಮ್ಮ ನಡುವೆ ಪ್ರತಿದಿನ ನಡೆ ಯುತ್ತಲೇ ಇದೆ. ಆದರೆ ತಡೆಯುವ ಕ್ರಮ ಯಾರಿಗೂ ಅರಿ ವಾಗುತ್ತಿಲ್ಲವೋ ಅಥವಾ ಪರಿವಾರದ ಸುರಕ್ಷತೆಯ ಭಯವೋ ಒಟ್ಟಿನಲ್ಲಿ ಸಮುದಾಯಗಳ ಸಮಾಜದಲ್ಲಿ ವಿಕೃತಗಳಿಗೆ ಹೆಚ್ಚು ಬೆಲೆ.

ಜನರಲ್ಲಿ ಭಯ ಹುಟ್ಟಿಸುತ್ತಾ ಮೆರೆಯುವ ವಿಕಾರ ಮನುಷ್ಯರ ಗುಂಪುಗಳು ಹೆಚ್ಚುತ್ತಿವೆ. ಡಾರ್ವಿನ್ನನ ಒಂದು ಸಿದ್ಧಾಂತದ ಹೇಳುವಂತೆ ಬಲವಿರುವ ವರು ಹೋರಾಡಿ ಬದುಕುತ್ತಾರೆ ಎಂಬುದಷ್ಟೆ ಆಗಿದೆ. ಹಾಗಾಗಿ ಕರ್ತಾ ಕಾರಯಿತಾ ಚೈವ | ಪ್ರೆರಕಶ್ಚಾನುಮೋಕಃ ಸುಕೃತೆ ದುಷ್ಕೃತೆ ಚೈವ ಚತ್ವಾರ ಸಮಭಾಗಿನಃ ಅಂದರೆ ಯಾವುದೇ ಕೇಲಸವಿರಲಿ ಅದನ್ನ ಮಾಡಿದವನು, ಮಾಡಿಸಿದವನು, ಪ್ರೇರೇಪಿಸಿದವನು, ಅನುಮೋದಿಸಿ ದವನು, ನೋಡಿ ಸರಿ
ತಪ್ಪುಗಳ ಹೇಳದೆ ಮೌನವಾಗಿದ್ದವನು ಇವರು ಕರ್ಮದಲ್ಲಿ ಸಮ ಭಾಗಿಗಳಾಗಿ ಫಲವನ್ನ ಪಡೆಯುತ್ತಾರೆ.

(ಲೇಖಕರು: ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *