Thursday, 12th December 2024

ಮೊಸಳೆಗೂ ಲೆಕಾಸ್ಟ್ ಗೂ ಇರುವ ಸಂಬಂಧ

ಟೆನ್ನಿಸ್ ಆಟದ ತರಬೇತಿಗೆ ಅನುಕೂಲವಾಗಲು ಚೆಂಡು ಎಸೆಯುವ ಯಂತ್ರವನ್ನು ರೆನೆ ಕಂಡುಹಿಡಿದ. ಆ ಕಾಲದಲ್ಲಿ ಅದೊಂದು ಅದ್ಭುತವೇ ಆಗಿತ್ತು. ಒಂದು ಲೆಕ್ಕದಲ್ಲಿ ನೋಡಿದರೆ ರೆನೆ ಈ ಅನ್ವೇಷಣೆಗೆ ಹೆಸರಾಗಬೇಕಿತ್ತು. ಆದರೆ ಆತ ಹೆಸರು ಮಾಡಿದ್ದು ಬೇರೆಯದೇ ಕ್ಷೇತ್ರದಲ್ಲಿ. ಅವನು ಕಟ್ಟಿದ ಸಂಸ್ಥೆಯೂ ಅತೀವ ಜನಪ್ರಿಯತೆ ಪಡೆಯಿತು.

‘ಯುರೋಪ್ ಖಂಡದ ಮಧ್ಯದೊಳಗೆ, ಮೆರೆಯುತಿಹ -ನ್ಸ್ ದೇಶ ದೊಳು ಇರುವ ಪ್ಯಾರಿಸ್‌ನಲ್ಲಿ ಹುಟ್ಟಿದ ರಿನೆಯ ಕತೆ ಯನು ಪೇಳ್ವೆನು. ಸಿರಿತನದ ಮನೆಯಲ್ಲಿ ಜನಿಸಿ, ವ್ಯಾಪಾರ ಬಿಟ್ಟು ರ‍್ಯಾಕೆಟ್ ಹಿಡಿದು, ಆಟ ಆಡಿ ಹೊಸ ಅಂಗಿ ಕೊಟ್ಟ ರೆನೆ ಲೆಕಾಸ್ಟ್ ಕತೆಯಿದು’.

ಎದೆಯ ಮೇಲೆ ಮೊಸಳೆ ಹೊತ್ತು ಓಡಾಡುವವರೆಲ್ಲ ಕೈ ಎತ್ತಿ. ಜೀವಂತ ಮೊಸಳೆಯನ್ನು ಯಾರೂ ಹೊತ್ತುಕೊಂಡು ಓಡಾಡುವುದಿಲ್ಲ ಎನ್ನುವುದು
ಗೊತ್ತು. ತೊಡುವ ಅಂಗಿಯ ಮೇಲೆ ಮೊಸಳೆಯ ಚಿತ್ರವನ್ನು ಹೊತ್ತು ಓಡಾಡುವರಂತೂ ಇದ್ದಾರಲ್ಲ! ಅದೇ… ಅಂಗಿಯ ಎಡಗಡೆ ಎದೆಯ ಭಾಗದಲ್ಲಿ ಮೊಸಳೆಯ ಚಿತ್ರ ಇರುತ್ತದಲ್ಲ, ಅದರ ವಿಷಯ ಹೇಳುತ್ತಿರುವುದು.

ಸುಮಾರು ಮೂವತ್ತು ವರ್ಷಗಳ ಹಿಂದೆ ಮೊದಲ ಬಾರಿ ಸೌದಿ ಅರೇಬಿಯಾಕ್ಕೆ ಕೆಲಸಕ್ಕೆಂದು ಬಂದಾಗ, ಬಟ್ಟೆ ಖರೀದಿಸಲು ಹೋಗಿದ್ದೆ. ಆಗಷ್ಟೇ ಮೊದಲ
ಬಾರಿ ಗರಿಗರಿಯಾದ ಸೌದಿ ರಿಯಾಲು ಸಂಬಳದ ರೂಪದಲ್ಲಿ ದೊರಕಿತ್ತು. ‘ಒಂದು ರಿಯಾಲ್ ಎಂದರೆ ಭಾರತದ ಎಷ್ಟು ರುಪಾಯಿ? ಇದೇ ವಸ್ತು
ಭಾರತದಲ್ಲಿ ಇನ್ನೂ ಕಮ್ಮಿ ಬೆಲೆಗೆ ದೊರಕುತ್ತದೆ’ ಎಂಬ ಲೆಕ್ಕಾಚಾರ ನನ್ನಲ್ಲಿ ಮೊದಲಿನಿಂದಲೂ ಇರಲಿಲ್ಲ. ಅಂಥವ ಒಂದು ಒಳ್ಳೆಯ ಅಂಗಡಿಗೆ ಹೋದರೆ ಏನಾದೀತು? ಅವತ್ತೂ ಆದದ್ದು ಅದೇ. ಒಂದು ಅಂಗಿ ಕೊಂಡುಕೊಳ್ಳಲು ಹೋದವ ಆರು ಅಂಗಿ ಕೊಂಡುಕೊಂಡು ಬಂದಿದ್ದೆ.

‘ಇದು ಯಾವ ಬ್ರ್ಯಾಂಡ್?’ ಎಂಬ ನನ್ನ ಪ್ರಶ್ನೆಗೆ ಅಂಗಡಿಯವ ‘ಲೆಕಾಸ್ಟ್ ಗೊತ್ತಿಲ್ಲವೆ? ಮೊದಲು ಕ್ರೊಕೊಡೈಲ್ ಎಂಬ ಹೆಸರಿತ್ತಲ್ಲ?’ ಎಂದು ಮರುಪ್ರಶ್ನೆ ಹಾಕಿದ. ‘ಎರಡೂ ಗೊತ್ತಿಲ್ಲ’ ಎಂದೆ. ಆಗ ನನಗೆ ಎರಡೂ ಹೆಸರು ಅಜ್ಞಾತವೇ ಆಗಿತ್ತು. ಅದುವರೆಗೆ ಆ ಹೆಸರನ್ನು ನಾನು ಕೇಳಿರಲಿಲ್ಲ. ಆದರೆ ಆ ಅಂಗಿಯ ಬಣ್ಣ ನನ್ನನ್ನು ಆಕರ್ಷಿಸಿತ್ತು. ಆ ಬಗೆಯ ಬಣ್ಣದ ಅಂಗಿಯನ್ನು (ಟಿ-ಶರ್ಟ್) ನಾನು ನೋಡಿದ್ದು ಅದೇ ಮೊದಲ ಸಲವಾಗಿತ್ತು. ಆರು ಅಂಗಿ ಒಟ್ಟಿಗೆ ತೆಗೆದುಕೊಂಡರೆ ‘ಡಿಸ್ಕೌಂಟ್’ ಬೇರೆ ಇದ್ದುದರಿಂದ, ಅರ್ಧ ಡಜನ್ ಟಿ-ಶರ್ಟ್ ಖರೀ ದಿಸಿ ತಂದಿದ್ದೆ.

ಅಂಗಿಯೂ ಚೆನ್ನಾಗಿದ್ದುದರಿಂದ, ಅಂದಿನಿಂದಲೇ ನನ್ನ ಮೆಚ್ಚಿನ ‘ಬ್ರ್ಯಾಂಡ್’ ಕೂಡ ಆಯಿತು. ಅಂಗಿ ಖರೀದಿಸುತ್ತಿದ್ದೆ, ತೊಡುತ್ತಿದ್ದೆ. ಇತ್ತೀಚೆಗಷ್ಟೇ ಅದರ ಹಿಂದಿನ ಕತೆ ಗೊತ್ತಾದದ್ದು. ರೆನೆ ಲೆಕಾಸ್ಟ್ ಹೆಸರಿನ ಈ ವ್ಯಕ್ತಿ ಹುಟ್ಟಿದ್ದು -ನ್ಸ್‌ನ ಪ್ಯಾರಿಸ್‌ನಲ್ಲಿ, ೧೯೦೪ರ ಜುಲೈನಲ್ಲಿ. ತಂದೆ-ತಾಯಿ ಇಬ್ಬರೂ ಶ್ರೀಮಂತ ಮನೆತನದಿಂದ
ಬಂದವರು. ರೆನೆ ಮನಸ್ಸು ಮಾಡಿದ್ದರೆ ತಂದೆಯ ಜತೆಗೇ ಕೆಲಸ ಮಾಡಬಹುದಾಗಿತ್ತು ಅಥವಾ ತನ್ನದೇ ಆದ ಸ್ವಂತ ಉದ್ದಿಮೆಯನ್ನೂ ಆರಂಭಿಸಬಹುದಾ
ಗಿತ್ತು. ತಂದೆ ಜೀನ್ ಜು ಲೆಕಾಸ್ಟ್‌ಗೂ ಅದೇ ಮನಸ್ಸಿತ್ತು. ಆದರೆ ರೆನೆಗೆ ಟೆನ್ನಿಸ್ ಆಟದಲ್ಲಿ ಆಸಕ್ತಿ ಹುಟ್ಟಿಕೊಂಡಿತು. ಹಾಗಂತ ಆ ಆಸಕ್ತಿ ಅವನಿಗೆ ಬಾಲ್ಯದಿಂದಲೂ ಇದ್ದದ್ದಲ್ಲ. ಅವನಿಗೆ ಟೆನ್ನಿಸ್ ಆಟದಲ್ಲಿ ಆಸಕ್ತಿ ಹುಟ್ಟಿಕೊಳ್ಳುವಾಗ ಆತ ಹದಿನೈದು ವರ್ಷದ ಯುವಕನಾಗಿದ್ದ.

ದಿನದಿಂದ ದಿನಕ್ಕೆ ಆಸಕ್ತಿ ಹೆಚ್ಚಿ, ಟೆನ್ನಿಸ್ ಆಟವನ್ನೇ ವೃತ್ತಿಯಾಗಿ ಆಯ್ದು ಕೊಳ್ಳಲು ರೆನೆ ನಿರ್ಧರಿಸಿದ್ದ. ರೆನೆಯ ಈ ನಿರ್ಧಾರ ತಂದೆಗೆ ಅಪ್ಪೂಟು ಮನಸ್ಸಿರಲಿಲ್ಲ. ತಂದೆಯ ಪ್ರಕಾರ, ರೆನೆಯಲ್ಲಿ ಇತರ ಟೆನ್ನಿಸ್ ಆಟಗಾರರಲ್ಲಿ ಇರುವಷ್ಟು ಕುಶಲತೆಯಾಗಲಿ ನೈಪುಣ್ಯವಾಗಲಿ ಇರಲಿಲ್ಲ. ಅಷ್ಟೇ ಅಲ್ಲ, ಉಳಿದ ಆಟಗಾರರು ತನ್ನ ಮಗನಿಗಿಂತ ಹತ್ತು ಪಟ್ಟು ಹೆಚ್ಚು ಚೆನ್ನಾಗಿ ಆಡುತ್ತಿದ್ದಾರೆ, ಅವರ ಜತೆ ತನ್ನ ಮಗ ಸೆಣಸಿ ಗೆಲ್ಲಲು ಸಾಧ್ಯವಿಲ್ಲದ ಮಾತು ಎಂದು ಆತ ಭಾವಿಸಿದ್ದ. ಆದರೂ ಮಗನಲ್ಲಿ ಇರುವ ಆಸಕ್ತಿ ನೋಡಿ, ಅವನನ್ನು ನಿರುತ್ಸಾಹಗೊಳಿಸಬಾರದು ಎಂಬ ಒಂದೇ ಉದ್ದೇಶಕ್ಕೆ ಒಪ್ಪಿಗೆ ನೀಡಿದ. ಆದರೆ ಜೇನ್ ಲೆಕಾಸ್ಟ್ ರೆನೆಗೆ ಒಂದು ಷರತ್ತನ್ನು ಒಡ್ಡಿದ್ದ. ಐದು ವರ್ಷಗಳ ಅವಽಯಲ್ಲಿ ಟೆನ್ನಿಸ್ ಲೋಕದ ಘಟಾನುಘಟಿ ಗಳನ್ನೆಲ್ಲ ಮಣಿಸಿ ವಿಶ್ವವಿಜೇತನಾಗಬೇಕು, ಸಾಧ್ಯ ವಾಗದಿದ್ದಲ್ಲಿ ಮತ್ತೆ ಟೆನ್ನಿಸ್ ಆಟದ ಬಗ್ಗೆ ಯೋಚಿಸ ಬಾರದು ಎಂಬ ಷರತ್ತಿನೊಂದಿಗೆ ಅನುಮತಿ ನೀಡಿದ್ದ. ರೆನೆ ಏನೂ ಕಮ್ಮಿ ಆಸಾಮಿಯಾಗಿರಲಿಲ್ಲ.

ತಂದೆಯ ಷರತ್ತನ್ನು ಸ್ವೀಕರಿಸಿ, ಅಂದಿನಿಂದಲೇ ಕಠಿಣ ತರಬೇತಿಗೆ ತನ್ನನ್ನು ತೊಡಗಿಸಿಕೊಂಡ. ಮೂರು ವರ್ಷ ಮುಗಿಯುತ್ತ ಬಂದಿತ್ತು. ೧೯೨೨ ರಲ್ಲಿ,
ಅಂದರೆ ರೆನೆಗೆ ಹದಿನೆಂಟು ವರ್ಷವಾದಾಗ ಮೊದಲ ಬಾರಿ ವಿಂಬಲ್ಡನ್ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಆಡುವ ಅವಕಾಶ ಒದಗಿಬಂದಿತ್ತು. ಆದರೆ ಅದೃಷ್ಟ
ಚೆನ್ನಾಗಿರಲಿಲ್ಲ, ಮೊದಲ ಸುತ್ತಿನಲ್ಲಿಯೇ ಸೋತು ಹೋದ. ಆ ಕ್ಷಣದಲ್ಲಿ ಆತ ಆಟದಲ್ಲಿ ಮಾತ್ರವಲ್ಲ, ಮಾನಸಿಕವಾಗಿಯೂ ಸೋತಿದ್ದ. ಆದರೆ ರೆನೆಗೆ ಅದರ
ಮುಂದಿನ ವರ್ಷ ಅಮೆರಿಕದಲ್ಲಿ ನಡೆದ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿತ್ತು. ಆ ಪಂದ್ಯಾಟದಲ್ಲಿ ಆತ ನಾಲ್ಕನೆಯ ಸುತ್ತಿನವರೆಗೆ ಹೋಗಿ ಅಲ್ಪ ಅಂತರದಲ್ಲಿ ಸೋತ. ಈ ಬಾರಿ ಸೋತರೂ ಆತ ಶ್ರದ್ಧೆ ಬಿಡಲಿಲ್ಲ.

ಇನ್ನಷ್ಟು ಕಠಿಣ ಅಭ್ಯಾಸ, ತರಬೇತಿ ಮುಂದುವರಿಸಿದ. ಅದೇ ವರ್ಷ -ನ್ಸ್ ಡೇವಿಸ್ ಕಪ್ ಆಡುವ ತಂಡದಲ್ಲಿ ರೆನೆ ಸ್ಥಾನ ಪಡೆದ. ರೆನೆ ಹಾಗೂ ಅವನ
ತಂಡದಲ್ಲಿದ್ದ ಜಾನ್ ಬರೋಟ್ರ, ಜತೆಗಿದ್ದ ಇಬ್ಬರು, ಎಲ್ಲರೂ ಆ ವರ್ಷ ಎಷ್ಟು ಚೆನ್ನಾಗಿ ಆಡಿದರೆಂದರೆ, ಜನ ಅವರನ್ನು ‘ಊಟ್ಠ್ಟ IZohಛಿಠಿಛಿಛ್ಟಿo’ಎಂದು
ಕರೆದರು. ೧೯೨೫ರಲ್ಲಿ ರೆನೆ ವಿಂಬಲ್ಡನ್ ಪಂದ್ಯಾಟ ದಲ್ಲಿ ಅಂತಿಮ ಹಂತಕ್ಕೆ ತಲುಪಿದ. ಡೇವಿಸ್ ಕಪ್‌ಗೆ ತನ್ನದೇ -ನ್ಸ್ ತಂಡದಲ್ಲಿ ಆಡುವ ಜಾನ್
ಬರೋಟ್ರ ಎದುರಿನಲ್ಲಿ ಸೋತ. ಆದರೆ, ಅದೇ ವರ್ಷದ ಕೊನೆಯಲ್ಲಿ -ನ್ಸ್ ಚಾಂಪಿಯನ್‌ಶಿಪ್ ಗೆದ್ದು, ತಂದೆಗೆ ಕೊಟ್ಟ ಭರವಸೆಯ ಮಾತನ್ನು
ಉಳಿಸಿಕೊಂಡ.

ನಂತರ ನಡೆದ ವಿಂಬಲ್ಡನ್ ಪಂದ್ಯಾಟದಲ್ಲಿ ಹಿಂದಿನ ಬಾರಿ ಗೆದ್ದಿದ್ದ ಜಾನ್ ಬರೋಟ್ರನನ್ನು ಸೋಲಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ. ರೆನೆ ತನ್ನ ಟೆನ್ನಿಸ್ ವೃತ್ತಿಜೀವನದಲ್ಲಿ ಒಟ್ಟು ಏಳು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಪಡೆದ. ೧೯೨೬ ಮತ್ತು ೧೯೨೭ರಲ್ಲಿ ವಿಶ್ವದ ಅಗ್ರಶ್ರೇಯಾಂಕಿತ ಟೆನ್ನಿಸ್ ಆಟಗಾರ ಎಂಬ ಕೀರ್ತಿಗೂ ಪಾತ್ರನಾದ. ಈ ಮಧ್ಯೆ -ನ್ಸ್ ಮತ್ತು ಅಮೆರಿಕದ ನಡುವೆ ಡೇವಿಸ್ ಕಪ್ ಪಂದ್ಯಾಟ ನಡೆಯುತ್ತಲೇ ಇತ್ತು. ಪ್ರತಿ ಬಾರಿಯೂ -ನ್ಸ್ ತಂಡ ಅಮೆರಿಕದ ವಿರುದ್ಧ
ಸೋಲುತ್ತಿತ್ತಾದರೂ ಬಹಳ ಸಲ ಆತ ತನ್ನ ಆಟದಲ್ಲಿ ಗೆಲ್ಲುತ್ತಿದ್ದ. ಅಲ್ಲದೆ ತನ್ನ ಆಟದ ಶೈಲಿ, ಚಲನವಲನದಿಂದ ರೆನೆ ಅಮೆರಿಕದ ಮಾಧ್ಯಮದವರ ಗಮನ
ಸೆಳೆದಿದ್ದ. ಆಟದ ಅಂಗಳದಲ್ಲಿ ರೆನೆ ಮೊಸಳೆಯಂತೆ ಚಲಿಸುತ್ತಾನೆ ಎಂದು ಬರೆದ ಅವರು ರೆನೆಯನ್ನು ‘ಇಟ್ಚಟbಜ್ಝಿಛಿ’ ಎಂದು ಕರೆದರು.

ಆ ಹೆಸರು ರೆನೆಗೂ ಇಷ್ಟವಾಯಿತು, ಮುಂದೆ ರೆನೆಗೆ ಅದೇ ಹೆಸರೇ ಕಾಯಂ ಆಯಿತು. ರೆನೆ ತನ್ನ ಕೋಟ್‌ನ ಮೇಲೆ, ಅಂಗಿಯ ಮೇಲೆ ಮೊಸಳೆಯ ಚಿತ್ರವನ್ನು
ಕಸೂತಿ ಮಾಡಿಸಿಕೊಳ್ಳುತ್ತಿದ್ದ. ಮುಂದೆ ಅದೇ ಅವನ ಬ್ರ್ಯಾಂಡ್ ಆಯಿತು. ಒಂದು ವರ್ಷ -ನ್ಸ್‌ನ ಡೇವಿಸ್ ಕಪ್ ತಂಡದ ನಾಯಕ ರೆನೆಯ ಬಳಿ ಬಂದು, ‘ಈ ಸಲ ನಾವು ಕಪ್ ಗೆದ್ದರೆ ನಿನಗೆ ಮೊಸಳೆ ಚರ್ಮದ ಬ್ಯಾಗ್ ಉಡುಗೊರೆಯಾಗಿ ಕೊಡುತ್ತೇನೆ’ ಎಂದ. ಆ ವರ್ಷ ರೆನೆಯ ಜತೆ ಉಳಿದವರೂ ಚೆನ್ನಾಗಿ ಆಡಿದರು.
ಅಮೆರಿಕದ ವಿರುದ್ಧ -ನ್ಸ್ ಜಯ ಸಾಽಸಿ, ಕಪ್ ಗೆದ್ದಿತು. ತಂಡದ ನಾಯಕ ಮಾತು ಕೊಟ್ಟಂತೆ ಬ್ಯಾಗ್ ಕೊಡದಿದ್ದಾಗ, ಹಠ ಹಿಡಿದು ಅವನಿಂದ ಮೊಸಳೆಯ
ಚರ್ಮದ ಬ್ಯಾಗ್ ಪಡೆದಿದ್ದ ರೆನೆ.

ಈ ನಡುವೆ ರೆನೆ ಇನ್ನೊಂದು ಕೆಲಸ ಮಾಡಿದ್ದ. ಟೆನ್ನಿಸ್ ಆಟದ ತರಬೇತಿಗೆ ಅನುಕೂಲವಾಗಲು ಚೆಂಡು ಎಸೆಯುವ ಯಂತ್ರವನ್ನು ಕಂಡುಹಿಡಿದ. ಆ ಕಾಲ ದಲ್ಲಿ ಅದೊಂದು ಅದ್ಭುತವೇ ಆಗಿತ್ತು. ಒಂದು ಲೆಕ್ಕದಲ್ಲಿ ನೋಡಿದರೆ ರೆನೆ ಈ ಅನ್ವೇಷಣೆಗೆ ಹೆಸರಾಗಬೇಕಿತ್ತು. ಆದರೆ ಆತ ಹೆಸರು ಮಾಡಿದ್ದು ಬೇರೆಯದೇ ಕ್ಷೇತ್ರದಲ್ಲಿ. ೧೯೩೩ರಲ್ಲಿ ನಿವೃತ್ತಿ ಪಡೆದ ನಂತರ ರೆನೆ ಟೆನ್ನಿಸ್ ಆಟಕ್ಕೆ ಬೇಕಾಗುವ ಉಡುಪು ತಯಾರಿಸಲು ನಿರ್ಧರಿಸಿದ್ದ. ಅಲ್ಲಿಯವರೆಗೂ ಆಟಗಾರರು ಟೆನ್ನಿಸ್ ಆಡುವಾಗ ಪ್ಯಾಂಟ್ ಮತ್ತು ಉದ್ದ ತೋಳಿನ ಗುಂಡಿ ಇರುವ ಅಂಗಿ ತೊಡುತ್ತಿದ್ದರು (ಕೆಲವರಂತೂ ಟೈ ತೊಟ್ಟು ಟೆನ್ನಿಸ್ ಆಡಿದ್ದೂ ಇದೆ). ಇದು ಆಟಗಾರ ರಿಗೆ ಕಿರಿಕಿರಿ ಯಾಗುತ್ತಿತ್ತು. ಇದರಲ್ಲಿ ಬದಲಾವಣೆ ತರಲು ನಿರ್ಧರಿಸಿದ ರೆನೆ ಅರ್ಧ ತೋಳಿನ ಟಿ-ಶರ್ಟ್ ತೊಟ್ಟು ಆಡುವಂತೆ ಪ್ರೇರೇಪಿಸಿದ.

೧೮ನೇ ಶತಮಾನದಲ್ಲಿ ಪೋಲೋ ಆಡಲು ಬಳಸು ತ್ತಿದ್ದ ಟಿ-ಶರ್ಟನ್ನು ಮಾದರಿಯಾಗಿ ಇಟ್ಟುಕೊಂಡ. ಅರ್ಧ ತೋಳು, ಮೆತ್ತನೆಯ ಕಾಲರ್, ಗುಂಡಿ
ಇಲ್ಲದ ಅಂಗಿ ತಯಾರಿಸಲು ನಿರ್ಧರಿಸಿದ. ಆ ಕಾಲದಲ್ಲಿ ರೆನೆಯ ಸ್ನೇಹಿತ ಆಂಡ್ರೆ ಗಿಲ್ಲಿಯರ್ -ನ್ಸ್‌ನ ದೊಡ್ಡ ನಿಟ್‌ವೇರ್ ಕಂಪನಿಯ ಅಧ್ಯಕ್ಷನಾಗಿದ್ದ. ರೆನೆ ಅವನೊಂದಿಗೆ ಸೇರಿ ‘ಲಾ ಸೊಸೈಟಿ ಕೆಮಿಸ್ ಲಾಕೋಸ್ಟ್’ ಹೆಸರಿನಲ್ಲಿ ಕಂಪನಿ ಆರಂಭಿಸಿದ. ಎದೆಯ ಭಾಗದಲ್ಲಿ ಮೊಸಳೆಯ ಲೋಗೋ ಕಸೂತಿ ಮಾಡಿದ ಅಂಗಿಗಳು ಮಾರು ಕಟ್ಟೆಗೆಬಂದವು. ಸ್ವತಃ ರೆನೆಯೇ ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆದ.

-ನ್ಸ್ ಮತ್ತು ಯುರೋಪ್ ದೇಶಗಳಲ್ಲಿ ರೆನೆಯ ಉಡುಪು ಜನಪ್ರಿಯವಾಯಿತು. ಆದರೆ ಕೆಲವು ನಿಯಮಗಳಿಂದಾಗಿ ಸುಮಾರು ಎರಡು ದಶಕಗಳವರೆಗೂ ಅಮೆರಿಕದಲ್ಲಿ ಮಾರಲು ಅವಕಾಶ ಸಿಕ್ಕಿರಲಿಲ್ಲ. ಆದರೆ ರೆನೆ ಪ್ರಯತ್ನ ಬಿಡಲಿಲ್ಲ. ಅಮೆರಿಕದಲ್ಲಿ ಉಡುಪು ತಯಾರಿಸುತ್ತಿದ್ದ ಐಝೊದ್ ಸಂಸ್ಥೆಯೊಂದಿಗೆ ರೆನೆ ಒಪ್ಪಂದ ಮಾಡಿ ಕೊಂಡ. ರೆನೆಯ ಉಡುಪುಗಳು ಅಮೆರಿಕದಲ್ಲಿ ‘ಐಘuಈ ಔಅಇuಖSಉ’ ಹೆಸರಿನಲ್ಲಿ ಮಾರುಕಟ್ಟೆಗೆ ಬಂದವು. ಸಂಸ್ಥೆ ಬಿಳಿ ಬಣ್ಣದ ಅಂಗಿಯೊಂದಿಗೆ ಬೇರೆ ಬೇರೆ ಬಣ್ಣದ ಅಂಗಿಯನ್ನೂ ತಯಾರಿಸಲು ಶುರುಮಾಡಿತು. ಅಲ್ಲಿಯವರೆಗೂ ಬರೀ ಬಿಳಿಯ ಅಂಗಿಯನ್ನು ಮಾತ್ರ ಬಳಸುತ್ತಿದ್ದ ಟೆನ್ನಿಸ್ ಆಟದಲ್ಲಿ, ಆಟಗಾರರು ಮೊದಲ ಬಾರಿ ಬಣ್ಣದ ಅಂಗಿಗಳನ್ನೂ ತೊಡಲು ಆರಂಭಿಸಿದರು.

ಖ್ಯಾತ ಟೆನ್ನಿಸ್ ಆಟಗಾರರೂ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳೂ ಈ ಸಂಸ್ಥೆಯ ಉಡುಪು ತೊಡುತ್ತಿದ್ದರು. ಐಝೊದ್ ಲೆಕಾಸ್ಟ್ ಟಿ-ಶರ್ಟ್‌ಗಳು ಸುಮಾರು ಎರಡು
ದಶಕಗಳ ಕಾಲ ಟೆನ್ನಿಸ್ ಲೋಕವನ್ನು ಆಳಿದವು. ಸಂಸ್ಥೆಯ ಜನಪ್ರಿಯತೆ ಎಷ್ಟು ಹೆಚ್ಚಿತ್ತು ಎಂದರೆ, ಎಪ್ಪತ್ತರ ದಶಕದಲ್ಲಿ ಅಮೆರಿಕದಲ್ಲಿ ಬೇರೆ ಬೇರೆ ಪ್ರಾಣಿಯ ಹೆಸರಿನಲ್ಲಿ ಅನೇಕ ಸಂಸ್ಥೆಗಳು ಟಿ-ಶರ್ಟ್ ತಯಾರಿಸಿ ಮಾರಲು ಮುಂದಾದವು. ಆದರೆ ರೆನೆಯ ಲೆಕಾಸ್ಟ್ ಅಂಗಿಯ ಮುಂದೆ ಯಾವುದೂ ಸ್ಥಾಯಿಯಾಗಿ ನಿಲ್ಲಲಿಲ್ಲ. ನಾಲ್ಕು ದಶಕಗಳ ಕಾಲ ಐಝೊದ್ ಲೆಕಾಸ್ಟ್ ಪಾರುಪತ್ಯ ಮೆರೆಯಿತು.

೧೯೬೪ರಲ್ಲಿ ರೆನೆಯ ಮಗ ಬರ್ನಾರ್ಡ್ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡ. ೧೯೯೦ರ ಆರಂಭದಲ್ಲಿ ಲೆಕಾಸ್ಟ್ ತನ್ನ ಉಡುಪುಗಳನ್ನು ಸ್ವತಂತ್ರವಾಗಿ
ಮಾರುವ ಪರವಾನಗಿ ಪಡೆದ. ೧೯೯೬ರಲ್ಲಿ ೯೨ನೆಯ ವಯಸ್ಸಿನಲ್ಲಿ ರೆನೆ ಇಹಲೋಕ ತ್ಯಜಿಸಿದ. ಅದಕ್ಕೂ ಮುನ್ನ ಟೆನ್ನಿಸ್ ಆಟಕ್ಕೆ ಬಳಸುವ ರ‍್ಯಾಕೆಟ್, ಬಾಲ್
ಸೇರಿದಂತೆ ಅನೇಕ ಉಪಕರಣಗಳನ್ನೂ ರೆನೆ ತಯಾರಿಸಿದ. ಅದರಲ್ಲಿ ರ‍್ಯಾಕೆಟ್ ಮತ್ತು ಚೆಂಡು ಬಹಳ ಜನಪ್ರಿಯವೂ ಆದವು. ಆದರೆ ರೆನೆಯ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದು ಲೆಕಾಸ್ಟ್ ಅಂಗಿಗಳು. ಈಗ ಲೆಕಾಸ್ಟ್ ಟಿ-ಶಟ್ ಜತೆಗೆ ಬೇರೆ ಬೇರೆ ಉಡುಪುಗಳನ್ನೂ ತಯಾರಿಸುತ್ತಿದೆ.

ಆದರೆ ಉಳಿದ ಉಡುಪುಗಳು ಟಿ-ಶರ್ಟ್‌ನಷ್ಟು ಜನಪ್ರಿಯತೆ ಪಡೆಯಲಿಲ್ಲ ಎನ್ನುವುದೂ ಸತ್ಯ. ಇಂದು ಲೆಕಾಸ್ಟ್ ಒಂದು ಬಿಲಿಯನ್ ಡಾಲರ್ ಸಂಸ್ಥೆಯಾಗಿ ನಿಂತಿದೆ. ರೆನೆ ಟೆನ್ನಿಸ್ ಆಡದೇ ಬೇರೆ ಏನಾದರೂ ಮಾಡಿದ್ದರೆ ಅಥವಾ ಉಳಿದ ಆಟಗಾರರಂತೆ ನಿವೃತ್ತಿ ಪಡೆದ ನಂತದ ವೀಕ್ಷಕ ವಿವರಣೆ ಹೇಳಿಕೊಂಡು ಇರುತ್ತಿದ್ದರೆ, ಹೋಟೆಲ್ ಮಾಡಿದ್ದರೆ, ಇಷ್ಟು ಜನಪ್ರಿಯನಾಗುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ರೆನೆಯ ಭಿನ್ನವಾದ ಆಸಕ್ತಿಯಿಂದಾಗಿ ನನ್ನ ಬಟ್ಟೆಯ ಕಪಾಟಿನಲ್ಲಿ ಸದಾ ಒಂದೆರಡಾದರೂ ಮೊಸಳೆಯ ಅಂಗಿ ಇರುತ್ತವೆ.