Wednesday, 11th December 2024

ಮರುಕಳಿಸುತ್ತಿದೆ ಸಾಂಸ್ಕೃತಿಕ ವೈಭವ

ಅಭಿಪ್ರಾಯ

ಪ್ರಕಾಶ್ ಶೇಷರಾಘವಾಚಾರ‍್

ಹಿಂದೂ ಧಾರ್ಮಿಕ ಪರಂಪರೆ ಹಾಗು ಸಾಂಸ್ಕೃತಿಕ ಪುನರುತ್ಥಾನವು ಸ್ವಾತಂತ್ರ್ಯ ಬಂದ 70 ವರ್ಷಗಳ ತರುವಾಯ ಮೋದಿ ಸರಕಾರದಲ್ಲಿ ಆರಂಭವಾಗಿದೆ. ಶತ ಶತಮಾನಗಳ ಕಳಂಕವನ್ನು ತೊಡೆದು ಹಾಕಿ ಪ್ರಾಚೀನ ವೈಭವ ಮತ್ತೆ ಮರಕಳಿಸುತ್ತಿರುವ ವಾತಾವರಣ ಕಾಣಬಹುದಾಗಿದೆ.

ಮುಸ್ಲಿಂ ದಾಳಿಕೋರರಿಗೆ ಬಲಿಯಾಗಿದ್ದ ಜ್ಯೋರ್ತಿಲಿಂಗಳಲ್ಲಿ ಒಂದಾದ ಸೋಮನಾಥ ಮಂದಿರದ ಜೀರ್ಣೋ ದ್ದಾರದ ಪ್ರಸ್ತಾವನೆಯನ್ನು 1947ರಲ್ಲಿ ಸರ್ದಾರ್ ವಲ್ಲಭಾಯ್ ಪಟೇಲರು ಪ್ರಧಾನಿ ನೆಹರು ಮುಂದೆ ತಂದಾಗ ಅವರು ನಂಬಿದ್ದ ಜಾತ್ಯತೀತ ಸಿದ್ಧಾಂತ ಮತ್ತು ಧರ್ಮ ವಿರೋಧಿ ಧೋರಣೆಯ ಕಾರಣದಿಂದ ಪ್ರಸ್ತಾವಕ್ಕೆ ಅವರ ಸಹಮತವಿರಲಿಲ್ಲ. ಪುನರ್ ನಿರ್ಮಾಣದ ತರುವಾಯ ಉದ್ಘಾಟನೆಗೆ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ರವರು ಹೋಗದಿರುವಂತೆ ಪತ್ರ ಬರೆಯುತ್ತಾರೆ.

ಸೋಮನಾಥ ದೇವಾಲಯ ಪುನರ್ ನಿರ್ಮಾಣವಾದ ತರುವಾಯ ಮತ್ಯಾವುದೇ ದೇವಾಲಯಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಲಿಲ್ಲ. ಅಷ್ಟೇಕೆ ದೇವಾಲಯಗಳಿಂದ ಕೋಟ್ಯಂತರ ರು. ಆದಾಯವನ್ನು ವಸೂಲಿ ಮಾಡಿದರು. ಸೌಲಭ್ಯವಾಗಲಿ ಮತ್ತು ಮೂಲಭೂತ ಸೌಕರ್ಯವಾಗಲಿ
ಒದಗಿಸುವುದಕ್ಕೂ ಆಸಕ್ತಿ ತೋರಲಿಲ್ಲ. ಮೋದಿಯವರ ನೇತೃತ್ವದಲ್ಲಿ ಸೋಮನಾಥ ಮಂದಿರದ ಚಿತ್ರಣವು ಇದೀಗ ಬದಲಾಗಿದೆ ಹಲವಾರು ಸೌಕರ್ಯ ಮತ್ತು ಸೌಲಭ್ಯವನ್ನು ಕಲ್ಪಿಸಿ ಸೋಮನಾಥನ ದರ್ಶನ ಇಂದು ಸ್ಮರಣೀಯ ಅನುಭವ ಮಾಡಿದ್ದಾರೆ.

ರಾಜೀವ್ ಗಾಂಧಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಗಂಗಾ ನದಿ ಸ್ವಚ್ಛತೆ ಯೋಜನೆಯನ್ನು 600 ಕೋಟಿ ರು. ವೆಚ್ಚದಲ್ಲಿ ಆರಂಭಿಸಿದರು. ಆದರೆ ಆರಂಭದ ಉತ್ಸಾಹ ಯೋಜನೆ ಯನ್ನು ದಡ ಸೇರಿಸಲು ಇರಲಿಲ್ಲ ಹೀಗಾಗಿ 600 ಕೋಟಿ ರು.ವ್ಯರ್ತವಾಯಿತೆ ವಿನಹ ಗಂಗೆಯ ಮಾಲಿನ್ಯ ಅಳಿಯಲಿಲ್ಲ. ಶಾ ಬಾನು ಪ್ರಕರಣದಲ್ಲಿ ವಿಚ್ಛೇದಿತೆಗೆ ಜೀವ ನಾಂಶ ಕೊಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಅಸಿಂಧು ಗೊಳಿಸಿ ಸಂವಿಧಾನ ತಿದ್ದುಪಡಿ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದ ರಾಜೀವ್ ಗಾಂಧಿಯವರು ಅಯೊಧ್ಯೆ ರಾಮ ಮಂದಿರದ ಬೀಗವನ್ನು1986ರಲ್ಲಿ ತೆರವು ಗೊಳಿಸಿದರು. ಪ್ರಧಾನಿ ಪಿ.ವಿ.ನರಸಿಂಹ ರಾವ್ ರವರು 1992ರಲ್ಲಿ ಅಪಾಯದ ಅರಿವಿದ್ದರೂ ಅಯೋಧ್ಯೆ ಯಲ್ಲಿ ಕರಸೇವೆ ಮಾಡಲು ಅನುಮತಿ ನೀಡಿ ವಿವಾದಿತ ಕಟ್ಟಡ ನೆಲಸಮವಾಗಲು ಪರೋಕ್ಷವಾಗಿ ಸಹಾಯ ಮಾಡಿದ ಆರೋಪ ಅಂಟಿಕೊಂಡಿದೆ. ಇಂತಹ ಅಂದು ಇಂದು ಘಟನೆಗಳ ಹೊರತಾಗಿ ಯಾವುದೇ ಕೇಂದ್ರ ಸರಕಾರಗಳೂ ಹಿಂದೂ ಸಂಸ್ಕೃತಿಯ ಪುನರು ತ್ಥಾನಕ್ಕೆ ಕೈ ಹಾಕಲಿಲ್ಲ.

2014ರ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿಯವರು ವಾರಾಣಸಿಯಿಂದ ಸ್ಪರ್ಧೆ ಮಾಡಿದ ತರುವಾಯ ಬಹುಸಂಖ್ಯಾತರ ಭಾವನೆಗಳಿಗೆ ಸೂಕ್ತ ಗೌರವ ಮತ್ತು ಮನ್ನಣೆ ದೊರೆಯುವ ಎಲ್ಲ ಸಂಕೇತಗಳು ಸ್ಪಷ್ಟವಾಗಿ ಕಂಡು ಬಂದಿತು. ಹಿಂದೂಗಳ ಪರಮ ಪವಿತ್ರ ಮತ್ತು ವಿಶ್ವದ ಅತ್ಯಂತ ಪ್ರಾಚೀನ ನಗರಿ
ವಾರಾಣಸಿ ವಿಶ್ವ ಭೂಪಟದಲ್ಲಿ ತನ್ನ ವೈಭವ ದಿನ ಗಳಿಗೆ ಗುರುತಿಸಿಕೊಳ್ಳಲು ಆರಂಭವಾಯಿತು. ಈ ಮೊದಲು ವಿದೇಶಿ ಗಣ್ಯರು ದೇಶಕ್ಕೆ ಬಂದಾಗ ಕುತುಬ್ ಮಿನಾರ್, ತಾಜ್ ಮಹಲ್ ಭೇಟಿಯೇ ಪ್ರಮುಖವಾಗಿತ್ತು. ಆದರೆ ಈಗ ಗಂಗಾರತಿ, ಮಹಾಬಲಿಪುರಂ, ಅಹಮದಾಬಾದ್ ಗಳ ಭೇಟಿಯಿಂದ ನಮ್ಮ ನೈಜ ಸಂಸ್ಕೃತಿ ಯನ್ನು ವಿದೇಶಿ ಅತಿಥಿಗಳಿಗೂ ಪರಿಚಯಿಸಲಾಗುತ್ತಿದೆ.

2013 ರಲ್ಲಿ ಉತ್ತರಾಕಾಂಡದ ಭೀಕರ ಪ್ರವಾಹದಲ್ಲಿ ಚತುರ್ಧಾಮಗಳಲ್ಲಿ ಒಂದಾದ ಕೇದಾರನಾಥವು ಅಕ್ಷರಶಃ ಕೊಚ್ಚಿ ಹೋಯಿತು. ನೂತನವಾದ ಶಂಕರಾ ಚಾರ್ಯರ ಪ್ರತಿಮೆಯ ಅನಾವರಣದ ಜತೆಗೆ ಮಂದಿರದ ಪರಿಸರ ಅಭಿವೃದ್ಧಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾದರೆ ನದಿಯ ನೀರು ಮಂದಿರಕ್ಕೆ ನುಗ್ಗದಂತೆ ತಡೆಗೋಡೆ ಮುಂತಾದ ನಾನಾ ಯಾತ್ರಾರ್ಥಿಗಳ ಸೌಲಭ್ಯದ ಕಾಮಗಾರಿ ಕೈಗೊಳ್ಳಲಾಗಿದೆ. 194 ಕೋಟಿ ರು. ಎರಡನೆಯ ಹಂತದ ಅಭಿವೃದ್ಧಿಗೆ ಮೋದಿ ಯವರು ಚಾಲನೆ ನೀಡಿದ್ದಾರೆ.

ಬದರಿನಾಥ ಕ್ಷೇತ್ರದ ಸಮಗ್ರ ಅಭಿವೃದ್ಧಿಯ 250/ ಕೋಟಿ ರು. ಯೋಜನೆಗೆ ಚಾಲನೆ ದೊರೆತಿದೆ. ಉತ್ತರಾಕಾಂಡ ಸರಕಾರ ಇದೀಗ ಕೇದಾರನಾಥಕ್ಕೆ 1800 ಕೋಟಿ ರು. ವೆಚ್ಚದ ರೋಪ್ ವೇ ಮಾರ್ಗವನ್ನು ನಿರ್ಮಿಸಲು ಸಜ್ಜಾಗಿದೆ ಮೋದಿ ಪ್ರಧಾನಿಯಾದ ಬಳಿಕ ನಮಾಮಿ ಗಂಗೆ ಹೆಸರಿನಲ್ಲಿ 20ಸಾವಿರ ಕೋಟಿ ರು.
ಯೋಜನೆ ಕೈಗೊಂಡರು. ನದಿಯ ಮಾಲಿನ್ಯದಿಂದ ಜನ ಸ್ನಾನ ಮಾಡಲು ಹೆದರುವ ಸ್ಥಿತಿಯನ್ನು ತಲುಪಿತ್ತು. ಆದರೆ ಕಳೆದ 7 ವರ್ಷದಲ್ಲಿ 310 ಕಾಮಗಾರಿ ಗಳಲ್ಲಿ 147 ಕಾಮಗಾರಿಗಳು ಪೂರ್ಣಗೊಂಡಿದೆ. ಇನ್ನು ಕೆಲವೇ ವರ್ಷದಲ್ಲಿ ಗಂಗೆ ಸ್ವಚ್ಛ ಹಾಗೂ ಪರಿಶುದ್ದವಾಗಿ ಹರಿಯುವ ಕಾಲ ದೂರವಿಲ್ಲ.

2023 ಡಿಸಂಬರ್‌ನಲ್ಲಿ ಅಯೋಧ್ಯೆ ರಾಮಜನ್ಮ ಭೂಮಿ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿತ್ತಿದೆ. ಮೋದಿ ಅಧಿಕಾರಕ್ಕೆ ಬಂದ ತರುವಾಯ ಸರ್ವೋಚ್ಚ ನ್ಯಾಯಾಲಯದಲ್ಲಿ ನಂಬಿಕೆಯಿಟ್ಟು ಬಗೆಹರಿಸಿಕೊಳ್ಳುವ ಚಿಂತನೆಯು ಸಫಲವಾಯಿತು. ಹಿಂದೂಗಳಿಗೆ ಚಾರ್ ಧಾಮ್ ಯಾತ್ರೆಯು ಅತ್ಯಂತ ಪವಿತ್ರವಾದ್ದು ಯಾತ್ರಾರ್ಥಿಗಳ ಕಷ್ಚ ವನ್ನು ಗಮನದಲ್ಲಿರಿಸಿಕೊಂಡು ಮೋದಿ ಸರ್ಕಾರವು 12ಸಾವಿರ ಕೋಟಿ ರು.ಗಳ ಸರ್ವ ಋತು ವಿನ ನಾಲ್ಕು ಪಥದ ರಸ್ತೆ ನಿರ್ಮಾಣವನ್ನು ಆರಂ ಭಿಸಿದೆ. ಮೂಲಗಳ ಪ್ರಕಾರ 2024ಕ್ಕೆ ಚಾರ್ ಧಾಮ್‌ನ ಚತುಷ್ಪಥ ರಸ್ತೆಯು ಬಳಕೆಗೆ ಸಿದ್ಧವಾಗುವುದಂತೆ.

ಮೋದಿಯವರು ಲೋಕಸಭಾ ಸದಸ್ಯರಾಗಿ ವಾರಾಣಸಿಯಿಂದ ಆಯ್ಕೆಯಾದ ತರುವಾಯ ವಿಶ್ವನಾಥ ಮಂದಿರದ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡರು. ಕೇವಲ ಎರಡು ವರ್ಷದಲ್ಲಿ ೫ಲಕ್ಷ ಚದರಡಿಯ ಕಾರಿಡಾರ್ ಯೋಜನೆ ಪೂರೈಸಿ ಲೋಕಾರ್ಪಣೆಗೊಳಿಸಿದರು. ಪಾಕಿಸ್ಥಾನದಲ್ಲಿ ಸೇರಿರುವ ಸಿಖ್ಖ ಮೊದಲ ಗುರು ಗುರುನಾನಕ್‌ರವರು ಸ್ಥಾಪಿಸಿದ ಕರ್ತಾರ ಪುರ ಗುರುದ್ವಾರವನ್ನು ಅಭಿವೃದ್ಧಿ ಪಡಿಸಿ ಸಿಖ್ಖ್ ಯಾತ್ರಿಗಳು ಭೇಟಿ ನೀಡಲು ಹಾದಿ ಸುಗುಮ ಮಾಡಿದ ಕೀರ್ತಿಯು ಮೋದಿ ಸರಕಾರಕ್ಕೆ ಸೇರುತ್ತದೆ. ಬುದ್ಧ ಸರ್ಕೀಟ್ ಅಭಿವೃದ್ಧಿ ಪಡಿಸಿದ್ದಲ್ಲದೆ ಕುಶಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿ ಉತ್ತಮ ಸಂಪರ್ಕವನ್ನು ದೊರೆಯುವಂತಾಗಿದೆ. ಕಳೆದ 7 ವರ್ಷದಲ್ಲಿ ನಮ್ಮ ದೇಶದಿಂದ ಕಳವು ಮಾಡಿಕೊಂಡು ಹೋಗಿದ್ದ 198 ಅಪೂರ್ವ ಕಲಾಕೃತಿಗಳನ್ನು ವಿದೇಶದಿಂದ ವಾಪಸ್ ಭಾರತಕ್ಕೆ ತರಲಾಗಿದೆ.

ಕೇದಾರವಾಗಲಿ, ಅಯ್ಯೋಧ್ಯೆಯಾಗಲಿ, ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಆಗಲಿ ಮೋದಿಯವರ ವೈಯಕ್ತಿಕ ಆಸಕ್ತಿ ಮತ್ತು ಎಲ್ಲ ಪ್ರಮುಖ ಸಂದರ್ಭದಲ್ಲಿ ತಾವೇ ಸ್ವತಃ ಭಾಗಿಯಾಗಿ ದೇಶದ ಪ್ರಧಾನಿ ಈ ಮಣ್ಣಿನ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುತ್ತಾರೆ ಮತ್ತು ಆ ಪರಂಪರೆ ಯನ್ನು ಎತ್ತಿ ಹಿಡಿಯಲು ಯಾವುದೆ ಹಿಂಜರಿಕೆ ಇಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವಸಂಸ್ಥೆಯ ಮನ್ನಣೆಯಿಂದ ಆರಂಭವಾಗಿರುವ ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ಪುನರುತ್ಥಾನದಿಂದ ಭಾರತವು ವಿಶ್ವಗುರುವಿನ ಸ್ಥಾನವನ್ನಲಂಕರಿಸುವ ದಿನವು ಬಹುದೂರವಿಲ್ಲ