ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಕನ್ನಡ ಚಿತ್ರರಂಗದಲ್ಲಿ ಇನ್ನೊಂದು ಅವಘಡ ನಡೆದಿದೆ. ‘ಲವ್ ಯೂ ರಚ್ಚೂ’ ಚಿತ್ರದ ಚಿತ್ರೀಕರಣದ ವೇಳೆ ವಿವೇಕ್ ಎಂಬ ಸಾಹಸ ಕಲಾವಿದ ಮೃತಪಟ್ಟಿದ್ದಾನೆ. ಇದರಲ್ಲಿ ಯಾರ ತಪ್ಪು ಅಂತ ಹೇಳೋದು ಕಷ್ಟ. ಹೆಚ್ಚೆಂದರೆ ಇದು ಅಲ್ಲಿದ್ದವರ ಬೇಜವಾಬ್ದಾರಿತನ ಅಷ್ಟೇ. ಆದರೆ ಈ ಪರಿಸ್ಥಿತಿಯನ್ನೇ ಉಪಯೋಗಿಸಿಕೊಂಡು ಚಿತ್ರದ ನಾಯಕ ಅಜಯ್ ರಾವ್, ಸತ್ತವನ ಕುಟುಂಬಕ್ಕೆ ನಿರ್ಮಾಪಕರ ಕಡೆಯಿಂದ ಪರಿಹಾರ ಸಿಗೋವರೆಗೂ ನಾನು ಶೂಟಿಂಗಿಗೆ ಬರಲ್ಲ ಎಂದು ಹೇಳಿ
ಹೀರೋ ಆಗಲು ಪ್ರಯತ್ನ ಪಟ್ಟಿದ್ದಾರೆ.
ಅಸಲಿಗೆ ಇದೇ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ರಂಜಿತ್ ಎಂಬ ಹುಡುಗ, ಅವಘಡ ಆದಾಗ ಅಜಯ್ ಸಾರ್, ಅ ಇದ್ರು, ಇದನ್ನೆ ನೋಡಿದರೂ ಅವರು ತಾವು ಕೂತಿದ್ದ ಜಾಗದಿಂದ ಎದ್ದು ಬರಲಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾನೆ. ಅನಾಗಿದೆ ಅಂತ ಎದ್ದು ಹೋಗಿ ನೋಡುವ ಕನಿಷ್ಠ ಸೌಜನ್ಯ ಇಲ್ಲದ ಅಜಯ್ ರಾವ್ ಈಗ ತಮ್ಮಲ್ಲಿರುವಗಿಲ್ಟ ಅನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಂದ ಹಾಗೆ, ಅಜಯ್ ರಾವ್ ಹೇಳಿದರೂ, ಬಿಟ್ಟರೂ, ನಿರ್ಮಾಪಕರು ಮೃತನ ಕುಟುಂಬಕ್ಕೆ ಪರಿಹಾರ ಕೊಟ್ಟೇ ಕೊಡುತ್ತಾರೆ.
ನಿರ್ಮಾಪಕ ಗುರು ದೇಶಪಾಂಡೆ ಈಗಾಗಲೇ ಹತ್ತು ಲಕ್ಷ ಪರಿಹಾರ ಕೊಡುವ ಮಾತಾಡಿದ್ದಾರೆ. ರಸ್ತೆಯಲ್ಲಿ ಒಂದು ಆಕ್ಸಿಡೆಂಟ್ ಆದ್ರೂ ತಪ್ಪು ಹೊರೆಸೋದು ದೊಡ್ಡ ವೆಹಿಕಲ್ ಇರುವವನ ಮೇಲೆ. ಯಾಕಂದ್ರೆ ಅವನು ಸಾಹುಕಾರ, ಅವನ ಬಳಿ ದುಡ್ಡಿರುತ್ತೆ. ಇಲ್ಲೂ ಕೂಡ ಒಂದು ಸಿನಿಮಾಗೆ ಹಣ ಹಾಕಿದ ನಿರ್ಮಾಪಕ ಪ್ರತಿದಿನ ಶೂಟಿಂಗಿಗೆ ಹೋಗಿ ಅ ಕುಂತು ಎಲ್ಲವನ್ನೂ ನಿಭಾಯಿಸೋಕೆ ಆಗಲ್ಲ. ಅಲ್ಲಿರುವವರ ಮೇಲೆ ಆ ಜಬಾಬ್ದಾರಿ ಇರುತ್ತೆ. ಆದರೆ ಇಂಥ ಅವಘಡ ಆದಮೇಲೆ
ಸಹಜವಾಗಿಯೇ ದುಡ್ಡಿರುವ ನಿರ್ಮಾಪಕನ ಮೇಲೆ ಎಲ್ಲರ ಕಣ್ಣು ಬೀಳುತ್ತದೆ. ಅವನೇ ಹಣ ಕೊಡಬೇಕು. ಕೊಡುತ್ತಾನೆ. ಆದರೆ ಅಜಯ್ ರಾವ್ ನಾನು ಹೇಳದೇ ಇದ್ದಿದ್ದರೆ ಮೃತನ ಕುಟುಂಬಕ್ಕೆ ಪರಿಹಾರ ಸಿಗುತ್ತಲೇ ಇರಲಿಲ್ಲ ಎನ್ನುವಂತೆ ವರ್ತಿಸಿ, ನಿರ್ಮಾಪಕರ ಮೇಲೆ ತಮಗಿದ್ದ ಯಾವುದೋ ಅಸಮಾಧಾನದ ಕಾರಣಕ್ಕೆ, ಹೀಗೆ ಹೇಳಿ ತಮ್ಮ ಇಗೋ ತಣಿಸಿಕೊಂಡಿದ್ದಾರೆ.
ಅಂದ ಹಾಗೆ, ಇನ್ಯಾರೋ ಸ್ವತಂತ್ರ ಹೋರಾಟಗಾರನೊಬ್ಬ ಚಿತ್ರದ ನಾಯಕ, ನಾಯಕಿಯರಾದ ಅಜಯ್ ರಾವ್ ಮತ್ತು ರಚಿತಾ ರಾಮ್ ಅವರನ್ನೂ ಬಂಧಿಸಬೇಕು ಎಂದು ದೂರು ಕೊಟ್ಟಿzನೆ. ಹಾಗಾಗಿ ವಿಷಯ ಈಗ ಅಜಯ್ ರಾವ್ ಕೊರಳಿಗೂ ಸುತ್ತಿಕೊಂಡಿದೆ. ಹಿಂಗೇ ಆದರೆ ಆ ರಸ್ತೆಯಲ್ಲಿ ಓಡಾಡ್ತಾ ಇದ್ದವರನ್ನೆ ಅರೆ ಮಾಡಬೇಕು ಅನ್ನೋ ಕೂಗು ಕೇಳಿಸಿದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಎಲ್ಲರಿಗೂ ಗೊತ್ತಿರುವಂತೆ ಸತ್ತ ಜೀವ ವಾಪಸ್ ಬರಲ್ಲ. ಆದ್ರೆ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಲಿ. ಆದರೆ ಈ ವಿಷಯ ಇನ್ಯಾರz ಸ್ವಾರ್ಥಕ್ಕೆ ಉಪಯೋಗ ಆಗದೇ ಇರಲಿ ಅಷ್ಟೇ.
ಲೂಸ್ ಟಾಕ್
ಜಮೀರ್ ಅಹ್ಮದ್
(ಕಾಲ್ಪನಿಕ ಸಂದರ್ಶನ)
* ಜಮೀರ್ ಅವ್ರೇ ನಿಮ್ ಮೇಲೆ IT ದಾಳಿ ಮಾಡಿಸಿದ್ದು ಯಾರು?
ಕುಮಾರ್‌ಸ್ವಾಮಿ ಇರಬಹುದು ಅಂತ ಅವರಿಗೆ ಕಾಲ್ ಮಾಡಿz. ಅವ್ರು ರಿಸೀವ್ ಮಾಡ್ಲಿಲ್ಲ. ಬರೀ ಹಲೋ ಟ್ಯೂನ್ ಹಾಡು ಕೇಳಿಸ್ತು. ’ಮೇರಾ ಕುಚ್ ಸಾಮಾನ್ ತುಮಾರೇ ಪಾಸ್ ಪಡಾ ಹೈ’ ಅಂತ.
* ಅದ್ಸರಿ, ಕುಮಾರಸ್ವಾಮಿ ನಿಮ್ಮನೆಯಲ್ಲಿ ಸಾಮಾನ್ ಇಟ್ಟು ಆಮೇಲೆ ನಿಮ್ಮ ಮೇಲೇ ಕಿರಿಕ್ ಮಾಡಿದ್ದು ಯಾಕೆ?
ಯಾಕೆ ಅಂದ್ರೆ, ಅವ್ರ್ ಸಾಮಾನ್ ಇಟ್ಟಿರೋದು ನಮ್ಮನೆಯಲ್ಲಿ ಅನ್ನೋ ಸಾಮಾನ್ ಸೆ ಇಲ್ಲ ಅವ್ರಿಗೆ. ಕಮಾನ್ ಭಾಯ್ ಅವ್ರ್ ವಿಷ್ಯ ಬಿಟ್ಟಾಕಿ.
* ಸರಿ, ನಿಮ್ಮ ಮೇಲೆ ನಡೆದ IT ಮತ್ತು ED ದಾಳಿ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ಟೋಟಲೀ ಆಂಟಿ ’National’ ಕಣ್ರೀ.
* ಓ, ನಿಮ್ಮ ನ್ಯಾಷನಲ್ ಟ್ರಾವೆಲ್ಸ ವಿಷ್ಯ ಹೇಳ್ತಾ ಇದ್ದೀರಾ. ಸರಿ, ಡಿಕೆಶಿ ಸಿಕ್ಕಿದ್ರಂತೆ, ಏನು ಕಿವಿಮಾತು ಹೇಳಿದ್ರು.
ಏನಿಲ್ಲ ಭಾಯ್ ಇವಕ್ಕೆ ಹೆದರಿಕೊಂಡು, ತಲೆಕೆಡಿಸಿಕೊಳ್ಳಬಾರ್ದು. ಭಂಡರ ಥರ ಇರ್ಬೇಕು, ಸಾರಿ, ಬಂಡೆ ಥರ ಇರ್ಬೇಕು ಅಂತ ಹೇಳಿದ್ರು.
* ಸರಿ, ಈಶ್ವರಪ್ಪ ಅವ್ರು ಕಾಂಗ್ರೆಸ್ ನವರ ಬಗ್ಗೆ ಅಶ್ಲೀಲ ಮಾತಾಡಿzರೆ. ಇದರ ಬಗ್ಗೆ ನಿಮ್ಮ ಅನಿಸಿಕೆ?
ನಮ್ ಸಿದ್ರಾಮಯ್ಯನೋರಿಗೆ ಹೇಳಿ ಅವ್ರಿಗೆ ಶೀಲ ಭಾಗ್ಯ ಕೊಡಿಸ್ಬೇಕು ಅಷ್ಟೇ. ನನ್ನ ಕೈಲೋನಾಗುತ್ತೆ? ಈಶ್ವರ್ ಅಲ್ಲ ಇಸ್ ಕಾ ನಾಮ್ ಇಸ್ ಕೋ ಸನ್ಮತಿ ದೇ ಭಗವಾನ್ ಅಂತ ಬೇಡ್ಕೊಂಡೆ ಅಷ್ಟೇ.
ನೆಟ್ ಪಿಕ್ಸ್
ಖೇಮು ಒಂದ್ ಸಲ ಕೆಲಸದ ನಿಮಿತ್ತ ಸ್ಪೇನ್‌ಗೆ ಹೋಗಿದ್ದ. ಅವನು ಅಲ್ಲಿ ತಿಂಗಳುಗಟ್ಟಲೇ ಇರಬೇಕಿತ್ತು. ಆದರೆ, ಇಂಡಿಯಾದ ಊಟಕ್ಕೆ ಅಡಿದ್ದೇ ಆಗಿದ್ದ ಖೇಮುಗೆ ಅಲ್ಲಿನ ಊಟ ಅಷ್ಟಾಗಿ ರುಚಿಸಿರಲಿಲ್ಲ. ಹಂಗಾಗಿ ವೀಕೆಂಡ್‌ಗಳಲ್ಲಿ ಅಲ್ಲಿರೋ ಎಲ್ಲಾ ರೆಸ್ಟೋರೆಂಟ್ ಗಳನ್ನೂ ಹುಡುಕಿಕೊಂಡು ಹೋಗಿ ಅಲ್ಲಿ ಟೇ ಹೇಗಿದೆ ಅಂತ ನೋಡ್ತಿದ್ದ.
ಹಿಂಗೇ ಒಂದು ದಿನ ಅಲ್ಲಿ ಫೈಟಿಂಗ್ ಬುಲ್ ಅನ್ನೋ ರೆಸ್ಟೋರೆಂಟ್ ಕಣ್ಣಿಗೆ ಬಿತ್ತು. ಇವತ್ತು ಈ ಹೊಟೇಲ್‌ನ ಟೇಸ್ಟ್ ಟೆಸ್ಟ್ ಮಾಡೋಣ ಅಂದುಕೊಂಡು ಒಳಗೆ ಹೋಗಿ ಕೂತ. ವೇಟರ್ ಬಂದು ಏನು ಕೊಡ್ಲಿ ಅಂದ. ಅದಕ್ಕೆ ಖೇಮು, ಇವತ್ತಿನ ಸ್ಪೆಷಲ್ ಏನಿದೆ ತಗೊಂಡ್ ಬಾ ಅಂದ. ಸರಿ ಅಂತ ಹೋದ ವೇಟರ್, ಒಂದು ಪ್ಲೇಟ್‌ನಲ್ಲಿ ಮೀಟ್ ತಂದಿಟ್ಟ. ಖೇಮು ಅದನ್ನು ತಿನ್ನೋಕೆ ಶುರು ಮಾಡಿದ. ಮೊದಲ ಬಾರಿಗೆ ಖೇಮುಗೆ ಸ್ಪೇನ್ ಹೊಟೇಲ್‌ನ ಒಂದು ಡಿಷ್ ತುಂಬಾ ಇಷ್ಟ ಆಗಿಬಿಡ್ತು. ವೇಟರ್‌ನ ಕರೆದು ಇದು ಯಾವ ಡಿಷ್ ಅಂತ ಕೇಳಿದ. ಅದಕ್ಕೆ ವೇಟರ್ ಹೇಳಿದ. ಸರ್ ನಿಮಗೆ ಗೊತ್ತು, ಸ್ಪೇನ್‌ನಲ್ಲಿ ಬುಲ್ ಫೈಟಿಂಗ್ ಫೇಮಸ್ ಆಟ. ಇಲ್ಲಿ ಪ್ರತಿದಿನ ನಡೆಯುತ್ತೆ. ಇವತ್ತಿನ ಫೈಟರ್ ಸೋಲಿಸಿದ ಬುಲ್‌ನ ಟೆಸ್ಟಿಕಲ್ಸ ಇದು. ಟೆಸ್ಟಿಕಲ್ಸ – ಅಂದ. ಅದಕ್ಕೆ ಖೇಮು, ಟೇ ತುಂಬಾ ಚೆನ್ನಾಗಿದೆ.
ಇನ್ನೊಂದು ಪ್ಲೇಟ್ ಕೊಡು ಅಂದ. ಅದಕ್ಕೆ ವೇಟರ್, ಇಲ್ಲ ಸಾರ್, ಪ್ರತಿದಿನ ಒಂದ್ ಫೈಟ್ ನಡೆಯೋದು, ಒಂದೇ ಬುಲ್ ಸಿಗೋದು, ಮತ್ತೆ ನಾಳೆನೇ ಈ ಡಿಷ್ ಸಿಗೋದು, ಇದೇ ಟೈಮಿಗೆ ಬಂದು ವೆಯ್ಟ ಮಾಡಿದ್ರೆ ಸಿಗುತ್ತೆ ಅಂದ. ಸರಿ, ಖೇಮು ಮರುದಿನ ಅದೇ ಸಮಯಕ್ಕೆ ಹೋಗಿ ಅದನ್ನೇ ಆರ್ಡರ್ ಮಾಡಿದ. ವೇಟರ್ ಪ್ಲೇಟ್ ತಂದಿಟ್ಟ. ಎಲ್ಲಾ ತಿಂದ ಮೇಲೆ ವೇಟರ್‌ನ ಕರೆದು. ಟೇಸ್ಟೇನೋ ಚೆನ್ನಾಗಿತ್ತು. ಆದರೆ ನಿನ್ನೆ ನೀನು ಕೊಟ್ಟ ಪೀಸ್‌ಗಳ ಸೈಜ್ ತುಂಬಾ ದೊಡ್ಡದಿತ್ತು.
ಇವತ್ತು ತುಂಬಾ ಸಣ್ಣವಿದ್ದವು, ಯಾಕೆ ಅಂತ ಕೇಳಿದ. ಅದಕ್ಕೆ ವೇಟರ್ ಹೇಳಿದ ಏನ್ ಮಾಡೋದು ಸಾರ್, ಒಂದೊಂದ್ ಸಲ ಫೈಟ್‌ನಲ್ಲಿ ಬುಲ್ ಕೂಡಾ ಗೆಲ್ಲುತ್ತೆ.
ಲೈನ್ ಮ್ಯಾನ್
ಶ್ರಾವಣ ಸ್ಪೆಷಲ್
ನಾವು ಶ್ರಾವಣ ಅಂತ ನಾನ್ ವೆಜ್ ತಿನ್ನಲ್ಲ. ಆದ್ರೆ ಈ ಸೊಳ್ಳೆಗಳಿಗೆ ಶ್ರಾವಣ ಇರಲ್ವಾ..ಈಗ್ಲೂ ನಮ್ ರಕ್ತ ಹೀರ್ತಾವಪ್ಪ..
ಗೆಳೆಯರ ಮಾತು
’ನೀನಿಷ್ಟೊತ್ತಿಗೆ ಒಂದ್ ಕಾರ್ ತಗೊಂಡಿರಬೇಕಿತ್ತು ಕಣೋ’
’ಏನ್ ಕಿಂಡಲ್ ಮಾಡ್ತಾ ಇದ್ದಿಯಾ?’
’ಒಳ್ಳೇದ್ ಹೇಳಿದ್ರೆ ಹಿಂಗಂತೀಯ ನೋಡು, ಹೇಳೋದನ್ನ ಸ್ಪೋರ್ಟಿವ್ ಆಗಿ ತಗೋಳ್ಳೋ’
’ಸ್ಪೋರ್ಟಿವ್ ಆಗಿ ತಗೊಳ್ಳೋಕೋದ್ರೆ ಸ್ಪೋಟ್ಸ ಕಾರೇ ತಗೋಬೇಕಾಗುತ್ತೆ, ಬ್ಯಾಡ ಬಿಡು’
ಗಂಡ ಹೆಂಡ್ತಿ ಮ್ಯಾಟ್ರು
ಅಲ್ಲ ಕಣೇ, ಊಟಕ್ಕೆ ಉಪ್ಪಿನಕಾಯಿನೇ ಹಾಕಲ್ವಲ್ಲ ನೀನು, ಅದನ್ನ ಹಂಗೇ ಇಟ್ಕೊಂಡು ಏನ್
ಮಾಡ್ತಿಯಾ.. ಏನ್ ಉಪ್ಪಿನಕಾಯಿ ಹಾಕ್ಕೊಂಡ್ ನೆಕ್ತೀಯಾ
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ಬಗೆಗಿನ ಕುತೂಹಲ
SSLC ಸ್ಟೂಡೆಂಟ್ಸ್ ಯಾರೂ Revaluation ಗೆ ಹಾಕಿಲ್ವಂತಾ?
ಎಸ್‌ಎಸ್‌ಎಲ್‌ಸಿ ರಿಸಲ್ಟ್
ಈ ಸಲ SSLC ಯಲ್ಲಿ ಫೇಲಾಗಿದ್ದು ಒಬ್ಬ ವಿದ್ಯಾರ್ಥಿ ಅಷ್ಟೇ ಅಲ್ಲ, ಸರ್ವರ್ ಕೂಡಾ ಫೇಲ್ ಆಗಿತ್ತು. ಕೆಜಿಎಫ್ ೨ ಚಿತ್ರ ಶುರು ಆಗುವ ಮುಂಚೆ ಚಿತ್ರಮಂದಿರಗಳಲ್ಲಿ ಯಾವ ಎಚ್ಚರಿಕೆ ಕೊಡ್ತಾರೆ. ಡಸ್ಟ್ ಅಲರ್ಜಿ ಇರುವವರು ಈ ಚಿತ್ರವನ್ನು ಮಾಸ್ಕ್ ಹಾಕಿಕೊಂಡೇ ನೋಡಿ ಸಲಗ ಚಿತ್ರಕ್ಕೆ ಏನಂತ ಎಚ್ಚರಿಕೆ ಕೊಡ್ತಾರೆ ಅವರೇನು ಸ್ಪೆಷಗಿ ಹೇಳಲ್ಲ. ಎಲ್ಲಾ ಸಿನಿಮಾನೂ ಮಾ ಹಾಕಿಕೊಂಡೇ ನೋಡ್ಬೇಕು ಬಿಡಿ. ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು
ಲಗು ಗುರು
ಕಿಸ್ಸಿಂಗ್ ಸೀನ್ ಜಾಸ್ತಿ ಇರೋ ಯುವ ಪ್ರೇಮಕಥೆ ಇರೋ ಸಿನಿಮಾ ಟೈಟಲ್
ಜೈ ಜವಾನ್, ಜೈ ಕಿಸ್-ಆನ್
ಒಂದೇ ಹುಡುಗಿ ಮೇಲೆ ಕಣ್ಣಾಕಿರೋ ಇಬ್ಬರು ಹುಡುಗರು
ಸಮಾನ ಲುಕ್ಕಿಗಳು