ಅನಿಸಿಕೆ
ಹನಮಂತಪ್ಪ ಸಿಮಿಕೆರಿ
ಭಾರತವು ತಾಂತ್ರಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ವೈಜ್ಞಾನಿಕವಾಗಿ ವಿಶ್ವಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡು ಪ್ರಪಂಚದಲ್ಲಿಯೇ ವಿಶ್ವಗುರು ಆಗುವ ಹಾದಿಯಲ್ಲಿ ಸಾಗುತ್ತಿದೆ. ಚಂದ್ರಲೋಕದಲ್ಲಿ ತಲುಪಿ ಅಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳುವಷ್ಟು ವೈಜ್ಞಾನಿಕವಾಗಿ ಮನುಷ್ಯ ಮುಂದುವರೆದಿದ್ದಾನೆ. ಆದರೆ ಭಾರತ ದಲ್ಲಿರುವ ದಲಿತರಿಗೆ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಈಗಲೂ ಸಹ ಸಾಧ್ಯವಾಗದೆ ಇರುವುದು ಈ ದೇಶದ ದುರಂತವೇ ಸರಿ ದಲಿತರ ಮೇಲಿನ ದೌರ್ಜನ್ಯ, ಹಲ್ಲೆಗಳ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಭಾರತದ ಸಾಮಾಜಿಕ ಸ್ಥಿತಿಗೆ ಕೈಗನ್ನಡಿಯಾಗಿದೆ.
ಇತ್ತೀಚೆಗೆ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಎರಡು ಪ್ರಮುಖ ಘಟನೆಗಳು ದಲಿತರ ಸ್ಥಿತಿಗತಿಯನ್ನು ಸಾಕ್ಷೀಕರಿಸು ತ್ತದೆ. ಮೊದಲನೇ ಪ್ರಕರಣದಲ್ಲಿ, ಕೊಪ್ಪಳ ಜಿಲ್ಲೆಯ ದೇವಾಲಯದ ಒಳಗಡೆ ಪ್ರವೇಶಿಸಿದ ದಲಿತ ಮಗುವಿನ ಪೋಷಕರಿಗೆ ಊರಿನ ಮೇಲ್ವರ್ಗದವರು ದಂಡ ವಿಽಸಿತ್ತು. ಎರಡನೇ ಪ್ರಕರಣದಲ್ಲಿ ಇದೇ ಜಿಲ್ಲೆಯ ದೇವ ಸ್ಥಾನದ ಒಳಗಡೆ ಪ್ರವೇಶಿಸಿದ ದಲಿತರಿಗೆ, ದೇವಸ್ಥಾನವನ್ನು ಶುದ್ಧೀಕರಿಸಲು ೩೦ ಸಾವಿರ ರು. ಪಾವತಿಸು ವಂತೆ ಕೇಳಲಾಗಿತ್ತು. ಈ ಎರಡು ಘಟನೆಗಳು ಪ್ರಸ್ತುತ ನಾಗರಿಕ ಸಮಾಜವು ತಲೆತಗ್ಗಿಸುವಂತೆ ಮಾಡಿದೆ. ಮಕ್ಕಳು ದೇವರ ಸ್ವರೂಪ ಎನ್ನುವ ಮಾತಿದೆ.
ಅದೇ, ಒಂದು ಮಗು ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕೆ ದಂಡ ವಿಧಿಸುವ ಕೊಳಕು ಮನಸ್ಥಿತಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಇದರಿಂದಾಗಿ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಅಸ್ಪೃಶ್ಯತೆಯನ್ನು ಮುಖ್ಯ ಧ್ಯೇಯವಾಗಿಸಿ ಕೊಳ್ಳುತ್ತಿರುವುದು ಈ ದೇಶದ ಸಾಮಾಜಿಕ ಪಿಡುಗು ಎಂದೇ ಹೇಳಬಹುದು.
ಮೇಲ್ನೋಟಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಸಮಾನತೆಯನ್ನು ಸಾಽಸಿದಂತೆ ಭಾಸವಾಗುತ್ತಿದ್ದರೂ ಸಮಾಜದ ಆಳದಲ್ಲಿ ಜಾತಿಯಂತೆ, ಮೌಢ್ಯ, ಅಸಮಾನತೆ ಮೊದಲಾದ ಪಿಡುಗುಗಳು ಮಡುಗಟ್ಟಿರುವುದನ್ನು ಕಾಣಬಹುದು. ಶೈಕ್ಷಣಿಕವಾಗಿ, ಆರ್ಥಿಕವಾಗಿ ದಲಿತ ಸಮುದಾಯವು ಸ್ವಲ್ಪ ಮಟ್ಟಿನ ಬದಲಾವಣೆಗೆ ಒಳಗಾಗೀರಬಹುದು. ಆದರೆ ಸಾಮಾಜಿಕವಾಗಿ ದಲಿತರ ಸ್ಥಿತಿಗತಿಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುವುದು ಇತ್ತೀಚಿನ ಘಟನೆಗಳು ಸಾಕ್ಷೀಕರಿಸು ತ್ತವೆ.
ಸಂವಿಧಾನದ ತಳಹದಿಯಲ್ಲಿ ವಾಸಿಸುತ್ತಿರುವ ನಮಗೆ ನಿಜವಾಗಿ ಸಂವಿಧಾನದ ಆಶಯಗಳನ್ನು ಈಡೇರಿಸಿದ್ದೇವಾ ಎನ್ನುವ ಆತ್ಮ ವಿಮರ್ಶೆಯನ್ನು ಮಾಡಿ ಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಈ ದೇಶದಲ್ಲಿ ಬದುಕುವ ಪ್ರತಿಯೊಬ್ಬ ನಾಗರಿಕನಿಗೂ ನನ್ನಷ್ಟೇ ಆತ್ಮಗೌರವ ಇದೆ ಎನ್ನುವ ನಂಬಿಕೆಯ ಆಧಾರದಲ್ಲಿ ಜೀವನ ನಡೆಸಬೇಕು. ಆ ಮೂಲಕ ಮುಂದಿನ ಯುವ ಪೀಳಿಗೆಗಳ ಮನಸ್ಸಿನಲ್ಲಿ ಸಹೋದರತೆ, ಭಾತೃತ್ವ, ಸಮಾನತೆಯ ಚಿಂತನೆಯ ಬೀಜಗಳನ್ನು ಬಿತ್ತಬೇಕಾ ಗಿದೆ. ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಪೂರೈಸಿದರೆ ದೇಶವು ಸಾಮಾಜಿಕವಾಗಿ ಮತ್ತು ಆಂತರಿಕವಾಗಿ ಸದೃಢಗೊಳ್ಳಲಿದೆ. ಆಂತರಿಕ ಸದೃಢತೆಯು ವಿಶ್ವ ಮಟ್ಟದಲ್ಲಿ ಭಾರತವನ್ನು ವಿಶ್ವಗುರುವನ್ನಾಗಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.