Thursday, 5th December 2024

ಮುಸಲ್ಮಾನ್ ರಾಷ್ಟ್ರಗಳ ಶತ್ರುತ್ವದಿಂದ ಬದುಕುತ್ತಿರುವ ಕೆಚ್ಚೆದೆಯ ದೇಶ ಇಸ್ರೇಲ್

ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ

ಇಸ್ರೇಲ್ ಎಂದರೆ ಕರ್ನಾಟಕದಲ್ಲಿನ ಹಲವರಿಗೆ ನೆನಪಾಗುವುದು ಅಧುನಿಕ ವ್ಯವಸಾಯ, ಇಸ್ರೇಲಿನ ಕೃಷಿ ಪದ್ದತಿಯು ಅದ್ಯಾವ ಮಟ್ಟಿಗೆ ಜನರ ತಲೆಯಲ್ಲಿ ಹೊಕ್ಕಿದೆಯೆಂದರೆ, ಯಾವೊಬ್ಬ ಆಧುನಿಕ ರೈತನ ಬಾಯಲ್ಲೂ ಕೇವಲ ಇಸ್ರೇಲ್ ಕೃಷಿಯದ್ದೇ ಮಾತು. ಅಲ್ಲಿನ ಕೃಷಿ ಪದ್ಧತಿಯಲ್ಲಿ ಬಳಸುವ ಹನಿ ನೀರಾವರಿ ಪದ್ಧತಿ, ನೂತನ ಆವಿಷ್ಕಾರಗಳಿಂದ ಕೂಡಿದ ಉಪಕರಣಗಳು,
ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಕೃಷಿ ವಿಧಾನಗಳು, ಮರುಭೂಮಿಯಲ್ಲಿ ಬೆಳೆವ ತರಕಾರಿ, ಹಣ್ಣುಗಳು. ಕೃಷಿಯಲ್ಲಿ ಇಷ್ಟೆೆಲ್ಲಾ ಅಭಿವೃದ್ಧಿ ಹೊಂದಿರುವ ಇಸ್ರೇಲ್ ದೇಶ ಇತರ ತಂತ್ರಜ್ಞಾನದಲ್ಲೂ ಕಡಿಮೆಯಿಲ್ಲ, ಕಂಪ್ಯೂಟರ್‌ನಲ್ಲಿ ಬಳಸುವ ಚಿಪ್ ಅನ್ನು ಮೊಟ್ಟಮೊದಲ ಬಾರಿಗೆ ಆವಿಷ್ಕಾರ ಮಾಡಿದ್ದು ಇಸ್ರೇಲ್ದೇಶ.

ಅಮೆರಿಕ ದೇಶದವರು ಇಸ್ರೇಲಿಗಳ ಬುದ್ಧಿವಂತಿಕೆಯನ್ನು ನೋಡಿಯೇ ಅವರಿಗೆ ಆ ಮಟ್ಟಿನ ಸಹಾಯ ಮಾಡುತ್ತಾರೆ. ಅಮೆರಿಕದ  ದೊಡ್ಡ ದೊಡ್ಡ ಕಂಪನಿಗಳ ಸಂಶೋಧನಾ ಕೇಂದ್ರಗಳು ಇಸ್ರೇಲಿನಲ್ಲಿವೆ. ಪ್ರತಿ ನಿತ್ಯವೂ ಸಹ ನೂತನ ಸಂಶೋಧನೆಗಳು ಇಸ್ರೇಲಿನಲ್ಲಿ ನಡೆಯುತ್ತಲೇ ಇರುತ್ತವೆ. ಅಮೆರಿಕ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು ಸಾಮಾನ್ಯವಾಗಿ ಇಸ್ರೇಲಿನ ಯಹೂದಿ
ಗಳಾಗಿರುತ್ತಾರೆ. ನೀವು ನಂಬುವುದಿಲ್ಲ, ಮೊಟ್ಟ ಮೊದಲ ಬಾರಿಗೆ ಬ್ಯಾಟರಿ ಚಾಲಿತ ಕಾರನ್ನು ತಯಾರು ಮಾಡಬೇಕೆಂಬ ಸಂಶೋಧನೆ ನಡೆದದ್ದೇ ಇಸ್ರೇಲಿನಲ್ಲಿ, ಇಲ್ಲಿನ ಯುವ ವಿಜ್ಞಾನಿಗಳ ಆವಿಷ್ಕಾರವನ್ನು ಅಮೆರಿಕ ದೇಶದ ಬಂಡವಾಳಶಾಹಿಗಳು ಹೈಜಾಕ್ ಮಾಡಿದ್ದಾರೆಂದರೆ ತಪ್ಪಿಲ್ಲ.

ಇಸ್ರೇಲಿನ ಸೈನ್ಯದಲ್ಲಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳಂತೂ ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳಿಗಿಂತಲೂ ಕಮ್ಮಿಯಿಲ್ಲ, ತನ್ನ ಸೈನ್ಯದಲ್ಲಿ ಅಷ್ಟರ ಮಟ್ಟಿನ ಅತ್ಯಾಧುನಿಕ ಅಸ್ತ್ರಗಳನ್ನು ಇಸ್ರೇಲ್ ಹೊಂದಿದೆ. ಇಸ್ರೇಲ್ ದೇಶವು 1948ರಲ್ಲಿ ಸ್ವತಂತ್ರ್ಯವಾಯಿತು, ಜಗತ್ತಿ ನಲ್ಲಿ ಯಹೂದಿಗಳ ಮಾರಣಹೋಮ ನಡೆಯುತ್ತಿರುವಾಗ ಯಹೂದಿಗಳ ದೇಶವಾಗಿ ಇಸ್ರೇಲ್ ಹೊರಹೊಮ್ಮಿತ್ತು. ಸುತ್ತಲೂ ಮುಸಲ್ಮಾನ್ ರಾಷ್ಟ್ರಗಳ ಶತ್ರುತ್ವವನ್ನಿಟ್ಟುಕೊಂಡು ಇಡೀ ಜಗತ್ತೇ ತನ್ನೆೆಡೆಗೆ ನೋಡುವಂತೆ ಬೆಳೆದ ಇಸ್ರೇಲ್ ದೇಶದ
ಸಾಧನೆಯನ್ನು ಎಷ್ಟು ಹೊಗಳಿದರೂ ಸಾಲದು. ಇಸ್ರೇಲ್ ಸ್ವತಂತ್ರ್ಯಗೊಂಡಾಗ, ಅದರ ಬಳಿ ಒಂದು ಯುದ್ಧ ವಿಮಾನವೂ ಸಹ ಇರಲಿಲ್ಲ, ಜಗತ್ತಿನ ಯುದ್ಧಭೂಮಿಗಳಲ್ಲಿ ಎರಡನೇ ಮಹಾಯುದ್ಧದ ಪರಿಣಾಮವಾಗಿ ಅಲ್ಲಲ್ಲಿ ಬಿದ್ದಿದ್ದ ಯುದ್ಧ ವಿಮಾನಗಳ ಅವಶೇಷಗಳನ್ನು ಕದ್ದು ಮುಚ್ಚಿ ತನ್ನ ದೇಶಕ್ಕೆ ತಂದು, ಇಸ್ರೇಲ್ ಮೊಟ್ಟ ಮೊದಲ ಯುದ್ಧವಿಮಾನವನ್ನು ನಿರ್ಮಿಸಿತ್ತು,

ಇಷ್ಟೆೆಲ್ಲಾ ಕಷ್ಟಪಟ್ಟು ತನ್ನ ನೆಲೆಯನ್ನು ಗಟ್ಟಿಯಾಗಿ ಜಗತ್ತಿನ ಮುಂದೆ ಕಟ್ಟಿಕೊಂಡ ದೇಶ ಇಸ್ರೇಲ್. ತನ್ನ ಹುಟ್ಟಿನಿಂದಲೇ ಶತ್ರುಗಳ ಕೆಂಗಣ್ಣಿಗೆ ಗುರಿಯಾಗಿ ಎಲ್ಲರನ್ನೂ ಮೆಟ್ಟಿ ನಿಂತು ಬೆಳೆದ ದೇಶ ಇಸ್ರೇಲ್. ಯಹೂದಿಗಳ ಬುದ್ಧಿವಂತಿಕೆಯನ್ನು ತಿಳಿದ ಮುಸಲ್ಮಾನ್ ರಾಷ್ಟ್ರಗಳು, ಇಸ್ರೇಲಿಗಳಿಗೆ ಹೊರ ಜಗತ್ತಿನೊಂದಿದೆ ನಿರ್ಬಂಧದ ಬೇಲಿಯನ್ನೇ ಹಾಕಿದ್ದರು. ಇಸ್ರೇಲಿಗಳೊಂದಿಗೆ ಪಶ್ಚಿಮದ ರಾಷ್ಟ್ರಗಳ ಸಂಪರ್ಕವೇ ಇಲ್ಲದಂತೆ ಮಾಡಿದ್ದರು. ಇಸ್ರೇಲಿಗಳೊಂದಿಗೆ ಯಾರೊಬ್ಬರನ್ನೂ ವ್ಯವಹಾರ ಮಾಡಲು
ಬಿಡುತ್ತಿರಲಿಲ್ಲ. ಇವರೊಂದಿಗೆ ವ್ಯವಹಾರ ಮಾಡಲು ಮುಂದೆ ಬಂದವರಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ
ನೀಡಲಾಗುತ್ತಿತ್ತು.

ಹೊರ ದೇಶದ ವ್ಯಾಪಾರಿಗಳು ಇಸ್ರೇಲಿಗಳೊಂದಿಗೆ ವ್ಯಾಪಾರ ಮಾಡಲು ಹೆದರುತ್ತಿದ್ದರು.  ತನ್ನ ಅಕ್ಕಪಕ್ಕದ ಮುಸ್ಲಿಂ ರಾಷ್ಟ್ರಗಳ ಕಿರುಕುಳದಿಂದ ಬೇಸತ್ತಿದ್ದ ಯಹೂದಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಅತೀ ಪುಟ್ಟ ದೇಶವಾಗಿದ್ದ ಇಸ್ರೇಲ್ ಕೇವಲ ತಾನು ಮಾತ್ರ ದುಡಿದು ತನ್ನವರಿಗೇ ಮಾರಿ ಜೀವನ ಸಾಗಿಸುವುದು ಕಷ್ಟವಾಗಿತ್ತು. ಹೊರ ಜಗತ್ತಿನ ಸಂಪರ್ಕವೇ ಇಲ್ಲದ ಕಾರಣ
ಬೇರೆ ದೇಶಗಳಲ್ಲಿ ಏನಾಗುತ್ತಿದೆಯೆಂಬ ವಿಚಾರವೇ ಇವರಿಗೆ ಸರಿಯಾಗಿ ತಿಳಿಯುತ್ತಿರಲಿಲ್ಲ, ಬೇರೆ ದೇಶದವರ ಜೊತೆಗಿನ
ವ್ಯಾಪಾರವೇ ಸ್ತಬ್ದವಾಗಿದ್ದ ಕಾರಣ ಇಸ್ರೇಲಿಗಳಿಗೆ ವಸ್ತುಗಳ ಮಾರಾಟವೇ ಮರೀಚಿಕೆಯಾಗಿತ್ತು. ವಿಧಿಯಿಲ್ಲದೆ ಇಸ್ರೇಲ್
ಕುಳಿತಲ್ಲಿಯೇ ಏನಾದರೊಂದು ಕೆಲಸ ಮಾಡಬೇಕೆಂಬ ಅನಿವಾರ್ಯ ಪರಿಸ್ಥಿತಿಯು ಎದುರಾಯಿತು.

ಇಂತಹ ಅನಿವಾರ್ಯತೆಯೇ ಇಂದು ಇಸ್ರೇಲ್ ದೇಶವು ಜಗತ್ತಿನಲ್ಲಿ ಈ ಮಟ್ಟಕ್ಕೆೆ ಬೆಳೆಯಲು ಸಾಧ್ಯವಾಯಿತು. ಮನೆಗಳಲ್ಲಿ,
ಆಫೀಸ್‌ಗಳಲ್ಲಿ ಸಣ್ಣ ಸಣ್ಣ ಆವಿಷ್ಕಾರಗಳು ಶುರುವಾದವು, ಈ ಆವಿಷ್ಕಾರಗಳನ್ನು ಹುಡುಕಿಕೊಂಡು ಹೊರಜಗತ್ತು ಇವರ
ಬಳಿ ಬಂದಿತು. ಈ ಆವಿಷ್ಕಾರಗಳ ನಡುವೆ ಅಕ್ಕ ಪಕ್ಕದ ಮುಸ್ಲಿಂ ರಾಷ್ಟ್ರಗಳ ಹಾವಳಿಯು ಇಸ್ರೇಲಿನ ಮೇಲೆ ನಿರಂತರವಾಗಿ ನಡೆಯುತ್ತಿತ್ತು. ಮುಸ್ಲಿಂ ರಾಷ್ಟ್ರಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲ್ ಅತ್ಯಂತ ವೇಗವಾಗಿ ತನ್ನ ಸೈನ್ಯವನ್ನು ಬಲಪಡಿಸಬೇಕಾಯಿತು. ಪ್ರತಿನಿತ್ಯವೂ ದಾಳಿಗಳು ನಡೆಯುತ್ತಿದ್ದವು. ಆಗೊಮ್ಮೆ ಈಗೊಮ್ಮೆ ಕಾಲು ಕೆರೆದುಕೊಂಡು ಮುಸ್ಲಿಂ ರಾಷ್ಟ್ರಗಳು ಯುದ್ಧಕ್ಕೆ ಬರುತ್ತಿದ್ದವು. ಆದರೆ ಇಸ್ರೇಲ್ ಮಾತ್ರ ಪ್ರತೀ ಬಾರಿಯೂ ಮುಸ್ಲಿಂ ರಾಷ್ಟ್ರಗಳಿಗೆ ಸರಿಯಾಗಿ ಬುದ್ಧಿ ಕಲಿಸುತ್ತಿತ್ತು.

ಜಗತ್ತಿನ ಇತಿಹಾಸದಲ್ಲಿ ಸಿಕ್‌ಸ್‌ ಡೇಸ್ ಆಫ್ ವಾರ್ ಎಂದೇ ಖ್ಯಾತಿ ಪಡೆದಿರುವ ಇಸ್ರೇಲ್ ಹಾಗೂ ಅರಬ್ ದೇಶಗಳ ನಡುವಣ ಯುದ್ಧವೇ ಇಸ್ರೇಲಿನ ಶೌರ್ಯಕ್ಕೆ ಸಾಕ್ಷಿ. 1967ರಲ್ಲಿ ನಡೆದ ಈ ಯುದ್ಧದಲ್ಲಿ, ಮುಸ್ಲಿಂ ರಾಷ್ತ್ರಗಳಾದ ಈಜಿಫ್‌ತ್‌, ಸಿರಿಯಾ ಹಾಗೂ ಜೋರ್ಡನ್ ಇಸ್ರೇಲಿನ ಮೇಲೆ ಯುದ್ಧಕ್ಕೆ ಬಂದವು. ಮೂರು ದಿಕ್ಕುಗಳಿಂದ ಇಸ್ರೇಲಿನ ಮೇಲೆ ಆಕ್ರಮಣ ಮಾಡಿದ ಮೂರು ದೇಶಗಳು ಇಸ್ರೇಲ್ ದೇಶವನ್ನು ಅಂದೇ ಭೂಪಟದಿಂದ ತೆಗೆದು ಹಾಕಿಬಿಡಬೇಕೆಂಬ ಪಣ ತೊಟ್ಟಿದ್ದವು. ಆದರೆ ಪುಟ್ಟ ದೇಶ
ಇಸ್ರೇಲ್ ಇವರ ಆಕ್ರಮಣಕ್ಕೆೆ ಹೆದರಲಿಲ್ಲ. ಪ್ರತಿಯಾಗಿ ತಾನೂ ಸಹ ಆಕ್ರಮಣಕ್ಕೆ ನಿಂತಿತು. ಮೂರು ದೇಶಗಳು ಒಟ್ಟು ಗೂಡಿದರೂ ಇಸ್ರೇಲನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಇಸ್ರೇಲ್ ಅಂದಿನ ಕಾಲದಲ್ಲಿ ತನ್ನಲ್ಲಿದ್ದ ಅತ್ಯಾಧುನಿಕ ಯುದ್ಧವಿಮಾನಗಳಿಂದ ಮೂರು ದೇಶದ ಸೈನಿಕರ ಮೇಲೆ ದಾಳಿ ನಡೆಸಿತು.

ಇಸ್ರೇಲಿನ ಸೈನ್ಯದ ಸಾಮರ್ಥ್ಯದ ಅರಿವಿಲ್ಲದ ಮುಸ್ಲಿಂ ರಾಷ್ಟ್ರಗಳು ನೋಡನೋಡುತ್ತಿದಂತೆ ಯುದ್ಧ ಮಾಡಲಾಗದೆ ಓಡಿ ಹೋದವು. ಮೂರು ರಾಷ್ಟ್ರಗಳು ಯುದ್ಧಕ್ಕೆ ಬಂದರೂ ಸಹ, ಒಂದು ಪುಟ್ಟ ದೇಶ ಇಸ್ರೇಲನ್ನು ಏನೂ ಮಾಡಲಾಗಲಿಲ್ಲ. ಆಗ ತಾನೇ ರಷ್ಯಾದಿಂದ ಬಂದಿದ್ದ ಮಿಗ್ ವಿಮಾನಗಳು ಇಸ್ರೇಲಿಗೆ ವರವಾದವು. ನೋಡನೋಡುತ್ತಲೇ ದೊಡ್ಡದೊಂದು ಯುದ್ಧವು ಆರೇ ದಿನದಲ್ಲಿ ಮುಗಿದುಹೋಯಿತು. ಅಂದಿನ ಕಾಲದಲ್ಲಿ ಇಸ್ರೇಲ್ ಇಡೀ ಕೊಲ್ಲಿ ರಾಷ್ಟ್ರಗಳಿಗೆ ದೊಡ್ಡದೊಂದು  ಸಂದೇಶ ವನ್ನು ರವಾನಿಸಿತ್ತು. ತನ್ನ ಸುತ್ತಲಿನ ಮುಸ್ಲಿಂ ರಾಷ್ಟ್ರಗಳಿಗೆ ತನ್ನ ಸಾಮರ್ಥ್ಯದ ಅರಿವನ್ನು ಮುಟ್ಟಿ ನೋಡಿಕೊಳ್ಳುವಂತೆ ಇಸ್ರೇಲ್ ಮಾಡಿಸಿತ್ತು. ಇಸ್ರೇಲಿನ ಮೇಲಿನ ದಾಳಿಗಳು ಇಷ್ಟಕ್ಕೆ ನಿಲ್ಲಲಿಲ್ಲ. ನಿರಂತರವಾಗಿ ಅಂದಿನಿಂದ ಇಂದಿನ ವರೆಗೂ ನಡೆಯುತ್ತಲೇ ಇದೆ.

ಜಗತ್ತಿನಾದ್ಯಂತ ತನ್ನ ಮೇಲೆ ಆಗುವ ದಾಳಿಗಳನ್ನು ತಡೆಯುವ ಸಲುವಾಗಿ ಇಸ್ರೇಲ್ ಮೊಸ್ಸಾದ್ ಎಂಬ ಬೇಹುಗಾರಿಕಾ ಸಂಸ್ಥೆಯನ್ನು ಹುಟ್ಟಿ ಹಾಕಿತು. ಈ ಬೇಹುಗಾರಿಕೆಯು ಜಗತ್ತಿನ ಅತ್ಯಂತ ಪ್ರಬಲ ಬೇಹುಗಾರಿಕೆ ಸಂಸ್ಥೆಯಾಗಿದೆ, ಮೊಸ್ಸಾದ್ ಇಲ್ಲದೆ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ಇರಾನ್ ದೇಶದ ಬಳಿ ಅಣ್ವಸ್ತ್ರವಿರುತ್ತಿತ್ತು. ದಶಕಗಳ ಕಾಲ ಇಸ್ರೇಲ್ ತನ್ನ  ಬೇಹುಗಾರಿಕೆಯ ಮೂಲಕ ಇರಾನ್ ದೇಶದ ಅಣ್ವಸ್ತ್ರ ಯೋಜನೆಯನ್ನು ವಿನಾಶಗೊಳಿಸಿದೆ. ತನ್ನ ಬೇಹುಗಾರಿಕೆಯಿಂದ ಇರಾನ್ ದೇಶದ ಅಣ್ವಸ್ತ್ರ ವಿಜ್ಞಾನಿಗಳನ್ನು ಕೊಲ್ಲಿಸಿದೆ. ಕಳಪೆ ಸಾಮಗ್ರಿಗಳನ್ನು ಪೂರೈಕೆ ಮಾಡಿಸಿ ಇರಾನ್ ದೇಶದ ಅಣ್ವಸ್ತ್ರ  ಅಭಿವೃದ್ಧಿಯನ್ನು ನಾಶಗೊಳಿಸಿದೆ.

ಪಾಕಿಸ್ತಾನದ ವಿಜ್ಞಾನಿಯು ಇರಾನ್ ದೇಶಕ್ಕೆ ಸಹಾಯ ಮಾಡುತ್ತಿದ್ದ ವಿಷಯವನ್ನು ಬಹಿರಂಗಪಡಿಸಿದ್ದು ಇಸ್ರೇಲಿನ ಮೊಸ್ಸಾದ್ ಬೇಹುಗಾರಿಕೆ ಸಂಸ್ಥೆ. ಕಟ್ಟಾ ಮುಸಲ್ಮಾನ್ ರಾಷ್ಟ್ರವಾದ ಇರಾನಿನ ಬಳಿ ಅಣ್ವಸ್ತ್ರವೇನಾದರು ಇದ್ದಿದ್ದರೆ ಇರಾಕ್, ಸಿರಿಯಾ, ಲೆಬನಾನ್ ದೇಶದಲ್ಲಿನ ಭಯೋತ್ಪಾದಕರ ಕೈಗೆ ಅಣ್ವಸ್ತ್ರ ಅನಾಯಾಸವಾಗಿ ಸಿಗುತ್ತಿತ್ತು. ಇವರ ಕೈಗೆ ಸಿಕ್ಕಿದ್ದರೆ ಇಂದು ಜಗತ್ತಿನಲ್ಲಿ ಯಾವ ಮಟ್ಟದ ಅನಾಹುತವಾಗುತ್ತಿತ್ತೆೆಂದು ಊಹಿಸಲು ಸಾಧ್ಯವಿಲ್ಲ. ಪ್ರತಿನಿತ್ಯವೂ ಮಗ್ಗಲು ಮುಳ್ಳಾಗಿರುವ ಗಾಜಾಪಟ್ಟಿ ಹಾಗೂ ಪ್ಯಾಲಿಸ್ತೇನಿಗಳ ಜೊತೆ ಹೊಡೆದಾಡಿಕೊಂಡು, ಅಲ್ಲಿರುವ ಭಯೋತ್ಪಾದಕರ ಹುಟ್ಟಡಗಿಸುತ್ತಿರುವ ಇಸ್ರೇಲ್ ದೇಶದ
ಪರಾಕ್ರಮವನ್ನು ಮೆಚ್ಚಲೇಬೇಕು. ಸುತ್ತಲೂ ಇರುವ ಮುಸ್ಲಿಂ ರಾಷ್ಟ್ರಗಳ ಬೆಂಬಲವು ಪ್ಯಾಲಿಸ್ತೇನಿಗಳಿಗೆ ಇದ್ದರೂ ಸಹ ಇಸ್ರೇಲಿಗಳನ್ನು ಏನೂ ಮಾಡಲಾಗುತ್ತಿಲ್ಲ. ಇಸ್ರೇಲಿನ ಹಲವು ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚನ್ನು ಪ್ಯಾಲಿಸ್ತೇನಿಗಳು ಪ್ರತಿನಿತ್ಯವೂ ಮಾಡುತ್ತಿರುತ್ತಾರೆ.

ಇಸ್ರೇಲಿನ ಸೈನಿಕರು ಪ್ಯಾಲಿಸ್ತೇನಿಗಳ ಜಾಗಗಳಿಗೆ ನುಗ್ಗಿ ಹಲವು ಭಯೋತ್ಪಾದಕರನ್ನು ಕೊಂದಿರುವ ಉದಾಹರಣೆಗಳಿವೆ. ಇಸ್ರೇಲಿ ಸೈನಿಕರು ಯಾವ ಮಟ್ಟದ ತರಬೇತಿ ಪಡೆದಿರುತ್ತಾರೆಂದರೆ, ಅವರು ಪ್ಯಾಲಿಸ್ತೇನಿಗಳ ಅಡ್ಡದಲ್ಲಿ ತಿಂಗಳುಗಳ ಕಾಲ ಶಿಬಿರ ಹೂಡಿ ಅಲ್ಲಿನ ಅರಬ್ ಭಾಷೆ, ಆಚಾರ, ವಿಚಾರಗಳನ್ನುತಿಳಿದುಕೊಂಡು ಅವರ ಜೊತೆಯಲ್ಲೇ ಇದ್ದು ಸರಿಯಾದ ಸಮಯವನ್ನು ನೋಡಿ
ಪ್ಯಾಲಿಸ್ತೇನಿ ಭಯೋತ್ಪಾದಕರನ್ನು ಕೊಲ್ಲುತ್ತಾರೆ. ಇಸ್ರೇಲ್ ಸೈನ್ಯದ ಡ್ರೋನ್‌ಗಳು ಸದಾ ಗಾಜಾ ಪಟ್ಟಿ ಹಾಗೂ ಪ್ಯಾಲಿಸ್ತಾನ್ ರಸ್ತೆಗಳ ಮೇಲೆ ನಿಗವಿಟ್ಟಿರುತ್ತವೆ.

ಒಂದೊಂದು ಕಾರ್ಯಾಚರಣೆಯನ್ನು ಮಾಡಬೇಕಾದರೂ ಡ್ರೋನ್‌ಗಳು ಶತ್ರುವನ್ನು ಸುತ್ತುತ್ತಿರುತ್ತವೆ. ಅಷ್ಟರ ಮಟ್ಟಿನ ಶಿಸ್ತಿನಿಂದ ಇಸ್ರೇಲ್ ಸೈನ್ಯವು ಭಯೋತ್ಪಾದಕರನ್ನು ಹೊಡೆದುರುಳಿಸುತ್ತದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ತನ್ನ ಸೈನ್ಯದಲ್ಲಿ ಒಬ್ಬ ಸೈನಿಕ ಸತ್ತನೆಂದರೆ ಅದರ ಸೇಡು ತೀರಿಸಿಕೊಳ್ಳುವವರೆಗೂ ಇಸ್ರೇಲ್ ಬಿಡುವುದಿಲ್ಲ. ಇಸ್ರೇಲ್ ಸೈನ್ಯವನ್ನು
ಕಂಡರೆ ತನ್ನ ಸುತ್ತಲಿನ ಮುಸಲ್ಮಾನ್ ರಾಷ್ಟ್ರಗಳಿಗೆ ಎಷ್ಟು ಭಯವೆಂದರೆ ಇಸ್ರೇಲಿನ ನೆಲದ ಮೇಲೆ ಅಷ್ಟು ಸುಲಭವಾಗಿ
ಭಯೋತ್ಪಾದಕ ದಾಳಿಯನ್ನು ನಡೆಸುವುದಿಲ್ಲ.

ಇಸ್ರೇಲ್ ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ, ತಾನು ಹುಟ್ಟಿದ ತಕ್ಷಣ ಗೊತ್ತಿರುವ ವಿಷಯವೆಂದರೆ ತನ್ನ ಸುತ್ತಲೂ ಇರುವ ಶತ್ರುಗಳ ವಿರುದ್ಧ ತಾನು ಸಾಯುವವರೆಗೂ ಹೋರಾಡಲು ಸಿದ್ಧವಿರಲೇಬೇಕು. ಆ ಹೋರಾಟವು ಸೈನ್ಯದ ಹೋರಾಟ ವಾಗಿರಬಹುದು ಅಥವಾ ತಾನು ಸಂಶೋಧನೆಗಳನ್ನು ಮಾಡಿ ತನ್ನ ದೇಶವನ್ನು ರಕ್ಷಿಸಿಕೊಳ್ಳುವಲ್ಲಿ ಭಾಗವಹಿಸುವ ಹೋರಾಟ ವಿರಬಹುದು.

ಪುಟ್ಟ ರಾಷ್ಟ್ರವಾಗಿರುವ ಇಸ್ರೇಲ್ ಎಂದೂ ತನ್ನನ್ನು ಚಿಕ್ಕವನೆಂದುಕೊಳ್ಳಲಿಲ್ಲ. ತನ್ನನ್ನು ತುಳಿಯಲು ಪ್ರಯತ್ನಿಸಿದ ಮುಸಲ್ಮಾನ್ ರಾಷ್ಟ್ರಗಳ ವಿರುದ್ಧ ಸೆಟೆದೆದ್ದು ನಿಂತು ಹೋರಾಡಿತು. ತಾನು ಇತರರನ್ನು ಎದುರುಹಾಕಿಕೊಂಡು ಬದುಕ ಬೇಕೆಂದರೆ, ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ವಿಷಯವನ್ನು ಇಸ್ರೇಲಿನ ಪಿತಾಮಹನೆಂದು ಕರೆಸಿಕೊಳ್ಳುವ ಬೆನ್ ಗುರಿಯನ್ 1948 ರಲ್ಲಿಯೇ ಅರ್ಥ ಮಾಡಿಕೊಂಡಿದ್ದರು. ಜಗತ್ತಿನಾದ್ಯಂತ ಇದ್ದ ಯಹೂದಿಗಳನ್ನು ಒಂದೆಡೆ ಸೇರಿಸಿ ಇಸ್ರೇಲ್ ದೇಶವನ್ನು ಕಟ್ಟಿದರು. ತಾವು ಹಾಕಿಕೊಟ್ಟ ಅಡಿಪಾಯವನ್ನು ತನ್ನ ಉತ್ತರಾಧಿಕಾರಿಗಳು ಚೆನ್ನಾಗಿಯೇ ನಡೆಸಿಕೊಂಡು
ಬಂದಿದ್ದಾರೆ. ವಾಸ್ತವವಾಗಿ ಬೆನ್ ಗುರಿಯನ್ ಅಧಿಕಾರ ಹಸ್ತಾಾಂತರವಾದ ಮೇಲೆ ಇಸ್ರೇಲ್ ದೇಶವು ಅರಬ್ ರಾಷ್ಟ್ರಗಳಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸಿತ್ತು.

ಮುಸ್ಲಿಂ ರಾಷ್ಟ್ರಗಳ ಮೇಲೆ ನಡೆದ ಆರು ದಿನಗಳ ಯುದ್ಧವಾಗಬಹುದು ಅಥವಾ ಎಂಟೆಬ್ಬೆೆಯಲ್ಲಿ ನಡೆದ ಸೈನ್ಯದ ಕಾರ್ಯಾಚರಣೆಯಾಗಬಹುದು ಅಥವಾ ಜರ್ಮನ್ ಒಲಿಂಪಿಕ್‌ಸ್‌‌ನಲ್ಲಿ ನಡೆದ ದುರಂತವಾಗಿರಬಹುದು, ಎಲ್ಲವೂ 1965ರ ನಂತರ ನಡೆದ ಕಾರ್ಯಾಚರಣೆಗಳು. ಇಸ್ರೇಲಿನ ಸಾಮರ್ಥ್ಯವನ್ನು ಅರೆತರೂ ಸಹ ತನ್ನ ಪಕ್ಕದ ಮುಸ್ಲಿಂ ರಾಷ್ಟ್ರಗಳು ಇಂದಿಗೂ ಸಹ ಪ್ಯಾಲಿಸ್ತೇನಿಗಳಿಗೆ ಇಸ್ರೇಲಿನ ವಿರುದ್ಧ ದಾಳಿಗಳನ್ನು ನಡೆಸುವ ಸಲುವಾಗಿ ಹಣದ ಸಹಾಯ ಮಾಡುತ್ತಿರುತ್ತಾರೆ.

ಪ್ಯಾಲಿಸ್ತೇನಿಯ ಒಬ್ಬ ಭಯೋತ್ಪಾದಕನನ್ನು ಇಸ್ರೇಲಿ ಸೈನಿಕರು ಹೊಡೆದುರುಳಿಸಿದರೆ, ಮತ್ತೊಬ್ಬನ್ನನ್ನು ರಕ್ತ ಬೀಜಾಸುರ ನಂತೆ
ಪ್ಯಾಲಿಸ್ತೇನಿಗಳು ಅರಬ್ಬರ ಸಹಾಯದಿಂದ ತಯಾರು ಮಾಡುತ್ತಿರುತ್ತಾರೆ. ಇವರೆಲ್ಲರ ಉದ್ದೇಶವೊಂದೇ ಹೇಗಾದರೂ ಮಾಡಿ ಯಹೂದಿಗಳನ್ನು ಸಂಪೂರ್ಣವಾಗಿ ಜಗತ್ತಿನಲ್ಲಿ ಇಲ್ಲದಂತೆ ಮಾಡಬೇಕು. ಅಷ್ಟೊಂದು ಮುಸ್ಲಿಂ ರಾಷ್ಟ್ರಗಳು ಇಸ್ರೇಲಿನ ಮೇಲೆ ಮುಗಿಬಿದ್ದರೂ ಸಹ ಏನು ಮಾಡಲಾಗುತ್ತಿಲ್ಲವಲ್ಲವೆಂಬ ಹತಾಶೆಯಿಂದ ಪ್ರತಿ ನಿತ್ಯವೂ ಒಂದಲ್ಲ ಒಂದು ದಾಳಿಯನ್ನು ಯೋಜನೆಮಾಡುವ ಸಲುವಾಗಿ ಯೋಚಿಸುತ್ತಿರುತ್ತಾರೆ.

ವಿಪರ್ಯಾಸ ನೋಡಿ ಇಸ್ರೇಲಿನಿಂದ ಯೂರೋಪಿನ ದೇಶಗಳು ತುಂಬಾ ದೂರದಲ್ಲೇನಿಲ್ಲ. ಫ್ರಾನ‌ಸ್‌, ಸ್ಪೇನ್,  ಇಟಲಿ, ಸ್ವೀಡೆನ್, ಇಂಗ್ಲೆೆಂಡ್ ದೇಶಗಳು ಮುಸ್ಲಿಂ ರಾಷ್ಟ್ರಗಳಿಂದ ಬಂದಂಥ ನಿರಾಶ್ರಿತರನ್ನು ಕೈಬೀಸಿ ಒಳಗೆ ಕರೆಸಿಕೊಂಡರು. ಆದರೆ ಅದೇ ನಿರಾಶ್ರಿತರು ಇಂದು ಯೂರೋಪಿನ ದೇಶಗಳಲ್ಲಿ ತಮ್ಮ ಹಕ್ಕು ಸ್ಥಾಪನೆಗೆ ಮುಂದಾಗಿದ್ದಾರೆ. ಹೊರಗಿನ ಶತ್ರುಗಳನ್ನು ಮುಗಿಸುವುದು ಸುಲಭದ ಕೆಲಸ, ಆದರೆ ಒಳಗಿನ ಶತ್ರುಗಳನ್ನು ಮುಗಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈಗ
ಯೂರೋಪಿನಲ್ಲಾಗಿರುವುದು ಇದೇ, ಸುಮ್ಮನಿರದೆ ಮಾನವೀಯತೆಯ ದೃಷಿಯಿಂದ ಆಶ್ರಯ ಕೊಡಲು ನಿರಾಶ್ರಿತರನ್ನು ಒಳಗೆ ಬಿಟ್ಟುಕೊಂಡರು. ಒಳಗಿದ್ದುಕೊಂಡೇ ನಡೆಸುತ್ತಿರುವ ಭಯೋತ್ಪಾಾದಕ ಕೃತ್ಯವನ್ನು ತಡೆಯುವಲ್ಲಿ ಯೂರೋಪಿನ ರಾಷ್ಟ್ರಗಳು ವಿಫಲವಾಗುತ್ತಿವೆ. ಆದರೆ ಇಸ್ರೇಲ್ ಹಾಗೆ ಮಾಡಲಿಲ್ಲ, ದಶಕಗಳ ಹಿಂದೆಯೇ ಈ ಸತ್ಯವನ್ನರಿತು ತನ್ನೊಳಗೆ ಬರುವ ಎಲ್ಲಾ ದಾರಿಯನ್ನು ಇಸ್ರೇಲ್ ಬಂದ್ ಮಾಡಿತ್ತು. ಇಂದಿಗೂ ಅಷ್ಟೇ ತನ್ನೊಳಗೆ ಅಕ್ಕ ಪಕ್ಕದ ಮುಸ್ಲಿಂ ದೇಶದವರನ್ನು ತನ್ನೊಳಗೆ ಬಿಟ್ಟುಕೊಂಡ ನಂತರ ಇಸ್ರೇಲಿ ಸರಕಾರವು ಅವರ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ. ಅಷ್ಟು ಸುಲಭವಾಗಿ ಅವರು ಇಸ್ರೇಲಿ
ನೆಲದಲ್ಲಿ ತಮ್ಮ ಕೃತ್ಯವನ್ನು ನಡೆಸಲಾಗುವುದಿಲ್ಲ, ಯೂರೋಪಿನ ದೇಶಗಳು ಮೊದಲೇ ಈ ಕೆಲಸವನ್ನು ಮಾಡಿದ್ದರೆ ಇಂದು ಅಷ್ಟೊಂದು ಸುಲಭವಾಗಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿರಲಿಲ್ಲ.

ಯೂರೋಪಿನ ಹಲವು ರಾಷ್ಟ್ರಗಳಲ್ಲಿ ತಾವು ಬಹುಸಂಖ್ಯಾತರಾಗಬೇಕೆಂದು ಮುಸಲ್ಮಾನ್ ನಾಯಕರು ಅಲ್ಲಿನ ಸರಕಾರದ
ವಿರುದ್ಧ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ರೀತಿಯ ಒತ್ತಡಗಳನ್ನು ಇಸ್ರೇಲಿನ ಅಕ್ಕ ಪಕ್ಕದ ಮುಸ್ಲಿಂ
ರಾಷ್ಟ್ರಗಳು ಎಷ್ಟೇ ಹಾಕಿದರೂ ಇಸ್ರೇಲ್ ಒಂದಿಂಚೂ ಅಲ್ಲಾಡಲಿಲ್ಲ. ಸದಾ ತನ್ನ ಬಂಡವಾಳಶಾಹಿ ಮನಸ್ಥಿತಿಯಿಂದ ಜಗತ್ತಿನ
ಹಲವು ದೇಶಗಳನ್ನು ಬಳಸಿಕೊಳ್ಳುವ ಅಮೆರಿಕ ದೇಶವು, ಇಸ್ರೇಲ್ ವಿಚಾರದಲ್ಲಿಯೂ ಅಷ್ಟೇ ಯಹೂದಿಗಳ ಬುದ್ಧಿವಂತಿಕೆಯ ಬಗ್ಗೆ ತಿಳಿದ ಅಮೆರಿಕ ದೇಶವು ಸದಾ ಇಸ್ರೇಲ್ ದೇಶದ ಪರವಾಗಿ ನಿಲ್ಲುತ್ತದೆ. ಯಹೂದಿಗಳನ್ನು ಬಳಸಿಕೊಂಡು ಅಮೆರಿಕನ್ನರು ಸಾವಿರಾರು ಸಂಶೋಧನೆಗಳನ್ನು ಮಾಡಿ ನೂತನ ಆವಿಷ್ಕಾರಗಳಿಗೆ ಕಾರಣರಾಗಿದ್ದಾರೆ.

ಅಮೆರಿಕಾದ ದೊಡ್ಡ ದೊಡ್ಡ ಕಂಪನಿಗಳು ತಮ್ಮ ನೂತನ ಆವಿಷ್ಕಾರಗಳನ್ನು ಯಹೂದಿಗಳಿಂದಲೇ ಮಾಡಿಸುತ್ತಾರೆ.
ಪ್ರತಿ ವರ್ಷವೂ ಬಿಲಿಯನ್ ಗಟ್ಟಲೆ ಹಣವನ್ನು ಇದಕ್ಕಾಗಿ ಸುರಿಯಲಾಗುತ್ತಿದೆ. ಇಸ್ರೇಲ್ದೇಶವು ಮಧ್ಯಪ್ರಾಚ್ಯದಲ್ಲಿ ಅಮೆರಿಕ ದೇಶವು ಸ್ಥಾಪನೆ ಮಾಡಿರುವ ಸ್ಟಾರ್ಟ್ ಅಪ್ ಎಂದರೆ ತಪ್ಪಿಲ್ಲ. ಇಸ್ರೇಲಿಗಳ ಸಾಮರ್ಥ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡಿ ರುವ ಅಮೆರಿಕ ದೇಶವು ಅದನ್ನು ತನ್ನ ಹಾಗೂ ಜಗತ್ತಿನ ಒಳ್ಳೆಯ ಕೆಲಸಗಳಿಗೆ ಬಳಸುತ್ತಿದೆ. ಪಕ್ಕದ ಮುಸಲ್ಮಾನ್ ದೇಶಗಳಿಗೆ ಇದರ ಅರಿವಿಲ್ಲ. ನೂರಾರು ವರ್ಷದ ಹಳೆಯ ವಿಚಾರಗಳನ್ನು ಈಗಲೂ ಪಾಲಿಸುವ ಸಲುವಾಗಿ ಇಸ್ರೇಲಿಗಳ ಮೇಲೆ ಸದಾ ಹಗೆ ಸಾಧಿಸುತ್ತಲೇ ಇರುತ್ತವೆ. ಹುಚ್ಚನಾಗಿದ್ದ ಹಿಟ್ಲರ್ ಯಹೂದಿಗಳಲ್ಲಿನ ಬುದ್ಧಿವಂತಿಕೆಯ ಅರಿವಿಲ್ಲದೆ ಅವರನ್ನು ಕೊಲ್ಲಿಸಿದ.
ಅಂದಿನಿಂದ ಅಳಿದುಳಿದ ಯಹೂದಿಗಳ ದೇಶವಾಗಿ ಹೊರಹೊಮ್ಮಿದ ಇಸ್ರೇಲ್ ದೇಶವನ್ನು ಅರಬ್ಬರು ಸರ್ವನಾಶ ಮಾಡಲು ಹಪಹಪಿಸುತ್ತಿದ್ದಾರೆ.

ತನ್ನ ಮೇಲಾಗುವ ದಾಳಿಯನ್ನೇ ಅಸ್ತ್ರ ಮಾಡಿಕೊಂಡ ಇಸ್ರೇಲಿಗಳು, ಪ್ರತಿ ದಿನವೂ ಅರಬ್ಬರು ಏನೂ ಆಗದ ಸ್ಥಿತಿಯಲ್ಲಿ ತಮ್ಮ ಮೈ, ಕೈ ಪರಚಿಕೊಳ್ಳುವಂತೆ ಮಾಡುತ್ತಿದ್ದಾರೆ. ಸಾವಿರಾರು ಕಿ.ಮೀ. ದೂರದ ಅಮೆರಿಕ ದೇಶದ ಮೇಲೆ ದಾಳಿ ಮಾಡಿದ
ಭಯೋತ್ಪಾದಕರಿಗೆ ತಮ್ಮ ಪಕ್ಕದಲ್ಲಿರುವ ಇಸ್ರೇಲ್ ದೇಶವನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲವೆಂದರೆ ಇಸ್ರೇಲ್ ದೇಶವು ಎಷ್ಟರ ಮಟ್ಟಿಗೆ ತನ್ನ ಮೇಲಿನ ದಾಳಿಗಳಿಗೆ ಸದಾ ಸಿದ್ಧವಾಗಿರುತ್ತದೆಯೆಂದು ನೀವೇ ಊಹಿಸಿ ನೋಡಿ.

ತನ್ನ ಸುತ್ತಲೂ ಇರುವ ಮುಸ್ಲಿಂ ರಾಷ್ಟ್ರಗಳ ಮನಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿರುವ ಇಸ್ರೇಲ್, ತನ್ನ ಒಂದು ಸಣ್ಣ ತಪ್ಪನ್ನೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ತನ್ನ ದೇಶದ ಪ್ರತಿಯೊಬ್ಬ ಯಹೂದಿ ಪ್ರಜೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಸ್ರೇಲ್ ಯಾವ ಮಟ್ಟಕೆ ಬೇಕಾದರೂ ಹೋರಾಡುತ್ತದೆ. ಇಸ್ರೇಲಿನಲ್ಲಿ ಯಹೂದಿಯಾಗಿ ಹುಟ್ಟಿದಾ ಕ್ಷಣ ಅವನ ಮೇಲೆ ಅರಬ್ಬರ ಸಾವಿನ ಕತ್ತಿ ಸದಾ ಇದ್ದೇ ಇರುತ್ತದೆ. ಜಗತ್ತಿನ ಯಾವ ದೇಶವೂ ಸಹ ತನ್ನ ಪ್ರಜೆಗಳ ಭದ್ರತೆಗಾಗಿ ಇಷ್ಟೊಂದು
ಯುದ್ಧಗಳನ್ನು ಮಾಡಿಲ್ಲ, ಇಷ್ಟೊಂದು ಕಾರ್ಯಾಚರಣೆಗಳನ್ನು ನಡೆಸಿಲ್ಲ. ತನ್ನ ಸುತ್ತಲೂ ಇರುವ ಮುಸ್ಲಿಂ ರಾಷ್ಟ್ರಗಳಿಂದ ತನ್ನ ಮೇಲಾಗುವ ದಾಳಿಗಳನ್ನು ಒಂದು ಪುಟ್ಟ ರಾಷ್ಟ್ರವಾಗಿ ಹೇಗೆ ನಿಭಾಯಿಸ ಬೇಕೆಂಬುದನ್ನು ಇಸ್ರೇಲ್ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಇಸ್ರೇಲ್ ದೇಶದಿಂದ ಇತರ ದೇಶಗಳು ಕಲಿಯುವುದು ಬಹಳಷ್ಟಿದೆ. ಸುತ್ತಲಿರುವ ಮುಸ್ಲಿಂ ರಾಷ್ಟ್ರಗಳ ನಡುವೆ ಎಂಟೆದೆಯ ಭಂಟನಾಗಿ ಇಸ್ರೇಲ್ ದೇಶ ಕಲ್ಲಿನಂತೆ ನಿಂತಿದೆ.